Table of Contents
ToggleNatural ways to prevent Diabetes even before it starts.
ಸಕ್ಕರೆ ಕಾಯಿಲೆ(Diabetes) ಆರಂಭವಾಗುವ ಮೊದಲೇ ಹೇಗೆ ತಡೆಯಬೇಕು? ಮತ್ತು ಬಂದ ನಂತರ ಹೇಗೆ ನಿಯಂತ್ರಣ ಮಾಡಬೇಕು.
ಇತ್ತೀಚಿನ ವರ್ಷಗಳಲ್ಲಿ ಮಧುಮೇಹ(diabetes) ಎನ್ನುವ ಆರೋಗ್ಯ ಸಮಸ್ಯೆಯು ಬಹಳ ವೇಗವಾಗಿ ಹೆಚ್ಚಾಗುತ್ತಿದೆ. ಮುಖ್ಯವಾಗಿ ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಕೆಲವೊಂದು ಸರಿಯಾದ ಕ್ರಮಗಳನ್ನ ಅನುಸರಿಸದೆ ಇರುವುದು ಇದಕ್ಕೆ ಕಾರಣ. ಅದರಲ್ಲಿ ಪ್ರಮುಖವೆಂದರೆ, ನಗರ ಜೀವನಶೈಲಿಗೆ ಒಂದಿಕೊಂಡಿರುವುದು, ಅಸಮತೋಲನ ಆಹಾರ ಪದ್ಧತಿ, ದೇಹಕ್ಕೆ ವ್ಯಾಯಾಮದ ಕೊರೆತೆ, ಮಾನಸಿಕ ಒತ್ತಡ ಇನ್ನು ಹಲವಾರು ಕಾರಣಗಳಿಂದ ಡಯಾಬಿಟೀಸ್ ಹೆಚ್ಚಾಗುತ್ತಿದೆ.
ನೀವೇ ನೋಡುತ್ತಿರುವ ಹಾಗೆ ಹಿಂದೆ ಈ ಸಮಸ್ಯೆ ಹೆಚ್ಚಾಗಿ ವಯಸ್ಸಾದ ಹಿರಿಯರಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ ಇತ್ತೀಚಿಗೆ ಯುವಕ ಮತ್ತು ಮಧ್ಯವಯಸ್ಕರಲ್ಲೂ ಸಾಮಾನ್ಯವಾಗಿಬಿಟ್ಟಿದೆ.
ನಮ್ಮ ಮನೆಯಲ್ಲಿ ನನ್ನ ಮಗ ಅಥವಾ ಮಗಳಿಗೆ ಡೈಯಾಬಿಟೆಸ್ ಬಂದಿದೆ ಕಣ್ರೀ ಅಂದರೆ ಅದು ಕಾಮನ್ ಬಿಡ್ರಿ ಅನ್ನೋ ಮಟ್ಟಕ್ಕೆ ಬಂದಿದೆ.
ಹಾಗಾದ್ರೆ ಈ ಮಧುಮೇಹ(diabetes) ಅಂದರೆ ಏನು ಅಂತ ನೋಡೋಣ;
ತುಂಬಾ ಸರಳ ರೀತಿಯಲ್ಲಿ ಹೇಳಬೇಕಾದ್ರೆ ಡಯಾಬಿಟೀಸ್ ಅಂದ್ರೆ ನಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಜಾಸ್ತಿಯಾಗುವುದು. ಯಾಕೆ ಸಕ್ಕರೆ ಪ್ರಮಾಣ ಜಾಸ್ತಿಯಾಗತ್ತೆ? ಅಂದ್ರೆ ದೇಹದಲ್ಲಿನ ಇನ್ಸುಲಿನ್ ಸರಿಯಾಗಿ ಕೆಲಸ ಮಾಡದಿದ್ದಾಗ, ಅಥವಾ ನಮ್ಮ ದೇಹಕ್ಕೆ ಬೇಕಾಗಿರುವಷ್ಟು ಇನ್ಸುಲಿನ್ ಉತ್ಪಾದನೆ ಆಗದಿದ್ದಾಗ ಸಕ್ಕರೆ ಪ್ರಮಾಣ ಜಾಸ್ತಿಯಾಗುವುದನ್ನೇ ಮಧುಮೇಹ ಅಂತ ಕರೀತಾರೆ ಕಣ್ರೀ.
ಆದರೆ ಇಲ್ಲೊಂದು ಒಳ್ಳೆಯ ವಿಚಾರ ಏನಂದ್ರೆ, ನಾವು ಸರಿಯಾದ ಜೀವನಶೈಲಿ, ಮತ್ತು ಉತ್ತಮ ಆಹಾರ ಪದ್ದತಿಯನ್ನ ಅನುಸರಿಸಿಕೊಂಡ್ರೆ ಡಯಾಬಿಟಿಸ್ ಆರಂಭ ಆಗೋದನ್ನೇ ತಡೆಯಬಹುದು. ಆದ್ರೆ ನಿಮಗೆ ಈಗಾಗಲೇ ಡಯಾಬಿಟಿಸ್ ಇದ್ರೂ ಯೋಚನೆ ಮಾಡಬೇಡಿ ನಾನು ಹೇಳುವ ಕೆಲವೊಂದು ಸರಳ ವಿಧಾನಗಳಿಂದ ಸುಲುಭವಾಗಿ ಡೈಯಾಬಿಟೀಸ್(control diabetes) ಕಂಟ್ರೋಲ್ ಮಾಡಬಹುದು.
ನಾನು ಬರೆದಿರುವ ಈ ಲೇಖನದಲ್ಲಿ, ಡಯಾಬಿಟಿಸ್ ತಡೆಯೋದಕ್ಕೆ ಮತ್ತೆ ಅದನ್ನ ಸಹಜವಾಗಿ ಕಂಟ್ರೋಲ್ ಮಾಡೋದಕ್ಕೆ ಸಹಾಯ ಮಾಡೋ 7 ನೈಸರ್ಗಿಕ ವಿಧಾನಗಳನ್ನ ನೋಡೋಣ ಬನ್ನಿ.
1) ನೈಸರ್ಗಿಕ ಸಮತೋಲನ ಆಹಾರ ಪದ್ಧತಿ ಅನುಸರಿಸಬೇಕು.
ನಾವು ಡಯಾಬಿಟಿಸ್ ಬರದಂತೆ ತಡೆಯಲು ಅಥವಾ ಬಂದಮೇಲೆ ಅದನ್ನ ಕಂಟ್ರೋಲ್(prevent diabetes or control) ಮಾಡುವುದಕ್ಕೆ ಮೊದಲನೆಯದಾಗಿ ನಮ್ಮ ಆಹಾರಕ್ಕೆ ಹೆಚ್ಚಿನ ಗಮನ ಕೊಡಬೇಕು. ಯಾಕಂದ್ರೆ ನಾವು ಏನನ್ನು ತಿನ್ನುತ್ತೇವೆ, ಅದು ನಮ್ಮ ದೇಹವನ್ನ ಕಂಟ್ರೋಲ್ ಮಾಡುತ್ತದೆ.
ಡಯಾಬಿಟಿಸ್ ಬರದಂತೆ ತಡೆಯಲು ಮತ್ತು ಕಂಟ್ರೋಲ್ ಮಾಡಲು ಹೆಚ್ಚು ಸಕ್ಕರೆ ಇರುವ ಆಹಾರ, ಪ್ಯಾಕೇಜ್ಡ್ ಆಹಾರ, ಪಾಸ್ಟ್ ಫುಡ್ , ಬೀದಿ ಬದಿ ಫುಡ್, ಕೋಕ್ ನಂತ ಪಾನೀಯಗಳು ಇವುಗಳನ್ನೆಲ್ಲ ದೂರ ಇಡಬೇಕು. ನಾಲಿಗೆಗೆ ರುಚಿ ಕೊಡುವ ಈ ತಿಂಡಿಗಳು ನಮ್ಮ ದೇಹಕ್ಕೆ ಕೆಟ್ಟ ಪರಿಣಾಮ ಬೀರುತ್ತವೆ.
ಇದಕ್ಕೆ ಬದಲು ನಾವು:
- ಹಸಿರು ತರಕಾರಿಗಳು,
- ಸೊಪ್ಪುಗಳು( ಮೆಂತ್ಯ, ಪಾಲಕ್, ದಂಟು, ಬಸಳೆ, ನುಗ್ಗೆ ಇತ್ಯಾದಿ )
- ಮೆಂತೆ ಕಾಳುಗಳನ್ನ ರಾತ್ರಿ ನೆನಸಿ ಬೆಳಿಗ್ಗೆ ತಿನ್ನುವುದು.
- ಹಾಗಲ ಕಾಯಿ ಪಲ್ಯ, ಇದು ಸಕ್ಕರೆ ಕಾಯಿಲೆಗೆ ಉತ್ತಮ ರಾಮಬಾಣ .
- ಬೆಟ್ಟದನಲ್ಲಿಕಾಯಿ ,
- ನೇರಳೆ ಹಣ್ಣು.
- ಎಲ್ಲಾ ತರಹದ ಧಾನ್ಯಗಳು,
- ಬೇಳೆಕಾಳುಗಳು,
- ಮೊಟ್ಟೆ, ಮೀನು,
- ಕಡಿಮೆ ಸಕ್ಕರೆ ಇರುವ ಹಣ್ಣುಗಳು(ಆರೆಂಜ್, ಆಪಲ್, ಪಪ್ಪಾಯ, ಅವಕಾಡೊ, ಪ್ಲಮ್, ಕಲ್ಲಂಗಡಿ, ಕಿವಿಹಣ್ಣು, ಚೆರ್ರಿ ಹಣ್ಣು, ಬ್ಲಾಕ್ ಬೆರಿ, ಸ್ಟ್ರಾ ಬೆರಿ, ಇತ್ಯಾದಿ ).
ಇಂತಹ ಆಹಾರಗಳು ನಮ್ಮ ದೇಹಕ್ಕೆ ಒಳ್ಳೆಯ ಪೋಷಕಾಂಶಗಳು, ಕಾರ್ಬೋಹೈಡ್ರೇಟ್, ಫೈಬರ್, ಕೊಡುವುದರ ಜೊತೆಗೆ, ನಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನ ನಿಯಂತ್ರಣದಲ್ಲಿಡುತ್ತವೆ.
ಆದ್ದರಿಂದ ನಾವು ತಿನ್ನುವ ಆಹಾರವನ್ನ , ಸರಿಯಾದ ರೀತಿಯಲ್ಲಿ ಅನುಸರಿಸಿದರೆ ಡಯಾಬೆಟೆಸ್ ಅನ್ನು ಬಾರದ ಹಾಗೆ ತಡೆಯಬಹುದು, ಈಗಾಗಲೇ ಇದ್ದರೆ ನಿಯಂತ್ರಿಸಬಹುದು .
2) ಪ್ರತಿದಿನ ತಪ್ಪದೆ ವ್ಯಾಯಾಮ ಮಾಡಬೇಕು.
ನಾವು ದಿನ ನಿತ್ಯ ತಪ್ಪದೆ ವ್ಯಾಯಾಮ ಮಾಡುವುದರಿಂದ, ದೇಹದಲ್ಲಿರುವ ಪ್ಯಾನ್ಕ್ರಿಯಾಸ್ ಇನ್ಸುಲಿನ್ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದರಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.
ದಿನನಿತ್ಯ ಕನಿಷ್ಠ ಅಂದರೂ 30-45 ನಿಮಿಷ ವ್ಯಾಯಾಮ ಮಾಡುವುದು ಒಳ್ಳೆಯದು.
ನಾವು ಮನೆಯಲ್ಲೇ ಮಾಡಬಹುದಾದ ಸರಳ ವ್ಯಾಯಾಮಗಳು;
- ಬೆಳಿಗ್ಗೆ ಬೀಗ ಎದ್ದು 20ನಿಮಿಷ ನಡೆಯುವುದು.
- 15 ನಿಮಿಷ ಯೋಗ ಮಾಡುವುದು.
- 10 ನಿಮಿಷ ಧ್ಯಾನ .
- 20ನಿಮಿಷ ದೇಹವನ್ನು ದಂಡಿಸುವ ಸರಳ ವ್ಯಾಯಾಮ ಮಾಡಬೇಕು.
- ಸಾದ್ಯವಾದರೆ ವಾರಕ್ಕೊಮ್ಮೆ ಈಜುವುದು.
ನಾವು ಈ ರೀತಿ ದಿನ ನಿತ್ಯ ಮಾಡುತ್ತಿದ್ದರೆ ದೇಹ ಚುರುಕಾಗುತ್ತದೆ, ಹಗುರವಾಗುತ್ತದೆ, ಮತ್ತು ಮಧುಮೇಹ ತಡೆಯುವಲ್ಲಿ ಯಶಸ್ವಿಯಾಗುತ್ತದೆ.
3) ನಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಡಬೇಕು.
ಇತ್ತೀಚಿನ ದಿನಗಳಲ್ಲಿ ದೇಹದ ತೂಕ ಜಾಸ್ತಿಯಾಗುತ್ತಿರುವುದರಿಂದ ಇನ್ಸುಲಿನ್ ದೇಹದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಇದು ಡಯಾಬಿಟಿಸ್ ಗೆ ಕಾರಣ, ಎಂದು ಹಲವು ವರದಿಗಳು ತಿಳಿಸಿವೆ. ಆದ್ದರಿಂದ ನಾವು ನಮ್ಮ ದೇಹದ ತೂಕವನ್ನು ಆರೋಗ್ಯಕರ ವ್ಯಾಯಾಮದಿಂದ ಮತ್ತು ಸಮತೋಲಿತ ಆಹಾರದಿಂದ ನಿಯಂತ್ರಣದಲ್ಲಿ ಇಡಬೇಕು.
4) ಸಕ್ಕರೆ ಮತ್ತು ಜಂಕ್ ಫುಡ್ ಸೇವನೆ ನಿಯಂತ್ರಣದಲ್ಲಿ ಇಡಬೇಕು.
ಇತ್ತೀಚಿನ ದಿನಗಳಲ್ಲಿ ಜನರು ಬೀದಿಬದಿಯಲ್ಲಿ ಸಿಗುವ ಸಾಫ್ಟ್ ಡ್ರಿಂಕ್ಸ್ ಮತ್ತು ಬೇಕರಿಗಳಲ್ಲಿ ತಯಾರಿಸುವ ಸಿಹಿ ತಿಂಡಿಗಳನ್ನು ಹೆಚ್ಚಾಗಿ ತಿನ್ನುತ್ತಿದ್ದಾರೆ. ಇವುಗಳಲ್ಲಿ ಸಕ್ಕರೆ ಪ್ರಮಾಣ ಜಾಸ್ತಿ ಇದ್ದು ಮತ್ತು ಹಲಸಿನ ಹಣ್ಣು (jackfruit ) ಹಾಗೂ ಕೆಲವು ಸಕ್ಕರೆ ಅಂಶ ಜಾಸ್ತಿ ಇರುವ ಹಣ್ಣುಗಳು (ಮಾವು, ಪೈನಾಪಲ್,ಬಾಳೆಹಣ್ಣು, ಚೆರ್ರಿ ) ಹೆಚ್ಚು ಸೇವನೆಯಿಂದ ಸಹ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಆದ್ದರಿಂದ ಇಂತಹ ಆಹಾರ ಪದಾರ್ಥಗಳನ್ನು ನಾವು ಸಾಧ್ಯವಾದಷ್ಟು ಕಡಿಮೆ ಮಾಡುವುದು ಸಾದ್ಯವಾದರೆ ತಿನ್ನದೇ ಇರುವುದೇ ಉತ್ತಮ.
5) ಸಾಕಷ್ಟು ನೀರು ಕುಡಿಯಬೇಕು.
ನಮ್ಮ ದೇಹದ ಆರೋಗ್ಯಕ್ಕೆ ಆಹಾರ ಎಷ್ಟು ಮುಖ್ಯವೋ ಅಷ್ಟೇ ಪ್ರಮಾಣದಲ್ಲಿ ನೀರು ಮುಖ್ಯ.
ದಿನಕ್ಕೆ ಕನಿಷ್ಟ 3-4 ಲೀಟರ್ ನೀರು ಕುಡಿಯುವ ಅಭ್ಯಾಸ ಇರಬೇಕು.
ನೀರು ಕುಡಿಯುವುದರಿಂದ ನಮ್ಮ ದೇಹದ ಮೆಟಬೋಲಿಸಂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ, ಮತ್ತು ದೇಹದಲ್ಲಿನ ಮಲಿನ ಅಂಶಗಳನ್ನ ಹೊರ ಹಾಕಲು ನೀರು ಸಹಾಯ ಮಾಡುತ್ತದೆ.
ಡಯಾಬಿಟಿಸ್ ಇರುವವರು ನೀರು ಜಾಸ್ತಿ ಕುಡಿಯುವುದರಿಂದ ಮೂತ್ರ ವಿಸರ್ಜನೆ ಹೆಚ್ಚು ಬಾರಿ ಮಾಡಬೇಕು ಅನ್ನಿಸುತ್ತದೆ. ಅದು ಸಹಜ, ಅದಕ್ಕೆ ರಾತ್ರಿಯ ವೇಳೆ ಕಡಿಮೆ ಮಾಡಿ, ಬೆಳಗಿನ ಜಾವ ಜಾಸ್ತಿ ನೀರು ಕುಡಿಯಬೇಕು.
6) ಉತ್ತಮ ನಿದ್ದೆ ಮಾಡಬೇಕು.
ನಮ್ಮ ದೇಹಕ್ಕೆ ಮುಖ್ಯವಾಗಿ ವಿಶ್ರಾಂತಿ ಬೇಕು. ನಿದ್ದೆ ಕಡಿಮೆ ಮಾಡಿದರೆ ದೇಹದ ಹಾರ್ಮೋನ್ ಸಮತೋಲನವನ್ನ ಹಾಳುಮಾಡುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಜಾಸ್ತಿ ಯಾಗಿ ಡಯಾಬೆಟಿಸ್ ಗೆ ಕಾರಣವಾಗುತ್ತದೆ.
ಆದ್ದರಿಂದ ಪ್ರತಿದಿನ ಕನಿಷ್ಠ 6-7 ಗಂಟೆಗಳ ಕಾಲ ದೀರ್ಘ ನಿದ್ದೆ ಮಾಡಬೇಕು.
ಉತ್ತಮ ನಿದ್ದೆ ದೇಹದ ಆರೋಗ್ಯವನ್ನು ಕಾಪಾಡುವುದಲ್ಲದೆ, ಡಯಾಬಿಟಿಸ್ ಸಮಸ್ಯೆಯನ್ನು ಸಹಜವಾಗಿ ಕಂಟ್ರೋಲ್ ಮಾಡುತ್ತದೆ.
- Bedಗೆ ಬೇಗ ಮಲಗಲು ಹೋಗಿ(ಮಲಗುವ ಮುಂಚೆ ಯಾವುದಾದರು ಪುಸ್ತಕದ ಒಂದು ಪೇಜ್ ಓದಿ ಮಲಗಿ)
- ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಅದು ನಿಮ್ಮ ನಿದ್ದೆಯನ್ನು ಸರಳಗೊಳಿಸುತ್ತದೆ.
- ನಿದ್ದೆಗೆ 20 ನಿಮಿಷ ಮುಂಚೆ ಫೋನ್ ನೋಡಬೇಡಿ.
- ಬೆಳಿಗ್ಗೆ ಸಾಧ್ಯವಾದಷ್ಟು ಬೇಗ ಹೇಳಲು ಪ್ರಯತ್ನಿಸಿ( ಬೇಗ ಹೇಳಲು ಕಷ್ಟ ಆದರೂ ಪ್ರಯತ್ನಿಸಿ).
7) ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ.
ಕೆಲಸದ ಒತ್ತಡ, ಸಂಸಾರದ ಒತ್ತಡ, ದೇಹದ ಹಾರ್ಮೋನ್ ಗಳ ಮೇಲೆ ನೀರ ಪರಿಣಾಮ ಬೀರಿ ಮನುಷ್ಯನ ಅರ್ಧ ಆಯಸ್ಸನ್ನ ಕುಗ್ಗಿಸುತ್ತದೆ. ಆದ್ದರಿಂದ ಆದಷ್ಟು ತಾಳ್ಮೆಯಿಂದ ಇದ್ದು, ಧ್ಯಾನ, ಯೋಗ, ಪ್ರಾಣಾಯಾಮ, ಸಂಗೀತ ಕೇಳುವುದು, ಯಾವುದಾದರೊಂದು ಚಿತ್ರಕಲೆ, ನೃತ್ಯ, ಓದುವುದು, ಈ ರೀತಿ ಅವ್ಯಾಸಗಳನ್ನ ಬೆಳಸಿಕೊಳ್ಳಿ ಆಗ ಒತ್ತಡ ಕಡಿಮೆ ಆಗಿ, ಮನಸ್ಸು ಶಾಂತವಾಗಿರುತ್ತದೆ ಇದು diabetes control ಮಾಡಲು ಸಹಕರಿಸುತ್ತದೆ .
ನಿಯಮಿತವಾಗಿ (ವರ್ಷಕ್ಕೊಮ್ಮೆ) ಆರೋಗ್ಯ ತಪಾಸಣೆ ಮಾಡಿಸುವುದರಿಂದ ನಮ್ಮ ದೇಹದ ಸ್ಥಿತಿ ಯಾವ ರೀತಿ ಇದೆ, ಎಂದು ತಿಳಿಯುವುದು ಉತ್ತಮ.
ಡಯಾಬಿಟಿಸ್ ಇರುವವರು ತಿಂಗಳಿಗೊಮ್ಮೆ ರಕ್ತ ಪರೀಕ್ಸಿಸುವುದು ಒಳ್ಳೆಯದು.
ಡಯಾಬಿಟಿಸ್ ಒಂದು ಸಾಮಾನ್ಯವಾದರೂ ಗಂಬೀರವಾದ ಅರೋಗ್ಯ ಸಮಸ್ಯೆಯಾಗಿದೆ, ಆದರೆ ನಾವು ಇದಕ್ಕೆ ಹೆದರುವ ಅಗತ್ಯವಿಲ್ಲ.
ನಿಯಮಿತ ವ್ಯಾಯಾಮ, ಉತ್ತಮ ಆಹಾರ, ಒತ್ತಡ ಕಡಿಮೆ ಮಾಡಿಕೊಳ್ಳುವುದರಿಂದ ನಮ್ಮ ಜೀವನಶೈಲಿ ಬದಲಾಗುತ್ತದೆ. ಆಗ ದೇಹದಲ್ಲಿನ ಯಾವುದೇ ಕಾಯಿಲೆಯೂ ನಮ್ಮ ಬದಲಾವಣೆಗೆ ಹೆದರುತ್ತದೆ.
ಆರೋಗ್ಯ ನಮ್ಮ ಜೀವನದ ಅತ್ಯಮೂಲ್ಯ ಸಂಪತ್ತು, ಅದನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ.
ನಾನು ಬರೆದಿರುವ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತೆ ಬೇರೆ ಯಾವ ವಿಷಯದ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕು ಎಂದು ಕಾಮೆಂಟ್ಸ್ ರೂಪದಲ್ಲಿ ತಿಳಿಸಿ ಧನ್ಯವಾದಗಳು .

Good article next write regarding teeth health
ok Thanks.
Pingback: 9 Signs and Symptoms of Type 2 Diabetes - Secrete Topic
Pingback: ಮಧುಮೇಹಿಗಳ(Sugar patient) ಹಿತ ಶತ್ರು ನಮ್ಮ ಹಲಸು!
Pingback: ಮಧುಮೇಹ ರೋಗಿಗಳಿಗೆ ಆಹಾರ ಯೋಜನೆ - Secret food
Pingback: Fatty liver ಯಕೃತ್ ಸಮಸ್ಯೆ ಕಾರಣಗಳು, ನೈಸರ್ಗಿಕ ಪರಿಹಾರಗಳು.