ಅತೀ ಹೆಚ್ಚು ಉಪ್ಪಿನಾಂಶ ಇರುವ ಆಹಾರ ತಿನ್ನುವುದರಿಂದ ಅದು ನಮ್ಮ ಕಿಡ್ನಿಯನ್ನು ಯಾವ ರೀತಿ ಹಾನಿಮಾಡುತ್ತೆ, ಮತ್ತೆ ಉತ್ತಮ ಅಭ್ಯಾಸಗಳಿಂದ ನಮ್ಮ ಕಿಡ್ನಿ ವೈಫಲ್ಯವನ್ನು ಯಾವ ರೀತಿ ತೆಡೆಗಟ್ಟಬಹುದು ಅಂತ ನೋಡೋಣ ಬನ್ನಿ.
Table of Contents
Toggleಉಪ್ಪು ಸೇವನೆ ನಮ್ಮ ದೇಹಕ್ಕೆ ಉಂಟುಮಾಡುವ ಒಳಿತು ಮತ್ತೆ ಕೆಡಕು.
ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವುದು ನಮ್ಮ ಆಹಾರ ಪದ್ದತಿಯ ಮಂತ್ರ, ನಮ್ಮ ಆಹಾರದಲ್ಲಿ ಉಪ್ಪು ಅತೀ ಮುಖ್ಯ ಪಧಾರ್ಥ. ಉಪ್ಪು ಇಲ್ಲದ ಆಹಾರವನ್ನು ನಾವು ತಿನ್ನಲು ಸಹ ಆಗುವುದಿಲ್ಲ, ಅಷ್ಟರ ಮಟ್ಟಿಗೆ ಉಪ್ಪು ನಮ್ಮ ಆಹಾರದಲ್ಲಿ ಪಾತ್ರವಹಿಸುತ್ತದೆ. ಆದರೆ ಅತಿಯಾದ ಉಪ್ಪು ತಿನ್ನುವುದರಿಂದ ಅದು ನಮ್ಮ ಆರೋಗ್ಯದ ಮೇಲೆ ಅದರಲ್ಲೂ ಮೂತ್ರಪಿಂಡಗಳ(kidney) ಆರೋಗ್ಯಕ್ಕೆ ಇಂತಹ ಕೆಟ್ಟ ಪರಿಣಾಮ ಬೀರುತ್ತೆ ಅಂದರೆ, ನಾವು ಮನೆಯಲ್ಲಿ ತಯಾರಿಸಿದ ಆಹಾರದಲ್ಲಿ ಅಷ್ಟೇನು ಉಪ್ಪಿನಾಂಶ ಇರುವುದಿಲ್ಲ. ಆದರೆ ನಾವು ಹೊರಗಡೆ ತಿನ್ನುವ ಜಂಕ್ ಫುಡ್ , ಪ್ಯಾಕೇಜ್ ಫುಡ್ ನಲ್ಲಿ ಅತ್ತೆ ಹೆಚ್ಚು ಉಪ್ಪಿನಾಂಶ ಇರುತ್ತದೆ ಇದು ನಮ್ಮ ಕಿಡ್ನಿ ಸಮಸ್ಯೆಗೆ ನೇರ ಕಾರಣವಾಗುತ್ತದೆ.
ಯಾವ ರೀತಿ ಅಂದರೆ, ಅತಿಯಾದ ಉಪ್ಪು ಸೇವನೆಯಿಂದ ನಮ್ಮ ಮೂತ್ರದಲ್ಲಿ ಪ್ರೊಟೀನ್ ಅಂಶ ಜಾಸ್ತಿ ಆಗಿ ಅದು ಮೂತ್ರಪಿಂಡಗಳಿಗೆ ಮೂತ್ರವನ್ನು ಸರಿಯಾಗಿ ಫಿಲ್ಟರ್ ಮಾಡಲು ಸಹಕರಿಸದೆ ಕಿಡ್ನಿ ವೈಫಲ್ಯ ಕಂಡು ಬರುತ್ತದೆ.
ಮೂತ್ರಪಿಂಡದ ಮೇಲೆ ಉಪ್ಪು ಯಾವ ಪರಿಣಾಮ ಬೀರುತ್ತೆ?
ಮೂತ್ರಪಿಂಡದ(kidney) ಕೆಲಸ ಏನು ಎಂದರೆ ನಮ್ಮ ದೇಹದಲ್ಲಿರುವ ರಕ್ತವನ್ನು ಫಿಲ್ಟರ್ ಮಾಡಿ ದೇಹದಲ್ಲಿರುವ ಹೆಚ್ಚು ನೀರನ್ನು ಹೊರ ಹಾಕುವುದು. ಇದಕ್ಕೆ ಡಯಾಲಿಸಿಸ್ ಎನ್ನುವುದು, ಈಗೆ ಮಾಡಬೇಕಾದರೆ ನಮ್ಮ ದೇಹದಲ್ಲಿ ಸೋಡಿಯಂ ಮತ್ತೆ ಪೊಟ್ಯಾಶಿಯಂ ಸಮತೋಲನ ಮುಖ್ಯವಾಗಿರುತ್ತೆ, ಆದರೆ ಹೆಚ್ಚಿನ ಉಪ್ಪಿನಾಂಶ ಇರುವ ಆಹಾರ ಈ ಸೋಡಿಯಂ ಸಮತೋಲನವನ್ನು ಹಾಳುಮಾಡುತ್ತದೆ. ಇದರಿಂದ ನಮ್ಮ ಕಿಡ್ನಿ ಸರಿಯಾಗಿ ಕೆಲಸ ಮಾಡುವುದಿಲ್ಲ, ಅವಾಗ ಕಡಿಮೆ ಪ್ರಮಾಣದ ನೀರನ್ನು ದೇಹದಿಂದ ಹೊರ ಹಾಕುತ್ತೆ, ಇದರಿಂದ ರಕ್ತದೊತ್ತಡ (blood pressure ) ಹೆಚ್ಚಾಗುತ್ತದೆ, ಇದು ಮೂತ್ರಪಿಂಡಗಳ ಮೇಲೆ ಒತ್ತಡ ಉಂಟು ಮಾಡಿ ಮೂತ್ರಪಿಂಡಗಳ ಸಮಸ್ಯೆಗೆ ನೇರ ಕಾರಣವಾಗುತ್ತೆ.
ಒಂದು ರಿಪೋರ್ಟ್ ಪ್ರಕಾರ ಅಮೆರಿಕಾ ದೇಶದಲ್ಲಿ 37 ಮಿಲಿಯನ್ ಜನ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನು ನಾವು ಮೊದ ಮೊದಲೇ ಗುರ್ತಿಸಿದರೆ ನೈಸರ್ಗಿಕ ಮಾರ್ಗಗಳಿಂದ ಪರಿಹರಿಸಿಕೊಳ್ಳಬಹುದು ಇಲ್ಲವಾದಲ್ಲಿ ಇದಕ್ಕೆ ಒಂದೇ ಪರಿಹಾರ ಅದೇ ಡಯಾಲಿಸಿಸ್. ನಿಮಗೆ ಗೊತ್ತಿರಬೇಕು ಒಬ್ಬ ಮನುಷ್ಯ ಡಯಾಲಿಸಿಸ್ ಗೆ ಒಮ್ಮೆ ಒಳಪಟ್ಟಿದಾನೆ ಅಂದರೆ ಅವನು ಜೀವನ ಪೂರ್ತಿ ಅದರಲ್ಲೇ ಕಳೀಬೇಕು ಇಲ್ಲವೇ ಕಿಡ್ನಿ ಬದಲಿಸಬೇಕು(kidney transplant) ಅಷ್ಟೇ.
ಕಿಡ್ನಿ ಕಲ್ಲು (Kidney stone)
ನಾವು ಆಹಾರದಲ್ಲಿ ಸೇವಿಸುವ ಉಪ್ಪು ಮೂತ್ರಪಿಂಡದ ಮೇಲೆ ನೇರ ಪರಿಣಾಮ ಬೀರಿ ಕಲ್ಲುಗಳ ರೂಪ ಪಡೆಯುತ್ತದೆ. ದೇಹದಲ್ಲಿ ಜಾಸ್ತಿ ಸೋಡಿಯಂ ಇದ್ದಾಗ ಕಿಡ್ನಿಯು ಮೂತ್ರದ ಮೂಲಕ ಅದನ್ನು ಹೊರಹಾಕಬೇಕಾಗುತ್ತದೆ. ಅದು ಆಗದಿದ್ದಾಗ ಮೂತ್ರಪಿಂಡಗಳಲ್ಲಿ ಹೆಚ್ಚಿನ ಕ್ಯಾಲ್ಶಿಯಂ ಸಂಗ್ರಹವಾಗುತ್ತೆ, ಇದು ದಿನ ಕಳೆಯುತ್ತಿದ್ದಂತೆ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುತ್ತದೆ.
ಆಹಾರದಲ್ಲಿ ಉಪ್ಪು ಸೇವನೆ ಕಡಿಮೆ ಮಾಡುವುದರಿಂದ ಅಧಿಕ ರಕ್ತದೊತ್ತಡ(High blood pressure) ಮತ್ತೆ ಕಿಡ್ನಿಸ್ಟೋನ್ ಈ ಎರಡೂ ಸಮಸ್ಯೆಯನ್ನು ದೂರಮಾಡಬಹುದು.
ದೇಹದಲ್ಲಿ ನೀರಿನ ಸಂಗ್ರಹ ಹೆಚ್ಚುವುದು.
ನಮ್ಮ ದೇಹದಲ್ಲಿ ಉಪ್ಪಿನ ಅಂಶ ದಿನೇ ದಿನೇ ಜಾಸ್ತಿಯಾಗುವುದರಿಂದ ಅದು ಕೆಟ್ಟ ದ್ರವರೂಪದ ನೀರಿನ ಅಂಶವನ್ನು ದೇಹದಿಂದ ಹೊರ ಹಾಕುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದು ನಮ್ಮ ಅಂಗಾಂಗಳಲ್ಲಿ ನೀರಿನ ಸಂಗ್ರಹಣೆಗೆ ಕಾರಣವಾಗುತ್ತದೆ, ಇದನ್ನೇ ಎಡಿಮಾ(edema) ಎಂದು ಕರೆಯುತ್ತಾರೆ.
ಅತಿಯಾದ ಉಪ್ಪು ಸೇವನೆಯಿಂದ ಕೆಲವೊಮ್ಮೆ ನಮ್ಮ ಪಾದಗಳು ಅಥವಾ ಕಣ್ಣುಗಳ ಕೆಳಗಡೆ ಊತ ಬರುವುದಕ್ಕೆ ಕಾರಣವಾಗುತ್ತದೆ. ಇದು ನಮ್ಮ ಮೂತ್ರ ಪಿಂಡದಲ್ಲಿ ಹೆಚ್ಚು ಉಪ್ಪು ಸಂಗ್ರಹಣೆ ಯಾಗುತ್ತಿದೆ ಎನ್ನುವುದರ ಲಕ್ಷಣ. ನಮ್ಮ ದೇಹದಲ್ಲಿ ಸೋಡಿಯಂ ಮಟ್ಟವನ್ನು ಕಡಿಮೆ ಮಾಡುವುದರಿಂದ ಕಿಡ್ನಿಗಳು ದೇಹದಲ್ಲಿರುವ ವಿಷಯುಕ್ತ ಅಂಶವನ್ನು ಮೂತ್ರದ ಮೂಲಕ ಹೊರಹಾಕಲು ಅನುವು ಮಾಡಿಕೊಡುತ್ತದೆ.
ಹೆಚ್ಚು ಉಪ್ಪು ತಿನ್ನುವುದರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತದೆ.
- ಪಾದಗಳಲ್ಲಿ ಊತ ಬರುವುದು
- ಪದೇ ಪದೇ ಬಾಯಾರಿಕೆ ಆಗುವುದು
- ಹೊಟ್ಟೆಯಲ್ಲಿ ಸುಡುವ ಅನುಭವ ಆಗುವುದು.
- ಚರ್ಮ ಸುಕ್ಕುಗಟ್ಟಿದಂತೆ ಕಾಣುವುದು
- ಅಧಿಕ ರಕ್ತದೊತ್ತಡ. (High BP)
- ಅಂಗಗಳ ದೌರ್ಬಲ್ಯ ಉಂಟಾಗುವುದು.
- ಕಿಡ್ನಿ ಸ್ಟೋನ್
- ಹೃದಯದ ರಕ್ತನಾಳದ ಸೋಂಕು ಇದು ರಕ್ತದೊತ್ತಡ ಜಾಸ್ತಿ ಆಗಿ, ಪಾರ್ಶ್ವವಾಯು stroke, ಮತ್ತು ಹೃದಯಾಘಾತ heart attack, ಕಾರಣವಾಗುತ್ತದೆ.
- ಹೊಟ್ಟೆ ಕ್ಯಾನ್ಸರ್, ಮತ್ತು ಮೂಳೆಗಳ ದೌರ್ಭಲ್ಯ (ಆಸ್ಟಿಯೊಪೊರೋಸಿಸ್).
ನಮ್ಮ ಕಿಡ್ನಿಯ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ನಾವು ಏನು ಮಾಡಬೇಕು?
ನಮ್ಮ ದಿನ ನಿತ್ಯದ ಆಹಾರ ನಮ್ಮ ದೇಹದ ಆರೋಗ್ಯವನ್ನು ನಿರ್ಧರಿಸುವ ಮಾನದಂಡ ಆಗಿರುವುದರಿಂದ ಮತ್ತು ನಮ್ಮ ಮೂತ್ರಪಿಂಡಗಳು ದೇಹದ ಬಹುಮುಖ್ಯ ಪಾತ್ರ ನಿರ್ವಹಿಸುವುದರಿಂದ ಅದರ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದ ನಮ್ಮ ಆಯುರ್ವೇದದಲ್ಲಿ ತಿಳಿಸಿರುವ ಸೈನ್ಧವ ಲವಣ (ಕಲ್ಲು ಉಪ್ಪು) ವನ್ನು ಮಿತವಾಗಿ ಬಳಸಬೇಕು.ಮತ್ತು ದೇಹದಲ್ಲಿ ಸಾಕಷ್ಟು ನೀರಿನ ಅಂಶವನ್ನು ಕಾಪಾಡಿಕೊಳ್ಳಬೇಕು.
1) ಉಪ್ಪಿನ ಪ್ರಮಾಣ ಕಡಿಮೆ ಮಾಡುವುದು :
ನಾವು ತಿನ್ನುವ ಆಹಾರದಲ್ಲಿ ಇಷ್ಟು ದಿನ ಯಾವ ರೀತಿ ಉಪ್ಪು ತಿನ್ನುತಿದ್ದೆವೋ ಗೊತ್ತಿಲ್ಲ, ಆದರೆ ಇನ್ನು ಮುಂದೆ ಸಾಧ್ಯವಾದಷ್ಟೂ ಕಡಿಮೆ ಉಪ್ಪು 5-10 ಗ್ರಾಂ ಒಳಗೆ ಬಳಕೆ ಮಾಡಿ.
2) ನೀರು ಹೆಚ್ಚು ಕುಡಿಯುವುದು :
ಹೆಚ್ಚು ನೀರು ಕುಡಿಯುವುದರಿಂದ ನಮ್ಮ ದೇಹದ ಟಾಕ್ಸಿನ್ ಗಳು ಮೂತ್ರದ ರೂಪದಲ್ಲಿ ಹೊರಹೋಗುತ್ತವೆ, ಹಾಗೂ ದೇಹದಲ್ಲಿನ ಬೇಡವಾದ ಸೋಡಿಯಂ ಅಂಶ ಹೊರ ಹೋಗಲು ಸಹಕರಿಸಿ ಕಿಡ್ನಿ ಆರೋಗ್ಯ ಉತ್ತಮವಾಗಿರುತ್ತದೆ.
3) ಪೌಷ್ಟಿಕ ಆಹಾರ ಸೇವನೆ :
ಮನೆಯಲ್ಲೇ ತಯಾರಿಸಿದ ಆಹಾರ ಅದರಲ್ಲೂ ಬಿಸಿ ಬಿಸಿ ಊಟ ತಿನ್ನಬೇಕು. ಪ್ಯಾಕೇಜ್ ಅಥವಾ ಸಂಸ್ಕರಿಸಿದ ಆಹಾರ ದೂರ ಮಾಡಿ, ಯಾವುದೇ ಕಾರಣಕ್ಕೂ ಮಕ್ಕಳಿಗೆ ಜಂಕ್ ಫುಡ್ ಮತ್ತೆ ಚಿಪ್ಸ್ ಪ್ಯಾಕೆಟ್ ಗಳನ್ನ ಕೊಡಬೇಡಿ. ಅದರಲ್ಲೇ ಉಪ್ಪಿನಂಶ ಜಾಸ್ತಿ ಇದ್ದು ಅದು ನೇರವಾಗಿ ಮಕ್ಕಳ ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತದೆ.
4) ಉಪ್ಪಿಗೆ ಬದಲು ಬೇರೆ ಏನಾದರು ಬಳಸಿ :
ಆದಷ್ಟು ಉಪ್ಪಿಗೆ ಬದಲು ವಿಟಮಿನ್ ಸಿ ಜಾಸ್ತಿ ಇರುವ ಮತ್ತೆ ದೇಹಕ್ಕೆ ಒಳ್ಳೆಯದೂ ಆದ ನಿಂಬೆಯನ್ನು ಬಳಸಿ. ಮತ್ತೆ ಕೆಲವೊಂದು ನೈಸರ್ಗಿಕ ಸಸ್ಯೆಗಳಾದ ಅಶ್ವಗಂದ, ಜೇಷ್ಠಮಧು, ದಾಲ್ಚಿನ್ನಿ, ಮೆಣಸು, ಈ ರೀತಿ ಪದಾರ್ಥಗಳನ್ನ ಬಳಸಿ.
5) ರಕ್ತದೊತ್ತಡ ಕಡಿಮೆ ಮಾಡುವುದು :
ದಿನನಿತ್ಯ ವ್ಯಾಯಾಮ ಮಾಡುವುದು, ಯೋಗ, ಪ್ರಾಣಾಯಾಮ ಮಾಡುವುದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ.
6) ಸಮಯಕ್ಕೆ ಸರಿಯಾಗಿ ಆರೋಗ್ಯ ಪರೀಕ್ಷೆ :
ದೇಹದ ಆರೋಗ್ಯ ಯಾವ ರೀತಿ ಇದೆ ಎಂದು ಕೆಲವು ಲಕ್ಷಣಗಳು ನಮ್ಮ ದೇಹದಲ್ಲಿ ಗೊತ್ತಾಗುತ್ತವೆ, ಆ ರೀತಿಯ ಲಕ್ಷಣಗಳು ಗೊತ್ತಾದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ವರ್ಷಕೊಮ್ಮೆಯಾದರೂ ನಮ್ಮ್ ಕಿಡ್ನಿ, ಲಿವರ್, ರಕ್ತದೊತ್ತಡ, ಮಧುಮೇಹ, ಇಂತಹ ಕೆಲವೊಂದು ಪರೀಕ್ಷೆಗಳನ್ನು ಮಾಡಿಸುವುದು ದೇಹದ ಆರೋಗ್ಯಕ್ಕೆ ಒಳ್ಳೆಯದು.
ಉಪ್ಪು ನಮ್ಮ ಆಹಾರದ ಒಂದು ಬಹು ಮುಖ್ಯ ಬಾಗವಾದರೂ, ಅದು ಜಾಸ್ತಿ ಆದರೆ ನಮ್ಮ ಕಿಡ್ನಿಗೆ ನೇರವಾಗಿ ಹಾನಿ ಮಾಡುತ್ತದೆ. ಆದ್ದರಿಂದ ನಮ್ಮ ಜೀವನಶೈಲಿಯಲ್ಲಿ ಒಂದು ಸಣ್ಣ ಬದಲಾವಣೆ ಮಾಡಿದಾದ ನಮ್ಮ ಕಿಡ್ನಿ ಆರೋಗ್ಯದ ಜೊತೆಗೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತೇವೆ.
ಕಡಿಮೆ ಉಪ್ಪು ಬಳಸಿ ಉತ್ತಮ ಆರೋಗ್ಯ ಪಡೆಯಿರಿ.
What Are the Signs of High Salt levels?
Increased Thirst, Frequent Urination,Bloting stomach, swelling in legs, prequent Headache, Tierdness, if these signs keep happening better consult a doctor to check sodium level in body.
Is High Sodium Levels Affect The Heart?
Yes, If the Sodium levels are high body should hold extra fluid. This can rise blood pressure, and strain the Heart and blood vessels, in feture it is cause heart Disease.
Which Organ is Affected By Too much Salt Intake?
Kidneys are the main organs which affect from high Sodium Levels In the Blood streams of the body. High Blood pressure can lead to Heart failure.
