8 Best Foods After Pregnancy || ಹೆರಿಗೆಯ ನಂತರ ಮಹಿಳೆ ತಿನ್ನಲೇಬೇಕಾದ 8 ಪೌಷ್ಠಿಕ ಆಹಾರಗಳು

Spread the love

ಹೆರಿಗೆಯ ನಂತರ ತಾಯಿ ಮತ್ತು ಮಗುವಿನ ಆರೈಕೆ, ಚೆನ್ನಾಗಿರಬೇಕಾದರೆ ಪೌಷ್ಟಿಕ ಆಹಾರ ಬಹಳ ಮುಖ್ಯ. ಹೆರಿಗೆಯ ಸಮಯದಲ್ಲಿ ತಾಯಿ ಕಳೆದುಕೊಂಡ ಶಕ್ತಿಯನ್ನು ಮರಳಿ ಪಡೆಯಲು, ಮಗುವಿಗೆ ಸರಿಯಾದ ಹಾಲು ಉತ್ಪಾದನೆಯಾಗಲು, ಮಗು ದಷ್ಟಪುಷ್ಟವಾಗಿ ಬೆಳೆಯಲು Nutritious Foods After Pregnancy ತುಂಬಾ ಮುಖ್ಯ.

Foods for Lactating Mother

ಡೆಲಿವರಿ ನಂತರ ಮಹಿಳೆಯು ತಾನು ಕಳೆದುಕೊಂಡ ಶಕ್ತಿಯನ್ನು ಮತ್ತೆ ಪಡೆಯಲು ಸಹಾಯ ಮಾಡುವ 8 ಪೌಷ್ಟಿಕ ಆಹಾರಗಳು Nutritious Foods After Pregnancy . ಇವು ಮಗುವಿಗೆ ಬೇಕಾದ ಹಾಲು ಉತ್ಪಾದನೆ, ಮತ್ತೆ ತಾಯಿಗೆ ಶಕ್ತಿಯನ್ನು ನೀಡಿ ದೇಹ ಬೇಗ ಚೇತರಿಕೆ ಆಗುವ ಆಹಾರಗಳಾಗಿರುತ್ತವೆ.

ತಾಯಿಯು ಹೆರಿಗೆಯ ನಂತರ ತಿನ್ನುವ ಆಹಾರ ಪೌಷ್ಟಿಕವಾಗಿರಬೇಕು, ದೇಹಕ್ಕೆ ಹೈಡ್ರೇಶನ್ ನೀಡಬೇಕು, ಮತ್ತೆ ಹಾಲುಣಿಸುವ ತಾಯಿಯ ಆರೋಗ್ಯದ ದೃಷ್ಟಿಯಿಂದ ತಿಂದ ಆಹಾರ ಸುಲಭವಾಗಿ ಜೀರ್ಣವಾಗುವಂತಿರಬೇಕು.

ತಾಯ್ತನ ಅನ್ನುವುದು ಮಹಿಳೆಯ ಜೀವನದಲ್ಲಿ ಅತ್ಯಂತ ಮುಖ್ಯವಾದ ಕಾಲಘಟ್ಟ. ಮಗು ಹುಟ್ಟಿದ ನಂತರ ತಾಯಿಯ ದೇಹವು ತುಂಬಾ ಶಕ್ತಿ ಕಳೆದುಕೊಳ್ಳುತ್ತದೆ. ಆ ಶಕ್ತಿಯನ್ನು ಮತ್ತೆ ಪಡೆಯಲು, ಮತ್ತೆ ಸೇಜರೀನ್ ಡೆಲಿವರಿ ಆದಾಗ ಅದರಿಂದ ಆದ ಗಾಯಗಳು ಗುಣ ಆಗಲು, ಮತ್ತೆ ತಾಯಿಗೆ ಹಾಲು ಉತ್ಪಾದನೆ ಜಾಸ್ತಿ ಆಗಲು ಪೌಷ್ಟಿಕ ಆಹಾರ ತುಂಬಾ ಮುಖ್ಯ.
ಇದರಿಂದಲೇ ತುಂಬಾ ಜನ ಮಹಿಳೆಯರು ಡೆಲಿವರಿ ಆದ ನಂತರ ಯಾವ ರೀತಿಯ ಆಹಾರ ತಿನ್ನಬೇಕು ಅನ್ನುವುದನ್ನು ತಿಳಿಯಲು ತುಂಬಾ ಕಷ್ಟ ಪಡುತ್ತಾರೆ, ಅದಕ್ಕಂತಲೇ ಈ ಲೇಖನದಲ್ಲಿ ನಾನು ಪೌಷ್ಟಿಕ ಆಹಾರ ಮತ್ತೆ ಅದರಿಂದಾಗುವ ಲಾಭಗಳನ್ನು ತಿಳಿಸಿದ್ದೇನೆ.

ಡೆಲಿವರಿ ನಂತರ ತಾಯಿಗೆ ಯಾಕೆ ಪೌಷ್ಠಿಕ ಆಹಾರ ಬೇಕು ? Why Nutrition Foods After Pregnancy?

ಡೆಲಿವರಿ ಆದ ನಂತರ ಮಹಿಳೆಯ ದೇಹ ಶಕ್ತಿಯೀನವಾಗುತ್ತೆ. ಈ ಸಮಯದಲ್ಲಿ ತಾಯಿಗೆ ಯಾಕೆ ಪೌಷ್ಟಿಕ ಆಹಾರ ಬೇಕು? Why Nutritious Foods After Pregnancy ?

  •  ಮಗುವಿಗೆ ಹಾಲು ಕೊಡಲು ತಾಯಿಗೆ ಶಕ್ತಿ ಬೇಕಾಗುತ್ತದೆ.
  •  ಮಹಿಳೆಯಲ್ಲಿ ಡೆಲಿವರಿ ನಂತರ ಹಾರ್ಮೋನ್ ಗಳಲ್ಲಿ ತುಂಬಾ ಬದಲಾವಣೆ ಆಗುತ್ತೆ.
  •  ಹಾಲು ಉತ್ಪಾದನೆ ಆಗಬೇಕಾದರೆ ಒಳ್ಳೆಯ ಪೋಷಕಾಂಶಗಳು ತುಂಬಾ ಮುಖ್ಯ.
  •  ಡೆಲಿವರಿ ನಂತರ ದೇಹದ ರೋಗನಿರೋಧಕ ಶಕ್ತಿ ಕಡಿಮೆ ಆಗಿರುತ್ತೆ.

ಈ ಎಲ್ಲಾ ಕಾರಣಗಳಿಂದ ಸಮತೋಲನಯುಕ್ತ ಮತ್ತೆ ಪೌಷ್ಟಿಕ ಆಹಾರ ತಾಯಿಗೆ ತುಂಬಾ ಮುಖ್ಯವಾಗಿರುತ್ತದೆ.

ಡೆಲಿವರಿ ನಂತರ ಮಹಿಳೆ ತಿನ್ನಬೇಕಾದ 8 ಪೌಷ್ಟಿಕ ಆಹಾರಗಳು 8 Foods After Pregnancy must Eat

Best Nutritious Foods After Pregnancy :

ಡೆಲಿವರಿ ಆದ ನಂತರ ಮಹಿಳೆ ತಿನ್ನಲೇಬೇಕಾದ 8 ಪೌಷ್ಟಿಕ ಆಹಾರಗಳು :
1. ಹಾಲಿನ ಪಧಾರ್ಥಗಳು :
ಅಂದರೆ ಮೊದಲು ತಾಯಿಗೆ ಹ್ಹಲಿನ ಪದಾರ್ಥಗಳನ್ನು ಕೊಡುವುದು ತುಂಬಾ ಮುಖ್ಯ. ಅದರಲ್ಲಿ ಹಾಲು, ಮೊಸರು, ತುಪ್ಪ, ಪನ್ನೀರ್, ಇತ್ಯಾದಿ ಇವುಗಳಲ್ಲಿ ಕ್ಯಾಲ್ಶಿಯಂ ಅಂಶ ಜಾಸ್ತಿ ಇದ್ದು ತಾಯಿಗೆ ತುಂಬಾ ಅಗತ್ಯ. ಇವು ಮಹಿಳೆಯ ಮೂಳೆಗಳು ಗಟ್ಟಿಯಾಗಲು ಸಹಾಯ ಮಾಡುತ್ತವೆ.  ಇವನ್ನು ಬೆಳಿಗ್ಗೆ ಎದ್ದ ನಂತರ ಮತ್ತೆ ರಾತ್ರಿ ಮಲಗುವ ಮುಂಚೆ ತೆಗೆದುಕೊಳ್ಳುವುದು ಒಳ್ಳೆಯದು.
ಇದರಿಂದ ಆಗುವ ಲಾಭಗಳು :

  •  ತಾಯಿಯ ದೇಹದಲ್ಲಿ ಚನ್ನಾಗಿ ಹಾಲು ಉತ್ಪಾದನೆ ಆಗುವುದರಿಂದ ಮಗುವಿಗೆ ಒಳ್ಳೆಯ ಹಾಲು ಸಿಗುತ್ತದೆ.
  •  ಮಗುವಿನ ಮೂಳೆಗಳು ಗಟ್ಟಿಯಾಗುತ್ತವೆ.
  •  ತಾಯಿಯ ದೇಹ ಗಟ್ಟಿಯಾಗುತ್ತದೆ.

2. ಹಸಿರು ತರಕಾರಿಗಳು :
ಗ್ರೀನ್ ಲೀಫ್ ವೆಜಿಟೇಬಲ್ಸ್ ಆದಂತಹ ಪಾಲಕ್ ಸೊಪ್ಪು, ಬಸಳೆ ಸೊಪ್ಪು, ಮೆಂತೆ ಸೊಪ್ಪು, ನುಗ್ಗೆ ಸೊಪ್ಪು, ಮತ್ತೆ ಎಲ್ಲಾ ರೀತಿಯ ತರಕಾರಿಗಳು ತಿನ್ನುವುದರಿಂದ ಇವುಗಳಲ್ಲಿ ಐರನ್ ಮತ್ತೆ ವಿಟಮಿನ್ಸ್ ಜಾಸ್ತಿ ಸಿಗುತ್ತದೆ.
ಪಾಲಕ್ ಸೊಪ್ಪಿನಲ್ಲಿ ಫೋಲಿಕ್ ಆಸಿಡ್ ಸಿಗುತ್ತದೆ. ಇದು ಡಾಕ್ಟರ್ ಗರ್ಭಿಣಿ ಮಹಿಳೆಗೆ ಕೊಡುವ ಫೋಲಿಕ್ ಆಸಿಡ್ ಮಾತ್ರೆಗಿಂತ ಚನ್ನಾಗಿ ಕೆಲಸ ಮಾಡುತ್ತದೆ.
ಇದರಿಂದ ಆಗುವ ಲಾಭಗಳು :

  •  ಮಹಿಳೆಯಲ್ಲಿ ರಕ್ತಹೀನತೆ ತಡೆಯುತ್ತವೆ.
  •  ದೇಹದಲ್ಲಿ ಆಂಟಿ ಬಾಡೀಸ್ ಜಾಸ್ತಿ ಮಾಡುತ್ತವೆ.
  •  ಮಗುವಿಗೆ ಬೇಕಾದ ಒಳ್ಳೆಯ ಪೋಷಕಾಂಶಗಳು ಸಿಗುತ್ತವೆ.

3. ಕಾಳುಗಳು :
ಪ್ರತಿಯೊಂದು ಕಾಳುಗಳು ಮಹಿಳೆಯ ದೇಹಕ್ಕೆ ಒಳ್ಳೆಯ ಶಕ್ತಿ ಕೊಡುತ್ತವೆ.
ಅದರಲ್ಲಿ ಮುಖ್ಯವಾದವು ಹುರುಳಿ ಕಾಳು, ತೊಗರಿ, ಕಡಲೆ, ಇವೆಲ್ಲಾ ಒಳ್ಳೆಯ ಪ್ರೂಟೀನ್, ಫೈಬರ್, ಕೊಡುತ್ತವೆ. ತರಕಾರಿ ಸಾಂಬಾರ್, ಸೊಪ್ಪಿನ ನಂತಹ ಸಾಂಬಾರ್ ಮಾಡಿದಾಗ ಪ್ರತಿಯೊಂದು ಕಾಳುಗಳನ್ನು ಸ್ವಲ್ಪ ಸ್ವಲ್ಪ ಹಾಕಿ ಮಾಡಬೇಕು.
ಇದರ ಲಾಭಗಳು :

  •  ಜೀರ್ಣಕ್ರಿಯೆ ಸರಿಯಾಗಿ ಆಗಲು ಸಹಾಯ ಮಾಡುತ್ತವೆ.
  •  ತಾಯಿ ಮತ್ತೆ ಮಗುವಿಗೆ ಶಕ್ತಿ ಜಾಸ್ತಿ ಮಾಡುತ್ತವೆ.

4. ಡ್ರೈ ಫ್ರೂಟ್ಸ್ :
ಇವು ತಾಯಿ ಮತ್ತೆ ಮಗುವಿನ ಆರೋಗ್ಯಕ್ಕೆ ತುಂಬಾ ಸಹಾಯಕಾರಿ ಅದರಲ್ಲಿ ಮುಖ್ಯವಾಗಿ, ಬಾದಾಮಿ, ಗೋಡಂಬಿ, ಖರ್ಜೂರ, ವಾಲ್ನಟ್, ಇವು ತಾಯಿಗೆ ಬೇಕಾದ ಒಳ್ಳೆಯ ಕೊಬ್ಬಿನಂಶಗಳನ್ನು ದೇಹಕ್ಕೆ ಕೊಡುತ್ತವೆ. ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಎದ್ದು ತಿನ್ನುವುದರಿಂದ ಇದರ ಪ್ರಯೋಜನ ಪಡೆಯಬಹುದು.
ಇದರ ಲಾಭಗಳು :

  •  ತಾಯಿಗೆ ಓಮೆಗಾ-3 ಅಂಶ ಜಾಸ್ತಿ ಸಿಗುತ್ತದೆ.
  •  ಮಗುವಿನ ಮೆದುಳಿನ ಬೆಳವಣಿಗೆ ಚನ್ನಾಗಿ ಆಗುತ್ತದೆ.
dry fruits for mother after Pregnancy

5. ಸಿರಿ ಧಾನ್ಯಗಳು (Millets):
ನವಣೆ, ಜೋಳ, ರಾಗಿ, ಸಜ್ಜೆ, ಕೊರಲೆ, ಬರಗು, ಸಾಮೆ, ಇತ್ಯಾದಿ ಇವುಗಳಲ್ಲಿ ಅತೀ ಹೆಚ್ಚು ನಾರಿನಂಶ, ಪ್ರೊಟೀನ್, ವಿಟಮಿನ್ಸ್, ಐರನ್ ಅಂಶ ಜಾಸ್ತಿ ಇದ್ದು ಇದು ತಾಯಿ ಹಾಗೂ ಮಗುವಿನ ಮೂಳೆಗಳ ಶಕ್ತಿ ಹೆಚ್ಚಿಸುತ್ತವೆ, ಮತ್ತು ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತವೆ. ಹಾಗೂ ತಾಯಿ ಮತ್ತು ಮತ್ತು ಮಗುವಿಗೆ ರೋಗ ನಿರೋಧಕ ಶಕ್ತಿಯನ್ನು ಜಾಸ್ತಿ ಮಾಡಿ ಮುಂದೆ ಯಾವುದೇ ಕಾಯಿಲೆ ಬಾರದ ಹಾಗೆ ತಡೆಯಲು ಸಹಾಯ ಮಾಡುತ್ತವೆ.
ಮತ್ತೆ ಹೇಳಬೇಕೆಂದರೆ ಮಗು ಜನಿಸಿದ ನಂತರ ಆದಷ್ಟೂ ತಾಯಿ ನಾರ್ಮಲ್ ರೈಸ್ ಬದಲು ಬ್ರೌನ್ ರೈಸ್ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.

6. ಮೊಟ್ಟೆ :
ಕೆಲವರು ಮೊಟ್ಟೆ ನಾನ್ವೆಜ್ ಎಂದು ಮೊಟ್ಟೆಯನ್ನು ತಿನ್ನುವುದಿಲ್ಲ. ಅಂತಹವರಿಗೆ ನನ್ನ ಸಲಹೆ ಎಂದರೆ, ಇಲ್ಲಿ ಯಾವುದು ತಾಯಿಗೆ ಮತ್ತು ಮಗುವಿಗೆ ಆರೋಗ್ಯವನ್ನು ಕೊಡುತ್ತದೆ ಅದನ್ನು ತಿನ್ನುವುದರಲ್ಲಿ ಯಾವುದೇ ಸಂಕೋಚ ಬೇಡ. ಸಾಮಾನ್ಯವಾಗಿ ಪಾರಂ ಗಳಲ್ಲಿ ಸಿಗುವ ಮೊಟ್ಟೆಯನ್ನು ತಿನ್ನುತ್ತಾರೆ. ಆದರೆ ನಾನು ಇಲ್ಲಿ ಮನೆಯಲ್ಲಿ ಸಿಗುವ ನಾಟಿ ಕೋಳಿ ಮೊಟ್ಟೆಯನ್ನು ತಿನ್ನಲು ಹೇಳುತ್ತೇನೆ. ಯಾಕೆಂದರೆ ನಾಟಿ ಮೊಟ್ಟೆಯಲ್ಲಿ ಮಗುವಿಗೆ ಬೇಕಾದ ಒಳ್ಳೆಯ ಪ್ರೂಟೀನ್ ಸಿಗುತ್ತದೆ. ಮತ್ತೆ ನೈಸರ್ಗಿಕ ವಿಟಮಿನ್ಸ್ ಸಹ ಇದರಿಂದ ಸಿಗುವುದರಿಂದ ಮಗುವಿನ ಮೂಳೆಗಳು ಗಟ್ಟಿಯಾಗುತ್ತವೆ.

7. ಹಣ್ಣುಗಳು :
ಕೆಲವರಿಗೆ ಹಣ್ಣುಗಳನ್ನು ತಿನ್ನಲು ಬೇಜಾರಾಗುತ್ತದೆ. ಅಂತಹವರು ಜ್ಯೂಸು ಮಾಡಿ ಕುಡಿಯಬೇಕು. ಹಣ್ಣುಗಳಲ್ಲಿ ಸಾಕಷ್ಟು ಪೋಷಕಾಂಶಗಳು ದೇಹಕ್ಕೆ ಸಿಗುತ್ತವೆ. ದೇಹವನ್ನು ಯಾವಾಗಲೂ ಹೈಡ್ರೇಟ್ ಆಗಿ ಇಡುತ್ತವೆ. ಮಲಬದ್ಧತೆ ಕಡಿಮೆ ಮಾಡುತ್ತವೆ. ದೇಹ ಸದೃಢವಾಗಿ ಇದ್ದು ರೋಗನಿರೋಧಕ ಶಕ್ತಿ ಜಾಸ್ತಿ ಮಾಡುತ್ತವೆ.
ಆಪಲ್, ಅರೇಂಜ್, ಕಿತ್ತಳೆ, ದಾಳಿಂಬೆ, ಕಿವಿ ಹಣ್ಣು, ಲಿಚ್ಚಿ, ಅವಕಾಡೊ ಈ ಎಲ್ಲಾ ಹಣ್ಣುಗಳನ್ನು ಪ್ರತೀ ದಿನ ತಿನ್ನಲೇಬೇಕು.

ಬೆರ್ರಿ ಹಣ್ಣುಗಳು ತುಂಬಾ ಮುಖ್ಯ ಬ್ಲೂಬೆರ್ರಿ, ಬ್ಲಾಕ್ಬೆರ್ರಿ, ಸ್ಟ್ರಾಬೆರಿ ಇತ್ಯಾದಿ.
ಇವು ಸ್ವಲ್ಪ ರೇಟ್ ಜಾಸ್ತಿ ಇರುತ್ತವೆ ಆದರೂ ಪರವಾಗಿಲ್ಲ, ವಾರಕ್ಕೆ ಒಂದು ಸಾರಿ ತಿಂದರೂ ಒಳ್ಳೆಯದು.

 8. ಮೀನು :
ಮೀನಿನಲ್ಲಿ ಓಮೆಗಾ-3 ಫ್ಯಾಟಿ ಆಸಿಡ್ ಇರುವುದರಿಂದ ಇದನ್ನು ತಿಂದರೆ ಮಗುವಿನ ಮೆದುಳು ಚುರುಕಾಗುತ್ತದೆ. ಮತ್ತೆ ಕುರಿ ಅಥವಾ ಮೇಕೆ ಕಾಲಿನ ಸೂಪ್ ಮಾಡಿಸಿ ಕುಡಿಯಬೇಕು ಇದು ತಾಯಿ ಮತ್ತೆ ಮಗುವಿನ ಮೂಳೆಗಳನ್ನು ಗಟ್ಟಿ ಮಾಡುತ್ತದೆ. ಮೀನನ್ನು ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ತಿನ್ನಬೇಕು.
ಚಿಕನ್ ತಿಂದರೆ ಸ್ವಲ್ಪ ಪ್ರಮಾಣದ ಪ್ರೂಟೀನ್ ಸಿಗುತ್ತದೆ, ಆದರೆ ಅದು ದೇಹಕ್ಕೆ ತುಂಬಾ ಹೀಟ್, ಅದಕ್ಕೆ ತಾಯಿಯು ಆದಷ್ಟೂ ತಿನ್ನದಿರುವುದೇ ಒಳ್ಳೆಯದು.

ನಾನು ಮೇಲೆ ತಿಳಿಸಿರುವ ಇಷ್ಟೂ ಆಹಾರ ಪಧಾರ್ಥಗಳನ್ನು ಪ್ರತಿ ದಿನ ತಿಂದರೆ ತಾಯಿ ಮತ್ತು ಮಗುವಿನ ಆರೋಗ್ಯ ಚನ್ನಾಗಿರುತ್ತದೆ. ಇವನ್ನು ಬಿಟ್ಟು ಮುದ್ದೆ, ಚಪಾತಿ, ಪಲ್ಯಗಳು ಇವನ್ನು ದಿನನಿತ್ಯದ ಆಹಾರಕ್ಕೆ ಸೇರಿಸಬೇಕು.
ರಾತ್ರಿ ಮಲಗುವಾಗ ಒಂದು ಗ್ಲಾಸ್ ಹಾಲಿನೊಂದಿಗೆ ಸ್ವಲ್ಪ ಹರಿಶಿಣ ಸೇರಿಸಿ ಕುಡಿದರೆ ಹರಿಶಿಣದಲ್ಲಿರುವ ಆಂಟಿ ಆಕ್ಸಿಡೆಂಟ್ ದೇಹಕ್ಕೆ ಸೇರಿ ತಾಯಿಗೆ ಸಿಜರಿನ್ ಸಮಯದಲ್ಲಾದ ಗಾಯಗಳು ಬೇಗ ವಾಸಿಯಾಗುತ್ತವೆ.

ನೀರು ಜಾಸ್ತಿ ಕುಡಿಯಬೇಕು ಮತ್ತೆ ದ್ರವ ಪಧಾರ್ಥಗಳು ಹಣ್ಣುಗಳ ಜ್ಯೂಸ್ ಜಾಸ್ತಿ ಕುಡಿಯುವುದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಮತ್ತೆ ಮಗುವಿಗೆ ಹಾಲು ಚನ್ನಾಗಿ ಉತ್ಪಾದನೆಯಾಗುತ್ತದೆ.

ತಾಯಿಗೆ ಅಜೀರ್ಣದ ಅನುಭವ ಆದರೆ ಬಿಸಿ ನೀರಿಗೆ ಜೀರಿಗೆ ಹಾಕಿ ಮಿಕ್ಸ್ ಮಾಡಿ ಒಂದು ಗ್ಲಾಸ್ ಕುಡಿಯಬೇಕು. ಆಗ ಅಜೀರ್ಣದ ಸಮಸ್ಯೆ ಇರುವುದಿಲ್ಲ.

ನಮ್ಮ ದೇಶದಲ್ಲಿ ಹೆರಿಗೆಯ ನಂತರ ತಾಯಂದಿರು ಪೌಷ್ಠಿಕ ಆಹಾರದ ಕೊರತೆಯಿಂದ ತುಂಬಾ ಬಳಲುತ್ತಾರೆ. ಆದ್ದರಿಂದ ನಾನು ತಿಳಿಸಿರುವ ಆಹಾರದಿಂದ ಸರಿಯಾದ ಪೋಷಕಾಂಶಗಳು ಸಿಗುವುದಲ್ಲದೆ ಮಗು ಒಳ್ಳೆಯ ಬೆಳವಣಿಗೆ ಆಗುತ್ತದೆ. 

Avoid Some Foods After Pregnancy ತಾಯಿಯು ತಪ್ಪಿಸಬೇಕಾದ ಆಹಾರಗಳು :

ಕೆಲವೊಂದು ಪಧಾರ್ಥಗಳನ್ನು ಹಾಲುಣಿಸುವ ಸಮಯದಲ್ಲಿ ತಾಯಿ ಯಾವುದೇ ಕಾರಣಕ್ಕೂ ತಿನ್ನಬಾರದು ಅವು ಯಾವುವೆಂದರೆ;

  •  ಬೀದಿ ಬದಿ ಸಿಗುವ ಮಸಾಲೆ ಪಧಾರ್ಥಗಳು.
  •  ಗೋಬಿ, ಪಿಜ್ಜಾ ಬರ್ಗರ್, ಇತ್ಯಾದಿ.
  •  ಕಾಫಿ, ಟೀ, ಮತ್ತೆ ಕೆಫೀನ್ ಪಧಾರ್ಥಗಳು.(ಇದರಿಂದ ದೂರವಿರುವುದು ತುಂಬಾ ಒಳ್ಳೆಯದು) 
  •  ಫ್ರಿಡ್ಜ್ ನಲ್ಲಿ ಇರುವ ತಣ್ಣನೆಯ ಪಧಾರ್ಥಗಳು.
  •  ಕೆಲವು ಮಹಿಳೆಯರಿಗೆ ಮಧ್ಯಪಾನ ಅಭ್ಯಾಸ ಇರುತ್ತದೆ ಅದರಿಂದ ದೂರವಿರಬೇಕು.
  •  ಮಗುವಿಗೆ ಅಲರ್ಜಿ ಆಗುವ ಪಧಾರ್ಥಗಳಿಂದ ದೂರವಿರಬೇಕು.
  •  ಪ್ರತಿಯೊಂದು ಪಧಾರ್ಥಗಳನ್ನು ಬೇಯಿಸಿಯೇ ತಿನ್ನಬೇಕು.
  •  ಆರ್ಟಿಫಿಷಿಯಲ್ ಸ್ವೀಟ್ನರ್ ಆಕಿರುವ ಪಧಾರ್ಥಗಳನ್ನು ತಿನ್ನಬಾರದು.
After pregnancy food

ಹೆರಿಗೆ ಆದ ನಂತರ ತಾಯಿ ಮತ್ತೆ ಮಗುವಿಗೆ ವಿಶೇಷ ಆರೈಕೆ, ಬೆಂಬಲ ಮತ್ತೆ ಎಚ್ಚರವಾಗಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ತಾಯಿ ಮತ್ತೆ ಮಗುವಿನ ಮರಣಗಳು ಹೆರಿಗೆಯ ನಂತರದ ಮೊದಲ 6 ವಾರಗಳಲ್ಲಿ ಸಂಭವಿಸುವುದರಿಂದ ತುಂಬಾ ಹೆಚ್ಚರಿಕೆಯಿಂದ ಇರಬೇಕು. ತಾಯಿಯ ಹಾಲು ಮಗುವಿಗೆ ತುಂಬಾ ಅಗತ್ಯ. ಮಗು ಒಂದು ವರ್ಷದ ಬೆಳವಣಿಗೆ ತಾಯಿಯ ಹಾಲಿನ ಮೇಲೆ ನಿಂತಿರುತ್ತದೆ.
ಆದ್ದರಿಂದ ಸಮಯಕ್ಕೆ ಸರಿಯಾಗಿ ತಾಯಿಯು ಒಳ್ಳೆಯ ಪೌಷ್ಟಿಕ ಆಹಾರ ತಿನ್ನುವುದು ತುಂಬಾ ಮುಖ್ಯ.

Foods After Pregnancy ನನಗೆ ವೈಯಕ್ತಿಕವಾಗಿ ಇದರ ಬಗ್ಗೆ ಅರಿವಿಲ್ಲದಿದ್ದರೂ ಹಲವಾರು ಅಥೆಂಟಿಕ್ ಡೇಟಾ, ಮತ್ತೆ ಆರ್ಟಿಕಲ್ ಗಳನ್ನ ಓದಿ ತಿಳಿದುಕೊಂಡು ಈ ಬ್ಲಾಗ್ ಬರೆದಿದ್ದೇನೆ. ಹೆರಿಗೆಯ ನಂತರ ತಾಯಿ ಮತ್ತೆ ಮಗುವಿನ ಆರೋಗ್ಯ ಮತ್ತೆ ಬೆಳವಣಿಗೆ, ಸರಿಯಾಗಿ ಆಗಬೇಕೆಂದರೆ ನಾನು ಮೇಲೆ ತಿಳಿಸಿರುವ ಈ 8 ಉತ್ತಮ ಪೌಷ್ಟಿಕ ಆಹಾರವನ್ನು ದಿನನಿತ್ಯ ತಪ್ಪದೆ ಸೇವಿಸಿ. ಇದು ನಿಮ್ಮ ಮಗುವಿನ ಜೀವನವನ್ನು ಉತ್ತಮಗೊಳಿಸುತ್ತದೆ.

FAQs

ಹೆರಿಗೆಯ ನಂತರ ಯಾವ ಆಹಾರ ತಾಯಿಗೆ ಹಾಲನ್ನು ಜಾಸ್ತಿ ಮಾಡುತ್ತದೆ?

ಬೆಳಿಗ್ಗೆ ಒಂದು ಗ್ಲಾಸ್, ರಾತ್ರಿ ಒಂದು ಗ್ಲಾಸ್ ಹಾಲು, ರಾತ್ರಿ ನೆನೆಸಿರುವ ಬಾದಾಮಿ ಬೀಜ ಮತ್ತೆ ವಾಲ್ನಟ್, ಹಣ್ಣು ಮತ್ತೆ ತರಕಾರಿಗಳು ಹಾಗೂ ಸೊಪ್ಪುಗಳನ್ನು ತಿನ್ನುವುದರಿಂದ ಮತ್ತೆ ಸಾಂಬಾರಿನಲ್ಲಿ ಬೆಳ್ಳುಳ್ಳಿಯನ್ನು ತಪ್ಪದೆ ತಿನ್ನುವುದರಿಂದ ತಾಯಿಗೆ ಹಾಲು ಉತ್ಪಾದನೆ ಹೆಚ್ಚಾಗುತ್ತದೆ.

ಬೇಡ, ಏಕೆಂದರೆ ತಣ್ಣನೆಯ ಪಧಾರ್ಥಗಳನ್ನು ತಿನ್ನುವುದರಿಂದ ತಾಯಿಗೆ ಜೀರ್ಣ ಕ್ರಿಯೆಗೆ ತೊಂದರೆಯಾಗುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಆದಷ್ಟು ಫ್ರಿಡ್ಜ್ ಬಳಸುವುದನ್ನು ನಿಲ್ಲಿಸಬೇಕು.

ಹೌದು, ಮೊಟ್ಟೆಯಲ್ಲಿ ಒಳ್ಳೆಯ ಪ್ರೊಟೀನ್ ಅಂಶ ಇರುತ್ತದೆ. ಆದಷ್ಟೂ ಸಿಕ್ಕರೆ ದಿನಕ್ಕೊಂದು ನಾಟಿ ಮೊಟ್ಟೆ ತಿನ್ನಿ ಅದು ತಾಯಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

1 thought on “8 Best Foods After Pregnancy || ಹೆರಿಗೆಯ ನಂತರ ಮಹಿಳೆ ತಿನ್ನಲೇಬೇಕಾದ 8 ಪೌಷ್ಠಿಕ ಆಹಾರಗಳು”

  1. Pingback: MILK : Daily 1 Glass 5 Unknown Secret Health Benifits

Leave a Comment

Your email address will not be published. Required fields are marked *

Scroll to Top