Tetanus ಮತ್ತು diphtheria ಎಂಬ ಕಾಯಿಲೆಗಳಿಗೆ ಸ್ವದೇಶೀ ವ್ಯಾಕ್ಸೀನ್ ಕಂಡು ಹಿಡಿಯಲಾಗಿದೆ.

Spread the love
Tetanus ಮತ್ತು diphtheria

Tetanus ಮತ್ತು diphtheria (Td) ಲಸಿಕೆಗಳು ಎರಡು ಗಂಭೀರ ಬ್ಯಾಕ್ಟೀರಿಯಾ ಸೋಂಕುಗಳಿಂದ ರಕ್ಷಿಸುತ್ತವೆ.
ಟೆಟನಸ್ – ಈ ಕಾಯಿಲೆಯಿಂದ ಮುಖ್ಯವಾಗಿ ದವಡೆಯ ನೋವು, ಊತ, ಸ್ನಾಯುಗಳ ಸೆಳೆತ, ಉಂಟಾಗುತ್ತದೆ.
ಡಿಫ್ತೀರಿಯಾ – ಈ ಕಾಯಿಲೆಯು ಗಂಟಲಿನ ಬಾಗದಲ್ಲಿ ದಪ್ಪ ದಪ್ಪ ಗಡ್ಡೆಗಳ ರೀತಿಯಲ್ಲಿ ಶುರು ಆಗುತ್ತದೆ, ನಂತರ ಉಸಿರಾಟದ ತೊಂದರೆ, ಹೃದಯ ವೈಫಲ್ಯ , ಪಾರ್ಶ್ವವಾಯು, ಹಾಗೂ ಸಾವಿಗೆ ಕಾರಣವಾಗುತ್ತವೆ.
ಈ ಲಸಿಕೆಯನ್ನು ಪ್ರಾಥಮಿಕವಾಗಿ ಚಿಕ್ಕಮಕ್ಕಳಿಗೆ ಮತ್ತು ವಯಸ್ಕರಿಗೆ ಪ್ರತಿ 10ವರ್ಷಕ್ಕೊಮ್ಮೆ ಬೂಸ್ಟರ್ಗಳಾಗಿ ನೀಡಲಾಗುತ್ತದೆ.
ಇದು ಗರ್ಭಿಣಿಯರೂ ಸೇರಿ ತೀವ್ರ ಕಾಯಿಲೆ ಇರುವವರಿಗೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ.

ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ(Universal Immunisation Programme) ಇದು ನಮ್ಮ ಭಾರತ ಸರ್ಕಾರದ ಒಳ್ಳೆಯ ಅರೋಗ್ಯ ಯೋಜನೆಯಾಗಿದ್ದು, ಈ ಕಾರ್ಯಕ್ರಮದ ಮೂಲಕ ಸಣ್ಣ ಮಕ್ಕಳಿಗೆ, ಗರ್ಭಿಣಿ ಮಹಿಳೆಯರಿಗೆ, ವಿವಿಧ ಸೋಂಕು, ಹಾಗು ರೋಗಗಳಿಂದ, ರಕ್ಷಣೆ ನೀಡುವ ಲಿಸಿಕೆಗಳನ್ನೂ ಉಚಿತವಾಗಿ ನಿಮ್ಮ ಹತ್ತಿರದ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ನೀಡಲಾಗುತ್ತದೆ.
ಪೋಲಿಯೊ, ಕ್ಷಯ, ಟಿಬಿ, ಕಬ್ಬಿಣ ಜ್ವರ(Tetanus) ಮುಂತಾದ ಅಪಾಯಕಾರಿ ರೋಗಗಳನ್ನು ಬರದೇ ತಡೆಗಟ್ಟುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ನಮ್ಮ Union minister JP Nadda ಅವರು Himachal Pradesh ರಾಜ್ಯದ Kasauli ಯಲ್ಲಿ ಇರುವ Central Research Institute ನಲ್ಲಿ ತಯಾರಿಸಲಾದ ಸ್ವದೇಶಿ ಟೆಟನಸ್ ಮತ್ತು ವಯಸ್ಕರ ಡಿಫ್ತೀರಿಯಾ (TD) ಲಸಿಕೆಯನ್ನು ಬಿಡುಗಡೆ ಮಾಡಿದರು.
ಈ ನಮ್ಮ ಸ್ವದೇಶೀ ವ್ಯಾಕ್ಸೀನ್ ಬಿಡುಗಡೆಗೊಳಿಸಿ ದೇಶದ ಆರೋಗ್ಯ ಭದ್ರತೆಯನ್ನು ಕಾಪಾಡುವ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾಗಿದ್ದು ನಮ್ಮ ದೇಶದ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ಕಾರ್ಯವಾಗಿದೆ.

ಸರ್ಕಾರದಿಂದ ಇನ್ನೆರಡು ತಿಂಗಳಲ್ಲಿ ಸುಮಾರು 55 ಲಕ್ಷ ವ್ಯಾಕ್ಸೀನ್

ಈ ವರ್ಷದ ಏಪ್ರಿಲ್ ವೇಳೆಗೆ ಸೆಂಟ್ರಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CRI) ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ(UIP) ಮೂಲಕ 55 ಲಕ್ಷ ಡೋಸ್‌ಗಳನ್ನು ಪೂರೈಸಲಾಗುತ್ತದೆ. ಹಾಗು ಭಾರತ ಸರ್ಕಾರ ಜಾರಿಗೊಳಿಸಿರುವ ಕಾರ್ಯಕ್ರಮವನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಲಾಗಿದೆ.
ನಮ್ಮ ದೇಶದ ಜಾಗತಿಕ ಸ್ಥಾನಮಾನವು ಯಾವ ರೀತಿ ಗುರ್ತಿಸಲ್ಪಟ್ಟಿದೆ ಎಂದರೆ ಭಾರತವು ವಿಶ್ವದ ಔಷಧಾಲಯ ಹಾಗು ಜಾಗತಿಕ ಮಟ್ಟದಲ್ಲಿ ಪ್ರಮುಖ ಲಸಿಕೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ .

Tetanus ಮತ್ತು diphtheria ಪ್ರತಿ 10 ವರ್ಷಗಳಿಗೊಮ್ಮೆ ಬೂಸ್ಟರ್ ಡೋಸ್ ಶಿಫಾರಸು:
ಬಾಲ್ಯದಲ್ಲಿ ಲಸಿಕೆಯಿಂದ ಸಿಗುವ ರಕ್ಷಣೆ ಕಾಲಕ್ರಮೇಣ ಕಡಿಮೆಯಾಗುವ ಕಾರಣ, ದೀರ್ಘಕಾಲೀನ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು Td ಲಸಿಕೆಯನ್ನು ಪ್ರಮುಖವಾಗಿ ನೀಡಲಾಗುತ್ತದೆ.

ಟೆಟನಸ್ ಲಸಿಕೆಯ ಅಭಿವೃದ್ಧಿಗೆ ಜಾಗತಿಕವಾಗಿ ಸುಮಾರು ವರ್ಷಗಳ ಕಾಲ ಹಿಡಿದಿತ್ತು. ಕ್ಷಯರೋಗ(TB) ಔಷದಿ ಅಭಿವೃದ್ಧಿಯಾಗಲು ಸುಮಾರು 30 ವರ್ಷಗಳ ಕಾಲ ಬೇಕಾಯಿತು ಹಾಗೂ japanese encephalitis ಲಸಿಕೆ ಅಭಿವೃದ್ಧಿಗೆ ಸುಮಾರು ವರ್ಷಗಳ ವೈಜ್ಞಾನಿಕ ಪ್ರಯತ್ನ ಅಗತ್ಯವಾಯಿತು.
ಇದಕ್ಕೆ ತದ್ವಿರುದ್ಧವಾಗಿ ಕೋವಿಡ್-19 ಸಮಯದಲ್ಲಿ ಭಾರತವು ಕೇವಲ ಒಂಬತ್ತು ತಿಂಗಳೊಳಗೆ ಎರಡು ಸ್ವದೇಶಿ ಲಸಿಕೆಗಳನ್ನು ಅಭಿವೃದ್ಧಿಪಡಿಸಿ, ಬೂಸ್ಟರ್ ಡೋಸ್‌ಗಳನ್ನು ಒಳಗೊಂಡಂತೆ 220 ಕೋಟಿಗೂ ಹೆಚ್ಚು ಡೋಸ್‌ಗಳನ್ನು ಜಗತ್ತಿನ ಅನೇಕ ರಾಷ್ಟ್ರಗಳಿಗೆ ನೀಡುವ ಸಾಧನೆ ಮಾಡಿತ್ತು.

GMP ಮಾನದಂಡದಲ್ಲಿ ತಯಾರಿಸಲಾಗಿದೆ,
Central Research Institute(CRI) ಸರ್ಕಾರದ ಪ್ರಮುಖ ಸಂಸ್ಥೆಯಾಗಿದ್ದು, Good Manufacturing Practices (GMP)ಯ ಅಡಿಯಲ್ಲಿ ಈ ಲಸಿಕೆಯನ್ನು ತಯಾರಿಸಲಾಗಿದೆ ಹಾಗು ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ(UIP) ಜಗತ್ತಿನಲ್ಲೇ ಅತೀ ದೊಡ್ಡ ಲಸಿಕಾ ಕಾರ್ಯಕ್ರಮವಾಗಿದ್ದು ಪ್ರಸ್ತುತ 12 ಲಸಿಕೆಗಳಿಂದ ತಡೆಗಟ್ಟಬಹುದಾದ ರೋಗಗಳ ವಿರುದ್ಧ 11 ಲಸಿಕೆಗಳನ್ನು ಒದಗಿಸುತ್ತದೆ. ಈ ಕಾರ್ಯಕ್ರಮದಲ್ಲಿ ಸಿಆರ್‌ಐ ಮಹತ್ತರವಾದ ಕೊಡುಗೆ ನೀಡಿದೆ.

ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ಸ್ ಮಾಡಿ ನಿಮಗೆ ಯಾವ ವಿಷಯದ ಬಗ್ಗೆ ಮಾಹಿತಿ ಬೇಕು ಎಂದು ತಿಳಿಸಿ ಧನ್ಯವಾದಗಳು .

Leave a Comment

Your email address will not be published. Required fields are marked *

Scroll to Top