ಪಂಚೇಂದ್ರಿಯಗಳು ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ, ಯಾವ ರೀತಿ ಎಲ್ಲಾ ಅಂಗಗಳು ನಮ್ಮ ದೇಹದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ನಮಗೆ ಗೊತ್ತು. ಅದರಲ್ಲಿ ಒಂದಾದ ಕಿವಿ(Ear) ನಮ್ಮ ದಿನನಿತ್ಯದ ಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.
ನಾವು ಮಾತನಾಡುವ ಧ್ವನಿ ಕೇಳುವುದು, ಸಂಗೀತವನ್ನು ಆಲಿಸುವುದು, ಯಾವುದಾದರೂ ಅಪಾಯದ ಸಂಕೇತಗಳನ್ನ ಕೇಳುವುದು ಎಲ್ಲದಕ್ಕೂ ಕಿವಿಯೇ ಕಾರಣ. ಆದರೆ ಇತ್ತೀಚಿನ ನಮ್ಮ ಜೀವನಶೈಲಿ, ಪರಿಸರ ಮಾಲಿನ್ಯ, ಅಸ್ವಚ್ಛ ವಾತಾವರಣ, ಇನ್ನೂ ಮುಂತಾದ ಕಾರಣಗಳಿಂದ ಕಿವಿ ನೋವು ಮತ್ತು ಕಿವಿ ಸಮಸ್ಯೆಗಳು ಜಾಸ್ತಿ ಆಗುತ್ತಿವೆ.
ನಾವು ಈ ಲೇಖನದಲ್ಲಿ ಕಿವಿಯ ಮಹತ್ವ , ಅದರ ಸಾಮಾನ್ಯ ಸಮಸ್ಯೆಗಳು, ಮತ್ತು ಅದನ್ನು ನಿವಾರಿಸಲು ಬೇಕಾಗುವ ಮನೆಮದ್ದುಗಳನ್ನು ನೋಡೋಣ.
ನಮ್ಮ ದೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಜನಕ್ಕೆ ಸಾಮಾನ್ಯ ಜ್ಞಾನ ಕಡಿಮೆ ಇದ್ದು ಸರಿಯಾದ ವೈಯಕ್ತಿಕ ನೈರ್ಮಲ್ಯ ಇಲ್ಲದೆ, ಮತ್ತು ಆಸ್ಪತ್ರೆ ಸೌಲಭ್ಯ ಕಡಿಮೆ ಇದ್ದು ಸುಮಾರು 35.6% ಜನರು ಕಿವಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.
Table of Contents
Toggleನಮ್ಮ ದೇಹಕ್ಕೆ ಕಿವಿಯ ಪ್ರಾಮುಖ್ಯತೆ :
ಕಿವಿ ಕೇವಲ ಶಬ್ದವನ್ನು ಕೇಳುವ ಅಂಗವಲ್ಲ. ಬದಲಾಗಿ ಅದು ನಮ್ಮ ದೇಹದ ಸಮತೋಲನವನ್ನು ಬ್ಯಾಲೆನ್ಸ್ ಮಾಡಲು ಸಹಾಯ ಮಾಡುತ್ತದೆ. ಕಿವಿಯ ಒಳಭಾಗದಲ್ಲಿ ಇರುವ ‘ವೆಸ್ಟಿಬ್ಯುಲರ್ ಸಿಸ್ಟಮ್’ ನಮ್ಮ ದೇಹವನ್ನ ಸಮತೋಲನದಲ್ಲಿ ಇಡುತ್ತದೆ.
ಕಿವಿಯ ಪ್ರಮುಖ ಕಾರ್ಯಗಳು :
- ದ್ವನಿಯನ್ನು ಕೇಳುವುದು.
- ದೇಹದ ಸಮತೋಲನ ಕಾಪಾಡುವುದು.
- ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಅರಿವು ಮೂಡಿಸುವುದು.
- ಇನ್ನೊಬ್ಬರ ಜೊತೆ ಸಂವಹನ ಮಾಡುವುದಕ್ಕೆ.
- ಕಿವಿಯಲ್ಲಿರುವ ವೆಸ್ಟಿಬ್ಯುಲಾರ್ ಉಪಕರಣದಿಂದ ಬಾಹ್ಯಾಕಾಶದಲ್ಲಿ ನಮ್ಮ ದೇಹದ ಸ್ಥಾನ ಮತ್ತೆ ಗುರುತ್ವಾಕರ್ಷಣೆ ಕಂಡು ಇಡಿಯಲು ಸಹಾಯ ಮಾಡುತ್ತದೆ.
ಕಿವಿಯು ಆರೋಗ್ಯಕರವಾಗಿದ್ದರೆ ಮಾತ್ರ ನಮ್ಮ ಜೀವನ ಸುಖವಾಗಿರುತ್ತದೆ. ಆದ್ದರಿಂದ ಕಿವಿಯ ಆರೈಕೆ ತುಂಬಾ ಮುಖ್ಯ.
ಕಿವಿಯ ಪ್ರಮುಖ ಸಮಸ್ಯೆಗಳು (Ear Problems)
ಸಾಮಾನ್ಯವಾಗಿ ಪ್ರತಿಯೊಬ್ಬರೂ ಸಹ ಒಂದಲ್ಲ ಒಂದು ದಿನ ಕಿವಿಯ ಸಮಸ್ಯೆಗೆ ಒಳಪಟ್ಟಿರುತ್ತಾರೆ. ಅದರಲ್ಲಿ ಕೆಲವೊಂದು ಸಮಸ್ಯೆಗಳನ್ನ ನೋಡೋಣ.
1. ಕಿವಿಯಲ್ಲಿ ನೋವು (Ear Pain)
ನಮಗೆ ಗೊತ್ತಿಲ್ಲದ ಹಾಗೆ ಕೆಲವೊಂದು ಬಾರಿ ಕಿವಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅದು ಹೊರ ಭಾಗದಲ್ಲಿ ಅಥವಾ ಒಳಭಾಗದಲ್ಲಿ ಆಗಿರಬಹುದು. ಇದು ಮುಖ್ಯವಾಗಿ ಯಾವುದೋ ಸಣ್ಣ ಗಾಯದಿಂದ ಅಥವಾ ಕಿವಿಯಲ್ಲಿ ಸೋಂಕಿನಿಂದ ಬರುತ್ತದೆ.
2. ಕಿವಿಯ ಗುಗ್ಗೆ (Ear wax)
ನಾವು ಕಿವಿಯನ್ನ ಆಗಾಗ ನೀರಿನಿಂದ ಸ್ವಚ್ಛ ಮಾಡದೆ ಇದ್ದರೆ, ಕಿವಿಯಲ್ಲಿ ಗುಗ್ಗೆ ಸಂಗ್ರಹ ಜಾಸ್ತಿಯಾಗುತ್ತದೆ. ಇದು ಕಿವಿ ಕೇಳುವ ಸಾಮರ್ಥ್ಯವನ್ನ ಕಡಿಮೆ ಮಾಡುತ್ತದೆ.
3. ಕಿವಿ ಸೋಂಕು (Ear Infection)
ಬ್ಯಾಕ್ಟೀರಿಯಾ ಅಥವಾ ವೈರಸ್ ಕಾರಣದಿಂದ ಕಿವಿಯಲ್ಲಿ ಸೋಂಕು ಉಂಟಾಗುತ್ತದೆ, ಇದರಿಂದ ಕಿವಿಯು ಆಗಾಗ ಕೀವು ಸೋರಲು ಶುರು ಆಗುತ್ತದೆ.
4. ಕಿವಿ ಕೇಳುವ ಶಕ್ತಿ ಕಡಿಮೆಯಾಗುವುದು (Hearing loss)
ಇದು ಕೆಲವರಲ್ಲಿ ಹುಟ್ಟಿನಿಂದ ಬಂದರೆ ಕೆಲವರಿಗೆ ಕೆಲವು ಕಾರಣಗಳಿಂದ ಉಂಟಾಗುತ್ತದೆ. ಅದು ತಾತ್ಕಾಲಿಕವಾಗಿ ಇರಬಹುದು ಅಥವಾ ಶಾಶ್ವತವಾಗಿ ಉಳಿಯಬಹುದು.
5. ಕಿವಿಯಲ್ಲಿ ಶಬ್ದ (Tinnitus)
ಕಿವಿಯಲ್ಲಿ ಏನೋ ಗುಯ್ ಗುಯ್ ಎಂದು ಶಬ್ದ ಕೇಳಿಸುತ್ತಿರುವುದು
ಕಿವಿ ಹಾನಿ ಅಥವಾ ಸಮಸ್ಯೆಗೆ ಕಾರಣಗಳು(Causes of Ear damage)
ಕಿವಿ ಸಮಸ್ಯೆಗೆ ಹಲವಾರು ಕಾರಣಗಳಿವೆ ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ನೋಡೋಣ.
1. ಅತಿಯಾದ ಶಬ್ದ (Loud voice)
ಇತ್ತೀಚಿನ ದಿನಗಳಲ್ಲಿ ಹೆಡ್ ಫೋನ್ ಬಳಸುವುದು, ಹೊರಗಡೆ ಜೋರಾದ ಶಬ್ದ ಕೇಳುವುದು, ಮತ್ತು ಕಾರ್ಕಾನೆಗಳಲ್ಲಿ ಕೆಲಸ ಮಾಡುವಾಗ ಜೋರಾದ ಶಬ್ದ ಕೇಳಿಸುಕೊಳ್ಳುವುದು ಜಾಸ್ತಿಯಾಗಿದೆ, ಇದರಿಂದ ನಮ್ಮ ಕಿವಿಯಲ್ಲಿರುವ ಸೂಕ್ಷ್ಮ ನರಗಳು ಡ್ಯಾಮೇಜ್ ಆಗಿ ಕಿವಿ ಕೇಳುವ ಸಾಮರ್ಥ್ಯ ಕಡಿಮೆ ಆಗುತ್ತದೆ.
2. ಅಸ್ವಚ್ಛತೆ (Unhygiene)
ಸ್ನಾನ ಮಾಡುವಾಗ ಅಥವಾ ಮುಖ ತೊಳೆಯುವಾಗ ಕಿವಿಯನ್ನು ಸರಿಯಾಗಿ ಸ್ವಚ್ಛ ಮಾಡದೆ ಹಾಗೆ ಬಿಡುವುದರಿಂದ ಕಿವಿಯ ಒಳಗೆ ಮತ್ತೆ ಹೊರಗೆ ಸೋಂಕು ಜಾಸ್ತಿಯಾಗಿ ಕಿವಿಗೆ ಹಾನಿಯಾಗುತ್ತದೆ.
3. ನೀರು ಹೋಗುವುದು .
ಸ್ನಾನ ಮಾಡುವಾಗ ಅಥವಾ ಈಜುವಾಗ ಕಿವಿಗೆ ನೀರು ಹೋದಾಗ ನಾವು ತಕ್ಷಣವೇ ಕಿವಿಯನ್ನು ಒಣ ಬಟ್ಟೆಯಿಂದ ಸ್ವಚ್ಛ ಮಾಡದೆ ಹೋದರೆ ಕಿವಿಯ ಒಳಗಡೆ ಸೋಂಕು ಉಂಟಾಗುತ್ತದೆ.
4. ಕಿವಿಗೆ ಗಾಯ (Ear injury)
ಕಿವಿಯಲ್ಲಿ ಚೂಪಾದ ವಸ್ತುಗಳನ್ನು ಇಡುವುದರಿಂದ ಒಳಗಡೆ ಗಾಯ ವಾಗುತ್ತದೆ, ಅಥವಾ ಕಿವಿಗೆ ಜೋರಾಗಿ ಒಡೆಯುವುದರಿಂದ ಗಾಯವಾಗುತ್ತದೆ. ಇದು ಕಿವಿಯ ನರಗಳ ಹಾನಿಗೆ ಕಾರಣವಾಗುತ್ತದೆ.
5. ಬೇರೆ ಆರೋಗ್ಯ ಸಮಸ್ಯೆಗಳು.
ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ (high blood pressure) ಇರುವ ವ್ಯೆಕ್ತಿಗೆ ಕಿವಿ ಸಮಸ್ಯೆ ಬರುವುದು ಸಾಮಾನ್ಯವಾಗಿರುತ್ತದೆ.
ಕಿವಿ ಸಮಸ್ಯೆಗೆ ನಾವೇ ತಯಾರಿಸಬಹುದಾದ ಮನೆ ಮದ್ದುಗಳು (Home Remedies)
ಕಿವಿ ಸಮಸ್ಯೆಯನ್ನು ಕಡಿಮೆ ಮಾಡಲು ನಾವೇ ಮನೆಯಲ್ಲಿ ತಯಾರಿಸಬಹುದಾದ ಕೆಲವೊಂದು ನೈಸರ್ಗಿಕ ಮನೆ ಮದ್ದುಗಳನ್ನ ನೋಡೋಣ.
1. ಬೆಳ್ಳುಳ್ಳಿ ಎಣ್ಣೆ (Garlic Oil)
ಬೆಳ್ಳುಳ್ಳಿಯು ಬ್ಯಾಕ್ಟೀರಿಯಾ ವನ್ನು ನಾಶ ಪಡಿಸುವ ಗುಣ ಹೊಂದಿದೆ. ಆದ್ದರಿಂದ ಬೆಳ್ಳುಳ್ಳಿಯನ್ನು ಎಣ್ಣೆಯಲ್ಲಿ ಸ್ವಲ್ಪ ಕುದಿಸಿ ತಣ್ಣಗಾದ ನಂತರ ಆ ಎಣ್ಣೆಯನ್ನು ನೋವುತ್ತಿರುವ ಕಿವಿಗೆ 1-2 ಹನಿ ಕಾಕಬೇಕು. ಆಗ ಕಿವಿ ನೋವು ಕಡಿಮೆ ಆಗುತ್ತದೆ.
2. ಬಿಸಿ ನೀರಿನ ಹಬೆ (warm water steam)
ನೀರನ್ನು ಉಗುರು ಬೆಚ್ಚಿಗೆ ಕಾಯಿಸಿ ಸ್ವಚ್ಛ ಬಟ್ಟೆಯನ್ನು ಅದರಲ್ಲಿ ನೆನೆಸಿ ಕಿಯಿಗೆ ಹಬೆಯ ಶಾಖ 10 ನಿಮಿಷ ಕೊಟ್ಟಾಗ ಕಿವಿಯ ನೋವು ಸ್ವಲ್ಪ ಕಡಿಮೆ ಆಗುತ್ತದೆ.
3. ಆಲಿವ್ ಎಣ್ಣೆ (Olive Oil)
ಇದು ಕಿವಿಯಲ್ಲಿ ಸಿಲುಕಿರುವ ಗುಗ್ಗೆಯನ್ನು ಮೃದುಮಾಡುತ್ತದೆ, ಸ್ವಲ್ಪ ಬಿಸಿ ಮಾಡಿ ದಿನಕ್ಕೆ 2 ಹನಿ ಕಿವಿಯಲ್ಲಿ ಹಾಕಿದರೆ ಕಿವಿ ತಂಪಾಗಿರುತ್ತದೆ, ಜೊತೆಗೆ ನೋವು ಇದ್ದಾರೆ ಕಡಿಮೆ ಆಗುತ್ತದೆ.
4. ಈರುಳ್ಳಿ ರಸ (Onion Juice)
ಈರುಳ್ಳಿಯಲ್ಲಿ ನೈಸರ್ಗಿಕವಾದಂತಹ ಆಂಟಿಬಯಾಟಿಕ್ ಅಂಶ ತುಂಬಿದೆ ಆದ್ದರಿಂದ ಕಿವಿಯಲ್ಲಿರುವ ಸೋಂಕು ಕಡಿಮೆ ಆಗಲು, ಈರುಳ್ಳಿಯನ್ನು ಸ್ವಲ್ಪ ಬೇಯಿಸಿ ಅದರಿಂದ ರಸ ತಯಾರಿಸಿ ಅದನ್ನು ಕಿವಿಗೆ ಸ್ವಲ್ಪ ಹಾಕಿದಾಗ ಸೋಂಕು ಮತ್ತೆ ನೋವು ಕಡಿಮೆ ಆಗುತ್ತದೆ.
5. ತುಳಸಿ ಎಲೆ ರಸ (Tulsi Leaf Juice)
ಆಯುರ್ವೇದ ದಲ್ಲಿ ತುಳಸಿಗೆ ವಿಶೇಷ ಮಹತ್ವ ಇದೆ ಆದ್ದರಿಂದ ಇದರಲ್ಲಿ ಆಂಟಿ ಮೈಕ್ರೋಬಿಯಲ್ ಅಂಶ ಜಾಸ್ತಿ ಇರುವುದರಿಂದ ಕಿವಿಯಲ್ಲಿರುವ ಸೋಂಕು ಕಡಿಮೆ ಮಾಡಲು ತುಳಸಿಯ ರಸವನ್ನು ಬಳಸಬಹುದು.
ಕಿವಿಯ ಬಗ್ಗೆ ಮುನ್ನೆಚ್ಚರಿಕೆಗಳು (Precautions)
- ಕಿವಿಗೆ ಕಡ್ಡಿ ಅಥವಾ ಚೂಪಾದ ವಸ್ತುಗಳನ್ನ ಹಾಕಬೇಡಿ.
- ಸ್ನಾನ ಮಾಡಿದ ನಂತರ ಒಣ ಬಟ್ಟೆಯಿಂದ ಕಿವಿ ಕ್ಲೀನ್ ಮಾಡಿ.
- Ear Buds ಬಳಸುವುದನ್ನು ಕಡಿಮೆ ಮಾಡಿ.
- ಕಿವಿಯ ಗುಗ್ಗೆ ತಗಿಯಲು ಸಣ್ಣ ವಸ್ತುಗಳನ್ನು ಕಿವಿಗೆ ಹಾಕಬೇಡಿ.
- ಕಿವಿಯನ್ನು ಆದಷ್ಟು ಸ್ವಚ್ಛವಾಗಿಡಿ.
- ಯಾವುದೇ ಸಮಸ್ಯೆ ಜಾಸ್ತಿಯಾದರೆ ಖಂಡಿತ ವೈದ್ಯರನ್ನ ಬೇಟಿಮಾಡಿ.
ಕಿವಿ ನಮ್ಮ ದೇಹದ ಪ್ರಮುಖ ಅಂಗ, ಅದನ್ನು ಸರಿಯಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಕಿವಿಗೆ ಸಂಬಂದಿಸಿದ ಯಾವುದೇ ನೋವು ಅಥವಾ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡಿಯಬೇಕು. ನಾನು ಮೇಲೆ ತಿಳಿಸಿರುವ ಮನೆ ಮದ್ದುಗಳನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ, ಕಿವಿ ಸಮಸ್ಯೆಗಳು ನಿದಾನವಾಗಿ ಕಡಿಮೆಯಾಗುತ್ತವೆ. ಆದಾಗ್ಯೂ ಜಾಸ್ತಿ ಸಮಸ್ಯೆ ಕಂಡು ಬಂದರೆ ಹತ್ತಿರದ ENT ಡಾಕ್ಟರನ್ನು ಸಂಪರ್ಕಿಸಿ.
ಪ್ರಮುಖವಾದ ಕಿವಿಯ ಸಮಸ್ಯೆ ಯಾವುದು?
- ಕಿವಿಯ ಇನ್ಫೆಕ್ಷನ್.
- ಕಿವಿಯಲ್ಲಿ ಸೋರುವುದು.
- ಕಿವಿಯಳ್ಳಿ ಗುಗ್ಗೆ ತುಂಬಿರುವುದು.
ಕಿವಿ ನೋವು ಎಷ್ಟು ದಿನ ಇರಬಹುದು?
ಕೆಲವೊಮ್ಮೆ ಕಿವಿ ನೋವು ಬಂದಾಗ ಅದು ತನ್ನಷ್ಟಕ್ಕೆ ತಾನೇ 1-2 ದಿನಗಳಲ್ಲಿ ಹೊರಟುಹೋಗುತ್ತದೆ, ಆದರೆ ಕೆಲವೊಮ್ಮೆ ಇನ್ಫೆಕ್ಷನ್ ರೀತಿ ಆದರೆ ಕನಿಷ್ಠ ಒಂದು ವಾರ ನೋವು ಹಾಗೆಯೆ ಇರುತ್ತದೆ.
ಕಿವಿಯ ನೋವಿಗೆ ಉತ್ತಮ ಚಿಕಿತ್ಸೆ ಯಾವುದು?
ಕಿವಿಯಲ್ಲಿ ಬ್ಯಾಕ್ಟಿರಿಯಾ ದಿಂದ ಉಂಟಾದ ಸೋಂಕು ಜಾಸ್ತಿಯಾದಾಗ, ವೈದ್ಯರು ಸೂಚಿಸುವ ಆಂಟಿ ಬೈಯೋಟಿಕ್ಸ್ ಕಿವಿ ನೋವಿಗೆ ಉತ್ತಮ ಚಿಕಿತ್ಸೆ ಯಾಗಿರುತ್ತದೆ.
