10 Ways to Maintain Our Teeths Healthy in kannada

Spread the love
Healthy Teeths

ನಮ್ಮ ಹಲ್ಲಿನ (Teeth) ಆರೋಗ್ಯವನ್ನು ಕಾಪಾಡಿಕೊಳ್ಳಲು, ನಾವು ಅನುಸರಿಸಬೇಕಾದ ಮಾರ್ಗಗಳನ್ನ ನೋಡೋಣ.

ನಮ್ಮ ದೇಹದ ಅರೋಗ್ಯ ಮುಖ್ಯವಾಗಿ ನಮ್ಮ ಹಲ್ಲಿನ ಆರೋಗ್ಯದ ಮೇಲೆಯೇ ನಿಂತಿದೆ ಎಂದರೆ ತಪ್ಪಾಗುವುದಿಲ್ಲ.
ಯಾಕೆಂದರೆ ನಾವು ತಿನ್ನುವ ಆಹಾರವನ್ನ ಸರಿಯಾದ ರೀತಿಯಲ್ಲಿ ಅಗಿಯಲು ಮತ್ತೆ ಜೀರ್ಣಕ್ರಿಯೆ ಸುಗಮವಾಗಿ ಆಗಲು ಹಲ್ಲುಗಳು ಮುಖ್ಯ ಪಾತ್ರ ವಹಿಸುತ್ತವೆ. ಆದರೆ ನಮ್ಮ ಈಗಿನ ವೇಗದ ಜೀವನ ಶೈಲಿಯಲ್ಲಿ ಹಲ್ಲುಗಳ ಆರೈಕೆ ಸರಿಯಾಗಿ ಮಾಡದಿರುವ ಕಾರಣ ಮತ್ತೆ ಇನ್ನು ಹಲವಾರು ಕಾರಣಗಳಿಂದ ಹಲ್ಲುಗಳ ಆರೋಗ್ಯ (teeth health) ಹದಗೆಡುತ್ತಿದೆ.

2018 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಸರ್ವೇ ವರದಿಯ ಪ್ರಕಾರ (Australian report in 2018) ಶೇಕಡಾ 90% ಯುವ ಜನ ಒಂದಲ್ಲಾ ಒಂದು ಹಲ್ಲುಗಳ ಸಮಸ್ಯೆಯಿಂದ Teeth decay ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮಧ್ಯಪಾನ ಮತ್ತು ಧೂಮಪಾನ ಎಂದು ತಿಳಿದು ಬಂದಿದೆ.
ನಾವು ಹಲ್ಲುಗಳ ಆರೋಗ್ಯವನ್ನ ಕಡೆಗಣಿಸಿದರೆ ಇದರಿಂದ ಮುಂದೆ ದೊಡ್ಡ ದೊಡ್ಡ ಅರೋಗ್ಯ ಸಮಸ್ಯೆಗಳಾದ ಮರೆವು ಸಮಸ್ಯೆ, ಹೃದಯ ಸಂಬಂದಿಸಿದ ಸಮಸ್ಯೆಗಳು, ಬರುವುದಕ್ಕೆ ಕಾರಣವಾಗುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ನಮ್ಮ ಹಲ್ಲುಗಳನ್ನು ಸ್ವಚ್ಛತೆಯಿಂದ ನೋಡಿಕೊಳ್ಳಬೇಕು, ಆಗ ಮಾತ್ರ ನಮ್ಮ ಆರೋಗ್ಯ ಚನ್ನಾಗಿರುತ್ತದೆ.

ನಮ್ಮ ಹಲ್ಲಿನ ಪ್ರಮುಖ ಸಮಸ್ಯೆಗಳನ್ನು ನೋಡೋಣ(Major teeth problems) .

 ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ಅಜ್ಜ ಅಜ್ಜಿ ಯ ತನಕ ಹಲವಾರು ಹಲ್ಲಿನ ಸಮಸ್ಯೆಗಳು ಕಂಡುಬರುತ್ತಿವೆ. ಅದಕ್ಕೆ ಹಲ್ಲಿನ ಆರೋಗ್ಯ  ಕಾಪಾಡಿಕೊಳದಿದ್ದರೆ ಈ ಕೆಳಗಿನ ಸಮಸ್ಯೆಗಳು ಉಂಟಾಗುತ್ತವೆ.
1) ಹಲ್ಲುಕುಳಿ ಅಥವಾ ಉಳುಕು ಹಲ್ಲು (Teeth decay or cavity)

ಇದು ಇತ್ತೀಚಿನ ದಿನಗಳಲ್ಲಿ ತುಂಬಾ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ. ಉಳುಕು ಹಲ್ಲು ಸಾಮಾನ್ಯವಾಗಿ ಸಕ್ಕರೆ ಅಂಶ ಹೆಚ್ಚು ಇರುವ ಪದಾರ್ಥಗಳನ್ನ(ಚಾಕೊಲೇಟ್, ಬಿಸ್ಕೆಟ್ಸ್, ಕ್ಯಾಂಡಿ, ಇತ್ಯಾದಿ) ತಿಂದು ನಾವು ಸರಿಯಾಗಿ ಬಾಯಿಯನ್ನ ಸ್ವಚ್ಛ ಮಾಡದೇ ಬಿಟ್ಟಾಗ ನಮ್ಮ ಬಾಯಿಯಲ್ಲಿ ಬ್ಯಾಕ್ಟೀರಿಯಾ ಹೆಚ್ಚಾಗಿ, ಮತ್ತು ಬಾಯಿಯಲ್ಲಿ ಸರಿಯಾಗಿ ಸಲೈವಾ ಉತ್ಪತ್ತಿ ಕಡಿಮೆಯಾದಾಗಲೂ ಹಲ್ಲುಗಳು ಕೊಳೆಯಲು ಶುರುವಾಗುತ್ತವೆ.

2) ಹಲ್ಲಿನ ನೋವು(Theeth pain).

ಹಲ್ಲಿನ ಒಳ ಭಾಗದಲ್ಲಿ ಸಾಮಾನ್ಯವಾಗಿ ಸೋಂಕು (infection) ಉಂಟಾದಾಗ ಹಲ್ಲು ಜಾಸ್ತಿ ನೋವಲು ಶುರುವಾಗುತ್ತದೆ. ಇದು ಹಲ್ಲಿನ ಆರೋಗ್ಯ ಸಮಸ್ಯೆ ಇರುವುದನ್ನವು ತಿಳಿಸುತ್ತದೆ.

3) ದವಡೆಯಲ್ಲಿ ರಕ್ತಸ್ರಾವ (gum bleeding).
ನಾವು ಬೆಳಿಗ್ಗೆ ಬ್ರಷ್ ಮಾಡುವಾಗ ದವಡೆಯಿಂದ ರಕ್ತ ಆಚೆ ಬರುತ್ತದೆ, ಇದು ನಮ್ಮ ದವಡೆ ಗಮ್ ಸೋಂಕಿನ ಲಕ್ಷಣವಾಗಿದೆ.

4) ಬಾಯಿಯ ದುರ್ವಾಸನೆ(Bad breath).
ನಮ್ಮ ಬಾಯಿಯಲ್ಲಿ ಸೋಂಕು(infection) ಜಾಸ್ತಿ ಆದಾಗ ಮತ್ತೆ ನಾಲಿಗೆ ಹಾಗೂ ಹಲ್ಲನ್ನು ಸರಿಯಾಗಿ ಕ್ಲೀನ್ ಮಾಡದಿದ್ದಾಗ ಬಾಯಿಯಿಂದ ದುರ್ವಾಸನೆ ಬರುತ್ತದೆ (ಜೋಕ್ : ನಮಗೆ ನಮ್ಮ ಬಾಯಿ ದುರ್ವಾಸನೆ ಬರ್ತಿದೆ ಅಂತ ಯಾವತ್ತೂ ಗೊತ್ತಾಗುವುದೇ ಇಲ್ಲ, ಪಕ್ಕದಲ್ಲಿರುವವರಿಗೆ ಮಾತ್ರ ನಮ್ಮ ದುರ್ವಾಸನೆ ಗೊತ್ತಾಗುತ್ತದೆ).
5) ಹಲ್ಲು ದುರ್ಬಲವಾಗಿರುವುದು(Weak teeth).
ಹೆಚ್ಚಾಗಿ ಬಿಸಿ ಪದಾರ್ಥಗಳನ್ನ ತಿನ್ನುವುದು, ಆಹಾರದಲ್ಲಿ ಸರಿಯಾದ ಕ್ಯಾಲ್ಶಿಯಂ ಪದಾರ್ಥಗಳನ್ನ ತಿನ್ನದೇ ಇರುವುದು, ಹಲ್ಲಿನ ಎನಾಮಲ್ teeths enamal  ಕಡಿಮೆಯಾಗಿರುವುದು ಹಲ್ಲು ದುರ್ಬಲವಾಗಿರುವುದಕ್ಕೆ ಮುಖ್ಯ ಕಾರಣ.

6) ಹಲ್ಲಿನ ಹಳದಿ ಕರೆ (stained teeth)
ಇದಕ್ಕೆ ಮುಖ್ಯ ಕಾರಣ ಹೆಚ್ಚಾಗಿ ಕಾಫಿ ,ಟೀ, ಎಲೆ ಅಡಿಕೆ ,ಕಡ್ಡಿಪುಡಿ, ತಂಬಾಕು, ಹಾಕುವುದು, ಇನ್ನೂ ಹಲವು ಪ್ರದೇಶಗಳಲ್ಲಿ ಪ್ಲೂರೈಡ್ ಕಡಿಮೆ ಇರುವ ನೀರಿನ ಅತಿಯಾದ ಬಳಕೆ ಮಾಡುವುದರಿಂದ ಹಲ್ಲಿನ ಮೇಲೆ ಹಳದಿ ಕರೆಗಳು ಬರುತ್ತವೆ.
7) ಹಲ್ಲು ಮುರಿತ(Teeth fracture)
ಇದು ಸರ್ವೆ ಸಾಮಾನ್ಯವಾಗಿ ನೋಡುವ ಹಲ್ಲಿನ ಸಮಸ್ಯೆ, ಗಾಡಿಯಿಂದ ಬಿದ್ದು, ಅಥವಾ ಗಟ್ಟಿ ಪದಾರ್ಥಗಳನ್ನು ತಿನ್ನಲು ಹೋಗಿ, ಹಲ್ಲು ಮುರಿದಿರುತ್ತದೆ. ನಮ್ಮ ಮುಖದ ಅಂದವನ್ನೇ ಅದು ಬದಲಿಸುತ್ತದೆ.
8)ಬುದ್ದಿವಂತಿಕೆ ಹಲ್ಲು (Wisdom teeth)
ಇವು ಸಾಮಾನ್ಯವಾಗಿ ಎಲ್ಲಾ ಹಲ್ಲುಗಳ ಕೊನೆಯ ಬಾಗದಲ್ಲಿ ಕಾಣಿಸುತ್ತವೆ. ಆದರೆ ಇವು ನಿದಾನವಾಗಿ ಬೆಳೆಯುತ್ತಿರುವಾಗ ಅತಿಯಾದ ನೋವು ಉಂಟು ಮಾಡುತ್ತವೆ.

ಈ ಎಲ್ಲಾ ಸಮಸ್ಯೆಗಳನ್ನ ನಾವು ಪ್ರಾರಂಭದಲ್ಲೇ ಗಮನಿಸಿಕೊಂಡರೆ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು ಮತ್ತೆ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಬಹುದು.

wisdom teeth

ನಮ್ಮ ಹಲ್ಲಿನ ಆರೋಗ್ಯವನ್ನು ಗುಣಪಡಿಸಿಕೊಳ್ಳಲು 8 ಸುಲಭ ಮಾರ್ಗಗಳು(8 easy ways to improve our Teeth health).

1) ದಿನಕ್ಕೆ 2 ಸರಿ ಬ್ರೆಷ್ ಮಾಡುವುದು(Brush twice a day):
ಹಲ್ಲುಗಳು ಆರೋಗ್ಯವಾಗಿರಲು ನಾವು ತಪ್ಪದೆ ದಿನಾಲು ಎರಡು ಸರಿ ಹಲ್ಲುಜ್ಜುವುದು ಮುಖ್ಯ, ಬೆಳಿಗ್ಗೆ ಮತ್ತೆ ರಾತ್ರಿ ಮಲಗುವ ಮುಂಚೆ.(ನಮ್ಮಲ್ಲೇ ಕೆಲವರು ಅಂದು ಕೊಳ್ಳುತ್ತಾರೆ, ಒಂದು ಸಾರಿ ಉಜ್ಜುವುದೇ ಕಷ್ಟ ಅದರಲ್ಲಿ ಎರಡು ಸಾರಿ ಉಜ್ಜಬೇಕಂತೆ ಎಂದು).
2)ಹೆಚ್ಚಾಗಿ ನೀರು ಕುಡಿಯುವುದು:
ನಾವು ಹೆಚ್ಚಾಗಿ ನೀರು ಕುಡಿಯುವುದರಿಂದ ಬಾಯಿಯಲ್ಲಿನ ಬ್ಯಾಕ್ಟೀರಿಯಾ ಕಡಿಮೆ ಆಗಿ ಬಾಯಿ ಆರೋಗ್ಯವಾಗಿರುತ್ತದೆ.
3) ಸಕ್ಕರೆ ಪದಾರ್ಥ ಕಡಿಮೆ ಬಳಸುವುದು:
ಸಿಹಿ ತಿಂಡಿಗಳನ್ನು,ಮತ್ತು ಸಕ್ಕರೆಯಿಂದ ಮಾಡಿದ ಪದಾರ್ಥಗಳನ್ನು ಆದಷ್ಟೂ ಕಡಿಮೆ ತಿನ್ನುವುದರಿಂದ ನಮ್ಮ ಹಲ್ಲುಗಳ ಸಮಸ್ಯೆ teeth problem ಕಡಿಮೆ ಆಗುತ್ತದೆ.
4)ಫ್ಲೋರೈಡ್ ಬಳಕೆ:
ನಾವು ಬಳಸುವ ಟೂತ್ ಪೇಸ್ಟ್ ನಲ್ಲಿ ಉಪ್ಪಿನಾಂಶ ಎಷ್ಟಿದೆ ಎಂದು ಗಮನಿಸಬೇಕು. ಫ್ಲೋರೈಡ್ ನಮ್ಮ ಹಲ್ಲಿನ ಎನಾಮಲ್ ಅನ್ನು ಗಟ್ಟಿಗೊಳಿಸುತ್ತದೆ, ನಾವು ಕುಡಿಯುವ ನೀರಿನ ಫ್ಲೋರೈಡ್ ಅನ್ನು ಸರಿಯಾದ ರೀತಿಯಲ್ಲಿ ತಿಳಿಯಬೇಕು.
5) ಕ್ಯಾಲ್ಶಿಯಂ ಇರುವ ಆಹಾರ ಸೇವನೆ ಮಾಡಬೇಕು:
ಊಟದಲ್ಲಿ ಕ್ಯಾಲ್ಶಿಯಂ ಪ್ರಮಾಣ ಹೆಚ್ಚುಮಾಡಲು ಹಾಲು,ಮೊಸರು, ಬಾದಾಮಿ, ಚೀಸ್ ,ರಾಗಿ, ಓಕ್ರಾ ಪದಾರ್ಥಗಳನ್ನ ಜಾಸ್ತಿ ತಿನ್ನಬೇಕು.
6)ತಂಬಾಕು ಮತ್ತು ಧೂಮಪಾನ ತ್ಯಜಿಸುವುದು:
ಯಾರೆಲ್ಲಾ ಇದು ಅಭ್ಯಾಸವಾಗಿ ಮಾಡಿಕೊಂಡಿದ್ದೀರಿ ಅವರು ಈ ಕ್ಷಣವೇ ಅದನ್ನ ಸ್ವಲ್ಪ ಸ್ವಲ್ಪ ವಾಗಿ ಬಿಡಬೇಕು. ಯಾಕೆಂದರೆ ಅದರಿಂದ ನಮ್ಮ ಹಲ್ಲಿನ ಆರೋಗ್ಯಕ್ಕೆ ಮತ್ತು ದೇಹದ ಒಟ್ಟಾರೆ ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ(ಇದು ಎಲ್ಲರಿಗೂ ಗೊತ್ತಿರುವುದೇ ಆದರೂ ಬಿಡಲು ಮನಸ್ಸಿರುವುದಿಲ್ಲ).
7)ಬಾಯಿ ನೀರಿನಿಂದ ಸ್ವಚ್ಛಗೊಳಿಸುವುದು:
ನಾವು ಯಾವುದೇ ಪದಾರ್ಥ ತಿನಲ್ಲಿ, ತಿಂದ ನಂತರ ನೀರಿನಿಂದ ಬಾಯಿಯನ್ನು ಮುಕ್ಕಳಿಸಬೇಕು. ಯಾಕೆಂದರೆ ತಿಂದ ನಂತರ ಬಾಯಿಯಲ್ಲಿ ಅಲ್ಪ ಸ್ವಲ್ಪ ಪದಾರ್ಥಗಳು ಹಲ್ಲಿನಲ್ಲಿ ಸಿಕ್ಕಿ ಹಾಕಿಕೊಂಡಿರುತ್ತವೆ, ಅವು ಬ್ಯಾಕ್ಟೀರಿಯಾ ಉತ್ಪತ್ತಿಗೆ ಕಾರಣವಾಗುತ್ತದೆ.
8)ಸಮತೋಲನ ಆಹಾರ:
ನಾವು ತಿನ್ನುವ ಆಹಾರದಲ್ಲಿ ಎಲ್ಲ ರೀತಿಯ ಕ್ಯಾಲ್ಸಿಯಂ, ವಿಟಮಿನ್, ಫ್ಲೋರೈಡ್, ತರಕಾರಿಗಳು, ಸೊಪ್ಪುಗಳು, ಹಣ್ಣುಗಳು, ತಿಂದರೆ ಹಲ್ಲಿನ ಆರೋಗ್ಯದ teeths health ಜೊತೆ ಒಟ್ಟಾರೆ ಆರೋಗ್ಯ ಚನ್ನಾಗಿರುತ್ತದೆ.

ಹಲ್ಲಿನ ಆರೋಗ್ಯಕ್ಕೆ ನೈಸರ್ಗಿಕವಾಗಿ ತಯಾರಿಸುವ ಮನೆ ಮದ್ದುಗಳು(Naturally prepared home remedies).

ಮನೆಯಲ್ಲೇ ನೈಸರ್ಗಿಕವಾಗಿ ಮಾಡುವ ಕೆಲವು ಮದ್ದುಗಳು ನಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡುತ್ತದೆ.

  •  ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು (Gargling with salt water):
    ನೀರನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಉಪ್ಪು ಹಾಕಿ ಬಾಯಿ ಮುಕ್ಕಳಿಸುವುದರಿಂದ ಹಲ್ಲಿನ ನೋವು ಕಡಿಮೆಯಾಗುತ್ತದೆ,ಜೊತೆಗೆ ಉಳುಕಲ್ಲು ಇದ್ದರೆ ಅದರ ನೋವಿನ ಪ್ರಮಾಣ ಕಡಿಮೆ ಆಗುತ್ತದೆ.
  •  ಬೇವಿನ ಕಡ್ಡಿ ಬಳಕೆ(Use of neem sticks):
    ಹಿಂದಿನ ಕಾಲದಲ್ಲಿ ಟೂತ್ ಪೇಸ್ಟ್ ಇರಲಿಲ್ಲ. ಆಗ ನಮ್ಮ ಹಿರಿಯರು ಬೇವಿನ ಕಡ್ಡಿಯಿಂದ ಹಲ್ಲನ್ನು ಸ್ವಚ್ಛಗೊಳಿಸುತ್ತಿದ್ದರು, ಅದನ್ನೇ ನಾವು ಈಗ ಮಾಡಬೇಕಿದೆ ಕನಿಷ್ಠ ವಾರಕೊಮ್ಮೆಯಾದರೂ, ಬೇವಿನ ಕಡ್ಡಿಯಿಂದ ಹಲ್ಲನ್ನು ಸ್ವಚ್ಛಗೊಳಿಸಬೇಕು ಇದು ಹಲ್ಲಿನ ಆರೋಗ್ಯಕ್ಕೆ ಉತ್ತಮ.
  •  ತೆಂಗಿನ ಎಣ್ಣೆ ಬಳಕೆ(coconut oil) :
    ಬೆಳಗ್ಗಿನ ಜಾವ ತೆಂಗಿನ ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿಯಲ್ಲಿನ ಬ್ಯಾಕ್ಟೀರಿಯಾ ಕಡಿಮೆಯಾಗುತ್ತದೆ.
  •  ಲವಂಗ ಬಳಸುವುದು(Use of cloves):
    ನಮ್ಮ ಹಿರಿಯರಿಂದ ಇದನ್ನು ಬಳಸುತ್ತಿದ್ದಾರೆ, ಯಾವುದೇ ತರಹದ ಹಲ್ಲಿನ ನೋವಿಗೆ ರಾಮಬಾಣದ ರೀತಿ ಕೆಲಸ ಮಾಡುತ್ತದೆ ಲವಂಗ, ಇದನ್ನು ಹಲ್ಲು ನೋವು ಬಂದ ಜಾಗಕ್ಕೆ ಇಟ್ಟರೆ ಅದರ ರಸ ಸೇವನೆ ಮಾಡುವುದರಿಂದ ನೋವು ಕ್ಷಣ ಮಾತ್ರದಲ್ಲಿ ಕಡಿಮೆ ಯಾಗುತ್ತದೆ.
  •  ಅರಿಶಿನ ಮತ್ತು ಉಪ್ಪಿನ ಬಳಕೆ (Use of turmeric and salt):
    ಅರಿಶಿನ ಹಾಗೂ ಉಪ್ಪನ್ನು ಮಿಕ್ಸ್ ಮಾಡಿ ಬೆಳಗಿನ ಜಾವಾ ಹಲ್ಲನ್ನು ತೊಳೆಯುವುದರಿಂದ ದವಡೆಯ ಗಮ್ ಗಟ್ಟಿಯಾಗುತ್ತದೆ.

ಈ ರೀತಿ ಮನೆ ಮದ್ದುಗಳಿಂದ ನಮ್ಮ ಹಲ್ಲಿನ ಆರೋಗ್ಯವನ್ನ Teeth health ಕಾಪಾಡಿಕೊಳ್ಳಬಹುದಾಗಿದೆ.

ನಾನು ಬರೆದಿರುವ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತೆ ಬೇರೆ ಯಾವ ವಿಷಯದ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕು ಎಂದು ಕಾಮೆಂಟ್ಸ್ ರೂಪದಲ್ಲಿ ತಿಳಿಸಿ ಧನ್ಯವಾದಗಳು .

2 thoughts on “10 Ways to Maintain Our Teeths Healthy in kannada”

  1. Pingback: ಕೆಮ್ಮು ಮತ್ತು ಗಂಟಲು ನೋವು ಕಾರಣಗಳು- 10 ಮನೆ ಮದ್ದುಗಳು.

Leave a Comment

Your email address will not be published. Required fields are marked *

Scroll to Top