ಥೈರಾಯ್ಡ್(Thyroid) ಅಂದರೆ ಏನು? ಇದು ಮಹಿಳೆಯರ ಮೇಲೆ ಯಾವ ಪರಿಣಾಮ ಬೀರುತ್ತೆ ಮತ್ತೆ ತಡೆಯುವ ನೈಸರ್ಗಿಕ ವಿಧಾನ.

Spread the love
ಥೈರಾಯ್ಡ್ navu yava reeti control maadabahudu.

ನಾವು ಸಣ್ಣ ವಯಸಿನಲ್ಲಿ ಇರಬೇಕಾದರೆ ಈ ಥೈರಾಯ್ಡ್, ಅಂದರೆ ಏನು ಮತ್ತು ಅದು ಯಾವ ರೀತಿ ಇರತ್ತೆ ಅಂತ ನೋಡಿರಲಿಲ್ಲ, ಮತ್ತು ಕೇಳಿಯೂ ಇರಲಿಲ್ಲ. ಆದರೆ ಈಗಿನ ನಮ್ಮ ವೇಗದ ಜೀವನಶೈಲಿ, ಮಾನಸಿಕವಾದಂತಹ ಒತ್ತಡಗಳು, ಅಸಮರ್ಪಕವಾದ ಆಹಾರ ಪದ್ಧತಿ, ಇನ್ನೂ ಅನೇಕ ಕಾರಣಗಳಿಂದ, ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸುತ್ತಿವೆ, ಅದರಲ್ಲಿ ಮುಖ್ಯವಾಗಿ ಥೈರಾಯ್ಡ್ ಸಮಸ್ಯೆಯು ಒಂದು. ನಮ್ಮ ದೇಶದಲ್ಲಿ ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಜಾಸ್ತಿ ಕಂಡು ಬರುತ್ತಿದೆ. ಒಂದು ವರದಿಯ ಪ್ರಕಾರ ಪ್ರತೀ 8 ಜನ ಮಹಿಳೆಯರಲ್ಲಿ ಒಬ್ಬರಿಗೆ ಈ ಥೈರಾಯ್ಡ್ ಸಮಸ್ಯೆ ಇರುತ್ತದೆ. ಆದರೆ ಕೆಲವರಲ್ಲಿ ಈ ಕಾಯಿಲೆಯ ಬಗ್ಗೆ ಸರಿಯಾದ ಅರಿವು ಇಲ್ಲದಿರುವುದರಿಂದ ಸಮಸ್ಯೆ ನಿದಾನವಾಗಿ ಹೆಚ್ಚಾಗುತ್ತದೆ.

ಆದ್ದರಿಂದ ನಾವು ಈ ಲೇಖನದಲ್ಲಿ ಥೈರಾಯ್ಡ್ ಅಂದರೆ ಏನು? ಅದರ ಲಕ್ಷಣಗಳು ಯಾವ ರೀತಿ ಇರುತ್ತವೆ, ಮತ್ತೆ ಇದು ಯಾಕೆ ಬರುತ್ತದೆ, ಅದನ್ನ ನಾವು ಯಾವ ರೀತಿ ನೈಸರ್ಗಿಕವಾಗಿ ನಿಯಂತ್ರಣ ಮಾಡಬಹುದು ಅನ್ನೋದನ್ನ ತಿಳಿಯೋಣ ಬನ್ನಿ.

ಹಾಗಾದರೆ ಥೈರಾಯ್ಡ್(thyroid) ಅಂದರೆ ಏನು?

ಥೈರಾಯ್ಡ್ ಅಂದರೆ ನಮ್ಮ ಕತ್ತಿನ ಮುಂದೆ (ಗಂಟಲು) ಸಣ್ಣ ಚಿಟ್ಟೆ ಯಂತಿರುವ ಗ್ರಂಥಿ(gland). ಇದರ ಕೆಲಸ ಏನಪ್ಪಾ ಅಂದರೆ, ನಮ್ಮ ದೇಹದಲ್ಲಿ ಶಕ್ತಿಯನ್ನು ಉತ್ಪಾದನೆ ಮಾಡುವುದು, ನಾವು ತಿಂದ ಆಹಾರವನ್ನು ಜೀರ್ಣ ಮಾಡುವುದು(metabolism), ಮತ್ತು ನಮ್ಮ ದೇಹದ ಬೆಳವಣಿಗೆಯನ್ನು ನಿಯಂತ್ರಣ ಮಾಡುವ ಪ್ರಮುಖ ಹಾರ್ಮೋನ್ ಗಳನ್ನ ಉತ್ಪತ್ತಿ ಮಾಡುವುದು.
ಅದರಲ್ಲಿ ಪ್ರಮುಖ ಹಾರ್ಮೋನ್ ಗಳೆಂದರೆ, ಥೈರಾಕ್ಸಿನ್ (T4) ಮತ್ತು ಥೈರೋನಿನ್ (T3). ಈ ಹಾರ್ಮೋನ್ ಗಳ ಮುಖ್ಯ ಕೆಲಸ ಅಂದರೆ, ನಮ್ಮ ದೇಹದ ತೂಕ ನಿಯಂತ್ರಿಸುವುದು, ಹೃದಯ ಬಡಿತ, ದೇಹದ ಶಕ್ತಿ, ತಾಪಮಾನ, ಮತ್ತೆ ನಮ್ಮ ಮೆದುಳಿನ ಕಾರ್ಯಗಳನ್ನ ನಿಯಂತ್ರಿಸುತ್ತೆ.
ನಮ್ಮ ದೇಹದಲ್ಲಿ ಈ ಥೈರಾಯ್ಡ್ ಸರಿಯಾಗಿ ಕೆಲಸ ಮಾಡಿಲ್ಲ ಅಂದರೆ ದೇಹದ ಹಾರ್ಮೋನ್ ವ್ಯವಸ್ಥೆ ಕೆಡುತ್ತದೆ, ಅದನ್ನೇ ನಾವು ಹಾರ್ಮೋನಲ್ ಇಂಬ್ಯಾಲೆನ್ಸ್ ಎನ್ನುತ್ತೇವೆ.
ಇದರಿಂದ ಎರಡು ಮುಖ್ಯ ಸಮಸ್ಯೆಗಳು ಬರುತ್ತವೆ, ಅವೇ ಹೈಪೋಥೈರೋಯಿಡಿಸಂ(ಥೈರಾಯ್ಡ್ ಕಡಿಮೆ ಕೆಲಸ ಮಾಡುವುದು) ಮತ್ತೆ ಹೈಪರ್ ಥೈರೋಯಿಡಿಸಂ( ಥೈರಾಯ್ಡ್ ಜಾಸ್ತಿ ಕೆಲಸ ಮಾಡುವುದು).

ಥೈರಾಯ್ಡ್ ನ ಮುಖ್ಯ ಲಕ್ಷಣಗಳು:

ಇದರ ಲಕ್ಷಣಗಳು ಪ್ರತಿಯೊಬ್ಬರಲ್ಲೂ ಒಂದೇ ತರ ಇರುತ್ತೆ ಅಂತ ಹೇಳೋದಿಕ್ಕೆ ಆಗೋದಿಲ್ಲ. ಕೆಲವರಲ್ಲಿ ಇದರ ಲಕ್ಷಣಗಳು ಆರಂಭದಲ್ಲಿ ಕಾಣಿಸದೇ ಇರಬಹುದು, ಆದರೆ ನಿದಾನವಾಗಿ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
1) ಹೈಪೋಥೈರಾಯಿಡಿಸಂ ಇದ್ದರೆ ಅದರ ಲಕ್ಷಣಗಳು ಈ ರೀತಿ ಇರುತ್ತವೆ.

  •  ಹೆಚ್ಚಾಗಿ ಆಯಾಸ ಮತ್ತೆ ನಿದ್ದೆ.
  •  ತೂಕ ಜಾಸ್ತಿ ಆಗುವುದು.
  •  ಜಾಸ್ತಿ ಚಳಿ ಅನಿಸುವುದು.
  •  ನೆನಪಿನ ಶಕ್ತಿ ಕಡಿಮೆ.
  •  ಕೂದಲು ಜಾಸ್ತಿ ಉದುರುವುದು.
  •  ಚರ್ಮ ಒಣಗುವ ಅನುಭವ.
  •  ಡಿಪ್ರೆಶನ್ ಬೇಸರ.
  •  ಮಲಬದ್ಧತೆ.
  •  ಲೈಂಗಿಕ ಆಸಕ್ತಿ ಕಡಿಮೆ
  • ಇರ್ರೆಗುಲರ್ ಪಿರಿಯಡ್ 

2) ಹೈಪರ್ ಥೈರಾಯಿಡಿಸಂ ಇದ್ದಾಗ ಕೆಲವು ಬೇರೆ ರೀತಿಯ ಲಕ್ಷಣಗಳು ಕಂಡುಬರುತ್ತವೆ.

  •  ತೂಕ ಕಡಿಮೆ ಆಗುವುದು.
  •  ಹೃದಯ ಬಡಿತದಲ್ಲಿ ಏರುಪೇರು
  •  ಆತಂಕ ಜಾಸ್ತಿಯಾಗುವುದು.
  •  ಹೆಚ್ಚಾಗಿ ಬೆವರುವುದು.
  •  ಸರಿಯಾದ ನಿದ್ದೆ ಬರುವುದಿಲ್ಲ.
  •  ಮನಸ್ಸಿಗೆ ನೆಮ್ಮದಿ ಇರುವುದಿಲ್ಲ.
  •  ಕೈಗಳ ನಡುಕ ಶುರು ಆಗುವುದು.
  •  ಅತಿಯಾದ ಭೇದಿ (diarrhea)
    ಈ ಲಕ್ಷಣಗಳನ್ನು ನಾವು ಸರಿಯಾಗಿ ಗಮನಿಸದೇ ನಿರ್ಲಕ್ಷಿಸಿದರೆ, ಮುಂದಿನ ದಿನಗಳಲ್ಲಿ ನಮಗೆ ಗೊತ್ತಿಲ್ಲದೆಯೇ ಹೃದಯ ಸಮಸ್ಯೆ, ಗರ್ಭ ಸಮಸ್ಯೆ, ನರಗಳ ಸಮಸ್ಯೆ, ಮತ್ತೆ ಇನ್ನೂ ಅನೇಕ ಅರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
ಈಗ ಈ ಥೈರಾಯ್ಡ್ ಯಾಕೆ ಬರುತ್ತದೆ ನೋಡೋಣ.
ಥೈರಾಯ್ಡ್ food

ಈ ಸಮಸ್ಯೆ ಖಚಿತವಾಗಿ ಇದೆ ಕಾರಣದಿಂದ ಬರುತ್ತೆ ಅಂತ ಏಳಲು ಕಷ್ಟ ಕೆಲವೊಮ್ಮೆ ನಮ್ಮ ಕುಟಂಬದಲ್ಲಿ ಯಾರಿಗಾದರೂ ಇದ್ದರೆ ಅನುವಂಶಿಕವಾಗಿ ಬರುವ ಸಾಧ್ಯತೆ ಇರುತ್ತದೆ, ಅದು ಬಿಟ್ಟು ಇನ್ನು ಹಲವು ಕಾರಣಗಳಿಂದ ಬರುವ ಸಾಧ್ಯತೆ ಇರುತ್ತದೆ ಅವುಗಳಲ್ಲಿ ಕೆಲವೊನ್ನು ನೋಡೋಣ.
ಕೆಲವು ಪ್ರಮುಖ ಕಾರಣಗಳು:
1) ದೇಹದಲ್ಲಿ ಉಪ್ಪಿನಾಂಶ ಕಡಿಮೆ : ನಮ್ಮ ದೇಹದಲ್ಲಿ ಐಯೋಡಿನ್ ಕೊರತೆ ಇದ್ದಾಗ ಥೈರಾಯ್ಡ್ ಹಾರ್ಮೋನ್ ಗಳು ಸರಿಯಾಗಿ ಉತ್ಪತ್ತಿ ಆಗೋದಿಲ್ಲ. ಇದಕ್ಕೆ ಪ್ರಮುಖ ಕಾರಣ ನಮ್ಮ ಮಣ್ಣಿನಲ್ಲಿ ಅಯೋಡಿನ್ ಅಂಶ ಕಡಿಮೆ ಇರುತ್ತದೆ. ನಮ್ಮ ದೇಶದಲ್ಲಿ ಕೆಲವು ರಾಜ್ಯಗಳಲ್ಲಿ ಈ ಅಯೋಡಿನ್ ಕೊರತೆ ಕಂಡುಬರುತ್ತದೆ.(ಹಿಮಾಲಯ ತಪ್ಪಲಿನಲ್ಲಿರುವ ರಾಜ್ಯಗಳು- ಉತ್ತರಾಖಂಡ, ಅರುಣಾಚಲ ಪ್ರದೇಶ, ಸಿಕ್ಕಿಂ ಜಮ್ಮು ಕಾಶ್ಮೀರ )
2) ಈಗಾಗಲೇ ದೇಹದಲ್ಲಿರುವ ಇಮ್ಯೂನ್ ರೋಗಗಳು :
ನಮ್ಮ ದೇಹದಲ್ಲೇ ಇರುವ ರೋಗನಿರೋಧಕ ಶಕ್ತಿಯು ಕೆಲವೊಮ್ಮೆ ಥೈರಾಯ್ಡ್ ಗ್ರಂಥಿಯನ್ನು ತಪ್ಪಾಗಿ ಅರ್ಥ ಮಾಡಿಕೊಂಡು ನಾಶ ಪಡಿಸುತ್ತದೆ, ಇದರಿಂದ ಥೈರಾಯ್ಡ್ ಜಾಸ್ತಿ ಆಗುತ್ತದೆ.
3) ಮಾನಸಿಕ ಒತ್ತಡ :
ನಮ್ಮ ಮನಸಿನ ಮೇಲೆ ಹಲವಾರು ಕಾರಣಗಳಿಂದ ಉಂಟಾಗುವ ಅತಿಯಾದ ಒತ್ತಡ ದೇಹದ ಹಾರ್ಮೋನ್ ಗೆ ತೊಂದರೆ ಉಂಟುಮಾಡುತ್ತದೆ ಅದರಿಂದ ಹಾರ್ಮೋನ್ ಗಳು ಸಮತೋಲನವನ್ನ ಕಳೆದುಕೊಂಡು ಅದು ಥೈರಾಯ್ಡ್ ಬರುವುದಕ್ಕೆ ಕಾರಣ ಆಗುತ್ತದೆ.
4) ಅಸಮತೋಲನ ಆಹಾರ ಪದ್ಧತಿ :
ನಾವು ತಿನ್ನುವ ಆಹಾರದಲ್ಲಿ ಪ್ರೊಟೀನ್ ಮತ್ತು ಕ್ಯಾಲ್ಶಿಯಂ ನಂತಹ ಪೌಷ್ಟಿಕಾಂಶ ಇಲ್ಲದಿರುವ ಕಾರಣ ಅದು ನೇರವಾಗಿ ಥೈರಾಯ್ಡ್ ಗೆ ದಾರಿ ಮಾಡಿಕೊಡುತ್ತದೆ.
5) ದೇಹದಲ್ಲಿ ಹಾರ್ಮೋನ್ ಬದಲಾವಣೆ :
ಇದು ವಿಶೇಷವಾಗಿ ಮಹಿಳೆಯರಲ್ಲಿ ಗರ್ಭದಾರಣೆ, ಡೆಲಿವರಿಯಾದ ನಂತರ, ಅಥವಾ, ಮುಟ್ಟು ನಿಲ್ಲುವ ಸಮಯದಲ್ಲಿ(ಮೆನೋಪಾಸ್) ಜಾಸ್ತಿ ಹಾರ್ಮೋನ್ ಬದಲಾವಣೆಯಾಗಿ ಅದು ನೇರವಾಗಿ ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ.

ನಾವು ಥೈರಾಯ್ಡ್ ಅನ್ನು ನೈಸರ್ಗಿಕವಾಗಿ ಯಾವ ರೀತಿ ತಡೆಗಟ್ಟಬಹುದು.

ಸಮಸ್ಯೆ ಜಾಸ್ತಿಯಾಗಿದೆ ಅಂದರೆ ನಾವು ವೈದ್ಯಕೀಯ ನೆರವಿನ ಜೊತೆಗೆ ಮನೆಯಲ್ಲಿ ಉತ್ತಮ ನೈಸರ್ಗಿಕ  ವಿಧಾನಗಳನ್ನ ನಾವು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ ಖಂಡಿತ ಥೈರಾಯ್ಡ್ ಸಮಸ್ಯೆಯನ್ನ ಕಡಿಮೆ ಮಾಡಿಕೊಳ್ಳಬಹುದು, ಉತ್ತಮ ಆರೋಗ್ಯ ಪಡೆಯಬಹುದು.
1) ಪೌಷ್ಟಿಕಾಂಶ ಆಹಾರ :
ಪ್ರೊಟೀನ್, ಐಯೋಡಿನ್, ಜಿಂಕ್, ವಿಟಮಿನ್ ಗಳಿರುವ ಆಹಾರಗಳಾದ ಸಮುದ್ರದ ಮೀನು, ಏಡಿ, ಸೀಗಡಿ, ಇವು ವಾರಕ್ಕೊಮ್ಮೆ ತಿನ್ನಬೇಕು, ಊಟದಲ್ಲಿಆದಷ್ಟು ಒಳ್ಳೆಯ ಕೊಬ್ಬರಿ ಎಣ್ಣೆ ಬಳಸುವುದು,   ಜೊತೆಗೆ ದಿನಕ್ಕೊಂದು ಮೊಟ್ಟೆ ಅದರ ಹಳದಿ ಯಲ್ಲಿ ಐಯೋಡಿನ್ ಮತ್ತು ಸೆಲೆನಿಯಮ್ ಅಂಶ ಇರುತ್ತೆ ಇದು ಥೈರಾಯ್ಡ್ ಗ್ರಂಥಿಯ ಕೆಲಸ ಚುರುಕು ಮಾಡುತ್ತೆ, ನಂತರ ಡೈರಿ ಉತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ, ಪನ್ನೀರ್, ಇವು ತಿನ್ನುವುದರಿಂದ ನಮಗೆ ಬೇಕಾದ ಪೌಷ್ಟಿಕಾಂಶ ಸಿಗುತ್ತದೆ.
2) ಪ್ರತಿದಿನ ವ್ಯಾಯಾಮ :
ದಿನಕ್ಕೆ ಕನಿಷ್ಠ 1-2 ಗಂಟೆ ವ್ಯಾಯಾಮ ಮಾಡುವುದು ರೂಡಿಯಾಗಬೇಕು.
ಇದು ನಮ್ಮ ದೇಹದ ಮೆಟಬಾಲಿಸಂ ಅನ್ನು ಸರಿಯಾದ ರೀತಿ ಕಾಪಾಡುತ್ತದೆ.
3) ಯೋಗ ಮತ್ತೆ ಧ್ಯಾನ ಮಾಡುವುದು :
ನಮ್ಮ ಮನಸ್ಸು ಚಂಚಲವಾಗಬಾರದು, ಮನಸ್ಸಿಗೆ ನೆಮ್ಮದಿ ಇರಬೇಕು ಎಂದರೆ, ದಿನಕ್ಕೆ ಕನಿಷ್ಠ 30 ನಿಮಿಷ ಪ್ರಾಣಾಯಾಮ ಮತ್ತು ಸೂರ್ಯನಮಸ್ಕಾರದಂತಹ ಧ್ಯಾನ ಮಾಡಬೇಕು. ಇದು ನಮ್ಮ ದೇಹದ ಹಾರ್ಮೋನ್ ಸಮತೋಲನವನ್ನು ಕಾಪಾಡುತ್ತದೆ.
4) ಒತ್ತಡ ನಿರ್ವಹಣೆ :
ಯಾವುದೋ ಕೆಲಸದ ಒತ್ತಡ ಅಥವಾ ಸಂಸಾರದ ಒತ್ತಡ ದಿಂದ ನಮ್ಮ ಮನಸ್ಸನ್ನು ಹಾಳುಮಾಡಿಕೊಂಡಿರುತ್ತೇವೆ, ಇದರಿಂದ ದೇಹದ ಹಾರ್ಮೋನ್ ಮೇಲೆ ಕೆಟ್ಟ ರೀತಿಯ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಧ್ಯಾನ ಮಾಡುವುದು, ಸಂಗೀತ ಕೇಳುವುದು, ಅಥವಾ ಪ್ರಕೃತಿಯ ಜೊತೆ ನಮ್ಮ ಸಮಯವನ್ನು ಕಳೆಯುವುದರಿಂದ ನಮ್ಮ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
5) ಸರಿಯಾಗಿ ನಿದ್ದೆ ಮಾಡುವುದು :
ನಾವು ದಿನಕ್ಕೆ ಕನಿಷ್ಠ 7 ಗಂಟೆ ನಿದ್ದೆ ಮಾಡುವುದು ನಮ್ಮ ದೇಹಕ್ಕೆ ಒಳ್ಳೆಯದು. ನಿದ್ದೆ ಮಾಡುವುದು ಎಂದರೆ ಯಾವುದೇ ಅಡಚಣೆ ಇಲ್ಲದೆ ನಿದ್ದೆ ಮಾಡಬೇಕು, ಆಗ ನಮ್ಮ ದೇಹದ ಹಾರ್ಮೋನ್ ಸಮತೋಲನದಲ್ಲಿರುತ್ತದೆ ಇದರಿಂದ ಥೈರಾಯ್ಡ್ ಸಮಸ್ಯೆಯೂ ಕಡಿಮೆ ಯಾಗುತ್ತದೆ.

ಥೈರಾಯ್ಡ್ ಎನ್ನುವುದು ನಮ್ಮ ದೇಹದ ಒಂದು ಸಣ್ಣ ಗ್ರಂಥಿ ಮಾತ್ರ, ಆದರೆ ಅದು ನಮ್ಮ ದೇಹದ ಅನೇಕ ಕಾರ್ಯಗಳನ್ನು ನಿಯಂತ್ರಿಸುವ ಮುಖ್ಯವಾದ ಪಾತ್ರ ವಹಿಸುತ್ತದೆ. ಆದ್ದರಿಂದ ನಮಗೆ ಇದರ ಬಗ್ಗೆ ಅರಿವು ಮತ್ತು ಜ್ಞಾನ ಇರಬೇಕು. ಮತ್ತೆ ನಾನು ಈಗಾಗಲೇ ತಿಳಿಸಿರುವ ಹಾಗೆ ಸಮತೋಲನದ ಆಹಾರ, ಮಾನಸಿಕ ಶಾಂತಿ, ವ್ಯಾಯಾಮ, ಮತ್ತೆ ಆಗಾಗ ವೈದ್ಯಕೀಯ ಪರೀಕ್ಷೆ, ಮಾಡಿಸಿಕೊಂಡು ನಮ್ಮ ಜೀವನಶೈಲಿಯನ್ನು ಸ್ವಲ್ಪ ಬದಲಿಸಿಕೊಂಡರೆ ಈ ಥೈರಾಯ್ಡ್ ಸಮಸ್ಯೆಯನ್ನು ಖಂಡಿತ ದೂರಮಾಡಬಹುದು.

2 thoughts on “ಥೈರಾಯ್ಡ್(Thyroid) ಅಂದರೆ ಏನು? ಇದು ಮಹಿಳೆಯರ ಮೇಲೆ ಯಾವ ಪರಿಣಾಮ ಬೀರುತ್ತೆ ಮತ್ತೆ ತಡೆಯುವ ನೈಸರ್ಗಿಕ ವಿಧಾನ.”

  1. Pingback: ಅಸ್ತಮಾ ಕಾಯಿಲೆ (Wheezing) : ಕಾರಣಗಳು, ಲಕ್ಷಣಗಳು, ಮತ್ತು ಗುಣಪಡಿಸುವ ನೈಸರ್ಗಿಕ ವಿಧಾನಗಳು. - learnwithmanju.in

  2. Pingback: Glowing Skin- 10 Powerfull Home Remedies for Instant Glow

Leave a Comment

Your email address will not be published. Required fields are marked *

Scroll to Top