MILK- Importance of Drinking Milk in 2026|| ಹಾಲಿನ ಮಹತ್ವ

Spread the love

ಹಾಲು Milk ನಾವು ಚಿಕ್ಕ ಮಕ್ಕಳಿಂದ ವಯಸ್ಸಾದ ಮುದುಕರ ತನಕ ಪ್ರತಿಯೊಬ್ಬರೂ ಕುಡಿಯುವ ನಮ್ಮ ಆಹಾರದ ಒಂದು ಬಾಗ. ಇದು ಚಿಕ್ಕಮಕ್ಕಳ ಹಲ್ಲಿನ ಬೆಳವಣಿಗೆಯಿಂದ ಇಡಿದು ಪ್ರತಿಯೊಬ್ಬರ ದೇಹದ ಮೂಳೆಗಳು ಮತ್ತು ಮಾಂಸಖಂಡಗಳು ಗಟ್ಟಿಯಾಗುವುದಕ್ಕೆ ಮತ್ತೆ ದೇಹಕ್ಕೆ ಯಾವುದೇ ಕಾಯಿಲೆ ಬಾರದೆ ಇರುವ ಇಮ್ಮ್ಯೂನಿಟಿ ಪವರ್ ಹೆಚ್ಚಿಸಲು ಸಹಾಯಮಾಡುತ್ತದೆ.

Milk Benifits

Milk ನಮ್ಮ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ವಿಟಮಿನ್ಸ್, ಪ್ರೋಟೀನ್ಸ್, ಕ್ಯಾಲ್ಶಿಯಂ, ಪೊಟ್ಯಾಶಿಯಂ, ಐರನ್ ಪ್ರತಿಯೊಂದು ಪೋಷಕಾಂಶವಿರುವ ಈ ಹಾಲನ್ನು ನಾವು ಪ್ರತೀದಿನ ಕುಡಿಯುವುದರಿಂದ ನಮ್ಮ ಮೆದುಳು ಚುರುಕಾಗಿರುವುದು, ಮತ್ತೆ ನಮ್ಮ ದೇಹ ಗಟ್ಟಿ ಮುಟ್ಟಾಗಿರುತ್ತದೆ.
ನಾವು ಹುಟ್ಟಿದ ಮರುಕ್ಷಣದಿಂದ ತಾಯಿಯ ಹಾಲನ್ನು ಕುಡಿದು ದೊಡ್ಡವರಾಗಿರುತ್ತೇವೆ. ತಾಯಿಯ ಹಾಲು ಎಷ್ಟು ಮುಖ್ಯ ಎಂದರೆ ನಮ್ಮ ದೇಹದ ಬೆಳವಣಿಗೆ ಬುದ್ದಿಯ ಬೆಳವಣಿಗೆ ಪ್ರತಿಯೊಂದರ ಮೇಲೆ ಅದು ಪ್ರಬಾವ ಬೀರುತ್ತದೆ.
ನಾವು ಕುಡಿಯುತ್ತಿರುವ ಹಾಲು ಹಸು, ಎಮ್ಮೆ, ಮೇಕೆ ಮತ್ತೆ ಕುರಿ, ಎಲ್ಲದಕ್ಕಿಂತ ಚಿಕ್ಕಮಕ್ಕಳಿಗೆ ಶ್ರೇಷ್ಠ ಅದು ತಾಯಿಯ ಹಾಲು. ಮಗು ಬೆಳೆದು ಒಂದು ವರ್ಷ ಆಗುವ ವರೆಗೂ ತಾಯಿಯ ಎದೆ ಹಾಲನ್ನೇ Breast milk ಕುಡಿಸಬೇಕು. ಇದರಿಂದ ಮಗುವಿಗೆ ಯಾವುದೇ ರೀತಿಯ ಇನ್ಫೆಕ್ಷನ್, ಕಾಯಿಲೆಗಳು ಬರುವುದಿಲ್ಲ.

2026ರಲ್ಲಿ ಯಾಕೆಂದರೆ ಇತ್ತೀಚಿಗೆ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಜಾಸ್ತಿಯಾಗುತ್ತಿದೆ. ನಮ್ಮ ಜನ ಯಾವ ಹಾಲು ಕುಡಿಯಬೇಕು? ನೇರ ಡೈರಿ ಹಾಲು ಕುಡಿಯುವುದೋ ಅಥವಾ ಅಂಗಡಿಯಲ್ಲಿ ಸಿಗುವ ಪ್ಯಾಕೆಟ್ ಹಾಲು ಕುಡಿಯುವುದೋ, ಅಥವಾ ಹಾಲಿನ ಪುಡಿ, ಟೆಟ್ರಾ ಪ್ಯಾಕೆಟ್ ಹಾಲು ಕುಡಿಯಬೇಕೋ ಎನ್ನುವ ಪ್ರಶ್ನೆಗಳಿಗೆ ಉತ್ತರ ಉಡುಕುತ್ತಿದ್ದಾರೆ.

ಈ ಬ್ಲಾಗ್ ನಲ್ಲಿ ನಾನು ಯಾವ ಹಾಲು ಕುಡಿದರೆ ಒಳ್ಳೆಯದು, ಯಾವ ಸಮಯದಲ್ಲಿ ಕುಡಿಯಬೇಕು, ಮಗುವಿಗೆ ತಾಯಿ ಹಾಲಿನ ಮಹತ್ವ, ಹಾಲಿನಿಂದ ಕೆಲವೊಂದು ತೊಂದರೆಗಳು, ಈ ರೀತಿಯ ವಿಷಯಗಳನ್ನ ತಿಳಿದುಕೊಳ್ಳೋಣ ಬನ್ನಿ.

ಹಾಲಿನಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವ ಅನೇಕ ಪೋಷಕಾಂಶಗಳಿವೆ ಅದರಲ್ಲಿ ಮುಖ್ಯವಾಗಿ;

  • ಕ್ಯಾಲ್ಸಿಯಂ
  • ಪ್ರೋಟೀನ್
  • ವಿಟಮಿನ್ D
  • ವಿಟಮಿನ್ B12
  • ಫಾಸ್ಫರಸ್
  • ಪೊಟ್ಯಾಶಿಯಂ
  • Good fats
  • ಮ್ಯಾಗ್ನೀಶಿಯಂ
    ಇವೆಲ್ಲಾ ಪೋಷಕಾಂಶಗಳು ನಮ್ಮ ದೇಹದ ಮೂಳೆ, ಮಾಂಸ ಖಂಡಗಳು ಮತ್ತೆ ಹಲ್ಲುಗಳನ್ನು ಗಟ್ಟಿ ಮಾಡಲು, ದೇಹದ ಶಕ್ತಿ ಜಾಸ್ತಿ ಮಾಡಿ ಮೆದುಳನ್ನು ಶಾರ್ಪ್ ಮಾಡಲು ಸಹಾಯ ಮಾಡುತ್ತವೆ.

ಹಾಲು ಕುಡಿಯುವುದು ಏಕೆ ಮುಖ್ಯ Why Drinking Milk is Important?

1. ದೇಹದ ಮೂಳೆಗಳನ್ನು ಬಲಪಡಿಸುತ್ತದೆ :
ಪ್ರತೀ ದಿನ ಒಂದು ಗ್ಲಾಸ್ ಹಾಲು ಕುಡಿದರೆ, ಹಾಲಿನಲ್ಲಿ ಇರುವ ಕ್ಯಾಲ್ಶಿಯಂ ಮತ್ತೆ ಪ್ರೊಟೀನ್ ನಮ್ಮ ದೇಹದ ಮೂಳೆಗಳನ್ನು ಮತ್ತೆ ಹಲ್ಲುಗಳನ್ನು ಗಟ್ಟಿಯಾಗಿ ಶಕ್ತಿಯುತವಾಗಿ ಇರುವಂತೆ ನೋಡಿಕೊಳ್ಳುತ್ತದೆ.
ಒಂದು ಗ್ಲಾಸ್ ಹಾಲು ಇದರ ಜೊತೆಗೆ ಹಾಲಿನ ಉತ್ಪನ್ನಗಳಾದ ಬೆಣ್ಣೆ, ಮೊಸರು, ತುಪ್ಪ ತಿನ್ನುವುದರಿಂದ ಸಣ್ಣ ಮಕ್ಕಳ ಬೆಳವಣಿಗೆಗೆ ಇದು ತುಂಬಾ ಸಹಾಯಕಾರಿ.

2. ದೇಹಕ್ಕೆ ಶಕ್ತಿ ನೀಡುತ್ತದೆ :
ಬೆಳಿಗ್ಗೆ ಒಂದು ಗ್ಲಾಸ್ ಹಾಲು ಕುಡಿದರೆ ತಕ್ಷಣಕ್ಕೆ ನಮ್ಮ ದೇಹಕ್ಕೆ ಶಕ್ತಿ ಬರುತ್ತೆ. ಯಾಕೆಂದರೆ ಹಾಲಿನಲ್ಲಿರುವ ಗುಡ್ ಫ್ಯಾಟ್, ಮತ್ತೆ ಪ್ರೊಟೀನ್ ದೇಹಕ್ಕೆ ಸೇರಿದ ತಕ್ಷಣ ಒಂದು ಚೈತನ್ಯ ಕೊಡುತ್ತದೆ.

3. ರೋಗನಿರೋಧಕ ಶಕ್ತಿ Immunity power :
ನಮಗೆ ಯಾವುದೇ ರೀತಿಯ ಕಾಯಿಲೆಗಳು, ಇನ್ಫೆಕ್ಷನ್ ಬಾರದಂತೆ, ಒಂದು ವೇಳೆ ಬಂದರೂ ಅದನ್ನು ತಡೆದುಕೊಳ್ಳುವ ಶಕ್ತಿ ದೇಹಕ್ಕೆ ಕೊಡಲು ಇಮ್ಮ್ಯೂನಿಟಿ ಪವರ್ ಬೂಸ್ಟ್ ಮಾಡಲು ಹಾಲಿನಲ್ಲಿರುವ ವಿಟಮಿನ್ಸ್ ಸಹಾಯ ಮಾಡುತ್ತವೆ.

4. ಜೀರ್ಣಕ್ರಿಯೆಗೆ ಸಹಾಯ :
ನಾವು ತಿಂದಂತಹ ಆಹಾರ ಜೀರ್ಣವಾಗಲು ಹಾಲಿನಲ್ಲಿರುವ ಪ್ರೊಟೀನ್ ಮತ್ತೆ ವಿಟಮಿನ್ B ಆಹಾರವನ್ನು ಎನರ್ಜಿಯಾಗಿ ಕನ್ವರ್ಟ್ ಮಾಡುತ್ತೆ. ವಿಟಮಿನ್ D ಆಹಾರದ ಕ್ಯಾಲ್ಶಿಯಂ ಅನ್ನು absorb ಮಾಡಿ ಶಕ್ತಿಯಾಗಿ ಪರಿವರ್ತಿಸುತ್ತೆ. ಮತ್ತೆ ಹಾಲಿನಲ್ಲಿರುವ ಸೆಲೆನಿಯಮ್ ಮೆಟಬಾಲಿಸಂ ಅನ್ನು stabilize ಮಾಡುತ್ತೆ.

5. ಉತ್ತಮ ನಿದ್ದೆ :
ನೀವು ಕೇಳಿರಬೇಕು ಅಥವಾ ತುಂಬಾ ಜನ ಇದನ್ನು ಮಾಡುತ್ತಿರಬೇಕು.
ರಾತ್ರಿ ಮಲಗುವಾಗ ಒಂದು ಗ್ಲಾಸ್ ಹಾಲು ಕುಡಿದರೆ ಹಾಲಿನಲ್ಲಿ ಇರುವ ಟ್ರಿಪ್ಟೋಫಾನ್ ಎನ್ನುವ ಅಮೈನೊ ಆಸಿಡ್ ಇದು ದೇಹದ ಮೆಲಟೋನಿನ್ ಮತ್ತೆ ಸಿರಟೋನಿನ್ ಅನ್ನು ಟ್ರಿಗರ್ ಮಾಡಿ  ನಮ್ಮ ದೇಹವನ್ನು ರಿಲ್ಯಾಕ್ಸ್ ಮಾಡಿ ಒಳ್ಳೆಯ ನಿದ್ದೆ ಬರುವ ಹಾಗೆ ಮಾಡುತ್ತದೆ.
ಯಾರಿಗೆಲ್ಲ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ ಅವರು ಇದನ್ನು ಪ್ರಯೋಗಿಸಿ.

ಮಗುವಿಗೆ ತಾಯಿಹಾಲು (Mother Milk) ಯಾಕೆ ಅತ್ಯಂತ ಮುಖ್ಯ?

Why Breast Milk is Important ತಾಯಿಹಾಲಿನ ಪ್ರಮುಖ ಲಾಭಗಳು :

1. ರೋಗಗಳಿಂದ ರಕ್ಷಣೆ :
ತಾಯಿಯ ಎದೆ ಹಾಲು ಮಗುವಿನಲ್ಲಿ ಆಂಟಿಬಾಡೀಸ್ ಉತ್ಪಾದಿಸಿ ಯಾವುದೇ ರೀತಿಯ ವೈರಸ್, ಬ್ಯಾಕ್ಟಿರಿಯಾ ಕಾಯಿಲೆ ಬಾರದೆ ಇರುವ ಹಾಗೆ ಕಾಪಾಡುತ್ತದೆ.

2. ಜೀರ್ಣಕ್ರಿಯೆಗೆ ಸುಲಭ :
ನಾರ್ಮಲ್ ಪಾಕೆಟ್ ಹಾಲಿಗಿಂತ ತಾಯಿಯ ಎದೆ ಹಾಲು ಮಗುವಿಗೆ ಬೇಗ ಜೀರ್ಣವಾಗುತ್ತದೆ.

3. ಮೆದುಳಿನ ಬೆಳವಣಿಗೆ :
ತಾಯಿಯ ಎದೆ ಹಾಲಿನಲ್ಲಿರುವ ಒಳ್ಳೆ ಫ್ಯಾಟ್ ಅಂಶ ಮತ್ತೆ DHA ಮಗುವಿನ ಬೆಳವಣಿಗೆಗೆ ತುಂಬಾ ಸಹಾಯ ಮಾಡುತ್ತದೆ.

4. ತಾಯಿ ಮತ್ತು ಮಗುವಿನ ಬಾಂಧವ್ಯ ಹೆಚ್ಚಿಸುತ್ತದೆ :
ಸ್ತನಪಾನ ಮಾಡುವಾಗ ತಾಯಿ ಮತ್ತು ಮಗುವಿನ ನಡುವಿನ ಭಾವನಾತ್ಮಕ ಸಂಬಂಧ ಗಟ್ಟಿಯಾಗುತ್ತದೆ.

5. ಅಲರ್ಜಿ ಕಡಿಮೆ :
ತಾಯಿಯ ಎದೆ ಹಾಲು ಕುಡಿದು ಬೆಳೆದ ಮಕ್ಕಳಲ್ಲಿ ಅಲರ್ಜಿ ಸಮಸ್ಯೆಗಳು ಮತ್ತೆ ಅಸ್ತಮಾದಂತ ಕಾಯಿಲೆಗಳು ಬರುವುದಿಲ್ಲ.

ರಾತ್ರಿ ಮಲಗುವ ಮುಂಚೆ ಹಾಲು ಕುಡಿಯುವುದು ಯಾಕೆ ಒಳ್ಳೆಯದು?

ತುಂಬಾ ಜನ ಬೆಳಿಗ್ಗೆ ಮಾತ್ರ ಹಾಲು ಕುಡಿಯುತ್ತಾರೆ. ಆದರೆ ಕೆಲವರು ರಾತ್ರಿ ಹಾಲು ಕುಡಿಯುತ್ತಾರೆ. ರಾತ್ರಿ ಹಾಲು ಕುಡಿಯುವುದು ವೈಜ್ಞಾನಿಕವಾಗಿ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು.

1. ಉತ್ತಮ ನಿದ್ರೆ ಬರುತ್ತದೆ :
ರಾತ್ರಿ ಒಂದು ಗ್ಲಾಸ್ ಹಾಲು ಕುಡಿದು ಮಲಗುವುದರಿಂದ ಚನ್ನಾಗಿ ನಿದ್ದೆ ಬರುತ್ತದೆ. ಹಾಲಿನಲ್ಲಿರುವ ಟ್ರಿಪ್ಟೋಫಾನ್ ಮತ್ತು ಮೆಲಟೋನಿನ್ ಅಂಶಗಳು ನಮ್ಮ ಮೆದುಳಿನ ನರಗಳನ್ನು ಆಕ್ಟಿವ್ ಮಾಡಿ ನಿದ್ದೆ ತರಿಸುತ್ತವೆ.

2. ಹೊಟ್ಟೆ ತುಂಬಿದ ಅನುಭವ :
ತುಂಬಾ ಜನಕ್ಕೆ ರಾತ್ರಿ ಊಟ ಮಾಡಿ ಮಲಗಿದರೆ ಮಧ್ಯರಾತ್ರಿ ಹೊಟ್ಟೆ ಹಸಿಯುತ್ತದೆ.
ಅಂತಹವರು ಒಂದು ಗ್ಲಾಸ್ ಹಾಲು ಕುಡಿದು ಮಲಗಿದರೆ ಹಸಿವು ಆಗುವುದಿಲ್ಲ ಮತ್ತೆ ಹೊಟ್ಟೆ ತುಂಬಿದ ಅನುಭವ ಇರುತ್ತದೆ.

3. ಮಸಲ್ ಬೆಳವಣಿಗೆ :
ನಾವು ಬೆಳಿಗ್ಗೆಯಿಂದ ವ್ಯಾಯಾಮ ಅಥವಾ ಬೇರೆ ಯಾವುದೇ ಕೆಲಸ ಮಾಡಿ ರಾತ್ರಿ ಮಲಗಿದಾಗ ನಮ್ಮ ಇಡೀ ದೇಹ ವಿಶ್ರಾಂತಿ ತೆಗೆದುಕೊಳ್ಳುತ್ತಿರುತ್ತದೆ. ಈ ಸಮಯದಲ್ಲಿ ನಾವು ರಾತ್ರಿ ಕುಡಿದ ಹಾಲಿನಲ್ಲಿರುವ ಪ್ರೊಟೀನ್ ನಮ್ಮ ಮಸಲ್ ಚನ್ನಾಗಿ ಪುನರ್ ಬೆಳವಣಿಗೆ ಆಗಲು ಸಹಾಯ ಮಾಡುತ್ತದೆ.

4. ಮೂಳೆಗಳಿಗೆ ಭಲ :
ರಾತ್ರಿ ಸಮಯದಲ್ಲಿ ದೇಹ ವಿಶ್ರಾಂತಿ ಪಡೆಯುವುದರಿಂದ ಮೂಳೆಗಳ ಶಕ್ತಿ ಹೆಚ್ಚಾಗಲು ರಾತ್ರಿ ಹಾಲು ಕುಡಿಯುವುದು ಮುಖ್ಯ ಯಾಕೆಂದರೆ ಹಾಲಿನಲ್ಲಿರುವ ಕ್ಯಾಲ್ಶಿಯಂ ಮೂಳೆಗಳು ಗಟ್ಟಿಯಾಗಲು ಸಹಾಯ ಮಾಡುತ್ತವೆ.

5. ಮನಸ್ಸಿಗೆ ಶಾಂತಿ :
ನಾವು ದಿನನಿತ್ಯ ಯಾವುದ್ಯಾವುದೋ ಒತ್ತಡಕ್ಕೆ ಒಳಗಾಗುತ್ತಿರುತ್ತೇವೆ. ಆದ್ದರಿಂದ ರಾತ್ರಿ ಬಿಸಿ ಹಾಲು ಒಂದು ಗ್ಲಾಸ್ ಕುಡಿದು ಮಲಗುವುದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ.

Drinking milk benifits

ಯಾವ ಹಾಲು ಕುಡಿಯುವುದು ಮುಖ್ಯ.

ನಾವು ಕುಡಿಯುವ ಪ್ರತಿಯೊಂದು ಹಾಲಿಗೂ ತನ್ನದೇ ಆದ ಪ್ರಾಮುಖ್ಯತೆ ಇರುತ್ತದೆ. 2026 ರಲ್ಲಿ ನಿಮಗೆ ವಿಧ ವಿಧದ ಹಾಲು ಸಿಗುತ್ತದೆ. ಅದರಲ್ಲಿ ಮುಖ್ಯವಾಗಿ ನಾವು ಪ್ರತೀದಿನ ಕುಡಿಯುವುದನ್ನು ನೋಡೋಣ.

1. ಹಸು ಹಾಲು :
ಇದು ಸಾಮಾನ್ಯವಾಗಿ ನಮ್ಮ ದೇಶದಲ್ಲಿ ತುಂಬಾ ಜನ ಕುಡಿಯುವ ಹಾಲು.
ಇದರಲ್ಲಿ ಕಡಿಮೆ ಫ್ಯಾಟ್ ಇರುವುದರಿಂದ ಬೇಗ ಜೀರ್ಣವಾಗುತ್ತದೆ, ಹಾಗೆ ಮಕ್ಕಳಿಗೂ ಇದನ್ನು ಕುಡಿಸಬಹುದು.

2. ಎಮ್ಮೆ ಹಾಲು :
ಹಳ್ಳಿಗಳ ಕಡೆ ತುಂಬಾ ಜನ ಇದನ್ನು ಕುಡಿಯುತ್ತಾರೆ. ಆದರೆ ನಗರಗಳಲ್ಲಿ ಇದು ಹಸುವಿನ ಹಾಲಿನ ಜೊತೆ ಮಿಕ್ಸ್ ಸಿಗುತ್ತದೆ.
ಇದರಲ್ಲಿ ಜಾಸ್ತಿ ಕೊಬ್ಬಿನ ಅಂಶ ಇರುತ್ತದೆ. ಮತ್ತೆ ಕ್ಯಾಲ್ಶಿಯಂ ಅಂಶವೂ ಇರುವುದರಿಂದ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಜೀರ್ಣ ಕ್ರಿಯೆಗೆ ಸ್ವಲ್ಪ ನಿಧಾನವಾದರೂ ಒಳ್ಳೆಯ ಶಕ್ತಿ ಸಿಗುತ್ತದೆ, ಮತ್ತೆ ಸಣ್ಣ ಇರುವವರು ದಪ್ಪ ಆಗುವುದಕ್ಕೆ ಒಳ್ಳೆಯ ಹಾಲು.

3. ಮೇಕೆ ಹಾಲು :
ಇದು ತುಂಬಾ ಕಡಿಮೆ ಸಿಗುತ್ತದೆ, ಹಾಗೂ ತುಂಬಾ ಕಡಿಮೆ ಜನ ಕುಡಿಯುತ್ತಾರೆ.
ಈ ಹಾಲಿನಲ್ಲಿ ದೇಹಕ್ಕೆ ಬೇಕಾದ ಒಳ್ಳೆಯ ಪೋಷಕಾಂಶಗಳು (ವಿಟಮಿನ್ A ,C , D ಮತ್ತೆ B12) ಅಂಶ ಜಾಸ್ತಿ ಇರುತ್ತವೆ, ಕಡಿಮೆ ಫ್ಯಾಟ್ ಅಂಶ ಇರುವುದರಿಂದ ಬೇಗ ಜೀರ್ಣವಾಗುತ್ತದೆ, ಮತ್ತೆ ಇದರಲ್ಲಿ ಕಡಿಮೆ ಲ್ಯಾಕ್ಟೊಸ್ ಅಂಶ ಇರುವುದರಿಂದ anti-inflammatory and antioxidant properties ಅಂಶವನ್ನು ದೇಹಕ್ಕೆ ಬೂಸ್ಟ್ ಮಾಡುತ್ತದೆ.

4. A2 ಹಾಲು :
ಇತ್ತೀಚಿಗೆ ಮಾರುಕಟ್ಟೆಯಲ್ಲಿ A2 ಹಾಲು ತುಂಬಾ ಜನಪ್ರಿಯವಾಗಿದೆ. ಇದು ಸಹ ಸಾಮಾನ್ಯವಾಗಿ ಹಸುವಿನ ಹಾಲು, ಅಂದರೆ ದೇಸಿ ಹಸು (ಗಿರ್, ಮುರ್ರಾ, ಸಾಹಿವಾಲ್ ಇತ್ಯಾದಿ) ನಾಟಿ ಹಸುವಿನ ಹಾಲು ಇದರಲ್ಲಿ ಹೆಚ್ಚಿನ beta-casein ಪ್ರೊಟೀನ್, ಒಮೇಗಾ-3 ಪ್ಯಾಟಿ ಆಸಿಡ್ ಅಂಶ ಸಿಗುವುದರಿಂದ ಇದು ಮೊಳೆಗಳನ್ನು ಬಲಗೊಳಿಸುತ್ತದೆ, ಮತ್ತೆ ಹೃದಯ ಸಂಬಂದಿತ ಕಾಯಿಲೆಗೆ ಒಳ್ಳೆಯ ಔಷದಿ ತರ ಕೆಲಸ ಮಾಡುತ್ತದೆ.

5. ಸಸ್ಯ ಆಧಾರಿತ ಹಾಲು (Plant Based Milk) :
ಅಂದರೆ ಬಾದಾಮಿ ಹಾಲು, ಸೋಯಾ ಹಾಲು, ಓಟ್ಸ್ ನಿಂದ ತಯಾರಾದ ಹಾಲು, ಈ ರೀತಿಯ ಹಾಲು ಕೆಲವರಿಗೆ ಲ್ಯಾಕ್ಟೊಸ್ ಅಂಶ ಆಗದೇ ಇರುವವರಿಗೆ ಮತ್ತೆ ಸಸ್ಯಾಹಾರಿಗಳಿಗೆ(Vegan ಜನರಿಗೆ) ಒಳ್ಳೆಯದು.

ಮಕ್ಕಳಿಗೆ ಹಾಲಿನ ಪ್ರಾಮುಖ್ಯತೆ

ಹಾಲು ಮಕ್ಕಳ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಅದರಲ್ಲಿ ತಾಯಿಯ ಎದೆ ಹಾಲು ಮಗು ಹುಟ್ಟಿದ ಒಂದು ವರ್ಷದ ತನಕ ಬಹಳ ಮುಖ್ಯ ಪಾತ್ರ ವಹಿಸುತ್ತದೆ.
ಮಕ್ಕಳಿಗೆ ಹಾಲು ಯಾಕೆ ಬೇಕು?

  •  ಮೂಳೆಗಳ ಬೆಳವಣಿಗೆ ಆಗುವುದಕ್ಕೆ.
  •  ದೇಹ ಎತ್ತರ ಬೆಳೆಯುವುದಕ್ಕೆ.
  •  ದೇಹದಲ್ಲಿ ಆಂಟಿ ಬಾಡೀಸ್ ಬರುವುದಕ್ಕೆ.
  •  ಸರಿಯಾಗಿ ಮೆದುಳಿನ ಬೆಳವಣಿಗೆ ಆಗುವುದಕ್ಕೆ.
  •  ಯಾವುದೇ ಕಾಯಿಲೆ ಬಾರದಿರುವುದಕ್ಕೆ.

ಈ ಎಲ್ಲಾ ಕಾರಣಗಳಿಗೆ ಚಿಕ್ಕ ಮಕ್ಕಳು ಪ್ರತೀ ದಿನ ಹಾಲು ಕುಡಿಯುವುದು ಮುಖ್ಯ.

ಹಾಲು ಕುಡಿಯುವುದರಿಂದ ಆಗುವ ತೊಂದರೆಗಳು

ಹಾಲಿನಲ್ಲಿರುವ ಲ್ಯಾಕ್ಟೊಸ್, ಮತ್ತೆ ಸ್ಯಾಚುರೇಟೆಡ್ ಫ್ಯಾಟ್ ಅಂಶವು ತುಂಬಾ ಜನಕ್ಕೆ ಜೀರ್ಣಕ್ರಿಯೆ ಸಮಸ್ಯೆ ತರಿಸುತ್ತವೆ. ಇನ್ನೂ ಕೆಲವರಲ್ಲಿ ಅಸಿಡಿಟಿ, ಗ್ಯಾಸ್, ಒತ್ತೆ ಉಬ್ಬರ, ಮತ್ತೆ ಲೂಸ್ ಮೋಶನ್, ಕೆಲವರಲ್ಲಿ ಹಾರ್ಮೂನ್ ಬದಲಾವಣೆ, 
ಚರ್ಮದ ಅಲರ್ಜಿ, ಕೊಲೆಸ್ಟ್ರಾಲ್ ತರಹದ ಸಮಸ್ಯೆಗಳು ಬರುತ್ತವೆ.
ಆದರೆ ಇದು ಎಲ್ಲರಲ್ಲೂ ಬರುತ್ತದೆ ಎಂದೇನಿಲ್ಲ ಕೆಲವರಲ್ಲಿ ಈ ರೀತಿಯ ಸಮಸ್ಯೆಗಳು ಕಂಡುಬರುತ್ತವೆ.

ಹಾಲಿನ ಜೊತೆ ತಿನ್ನಬಹುದಾದ ಪಧಾರ್ಥಗಳು.

ಹಾಲಿನ ಜೊತೆ ಸೇವಿಸಬಹುದಾದ ಆರೋಗ್ಯಕರ ಪದಾರ್ಥಗಳೆಂದರೆ;

1. ಅರಿಶಿನ ಹಾಲು :
ಹಾಲಿನ ಜೊತೆ ಅರಿಶಿಣ ಮಿಕ್ಸ್ ಮಾಡಿ ಕುಡಿಯುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿ ಜಾಸ್ತಿ ಮಾಡುತ್ತದೆ.

2. ಕೇಸರಿ saffron milk :
ಇದು ಪ್ರತಿಯೊಬ್ಬರೂ ತಿಂದರೆ ಒಳ್ಳೆಯದು, ಆದರೆ ತಾಯಂದಿರು ಇದನ್ನು ತಿನ್ನುವುದರಿಂದ ಮಗುವಿನ ಚರ್ಮದ ಆರೋಗ್ಯ ಚನ್ನಾಗಿರುತ್ತದೆ. ಮತ್ತೆ ಜೀರ್ಣಕ್ರಿಯೆ ಚನ್ನಾಗಿ ಆಗುತ್ತದೆ, ಮಕ್ಕಳು ಸ್ವಲ್ಪ ಕೆಂಪಗೆ ಹುಟ್ಟುತ್ತಾರೆ ಎನ್ನುವ ನಂಬಿಕೆ.
3-4 ಕೇಸರಿ ದಳಗಳನ್ನು ಬಿಸಿ ಹಾಲಿನಲ್ಲಿ ಮಿಕ್ಸ್ ಮಾಡಿ ರಾತ್ರಿ ಹೊತ್ತು ಕುಡಿಯಬೇಕು.

3. ಏಲಕ್ಕಿ :
ಹಾಲಿನಲ್ಲಿ ಏಲಕ್ಕಿ ಹಾಕಿ ಕುಡಿಯುವುದರಿಂದ ಜೀರ್ಣಕ್ರಿಯೆ ಚನ್ನಾಗಿ ಆಗುತ್ತದೆ.

4. ಜೇನುತುಪ್ಪ :
ಜೇನುತುಪ್ಪ ಒಳ್ಳೆಯ ಆಂಟಿ ಫಂಗಲ್, ಆಂಟಿ ಬ್ಯಾಕ್ಟಿರಿಯಲ್ ಅಂಶಗಳನ್ನು ಹೊಂದಿರುವುದರಿಂದ ಹಾಲಿನಲ್ಲಿ ಮಿಕ್ಸ್ ಮಾಡಿ ಕುಡಿಯುವುದರಿಂದ ಗಂಟಲು ಸಮಸ್ಯೆ ದೂರವಾಗುತ್ತದೆ, ಒಳ್ಳೆಯ ನಿದ್ದೆ ಬರುತ್ತದೆ, ಮೂಳೆಗಳ ಬಲವರ್ಧನೆ ಆಗುತ್ತದೆ, ಹಾಗೂ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಕೊನೆಯದಾಗಿ ನನ್ನ ವೈಯಕ್ತಿಕ ಅಭಿಪ್ರಾಯ ಏನೆಂದರೆ ಹಾಲು ಕುಡಿಯುವುದು ನಮ್ಮ ದೇಹಕ್ಕೆ ಹೆಚ್ಚು ಪೌಷ್ಟಿಕಾಂಶಗಳನ್ನು ತಂದು ಕೊಡುತ್ತದೆ. ಪ್ರತೀದಿನ ಒಂದು ಗ್ಲಾಸ್ ಹಾಲು ಕುಡಿಯುವುದರಿಂದ ನಮ್ಮ ದೇಹಕ್ಕೆ ಒಳ್ಳೆಯ ಲಾಭಗಳು ಸಿಗುತ್ತವೆ. ಮನುಷ್ಯನ ದೇಹದ ಬೆಳವಣಿಗೆ ಜೊತೆಗೆ ಬುದ್ದಿ ಬೆಳವಣಿಗೆಯೂ ಹಾಲು ಕುಡಿಯುವುದರಿಂದ ಆಗುತ್ತದೆ.

ತುಂಬಾ ಅತಿಯಾದರೆ ಅಮೃತವೂ ವಿಷದಂತೆ, ಇದು ನೆನಪಿರಬೇಕು. ಜಾಸ್ತಿ ಯಾವುದನ್ನೂ ಬಳಸಬಾರದು. ನಮ್ಮ ದೇಹದ ಬೆಳವಣಿಗೆಗೆ ಆಹಾರದ ಜೊತೆಗೆ ಎಷ್ಟು ಬೇಕು ಅಷ್ಟನ್ನು ಮಾತ್ರ ಬಳಸಿಕೊಂಡರೆ ಒಳ್ಳೆಯ ಫಲಿತಾಂಶವನ್ನು ನೋಡಬಹುದು.

FAQS

ರಾತ್ರಿ ಹಾಲು ಕುಡಿಯುವುದು ಯಾಕೆ ಒಳ್ಳೆಯದು?

ನಾವು ರಾತ್ರಿ ಮಲಗುವ ಮುಂಚೆ ಒಂದು ಗ್ಲಾಸ್ ಬಿಸಿ ಹಾಲನ್ನು ಕುಡಿದರೆ, ಒಳ್ಳೆಯ ನಿದ್ದೆ ಬರುತ್ತದೆ. ಮತ್ತೆ ಹಾಲಿನಲ್ಲಿರುವ ಟ್ರಿಪ್ಟೋಫಾನ್ ಅಂಶ ಇದು ಒತ್ತಡದಿಂದ ಇರುವ ಮನಸ್ಸಿಗೆ ಚನ್ನಾಗಿ ರಿಲ್ಯಾಕ್ಸ್ ಮಾಡಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಮಗುವಿಗೆ ಕನಿಷ್ಠ 6 ತಿಂಗಳು ತಾಯಿಯು ಎದೆಹಾಲು ಕೊಡಬೇಕು. ಆದರೆ ಇದನ್ನು ಒಂದು ವರ್ಷದವರೆಗೂ ಬೇರೆ ಪೌಷ್ಟಿಕ ಆಹಾರದ ಜೊತೆ ಮುಂದುವರಿಸಬೇಕು.

A2 milk ಅಂದರೆ ಇದೂ ಸಹ ಹಸುವಿನ ಹಾಲು ಆದರೆ ಇದು ನಮ್ಮ ದೇಸಿ ತಳಿ ಆದಂತಹ ಗಿರ್, ಸಾಹಿವಾಲ್, ಈ ರೀತಿ ಹಸುವಿನ ಹಾಲು (ನಾಟಿ ಹಸು). A1 ಹಾಲು ಇದು ಹೊರ ದೇಶದಿಂದ ಬಂದಂತಹ ಹಸುಗಳಾದ HF ಹಸುವಿನಿಂದ ಸಿಗುವ ಹಾಲು. A2 milk ಇದರಲ್ಲಿ ಬೀಟಾ ಕ್ಯಾಸಿನ್ ಪ್ರೊಟೀನ್ ಅಂಶ ಜಾಸ್ತಿ ಇದ್ದು ಜೀರ್ಣಕ್ರಿಯೆ ಚನ್ನಾಗಿ ಆಗುತ್ತದೆ.

1 thought on “MILK- Importance of Drinking Milk in 2026|| ಹಾಲಿನ ಮಹತ್ವ”

  1. Pingback: 6 Raagi Mudde Secret Health Benifits Everyone Should Know

Leave a Comment

Your email address will not be published. Required fields are marked *

Scroll to Top