ಕಣ್ಣಿನ ಸಮಸ್ಯೆ ಅಥವಾ ನೋವು ಒಬ್ಬರಿಂದ ಒಬ್ಬರಿಗೆ ಹರಡುವಂತಹ ಸೋಂಕಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಸೋಂಕಿತರು ತನ್ನ ಸುತ್ತಮುತ್ತಲಿನ ವಸ್ತುಗಳ ಬಗ್ಗೆ ಕಾಳಜಿ ಮಾಡುವುದು ಮುಖ್ಯ.
Table of Contents
Toggleಕಣ್ಣಿನ ಸಮಸ್ಯೆ ಯಾಕೆ ಬರುತ್ತದೆ?
ನಮ್ಮ ದೇಹದಲ್ಲಿ ಕಣ್ಣುಗಳು ಅತ್ಯಂತ ಅಮೂಲ್ಯವಾದ ಅಂಗಗಳಲ್ಲಿ ಒಂದು. ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ನೋಡುವುದಕ್ಕೆ , ಅನುಭವಿಸುವುದಕ್ಕೆ, ತಿಳಿಯುವುದಕ್ಕೆ ನಮಗೆ ಕಣ್ಣುಗಳೆ ಮುಖ್ಯ ಸಾಧನ. ಆದರೆ ಇತ್ತೀಚಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ಕಂಪ್ಯೂಟರ್, ಟಿವಿ, ಬಳಕೆ ಹೆಚ್ಚಾಗಿ ಕಣ್ಣುಗಳ ಮೇಲೆ ಒತ್ತಡ ಜಾಸ್ತಿಯಾಗಿ ಕಣ್ಣಿಗೆ ಸಂಬಂದಿಸಿದ ಸಮಸ್ಯೆಗಳು ಕೂಡ ಹೆಚ್ಚಾಗಿವೆ. ಆದ್ದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡುವುದು ಅಗತ್ಯವಾಗಿದೆ.
ಕಣ್ಣಿನ ಸಮಸ್ಯೆಗಳು (Eye Problems)
ಕಣ್ಣಿಗೆ ಹಲವಾರು ಸಮಸ್ಯೆಗಳು ಬರುತ್ತವೆ ಅವುಗಳಲ್ಲಿ ಕೆಲವೊಂದನ್ನು ನೋಡೋಣ ;
- ಒಣಗಿದಂತ ಕಣ್ಣುಗಳು (Dry eyes)
- ಕೆಂಪಾದ ಕಣ್ಣುಗಳು (Red eyes) Madras Eyes
- ಕಣ್ಣಿನಿಂದ ನೀರು ಬರುವುದು.
- ಕಣ್ಣು ಉರಿ.
- ಬೆಳಕಿಗೆ ಕಣ್ಣು ಮಂಜಾದಂತೆ ಆಗುವುದು.
- ಕಣ್ಣು ಪೊರೆ ಬರುವುದು.
- ಕಣ್ಣಿನ ಮೇಲೆ ಕುರುಪೆ ರೀತಿ ಊದಿಕೊಳ್ಳುವುದು.
ಈ ಸಮಸ್ಯೆಗಳು ಸಾಮಾನ್ಯವಾಗಿ ನಾವು ಸ್ಕ್ರೀನ್ ಬಳಕೆ ಹೆಚ್ಚು ಮಾಡಿದಾಗ , ಸರಿಯಾಗಿ ನಿದ್ದೆ ಮಾಡದಿದ್ದಾಗ, ಕಣ್ಣಿಗೆ ಹೆಚ್ಚು ಧೂಳು ಸೇರುವುದರಿಂದ, ವಾಯು ಮಾಲಿನ್ಯದಿಂದ ಉಂಟಾಗುತ್ತವೆ. ಇವೆಲ್ಲ ಸಾಮಾನ್ಯವಾಗಿ ಕಂಡರೂ ಕೆಲವೊಮ್ಮೆ ಗಂಭೀರ ಸಮಸ್ಯೆಗಳಾಗಿ ಕಾಡುತ್ತವೆ ಆದ್ದರಿಂದ ನಿರ್ಲಕ್ಷ್ಯ ಮಾಡಬಾರದು.
ಕಣ್ಣಿನ ದೃಷ್ಟಿ ಕುಗ್ಗುವುದು.( Eye sight)
ನಾವು ಸಾಮಾನ್ಯವಾಗಿ ಕಣ್ಣಿನಿಂದ ಸ್ಪಷ್ಟವಾಗಿ ನೋಡುವುದನ್ನು ದೃಷ್ಟಿ ಎನ್ನುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆಯಿಂದ ದೃಷ್ಟಿಯ ಸಮಸ್ಯೆಯೂ ಕಾಡುತ್ತಿದೆ. ಮಕ್ಕಳಿಂದ ಇಡಿದು ವಯಸ್ಕರ ವರೆಗೂ ಇದು ಹೆಚ್ಚಾಗುತ್ತಿದೆ.
ದೃಷ್ಟಿ ಕುಗ್ಗಲು ಪ್ರಮುಖ ಕಾರಣಗಳೆಂದರೆ,
- ನಾವು ತಿನ್ನುವ ಆಹಾರದಲ್ಲಿ ವಿಟಮಿನ್ A ಕೊರತೆ,
- ಹೆಚ್ಚು ಮೊಬೈಲ್ ಬಳಕೆ ಮಾಡುವುದರಿಂದ.
- ಸರಿಯಾದ ಬೆಳಕು ಇಲ್ಲದೆ ಓದುವುದು.
- ಜೀನ್ಸ್, ತಂದೆ ತಾಯಿಯಿಂದ ಬರುವುದು.
- ಡಯಾಬಿಟಿಸ್ ಇರುವುದರಿಂದ ಕೆಲವರಲ್ಲಿ ದೃಷ್ಟಿ ಸಮಸ್ಯೆ ಬರುತ್ತದೆ.
ಸಮೀಪದೃಷ್ಟಿ (Myopia):
ಇದು ನಮಗೆ ಹತ್ತಿರದ ವಸ್ತುಗಳು ಸ್ಪಷ್ಟವಾಗಿ ಕಾಣುತ್ತವೆ, ಆದರೆ ದೂರದ ವಸ್ತುಗಳು ಸರಿಯಾಗಿ ಕಾಣುವುದಿಲ್ಲ ಮುಸುಕಾಗಿ ಕಾಣುತ್ತವೆ.
ದೂರದೃಷ್ಟಿ (Farsightedness):
ಇದರಲ್ಲಿ ದೂರದ ವಸ್ತುಗಳು ಸ್ಪಷ್ಟವಾಗಿ ಕಾಣುತ್ತವೆ ಆದರೆ ಹತ್ತಿರದ ವಸ್ತುಗಳು ಅಥವಾ ಅಕ್ಷರಗಳು ಮಸುಕಾಗಿ ಕಾಣುತ್ತವೆ.
ಕಣ್ಣಿನಲ್ಲಿ ಉರಿ ಜಾಸ್ತಿಯಾಗುವುದು (itching eyes) :
ಕಣ್ಣಿನಲ್ಲಿ ಉರಿ ಜಾಸ್ತಿಯಾದಾಗ ಕಣ್ಣನ್ನು ಉಜ್ಜಬೇಕು ಎನಿಸುತ್ತದೆ ಆಗ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ.
ಇದು ಮುಖ್ಯವಾಗಿ ಅಲರ್ಜಿಯಿಂದ, ಕಣ್ಣು ಯಾವಾಗಲೂ ಒಣಗಿದ ರೀತಿ ಇರುವುದರಿಂದ, ಕಣ್ಣಿನಲ್ಲಿ ಮೇಲಿನ ವಸ್ತು ಸೇರಿರುವುದರಿಂದ, ನಂತರ ಕೆಲವರು ಕಾಂಟ್ಯಾಕ್ಟ್ ಲೆನ್ಸ್ ಬಳಸುವುದರಿಂದ ಬರುತ್ತದೆ.
ಗ್ಲುಕೋಮಾ (Glaucoma) : ಇದು ಕಣ್ಣಿಗೆ ಒತ್ತಡ ಹೆಚ್ಚಾಗುವುದರಿಂದ ನರಗಳು ಹಾನಿಗೊಳಗಾಗಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.
ವರ್ಣಾಂಧತೆ (Color Blindness) : ಈ ಕಾಯಿಲೆ ಇರುವವರಿಗೆ ಬಣ್ಣಗಳನ್ನು ಗುರುತಿಸಲು ತುಂಬಾ ಕಷ್ಟವಾಗುತ್ತದೆ.
ಇದು ಹೆರಿಡಿಟಿ ಜೆನಟಿಕ್ ಇಂದ ಬರುತ್ತದೆ, ಅಂದರೆ ನಮ್ಮ ಮನೆಯಲ್ಲಿ ಯಾರಿಗಾದರೂ (ತಂದೆ, ತಾಯಿ ಅಜ್ಜ, ಅಜ್ಜಿ) ಈಗಾಗಲೇ ಈ ರೀತಿಯ ಬಣ್ಣ ಕುರುಡುತನ ಕಾಯಿಲೆ ಇದ್ದರೆ ಅವರಿಂದ ನಮಗೆ ಬರುವ ಸಾಧ್ಯತೆ ಹೆಚ್ಚು.
ರಾತ್ರಿ ಕುರುಡುತನ (Night blindness):
ಕೆಲವರಿಗೆ ರಾತ್ರಿ ವಾಹನ ಚಲಾಯಿಸುವಾಗ ಮುಂದೆ ಬರುವ ವಾಹನಗಳನ್ನು ನೋಡಲು ಮತ್ತೆ ರಸ್ತೆ ಸರಿಯಾಗಿ ಕಾಣುತ್ತಿರುವುದಿಲ್ಲ, ಹಾಗೆಯೆ ನಾವು ಯಾವುದು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋದರೆ ಅಲ್ಲಿ ಏನೂ ಸರಿಯಾಗಿ ಕಾಣದಿರುವುದು, ಇದೆಲ್ಲ ರಾತ್ರಿ ಕುರುಡುತನದ ಲಕ್ಷಣಗಳಾಗಿವೆ.
ಕೆಲವು ಜನರು ಈ ಸಮಸ್ಯೆಯಿಂದ ಹುಟ್ಟಿರುತ್ತಾರೆ, ಇದಕ್ಕೆ ಮುಖ್ಯ ಕಾರಣ ನಮ್ಮ ದೇಹದಲ್ಲಿ ವಿಟಮಿನ್ A ಕಡಿಮೆ ಇರುವುದು(ಕ್ಯಾರೆಟ್, ಸ್ಪಿನಾಚ್, ಲಿವರ್, ಕೆಲವೊಂದು ಸಪ್ಲಿಮೆಂಟ್ಸ್). ಈ ಸಮಸ್ಯೆಯನ್ನು ವೈದ್ಯರು ಕಣ್ಣಿಗೆ ಸರ್ಜರಿ ಮಾಡಿ ಗುಣಪಡಿಸುತ್ತಾರೆ. ಅಥವಾ ಕಣ್ಣಿಗೆ ಬೇರೆ ರೀತಿಯ ಲೆನ್ಸ್ ಗಳನ್ನ ಹಾಕಿಕೊಳ್ಳಬೇಕಾಗುತ್ತದೆ.
ಕಣ್ಣಿನ ದೃಷ್ಟಿ ಕಾಪಾಡಲು ನಾವು ಮಾಡಬೇಕಾದ ಕೆಲಸ ;
- ದಿನಕ್ಕೆ ಒಂದು ಬಾರಿ ತ್ರಾಟಕ ಎಂಬ ಕಣ್ಣಿನ ವ್ಯಾಯಾಮ ಮಾಡುವುದು.
( ದೀಪವನ್ನು ಹಚ್ಚಿ ಅದನ್ನೇ ದೃಷ್ಟಿಸಿ ನೋಡುವುದು, ಸ್ವಲ್ಪ ಗ್ಯಾಪ್ ಬಿಡುವುದು, ನಂತರ ಒಂದು ಬೆರಳನ್ನು ಮೇಲಕ್ಕೆ ಕೆಳಕ್ಕೆ ಎತ್ತಿ ಅದನ್ನೇ ದೃಷ್ಟಿಸಿ ನೋಡುವುದು) - ದಿನವೂ ಹಸಿರು ತರಕಾರಿ, ಕ್ಯಾರೆಟ್, ಸೊಪ್ಪು ಅದರಲ್ಲೂ ಕರಿಬೇವು ಸೊಪ್ಪು ಸಾಂಬಾರಿನಲ್ಲಿ ತಿನ್ನುವುದರಿಂದ ಕಣ್ಣಿಗೆ ತುಂಬಾ ಒಳ್ಳೆಯದು,
- 20-20-20 ನಿಯಮ ಪಾಲಿಸುವುದು ಅಂದರೆ,( ಪ್ರತೀ 20 ನಿಮಿಷಕ್ಕೆ 20 ಸೆಕೆಂಡ್, 20 ಅಡಿಗಳ ದೂರದ ವಸ್ತುವನ್ನು ನೋಡುವುದು) ಇದು ಕಣ್ಣಿಗೆ ವಿಶ್ರಾಂತಿ ಕೊಡುತ್ತದೆ.
- ನಿಯಮಿತವಾಗಿ ಅಂದರೆ ವರ್ಷಕ್ಕೆ ಒಮ್ಮೆಯಾದರೂ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು.
- ಸ್ಕ್ರೀನ್ ಸಮಯ ನಿಯಂತ್ರಿಸುವುದು :
- ರಾತ್ರಿ ಮಲಗುವಾಗ ಆದಷ್ಟು ಮೊಬೈಲ್ ಬಳಸುವುದನ್ನು ತಪ್ಪಿಸಿ, ಕೆಲಸದ ಮದ್ಯ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ.
- ಸ್ವಚ್ಛತೆ ಕಾಪಾಡುವುದು :
- ಕಣ್ಣುಗಳನ್ನು ನೀರಿನಿಂದ ಆಗಾಗ ತೊಳೆಯಬೇಕು, ಕೈ ತೊಳೆಯದೆ ಕಣ್ಣನ್ನು ಮುಟ್ಟಬಾರದು.
- ಸರಿಯಾದ ನಿದ್ದೆ ಮಾಡುವುದು :
- ದಿನಕ್ಕೆ ಕನಿಷ್ಠ ಅಂದರೂ 6-7 ಗಂಟೆ ಸಮರ್ಪಕ ನಿದ್ದೆ ಮಾಡುವುದು ಅವಶ್ಯಕ.
ಬೀಟಾ ಕ್ಯಾರೋಟಿನ್ , ವಿಟಮಿನ್ ಎ ,ಸಿ ಇರುವ ಆಹಾರಗಳನ್ನ ಜಾಸ್ತಿ ತಿನ್ನಬೇಕು, ಮತ್ತೆ ಕಣ್ಣಿನ ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು, ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
