ಅಸ್ತಮಾ ಸಮಸ್ಯೆಯಿರುವ ವ್ಯೆಕ್ತಿಗಳು ಅನುಭವಿಸುವ ಸಾಮಾನ್ಯ ಲಕ್ಷಣ ಅಂದರೆ ಅದು ಉಬ್ಬಸ ಮತ್ತೆ ಉಸಿರಾಡುವ ಮಾರ್ಗ ಸಣ್ಣದಾಗುವುದರಿಂದ ಉಂಟಾಗುವ ದೀರ್ಘಕಾಲದ ಸಂಕಟ.
ಅಸ್ತಮಾ ಇರುವ ವ್ಯಕ್ತಿಗೆ ಕೆಲವೊಂದು ಅಲರ್ಜಿಕ್ ವಸ್ತುಗಳು ಹೆಚ್ಚು ತೊಂದರೆ ಮಾಡುತ್ತವೆ ಅವುಗಳೆಂದರೆ:
ತಂಪಾಗಿ ಬೀಸುವ ಗಾಳಿ( ಪ್ಯಾನ್ ಗಾಳಿ), ಕೋಲ್ಡ್ ಪದಾರ್ಥಗಳು( ಫ್ರಿಡ್ಜ್ ನಲ್ಲಿರುವ ಪಧಾರ್ಥಗಳು), ಮಾಸ್ಕ್ ಧರಿಸದೇ ಓಡಾಡುವಾಗ ದೂಳಿನ ಕಣಗಳಿಂದ ಬರುವ ಸೋಂಕುಗಳು, ಕೆಲವರಿಗೆ ಹೂವಿನ ಪರಾಗ( ಸಂಪಿಗೆ, ಮಲ್ಲಿಗೆ) ಇದರಿಂದ ಅಲರ್ಜಿ ಉಂಟಾಗುತ್ತದೆ.
ಈ ಎಲ್ಲಾ ಅಂಶಗಳು ಶ್ವಾಸಕೋಶದ ಒಳಗೆ ಮತ್ತೆ ಹೊರಗೆ ಗಾಳಿಯನ್ನ ಸಾಗಿಸಲು ಕಾರಣವಾಗಿರುವ ಕೊಳವೆಗೆ ಅಲರ್ಜಿ ಉಂಟು ಮಾಡಿ ಉರಿ ಊತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸಣ್ಣದಾದ ವಾಯುಮಾರ್ಗ ಗಾಳಿಯನ್ನ ಸರಾಗವಾಗಿ ಹರಿಯಲು ಬಿಡದೆ ಅಸ್ತಮಾ ಉಬ್ಬಸ ಉಂಟಾಗುತ್ತದೆ.
ಅಸ್ತಮಾ ಇದು ದೀರ್ಘಕಾಲದ ಉಸಿರಾಟದ ಕಾಯಿಲೆಯಾಗಿದ್ದು, ಮಕ್ಕಳಲ್ಲಿ ಜಾಸ್ತಿ ಕಂಡುಬರುತ್ತದೆ, ಯುವಕರು ಮತ್ತೆ ಹಿರಿಯರು ಈ ಕಾಯಿಲೆಗೆ ಒಳಗಾಗುತ್ತಾರೆ. ಇದಕ್ಕೆ ಮುಖ್ಯ ಕಾರಣ ಅಂದರೆ ನಮ್ಮ ವೇಗದ ಜೀವನಶೈಲಿ, ಪರಿಸರ ಮಾಲಿನ್ಯ, ವಾಯು ಮಾಲಿನ್ಯ, ನಮ್ಮ ಆಹಾರ ಪದ್ದತಿಗಳು. ಈ ಕಾಯಿಲೆಯನ್ನ ಸಂಪೂರ್ಣವಾಗಿ ಗುಣಪಡಿಸಲು ಆಗದೇ ಇದ್ದರೂ ಸರಿಯಾದ ರೀತಿ ನಿರ್ವಣೆ ಮಾಡಿದರೆ ನಿಯಂತ್ರಣದಲ್ಲಿ ಇಡಬಹುದು.
Table of Contents
Toggleಅಸ್ತಮಾ ಇರುವ ಲಕ್ಷಣಗಳು (Symptoms) :
ಇದರ ಲಕ್ಷಣಗಳು ಎಲ್ಲರಲ್ಲೂ ಒಂದೇ ರೀತಿ ಇರುವುದಿಲ್ಲ, ಕೆಲವರಲ್ಲಿ ಇದು ಹೆಚ್ಚಾಗಿ ಕಾಣಿಸುತ್ತದೆ, ಕೆಲವರಲ್ಲಿ ನಿಧಾನವಾಗಿ ಪ್ರಾರಂಭವಾಗಿ ನಂತರ ಜಾಸ್ತಿಯಾಗುತ್ತದೆ.
ಲಕ್ಷಣಗಳನ್ನ ನೋಡೋದಾದರೆ;
- ಉಸಿರಾಟದಲ್ಲಿ ತೊಂದರೆ (Difficulty breathing)
- ಉಸಿರಾಡೋ ಸಮಯದಲ್ಲಿ ಸಣ್ಣದಾದ ಶಿಳ್ಳೆ ರೀತಿ ಶಬ್ದ(Wheezing).
- ಮಲಗಿದಾಗ ಎದೆ ಬಿಗಿ ಆಗುವ ಅನುಭವ.
- ಮಲಗಿದಾಗ ಅಥವಾ ಬೆಳಿಗ್ಗೆ ಎದ್ದಾಗ ಕೆಮ್ಮು ಜಾಸ್ತಿ ಆಗುವುದು.
- ದೂಳು ಸೇರಿದಾಗ, ಶೀತ ಆದಾಗ ಚಳಿ ಗಾಲದಲ್ಲಿ ಉಸಿರಾಟದ ಸಮಸ್ಯೆ ಜಾಸ್ತಿ.
- ತಣ್ಣನೆ ಗಾಳಿ ಜಾಸ್ತಿ ಆದಾಗ ಉಸಿರಾಡಲು ಕಷ್ಟವಾಗುವುದು.
ಈ ಎಲ್ಲಾ ಲಕ್ಷಣಗಳು ಒಂದೇ ಬಾರಿ ಬರಬೇಕಂತ ಏನು ಇಲ್ಲ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಕೆಲವೊಮ್ಮೆ ಜಾಸ್ತಿ ಆಗುತ್ತವೆ, ಕೆಲವೊಮ್ಮೆ ಕಡಿಮೆ ಆಗುತ್ತವೆ.
ನಮ್ಮ ದೇಶದಲ್ಲಿ ಅಸ್ತಮಾ ಯಾವ ರೀತಿ ಇದೆ ನೋಡೋಣ.
ಭಾರತದಲ್ಲಿ ಅಸ್ತಮಾ ಕಾಯಿಲೆ ಒಂದು ಗಂಭೀರ ಆರೋಗ್ಯ ಸಮಸ್ಯೆ ಯಾಗಿದ್ದು, ಅತಿಯಾಗಿ ಹೆಚ್ಚುತ್ತಿರುವ ನಗರೀಕರಣ, ಮತ್ತೆ ಪರಿಸರದಲ್ಲಿ ಆಗುತ್ತಿರುವ ಮಾಲಿನ್ಯ ಇದಕ್ಕೆ ಮುಖ್ಯ ಕಾರಣವಾಗುತ್ತಿದೆ.
ನಮ್ಮ ದೇಶದಲ್ಲಿ ಸುಮಾರು 34 ಮಿಲಿಯನ್ ಜನರು ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಇದು ಮಕ್ಕಳಲ್ಲಿ ಹೆಚ್ಚು ಕಾಣಿಸುತ್ತಿರುವುದು ಆತಂಕ ಪಡುವ ವಿಷಯ ಆಗಿದೆ. ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯ, ಪರಿಸರ ಮಾಲಿನ್ಯದಿಂದ, ಅಸ್ತಮಾ ಪ್ರಕರಣಗಳು, ಯುವಕರಲ್ಲಿ ಮತ್ತೆ ವಯಸ್ಕರಲ್ಲಿ ಜಾಸ್ತಿ ಆಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಸಮಸ್ಯೆಯಿಂದ ಈ ಕಾಯಿಲೆಯನ್ನು ಸರಿಯಾಗಿ ಗುರುತಿಸಲಾಗದೆ ಜಾಸ್ತಿಯಾಗುತ್ತಿದೆ.
ಇದನ್ನು ತಡೆಯಲು ತುಂಬಾ ಕಷ್ಟ ಆಗುತ್ತಿದೆ ಯಾಕೆಂದರೆ, ನಮ್ಮ ದೇಶದಲ್ಲಿ ಇದನ್ನು ಗುಣಪಡಿಸಲು ಬೇಕಾದ ನುರಿತ ವೈದ್ಯರು ತುಂಬಾ ಕಡಿಮೆ ಇದ್ದಾರೆ. ನಮ್ಮ ಭಾರತದಲ್ಲಿ 140 ಕೋಟಿಗೂ ಜಾಸ್ತಿ ಜನಸಂಖ್ಯೆ ಇದೆ, ಆದರೆ ಈ ಕಾಯಿಲೆ ಗುಣಪಡಿಸುವ ನುರಿತ ವೈದ್ಯರ ಸಂಖ್ಯೆ 4000-5000 ಜನ ಅಷ್ಟೇ ಇದ್ದಾರೆ.
ಈ ಅಂಕಿ ಅಂಶಗಳಿಂದ ನಮಗೆ ತಿಳಿಯುವುದೊಂದೇ, ನಾವು ಎಷ್ಟು ಜಾಗೃತರಾಗಿರುತ್ತೇವೂ ಅಷ್ಟು ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು.
ಅಸ್ತಮಾ ಕಾಯಿಲೆ ಬರಲು ಪ್ರಮುಖ ಕಾರಣಗಳು :
ಈ ಕಾಯಿಲೆ ಕೇವಲ ಒಂದು ಕಾರಣದಿಂದ ಬರುತ್ತದೆ ಎಂದು ಏಳಲು ಆಗುವುದಿಲ್ಲ, ಬದಲಾಗಿ ಹಲವಾರು ಕಾರಣಗಳಿಂದ ಬರುತ್ತದೆ. ಅದರಲ್ಲಿ ಕೆಲವೊಂದು ಪ್ರಮುಖ ಕಾರಣಗಳನ್ನ ನೋಡೋಣ.
1. ಅಲರ್ಜಿಗಳು (Allergies)
ನಮಗೆ ತಿಳಿಯದ ಹಾಗೆ ಅಲರ್ಜಿ ಉಂಟಾಗುತ್ತದೆ. ಅದರಲ್ಲಿ ಮುಖ್ಯವಾಗಿ, ಹೊರಗಡೆ ಮಾಸ್ಕ್ ಧರಿಸದೇ ಬರುವ ಧೂಳು, ಮನೆಯಲ್ಲಿ ತುಂಬಾ ದಿನ ಕ್ಲೀನ್ ಮಾಡದೆ ಬಿಟ್ಟಿರುವ ಧೂಳು, ಕೆಲವೊಂದು ಹೂವುಗಳಲ್ಲಿ ಪೊಲೆನ್ ಅಂಶ ಅಲರ್ಜಿ ತರುತ್ತದೆ, ಹಾಗೆ ಮನೆ ಸಾಕು ಪ್ರಾಣಿಗಳಾದ ಬೆಕ್ಕು, ನಾಯಿಮರಿ, ಇವುಗಳ ಕೂದಲಿಂದ ಬರುವ ಅಲರ್ಜಿ, ಮುಖ್ಯವಾಗಿ ಅಸ್ತಮಾ ಉಂಟಾಗಲು ಕಾರಣವಾಗುತ್ತದೆ.
2. ವಾಯು ಮಾಲಿನ್ಯ (Air pollution)
ಇದರಲ್ಲಿ ಮುಖ್ಯವಾಗಿ ಕೈಗಾರಿಕೆಗಳಿಂದ ಹೊರಬರುವ ವಿಷಕಾರಿ ಹೊಗೆ, ವಾಹನಗಳಿಂದ ಬರುವ ಹೊಗೆ, ನಮ್ಮ ಶ್ವಾಸಕೋಶಗಳ ಮೇಲೆ ನೇರ ಪರಿಣಾಮ ಉಂಟುಮಾಡಿ ಈ ಕಾಯಿಲೆಗೆ ದಾರಿ ಮಾಡಿಕೊಡುತ್ತವೆ.
3. ವಂಶಪಾರಂಪರೆ (Genetic Factors)
ನಮ್ಮ ಕುಟುಂಬದಲ್ಲಿ ಯಾರಿಗಾದರೂ ಈಗಾಗಲೇ ಅಸ್ತಮಾ ಇದ್ದರೆ ಅವರಿಂದ ನಮಗೆ ನೇರವಾಗಿ ಇದು ಬರುವ ಸಾಧ್ಯತೆ ಇದೆ.
4. ಧೂಮಪಾನ ಮಾಡುವುದರಿಂದ.
ಅತಿ ಹೆಚ್ಚು ಧೂಮಪಾನ ಮಾಡುವವರಿಗೆ ಈ ಕಾಯಿಲೆ ಬರುವ ಸ್ಸಾದ್ಯತೇ ಹೆಚ್ಚು, ಆದರೆ ಒಂದು ಮುಖ್ಯ ವಿಚಾರ ದೂಮಪಾನ ಮಾಡುವವರ ಸಂಪರ್ಕದಲ್ಲಿ ಇದ್ದರೂ ಈ ಕಾಯಿಲೆ ಬರುತ್ತದೆ.
5. ಹವಾಮಾನ ಬದಲಾವಣೆ.
ಚಳಿಗಾಲ, ಅಥವಾ ಮಳೆಗಾಲದಲ್ಲಿ ಹೆಚ್ಚು ತಣ್ಣನೆಯ ವಾತಾವರಣ ಇರುವುದರಿಂದ ಅದು ಶ್ವಾಸಕೋಶದ ಮೇಲೆ ನೇರ ಪರಿಣಾಮ ಬೀರಿ ಅಸ್ತಮಾ ಲಕ್ಷಣಗಳು ಜಾಸ್ತಿಯಾಗುತ್ತವೆ.
6. ಮಾನಸಿಕ ಒತ್ತಡ(Psychological stress).
ಒತ್ತಡ ಮತ್ತೆ ಆತಂಕ ನಮ್ಮ ದೇಹದ ಪ್ರತಿಕ್ರಿಯೆಯನ್ನು ಬದಲಾಯಿಸಿ ಉಸಿರಾಟದ ಸಮಸ್ಯೆಗಳನ್ನ ಜಾಸ್ತಿ ಮಾಡಿ ಈ ಕಾಯಿಲೆಗೆ ಕಾರಣವಾಗುತ್ತದೆ.
7. ಹಾರ್ಮೋನ್ ಬದಲಾವಣೆ(Hormonal changes).
ಇದು ಪ್ರಮುಖವಾಗಿ ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತದೆ. ಗರ್ಭಿಣಿ ಮಹಿಳೆಯರಲ್ಲಿ, ಋತುಚಕ್ರ ನಿಂತಿರುವ ಮಹಿಳೆಯರಲ್ಲಿ ಹಾರ್ಮೋನ್ ಗಳು ಬದಲಾಗಿ ಅದು ಈ ಕಾಯಿಲೆಗೆ ದಾರಿ ಮಾಡಿಕೊಡುವ ಸಾಧ್ಯತೆಗಳು ಜಾಸ್ತಿ.
ಅಸ್ತಮಾ ಕಾಯಿಲೆಗೆ ಮನೆಯಲ್ಲೇ ನೈಸರ್ಗಿಕ ಚಿಕಿತ್ಸೆ (Natural Home Remedies for Asthma).
ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸೋದಕ್ಕೆ ಆಗುವುದಿಲ್ಲ. ಬದಲಾಗಿ ನಾವು ಕೆಲವೊಂದು ನೈಸರ್ಗಿಕ ವಿಧಾನಗಳನ್ನ ಅನುಸರಿಸಿದರೆ ಇದರ ಪರಿಣಾಮವನ್ನ ನಿಯಂತ್ರಿಸಿಕೊಳ್ಳಬಹುದು.
1. ಆವಿ ನೀರು (Steam Water)
ನೀರನ್ನು ಬಿಸಿ ಮಾಡಿ ಅದರ ಆವಿಯನ್ನು ತೆಗೆದುಕೊಳ್ಳುವುದರಿಂದ ನಮ್ಮ ಉಸಿರಾಟದ ದಾರಿಯನ್ನು ಸ್ವಲ್ಪ ಸರಳ ಮಾಡಿ ಅಲ್ಲಿರುವ ಇನ್ಫೆಕ್ಷನ್ ಕಡಿಮೆ ಮಾಡಿ ದೀರ್ಘ ಉಸಿರಾಟ ಮಾಡಲು ಸಹಾಯ ಮಾಡುತ್ತದೆ. ದಿನಕ್ಕೆ ಕನಿಷ್ಠ
1-2 ಬಾರಿ ಬಿಸಿನೀರಿನ ಆವಿ ತೆಗೆದುಕೊಳ್ಳುವುದು ಉತ್ತಮ.
2. ಶುಂಠಿ ಮತ್ತೆ ಜೇನುತುಪ್ಪದ ಮಿಶ್ರಣ
ನಮ್ಮ ಶ್ವಾಸಕೋಶಗಲ್ಲಿ ಇರುವ ಇನ್ಫೆಕ್ಷನ್ ಕಡಿಮೆ ಮಾಡಲು ಶುಂಠಿಯ ರಸ ಬಿಸಿ ನೀರಿನಲ್ಲಿ ಮಿಕ್ಸ್ ಮಾಡಿ ದಿನಕ್ಕೆ ಎರಡು ಬಾರಿ ಕುಡಿಯಬೇಕು. ಮತ್ತೆ ಜೇನುತುಪ್ಪವನ್ನು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಬೆಳಿಗ್ಗಿನ ಜಾವದಲ್ಲಿ ಕುಡಿಯುವುದರಿಂದ ಗಂಟಲು ಆರಾಮವಾಗುತ್ತದೆ.
3. ತುಳಸಿ ಎಲೆಗಳು
ತುಳಸಿಯಲ್ಲಿ ನೈಸರ್ಗಿಕ ಅಂಟಿ ಇಂಪ್ಲಾಮೇಟರಿ ಗುಣಗಳಿದ್ದು ಇದುನ್ನು ದಿನನಿತ್ಯ ತಿನ್ನುವುದರಿಂದ ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತದೆ.
4. ಅರಿಶಿನ ಹಾಲು.
ರಾತ್ರಿ ಮಲಗುವಾಗ ಹಾಲಿನಲ್ಲಿ ಅರ್ಧ ಚಮಚ್ ಅರಿಶಿನ ಮಿಕ್ಸ್ ಮಾಡಿ ಕುಡಿಯಬೇಕು. ಅರಿಶಿಣದಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶ ಮತ್ತೆ ಕುರ್ಕುಮಿನ್ ಅಂಶ ಗಂಟಲಿನ ಉರಿ ಮತ್ತೆ ಉಸಿರಾಟದ ಸಮಸ್ಯೆಯನ್ನ ಕಡಿಮೆ ಮಾಡುತ್ತದೆ.
5. ಪ್ರಾಣಾಯಾಮ ಮತ್ತೆ ಯೋಗ ಮಾಡುವುದು.
ಪ್ರಾಣಾಯಾಮ ಉಸಿರಾಟ ಶ್ವಾಸಕೋಶಗಳ ಶಕ್ತಿಯನ್ನು ಜಾಸ್ತಿ ಮಾಡುತ್ತವೆ. ಅನುಲೋಮ ವಿಲೋಮ, ಕಪಾಲಭಾತಿ, ಮುಂತಾದ ಪ್ರಾಣಾಯಾಮಗಳನ್ನ ಮಾಡಬೇಕು ಮತ್ತೆ ದಿನನಿತ್ಯ 30 ನಿಮಿಷ ಯೋಗ ಅಭ್ಯಾಸವನ್ನ ಮಾಡಬೇಕು ಇದರಿಂದ ದೇಹ ಉತ್ತಮ ರೀತಿಯಲ್ಲಿ ಸ್ಪಂದಿಸಿ ಈ ಕಾಯಿಲೆ ಕಡಿಮೆಯಾಗಲು ಸಹಕರಿಸುತ್ತದೆ.
6. ಪೌಷ್ಟಿಕ ಆಹಾರ
ನಾವು ತಿನ್ನುವ ಆಹಾರದಲ್ಲಿ ಹೆಚ್ಚಿನ ವಿಟಮಿನ್, ಪ್ರೊಟೀನ್, ಕ್ಯಾಲ್ಶಿಯಂ, ಇರುವ ಹಣ್ಣುಗಳು, ಸೊಪ್ಪುಗಳು, ತರಕಾರಿಗಳು ಮೀನು, ಮಾಂಸ, ತಿನ್ನಬೇಕು, ಒಮೇಗಾ-3 ಪ್ಯಾಟಿ ಆಸಿಡ್ ಇರುವ ಕೆಲವೊಂದು ಪಧಾರ್ಥಗಳನ್ನ ತಿನ್ನುವುದರಿಂದ ಉಸಿರಾಟದ ಸಮಸ್ಯೆ ಕಡಿಮೆ ಆಗಲು ಸಹಕರಿಸುತ್ತದೆ.
7. ಅಲರ್ಜಿ ತಡೆಯಬೇಕು.
ದೂಳು, ಹೊಗೆ ,ಕೆಲವು ಸಾಕು ಪ್ರಾಣಿಗಳಿಂದ ದೂರ ಇರಬೇಕು, ಮನೆಯನ್ನು ಸ್ವಚ್ಛವಾಗಿಡಬೇಕು, ಮತ್ತು ಒರಗಡೆ ಓಡಾಡುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.
ಅಸ್ತಮಾ ಒಂದು ದೀರ್ಘ ಕಾಲಿನ ಕಾಯಿಲೆಯಾಗಿದ್ದು ಸರಿಯಾಗಿ ನಿರ್ವಹಣೆ ಮಾಡಿದರೆ ಅದನ್ನ ನಿಯಂತ್ರಿಸಬಹುದಾಗಿದೆ, ನಮ್ಮ ಸಣ್ಣ ಸಣ್ಣ ಜೀವನಶೈಲಿಯ ಬದಲಾವಣೆ ಮತ್ತೆ ನಾನು ಮೇಲೆ ತಿಳಿಸಿರುವ ಕೆಲವೊಂದು ನೈಸರ್ಗಿಕ ವಿಧಾನಗಳು, ಅಸ್ತಮಾ ಇರುವವರಿಗೆ ದೊಡ್ಡ ಬದಲಾವಣೆ ತರಬಹುದು. ಆದರಿಂದ ಯಾವುದೇ ಲಕ್ಷಣಗಳನ್ನ ನಿರ್ಲಕ್ಷಿಸದೆ, ವೈದ್ಯರ ಬಳಿ ಚಿಕೆತ್ಸೆ ಪಡೆಯಬೇಕು, ಸರಿಯಾದ ಆಹಾರ ಪದ್ಧತಿ ಅಸ್ತಮಾ ನಿಯಂತ್ರಣಕ್ಕೆ ಮಾರ್ಗದರ್ಶಿಯಾಗುತ್ತದೆ.
