Table of Contents
Toggleನಮ್ಮ healthy Life ಯಾವ ರೀತಿ ಇರಬೇಕು ತಿಳಿಯೋಣ
Health is wealth, ಎನ್ನುವುದು ಎಸ್ಟ್ ಸತ್ಯವೋ ಅಷ್ಟೇ ಸತ್ಯ , ಇಂದಿನ ನಮ್ಮ ಜೀವನ ಶೈಲಿ ಯಾವ ರೀತಿ ಆಗಿದೆ ಎಂದರೆ, ಕಲುಷಿತ ಆಹಾರ, ಕಲುಷಿತ ಗಾಳಿ, ಮೇಲಿನ ನೀರು ಎಲ್ಲವೂ ಕಲುಷಿತಗೊಂಡಿದೆ. ಈ ಸಮಯದಲ್ಲಿ ನಾವು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಂಡರೆ ನಮ್ಮ ಆರೋಗ್ಯವನ್ನು Healthy Life ಕಾಪಾಡಿಕೊಳ್ಳಬಹುದು ತಿಳಿಯೋಣ.
ನಮ್ಮ Healthy Life ಯಾವ ರೀತಿ ಇರಬೇಕು ಅದಕ್ಕೆ ಏನೆಲ್ಲಾ ಮಾಡಬೇಕು ತಿಳಿಯೋಣ.
1. ಸಮತೋಲನವಾದ ಪೌಷ್ಠಿಕ ಆಹಾರ ಸೇವನೆ
ಪ್ರತಿದಿನ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನಬೇಕು.
ಹೆಚ್ಚು ಅಡುಗೆ ಎಣ್ಣೆ, ಜಂಕ್ ಫುಡ್ ಮತ್ತು ಸಕ್ಕರೆ ಪದಾರ್ಥಗಳನ್ನು ಕಡಿಮೆ ಮಾಡಬೇಕು.
ಪ್ರೋಟೀನ್‌ಗಾಗಿ ಬೇಳೆ, ಮೊಟ್ಟೆ, ಹಾಲು ಮತ್ತು ಬಾದಾಮಿ ಸೇವಿಸಬಹುದು.
ಸಮಯಕ್ಕೆ ಸರಿಯಾಗಿ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.
2. ದಿನನಿತ್ಯ ತಪ್ಪದೆ ವ್ಯಾಯಾಮ ಮಾಡುವುದು ಉತ್ತಮ
ಕನಿಷ್ಠ 30 ನಿಮಿಷಗಳ ಕಾಲ ನಡೆಯುವುದು ಅಥವಾ ಲಘು ವ್ಯಾಯಾಮ ಮಾಡುವುದು ಉತ್ತಮ.
ಯೋಗ ಮತ್ತು ಪ್ರಾಣಾಯಾಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಒಳ್ಳೆಯದು.
ಹೆಚ್ಚು ಹೊತ್ತು ಕುಳಿತುಕೊಳ್ಳುವುದನ್ನು ತಪ್ಪಿಸಿ. 30 ನಿಮಿಷದ ಮೇಲೆ ಒಂದು ಬಳಿ ಕೂರಬೇಡಿ. ಎದ್ದು ಸ್ವಲ್ಪ ವಾಕಿಂಗ್ ಮಾಡಿ.
3. ಸಾಕಷ್ಟು ನೀರು ಕುಡಿಯಿರಿ
ದಿನಕ್ಕೆ ಕನಿಷ್ಠ 2-3 ಲೀಟರ್ ನೀರು ಕುಡಿಯಬೇಕು. ನಮ್ಮ ದೇಹ detoxe ಆಗಬೇಕಾದರೆ ಹೆಚ್ಚು ನೀರು ಕುಡಿಯಬೇಕು.
ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಬೆಚ್ಚಗಿನ ನೀರು ಕುಡಿಯುವುದು ಉತ್ತಮ.
ಕಾರ್ಬನೇಟೆಡ್ ಪಾನೀಯಗಳನ್ನು Soft Drinks ತಪ್ಪಿಸಿ.
4. ಸರಿಯಾದ ನಿದ್ರೆ ಮುಖ್ಯ
ಪ್ರತಿದಿನ 7-8 ಗಂಟೆಗಳ ನಿದ್ರೆ ಅಗತ್ಯ.
ಮೊಬೈಲ್ ಬಳಕೆ ಕಡಿಮೆ ಮಾಡಿ ಸಮಯಕ್ಕೆ ಮಲಗುವ ಅಭ್ಯಾಸ ಬೆಳೆಸಿಕೊಳ್ಳಿ.
ನಿದ್ರೆಯ ಕೊರತೆ ದೇಹದ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.
5. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ
ಅನಗತ್ಯ ಒತ್ತಡದಿಂದ ದೂರವಿರಿ. ನಮ್ಮ ದೇಹದ detoxe ಜೊತೆಗೆ ಡಿಜಿಟಲ್ detoxe ಮಾಡುವುದು ಮುಖ್ಯ.
ಧ್ಯಾನ ಮತ್ತು ಆಳವಾದ ಉಸಿರಾಟ ಅಭ್ಯಾಸ ಮಾಡಿ.
ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದು ಸಂತೋಷ ಹೆಚ್ಚಿಸುತ್ತದೆ.
6. ನಿಯಮಿತ ಆರೋಗ್ಯ ತಪಾಸಣೆ
Healthy Life ಗಾಗಿ ವರ್ಷಕ್ಕೆ ಕನಿಷ್ಠ ಒಂದು ಬಾರಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ.
ರಕ್ತದ ಒತ್ತಡ, ಸಕ್ಕರೆ ಮಟ್ಟ ಮತ್ತು ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
ಏನಾದರೂ ಕಾಯಿಲೆ ಕಂಡುಬಂದರೆ ತಕ್ಷಣ ಅಲೋಪಥಿ ಡಾಕ್ಟರ್ ಅನ್ನು ನೋಡುವ ಬದಲು, ಆಯುರ್ವೇದ, ಹರ್ಬಲ್ ನೈಸರ್ಗಿಕ ಚಿಕಿತ್ಸೆಗಳ ಕಡೆ ಹೆಚ್ಚು ಗಮನ ಕೊಡಿ.
ಏನಾದರೂ ಸಮಸ್ಯೆ ಗಂಭೀರ ಇದೆ ಎಂದಾದರೆ ಮಾತ್ರ ವೈದ್ಯರನ್ನು ಸಂಪರ್ಕಿಸಿ.
7. ಕೆಟ್ಟ ಅಭ್ಯಾಸಗಳನ್ನು ಬಿಡಿ
- ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ.
- ಹೆಚ್ಚು ಒತ್ತಡದ ಜೀವನಶೈಲಿಯನ್ನು ತಪ್ಪಿಸಿ.
- ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಳ್ಳಿ.
- ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಹೆಚ್ಚುವರಿ ಸಲಹೆಗಳು
- ಬೆಳಿಗ್ಗೆ ಬೇಗ ಏಳುವುದು
- ಸ್ವಚ್ಛತೆ ಕಾಪಾಡಿಕೊಳ್ಳಿ (ಮಾನಸಿಕ ಸ್ವಚ್ಛತೆ, ದೈಹಿಕ ಸ್ವಚ್ಛತೆ).
- ಸಕಾರಾತ್ಮಕ ಚಿಂತನೆ ಇಟ್ಟುಕೊಳ್ಳಿ
- ಯಾವಾಗಲು ಮನೆಯಲ್ಲೇ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ.
Lifestyle Changesfor Good Health.
ನಮ್ಮ ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳು ಒಳ್ಳೆಯ ಜೀವನ ನೀಡುತ್ತವೆ :
- ಬೆಳಿಗ್ಗೆ ಎದ್ದ ತಕ್ಷಣ ದಿನವನ್ನು ಪಾಸಿಟಿವ್ ಯೋಚನೆಗಳಿಂದ ಶುರು ಮಾಡಿ.
- ಎದ್ದು ಒಂದು ಗ್ಲಾಸ್ ನೀರು ಕುಡಿಯಿರಿ.
- ಸಾಧ್ಯವಾದರೆ ದಿನ ಬಿಟ್ಟು ದಿನ ಒಂದು ಎಳೆನೀರು ಕುಡಿಯಿರಿ ಅದು ನಿಮ್ಮ ದೇಹವನ್ನುdetox ಮಾಡಲು ಸಹಾಯ ಮಾಡುತ್ತದೆ.
- 15 ನಿಮಿಷ ಪ್ರಾಣಾಯಾಮ ಮಾಡಿ. ನಿಮ್ಮ ಬಾಡಿ ಎಷ್ಟು ಫಿಟ್ ಆಗಿರುತ್ತದೆ ನಿಮ್ಮ ಮೈಂಡ್ ಅಷ್ಟು ಚುರುಕಾಗಿರುತ್ತದೆ.
- ರಾತ್ರಿ ನೆನೆಸಿಟ್ಟ ಡ್ರೈ ಫ್ರೂಟ್ಸ್ ತಿಂದು ವ್ಯಾಯಾಮ ಶುರುಮಾಡಿ.
- 15 ನಿಮಿಷ ಜಾಗಿಂಗ್, 20 ನಿಮಿಷ ನಡೆಯುವುದು, 20 ನಿಮಿಷ ದೈಹಿಕ ವ್ಯಾಯಾಮ ಮಾಡಿ. ನೋಡಲು ಫಿಟ್ ಆಗಿದ್ದರೆ ನಿಮ್ಮ ಆತ್ಮ ವಿಶ್ವಾಸ ಜಾಸ್ತಿಯಾಗುತ್ತದೆ.
- ನಿಮ್ಮ ಆಲೋಚನೆಗಳಿಗೆ ಸರಿದೂಗುವ ಸ್ನೇಹಿತರ ಜೊತೆ ಇರಿ.
- ತಿಂಡಿಗೆ ಪ್ರೊಟೀನ್, ಕ್ಯಾಲ್ಶಿಯಂ , ತುಂಬಿದ ಆಹಾರ ತಿನ್ನಿ.
- ಅವತ್ತಿನ ದಿನವನ್ನು ಪಾಸಿಟಿವ್ ಇಂಟೆಂಟ್ ಇಂದ ಮುಗಿಸಿ.
- ರಾತ್ರಿ ಒಳ್ಳೆಯ ಪೌಷ್ಟಿಕಾಂಶ ಇರುವ ಆಹಾರ ತಿನ್ನಿ.
- ಮಲಗುವ ಮುಂಚೆ ಯಾವುದಾದರೂ ಒಂದು ಬುಕ್ ಓದಿ.
- ಯಾವುದೇ ದುಶ್ಚಟಗಳಿಗೆ ಬಲಿಯಾಗಬೇಡಿ. ನೀವು ಕೆಟ್ಟರೆ ಎಲ್ಲಾ ನೋಡಿ ನಗುವವರೇ ಒರೆತು ಯಾರು ನಿಮ್ಮನ್ನು ಮೇಲೆತ್ತಲು ಬರುವುದಿಲ್ಲ.
- ದಿನೇ ದಿನೇ ನಿಮ್ಮ ಏಳಿಗೆ ಜಾಸ್ತಿಯಾಗಲಿ.
ಇದನ್ನೂ ಓದಿ : ಭಾರತ ಸರ್ಕಾರದ ಕೆಲವು ಆರೋಗ್ಯ ಯೋಜನೆಗಳು.
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನಾವು ತಿನ್ನುವ ಆಹಾರ, ನಮ್ಮ ಸುತ್ತಮುತ್ತಲಿನ ಪರಿಸರ, ಕಲುಷಿತ ವಾತಾವರಣ, ಎಲ್ಲವೂ ಇತ್ತೀಚಿನ ದಿನಗಳಲ್ಲಿ ತುಂಬಾ ಹಾಳಾಗಿದೆ. ಆದರಿಂದ ಪ್ರತಿಯೊಂದರಲ್ಲೂ ನಾವು ಎಚ್ಚರಿಕೆಯಿಂದಿರಬೇಕು. ಮೇಲೆ ತಿಳಿಸಿರುವ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ರೀತಿಯಲ್ಲಿ ನಮ್ಮ ದೇಹದ ಬಗ್ಗೆ ಗಮನ ಕೊಟ್ಟರೆ, ನಾವು ಒಳ್ಳೆಯ ಆರೋಗ್ಯ ಪಡೆಯಲು ಸ್ಸಾಧ್ಯ.

Good contant
Thank you,
Good👍
Thanks,