Table of Contents
ToggleHPV vaccination ಕುರಿತು ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ .
ಹಾಗಾದರೆ HPV(Human papilloma Virus) ಎಂದರೆ ಏನು ?
ಇದೊಂದು ಸಾಮಾನ್ಯ ವೈರಸ್, ಲೈಂಗಿಕ ಕ್ರಿಯೆಯಿಂದ ಬರುವ ರೋಗವಾಗಿದ್ದು(Sexually Transmitted cancer), ಇದರಲ್ಲಿ ಕೆಲವೊಂದು ಪ್ರಕಾರಗಳು ಸ್ವಲ್ಪ ಪ್ರಮಾಣದಲ್ಲಿ ಅಪಾಯಕಾರಿಯಾಗಿದ್ದು , ಹೆಣ್ಣುಮಕ್ಕಳಲ್ಲಿ ಗರ್ಭಾಶಯದ ಕ್ಯಾನ್ಸರ್(cervical cancer) ,ಮತ್ತು ಗಂಡು ಮಕ್ಕಳಲ್ಲಿ ಗಂಟಲಿನ ಭಾಗ, ಮೂತ್ರನಾಳ, ಮತ್ತು ಗುದನಾಳದಲ್ಲಿ, ಕ್ಯಾನ್ಸರ್ ಉಂಟುಮಾಡುವುದು ಇದರ ಲಕ್ಷಣವಾಗಿದೆ.
ಎಲ್ಲಾ HPV ಸೋಂಕುಗಳಿಂದ ಗಂಬೀರವಾದ ಕಾಯಿಲೆಗಳು ಬರುವುದಿಲ್ಲ, ಆದರೆ ಕೆಲವೊಂದು ಅತೀ ಅಪಾಯಕಾರಿ ಪ್ರಕಾರಗಳು ಹೆಚ್ಚು ಕಾಲ ದೇಹದಲ್ಲಿ ಉಳಿದರೆ ಅದು ಕ್ಯಾನ್ಸರ್ ಗೆ ದಾರಿ ಮಾಡಿಕೊಡುತ್ತವೆ, ಈ ಕಾರಣಕ್ಕೋಸ್ಕರ “HPV vaccination” ಮುಖ್ಯವಾಗಿದೆ.
ಹಾಗಾದರೆ HPV vaccination ಯಾವ ರೀತಿ ಕೆಲಸ ಮಾಡುತ್ತದೆ ನೋಡೋಣವೇ ?
ಈ “HPV vaccination” ನಮ್ಮ ದೇಹದ ರೋಗನಿರೋಧಕ ಶಕ್ತಿ (Immune system) ಅನ್ನು ಬಲಪಡಿಸುತ್ತದೆ. ವೈರಸ್ ನಲ್ಲಿರುವ ಕೆಲವೊಂದು ಬೇಡವಾದ ಅಂಶಗಳು ದೇಹಕ್ಕೆ ಅಪಾಯಕಾರಿಏನಲ್ಲ.
ಆದರೆ ಅದು ದೇಹದಲ್ಲಿರುವ ರೋಗನಿರೋಧಕ ಶಕ್ತಿಗೆ HPV ವೈರಸ್ ಅನ್ನು ಕಂಡು ಹಿಡಿಯಲು ಸಹಾಯ ಮಾಡುತ್ತದೆ.
ಒಂದು ಬಾರಿ ಈ ವ್ಯಾಕ್ಸಿನೇಷನ್ ಪಡೆದ ನಂತರ, ನಮ್ಮ ದೇಹದಲ್ಲಿ ಪ್ರತಿರೋಧಕ(anti bodies) ಅಂಶಗಳು ಉತ್ಪತ್ತಿಯಾಗುತ್ತವೆ.
ಮುಂದಿನ ದಿನಗಳಲ್ಲಿ HPV ವೈರಸ್ ನಮ್ಮ ದೇಹಕ್ಕೆ ಬಂದರೆ, ಈ ಪ್ರತಿರೋಧಕಗಳು ತಕ್ಷಣ ಆಕ್ಟಿವ್ ಆಗಿ ವೈರಸ್ ಅನ್ನು ಕೊಲ್ಲುತ್ತವೆ.
ಈ “HPV vaccination” ಒಂದು ರೀತಿ ಮುನ್ನೆಚ್ಚರಿಕೆಯ ರಕ್ಷಣೆಯಾಗಿ ಕಾರ್ಯ ನಿರ್ವಹಿಸುತ್ತದೆ, ಬದಲಾಗಿ ರೋಗ ಬಂದ ನಂತರ ಚಿಕಿತ್ಸೆ ಕೊಡದೆ, ರೋಗ ಬರದಂತೆ ತಡೆಯುತ್ತದೆ.
ಈ HPV ಲಸಿಕೆಯನ್ನು ಯಾರು ಮತ್ತು ಯಾವಾಗ ಪಡೆಯಬೇಕು?
ಅಭಿಯಾನ ಪ್ರಾರಂಭವಾದ 90 ದಿನಗಳ ಒಳಗೆ 14 ವರ್ಷ ತುಂಬುವ ಹೆಣ್ಣುಮಕ್ಕಳು ಅರ್ಹರಾಗಿರುತ್ತಾರೆ.
ತಜ್ಞರ ಪ್ರಕಾರ ಈ ವಯಸ್ಸಿನಲ್ಲಿ ರೋಗ ನಿರೋಧಕ ಶಕ್ತಿ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ.
ಇದರ ಗರಿಷ್ಟ ವ್ಯಾಪ್ತಿಯನ್ನು ಖಚಿತ ಪಡಿಸಿಕೊಳ್ಳಲು 90 ದಿನಗಳ ಅಭಿಯಾನವು ಪ್ರತಿದಿನ ನಡೆಯುತ್ತದೆ. ನಂತರ ಲಸಿಕೆಯು ಕೆಲವು ರೋಗನಿರೋಧಕ ದಿನಗಳಲ್ಲಿ ಸರ್ಕಾರೀ ಆಸ್ಪತ್ರೆಗಳಲ್ಲಿ ದೊರೆಯುತ್ತದೆ.
ಈ Vaccination ಹಾಕಲು ಉತ್ತಮ ಸಮಯ : ಈ ವೈರಸ್ ಗೆ ಲೈಂಗಿಕವಾಗಿ ತೊಡಗಿರುವ ಮೊದಲೇ ಲಸಿಕೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ,
12–13 ವರ್ಷ ವಯಸ್ಸಿನವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು ಅದಕ್ಕೆ ಸೂಕ್ತ ಸಮಯ.
ಅತೀ ಹೆಚ್ಚು ಕಾಲ ರಕ್ಷಣೆ ಒದಗಿಸುತ್ತದೆ: ಹಲವು ಅಧ್ಯಯನಗಳ ಪ್ರಕಾರ ಒಂದು ಬಾರಿ ಈ ಲಸಿಕೆಯನ್ನು ಹಾಕಿಸಿಕೊಂಡರೆ 12 ವರ್ಷಗಳಿಗೂ ಹೆಚ್ಚು ಕಾಲ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ.
ರೋಗದ ಬರವನ್ನು ಕಡಿಮೆ ಮಾಡುತ್ತದೆ: ಈ ವ್ಯಾಕ್ಸಿನೇಷನ್ ಯುವತಿಯರಲ್ಲಿ ಜನನಾಂಗದ ನೋವುಗಳು ,ಮತ್ತು ಯಾವುದೇ ರೀತಿ ಕಾನ್ಸರ್ ಕಾರಕ ಅಂಶಗಳನ್ನು ತಡೆಯುತ್ತದೆ.
ಗರ್ಭಕಂಠದ ಕ್ಯಾನ್ಸರ್ (cervical cancer ) ಎಂದರೆ ಏನು?
ಗರ್ಭಕಂಠದ ಕ್ಯಾನ್ಸರ್, ರ್ಹ್ಯೂಮನ್ ಪ್ಯಾಪಿಲೋ ವೈರಸ್ (HPV) ಚರ್ಮದಿಂದ ಚರ್ಮಕ್ಕೆ ಲೈಂಗಿಕ ಸಂಪರ್ಕದ ಮೂಲಕ ಬರುವ ಕಾಯಿಲೆಯಾಗಿದ್ದು, ಸರಿಯಾದ ಸಮಯದಲ್ಲಿ ಲಸಿಕೆ ನೀಡಿದರೆ ತಡೆಗಟ್ಟಬಹುದಾದ ಕ್ಯಾನ್ಸರ್ ಇದು.
ಜಾಗತಿಕವಾಗಿ cervical cancer ನಿಂದ ಆಗುವ ಸಾವುಗಳಲ್ಲಿ ಶೇ.25 ರಷ್ಟು ನಮ್ಮ ದೇಶದಲ್ಲೇ ಸಂಭವಿಸುತ್ತವೆ.
ಈ cancer ನಿಂದ ಬಳಲುತ್ತಿರುವ ಪ್ರತೀ 5 ಮಹಿಳೆಯರಲ್ಲಿ ಒಬ್ಬರು ನಮ್ಮ ದೇಶದವರಾಗಿದ್ದರೆ.
ಜಾಗತಿಕವಾಗಿ ನಮ್ಮ ದೇಶ cervical cancer ಕಾಯಿಲೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
HPV vaccination ಬಗ್ಗೆ ಇರುವ ತಪ್ಪು ಕಲ್ಪನೆಗಳು!
ಈ ಲಸಿಕೆ ಪಡೆಯುವುದರಿಂದ ಹೆಣ್ಣುಮಕ್ಕಳಲ್ಲಿ ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಕೆಲವರು ತಪ್ಪಾಗಿ ತಿಳಿದಿದ್ದಾರೆ, ಆದರೆ ವೈಜ್ಞಾನಿಕವಾಗಿ ಇದಕ್ಕೆ ಯಾವುದೇ ಸಾಕ್ಷಿಗಳಿಲ್ಲ.
ಇದು ಮಹಿಳೆಯರಿಗೆ ಮಾತ್ರ ಇರುವ ಲಸಿಕೆ ಇಂದು ಹೇಳಲಾಗುತ್ತದೆ, ಆದರೆ ಪುರುಷರು ಸೋಂಕಿನ ತೀವ್ರತೆಯನ್ನು ತಪ್ಪಿಸಿಕೊಳ್ಳಲು ಲಸಿಕೆ ಪಡೆಯಬಹುದು.
ಕೆಲವು ಪೋಷಕರು ತಮ್ಮ ಮಕ್ಕಳಿಗೆ ಈ ಲಸಿಕೆಯನ್ನು ಕೊಡಿಸಲು ನಿರಾಕರಿಸುತ್ತಿದ್ದಾರೆ. ಕಾರಣ ಇದು ತಮ್ಮ ಮಕ್ಕಳಲ್ಲಿ ಆಟೋ ಇಮ್ಮ್ಯೂನ್ ಡಿಸೀಸ್ ಮತ್ತು ಮಕ್ಕಳಾಗುವ ಲಕ್ಷಣ ಅಂದರೆ ಫರ್ಟಿಲಿಟಿ ಗೆ ತೊಂದರೆ ಆಗುತ್ತದೆ ಎಂದು ನಿರಾಕರಿಸುತ್ತಿದ್ದಾರೆ. ಆದರೆ ಇದು ತಪ್ಪು ಕಲ್ಪನೆ, ಆ ರೀತಿ ಯಾವುದೇ ಆಧಾರವಿಲ್ಲ.
2006 ರಿಂದ ಜಗತ್ತಿನಾದ್ಯಂತ ಸುಮಾರು 500 ಮಿಲಿಯನ್ಗಿಂತಲೂ ಹೆಚ್ಚು HPV ಡೋಸ್ ಗಳನ್ನ ನೀಡಲಾಗಿದೆ.
ಆರೋಗ್ಯಕರ ಕುಟುಂಬಗಳನ್ನು ನಿರ್ಮಿಸಲು ಸಹಾಯ ಮಾಡಲು, ಮಹಿಳಾ ಅರೋಗ್ಯ ರಕ್ಷಣೆಯನ್ನು ಮೂಲದಲ್ಲಿ ತಡೆಗಟ್ಟುವಿಕೆ, ರಕ್ಷಣೆ, ಮತ್ತು ಸಮಾನತೆಯನ್ನು ಖಾತರಿಪಡಿಸುವ “ಸ್ವಸ್ತ್ ನಾರಿ ಸಶಕ್ತ ಪರಿವಾರ್” ಎಂಬ ಸರ್ಕಾರದ ಬದ್ಧತೆಯನ್ನು ಈ ಕಾರ್ಯಕ್ರಮವು ಪೂರೈಸುತ್ತದೆ ದೇಶದ ಒಳಿತಿಗೆ ಕಾರಣವಾಗುತ್ತದೆ.
ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ(GBA) ಎಂಬ ಸಂಸ್ಥೆ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಕೇಂದ್ರ ಸರ್ಕಾರ ಆರಂಭಿಸಿರುವ ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ಉಚಿತ ಲಸಿಕೆ ನೀಡುವ ಅಭಿಯಾನದ ಅಂಗವಾಗಿ 14 ರಿಂದ 15 ವರ್ಷದ ಸುಮಾರು 3,000 ಹೆಣ್ಣು ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದ್ದು ಯಾವುದೇ ಅಡ್ಡ ಪರಿಣಾಮ (side effects) ಉಂಟಾಗಿಲ್ಲ ಎಂದು ಜಿಬಿಎ ತಿಳಿಸಿದೆ.
Can you Get HPV Vaccination at any age
HPV Vaccination ಅನ್ನು 14 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ನೀಡಲಾಗುತ್ತದೆ.(Any girl at the age of 14 years).
Why do girls get HPV Vaccination
This Vaccine is primarily for girls to avoid causing or prevent infection from the Hman papilloma virus, which is cause cervical cancers for girls.
In India HPV Vaccination approved?
Yes, The Vaccine is approved by Drug regulator.
The HPV Vaccination which protect from causing Cervical Cancer HPV type 16 and 18 as well as 6 and 11.
How many people in India affected HPV?
Human Papillomavirus(HPV) is commonly sexually transmitted infection. it is affect more than 90% sexually active men and more than 80% sexually active women in their entire lifetime.
Why Indian Parents Refusing HPV Vaccine to their Daughters?
Parents were worried that the HPV vaccine could have negitive effect on future health, such as causing auto immune disease or decreasing fertility on their daughters.

Next topic yavdu
All health related topics