Table of Contents
Toggle'ಕಿಡ್ನಿ ಸ್ಟೋನ್' ಇದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಹಲವಾರು ಜನರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ.
ನಮ್ಮ ದೇಹಕ್ಕೆ ಹಲವಾರು ಕಾಯಿಲೆಗಳು ಬರುವ ಹಾಗೆ ಈ ಕಿಡ್ನಿ ಸ್ಟೋನ್ ಸಮಸ್ಯೆಯೂ ಬಹುತೇಕ ಜನರನ್ನ ಕಾಡುತ್ತಿದೆ. ಸಾಮಾನ್ಯವಾಗಿ ಕಿಬ್ಬೊಟ್ಟೆಯ ಕೆಳಗೆ ಅಥವಾ ಹಿಂಬಾಗದಲ್ಲಿ ಕಾಣಿಸಿಕೊಳ್ಳುವ ಈ ಮೂತ್ರಪಿಂಡದ ನೋವು, ಹೆಣ್ಣು ಮಕ್ಕಳ ಹೆರಿಗೆ ನೋವಿಗಿಂತ ಭಯಾನಕವಾಗಿದ್ದು ಕಿಡ್ನಿಯಲ್ಲಿ ಕಲ್ಲು ಇರುವುದನ್ನ ಖಚಿತ ಮಾಡುತ್ತದೆ.
ಕಿಡ್ನಿ ಸ್ಟೋನ್ ಎಂದರೆ ಏನು?
ನಮ್ಮ ಮೂತ್ರದಲ್ಲಿ ಗಟ್ಟಿಯಾದ ಉಪ್ಪಿನ ರೀತಿಯ ಪದಾರ್ಥಗಳು ಶೇಖರಣೆಯಾಗಿ ಮೂತ್ರದಲ್ಲಿರುವ ಕ್ಯಾಲ್ಶಿಯಂ ಆಕ್ಸಿಲೇಟ್ ಅಥವಾ ಯೂರಿಕ್ ಆಸಿಡ್ ಹೆಚ್ಚಾಗಿ ಕಲ್ಲುಗಳ ರೂಪದಲ್ಲಿ ಸಂಗ್ರಹವಾಗುತ್ತವೆ ಅದನ್ನೇ ಕಿಡ್ನಿ ಸ್ಟೋನ್ ಎನ್ನುವರು.
ನಮ್ಮ ದೇಶದಲ್ಲಿ ಇರುವ ಜನಸಂಖ್ಯೆಯಲ್ಲಿ ಸುಮಾರು 12% ಜನ ಈ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದು, ವಾರ್ಷಿಕವಾಗಿ ಸುಮಾರು ೧೦ ಲಕ್ಷ (1 million) ಜನ ಈ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಈ ಸಮಸ್ಯೆ ಜಾಸ್ತಿಯಾಗುತ್ತದೆ, ಎಂದು ವರದಿಗಳು ಹೇಳುತ್ತವೆ. ಕಿಡ್ನಿ ಸ್ಟೋನ್ ಗಳು ಕೆಲವೊಮ್ಮೆ ಗಾತ್ರದಲ್ಲಿ ಅತೀ ಸಣ್ಣದಾಗಿ ಇರುವುದು ಹಾಗೆ ಇರುವುದು ನೀರು ಜಾಸ್ತಿ ಕುಡಿಯುವುದರಿಂದ ಮೂತ್ರದ ಮೂಲಕ ಹೊರಗೆ ಬಂದು ಬಿಡುತ್ತವೆ, ಇನ್ನೂ ಕೆಲವು ದೊಡ್ಡ ಗಾತ್ರದಲ್ಲಿದ್ದು ಅವು ಮೂತ್ರ ಮಾಡುವುದಕ್ಕೆ ತೊಂದರೆ ಉಂಟು ಮಾಡುತ್ತವೆ ಮತ್ತು ತುಂಬಾ ನೋವು ಉಂಟುಮಾಡುತ್ತವೆ. ಅವುಗಳಿಗೆ ಸರಿಯಾದ ಚಿಕಿತ್ಸೆ ಅವಶ್ಯಕ.
ಕಿಡ್ನಿ ಸ್ಟೋನ್ ಬರುವುದಕ್ಕೆ ಕಾರಣಗಳು :
- ಸರಿಯಾಗಿ ನೀರು ಕುಡಿಯದಿರುವುದು, ನಾವು ದಿನ ಪೂರ್ತಿ ಸರಿಯಾಗಿ ನೀರು ಕುಡಿಯದಿದ್ದಾಗ ನಮ್ಮ ಮೂತ್ರಪಿಂಡದಲ್ಲಿ ಲವಣಯುಕ್ತ ಖನಿಜಗಳು ಮೂತ್ರದಲ್ಲಿ ಉಳಿದು ಕಿಡ್ನಿ ಸ್ಟೋನ್ ಶುರುವಾಗುತ್ತದೆ.
- ಆಹಾರದಲ್ಲಿ ಹೆಚ್ಚು ಉಪ್ಪಿನಂಶ ತಿನ್ನುವುದರಿಂದ ಮತ್ತು ಚಿಕನ್ ಮಟನ್ ಹೆಚ್ಚು ತಿನ್ನುವುದರಿಂದ ಸಹ ಕಿಡ್ನಿ ಸ್ಟೋನ್ ಬರುತ್ತದೆ.
- ಕಾರ್ಬೊನೇಟೆಡ್ ಡ್ರಿಂಕ್ಸ್ ಉದಾ: ಪೆಪ್ಸಿ, ಕೊಕ್, ಇತ್ಯಾದಿ ಈ ರೀತಿ ಡ್ರಿಂಕ್ಸ್ ಕುಡಿಯುವುದರಿಂದಲೂ ಕಿಡ್ನಿ ಸ್ಟೋನ್ ಬರುತ್ತದೆ.
- ಜೀವನಶೈಲಿ ಬದಲಾವಣೆ ಅಂದರೆ ಸರಿಯಾದ ವ್ಯಾಯಾಮ ಇಲ್ಲದೆ ತೂಕ ಜಾಸ್ತಿಯಾಗುವುದು, ದೇಹದಲ್ಲಿ ಕೊಬ್ಬು ಜಾಸ್ತಿ ಆಗುವುದರಿಂದ ಸಹ ಕಿಡ್ನಿಸ್ಟೋನ್ ಬರುತ್ತದೆ.
- ನಮ್ಮ ಕುಟುಂಬದಲ್ಲಿ ಈಗಾಗಲೇ ಯಾರಿಗಾದರೂ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ ಅವರಿಂದ ನಮಗೂ ಬರುವ ಎಲ್ಲ ಅವಕಾಶ ಇರುತ್ತದೆ.
- ನಾವು ಬೇರೆ ಯಾವುದೊ ಕಾಯಿಲೆಗೆ ಮಾತ್ರೆಗಳನ್ನು ತಿನ್ನುತಿದ್ದರೆ, ಅಥವಾ ಯೂರಿನರಿ ಸೋಂಕು ಇದ್ದಾಗಲೂ ಕೆಲವೊಮ್ಮೆ ಕಿಡ್ನಿ ಸ್ಟೋನ್ ಸಮಸ್ಯೆ ಬರಬಹುದು.
ಕಿಡ್ನಿ ಸ್ಟೋನ್ ಲಕ್ಷಣಗಳು ಯಾವ ರೀತಿ ಇರುತ್ತವೆ.
- ನಮ್ಮ ಬೆನ್ನು ಭಾಗ ಮತ್ತು ಹೊಟ್ಟೆಯ ಕೆಳಬಾಗ, ಕಿಬ್ಬೊಟ್ಟೆಯಲ್ಲಿ ಅತಿಯಾದ ನೋವು ಬರುತ್ತದೆ.
- ಮೂತ್ರವಿಸರ್ಜನೆಯ ಸಮಯದಲ್ಲಿ ಸುಡುವ ಅಥವಾ ಉರಿ ಯಾಗುವ ಅನುಭವ ಆಗುತ್ತದೆ, ಮತ್ತು ಮೂತ್ರ ಸ್ವಲ್ಪ ಕೆಟ್ಟ ವಾಸನೆ ಬರುತ್ತಿರುತ್ತದೆ.
- ಪದೇ ಪದೇ ಮಾತ್ರ ವಿಸರ್ಜನೆ ಮಾಡಬೇಕು ಅನಿಸುತ್ತದೆ, ಆದರೆ ಸರಿಯಾಗಿ ಮಾಡಲು ಆಗುವುದಿಲ್ಲ.
- ಮೂತ್ರದಲ್ಲಿ ಕೆಲವೊಮ್ಮೆ ರಕ್ತದ ರೀತಿ, ತುಂಬಾ ಹಳದೀ ಬಣ್ಣ ಕಾಣಿಸುವುದು.
- ಕೆಲವೊಮ್ಮೆ ವಾಕರಿಕೆ(nausea), ವಾಂತಿ ಬರುವುದು.
ಈ ಎಲ್ಲಾ ಲಕ್ಷಣಗಳು ಕಿಡ್ನಿ ಸ್ಟೋನ್ ಇರುವುದನ್ನು ಖಚಿತ ಪಡಿಸುತ್ತವೆ.
ಮೂತ್ರ ಪಿಂಡದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಯಾವೆಲ್ಲಾ ಸಮಸ್ಯೆಗಳು ಉಂಟಾಗುತ್ತವೆ.
ಈ ಕಿಡ್ನಿ ಸ್ಟೋನ್ ಸಮಸ್ಯೆಗೆ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಕೊಡದಿದ್ದರೆ ಹಲವಾರು ಗಂಭೀರ ಸಮಸ್ಯೆಗಳು ಉಂಟಾಗುತ್ತವೆ.
- ಮೂತ್ರವು ಸರಾಗವಾಗಿ ಮಾಡುವುದನ್ನು ತಡೆಗಟ್ಟುತ್ತದೆ. ಅಂದರೆ ನಾವು ಮೂತ್ರ ಮಾಡಬೇಕೆಂದರೂ ಮಾಡಲು ಬರುವುದಿಲ್ಲ, ಆಗ ತುಂಬಾ ಹಿಂಸೆಯಾಗುತ್ತದೆ.
- ಮೂತ್ರದಲ್ಲಿ ಸೋಂಕು ಉಂಟಾಗುತ್ತದೆ. ಆಗ ಸಾಮಾನ್ಯವಾಗಿ ಉರಿ, ನೋವು ಪ್ರಾರಂಭವಾಗುತ್ತದೆ.
- ನಮ್ಮ ಮೂತ್ರಪಿಂಡದ ಕೆಲಸ ದಿನೇ ದಿನೇ ಕಡಿಮೆಯಾಗುತ್ತ ಬರುತ್ತದೆ.
- ಅತಿಯಾದ ನೋವು ಹಿಂಸೆ ಇರುವುದರಿಂದ ನಾವು ದಿನನಿತ್ಯ ಮಾಡುವ ಕೆಲಸಗಳಿಗೆ ತೊಂದರೆಯಾಗುತ್ತದೆ.
ಮೂತ್ರ ಪಿಂಡದ ಕಿಡ್ನಿ ಸ್ಟೋನ್ ಸಮಸ್ಯೆಗೆ ಯಾವರೀತಿ ನೈಸರ್ಗಿಕ ಚಿಕಿತ್ಸೆಯನ್ನು ಪಡೆಯಬೇಕು.
ಕೆಲವು ನೈಸರ್ಗಿಕ ವಿಧಾನಗಳು ಮತ್ತು ದಿನನಿತ್ಯದ ಜೀವನಶೈಲಿ ಬದಲಾವಣೆಯಿಂದ ನಾವು ಕಿಡ್ನಿ ಸ್ಟೋನ್ ಸಮಸ್ಯೆಯನ್ನು ತಡೆಯಬಹುದು ಅಂತಹ ವಿಧಾನಗಳನ್ನು ನೋಡೋಣ.
- ನೀರು ಕುಡಿಯುವುದು :
ನಾವು ಅಂದು ಕೊಳ್ಳುತ್ತೇವೆ ನೀರು ಎಲ್ಲರೂ ಕುಡಿಯುತ್ತಾರೆ, ಅದರಲ್ಲೇನಿದೆ ಎಂದು. ಆದರೆ, ಈ ಸಮಸ್ಯೆ ಉಂಟಾಗುವುದೇ ಕಡಿಮೆ ನೀರು ಕುಡಿಯುವುದರಿಂದ.
ಕನಿಷ್ಠ ಅಂದರೂ ದಿನಕ್ಕೆ 3-4 ಲೀಟರ್ ನೀರು ಕುಡಿಯಬೇಕು. ಇದರಿಂದ ಮೂತ್ರಕೋಶ ಸ್ವಚ್ಛವಾಗಿರುತ್ತದೆ ಆಗ ಮೂತ್ರದಲ್ಲಿ ಯಾವ ಸಮಸ್ಯೆ ಉಂಟಾಗುವುದಿಲ್ಲ. - ನಿಂಬೆ ಹಣ್ಣಿನ ರಸ ಕುಡಿಯುವುದು :
2 ದಿನಕ್ಕೊಮ್ಮೆ ನಿಂಬೆ ರಸವನ್ನು ನೀರಿಗೆ ಹಾಕಿ ಮಿಕ್ಸ್ ಮಾಡಿ ಕುಡಿಯಬೇಕು ಯಾಕಂದರೆ ನಿಂಬೆಯಲ್ಲಿರುವ ಸಿಟ್ರಿಕ್ ಆಸಿಡ್ ಮೂತ್ರಕೋಶವನ್ನು ಸ್ವಚ್ಛಮಾಡಿ ಕಿಡ್ನಿ ಸ್ಟೋನ್ ಆಗದಂತೆ ನೋಡಿಕೊಳ್ಳುತ್ತದೆ. - ನಾವು ಸೇವಿಸುವ ಆಹಾರ :
ನಾವು ದಿನನಿತ್ಯ ತಿನ್ನುವ ಆಹಾರದಲ್ಲಿ ಉಪ್ಪಿನ ಅಂಶ ತುಂಬಾ ಕಡಿಮೆ ತಿನ್ನಬೇಕು. ಮತ್ತು ಹೆಚ್ಚು ಪೈಬರ್ ಇರುವ ಆಹಾರವನ್ನ ತಿನ್ನಬೇಕು( ರ್ರಾಗಿ, ಗೋದಿ, ತರಕಾರಿಗಳು, ಹಣುಗಳು). ಮಾಂಸಾಹಾರ ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. - ದಿನನಿತ್ಯ ವ್ಯಾಯಾಮ :
ನಾವು ತಿನ್ನುವ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣ ಆಗಬೇಕು ಎಂದರೆ, ದಿನನಿತ್ಯ ಕನಿಷ್ಠ 1-2 ಗಂಟೆ ವ್ಯಾಯಾಮ ಮಾಡಬೇಕು. ಆಗ ದೇಹ ಫಿಟ್ ಆಗಿ ಇರುವುದರ ಜೊತೆಗೆ ಆರೋಗ್ಯವಾಗಿಯೂ ಇರುತ್ತದೆ. - ಎಳೆನೀರು ಕುಡಿಯುವುದು(coconut water) :
ಸಾದ್ಯವಾದರೆ ಪ್ರತೀ ದಿನ ಎಳೆನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ಟಾಕ್ಸಿನ್ ಗಳು ಮೂತ್ರದ ರೂಪದಲ್ಲಿ ಹೊರ ಹೋಗುತ್ತವೆ. ಮತ್ತು ಕಿಡ್ನಿ ಸಮಸ್ಯೆಗೆ ಉತ್ತಮ ಪರಿಹಾರವಾಗುತ್ತದೆ.
ಈ ಎಲ್ಲಾ ಪರಿಹಾರಗಳಿಂದ ಕಿಡ್ನಿ ಸ್ಟೋನ್ ಅನ್ನು ನಿಯಂತ್ರಿಸಬಹುದು. ಆದಾಗ್ಯೂ ಕೆಲವರಿಗೆ ಕಿಡಿಯಲ್ಲಿ ಕಲ್ಲುಗಳು ದೊಡ್ಡ ಪ್ರಮಾಣದಲ್ಲಿಇದ್ದರೆ, ಅಂತಹವರು ವೈದ್ಯರ ಸಲಹೆ ಪಡೆದು, ಲೇಸರ್ ಚಿಕೆತ್ಸೆಯ ಮೂಲಕ, ಇಲ್ಲವೇ ಲ್ಯಾಪ್ರೋಸ್ಕೋಪಿಯ ಮೂಲಕ ಕಲ್ಲನ್ನು ಸಣ್ಣ ಸಣ್ಣ ಪುಡಿಯ ರೀತಿ ಮಾಡಿ ಮೂತ್ರದ ಮೂಲ ಹೊರ ಹೋಗುವಂತೆ ಮಾಡಲಾಗುತ್ತದೆ.
ಕೊನೆಯದಾಗಿ ಈ ಕಿಡ್ನಿ ಸ್ಟೋನ್ ಸಮಸ್ಯೆ ಎನ್ನುವುದು ಸಾಮಾನ್ಯವಾಗಿದ್ದು ಭಯ ಪಡುವ ಅಗತ್ಯ ಇಲ್ಲ. ಬದಲಾಗಿ ನಾನು ಮೇಲೆ ತಿಳಿಸಿರುವ ಕೆಲವೊಂದು ನೈಸರ್ಗಿಕ ವಿಧಾನಗಳಾದ ಉತ್ತಮ ಆಹಾರ ಪದ್ಧತಿ, ಹೆಚ್ಚು ನೀರು ಕುಡಿಯುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಇವೆಲ್ಲವುಗಳನ್ನು ಸರಿಯಾದ ರೀತಿಯಲ್ಲಿ ದಿನನಿತ್ಯ ತಪ್ಪದೆ ಪಾಲನೆ ಮಾಡಿದರೆ ಸಮಸ್ಯೆ ಖಂಡಿತವಾಗಿ ಕಡಿಮೆಯಾಗುತ್ತದೆ. ಮತ್ತು ಇತ್ತೀಚಿನ ಜೀವನ ಶೈಲಿಯನ್ನು ಸ್ವಲ್ಪ ಬದಲಾಯಿಸಿ ನಮಗೆ ಬಂದಿರುವ ಅಥವಾ ಬರಬಹುದಾದಂತಹ ಈ ಕಾಯಿಲೆಯನ್ನು ನಮ್ಮ ಮುಂದಿನ ತಲೆಮಾರಿಗೆ ಹೋಗದಿರಲು ನಾವು ತಡೆಯಬೇಕಾಗಿದೆ.
ನಾನು ಬರೆದಿರುವ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತೆ ಬೇರೆ ಯಾವ ವಿಷಯದ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕು ಎಂದು ಕಾಮೆಂಟ್ಸ್ ರೂಪದಲ್ಲಿ ತಿಳಿಸಿ ಧನ್ಯವಾದಗಳು .

Pingback: ಉಪ್ಪು(Salt) ಅಧಿಕ ಸೇವನೆ ಕಿಡ್ನಿ ವೈಫಲ್ಯ - ಯಾಕೆ ತಿಳಿಯಬೇಕೇ?