9 Signs and Symptoms of Type 2 Diabetes ಟೈಪ್ 2 ಮಧುಮೇಹದ 9 ಸೂಚನೆ ಮತ್ತು ಲಕ್ಷಣಗಳು.

Spread the love
Type 2 Diabetes most people ignore

ಜಾಗತಿಕವಾಗಿ ಅತ್ಯಂತ ವ್ಯಾಪಕವಾದ ಮತ್ತು ದೀರ್ಘಕಾಲದ ಗಂಭೀರ ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹವು Diabetes ಒಂದಾಗಿದೆ.
ಭಾರತದಲ್ಲಿ ಲಕ್ಷಾಂತರ ಜನರು ಈ ಮಧುಮೇಹದಿಂದ ಬಳಲುತ್ತಿದ್ದಾರೆ, ನಮ್ಮ ದೇಶದಲ್ಲೇ ಸುಮಾರು 130 ಮಿಲಿಯನ್ ಜನ ಮಧುಮೇಹದಿಂದ ಬಳಲಿತ್ತಿದ್ದಾರೆ. ಅದರಲ್ಲೂ ಸುಮಾರು ಜನ ರೋಗವನ್ನು ನಿರ್ಣಯ(Test) ಮಾಡದೆ, ಇದ್ದರೂ ಇಲ್ಲದಂತೆಯೇ ಇದ್ದಾರೆ. ನಮಗೆ ಆತಂಕ ಉಟ್ಟಿಸುವ ಸಂಗತಿಯೆಂದರೆ ಈ ಮಧುಮೇಹವು ಸಾಮಾನ್ಯವಾಗಿ ಸದ್ದಿಲ್ಲದೇ ಆರಂಭವಾಗುತ್ತದೆ. ಇದರ ಆರಂಭಿಕ ಲಕ್ಷಣಗಳು ತುಂಬಾ ಸೂಕ್ಷ್ಮವಾಗಿದ್ದು, ಜನರಿಗೆ ಸುಮಾರು ತಿಂಗಳುಗಳು ಇಲ್ಲವೇ ವರ್ಷಗಳೇ ಬೇಕು ಇದನ್ನು ಪತ್ತೆ ಹಚ್ಚಲು. ಆದ್ದರಿಂದ ಸಾಮಾನ್ಯವಾಗಿ ಇದನ್ನು ತುಂಬಾ ಜನ ತಿರಸ್ಕರಿಸುತ್ತಾರೆ.

ಟೈಪ್ 2 ಮಧುಮೇಹದ ಆರಂಭಿಕ ಚಿಹ್ನೆಗಳು ನಮಗೆ ಸಾಮಾನ್ಯವಾಗಿ ಕಾಣಿಸಬಹುದು, ಆದರೆ ಅವೇ ನಮ್ಮ ದೇಹವು ತೊಂದರೆಯಲ್ಲಿದೆ ಎನ್ನುವ ಮಾರ್ಗಸೂಚಿಗಳಾಗಿವೆ. ಈ ಆರಂಭಿಕ ಚಿಹ್ನೆಗಳನ್ನು ನಾವು ಎಷ್ಟು ಬೇಗ ಪತ್ತೆ ಹಚ್ಚುತ್ತೇವೆಯೋ, ಅಷ್ಟು ಬೇಗ ಸಕ್ಕರೆ ಕಾಯಿಲೆಯನ್ನು, ಮತ್ತು ಅದರಿಂದ ಉಂಟಾಗುವ ಕಷ್ಟಗಳನ್ನು ತಪ್ಪಿಸಿ ಆರೋಗ್ಯಕರ ಜೀವನ ನಡೆಸುವುದಕ್ಕೆ ಸಹಾಯವಾಗುತ್ತದೆ.

ಹಾಗಾದರೆ ಈ ಮಧುಮೇಹ ಅಂದರೆ ಏನು? ಎಂದು ಸ್ವಲ್ಪ ಆಳವಾಗಿ ತಿಳಿಯೋಣ ಬನ್ನಿ.

ಸಾಮಾನ್ಯವಾಗಿ ನಮ್ಮ ರಕ್ತದಲ್ಲಿರುವ ಸಕ್ಕರೆ ಅಂಶ ಜಾಸ್ತಿ ಆಗಲು ಪ್ರಾರಂಭಿಸಿದಾಗ ನಮ್ಮ ದೇಹದೊಳಗೆ ಏನಾಗುತ್ತದೆ, ಎಂದು ತಿಳಿಯುವುದೇ ಮಧುಮೇಹ.
ಇದು ಕೇವಲ ರಕ್ತದಲ್ಲಿ ಹೆಚ್ಚಿನ ಸಕ್ಕರೆ ಅಂಶ ಅಸ್ಟೇ ಅಲ್ಲದೇ ನಮ್ಮ ದೇಹ ಈ ಕೆಳಗಿನ ಸ್ಥಿತಿಗಳಲ್ಲಿ ಒಂದನ್ನು ಒಳಗೊಂಡಿದೆ.

  •  ನಮ್ಮ ದೇಹಕ್ಕೆ ಸಾಕಷ್ಟು ಇನ್ಸುಲಿನ್ ಉತ್ಪಾದಿಸುವುದಕ್ಕೆ ಸಾಧ್ಯವಾಗುವುದಿಲ್ಲ .
  •  ಈಗಾಗಲೇ ಇರುವ ಇನ್ಸುಲಿನ್ ಅನ್ನು ಸರಿಯಾದ ರೀತಿ ಬಳಸಲು ಆಗುವುದಿಲ್ಲ.
  •  ಇನ್ಸುಲಿನ್ ಅನ್ನು ಉತ್ಪಾದಿಸಿದರೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸರಿಯಾಗಿ ನಿಯಂತ್ರಿಸುವುದಕ್ಕೆ ಸಾಧ್ಯವಾಗುವುದಿಲ್ಲ.

ನಮ್ಮ ದೇಹದಲ್ಲಿ ಪ್ಯಾನ್ಕ್ರಿಯಾಸ್ ಎಂಬ ಗ್ರಂಥಿಯಿಂದ ಉತ್ಪತ್ತಿಯಾಗುವ ಇನ್ಸುಲಿನ್ ಎಂಬ ಹಾರ್ಮೋನ್, ನಮ್ಮ ಆಹಾರದಿಂದ ಸಿಗುವ ಗ್ಲುಕೋಸ್ (sugar) ಶಕ್ತಿಯನ್ನು ದೇಹದ ಪ್ರತಿಯೊಂದು ಜೀವಕೋಶಗಳಿಗೆ(cell) ಸಮಾನವಾಗಿ ಹೋಗಲು ಸಹಾಯಮಾಡುತ್ತದೆ.

ನಮ್ಮ ದೇಹದಲ್ಲಿ ಇನ್ಸುಲಿನ್ ಸರಿಯಾಗಿ ಕೆಲಸ ಮಾಡಲು ಆಗದಿದ್ದಾಗ ಸಕ್ಕರೆ ಅಂಶವನ್ನು ಜೀವಕೋಶಗಳು ಬಳಸುವ ಬದಲಿಗೆ, ರಕ್ತದಲ್ಲಿ ಬಂದು ಶೇಖರಣೆ ಆಗುತ್ತದೆ. ಆವಾಗ ದೇಹಕ್ಕೆ ಮಧುಮೇಹ ಬರುತ್ತದೆ.

ದಿನೇ ದಿನೇ ಕಾಲಕಳೆದಂತೆ ಈ ಅಧಿಕ ಸಕ್ಕರೆ ಅಂಶ ನಮ್ಮ ದೇಹದ ಅನೇಕ ಭಾಗಗಳನ್ನು ನಾಶಮಾಡುತ್ತದೆ. ಅವುಗಳೆಂದರೆ:

  •  ನಮ್ಮ ದೇಹದ ರಕ್ತನಾಳಗಳು (blood vessels)
  •  ನರಗಳು
  •  ಕಣ್ಣುಗಳು
  •  ಮೂತ್ರಪಿಂಡಗಳು
  •  ಹೃದಯ
  •  ನಮ್ಮ ಇಮ್ಮ್ಯೂನ್ ಸಿಸ್ಟಮ್
    ಈ ಎಲ್ಲ ಕಾರಣಕ್ಕಾಗಿಯೇ ಟೈಪ್ 2 ಮಧುಮೇಹವನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಮುಖ್ಯ.
how to manage Diabetes

ಟೈಪ್ 2 ಮಧುಮೇಹದ diabetes 9 ಸೂಚನೆಗಳು ಮತ್ತು ಲಕ್ಷಣಗಳು.

1. ಅತಿ ಹೆಚ್ಚು ಮೂತ್ರ ವಿಸರ್ಜನೆ:
ನಮಗೆ ಮಧುಮೇಹ ಇದೆ ಇಂದು ಗೊತ್ತಾಗುವುದರ ಮೊದಲ ಲಕ್ಷಣ ಇದು.
ನಾವು ರಾತ್ರಿ ವೇಳೆ ಪದೇ ಪದೇ ಮೂತ್ರ ವಿಸರ್ಜಿಸಬೇಕು ಅಂತ ಅನಿಸುವುದು. ಯಾಕೆ ಈಗಾಗುತ್ತದೆ.
ಪದೇ ಪದೇ ಮೂತ್ರವಿಸರ್ಜನೆ ಇದನ್ನು ಸಾಮಾನ್ಯವಾಗಿ ಪಾಲಿಯೂರಿಯ ಅಂತಲೂ ಕರೆಯುತ್ತಾರೆ. ನಮ್ಮ ರಕ್ತದಲ್ಲಿನ ಸಕ್ಕರೆ ಅಂಶವು ಮೂತ್ರದಲ್ಲಿ ಹೊರ ಹಾಕುವಷ್ಟು ಹೆಚ್ಚಾಗಿರುತ್ತದೆ ಎನ್ನುವುದು ಇದರ ಸಂಕೇತ.

ನಮ್ಮ ಮೂತ್ರಪಿಂಡ ಅಥವಾ ಕಿಡ್ನಿಗೆ ಗ್ಲುಕೋಸ್ (ಸಕ್ಕರೆ) ಪ್ರಮಾಣವನ್ನು ನಿಭಾಯಿಸಲು ಆಗದಿದ್ದಾಗ, ಅದರಲ್ಲಿ ಸ್ವಲ್ಪ ಭಾಗವನ್ನು ನಮ್ಮ ಮೂತ್ರಕ್ಕೆ ಹೋಗಲು ಬಿಡುತ್ತದೆ, ಆಗ ಮೂತ್ರ ಜಾಸ್ತಿ ಆಗಿ ನಾವು ಪ್ರತೀ ಬಾರಿಯೂ ಮೂತ್ರ ವಿಸರ್ಜಿಸಬೇಕು ಎಂದು ಅನಿಸುತ್ತದೆ.

ಸಾಮಾನ್ಯವಾಗಿ ಯಾಕೆ ನಾವು ಇದನ್ನು ನಿರ್ಲಕ್ಷಿಸುತ್ತೇವೆ?

  •  ಓ ರಾತ್ರಿ ನಾನು ಜಾಸ್ತಿ ನೀರು ಕುಡುದು ಮಲಗಿದ್ದೆ ಆದ್ದರಿಂದ ಈಗಾಗಿರಬಹುದು ಎಂದು .
  •  ಇ೦ದು ಸ್ವಲ್ಪ ಚಳಿ ಜಾಸ್ತಿ ಇರುವುದರಿಂದ ಈಗಾಗಿರಬಹುದು ಎಂದುಕೊಳ್ಳುವುದು.
  •  ಇಲ್ಲ ಏನೋ ಸ್ವಲ್ಪ ಇನ್ಫೆಕ್ಷನ್ ಆಗಿದೆ ಎಂದು ನಿರ್ಲಕ್ಯ ಮಾಡುವುದು .

ಈ ರೀತಿ ಪ್ರತಿ ಸಾರಿಯೂ ಆಗುತ್ತಿದೆ ಅಂದರೆ ಅದಕ್ಕೆ ಸೂಕ್ತ ವೈದ್ಯರ ಸಲಹೆ ಮುಖ್ಯವಾಗಿರುತ್ತದೆ.

2. ಅತಿಯಾದ ದಾಹವಾಗುವುದು:
ಯಾಕೆ ಯಾವಾಗಲೂ ದಾಹವಾಗುತ್ತೆ ಇದು ನಾರ್ಮಲ್ ಅಂತ ಕೇಳಬಹುದು. ಯಾವಾಗಲೂ ದಾಹವಾಗುವುದು ನಾರ್ಮಲ್ ಅಲ್ಲ.
ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಜಾಸ್ತಿ ಆದಾಗ, ಕಿಡ್ನಿಗಳು ಜಾಸ್ತಿಯಾದ ಗ್ಲುಕೋಸ್ ಅನ್ನು ಪಿಲ್ಟ್ ರ್ ಮಾಡಲು ಆಗುವುದಿಲ್ಲ, ಆಗ ರಕ್ತದಿಂದ ಸಕ್ಕರೆ ಯನ್ನು ತೆಗೆಯಲು ನಮ್ಮ ದೇಹ ಬೇರೆ ಬೇರೆ ಅಂಗಾಂಗಳಿಂದ ನೀರನ್ನು ಎಳೆಯುತ್ತದೆ, ಇದು ದೇಹದಲ್ಲಿ ನೀರಿನಾಂಶ ಇಲ್ಲದ ಹಾಗೆ ಮಾಡಿ ನಾವು ನೀರು ಕುಡಿಯುತ್ತಿದ್ದರೂ ತುಂಬಾ ಬಾಯಾರಿಕೆ ಆಯಾಗುತ್ತದೆ.

3. ದೇಹದ ತೂಕ ಕಡಿಮೆಯಾಗುವುದು:
ನಮಗೆ ಟೈಪ್ 2 ಮಧುಮೇಹ ಇದೆ ಎಂದು ಗೊತ್ತಾಗಲು ಮತ್ತೊಂದು ಲಕ್ಷಣ ನಮ್ಮ ದೇಹ ನಿರಂತರವಾಗಿ ತೂಕ ಕಡಿಮೆ ಆಗುತ್ತಿರುವುದರಿಂದ.
ಯಾಕೆ ಈಗಾಗುತ್ತದೆ ಎಂದರೆ,
ನಮ್ಮ ದೇಹಕ್ಕೆ ಇನ್ಸುಲಿನ್ ಕೊರತೆ ಜಾಸ್ತಿಯಾದಾಗ ಅದು ದೇಹದಲ್ಲಿರುವ ಸಕ್ಕರೆ ಅಂಶವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಆಗದಿದ್ದಾಗ, ನಮ್ಮ ದೇಹದ ಕೊಬ್ಬು, ಮತ್ತು ಮಾಂಸಖಂಡಗಳನ್ನು ನಿಧಾನವಾಗಿ ತಿನ್ನಲು ಪ್ರಾರಂಭಿಸುತ್ತದೆ. ಇದರಿಂದ ನಾವು ದಿನೇ ದಿನೇ ತೂಕ ಕಳೆದುಕೊಳ್ಳುತ್ತೇವೆ, ನಮ್ಮ ಮಾಂಸಖಂಡಗಳ ಶಕ್ತಿ ಕಡಿಮೆ ಆಗುತ್ತದೆ, ನರಗಳ್ಲಲಿ ದೌರ್ಭಲ್ಯ ಉಂಟಾಗುತ್ತದೆ, ಮತ್ತೆ ರೋಗನಿರೋಧಕ ಶಕ್ತಿ ದೇಹದಲ್ಲಿ ಕಡಿಮೆ ಆಗುತ್ತದೆ.

4. ಹೆಚ್ಚು ಹಸಿವಾಗುವುದು.
ಟೈಪ್ ೨ ಮಧುಮೇಹ ಇರುವವರಿಗೆ ಊಟ ತಿಂದರೂ ಸಾಮಾನ್ಯಕ್ಕಿಂತ ಹೆಚ್ಚು ಹಸಿವಾಗುತ್ತದೆ. ಯಾಕೆಂದರೆ ನಮ್ಮ ದೇಹಕ್ಕೆ ಬೇಕಾದಷ್ಟು ಶಕ್ತಿ ಜೀವಕೋಶಗಳಿಗೆ ಒದಗಿಸಲು ಸಾಧ್ಯವಾಗುವುದಿಲ್ಲ ಆದ್ದರಿ೦ದ ಈ ಸಮಸ್ಯೆ ಆಗುತ್ತದೆ.

5. ಅತೀ ಎಚ್ಚು ಸುಸ್ತಾಗುವುದು:
ನಾವು ಎಷ್ಟೇ ತಿಂದರೂ ನಮಗೆ ಶಕ್ತಿ ಸಿಗುವುದಿಲ್ಲ ಸುಸ್ತಾಗುತ್ತದೆ, ಎಷ್ಟೇ ಸುಧಾರಿಸಿಕೊಂಡರೂ ಹೆಚ್ಚು ಧಣಿವಾಗುತ್ತದೆ. ಯಾಕೆಂದರೆ ದೇಹಕ್ಕೆ ಗ್ಲುಕೋಸ್ ಪ್ರಮಾಣ ಸರಿಯಾಗಿ ಸಿಗದೇ ಇರುವುದೇ ಇದಕ್ಕೆ ಕಾರಣ.
ಇದು ಟೈಪ್ 2 ಮಧುಮೇಹ ಇರುವ ಪ್ರಮುಖ ಲಕ್ಷಣ.

6. ಕಣ್ಣಿನ ದೃಷ್ಠಿ ಮಸುಕಾಗುವುದು:
ರಕ್ತದಲ್ಲಿನ ಅಧಿಕ ಸಕ್ಕರೆ ಪ್ರಮಾಣ ನಮ್ಮ ಕಣ್ಣಿನ ನರಗಳ ಮೇಲೆ ನೀರ ಪರಿಣಾಮ ಬೀರಿ ಕಣ್ಣು ಮಸುಕಾಗುವುದು ಮತ್ತು ಕಣ್ಣುಗಳು ಊತ ಬರುವುದು ಆಗುತ್ತವೆ.
ಇದರಿಂದ ಓದುವುದು, ಬರೆಯುವುದು ಕಷ್ಟವಾಗುತ್ತದೆ, ಇದು ಮಧುಮೇಹದ ಒಂದು ಲಕ್ಷಣವಾಗಿದೆ.

7. ಗಾಯಗಳು ಬೇಗ ವಾಸಿಯಾಗದಿರುವುದು:
ನಮಗೆ ಟೈಪ್ 2 ಮಧುಮೇಹ ಇದೆ ಎಂದು ತಿಳಿಯಲು ಈ ಅಂಶ ಮುಖ್ಯವಾಗಿದೆ. ಯಾವುದಾದರು ಸಣ್ಣ ಗಾಯಗಳಾದರೂ ಅದು ವಾಸಿ ಆಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಯಾಕೆ ಈಗಾಗುತ್ತದೆ ಅಂದರೆ,
ರಕ್ತ ಸಂಚಲನ ನಿಧಾನವಾಗುತ್ತದೆ, ಹೆಚ್ಚು ಸಕ್ಕರೆ ಅಂಶ ನಮ್ಮ ಇಮ್ಮ್ಯೂನಿಟಿ ಯನ್ನ ವೀಕ್ ಮಾಡಿರುತ್ತದೆ, ಇದರಿಂದ ನಮ್ಮ ಬಿಳಿ ರಕ್ತ ಕಣಗಳು ಕೆಲಸ ಮಾಡುವುದನ್ನು ಕಡಿಮೆ ಮಾಡುತ್ತವೆ.

8. ಕೈ ಕಾಲುಗಳಲ್ಲಿ ಉರಿಯುವ ಅನುಭವ:
ಸಕ್ಕರೆ ಅಂಶ ಜಾಸ್ತಿ ಆದಾಗ ನಮ್ಮ ಅಂಗೈ ಮತ್ತು ಪಾದಗಳಲ್ಲಿ ಇರುವೆ ಕಚ್ಚಿದರೆ ಆಗುವ ಅನುಭವ ಆಗುತ್ತದೆ. ಮತ್ತು ಕಾಲ ಕಳೆದಂತೆ ಸುಡುವ ಅನುಭವ ಕೆಲವರಲ್ಲಿ ಉಂಟಾಗುತ್ತದೆ.

9. ಗಮನದ ಕೊರತೆ:
ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದರಿಂದ ಒಂದು ಕಡೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ ಮನಸ್ಸು ಚಂಚಲ ಸ್ಥಿತಿ ನಿರ್ಮಾಣವಾಗುತ್ತದೆ.
ಮೂಡ್ ಸ್ವಿಂಗ್ ಆಗುತ್ತದೆ, ಏನನ್ನಾದರೂ ಯೋಚಿಸುವ ಶಕ್ತಿ ಕಡಿಮೆ ಆಗುತ್ತದೆ, ನೆನಪಿನ ಶಕ್ತಿ ಕಡಿಮೆಯಾಗುತ್ತದೆ.

ಈ ಮೇಲಿನ ಲಕ್ಷಣಗಳು ನಿಮ್ಮಲ್ಲಿಯೂ ಇದ್ದಲ್ಲಿ ಏನು ಮಾಡಬೇಕು?

 ಮೊದಲು ನಿಮ್ಮ ಹತ್ತಿರದ ಡಯಾಬಿಟೀಸ್ ವೈದ್ಯರನ್ನ ಸಂಪರ್ಕಿಸಬೇಕು.
ರಕ್ತದ ಪರೀಕ್ಷೆ ಮಾಡಿಸಿ ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಎಷ್ಟಿದೆ, ಇಂದು ತಿಳಿದು ಕೊಂಡು ಸರಿಯಾದ ಚಿಕಿತ್ಸೆ, ಮತ್ತು ವೈದ್ಯಕೀಯ ನೆರವು ಪಡೆಯಬೇಕು.
ಇದಾದ ನಂತರ ನಾನು ತಿಳಿಸುವ ನೈಸರ್ಗಿಕವಾಗಿ ಮಾಡುವ ಕೆಲವು ವಿದಾನಗಳನ್ನ ಅನುಸರಿಸಿದರೆ ನಿಮಗೆ ಈಗಾಗಲೇ ಇರುವ ಮಧುಮೇಹ ಮತ್ತೆ ಇಲ್ಲದಿದ್ದರೆ ಅದು ಬಾರದೆ ಇರುವ ರೀತಿಯಲ್ಲಿ ತಡೆಯುವ ಮಾರ್ಗದರ್ಶನ ಮಾಡುತ್ತೇನೆ.

ನೈಸರ್ಗಿಕವಾಗಿ ನಾವು ಯಾರ ನೆರವೂ ಪಡೆಯದೇ ಹೇಗೆ ಮಧುಮೇಹ ನಿಯಂತ್ರಿಸಬಹುದು ನೋಡೋಣ ಬನ್ನಿ.

ಟೈಪ್ 2 ಮಧುಮೇಹವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿದೆ.

  •  ದಿನಕ್ಕೆ 45ನಿಮಿಷ ಮನೆಯಲ್ಲಿಯೇ ವ್ಯಾಯಾಮ ಮಾಡುವುದು.
  •  ಮನೆಯಲ್ಲಿಯೇ ತಯಾರಿಸಿದ ಅಡುಗೆ ಸೇವಿಸುವುದು.
  •  ನಿಮ್ಮ ತೂಕ ನಿಯಂತ್ರಣದ್ಲಲಿಟ್ಟುಕೊಳ್ಳುವುದು.
  •  ಸರಿಯಾದ ನಿದ್ದೆ ಮಾಡುವುದು.
  •  ದಿನಕ್ಕೆ ಕನಿಷ್ಠ 3 ಲೀಟರ್ ನೀರು ಕುಡಿಯುವುದು. 
  • ಈಗಾಗಲೇ ಶೇಖರಿಸಿಟ್ಟ ಊಟವನ್ನು ಮತ್ತು ಸಕ್ಕರೆ ಅಂಶ ಎಚ್ಚು ಇರುವ ಊಟವನ್ನು ದೂರ ಇಡುವುದು.   

ಈ ಎಲ್ಲ ಅಂಶಗಳನ್ನು ತಲೆಯಲ್ಲಿಟ್ಟುಕೊಂಡು ಪ್ರತಿದಿನ ನಾವು ಪ್ರಯತ್ನ ಪಟ್ಟರೆ ಟೈಪ್ 2 ಮಧುಮೇಹವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ನಮ್ಮ ಸಣ್ಣ ಸಣ್ಣ ಜೀವನ ಶೈಲಿಯ ಬದಲಾವಣೆಗಳಿಂದ ನಾವು ದೊಡ್ಡಮಟ್ಟದ ಯಶಸ್ಸನ್ನು ಕಾಣಬಹುದಾಗಿದೆ.

ನಾನು ಬರೆದಿರುವ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತೆ ಬೇರೆ ಯಾವ ವಿಷಯದ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕು ಎಂದು ಕಾಮೆಂಟ್ಸ್ ರೂಪದಲ್ಲಿ ತಿಳಿಸಿ ಧನ್ಯವಾದಗಳು .

2 thoughts on “9 Signs and Symptoms of Type 2 Diabetes ಟೈಪ್ 2 ಮಧುಮೇಹದ 9 ಸೂಚನೆ ಮತ್ತು ಲಕ್ಷಣಗಳು.”

  1. Pingback: Tuberculosis(TB) ಕ್ಷಯರೋಗ - ಇದಕ್ಕೆ ಕಾರಣಗಳು, ಮತ್ತು ತಡೆಗಟ್ಟಲು ಇರುವ ನೈಸರ್ಗಿಕ ಪರಿಹಾರಗಳು. - learnwithmanju.in

  2. Pingback: ಕಿವಿ ನೋವು ಮತ್ತು ಕಿವಿ ಸಮಸ್ಯೆಗಳು : 5 Secret ಮನೆ ಮದ್ದುಗಳು

Leave a Comment

Your email address will not be published. Required fields are marked *

Scroll to Top