ದೇಹದ ಉಷ್ಣತೆ Body Heat ಇದು ಮನುಷ್ಯನಲ್ಲಿ ಸಹಜವಾಗಿ ಆಗುವ ಪ್ರಕ್ರಿಯೆ. ಅಂದರೆ ವಾತಾವರಣದ ಬದಲಾವಣೆಯಲ್ಲಿ ಹಲವಾರು ಕಾರಣಗಳಿಂದ ನಮ್ಮ ದೇಹ ಹೀಟ್ ಆಗುತ್ತದೆ. ಇದು ಅತಿಯಾದ ಬೇಸಿಗೆಯ ಪ್ರಬಾವ, ಇಂದಿನ ಅಸಮರ್ಪಕ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿ ಮತ್ತೆ ಮಾನಸಿಕ ಹಾಗೂ ಬಾಹ್ಯ ಒತ್ತಡದಿಂದ ಈ ಸಮಸ್ಯೆ ಬರುತ್ತದೆ.
ನಮ್ಮ ದೇಹದ ಉಷ್ಣತೆ ಜಾಸ್ತಿಯಾದಾಗ ದೇಹದಲ್ಲಿ ಹಲವಾರು ಸಮಸ್ಯೆಗಳು ಬರುತ್ತವೆ. ಅದರಲ್ಲಿ ಮುಖ್ಯವಾಗಿ ಚರ್ಮದ ಸಮಸ್ಯೆ, ಉರಿಯುವ ಮಾತ್ರ, ತಲೆನೋವು, ಅಜೀರ್ಣ, ದೇಹದ ದುರ್ಬಲತೆ ಮುಂತಾದವು.
ನಮ್ಮ ದೇಹದಲ್ಲಿ ಉಂಟಾಗುವ ಅತಿಯಾದ ಶಾಖವನ್ನು ಶಾಖದ ಒತ್ತಡ (heat stress) ಅಥವಾ ಹೈಪರ್ಥರ್ಮಿಯಾ(hyperthermia) ಎಂದೂ ಕರೆಯುತ್ತಾರೆ.
ಈ ಎಲ್ಲಾ ಸಮಸ್ಯೆಗಳನ್ನು ಕಡಿಮೆಮಾಡಿಕೊಳ್ಳಲು, ನಾನು ಈ ಬ್ಲಾಗ್ ನಲ್ಲಿ ನಮ್ಮ ದೇಹದ ಉಷ್ಣತೆ ಯಾಕೆ ಹೆಚ್ಚಾಗುತ್ತದೆ, ಅದರ ಲಕ್ಷಣಗಳು ಯಾವ ರೀತಿ ಇರುತ್ತವೆ, ಮತ್ತೆ ಅದನ್ನ ಯಾವ ರೀತಿ ನೈಸರ್ಗಿಕವಾಗಿ ಕಡಿಮೆ ಮಾಡಿಕೊಳ್ಳಬಹುದು, ಅನ್ನುವುದನ್ನ ವಿವರವಾಗಿ ತಿಳಿಯೋಣ.
Table of Contents
Toggleದೇಹದ ಉಷ್ಣತೆ Body Heat ಎಂದರೇನು?
ನಮ್ಮ ದೇಹದಲ್ಲಿರುವ ತಾಪಮಾನವನ್ನೇ (temperature) ನಾವು Body Heat ಎಂದು ಕರೆಯುತ್ತೇವೆ. ಇದು ಸಾಮಾನ್ಯವಾಗಿ ಮನುಷ್ಯನಲ್ಲಿ 36.5°C ರಿಂದ 37.5°C ನಡುವೆ ಇದ್ದರೆ ನಾರ್ಮಲ್ ದೇಹದ ಉಷ್ಣತೆ ಅನ್ನುತ್ತೇವೆ. ಇದಕ್ಕಿಂತ ಜಾಸ್ತಿ ದೇಹದ ಉಷ್ಣತೆ ಆದರೆ ಅದು ದೇಹದಲ್ಲಿ ಅಸಮತೋಲನವನ್ನ ಉಂಟುಮಾಡುತ್ತೆ.
ನಮ್ಮ ದೇಹದ ಉಷ್ಣತೆ Body Heat ಹೆಚ್ಚಾಗಲು 5 ಪ್ರಮುಖ ಕಾರಣಗಳು
1. ಹವಾಮಾನ ಬದಲಾವಣೆ :
ಬೇಸಿಗೆ ಸಮಯದಲ್ಲಿ 4 ತಿಂಗಳು ಹೆಚ್ಚು ಬಿಸಿಲು, ಇರುವುದರಿಂದ ಉಷ್ಣ ಗಾಳಿ ನಮ್ಮ ದೇಹದ ತಾಪಮಾನವನ್ನು ಪ್ರತೀದಿನ ಹೆಚ್ಚಿಸುತ್ತದೆ.
2.ಕೆಟ್ಟ ಆಹಾರ ಪದ್ಧತಿ :
ಮಸಾಲೆ ಪದಾರ್ಥಗಳು, ಬೀದಿ ಬದಿ ಸಿಗುವ ಬಿಸಿ ಆಹಾರ, ಜಂಕ್ ಫುಡ್, ಫ್ರೈಡ್ ಫುಡ್ ಹೆಚ್ಚು ತಿನ್ನುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ.
3. ನೀರಿನ ಕೊರತೆ :
ಸರಿಯಾದ ಪ್ರಮಾಣದಲ್ಲಿ ದಿನಕ್ಕೆ ಕನಿಷ್ಠ 4 ಲೀಟರ್ ನೀರು ಕುಡಿಯದಿದ್ದರೆ ದೇಹದಲ್ಲಿ ಡೀಹೈಡ್ರೇಷನ್ ಆಗುತ್ತದೆ, ಇದರಿಂದ ಉಷ್ಣತೆ ಹೆಚ್ಚಾಗುತ್ತದೆ.
4. ಒತ್ತಡ ಮತ್ತು ನಿದ್ರೆ ಕೊರತೆ :
ಮಾನಸಿಕ ಒತ್ತಡ, ಮತ್ತೆ ಕಡಿಮೆ ನಿದ್ದೆ ಮಾಡುವುದರಿಂದ ದೇಹದ ಹಾರ್ಮೋನ್‌ಗಳನ್ನು ಹಾಳುಮಾಡಿ ದೇಹದ ಉಷ್ಣತೆ ಜಾಸ್ತಿಯಾಗುವಂತೆ ಮಾಡುತ್ತದೆ.
5. ಹೆಚ್ಚು ವ್ಯಾಯಾಮ :
ಕೆಲವರಲ್ಲಿ ಅತಿಯಾಗಿ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗಬಹುದು.
ನಮ್ಮ ದೇಹದ ಉಷ್ಣತೆ ಜಾಸ್ತಿಯಾದಾಗ ಕಂಡುಬರುವ ಲಕ್ಷಣಗಳು
- ಚರ್ಮ ಉರಿ ಬರುವುದು, ಕಣ್ಣು ಕೆಂಪಾಗುವುದು.
- ಯಾವಾಗಲೂ ಬಾಯಿ ಒಣಗುವುದು
- ಮೂತ್ರ ಮಾಡುವಾಗ ಉರಿಯೂತ
- ತಲೆನೋವು ಮತ್ತು ದುರ್ಬಲತೆ, ಅಸ್ವಸ್ಥತೆ
- ದೇಹ ಹೆಚ್ಚು ಬೆವರುವುದು
- ಮಲಬದ್ಧತೆಯಾಗುವುದು (Constipation)
- ಮುಖದಲ್ಲಿ ಪಿಂಪಲ್ಸ್ ಮತ್ತು ಚರ್ಮದ ಸಮಸ್ಯೆಗಳು
ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ನೈಸರ್ಗಿಕ ಪದ್ದತಿಗಳು
1. ಜಾಸ್ತಿ ನೀರು ಕುಡಿಯಿರಿ :
ದೇಹದ ಉಷ್ಣತೆ ಕಡಿಮೆ ಮಾಡಲು ಅತ್ಯಂತ ಸುಲಭ ವಿಧಾನವೇ ನೀರು. ದಿನಕ್ಕೆ ಕನಿಷ್ಠ 3–4 ಲೀಟರ್ ನೀರು ಕುಡಿಯಬೇಕು. ಆಗ ಮಾತ್ರ ನಮ್ಮ ದೇಹ ಹೈಡ್ರೇಟ್ ಆಗಿದ್ದು ಯಾವುದೇ ಉಷ್ಣತೆಯ ಅನುಭವ ಇರುವುದಿಲ್ಲ.
ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ನಿಂಬೆ ಮಿಕ್ಸ್ ಮಾಡಿ ಕುಡಿಯುವುದು ಒಳ್ಳೆಯದು.
2. ತೆಂಗಿನಕಾಯಿ ನೀರು :
ದಿನಕ್ಕೆ ಒಂದು ಎಳೆನೀರು ಕುಡಿಯುವುದರಿಂದ ಅದು ದೇಹವನ್ನು ತಂಪಾಗಿಸುತ್ತದೆ. ಮತ್ತು ದೇಹದ ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನದಲ್ಲಿಡುತ್ತದೆ.
3. ಮಜ್ಜಿಗೆ (Buttermilk) :
ಮಜ್ಜಿಗೆ ದೇಹದ ಉಷ್ಣತೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಊಟ ಆದ ಮೇಲೆ ಒಂದು ಗ್ಲಾಸ್ ಮಜ್ಜಿಗೆ ಕುಡಿಯುವುದರಿಂದ ಜೀರ್ಣ ಚನ್ನಾಗಿ ಆಗುತ್ತದೆ.
4. ಹಣ್ಣುಗಳು ಮತ್ತು ತರಕಾರಿಗಳು :
ಸೌತೆಕಾಯಿ, ಕಲ್ಲಂಗಡಿ ಕರಬೂಜ, ಪಪ್ಪಾಯಿ, ಮೋಸಂಬಿ, ಟೊಮ್ಯಾಟೊ ಮುಂತಾದವುಗಳಲ್ಲಿ ನೀರಿನ ಅಂಶ ಹೆಚ್ಚು ಇರುತ್ತದೆ. ಮತ್ತೆ ದೇಹವನ್ನ ತಂಪಾಗಿ ಇಡುತ್ತವೆ. ದೇಹದ ಹೈಡ್ರೇಶನ್ ಜಾಸ್ತಿ ಮಾಡುತ್ತವೆ.
ನಮ್ಮ ದಿನನಿತ್ಯದ ಆಹಾರದಲ್ಲಿ ಇವುಗಳನ್ನು ತಿನ್ನಬೇಕು.
5. ಎಲೆ ಸಸ್ಯಗಳ ಉಪಯೋಗ :
ಕೊತ್ತಂಬರಿ, ಪುದೀನಾ ಇತ್ಯಾದಿ ಎಲೆಗಳನ್ನು ಸಾಂಬಾರಿನಲ್ಲಿ ಸೇರಿಸಿ ತಿನ್ನುವುದರಿಂದ ದೇಹವನ್ನು ತಂಪಾಗಿಸುತ್ತವೆ.
ಪುದೀನಾ ಜ್ಯೂಸ್ ಅಥವಾ ದೋಸೆಗೆ,ಚಪಾತಿಗೆ ಚಟ್ನಿ ತಿನ್ನುವುದು ಒಳ್ಳೆಯದು.
6. ಬೆಲ್ಲ ಮತ್ತು ಜೀರಿಗೆ ಜ್ಯೂಸು :
ಬೆಲ್ಲ ಮತ್ತು ಜೀರಿಗೆ ಮಿಶ್ರಣವು ದೇಹದ ಉಷ್ಣತೆ ಕಡಿಮೆ ಮಾಡುತ್ತದೆ. ಬೆಲ್ಲದ ಪಾನಕ ಮಾಡಿ ಕುಡಿಯುವುದರಿಂದ ದೇಹದ ಉಷಾನತೆಯನ್ನು ತುಂಬಾ ಕಡಿಮೆ ಮಾಡುತ್ತದೆ.
7. ಅಲೋವೆರಾ ಜ್ಯೂಸ್ :
ಅಲೋವೆರಾ ದೇಹವನ್ನು ತಂಪಾಗಿಸುತ್ತದೆ. ಮತ್ತೆ ದೇಹದ ಟಾಕ್ಸಿನ್ಗಳನ್ನು ಹೊರಹಾಕಲು ಅಲೋವೆರಾ ಸಹಾಯ ಮಾಡುತ್ತದೆ.
8. ಗುಲ್ಕಂದ್ ಸೇವನೆ :
ಗುಲಾಬಿ ಹೂವಿನಿಂದ ತಯಾರಾಗುವ ಗುಲ್ಕನ್ ದೇಹದ ಉಷ್ಣತೆ ಕಡಿಮೆ ಮಾಡುತ್ತದೆ. ಇದನ್ನು ಬ್ರೆಡ್ ನೊಂದಿಗೆ ಮಿಕ್ಸ್ ಮಾಡಿ ತಿನ್ನಬಹುದು.
ನಾವು ಪ್ರತೀ ದಿನ ಮಾಡಬೇಕಾದ ಬದಲಾವಣೆಗಳು
1. ಯೋಗ ಮತ್ತು ಧ್ಯಾನ :
ನಮ್ಮ ದೇಹ ಆರೋಗ್ಯವಾಗಿ ಸದೃಢವಾಗಿರಬೇಕಾದರೆ ಯೋಗ ಮತ್ತೆ ಧ್ಯಾನ ಮಾಡಬೇಕು. ಇದರಿಂದ ನಮ್ಮ ದೇಹದ ಉಷ್ಣತೆ ನಿಯಂತ್ರಣವಾಗುತ್ತೆ.
2. ಉತ್ತಮ ನಿದ್ರೆ :
ದಿನಕ್ಕೆ ಕನಿಷ್ಠ 7–8 ಗಂಟೆಗಳ ನಿದ್ದೆ ಮಾಡುವುದರಿಂದ ನಮ್ಮ ದೇಹದ ಸಮತೋಲನ ಚನ್ನಾಗಿರುತ್ತದೆ.
3. ತಣ್ಣೀರಿನ ಸ್ನಾನ :
ಪ್ರತೀ ದಿನ ಬೆಳಿಗ್ಗೆ ತಣ್ಣೀರಿನಿಂದ ಸ್ನಾನ ಮಾಡುವುದು ತುಂಬಾ ಮುಖ್ಯ. ಇದರಿಂದ ನಮ್ಮ ದೇಹ ಹೀಟ್ ಆಗುವುದಿಲ್ಲ.
4. ತೆಳುವಾದ ಬಟ್ಟೆ :
ಬೇಸಿಗೆ ದಿನಗಳಲ್ಲಿ ಮಂದಗೆ ಇರುವ ಕಾಟನ್ ಬಟ್ಟೆಯ ಬದಲು ತೆಳುವಾದ ಬಟ್ಟೆಯನ್ನು ತೊಡುವುದರಿಂದ ದೇಹ ತಂಪಾಗಿರುತ್ತದೆ.
ನಾವು ಬೇಸಿಗೆಯ ಸಮಯದಲ್ಲಿ ಪಾಲಿಸಬೇಕಾದ ಮುಖ್ಯ ಸಲಹೆಗಳು
- ಆದಷ್ಟು ಮಧ್ಯಾಹ್ನ 12 ಗಂಟೆ ಮೇಲೆ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ನಿಲ್ಲಿಸಿ.
- ತಲೆಗೆ ಟೋಪಿ ಅಥವಾ ಛತ್ರಿ ಬಳಸಿ
- ಹೆಚ್ಚು ನೀರಿನಾಂಶ ಇರುವ ಪದಾರ್ಥಗಳನ್ನು ಸೇವಿಸಿ
- ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸಿ, ಸನ್ ಸ್ಕ್ರೀನ್ ಬಳಸುವುದರಿಂದ ಚರ್ಮದ ಆರೋಗ್ಯ ಕಾಪಾಡಬಹುದು.
ನಮ್ಮ ದೇಹವನ್ನು ಉಷ್ಣತೆಯಿಂದ Body Heat ಕಾಪಾಡುವ ದಿನನಿತ್ಯದ ಅಂಶಗಳು
ಬೆಳಿಗ್ಗೆ:
ಎದ್ದ ತಕ್ಷಣ ಒಂದು ಗ್ಲಾಸ್ ಬಿಸಿ ನೀರು ಕುಡಿಯಬೇಕು. ಆಗ ದೇಹದಲ್ಲಿನ ಟಾಕ್ಸಿನ್ ಗಳು ಹೊರ ಹೋಗಿ ದೇಹ ಶುದ್ಧವಾಗುತ್ತದೆ.
ಮಧ್ಯಾಹ್ನ:
ಊಟದ ಜೊತೆಗೆ ಸೌತೆಕಾಯಿ, ಮಜ್ಜಿಗೆಯನ್ನು ಮಿಸ್ ಮಾಡದೆ ತೆಗೆದು ಕೊಳ್ಳಬೇಕು ಆಗ ನಮ್ಮ ದೇಹದ ತಾಪಮಾನ ತಂಪಾಗಲು ಸಹಾಯ ಮಾಡುತ್ತದೆ.
ಸಂಜೆ:
ಒಂದು ಎಳೆನೀರು ಕುಡಿಯಬೇಕು ಆಗ ಬೆಳಿಗ್ಗೆಯಿಂದ ಸ್ವಲ್ಪ ದಣಿದಿದ್ದ ದೇಹ ಆರಾಮದಾಯಕ ಅನಿಸುತ್ತದೆ.
ರಾತ್ರಿ:
ಆದಷ್ಟು 8 ಗಂಟೆ ಒಳಗೆ ಊಟ ಮಾಡಿ ಆಗ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತೆ. ಮತ್ತೆ ಆದಷ್ಟು ರಾತ್ರಿ ಕಡಿಮೆ ಊಟ ಮಾಡಿ.
ದೇಹದ ಉಷ್ಣತೆ ಕಡಿಮೆ ಆಗಲು ತಿನ್ನಬೇಕಾದ ಆಹಾರಗಳು
ಹಣ್ಣುಗಳು: ಆಪಲ್, ಅರೇಂಜ್, ದಾಳಿಂಬೆ, ಸಪೋಟ, ಇತ್ಯಾದಿ.
ತರಕಾರಿಗಳು: ಕ್ಯಾರೆಟ್, ಬೀನ್ಸ್, ಮೂಲಂಗಿ, ಬೆಂಡೆ, ತೊಂಡೆ, ನುಗ್ಗೆ ಇತ್ಯಾದಿ.
ಸೊಪ್ಪುಗಳು: ಪಾಲಕ್ ಸೊಪ್ಪು (ಇದು ದೇಹದ ಉಷ್ಣತೆಯನ್ನು ಬೇಗ ಕಡಿಮೆ ಮಾಡುತ್ತದೆ),
ಹಾಲು, ಮೊಸರು, ತುಪ್ಪ,
ಕಾಳುಗಳು, ಧಾನ್ಯಗಳು, ಇತ್ಯಾದಿ.
ದೇಹದ ಉಷ್ಣತೆಗೆ Body heat ತಿನ್ನಬಾರದ ಆಹಾರಗಳು
- ಹೆಚ್ಚು ಮಸಾಲೆ ಇರುವ ಆಹಾರ, ಹೆಚ್ಚು ಸ್ಪೈಸಿ ಇರುವ ಪಧಾರ್ಥಗಳನ್ನು ತಿನ್ನಬಾರದು.
- ಫಾಸ್ಟ್ ಫುಡ್, ಜಂಕ್ ಫುಡ್, ತಿನ್ನಬಾರದು.
- ಬೇಸಿಗೆಯಲ್ಲಿ ಬಿಸಿ ಕಾಫಿ ಮತ್ತು ಟೀ ಕುಡಿಯುವುದು ತಪ್ಪಿಸಬೇಕು.
- ಕಾರ್ಬನೇಟೆಡ್ ಡ್ರಿಂಕ್ಸ್ ತಪ್ಪಿಸಬೇಕು.
- ಮದ್ಯಪಾನದಿಂದ ದೂರವಿದ್ದರೆ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ.
ಯಾವುದೇ ಒಬ್ಬ ಮನುಷ್ಯನಿಗೆ ದೇಹದ ಉಷ್ಣತೆ ಜಾಸ್ತಿಯಾಗುವುದು ಸಾಮಾನ್ಯ. ಆದರೆ ಅದನ್ನು ನಾವು ನಿರ್ಲಕ್ಷ್ಯ ಮಾಡಿದರೆ ಅದು ಕೆಲವೊಂದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನಾವು ಮಾಡಬೇಕಿರುವುದು ಸುಲಭ ಬೇಸಿಗೆ ಕಾಲದಲ್ಲಿ ಸರಿಯಾದ ಊಟ, ನೀರು, ತಣ್ಣೀರಿನ ಸ್ನಾನ ಮತ್ತೆ ಕೆಲವೊಂದು ನಾನು ಮೇಲೆ ತಿಳಿಸಿರುವ ನೈಸರ್ಗಿಕ ಪದ್ಧತಿಗಳಿಂದ ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಕೊನೆಯದಾಗಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಅದನ್ನು ಉಳಿಸಿಕೊಳ್ಳುವುದು ಮತ್ತು ಕಳೆದುಕೊಳ್ಳುವುದು ಎರಡೂ ನಮ್ಮಿಂದಲೇ ಸಾಧ್ಯ.
ನಾನು ಬಾಡಿ ಹೀಟ್ ಅನ್ನು ತಕ್ಷಣ ಹೇಗೆ ಕಡಿಮೆ ಮಾಡಬಹುದು?
ನಿಮ್ಮ ದೇಹದ ಹೀಟ್ ಅನ್ನು ತಕ್ಷಣ ಕಡಿಮೆ ಮಾಡಬೇಕಾದರೆ, ತಕ್ಷಣ ತಣ್ಣೇರಿನ ಸ್ನಾನ ಮಾಡಿ, ತಣ್ಣನೆಯ ನೀರನ್ನು ಕುಡಿಯಿರಿ( ಫ್ರಿಡ್ಜ್ ಅಲ್ಲಿರುವ ನೀರಿನ ಬದಲು ಮಣ್ಣಿನ ಮಡಿಕೆಯಲ್ಲಿನ ನೀರು ಒಳ್ಳೆಯದು) ಮತ್ತೆ ಮಜ್ಜಿಗೆಯನ್ನು ಕುಡಿದರೆ ನಿಮ್ಮ ದೇಹದ ಹೀಟ್ ಬೇಗ ಕಡಿಮೆಯಾಗುತ್ತದೆ.
ದೇಹದ ಹೀಟ್ ಕಡಿಮೆ ಮಾಡುವುದು ಯಾಕೆ ಮುಖ್ಯ?
ಯಾಕೆಂದರೆ ದೇಹ ಯಾವಾಗಲೂ ಹೈಡ್ರೇಟ್ ಆಗಿರಬೇಕು. ಇಲ್ಲವಾದಲೇ ಹೀಟ್ ಸ್ಟ್ರೋಕ್, ಡಿಹೈಡ್ರೇಷನ್, ಆಗಿ ತುಂಬಾ ಆರೋಗ್ಯ ಸಮಸ್ಯೆಗಳು ಬರುತ್ತವೆ.
ಯಾವ ಫುಡ್ ತಿನ್ನುವುದರಿಂದ Body heat ಕಡಿಮೆಯಾಗುತ್ತದೆ?
ದೇಹದ ಹೀಟ್ ಕಡಿಮೆಯಾಗಬೇಕಾದರೆ ಮೊದಲು ಅದರಲ್ಲಿ ನೀರಿನಂಶ ಜಾಸ್ತಿ ಇರಬೇಕು. ಅಂತಹ ಪಧಾರ್ಥಗಳೆಂದರೆ, ಕಲ್ಲಂಗಡಿ, ಸೌತೇಕಾಯಿ, ಸಿಟ್ರಸ್ ಫ್ರೂಟ್ಸ್, ಮಜ್ಜಿಗೆ, ಮೊಸರು, ಇತ್ಯಾದಿ.
ನಿಂಬೆ ರಸ ದೇಹದ ಹೀಟ್ ಕಡಿಮೆ ಮಾಡುತ್ತಾ?
ಹೌದು, ನಿಂಬೆ ರಸ ದೇಹದ ಹೀಟ್ ಅನ್ನು ಕಡಿಮೆ ಮಾಡುತ್ತೆ. ಯಾವತಾರ ಅಂದರೆ ಅದರಲ್ಲಿ ದೇಹವನ್ನು ಕೂಲ್ ಮಾಡುವ ಎಲೆಕ್ಟ್ರೋಲೈಟ್ಸ್ ಅಂಶ ಇರುತ್ತೆ, ಇದನ್ನು ಜೂಸ್ ಮಾಡಿ ಕುಡಿದರೆ ದೇಹ ಬೇಗ ತಂಪಾಗುತ್ತದೆ.
