ನಮ್ಮ ಜೀವನಶೈಲಿ, ನಾವು ತಿನ್ನುವ ಆಹಾರ, ನಮ್ಮ ದಿನನಿತ್ಯದ ವ್ಯಾಯಾಮ ಪದ್ಧತಿ, ಇವೆಲ್ಲವುಗಳು ನಮ್ಮ ದೇಹದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ ಅಂತ ಗೊತ್ತಾಗುತ್ತದೆ, ಅದರಲ್ಲೂ ನಮ್ಮ ದೇಹದ ಮುಖ್ಯ ಅಂಗವಾದ ಲಿವರ್ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ನೋಡೋಣ. ನಮ್ಮ ದೇಹದಲ್ಲಿ ಯಕೃತ್ತು(Liver) ಒಂದು ಪ್ರಮುಖ ಅಂಗವಾಗಿದ್ದು, ಇದು ನಮ್ಮ ದೇಹಕ್ಕೆ ಸೇರುವ ವಿಷ ಪದಾರ್ಥಗಳನ್ನ ಪಿಲ್ಟರ್ ಮಾಡುವುದರ ಜೊತೆಗೆ, ನಾವು ತಿಂದ ಆಹಾರವನ್ನು ಜೀರ್ಣ ಮಾಡುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
Table of Contents
Toggleಈ fatty liver ಅಂದರೆ ಏನು ನೋಡೋಣ.
ನಮ್ಮ ಲಿವರ್ ನಲ್ಲಿ ಮತ್ತೆ ಅದರ ಸುತ್ತ ಮುತ್ತ ಸಾಮಾನ್ಯಕ್ಕಿಂತ ಹೆಚ್ಚು ಕೊಬ್ಬು(fat) ಸಂಗ್ರಹವಾಗಿರುವ ಸ್ಥಿತಿ. ನಾವು ಸಾಮಾನ್ಯವಾಗಿ ನೋಡೋದಾದರೆ ನಮ್ಮ ಲಿವರ್ ನಲ್ಲಿ ಈಗಾಗಲೇ ಸ್ವಲ್ಪ ಕೊಬ್ಬಿನಂಶ ಇರುತ್ತೆ, ಆದರೆ ಆದರೆ ಪ್ರಮಾಣ 10-20% ಗಿಂತ ಜಾಸ್ತಿ ಆದರೆ ಅದನ್ನೇ ನಾವು ಫ್ಯಾಟಿ ಲಿವರ್ ಅಂತ ಕರೀತೀವಿ. ನಮ್ಮ ದೇಶದಲ್ಲಿ ಪ್ರಮುಖವಾಗಿ ನಾನ್ ಅಲ್ಕೊಹಾಲಿಕ್ ಪ್ಯಾಟಿ ಲಿವರ್ ಡಿಸೀಸ್ (NHFD) 38% ಯುವಕರಲ್ಲಿ ಮತ್ತೆ 35% ಚಿಕ್ಕ ಮಕ್ಕಳಲ್ಲಿ ಹೆಚ್ಚಾಗುತ್ತಿದ್ದು, ಇದು ಒಬೆಸಿಟಿ, ಮಧುಮೇಹ, ಡಯಟ್ ನಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನ ಹುಟ್ಟು ಹಾಕುತ್ತಿದೆ ಎಂದು ತಿಳಿದು ಬಂದಿದೆ.
ಇದು ಎರಡು ರೀತಿಯಲ್ಲಿ ಕಂಡು ಬರುತ್ತದೆ :
1) ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್(AFLD)-
ಇದು ಸಾಮಾನ್ಯವಾಗಿ ಜಾಸ್ತಿ ಮಧ್ಯಪಾನ( ಎಣ್ಣೆ ) ಮಾಡುವವರಲ್ಲಿ ಕಂಡು ಬರುವ ಲಿವರ್ ನ ಸ್ಥಿತಿಯಾಗಿರುತ್ತೆ.
2) ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್(NAFLD)-
ಇದು ಮಧ್ಯಪಾನ ಮಾಡದವರಲ್ಲಿ ಸ್ತೂಲಕಾಯ(Obesity), ಇನ್ಸುಲಿನ್ ಗೆ ಸಂಬಂದಿಸಿದ ಕೆಲವೊಂದು ಕಾರಣಗಳಿಂದ ಹಾಗೂ ಕೆಲವೊಂದು ಜೀವನಶೈಲಿಯಲ್ಲಿ ಬದಲಾವಣೆಗಳಾದ ಕಾರಣದಿಂದ ಬರುವ ಕಾಯಿಲೆಯಾಗಿದೆ.
ಫ್ಯಾಟಿ ಲಿವರ್ ಬರುವುದಕ್ಕೆ ಕೆಲವೊಂದು ಕಾರಣಗಳನ್ನ ನೋಡೋಣ:
ಇದಕ್ಕೆ ಹಲವಾರು ಕಾರಣಗಳಿವೆ, ಅದರಲ್ಲಿ ಕೆಲವೊಂದು ಕಾರಣಗಳನ್ನ ನಾವು ಇಲ್ಲಿ ತಿಳಿಯೋಣ.
1) ಮಧ್ಯಪಾನ ಮಾಡುವುದರಿಂದ :
ಸಾಮಾನ್ಯವಾಗಿ ನಮ್ಮ ಲಿವರ್ ಪ್ಯಾಟಿ ಆಗುವುದೇ ಅತೀ ಹೆಚ್ಚು ಮಧ್ಯಪಾನ ಮಾಡುವುದರಿಂದ ಅದರಲ್ಲಿರುವ ಆಲ್ಕೊಹಾಲಿಕ್, ಟಾಕ್ಸಿಕ್ ಕಂಟೆಂಟ್ ನಮ್ಮ ಲಿವರ್ ನಿಂದ ಶುದ್ದೀ ಕರಿಸಲು ಸಾಧ್ಯವಾಗದಿದ್ದಾಗ ಲಿವರನಲ್ಲಿ ಫ್ಯಾಟ್ ತುಂಬಿಕೊಳ್ಳುತ್ತದೆ.
2) ಅಸಮತೋಲನ ಆಹಾರ ಪದ್ಧತಿ :
ನಾವು ತಿನ್ನುವ ಆಹಾರದಲ್ಲಿ ಹೆಚ್ಚಿನ ಎಣ್ಣೆ ಅಂಶ, ಜಂಕ್ ಫುಡ್, ಹೆಚ್ಚಿನ ಸಕ್ಕರೆ ಅಂಶ, ಇದ್ದರೆ ಅದು ನಮ್ಮ ಲಿವರ್ ನ ಕೈಯಲ್ಲಿ ಜೀರ್ಣಿಸಲು ಆಗದೆ ಲಿವರ್ ನಲ್ಲಿ ಕೊಬ್ಬು ಶೇಖರಣೆ ಆಗುತ್ತದೆ.
3) ವ್ಯಾಯಾಮದ ಕೊರತೆ :
ನಾವು ಎಷ್ಟು ಊಟ ಮಾಡುತ್ತೇವೆ ಅದಕ್ಕೆ ತಕ್ಕಂತೆ ನಾವು ವ್ಯಾಯಾಮ ಮಾಡುವುದಿಲ್ಲ, ಆದರಿಂದ ನಮ್ಮ ದೇಹದಲ್ಲಿ ಕೊಬ್ಬು ಸಂಗ್ರಹ ಜಾಸ್ತಿ ಆಗಿ ಅದು Fatty liver ಆಗಲು ಕಾರಣವಾಗುತ್ತದೆ.
4) ಹೆಚ್ಚು ತೂಕ (Obesity) :
ನಮ್ಮ ದೇಹದ ತೂಕ ಜಾಸ್ತಿ ಆದಾಗ ಅದು ನೇರವಾಗಿ ನಮ್ಮ ಲಿವರ್ ನ ಮೇಲೆ ಒತ್ತಡ ಜಾಸ್ತಿ ಆಗಿ ಅದರಿಂದ ಫ್ಯಾಟಿ ಲಿವರ್ ಬರುತ್ತದೆ.
5) ಮಧುಮೇಹ ಮತ್ತು ಕೊಲೆಸ್ಟ್ರಾಲ್ :
ನಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿ ಆದಾಗ ಮತ್ತೆ ಕೊಲೆಸ್ಟ್ರಾಲ್ ಜಾಸ್ತಿ ಆದಾಗ ಅದು ನೇರವಾಗಿ ಲಿವರ ನ ಮೇಲೆ ಪರಿಣಾಮ ಬೀರಿ ಪ್ಯಾಟಿ ಲಿವರ್ ಬರುತ್ತದೆ.
6) ದೇಹದ ಹಾರ್ಮೋನಲ್ ಅಸಮತೋಲನ :
ನಮ್ಮ ದೇಹದಲ್ಲಿ ಅನೇಕ ಕಾರಣಗಳಿಂದ ಹಾರ್ಮೋನ್ ಗಳು ಸರಿಯಾಗಿ ಕೆಲಸ ಮಾಡುತ್ತಿರುವುದಿಲ್ಲ, ಇದು ನೇರವಾಗಿ ನಮ್ಮ ಲಿವರ್ ನ ಮೇಲೆ ಪರಿಣಾಮ ಬೀರಿ Fatty liver ಆಗಲು ಶುರು ಆಗುತ್ತದೆ.
Fatty Liver ನ ಪ್ರಮುಖ ಲಕ್ಷಣಗಳು(symptoms) :
ಪ್ರಾರಂಭದಲ್ಲಿ ಈ ಸಮಸ್ಯೆ ಅಷ್ಟೇನೂ ಸ್ಪಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ, ನಿಧಾನವಾಗಿ ಹಲವಾರು ಲಕ್ಷಣಗಳು ನಮ್ಮ ದೇಹದಲ್ಲಿ ಗೊತ್ತಾಗುತ್ತವೆ.
- ನರಗಳ ದೌರ್ಬಲ್ಯ ಮತ್ತೆ ಸುಸ್ತು.
- ನಮ್ಮ ಹೊಟ್ಟೆಯ ಬಲಗಡೆ ಸಣ್ಣದಾದ ನೋವು
- ಊಟ ಮಾಡುವ ಆಸಕ್ತಿ ಕಡಿಮೆ.
- ತೂಕದಲ್ಲಿ ವ್ಯತ್ಯಾಸ ಆಗುವುದು.
- ನಮ್ಮ ಜೀರ್ಣಕ್ರಿಯೆಯಲ್ಲಿ ಏರು ಪೇರು ಉಂಟಾಗುವುದು.
- ಆರಂಭಿಕ ಹಂತದಲ್ಲಿ ಚರ್ಮ ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗುವುದು.
ಈ ಎಲ್ಲಾ ಲಕ್ಷಣಗಳು ಸಾಮಾನ್ಯವಾಗಿ fatty liver ಇರುವವರಿಗೆ ಕಂಡುಬರುತ್ತವೆ.
ನೈಸರ್ಗಿಕವಾಗಿ ನಾವು ಯಾವ ರೀತಿ ಫ್ಯಾಟಿ ಲಿವರ್(fatty liver) ಅನ್ನು ತಡೆಗಟ್ಟಬಹುದು.
ನಾವು ಆರಂಭದಲ್ಲೇ ಈ ಸಮಸ್ಯೆಯನ್ನ ಪತ್ತೆ ಮಾಡಿದರೆ, ಕೆಲವು ನೈಸರ್ಗಿಕ ವಿಧಾನಗಳಿಂದ ಅದನ್ನ ನಿಯಂತ್ರಿಸಬಹುದು. ಅವುಗಳಲ್ಲಿ ಕೆಲವೊಂದನ್ನು ತಿಳಿಯೋಣ ಬನ್ನಿ.
1) ಆರೋಗ್ಯಕರ ಆಹಾರ ಪದ್ಧತಿ :
ನಾವು ತಿನ್ನುವ ಆಹಾರದಲ್ಲಿ ನಮ್ಮ ರೋಗಗಳನ್ನ ತಡೆಯುವ ಶಕ್ತಿ ಇರುವುದರಿಂದ ನಾವು ಪೌಷ್ಠಿಕ ಆಹಾರ ತಿನ್ನುವುದು ಬಹಳ ಮುಖ್ಯ. ಅದರಲ್ಲಿ, ಹಣ್ಣುಗಳು, ತರಕಾರಿಗಳು, ಸೊಪ್ಪುಗಳು, ಧಾನ್ಯಗಳು, ಜಾಸ್ತಿ ತಿನ್ನಬೇಕು, ಯಾವೆಲ್ಲ ಬಾಯಿಗೆ ರುಚಿ ಕೊಡುತ್ತವೆ ಎಣ್ಣೆ ಪದಾರ್ಥಗಳು, ಜಂಕ್ ಫುಡ್ ಇವನ್ನೆಲ್ಲ ತಿರಸ್ಕರಿಸಬೇಕು.
2) ಪ್ರತೀದಿನ ವ್ಯಾಯಾಮ :
ನಾವು ಎಷ್ಟು ಊಟ ಮಾಡುತ್ತೇವೆ ಅಷ್ಟೇ ವ್ಯಾಯಾಮ ಮಾಡಬೇಕು. ಅಂದರೆ, ದಿನಕ್ಕೆ ಕನಿಷ್ಠ 30-45 ನಿಮಿಷ ನಡೆಯುವುದು ಸೇರಿದಂತೆ ದೈಹಿಕ ವ್ಯಾಯಾಮ ಮಾಡಬೇಕು. ಆಗ ನಮ್ಮ ದೇಹದ ಪ್ರತಿಯೊಂದು ಅಂಗಗಳು ಆರೋಗ್ಯವಾಗಿದ್ದು ಲಿವರ್ ನ ಆರೋಗ್ಯ ಸಹ ಸುಧಾರಿಸುತ್ತದೆ.
3) ದೇಹದ ತೂಕ ನಿಯಂತ್ರಣ :
ನಾವು ಹೆಚ್ಚು ದಪ್ಪ ಆದಾಗ ದೇಹದಲ್ಲಿ ಅನೇಕ ಸಮಸ್ಯೆಗಳು ಬರುತ್ತವೆ, ಅದರಲ್ಲಿ ಲಿವರ್ ನ್ ಸಮಸ್ಯೆ ಪ್ರಮುಖವಾದುದು. ಆದ್ದರಿಂದ ನಿಯಮಿತ ವ್ಯಾಯಾಮ ಮಾಡಿ ತೂಕವನ್ನು ನಿಯಂತ್ರಣದಲ್ಲಿಇಡಬೇಕು.
4) ಮಧ್ಯಪಾನ ತ್ಯಜಿಸುವುದು :
ಯಾರೆಲ್ಲ ಕುಡಿಯುತ್ತಿಲ್ಲ ತುಂಬಾ ಒಳ್ಳೆಯದು. ಆದರೆ ಯಾರೆಲ್ಲ ಕುಡಿತಕ್ಕೆ ದಾಸರಾಗಿದ್ದೀರಿ ನೀವು ಇದರ ಬಗ್ಗೆ ತುಂಬಾ ಎಚ್ಚರ ವಹಿಸಬೇಕು. ಈಗೀಗ ಕುಡಿಯುವುದು ಎಂದರೆ ಏನೋ ಘನತೆ ಎಂಬಂತಾಗಿದೆ. ಯಾವಾಗಲೋ ತಿಂಗಳಿಗೊಮ್ಮೆ ಕುಡಿಯುವುದರಲ್ಲಿ ಅಷ್ಟೇನೂ ಪರಿಣಾಮ ಆಗುವುದಿಲ್ಲ. ಆದರೆ ದಿನನಿತ್ಯ ಅಥವಾ ವಾರಕ್ಕೆ ಒಂದೆರಡು ಬಾರಿ ಕುಡಿಯುವರಲ್ಲಿ ಲಿವರ್ ತುಂಬಾ ಆಳಾಗಿರುತ್ತದೆ, ಆದ್ದರಿಂದ ನಮ್ಮ ಆರೋಗ್ಯ ಮತ್ತೆ ಮುಂದೆ ಭವಿಷ್ಯದಲ್ಲಿ ನಮ್ಮ ಮಕ್ಕಳ ಆರೋಗ್ಯ ಚನ್ನಾಗಿರಬೇಕೆಂದರೆ, ನಾವು ಕುಡಿಯುವುದನ್ನು ನಿಲ್ಲಿಸಬೇಕು.
5) ನೀರು ಜಾಸ್ತಿ ಕುಡಿಯುವುದು :
ನಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಹೊರ ಹಾಕಲು ಮತ್ತು ಲಿವರ್ ಕೊಬ್ಬು ಕಡಿಮೆ ಮಾಡಲು ನೀರು ಹೆಚ್ಚು ಉಪಯುಕ್ತ, ಆದ್ದರಿಂದ ನಾವು ಜಾಸ್ತಿ ನೀರು ಕುಡಿಯಬೇಕು ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯಬೇಕು.
6) ಗ್ರೀನ್ ಟೀ :
ನಾವು ದಿನನಿತ್ಯ ಈ ಗ್ರೀನ್ ಟೀ ಕುಡಿಯುವುದರಿಂದ ಇದರಲ್ಲಿರುವ ಆಂಟಿ ಆಕ್ಸಿಡೆಂಟ್ಸ್ ನಮ್ಮ ದೇಹಕ್ಕೆ ಒಳ್ಳೆಯ ವಾತಾವರಣವನ್ನು ಸೃಷ್ಟಿಸುವುದಲ್ಲದೆ, ಲಿವರ್ ಸುತ್ತ ಬೆಳೆಯುವ ಕೊಬ್ಬಿನ ಅಂಶವನ್ನು ಕರಗಿಸಲು ತುಂಬಾ ಉಪಯುಕ್ತವಾಗಿದೆ.
7) ಹಾಲಿಗೆ ಅರಿಶಿನ ಹಾಕಿ ಕುಡಿಯಬೇಕು :
ಯಾರಿಗೆಲ್ಲ fatty liver ಸಮಸ್ಯೆ ಇದಿಯೋ ಅವರು ಪ್ರತಿದಿನ ಮಲಗುವ ಮುಂಚೆ ಹಾಲಿಗೆ ಅಳದಿಯನ್ನು ಮಿಕ್ಸ್ ಮಾಡಿ ಕುಡಿಯಬೇಕು ಯಾಕೆಂದರೆ ಅಳದಿಯಲ್ಲಿರುವ ಆಂಟಿ ಆಕ್ಸಿಡೆಂಟ್ಸ್ ಲಿವರ್ ಅನ್ನು ಸ್ವಚ್ಚ ಮಾಡುತ್ತದೆ.
8) ನಿಂಬೆ ರಸ ಕುಡಿಯುವುದು :
ಪ್ರತಿ ದಿನ ಬೆಳಿಗ್ಗೆ ಎದ್ದ ನಂತರ ನೀರಿಗೆ ನಿಂಬೆ ಹಣ್ಣು ಮಿಕ್ಸ್ ಮಾಡಿ ಕುಡಿಯುವುದರಿಂದ ನಮ್ಮ ಲಿವರ್ ನಲ್ಲಿರುವ ಕೊಬ್ಬು ಕರಗಲು ಸಹಾಯವಾಗುತ್ತದೆ.
ಸಾಮಾನ್ಯವಾಗಿ ಇಂದಿನ ನಮ್ಮ ಜೀವನಶೈಲಿಯಲ್ಲಿ ಲಿವರ್ ನ ಕೊಬ್ಬು ಎಂಬುದು ಗಂಭೀರ ವಿಷಯವಾಗಿದ್ದು, ಆರಂಭದಲ್ಲೇ ನಾವು ಇದನ್ನು ಪತ್ತೆ ಹಚ್ಚಿದರೆ , ಉತ್ತಮ ಜೀವನಶೈಲಿಯಿಂದ , ಸರಿಯಾದ ಆಹಾರ, ಮತ್ತೆ ಉತ್ತಮ ವ್ಯಾಯಾಮದಂತಹ ಕ್ರಮಗಳಿಂದ ಸುಲಭವಾಗಿ ನಿಯಂತ್ರಿಸಬಹುದಾಗಿರುತ್ತೆ, ಲಿವರ್ ನ ಆರೋಗ್ಯ ನಮ್ಮ ಇಡೀ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ನಾವು ಅದನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.
ಫ್ಯಾಟಿ ಲಿವರ್ ಅಂದರೆ ಏನು?
ನಮ್ಮ ಯಕೃತ್ (ಲಿವರ್) ಬಾಗದಲ್ಲಿ ಅತಿಯಾದ ಕೊಬ್ಬು ಶೇಖರಣೆ ಆಗುವ ಸ್ಥಿತಿಗೆ ಫ್ಯಾಟಿ ಲಿವರ್ ಎನ್ನುತ್ತೇವೆ. ಇದು ಆರಂಭದಲ್ಲಿ ಅಷ್ಟೇನು ಪರಿಣಾಮ ಬೀರುವುದಿಲ್ಲ ಆದರೆ ಸಮಸ್ಯೆ ಗಂಭೀರ ಆದರೆ ದೇಹದ ಆರೋಗ್ಯ ಹಾಳಾಗುತ್ತದೆ.
ಫ್ಯಾಟಿ ಲಿವರ್ ಅಪಾಯ ಆಗುತ್ತಾ?
ಹೌದು. ಫ್ಯಾಟಿ ಲಿವರ್ ತುಂಬಾ ಅಪಾಯಕಾರಿ ಆಗುತ್ತೆ, ಆರಂಭದಲ್ಲಿ ಅಷ್ಟೇನು ಸಮಸ್ಯೆಯಂತೆ ಕಾಣದಿದ್ದರೂ ನಿರ್ಲಕ್ಷ್ಯ ಮಾಡಿದರೆ, ಲಿವರ್ ಡ್ಯಾಮೇಜ್, cirrhosis ಮುಂತಾದ ಅನೇಕ ಕಾಯಿಲೆಗೆ ದಾರಿ ಮಾಡಿಕೊಡುತ್ತದೆ.
Fatty Liver ಗೆ ಮುಖ್ಯ ಕಾರಣಗಳು ಏನು ?
- ದೇಹ ಅತಿಯಾದ ತೂಕ
- ಜಂಕ್ ಫುಡ್ ತಿನ್ನುವುದರಿಂದ.
- ಮಧ್ಯಪಾನ ಮಾಡುವುದರಿಂದ.
- ಸರಿಯಾದ ವ್ಯಾಯಾಮ ಮಾಡದೇ ಇರುವುದು.
- ಡಯಾಬಿಟಿಸ್ (ಮಧುಮೇಹ)

Satisfied sir💐
Thank you