ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತಿದೆಯೇ ! ಹಾಗಾದರೆ ತಿಳಿಯಬೇಕಿರುವ ಕಾರಣಗಳು

Spread the love
ಮೂತ್ರ ವಿಸರ್ಜನೆ

ಸತತವಾಗಿ ಮೂತ್ರ ವಿಸರ್ಜನೆ ಮಾಡುವ ಸಮಸ್ಯೆಯನ್ನು ವೈದ್ಯಕೀಯವಾಗಿ ಪೊಲ್ಯೂರಿಯಾ (Polyuria) ಎಂದು ಕರೆಯುತ್ತಾರೆ. ಮನುಷ್ಯನ ದೇಹವು ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕಾದರೆ ನೀರು ಅಗತ್ಯವಾಗಿ ಬೇಕೇ ಬೇಕು, ಆದ್ದರಿಂದಲೇ ವೈದ್ಯರು ದಿನಕ್ಕೆ ಕನಿಷ್ಠ 3 liter ನೀರು ಕುಡಿಯಬೇಕು ಎಂದು ಹೇಳುತ್ತಾರೆ . ಒಬ್ಬ ವ್ಯಕ್ತಿ ದಿನಕ್ಕೆ 6–8 ಬಾರಿ ಮೂತ್ರ ವಿಸರ್ಜನೆ ಮಾಡುವುದು ಸಹಜ. ಆದರೆ ಅದಕ್ಕಿಂತ ಹೆಚ್ಚು ಬಾರಿ, ವಿಶೇಷವಾಗಿ ರಾತ್ರಿ ಸಮಯದಲ್ಲೂ ಹಲವಾರು ಬಾರಿ ಶೌಚಾಲಯಕ್ಕೆ ಹೋಗಬೇಕಾದರೆ ಅದು ಆರೋಗ್ಯದಲ್ಲಿ ಏರು ಪೇರು ಆಗಿರಬೇಕು . ಈ ಸಮಸ್ಯೆ ಮಹಿಳೆಯರು, ಮತ್ತು ವಯೋವೃದ್ಧರಲ್ಲಿ ಹೆಚ್ಚು ಕಂಡುಬರುತ್ತದೆ. ಕೆಲವೊಮ್ಮೆ ಇದು ಸಾಮಾನ್ಯ ಕಾರಣಗಳಿಂದಾಗಿರಬಹುದು, ಮತ್ತು ಕೆಲ ಸಂದರ್ಭಗಳಲ್ಲಿ ಗಂಭೀರ ಅರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು. ಆದ್ದರಿಂದ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದೆ, ಕಾರಣವನ್ನು ಗುರುತಿಸಿ ಸರಿಯಾದ ಪರಿಹಾರವನ್ನು ಪಡೆಯುವುದು ಮುಖ್ಯ.

ನಿಮಗೆ ಗೊತ್ತಿರಲಿ ಮನುಷ್ಯನ ಪ್ರತಿಯೊಂದು ಅಂಗಾಂಗಳು ಸರಿಯಾಗಿ ಕೆಲಸ ಮಾಡಲು ದೇಹಕ್ಕೆ ನೀರಿನ ಪ್ರಮಾಣ ಬೇಕೇ ಬೇಕು. ಜೀವಕೋಶದಲ್ಲಿ ಪೋಷಕಾಂಶಗಳ ಸಾಗಣೆ ಮಾಡಲು ನೀರು ಪ್ರಮುಖ ಪಾತ್ರವಹಿಸುತ್ತದೆ ಅದರಲ್ಲೂ ರಕ್ತದ ಮೂಲಕ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಕೊಂಡೊಯ್ಯಲು ನೀರು ಪ್ರಮುಖ ಪಾತ್ರವಹಿಸುತ್ತದೆ.

ಮೂತ್ರ ವಿಸರ್ಜನೆ

ಯಾಕೆ ಪದೇ ಪದೇ ಮೂತ್ರ ಮಾಡುವುದು ಅಪಾಯಕಾರಿ

 ಪದೇ ಪದೇ ಮೂತ್ರವಿಸರ್ಜನೆಗೆ ಪ್ರಮುಖ ಕಾರಣಗಳು
1) ಮೂತ್ರನಾಳದ ಸೋಂಕು :
ಮೂತ್ರನಾಳದ ಸೋಂಕು(Urinary tract infection)ಇದ್ದಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ಉರಿ ,ಹಾಗು ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕು ಎನ್ನಿಸುತ್ತದೆ. ಈ ಸಮಸ್ಯೆ ಇರುವ ಸಂದರ್ಭದಲ್ಲಿ,ಲೈಂಗಿಕಕ್ರಿಯೆ ಸಮಯದಲ್ಲಿ ನೋವು ಉಂಟಾಗುವುದು ಅಥವಾ ಸುಡುವ ಸಂವೇದನೆ, ದುರ್ವಾಸನೆ ಬೀರುವ ಮೂತ್ರ ಅಥವಾ ಆಗಾಗ್ಗೆ ಮೂತ್ರ ವಿಸರ್ಜ ನೆಯು UTI ಯ ಸಂಕೇತವಾಗಿರಬಹುದು. ಈ ಸ್ಥಿತಿಯು ಮೂತ್ರಕೋಶವು ಹೆಚ್ಚು ಸೂಕ್ಷ್ಮವಾಗಲು ಕಾರಣವಾಗುತ್ತದೆ.
2)ಮಧುಮೇಹ (Diabetes):
ಸಕ್ಕರೆ ಕಾಯಿಲೆ ಇರುವ ಮನುಷ್ಯರಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಜಾಸ್ತಿಯಾಗಿ ದೇಹವು ಹೆಚ್ಚುವರಿ ಗ್ಲುಕೋಸ್ ಅಂಶವನ್ನು ಮೂತ್ರದ ಮೂಲಕ ಹೊರ ಆಕಲು ಪ್ರಯತ್ನಿಸುತ್ತದೆ ,ದಾಹವೂ ಜಾಸ್ತಿ ಇರುತ್ತದೆ ನೀರು ಕುಡಿದ ಬಳಿಕ ಮೂತ್ರ ವಿಸರ್ಜನೆಗೆ ಪ್ರೋತ್ಸಾಹಿಸುತ್ತದೆ .

ಮಧುಮೇಹ

3) ಕಾಫಿ /ಟೀ ಸೇವನೆ : ಕೆಫೇನ್ ಅಂಶ ಹೊಂದಿರುವ ಕಾಫಿ ಸೇವನೆಯಿಂದ ಮೂತ್ರವಿಸರ್ಜನೆ ಹೆಚ್ಚಾಗುತ್ತದೆ ಆದಷ್ಟು ಇದರಿಂದ ದೂರವಿರುವುದು ಉತ್ತಮ

ಮೂತ್ರ ವಿಸರ್ಜನೆ

4)ಗರ್ಭಾವಸ್ಥೆ :
ಮಹಿಳೆಯ ಗರ್ಭಧಾರಣೆಯ ಸಂದರ್ಭದಲ್ಲಿ ಮೂತ್ರನಾಳದ ಮೇಲೆ ಒತ್ತಡ ಬಂದು ಪದೇ ಪದೇ ಮೂತ್ರ ವಿಸರ್ಜನೆ ಸಮಸ್ಯೆ ಕಾಣಿಸಬಹುದು, ಗರ್ಭಧಾರಣೆಯ ಸಂದರ್ಭದಲ್ಲಿ ಮೂತ್ರ ನಾಳದ ಸೋಂಕು(UTIs) ಹೆಚ್ಚಾಗುತ್ತದೆ ಈ ಕಾರಣದಿಂದ ಪದೇ ಪದೇ ಮೂತ್ರ ವಿಸರ್ಜನೆ ಆಗುತ್ತದೆ..
5)ಆತಂಕ ಮತ್ತು ಒತ್ತಡ :
ಕೆಲವರಲ್ಲಿ ಆತಂಕ ಹಾಗೂ ಕೆಲಸದ ಒತ್ತಡದ ಸಂದರ್ಭದಲ್ಲೂ ಪದೇ ಪದೇ ಮೂತ್ರವಿಸರ್ಜನೆ ಕಾಣಿಸುತ್ತದೆ.

ಇದಕ್ಕೆ ಪರಿಹಾರ ಮತ್ತು ನಿಯಂತ್ರಣ ಕ್ರಮಗಳು

1)ಸರಿಯಾದ ಆಹಾರ ಪದ್ಧತಿ :
ಸಕ್ಕರೆ ಪ್ರಮಾಣ ಕಡಿಮೆ ಇರುವ ಆಹಾರವನ್ನು ತಿನ್ನಬೇಕು. ಹಣ್ಣು, ತರಕಾರಿ, ಸಂಪೂರ್ಣ ಧಾನ್ಯಗಳನ್ನು ಹೆಚ್ಚಾಗಿ ತೆಗೆದುಕೊಳ್ಳಬೇಕು. ಕೆಫೀನ್ ಮತ್ತು ಅತಿಯಾದ ಮಸಾಲೆ ಪದಾರ್ಥಗಳನ್ನು ಕಡಿಮೆ ಮಾಡುವುದು ಒಳ್ಳೆಯದು .
2)ವೈದ್ಯಕೀಯ ಪರೀಕ್ಷೆ :
ಪದೇ ಪದೇ ಮೂತ್ರ ವಿಸರ್ಜನೆ ಸಮಸ್ಯೆ ಇರುವವರು ವೈದ್ಯರನ್ನು ಕಂಡು ಮೂತ್ರ ಪರೀಕ್ಷೆ ಮಾಡಿಸಿಕೊಂಡು ಮದುಮೇಹ ಇಲ್ಲದಿರುವುನ್ನು ಖಾತರಿ ಪಡಿಸಿಕೊಳ್ಳುವುದು ಉತ್ತಮ .
3)ಸ್ವಚ್ಛತೆಯ ಮಂತ್ರ :
ಪುರುಷರಾಗಲಿ ಮಹಿಳೆಯರಾಗಲಿ ವೈಯಕ್ತಿಕ ಸ್ವಚ್ಛತೆ ತುಂಬಾ ಅಗತ್ಯ ಸೋಂಕು ತಡೆಯಲು ನಿತ್ಯ ಸ್ವಚ್ಛವಾಗಿರುವುದು ಮುಖ್ಯ .
4)ನೀರಿನ ಸಮತೋಲನ ಅಗತ್ಯ :
ನಾವು ನೀರು ಕುಡಿಯುವಾಗ ಒಂದೇಬಾರಿ ಹೆಚ್ಚು ನೀರು ಕುಡಿಯದೆ ಸಮಯ ಕೊಟ್ಟು ನಂತರ ಕುಡಿಯುವ ಅಭ್ಯಾಸ ಮತ್ತು ರಾತ್ರಿ ಮಲಗುವ ಸಮಯದಲ್ಲಿ ಕಡಿಮೆ ನೀರು ಕುಡಿಯುವುದು ಮುಖ್ಯ
5)ಯೋಗ ಮತ್ತು ವ್ಯಾಯಾಮ :
ನಾವು ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡುವುದರಿಂದ ದೇಹದ ಮೆಟಬೋಲಿಸಂ ಸುಧಾರಣೆಗೊಂಡು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ

ನಮ್ಮ ಮೂತ್ರಕೋಶವು ಸೂಕ್ಷ್ಮ ಅಂಗವಾಗಿದ್ದು, ಅದರ ನಡವಳಿಕೆಯಲ್ಲಿನ ಬದಲಾವ ಣೆಗಳು ಹೆಚ್ಚಾಗಿ ಆಧಾರವಾಗಿರುವ ಜೀವನಶೈಲಿ ಅಥವಾ ಆರೋಗ್ಯ ಸಮಸ್ಯೆ ಗಳನ್ನು ಪ್ರತಿಬಿಂಬಿಸುತ್ತವೆ.

ಸತತ ಮೂತ್ರ ವಿಸರ್ಜನೆಯನ್ನು ನಿರ್ಲಕ್ಷ್ಯ ಮಾಡದೇ ನಾವು ಸಮಯಕ್ಕೆ ಸರಿಯಾಗಿ ನಮ್ಮ ದೇಹವನ್ನು, ಸ್ವಚ್ಛತೆ ಹಾಗೂ ಆರೋಗ್ಯಕರವಾಗಿ ನೋಡಿಕೊಂಡರೆ ನಮ್ಮ ಮುಂದಿನ ಜೀವನವನ್ನು ಸುಖಕರ ರೀತಿಯಲ್ಲಿ ಸಾಗಿಸಲು ಸಹಕಾರಿಯಾಗುತ್ತದೆ.

ಆರಂಭಿಕ ಮೌಲ್ಯಮಾಪನವು ಅಸ್ವಸ್ಥತೆಯನ್ನು ತಡೆಯುತ್ತದೆ ಮತ್ತು ಸಮಸ್ಯೆ ಉಲ್ಬಣಗೊಳ್ಳುವ ಮೊದಲು ಅವುಗಳನ್ನು ಹಿಡಿಯಬಹುದು.
ಸತತವಾಗಿ ಮೂತ್ರ ವಿಸರ್ಜನೆ ಮಾಡುವುದು ಒಂದು ಸಾಮಾನ್ಯ ಸಮಸ್ಯೆಯಾದರೂ, ಕೆಲವೊಮ್ಮೆ ಇದು ಗಂಭೀರ ರೋಗಗಳ ಸೂಚನೆಯಾಗಿರಬಹುದು. ಆದ್ದರಿಂದ ದೇಹ ನೀಡುವ ಸೂಚನೆಗಳನ್ನು ಗಮನಿಸಿ, ಸರಿಯಾದ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ. ಆರೋಗ್ಯಕರ ಆಹಾರ, ಸಮರ್ಪಕ ನಿದ್ರೆ, ನಿಯಮಿತ ವ್ಯಾಯಾಮ ಮತ್ತು ಮಾನಸಿಕ ಸಮತೋಲನದಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು.

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ — ಸಮಯಕ್ಕೆ ಸರಿಯಾಗಿ ಜಾಗ್ರತೆ ವಹಿಸಿ, ಆರೋಗ್ಯಕರ ಜೀವನ ನಡೆಸಿ ಇದು ನನ್ನ ವ್ಯಯಕ್ತಿಕ ಸಲಹೆ ,
ನಾನು ಬರೆದಿರುವ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತೆ ಬೇರೆ ಯಾವ ವಿಷಯದ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕು ಎಂದು ಕಾಮೆಂಟ್ಸ್ ರೂಪದಲ್ಲಿ ತಿಳಿಸಿ ಧನ್ಯವಾದಗಳು .

what is the main cause of urination difficulty?

Difficulty in urination(retention) is caused by enlarged prostate,urinary tract infection(UTI), constipation or nerve damage will affect the bladder control, stress, pelvic floor disfunction.

To fix frequent urine problem with antibiotics for urinary infections, increasing lifstyle changes like drinking more water during day time and less water at night, and practicing some pelvic floore exercises.

Leave a Comment

Your email address will not be published. Required fields are marked *

Scroll to Top