ಹಲಸು ಆರೋಗ್ಯಕ್ಕೆ ಒಳ್ಳೆಯದು ಆದರೆ ಮಧುಮೇಹಿ sugar patient ಕಾಯಿಲೆಗೆ ಕಷ್ಟಕರ
ಹಲವರು ಹಲಸು ಮಧುಮೇಹಿಗಳಿಗೆ ಅಪಾಯಕಾರಿ ಎನ್ನುತ್ತಾರೆ ಆದರೆ ಸಣ್ಣ ಪ್ರಮಾಣದ ಸೇವನೆ ಮತ್ತು ನಿಯಂತ್ರಣ ಅಪಾಯಕಾರಿಯಲ್ಲ .
ಏಕೆ ಮಧುಮೇಹಿಗಳಿಗೆ ಹಲಸು ಅಪಾಯಕಾರಿಯಾಗುತ್ತದೆ ?
ಹಲಸು(Jackfruit) ನಮ್ಮ ದಕ್ಷಿಣ ಭಾರತದ ಪ್ರಸಿದ್ಧ ಹಣ್ಣು ಇದು ರುಚಿಯಾಗಿದ್ದು ಹೆಚ್ಚು ಪೌಷ್ಟಿಕ ಅಂಶಗಳನ್ನು, ನೀರಿನ ಮತ್ತು ನಾರಿನ ಅಂಶಗಳನ್ನು ಒಳಗೊಂಡಿದೆ ಇದರ ಬಗ್ಗೆ ಹೆಚ್ಚಿನ ಪರಿಚಯ ಅಗತ್ಯವಿಲ್ಲ, ಆದರೆ ಸಕ್ಕರೆ ಕಾಯಿಲೆ ಇರುವವರು ಇದನ್ನು ಹೆಚ್ಚು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುತ್ತದೆ, ಹಾಗೂ ಅಜೀರ್ಣ ಸಮಸ್ಯೆ ಇರುವವರು ಇದರಿಂದ ದೂರವಿದ್ದಷ್ಟೂ ಒಳ್ಳೆಯದು .
ನಾವು ಹಲಸಿನ ಬೀಜಗಳನ್ನು ತಿನ್ನಲು ಇಷ್ಟ ಪಡುತ್ತೇವೆ ಕೆಲವರು ಅದನ್ನು ಸುಟ್ಟು ತಿಂದರೆ ಕೆಲವರು ಹಲಸಿನ ಬೀಜದಿಂದ ಸಾಂಬಾರ್ ಸಹ ಮಾಡಿ ತಿನ್ನುತ್ತಾರೆ, ಬೆಳಗ್ಗಿನ ವಾಕರಿಕೆ(Nausea) ಇರುವವರು ಹಲಸು ತಿನ್ನುವುದರಿಂದ ಗುಣಮುಖರಾಗುತ್ತಾರೆ , ಹಲಸಿನಲ್ಲಿ ಕೆಲವೊಂದು ಫೌಷ್ಟಿಕಾಂಶ ಮತ್ತು ಸೌಂದರ್ಯ ಹೆಚ್ಚಿಸುವ ಗುಣಗಳು ಇವೆ ,ಹಾಗು ಕೆಲ ವರದಿಗಳ ಪ್ರಕಾರ ಪುರುಷರ ವೀರ್ಯಾಣು ಹೆಚ್ಚಿಸಲಿಕ್ಕೆ ಹಾಗು ಮಕ್ಕಳನ್ನು ಪಡೆಯಲು ಹಲಸು ಸಹಾಯಮಾಡುತ್ತದೆ .
ಹಲಸಿನಲ್ಲಿ ಉನ್ನತ ವಿಟಮಿನ್ ಸಿ ,ಫೈಬರ್ , ಪೊಟ್ಯಾಸಿಯಮ್ , ಪ್ರೊಟೀನ್ ಅಂಶ ಹೆಚ್ಚಿಗೆ ಇರುತ್ತದೆ.
1) ಹಲಸಿನಲ್ಲಿ ಜಾಸ್ತಿ ನೈಸರ್ಗಿಕ ಸಕ್ಕರೆ
ಹಲಸಿನ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ (fructose) ಪ್ರಮಾಣ ಜಾಸ್ತಿ ಇರುವುದರಿಂದ ಹೆಚ್ಚಿಗೆ ಸೇವಿಸಿದರೆ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣ ತಕ್ಷಣಕ್ಕೆ ಜಾಸ್ತಿಯಾಗುತ್ತದೆ
2) ಇದರಲ್ಲಿ ಕಾರ್ಬೊಹೈಡ್ರಾಟ್ಸ್ ಪ್ರಮಾಣ ಹೆಚ್ಚಿರುತ್ತದೆ ಆದ್ದರಿಂದ ರಕ್ತದ ಸಕ್ಕರೆ ಪ್ರಮಾಣ ಬೇಗ ಹೆಚ್ಚಾಗುತ್ತದೆ .
3)ಗ್ಲೈಸೆಮಿಕ್ ಪ್ರಮಾಣ ಜಾಸ್ತಿ ಇರುತ್ತದೆ
ಅಂದರೆ ಹಲಸಿನ ಹಣ್ಣಿನಲ್ಲಿ ಈ ಅಂಶ ಜಾಸ್ತಿ ಇರುವುದರಿಂದ ತಿಂದರೆ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣ ಜಾಸ್ತಿಯಾಗುತ್ತದೆ .
4)ಔಷದಿ ತೆಗೆದುಕೊಳ್ಳುತ್ತಿರುವವರಿಗೆ ಕಷ್ಟ
ಈಗಾಗಲೇ ಸಕ್ಕರೆ ಕಾಯಿಲೆಗೆ ಔಷದಿ(Insulin) ತೆಗೆದುಕೊಳ್ಳುತ್ತಿರುವರು ಹಲಸಿನ ಹಣ್ಣು ತಿಂದರೆ ರಕ್ತದ ಸಕ್ಕರೆಯಲ್ಲಿ ಏರುಪೇರು ಉಂಟಾಗುತ್ತದೆ .
5)ಹಿತಮಿತ ಒಳ್ಳೆಯದು
ಸಾಮಾನ್ಯ ಮನುಷ್ಯನಿಗಿಂತ ಸಕ್ಕರೆ ಕಾಯಿಲೆ sugar patient ಇರುವವರು ಕಡಿಮೆ ಪ್ರಮಾಣದಲ್ಲಿ ಹಲಸು ಸೇವಿಸಿದರೆ ಒಳ್ಳೆಯದು ವೈದ್ಯರ ಸಲಹೆ ಮುಖ್ಯ .
ಯಾವುದೇ ಆಗಲಿ ಮಿತಿ ಮೀರಬಾರದು, ಸಕ್ಕರೆ ಕಾಯಿಲೆ ಇರುವವರು ಹಲಸಿನ ಹಣ್ಣು ತಿನ್ನಬಹುದು, ಅದನ್ನು ಮಿತಿಯಲ್ಲಿ ಮತ್ತು ಜಾಗರೂಕತೆಯಿಂದ ತಿನ್ನುವುದು ಉತ್ತಮ. ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳು ದೇಹಕ್ಕೆ ಶಕ್ತಿಯನ್ನು ತರುತ್ತವೆ ಆದರೆ, ಅದರಲ್ಲಿರುವ ನೈಸರ್ಗಿಕ ಸಕ್ಕರೆ ಅಂಶ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ, ಆದ್ದರಿಂದ ವೈದ್ಯರ ಸಲಹೆ ಪಡೆಯುವುದು ಮತ್ತು ಮಿತವಾಗಿ ತಿನ್ನುವುದೇ ಉತ್ತಮ.
ಸರಿಯಾದ ಆಹಾರ ಪದ್ದತಿ, ಉತ್ತಮವಾದ ವ್ಯಾಯಾಮ, ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಿದರೆ ಸಕ್ಕರೆ ಕಾಯಿಲೆಯನ್ನು ಸುಲಭವಾಗಿ ನಿಯಂತ್ರಿಸಬಹುದಾಗಿದೆ.
ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ಸ್ ಮಾಡಿ ನಿಮಗೆ ಯಾವ ವಿಷಯದ ಬಗ್ಗೆ ಮಾಹಿತಿ ಬೇಕು ಎಂದು ತಿಳಿಸಿ ಧನ್ಯವಾದಗಳು .

Pingback: Prevent and control Diabetes naturally in 7steps- kannada