ಬೆಳಿಗ್ಗೆಯಿಂದ ಇಲ್ಲದ ಕೆಮ್ಮು ನಾವು ರಾತ್ರಿ ಮಲಗುವ ಸಮಯಕ್ಕೆ ಸರಿಯಾಗಿ ಶುರು ಆಗಿ ನಿದ್ದೆ ಮಾಡೋಕೆ ಬಿಡೋಲ್ಲ ಈತರ ಯಾಕಾಗುತ್ತೆ ಅಂತ ನಿಮಗೆ ಗೊತ್ತಾ?
Table of Contents
Toggleಒಣ ಕೆಮ್ಮು ಮತ್ತು ಗಂಟಲು ನೋವು ಯಾಕೆ ಬರುತ್ತೆ? ಬಂದರೆ ಏನೆಲ್ಲಾ ತೊಂದರೆ.
ಒಣ ಕೆಮ್ಮು(Dry cough) ಎಂದರೆ ಕಫವಿಲ್ಲದ ಕೆಮ್ಮು. ಗಂಟಲು ನೋವು ಅಥವಾ ಸೋಂಕು(Throat infection) ಸಾಮಾನ್ಯವಾಗಿ ವೈರಸ್ ಅಥವಾ ಬ್ಯಾಕ್ಟೀರಿಯಾ ದಿಂದ ಉಂಟಾಗುತ್ತದೆ. ಕೆಮ್ಮು ಮತ್ತು ಗಂಟಲು ನೋವು ಯಾವ ಸಮಯದಲ್ಲಿ ಬೇಕಾದ್ರು ಬರುತ್ತೆ. ಆದರೆ ಕೆಲವರಿಗೆ ಮಾತ್ರ ವಿಶೇಷವಾಗಿ ಈ ಒಣ ಕೆಮ್ಮು ಎನ್ನುವುದು ರಾತ್ರಿ ಮಲಗಲು ಹೋದ ತಕ್ಷಣ ಶುರು ಆಗತ್ತೆ, ದಿನಪೂರ್ತಿ ಎಲ್ಲಾ ನಾರ್ಮಲ್ ಆಗಿಯೇ ಇರುತ್ತೆ ಆದ್ರೆ ಮಲಗಿದ ತಕ್ಷಣ ಗಂಟಲು ಏನೋ ಒಂತರ ಕಿರಿಕಿರಿ, ಮತ್ತೆ ಬಿಡದಂತೆ ಕೆಮ್ಮು ಶುರು ಆಗತ್ತೆ. ಇದು ನಮಗೆ ನಿದ್ದೆಗೆ ತುಂಬಾ ತೊಂದರೆ ಆಗತ್ತೆ, ಮತ್ತೆ ಬೆಳಿಗ್ಗೆ ಬೇಗ ಎದ್ದು ರೆಡಿ ಆಗೋದಕ್ಕೂ ಆಗೋದಿಲ್ಲ, ಸುಸ್ತು, ಏನೋ ಆಲಸ್ಯ, ಇದು ನಮ್ಮ ದಿನನಿತ್ಯದ ಕೆಲಸಗಳಿಗೆ ತುಂಬಾ ತೊಂದರೆ ಉಂಟು ಮಾಡುತ್ತೆ. ಈ ರೀತಿ ಒಣ ಕೆಮ್ಮು ಯಾಕೆ ಬರುತ್ತೆ, ಅದರಿಂದ ಏನೆಲ್ಲಾ ತೊಂದರೆ ಮತ್ತೆ ಅದನ್ನ ಯಾವ ರೀತಿ ಪರಿಹರಿಸಬೇಕು ಅಂತ ತಿಳಿಯೋಣ.
ಈ ರೀತಿ ಒಣ ಕೆಮ್ಮು ರಾತ್ರಿಯೇ ಯಾಕೆ ಬರುತ್ತೆ?
ನಮ್ಮ ಮೂಗಿನಲ್ಲಿ ಸೈನಸ್ ಅಂತ ಒಂದು ಲಿಕ್ವಿಡ್ ಅಂಶ ಇರುತ್ತೆ. ಅದು ನಾವು ಮಲಗಿದಾಗ ಮೂಗಿನಿಂದ ಗಂಟಲಿನ ಹಿಂಬಾಗಕ್ಕೆ ಹರಿಯುತ್ತೆ, ಆ ರೀತಿ ಹರಿಯುವುದರಿಂದ ಗಂಟಲು ಒಣಗಿದಂತೆ ಆಗಿ ಕೆಮ್ಮು ಶುರು ಆಗತ್ತೆ. ನಾವು ನಾರ್ಮಲ್ ಆಗಿ ಓಡಾಡುವಾಗ ದೇಹ ನೇರ ಇರುತ್ತೆ, ಆದರೆ ಮಲಗಿದಾಗ ಚಪ್ಪಟೆ ಆಕಾರಕ್ಕೆ ಬರುವುದರಿಂದ ಈ ಲೋಳೆ ರೀತಿ ಲಿಕ್ವಿಡ್ ಗಂಟಲಿಗೆ ಸುಲಭವಾಗಿ ಹೋಗಿ ಕೆಮ್ಮು ಬರುತ್ತೆ, ಇದನ್ನು ಬಿಟ್ಟು, ನಾವು ಮಲಗುವ ರೂಮಿನಲ್ಲಿ ಸ್ವಲ್ಪ ಪ್ರಮಾಣದ ದೂಳು ಮತ್ತೆ ಒಣ ಗಾಳಿ ಬಂದು ಗಂಟಲಿಗೆ ತುರಿಕೆ ಜಾಸ್ತಿ ಮಾಡಿ ಕೆಮ್ಮು ಜಾಸ್ತಿ ಆಗತ್ತೆ.
ಮತ್ತೊಂದು ಪ್ರಮುಖ ಕಾರಣ ನೋಡೋದಾದರೆ, ಗಂಟಲಲ್ಲಿ ಏನಾದರೂ ಅಲರ್ಜಿ ಆಗಿದ್ದರೆ ಕೆಮ್ಮು ತಾನಾಗಿಯೇ ಬರುತ್ತದೆ. ನಮ್ಮ ಹೊಟ್ಟೆಯಲ್ಲಿರುವ ಗ್ಯಾಸ್ ನಾವು ಮಲಗಿದಾಗ ನಿದಾನವಾಗಿ ಮೇಲೆ ಬಂದು ಗಂಟಲನ್ನು ಪ್ರವೇಶಿಸಿ ಅಲ್ಲಿ ಒಂದು ರೀತಿಯ ಆಸಿಡ್ ರಿಫ್ಲೆಕ್ಸ್ ಆಗಿ ಕಿರಿಕಿರಿ ಉಂಟುಮಾಡುತ್ತೆ. ಮತ್ತೆ ರಾತ್ರಿ ಬರುವ ತಂಪಾದ ಗಾಳಿ ನಮ್ಮ ಮೂಗಿನ ಮೂಲಕ ಗಂಟಲು ಸೇರುತ್ತೆ, ಆದರೆ ನಾವು ಎಚ್ಚರ ಇದ್ದಾಗ ಉಸಿರಾಡುವ ರೀತಿ ಮಲಗಿದಾಗ ಉಸಿರಾಡಲು ಆಗದೆ ಇರುವ ಕಾರಣ, ಕೆಲವೊಂದು ದೂಳಿನ ರೀತಿಯ ಕಣಗಳು ಗಂಟಲಿನಲ್ಲಿಯೇ ಉಳಿದು, ಅತಿಯಾದ ಕೆಮ್ಮು ಶುರು ಆಗುತ್ತದೆ.
ಕೆಮ್ಮು ಮತ್ತು ಗಂಟಲು ನೋವಿನ ಪ್ರಮುಖ ಲಕ್ಷಣಗಳು:
ಒಣ ಕೆಮ್ಮು ಮತ್ತು ಗಂಟಲು ನೋವು ಆರಂಭ ಆಗುವುದಕ್ಕಿಂತ ಮೊದಲು ಕೆಲವೊಂದು ಲಕ್ಷಣಗಳು ಬರುತ್ತವೆ ಅವುಗಳೆಂದರೆ.
- ಮಾತನಾಡಲು ಶುರು ಮಾಡಿದರೆ ಒಣ ಕೆಮ್ಮು ಬರುತ್ತಿರುವುದು.
- ಗಂಟಲಿನಲ್ಲಿ ಉರಿ, ಏನೋ ನಸ ನಸ ಅನ್ನುವ ಅನುಭವ.
- ಎಂಜಲು ನುಂಗುವಾಗ ನೋವು.
- ಗಂಟಲು ಒಣಗುವ ಅನುಭವ.
- ನಾವು ಮಾತನಾಡುವಾಗ ಧ್ವನಿ ಬದಲಾವಣೆ.
- ದೇಹ ಸ್ವಲ್ಪ ಸುಸ್ತು, ಜ್ವರ ಬರುವ ಅನುಭವ.
ಗಂಟಲು ನೋವು ಮತ್ತು ಒಣ ಕೆಮ್ಮಿಗೆ ಪ್ರಮುಖ ಕಾರಣಗಳನ್ನ ನೋಡೋಣ.
- ಹವಾಮಾನದಲ್ಲಿ ಬದಲಾವಣೆ :
ಪ್ರಮುಖವಾಗಿ ಚಳಿಗಾಲ ಇಲ್ಲ ಮಳೆಗಾಲದಲ್ಲಿ ವಾತಾವರಣದಲ್ಲಿ ಹಲವಾರು ಬದಲಾವಣೆಗಳಾಗಿ ಅದು ನಮ್ಮ ದೇಹದ ಉಷ್ಣತೆಯ ಮೇಲೆ ಪರಿಣಾಮ ಬೀರಿ ಕೆಮ್ಮು, ಶೀತ, ಗಂಟಲಲ್ಲಿ ನೋವು ಶುರು ಆಗುತ್ತೆ. - ದೂಳು ಮತ್ತೆ ಮಾಲಿನಿದಿಂದ :
ಮನೆಯಲ್ಲಿ ಸ್ವಚ್ಛ ಮಾಡದೆ ಬಿಟ್ಟಾಗ ದೂಳು ಹಾಗೆ ಇರುತ್ತದೆ, ಯಾವಾಗಲಾದರೂ ಒಂದು ಸರಿ ಸ್ವಚ್ಛ ಮಾಡೋಕೆ ಹೋದಾಗ ನಮ್ಮ ಮೇಲೆ ದೂಳು ಅಟ್ಯಾಕ್ ಮಾಡುತ್ತೆ, ಅದು ಬಿಟ್ರೆ ಇನ್ನು ವಾಯು ಮಾಲಿನ್ಯ ಅದ್ರಿಂದ ಉಂಟಾಗುವ ರೋಗಗಳು ಒಂದಲ್ಲ ಎರಡಲ್ಲ, ಪ್ರಮುಖವಾಗಿ ಮಾಲಿನ್ಯ ನಾವು ಮೂಗಿನ ಸಹಾಯದಿಂದ ಗಾಳಿ ತಗೋಳೋದ್ರಿಂದ ನೇರವಾಗಿ ನಮ್ಮ ಶ್ವಾಸ ಕೋಶಗಳನ್ನ ಮತ್ತೆ ನಮ್ಮ ಉಸಿರಾಟವನ್ನ ಆಳು ಮಾಡುತ್ತೆ ಅದರಿಂದ ಗಂಟಲು ಆಳಾಗುತ್ತದೆ. - ವೈರಸ್ ಮತ್ತೆ ಬ್ಯಾಕ್ಟೀರಿಯಾ :
ಈ ವೈರಸ್ ಮತ್ತೆ ಬ್ಯಾಕ್ಟೀರಿಯಾದಿಂದ ಹಲವಾರು ಕಾಯಿಲೆಗಳು ಬರುತ್ತೆ, ಅದರಲ್ಲಿ ಮುಖ್ಯವಾಗಿ ಕೆಮ್ಮು ಮತ್ತು ಗಂಟಲಿನ ಸೋಂಕು. - ಅಲರ್ಜಿ :
ಕೆಲವರಿಗೆ ಈ ಹೂವಿನಿಂದ (ಮಲ್ಲಿಗೆ, ಸಂಪಿಗೆ) ಬರುವ ಸುವಾಸನೆ ತಲೆ ನೋವು ಮತ್ತೆ ಗಂಟಲು ಸೋಂಕಿಗೆ ಕಾರಣವಾಗುತ್ತೆ, ಅಡ್ಡೆ ರೀತಿ ಕೆಲವು ಪ್ರಾಣಿಗಳ ಕೊದಲು, ಕೆಲವೊಂದು ರೋಡ ಸೈಡ್ ಸಿಗುವ ಆಹಾರ ಪದಾರ್ಥಗಳಿಂದ ಅಲರ್ಜಿ ಉಂಟಾಗಿ ಕೆಮ್ಮು ಮತ್ತು ಗಂಟಲು ನೋವು ಬರುತ್ತೆ. - ತಣ್ಣಗಿರುವ ಪದಾರ್ಥಗಳ ಸೇವನೆ :
ಕೆಲವರಿಗೆ ಈ ಫ್ರಿಡ್ಜ್ ನಲ್ಲಿ ಇಟ್ಟಿರುವ ಪದಾರ್ಥಗಳನ್ನು ತಿಂದ ತಕ್ಷಣ ಶೀತ ಮತ್ತೆ ಕೆಮ್ಮು ಶುರು ಆಗುತ್ತೆ, ಮತ್ತೆ ಕೆಲವರಿಗೆ ಅದು ತಕ್ಷಣಕ್ಕೆ ಯಾವುದೇ ಪರಿಣಾಮ ಉಂಟು ಮಾಡದಿದ್ದರೂ ನಂತರದ ಸಮಯದಲ್ಲಿ ಹೆಚ್ಚು ಗಂಟಲು ನೋವು ಮತ್ತೆ ಕೆಮ್ಮು ಶುರು ಆಗುತ್ತೆ.
ಈ ಎಲ್ಲಾ ಕಾರಣಗಳಿಂದ ನಮಗೆ ಗಂಟಲು ನೋವು ಮತ್ತೆ ಕೆಮ್ಮು ಬರುತ್ತದೆ.
ಕೆಮ್ಮು ಮತ್ತು ಗಂಟಲು ನೋವಿಗೆ ಮನೆ ಮದ್ದುಗಳು
1) ಲವಂಗ ಮತ್ತೆ ಜೇನುತುಪ್ಪ :
ಜೇನುತುಪ್ಪದಲ್ಲಿ ಆಂಟಿ ಅಲರ್ಜಿಕ್, ಮತ್ತು ಆಂಟಿ ಬ್ಯಾಕ್ಟೇರಿಯಲ್ ಅಂಶವಿದ್ದು ಇದು ನಮ್ಮ ಗಂಟಲಿಗೆ ಉಂಟಾಗುವ ಸೋಂಕುಗಳನ್ನ ತಡೆಯಲು ಸಹಾಯ ಮಾಡುತ್ತದೆ, ಹಾಗೆಯೆ ಇದಕ್ಕೆ ಲವಂಗ ಮಿಶ್ರಣ ಮಾಡೋದ್ರಿಂದ ಕೆಮ್ಮು ಬರುವುದನ್ನ ತಡೆಯುತ್ತದೆ.
2) ಬಿಸಿನೀರು ಕುಡಿಯುವುದು :
ಕೆಮ್ಮು ಮತ್ತು ಗಂಟಲು ನೋವು ಬಂದಾಗ ಇದು ಎಲ್ಲರೂ ಸಾಮಾನ್ಯವಾಗಿ ಮಾಡುವ ಪದ್ಧತಿ ಇದೆ. ಆದರೆ ನಮಗೆ ಗೊತ್ತಿರಬೇಕಾದ ಅಂಶ ಏನಂದರೆ, ಒಂದು ಸರಿ ಬಿಸಿ ಮಾಡಿದ ನೀರನ್ನ ಮತ್ತೆ ಕಾಯಿಸಿ ಕುಡಿಯಬಾರದು. ಪದೇ ಪದೇ ಕಾಯಿಸಿದ ನೀರನ್ನೇ ಮತ್ತೆ ಕಾಯಿಸುವುದರಿಂದ ಅದರಲ್ಲಿರುವು ಸತ್ವ ಕಳೆದುಕೊಳ್ಳುತ್ತದೆ( ನೀರಿನಲ್ಲಿರುವ ಮಿನರಲ್ಸ್ ನಾಶ ಆಗುತ್ತವೆ ).
3) ಶುಂಠಿ ಕಷಾಯ ಕುಡಿಯುವುದು :
ಶುಂಠಿಯಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶ ಜಾಸ್ತಿ ಇರುವುದರಿಂದ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಅದರಲ್ಯ್ ಗಂಟಲಲ್ಲಿ ಸೋಂಕಿನ ಲಕ್ಷಣಗಳು ಜಾಸ್ತಿ ಇದ್ದಾಗ ಶುಂಠಿಯು ರಾಮಬಾಣದ ರೀತಿಯಲ್ಲಿ ಕೆಲಸ ಮಾಡುತ್ತದೆ.
ಇದನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಕುಡಿಯಬೇಕು, ಇಲ್ಲವೇ ಕಾಫಿ , ಇಲ್ಲ ಟೀ ನಲ್ಲಿ ಮಿಕ್ಸ್ ಮಾಡಿ ಕುಡಿಯಬಹುದು.
4) ಉಪ್ಪು ನೀರಿನಿಂದ ಗಂಟಲಿನ ಸ್ವಚ್ಛತೆ :
ನೀರನ್ನು ಉಗುರು ಬೆಚ್ಚಗೆ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ ನೀರನ್ನು ಗಂಟಲಿನ ತನಕ ಹಾಕಿಕೊಂಡು ಗಾರ್ಗಲಿಂಗ್ ಮಾಡಿದರೆ ಗಂಟಲಿನಲ್ಲಿರುವ ಸೋಂಕು ಕಡಿಮೆ ಆಗುತ್ತದೆ. ಇದು ದಿನಕ್ಕೆ ಕನಿಷ್ಠ 3-4 ಬಾರಿ ಮಾಡಬೇಕು.
5) ಅರಿಶಿನ ಹಾಲು :
ಹರಿಶಿಣದಲ್ಲಿ ಆಂಟಿ ಆಕ್ಸಿಡೆಂಟ್, ಸೋಂಕು ತಡೆಗಟ್ಟುವ ಶಕ್ತಿ ಇರುವುದರಿಂದ, ರಾತ್ರಿ ಮಲಗುವಾಗ ಹಾಲಿಗೆ ಹರಿಶಿಣವನ್ನು ಸೇರಿಸಿ ಕುಡಿಯಬೇಕು, ಇದರಿಂದ ಗಂಟಲಿನ ಸೋಂಕು ಕಡಿಮೆಯಾಗಿ ಕೆಮ್ಮು ಕಡಿಮೆಯಾಗುತ್ತದೆ.
6) ತುಳಸಿ ಎಲೆ :
ತುಳಸಿಯು ನಮ್ಮ ಪ್ರಕೃತಿಯ ಔಷಧಿಯಂತೆ ಕೆಲಸ ಮಾಡುವುದರಿಂದ, ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಾವು ದಿನಕ್ಕೊಂದು ತುಳಸಿ ಎಲೆಯನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಬೇಡವಾದ ಕಲ್ಮಶ ಹೊರ ಹಾಕುವುದರಲ್ಲಿ ತುಳಸಿ ತುಂಬಾ ಉಪಯುಕ್ತಕಾರಿ, ಗಂಟಲು ನೋವು ಮತ್ತೆ ಕೆಮ್ಮಿಗೆ, ತುಳಸಿ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿದರೆ ತುಂಬಾ ಒಳ್ಳೆಯದು.
7) ನೀರನ್ನು ಆವಿ ತೆಗೆದುಕೊಳ್ಳುವುದು :
ನೀರನ್ನು ಚನ್ನಾಗಿ ಕಾಯಿಸಿ ಅದರಿಂದ ಬರುವ ಆವಿಯನ್ನು ದಿನಕ್ಕೆ 2-3 ಬಾರಿ ತೆಗೆದುಕೊಳ್ಳುವುದರಿಂದ ನಮ್ಮ ಗಂಟಲು ಸಮಸ್ಯೆ ಕಡಿಮೆಯಾಗುತ್ತದೆ, ಮತ್ತೆ ಶೀತ, ಕೆಮ್ಮು ಕಡಿಮೆಯಾಗುವುದಕ್ಕೆ ಸಹಕರಿಸುತ್ತದೆ.
8) ಮೆಣಸು ಮತ್ತು ಜೇನುತುಪ್ಪ :
ಕಪ್ಪು ಮೆಣಸನ್ನು ಪುಡಿ ಮಾಡಿ ಅದನ್ನು ಜೇನು ತುಪ್ಪದೊಂದಿಗೆ ಮಿಕ್ಸ್ ಮಾಡಿ ತುನ್ನುವುದರಿಂದ ಇದು ಕೆಮ್ಮು ಮತ್ತು ಗಂಟಲು ನೋವು ನಿವಾರಣೆ ಆಗಲು ಸಹಕರಿಸುತ್ತದೆ.
9) ನಿಂಬೆ ರಸ :
ನಿಂಬೆಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿರುವುದರಿಂದ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆದ್ದರಿಂದ ನಮ್ಮಲ್ಲಿರುವ ಸೋಂಕು ನಿವಾರಣೆಗೆ ನಿಂಬೆ ರಸ ದಿನಕ್ಕೆ 2 ಬಾರಿ ಕುಡಿಯುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.
10) ಬೆಳ್ಳುಳ್ಳಿ ಸೇವನೆ :
ಬೆಳ್ಳುಳ್ಳಿಯಲ್ಲಿ ಕೆಲವೊಂದು ಸೋಂಕು ನಿವಾರಣೆ ಮಾಡುವ ಗುಣಗಳಿವೆ, ಆದ್ದರಿಂದ ಬೆಳ್ಳುಳ್ಳಿಯನ್ನು ಸ್ವಲ್ಪ ಬೇಯಿಸಿ ತಿನ್ನುವುದರಿಂದ ಮತ್ತು ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಕೆಮ್ಮು ಕಡಿಮೆ ಯಾಗುತ್ತದೆ.
ಆರೋಗ್ಯ ಎನ್ನುವುದು ಮನುಷ್ಯನಿಗೆ ಇರುವ ವರಧಾನ, ನಾವು ಎಷ್ಟು ಎಚ್ಚರಿಕೆಯಿಂದ ನಮ್ಮ ದೇಹವನ್ನು ಗಮನಿಸುತ್ತೇವೆಯೋ ಅಷ್ಟೇ ಆರೋಗ್ಯವಂತರಾಗಿ ಇರುತ್ತೇವೆ. ನಾನು ಮೇಲೆ ತಿಳಿಸಿರುವ ಎಲ್ಲಾ ನೈಸರ್ಗಿಕ ಮನೆ ಮದ್ದುಗಳು ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ನಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಆದ್ದರಿಂದ ಎಲ್ಲರೂ ಆರೋಗ್ಯವಂತರಾಗಿರಿ ಮತ್ತು ಎಚ್ಚರದಿಂದಿರಿ.

Pingback: Tetanus ಮತ್ತು diphtheria 2 ಕಾಯಿಲೆಗಳಿಗೆ ಸ್ವದೇಶೀ ವ್ಯಾಕ್ಸೀನ್
Pingback: ನೆಗಡಿ ಮತ್ತೆ ಕೆಮ್ಮು Winter Dangerous - 10 Home Remedies Tips