Table of Contents
ToggleAll about health schemes in india and how they functions, in kannada
ನಮ್ಮ ದೇಶದಲ್ಲಿ ಸಾರ್ವಜನಿಕ ಅರೋಗ್ಯ(Public health)ಎಂಬುದು ರಾಜ್ಯ ವಿಷಯವಾಗಿದೆ, ಆದ್ದರಿಂದ ಪ್ರತಿಯೊಂದು ಆದಾಯ ಗುಂಪಿನ ರೋಗಿಗಳಿಗೆ ವೈದ್ಯಕೀಯ ನೆರವು ನೀಡುವುದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ.
ಮನುಷ್ಯನಿಗೆ ಅರೋಗ್ಯ ಎಂಬುದು ಅತ್ಯಂತ ಅಮೂಲ್ಯವಾಗಿದ್ದು, ಅದನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಂದು ಸರ್ಕಾರದ ಕರ್ತವ್ಯ ವಾಗಿದ್ದು , ಅದನ್ನು ರಾಜ್ಯಸರ್ಕಾರ ಅಲ್ಲದೆ , ಕೇಂದ್ರ ಸರ್ಕಾರವೂ ರಾಷ್ಟ್ರೀಯ ಅರೋಗ್ಯ ಮಿಷನ್ (National Health Mission) ಅಡಿಯಲ್ಲಿ ಗ್ರಾಮೀಣ (NRHM) ಹಾಗೂ ನಗರ (NUHM) ಪ್ರದೇಶಗಳಲ್ಲಿ ಈ ಮಿಷನ್ ಅಡಿಯಲ್ಲಿ ಗುಣಮಟ್ಟದ ಆರೋಗ್ಯವನ್ನು ನೀಡುವುದಕ್ಕೆ ಸಹಾಯ ಮಾಡುತ್ತದೆ.
ಈ ರಾಷ್ಟ್ರೀಯ ಅರೋಗ್ಯ ಮಿಷನ್ (National Health Mission) ಅಡಿಯಲ್ಲಿ ಪ್ರಾರಂಭಿಸಿರುವ ಯೋಜನೆಗಳು ಪ್ರತಿಯೊಂದು ಜಿಲ್ಲೆ, ಮತ್ತು ತಾಲೂಕು ಮಟ್ಟದಲ್ಲಿ ಉಚಿತವಾಗಿ ಲಭ್ಯವಿದೆ.
ರಾಷ್ಟ್ರೀಯ ಅರೋಗ್ಯ ಮಿಷನ್(National Health Mission) ಅಡಿಯಲ್ಲಿ ಸರ್ಕಾರವು ಪ್ರಾರಂಭಿಸಿರುವ ಯೋಜನೆಗಳು(Health Schemes) ಈ ಕೆಳಕಂಡಂತಿವೆ.
1) ಸಂತಾನೋತ್ಪತ್ತಿ(Reproductive), ಮಾತೃತ್ವ(Maternity), ನವಜಾತ ಶಿಶು(Newborn ), ಹದಿಹರೆಯದವರ(Adolescent), ಆರೋಗ್ಯ ಕಾರ್ಯಕ್ರಮಗಳು(Health Schemes).
- ಜನನಿ ಶಿಶು ಸುರಕ್ಷಾ ಕಾರ್ಯಕ್ರಮ(JSSK)
- ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ(RKSK)
- ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK)
Universal Immunisation Programme - ಮಿಷನ್ ಇಂದ್ರಧನುಷ್(ಲಸಿಕೆಯಿಂದ ತಡೆಗಟ್ಟಬಹುದಾದ 12 ರೋಗಗಳು)
- ಜನನಿ ಸುರಕ್ಷಾ ಯೋಜನೆ (JSY)
- ಪ್ರಧಾನ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ
- ಕುಟುಂಬ ಯೋಜನೆಗಾಗಿ ರಾಷ್ಟ್ರೀಯ ಕಾರ್ಯಕ್ರಮ
- Ayushman Bharath yojana
2)ರಾಷ್ಟ್ರೀಯ ಪೌಷ್ಟಿಕಾಂಶ(Nutrition) ಕಾರ್ಯಕ್ರಮಗಳು
- ರಾಷ್ಟ್ರೀಯ ಅಯೊಡೀನ್ ಕೊರತೆ ಅಸ್ವಸ್ಥತೆ ನಿಯಂತ್ರಣ ಕಾರ್ಯಕ್ರಮ
- ಶಿಶು ಮತ್ತು ಸಣ್ಣ ಮಕ್ಕಳಿಗೆ ಆಹಾರ ನೀಡುವ ತಾಯಂದಿರ ಸಂಪೂರ್ಣ ವಾತ್ಸಲ್ಯ ಕಾರ್ಯಕ್ರಮ (MAA)
- ಫ್ಲೋರೋಸಿಸ್ ತಡೆಗಟ್ಟಲು ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (NPPCF)
- ದೇಹದಲ್ಲಿನ ರಕ್ತಹೀನತೆ ನಿಯಂತ್ರಿಸಲು ರಾಷ್ಟ್ರೀಯ Iron Plus ಕಾರ್ಯಕ್ರಮ
3)ಹಲವು ಸಾಂಕ್ರಾಮಿಕ ರೋಗಗಳು(Communicable Diseases).
- ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ ಕಾರ್ಯಕ್ರಮ (NLEP)
- ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ (NACP)
- ಪಲ್ಸ್ ಪೋಲಿಯೊ ಕಾರ್ಯಕ್ರಮ
- ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮ
- ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ (IDSP)
- ರಾಷ್ಟ್ರೀಯ ವೈರಲ್ ಹೆಪಾಟೈಟಿಸ್ ನಿಯಂತ್ರಣ ಕಾರ್ಯಕ್ರಮ(NVHCP)
- ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮ (Tuberculosis)
- ರಾಷ್ಟ್ರೀಯ ಮಾಲಿನ್ಯ ರೋಗ ನಿಯಂತ್ರಣ ಕಾರ್ಯಕ್ರಮ
4)ಸಾಂಕ್ರಾಮಿಕವಲ್ಲದ (Non-communicable) ರೋಗಗಳ ಕಾರ್ಯಕ್ರಮಗಳು .
- ರಾಷ್ಟ್ರೀಯ ತಂಬಾಕು(Tobacco )ನಿಯಂತ್ರಣ ಕಾರ್ಯಕ್ರಮ
- ಮಧುಮೇಹ(Diabetes), ಕ್ಯಾನ್ಸರ್, ಹೃದಯಕ್ಕೆ ಸಂಬಂದಿಸಿದ ಕಾಯಿಲೆಗಳು, ಮತ್ತು
- ಪಾರ್ಶ್ವವಾಯು(Stroke), ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ
- ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ
- ಅಂದತ್ವ, ಮತ್ತು,ದೃಷ್ಟಿ ಹೀನತೆಯಾ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ
- ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮ
- ರಾಷ್ಟ್ರೀಯ ಮೌಖಿಕ ಆರೋಗ್ಯ ಕಾರ್ಯಕ್ರಮ
How we can use health schemes properly
ರಾಷ್ಟ್ರೀಯ ಅರೋಗ್ಯ ಮಿಷನ್, ಅಡಿಯಲ್ಲಿ ಕೇಂದ್ರ ಸರ್ಕಾರವು ಇನ್ನೂ ಹಲವಾರು ಉಚಿತ ಕಾರ್ಯಕ್ರಗಳನ್ನು ಜಾರಿಗೆತಂದಿದ್ದು,ಅದರಲ್ಲಿ ಪ್ರಮುಖ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಅರೋಗ್ಯ ಯೋಜನೆಗಳಿಗೆ ಬೆಂಬಲವಾಗಿ ನಿಂತಿದೆ.
National Health Mission
ಇದು ರಾಷ್ಟ್ರೀಯ ಆರೋಗ್ಯ ಮಿಷನ್ ನಮ್ಮ ದೇಶದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅರೋಗ್ಯ ಸೇವೆಗಳನ್ನು ಸುಧಾರಿಸುವುದಕ್ಕೆ ರೂಪಿಸಲಾದ ಉತ್ತಮ ಯೋಜನೆ ಯಾಗಿದೆ.
ಇದು ಯಾವರೀತಿ ಕಾರ್ಯ ನಿರ್ವಹಿಸುತ್ತದೆ ಎಂದರೆ:
ನಮ್ಮ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಅಭಿವೃದ್ಧಿ ಪಡಿಸಲಾಗುತ್ತದೆ.
ಆಸ್ಪತ್ರೆಗೆ ವೈದ್ಯರು, ನರ್ಸ್ ಗಳನ್ನ ಮತ್ತೆ ಸಿಬ್ಬಂದಿ ವರ್ಗದವರನ್ನ ನೇಮಕ ಮಾಡಲಾಗುತ್ತದೆ.
ತಾಯಿ-ಮಗು ಅರೋಗ್ಯ,ಮತ್ತು ಲಸಿಕೆ ಕಾರ್ಯಕ್ರಮ, ಪೌಷ್ಟಿಕ ಆಹಾರ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಗ್ರಾಮ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ತಲುಪಿಸಲು ಸಹಾಯ ಮಾಡುತ್ತದೆ.
ಇದರ ಒರತಾಗಿಯೂ ಹಲವಾರು ಅರೋಗ್ಯ ಕಾರ್ಯಕ್ರಮಗಳಿದ್ದು ಅದರಲ್ಲಿ ಪ್ರಮುಖವೆಂದರೆ ,
ಜನನಿ ಸುರಕ್ಷಾ ಯೋಜನೆ (ಇದರ ಅಡಿಯಲ್ಲಿ ಉಚಿತ ಔಷಧಿಗಳು,ಉಚಿತ ರೋಗ ನಿರ್ಣಯ, ಉಚಿತ ರಕ್ತ ಪರೀಕ್ಷೆ, ಪೌಷ್ಟಿಕ ಆಹಾರ, ಮನೆಯಿಂದ, ಸಂಸ್ಥೆಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮ (RBSK) ಇದು ನವಜಾತ ಶಿಶು ಮತ್ತು ಮಕ್ಕಳ ಅರೋಗ್ಯ ತಪಾಸಣೆ, ಮತ್ತು ಜನನ ದೋಷಗಳು, ನ್ಯೂನ್ಯತೆಗಳು, ಮತ್ತು ಬದುಕುಳಿಯುವ ಗುಣಮಟ್ಟವನ್ನು ಹೆಚ್ಚಿಸಲು ಹಲವಾರು ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಇದೆಲ್ಲದರ ನಡುವೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅರೋಗ್ಯ ಸೇವೆಯನ್ನು ಸುಧಾರಿಸಲು NHM ಬೆಂಬಲದೊಂದಿಗೆ, Mobile Medical Units (MMUs)ಗಳನ್ನ ಮತ್ತು ಟೆಲಿಮೆಡಿಸಿನ್ ಘಟಕಗಳನ್ನು, ಸಾರ್ವಜನಿಕ ಅರೋಗ್ಯ ಕೇಂದ್ರಗಳಲ್ಲಿ ತೆರೆಯಲಾಗಿದೆ.
ಭಾರತದಲ್ಲಿ ಜಾರಿಗೆ ತಂದಿರುವ ಈ ಪ್ರಮುಖ Health Schemes ಜನರಿಗೆ ಉತ್ತಮ ವೈದ್ಯಕೀಯ ಸೇವೆಗಳನ್ನು ನೀಡಲು ಸಹಾಯ ಮಾಡುತ್ತಿವೆ. ವಿಶೇಷವಾಗಿ ಬಡ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ಸುಲಭವಾಗಿ ಲಭ್ಯವಾಗುತ್ತಿದೆ. ಸರ್ಕಾರದ ಈ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡರೆ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಮತ್ತು ಸಮಾಜದಲ್ಲಿ ಆರೋಗ್ಯಕರ ಜೀವನಶೈಲಿಯನ್ನು ನಿರ್ಮಿಸಲು ಸಹಾಯಕವಾಗುತ್ತದೆ.
ನಮ್ಮ ಜೀವನದ ಅಮೂಲ್ಯ ಸಂಪತ್ತೆಂದರೆ ಅದು ದುಡ್ಡಲ್ಲ, ಸಂಪತ್ತಲ್ಲ ಬದಲಿಗೆ ಆರೋಗ್ಯ , ಆರೋಗ್ಯವೇ ಮಹಾ ಭಾಗ್ಯ .
ಸರ್ಕಾರ ಜಾರಿಗೊಳಿಸಿರುವ ಹಲವಾರು ಆರೋಗ್ಯ ಯೋಜನೆಗಳು ಸಾಮಾನ್ಯ ಜನರಿಗೆ ಉತ್ತಮ ಚಿಕಿತ್ಸೆಯನ್ನು ಸುಲಭವಾಗಿ, ಮತ್ತು ಕಡಿಮೆ ವೆಚ್ಚದಲ್ಲಿ ಪಡೆಯಲು ನೆರವಾಗುತ್ತಿವೆ.
ಈ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ, ಸಂಪೂರ್ಣವಾಗಿ, ವಿವರವಾಗಿ, ನನ್ನ ಮುಂಬರುವ ಲೇಖನಗಳಲ್ಲಿ ತಿಳಿಸುತ್ತೇನೆ, ನೀವೂ ಜಾಗೃತಿ ಪಡೆಯಿರಿ ಮತ್ತೆ ನಿಮ್ಮ ಕುಟುಂಬದವರನ್ನು ಜಾಗೃತಿಯಿಂದ ನೋಡಿಕೊಳ್ಳಿ.
ನಾನು ಬರೆದಿರುವ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತೆ ಬೇರೆ ಯಾವ ವಿಷಯದ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕು ಎಂದು ಕಾಮೆಂಟ್ಸ್ ರೂಪದಲ್ಲಿ ತಿಳಿಸಿ ಧನ್ಯವಾದಗಳು .
learnwithmanju.in
What are the major health issues in india
High Fever, stroke,Respiratory infections,pollution,cancer, heart disease,Diabetes
What are the most important 6 Health schemes in India
1)Pradhan mantri jan arogya yojana
2)Pradhan mantri suraksha Bhima yojana
3)Pradhan mantri jeevan jyothi bhima yojana
4)Ayushman vaya vandan yojana
5)Employees state insurence scheme
6)esanjeevini

Wonder🥰
Thank you.
Pingback: Ayushman Bharath and Janani suraksha Yojana- we should know
Pingback: Healthy Life Tips Kannada : 2026 We should follow in Life