Table of Contents
Toggleಮದುಮೇಹ(Diabetes) ಇರುವ ಜನರು ಯಾವ ರೀತಿಯ ಆಹಾರ ಸೇವನೆಗೆ ಗಮನ ನೀಡಬೇಕು?
ಮಧುಮೇಹ ಅಥವಾ ಡಯಾಬಿಟಿಸ್ (Diabetes) ಎಂದರೆ ಏನು?
ಮಧುಮೇಹ ಎಂದರೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಸಾಮಾನ್ಯಕ್ಕಿಂತ ಅಧಿಕವಾಗಿರುವ ಆರೋಗ್ಯದ ಸ್ಥಿತಿ. ಇದು ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಸರಿಯಾಗಿ ಕೆಲಸ ಮಾಡದ ಕಾರಣಕ್ಕೆ ಉಂಟಾಗುತ್ತದೆ. ಮಧುಮೇಹದ ಮುಖ್ಯ ಲಕ್ಷಣಗಳೆಂದರೆ ಹೆಚ್ಚು ಬಾಯಾರಿಕೆ, ಹೆಚ್ಚಾಗಿ ಮೂತ್ರವಿಸರ್ಜನೆ, ಶಕ್ತಿಹೀನತೆ ಮತ್ತು ತೂಕ ಕಡಿಮೆ/ಹೆಚ್ಚಾಗುವುದನ್ನು ಕಾಣಬಹುದು.
ಇತ್ತೀಚಿನ ಜೀವನ ಶೈಲಿ, ಅಸಮತೋಲನ ಆಹಾರ, sedentary lifestyle ಮತ್ತು ತಂದೆಯ/ತಾಯಿ ಆರೋಗ್ಯದ ಇತಿಹಾಸದಿಂದ ಮಧುಮೇಹದ ಪ್ರಮಾಣ ಹೆಚ್ಚಾಗುತ್ತದೆ . ಇದು ಹಲವಾರು ರೋಗಗಳಿಗೆ ಕಾರಣವಾಗಬಹುದು — ಹೃದಯ ಕಾಯಿಲೆ, ಕಿಡ್ನಿ ಸಮಸ್ಯೆಗಳು, ದೃಷ್ಟಿ ಸಮಸ್ಯೆಗಳು ಇತ್ಯಾದಿ. ಆದ್ದರಿಂದ ನಮ್ಮ ದಿನಚರಿಯಲ್ಲಿ ಸರಿಯಾದ ಆಹಾರ ಕ್ರಮ ಬಹಳ ಮುಖ್ಯವಾಗಿದೆ.
ಮಧುಮೇಹಿಗೆ ಶೇಕಡಾವಾರು ನಿಯಂತ್ರಣ ನೀಡುವ ಆಹಾರ ನಿಯಮಗಳು
1. ಸಮತೋಲಿತ ಆಹಾರ (Low-GI Foods)
ಹಣ್ಣು ಮತ್ತು ತರಕಾರಿಗಳು ನಾವು ಸೇವಿಸುವ ಆಹಾರದಲ್ಲಿ ಪ್ರತಿನಿತ್ಯ ಇರಲೇಬೇಕು ,
ಇದರಿಂದ ಪೋಷಕಾಂಶ ಮತ್ತು ಶಕ್ತಿಯು ಸಮತೋಲನದಲ್ಲಿರುತ್ತದೆ ಮತ್ತು ಸಕ್ಕರೆಯ ಅಂಶ ಕಡಿಮೆಯಾಗುತ್ತದೆ.
2. ಕಾರ್ಬೊಹೈಡ್ರಟ್ಸ್ (Complex Carbohydrates)
ಸಕ್ಕರೆಯ ನಿಯಂತ್ರಣಕ್ಕೆ ಬಿಳಿ ಅಕ್ಕಿ ಮುಂತಾದ ಆಹಾರಗಳನ್ನು ಕಡಿಮೆ ಮಾಡಬೇಕು. ಬಿಳಿ ಅಕ್ಕಿಯ ಬದಲು ಕೆಂಪಕ್ಕಿ,ಕುಚ್ಚಲಕ್ಕಿ , ಬಜ್ರಾ, ಜೋಳ, ಉತ್ತಮ.
ಆಹಾರ ಹೆಚ್ಚು ನಾರಿನಾಂಶ (fiber) ಒಳಗೊಂಡಿರಬೇಕು
3. ಪ್ರೋಟೀನ್ ಯುಕ್ತ ಆಹಾರ (Protein-Rich Foods)
ಪ್ರೋಟೀನ್ ದೇಹಕ್ಕೆ ಶಕ್ತಿ ನೀಡುತ್ತದೆ, ಲೆಗ್ಯೂಮ್‌ಗಳು
ಪನೀರ್ / ಮೊಟ್ಟೆ / ಚಿಕನ್ / ಮೀನು
4. ಆರೋಗ್ಯಕರ ಕೊಬ್ಬು (Healthy Fats)
ಆರೋಗ್ಯಕರ ಕೊಬ್ಬು ಹೃದಯ ಆರೋಗ್ಯಕ್ಕೆ ಸಹಾಯಕ. ಕೋಲೆಸ್ಟ್ರಾಲ್ ನಿಯಂತ್ರಣಕ್ಕೆ ಆಹಾರದಲ್ಲಿ olive oil, nuts, seeds ಸೇರಿಸಬಹುದು.
5. ಫೈಬರ್ ಯುಕ್ತ ತರಕಾರಿ ಮತ್ತು ಹಣ್ಣುಗಳು (Fiber-Rich Veggies & Fruits)
ಕರದಿರುವಂತಹ ಆಹಾರ ಸೇವನೆಯ ಬದಲು ಯಾವಾಗಲು ಹಬೆಯಲ್ಲಿ ಬೇಯಿಸಿದ ಆಹಾರ ಸೇವನೆ ಮಾಡಿದರೆ ಉತ್ತಮ .
ನಾರಿನಾಂಶವು ರಕ್ತದಲ್ಲಿನ ಸಕ್ಕರೆ ಒತ್ತಡವನ್ನು ನಿಧಾನಗೊಳಿಸುತ್ತದೆ ಮತ್ತು ಹಸಿವನ್ನು ನಿಯಂತ್ರಿಸುತ್ತದೆ.
ಗಡ್ಡೆಕೋಸು , ಸೊಪ್ಪು ತರಕಾರಿಗಳು,
ದಾಳಿಂಬೆ ಹಣ್ಣುಗಳು, ಪಪ್ಪಾಯ (ಆಪಲ್, ಚೇಪೆಹಣ್ಣು ನಿಯಂತ್ರಿತ ಪ್ರಮಾಣದಲ್ಲಿರಲಿ )
ಏನು ತಪ್ಪಿಸಬೇಕು? (Foods to Avoid)
ಸಕ್ಕರೆಯಿಂದ ಮಾಡಿದ ಆಹಾರ
ಫಾಸ್ಟ್ ಫುಡ್ (ಎಣ್ಣೆಯಲ್ಲಿ ಮಡಿದ ಆಹಾರ)
ಬಿಳಿ ಅಕ್ಕಿ/ಮೈದಾ ಉತ್ಪನ್ನಗಳು
ಪಾನೀಯಗಳು(ಕೊಕ್,ಇತ್ಯಾದಿ )
ಇವು ರಕ್ತದ ಸಕ್ಕರೆಯನ್ನು ತ್ವರಿತವಾಗಿ ಏರ್ಪಡಿಸುತ್ತವೆ ಮತ್ತು ನಿರ್ವಹಣೆಗೆ ಹಾನಿಕರವಾಗಬಹುದು.
ದಿನದ ಆಹಾರ ಶೆಡ್ಯೂಲ್ (Daily Meal Structure)
ಸಮಯ ಆಹಾರ ಸ್ವರೂಪ
ಬೆಳಿಗ್ಗೆ ತಿಂಡಿಗೆ ಓಟ್ಸ್ / ಮಿಲೇಟ್ಸ್ ಗೆ ರೋಟಿ, ಸಲಾಡ್
ಮಧ್ಯಾನೆ ಭೋಜನ ಚಪಾತಿ ತರಕಾರಿ, ದಾಲ್
ಮಧ್ಯಾಹ್ನ ಸ್ನ್ಯಾಕ್ ಕೆಲವು ಹಣ್ಣುಗಳು
ಸಂಜೆ ಮೊಟ್ಟೆ / ಬಾದಾಮಿ / ಪನೀರ್
ರಾತ್ರಿಯ ಭೋಜನ ಮುದ್ದೆ ,ಬ್ರೌನ್ ರೈಸ್ / ರಾಗಿ ರೊಟ್ಟಿ, ತೊಗರಿ ದಾಲ್
ಪರಿಣಾಮಕಾರಿಯಾಗಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸಲು 3-4 ಗಂಟೆಗೊಮ್ಮೆ ಸಣ್ಣ ಪ್ರಮಾಣದ ಆಹಾರವನ್ನು ತಿನ್ನುವುದು ಸಹಾಯವಾಗುತ್ತದೆ.
ಭಾರತ ಮತ್ತು ಇತರ ದೇಶಗಳು – ಆಹಾರ ಪದ್ಧತಿ ವ್ಯತ್ಯಾಸ
ಇತರ ದೇಶಗಳು (US/West Europe)
ಮೂಲ ಆಹಾರ ಕಾರ್ಬೋಹೈಡ್ರೇಟ್ಸ್ (rice/roti)
ಪ್ರೋಟೀನ್, whole grain, salad/veggies ಹೆಚ್ಚಾಗಿ
ನಾರಿನಾಂಶ , ಹೆಚ್ಚಿನ fiber ಆಯ್ಕೆ
ಅರಿವು ಮತ್ತು ತಡೆ ಕಾರ್ಯಕ್ರಮ ಹಲವಾರು
ಆರೋಗ್ಯ ಶಿಕ್ಷಣ, ಹೆಚ್ಚು nutrition awareness
ಸಕ್ಕರೆ ನಿಯಂತ್ರಣ ಆಹಾರಗಳು,
ಭಾರತದಲ್ಲಿ ಹೆಚ್ಚು traditional food culture ಇದ್ದರೂ, glycemic index ಪಾಲಿಸುವುದು ಇನ್ನೂ ಕಷ್ಟಕರವಾಗಿದೆ .
ಮದುಮೇಹ ಒಮ್ಮೆ ಬಂದರೆ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೇ ಒರೆತು ಸಂಪೂರ್ಣ ತೊಡೆದು ಆಕಲು ಸಾಧ್ಯವಿಲ್ಲ ಆದ್ದರಿಂದ ,
ಮಧುಮೇಹದ ನಿರ್ವಹಣೆ ಆಹಾರದ ಮೇಲೆ ಮಾತ್ರ ನಿರ್ಧರಿಸಲಾಗುವುದಿಲ್ಲ – ಆದರೂ ಅದರ ಪ್ರಭಾವ ಅತ್ಯಂತ ಮಹತ್ವದ್ದು. ಒಳ್ಳೆಯ ಆಹಾರ, ನಿಯಮಿತ ವ್ಯಾಯಾಮ ಮತ್ತು ಉತ್ತಮ ಆಲೋಚನೆ ರೋಗ ನಿರ್ವಹಣೆಯಲ್ಲಿ ಮುಖ್ಯ.
ಮಧುಮೇಹ ರೋಗಿಯ ಆಹಾರ ಯೋಜನೆ: fiber-rich vegetables & fruits
lean protein
healthy fats
small frequent meals
avoid added sugars
ಈ ಎಲ್ಲಾ ಅಂಶಗಳು ಸಮಗ್ರವಾದ ಆರೋಗ್ಯದ ಜತೆ ರಕ್ತದಲ್ಲಿನ ಸಕ್ಕರೆಯ ಸಮತೋಲನ ಮತ್ತು ಸಾರ್ಥಕತೆ ನೀಡುತ್ತದೆ.
ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ಸ್ ಮಾಡಿ ನಿಮಗೆ ಯಾವ ವಿಷಯದ ಬಗ್ಗೆ ಮಾಹಿತಿ ಬೇಕು ಎಂದು ತಿಳಿಸಿ ಧನ್ಯವಾದಗಳು .

Hi, i have read your blog its nice👍
Thanks, i will post health related blog regularly kindly read and give your opinion .
Pingback: 10 ways to maintain healthy Teeths naturally in - kannada