ನಮ್ಮ ದೇಶದ Metabolic ಆರೋಗ್ಯ ಸಮಸ್ಯೆ:ಪರಿಹಾರ insuline ಪ್ರತಿರೋಧ

Spread the love
Metabolic ಆರೋಗ್ಯ system in india

Metabolic ಆರೋಗ್ಯ , ನಮ್ಮ ಹಿರಿಯರು ಕಲುಷಿತ ನೀರಿಗೆ ಹೆದರುತ್ತಿದ್ದರು ಆದರೆ ನಾವು ಕಲುಷಿತ ಜೀವನಶೈಲಿಗೆ ಹೆದರುವ ಸ್ಥಿತಿ ಬಂದಿದೆ.

ಮೆಟಾಬಾಲಿಕ್ ರೋಗಗಳು ನಮ್ಮ ಜನರನ್ನು ಇಷ್ಟು ತೀವ್ರವಾಗಿ ಏಕೆ ಕಾಡುತ್ತಿವೆ ಇದಕ್ಕೆ ಉತ್ತರವನ್ನು ಸಂಶೋಧಕರು “ಪರ್ಫೆಕ್ಟ್ ಮೆಟಾಬಾಲಿಕ್ ಸ್ಟೋರ್ಮ್” ಎಂದು ಕರೆದಿದ್ದಾರೆ — ಅಂದರೆ ನಮ್ಮ ಹುಟ್ಟು(genetic), ಪರಿಸರ (environmental) ಮತ್ತು ಜೀವನಶೈಲಿ (lifestyle)ಯ ಅಂಶಗಳು ಒಂದೇ ವೇಳೆ ಕೂಡುವ ಸಂದರ್ಭ.

ಆದರೆ ಈ ಸಂಕಷ್ಟದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು, ನಾವು ಇನ್ನಷ್ಟು ಆಳವಾಗಿ ಪರಿಶೀಲಿಸಬೇಕಾಗಿದೆ…
ಕೆವಲ ಎರಡು ತಲೆಮಾರಿನ(Generation)ಒಳಗೆ , ಭಾರತವು ಮಾನವ ಇತಿಹಾಸದಲ್ಲಿಯೇ ಅತ್ಯಂತ ಸಂಕಷ್ಟದ Metabolic ಆರೋಗ್ಯ ಪರಿವರ್ತನೆಗಳಲ್ಲಿ ಒಂದನ್ನು ಅನುಭವಿಸಿದೆ. ಸುಮಾರು ವರ್ಷಗಳ ಕಾಲ ಮಲೇರಿಯಾ ಮತ್ತು ಕ್ಷಯರೋಗ (ಟಿಬಿ) ಮುಂತಾದ ಸಾಂಕ್ರಾಮಿಕ ರೋಗಗಳು ನಮ್ಮ ಭಯಕ್ಕೆ ಕಾರಣವಾಗಿದ್ದವು . ಆದರೆ ಇಂದು, ನಾವು ಎದುರಿಸುತ್ತಿರುವ ಕಾಯಿಲೆ ಬೇರೆ — ಅದು Metabolic ಆರೋಗ್ಯ ರೋಗಗಳು…

ಈ ಬದಲಾವಣೆಯನ್ನು ನಾವು ನಿತ್ಯದ ಬದುಕಿನಲ್ಲಿ ನೋಡುತ್ತಿರುತ್ತೇವೆ ಇದುವರೆಗೂ ಆಸ್ಪತ್ರೆಗೆ ಹೋಗದೆ ಕಷ್ಟ ಪಟ್ಟು ದುಡಿಯುತ್ತಿರುವ ವ್ಯೆಕ್ತಿ ಇದ್ದಕಿದ್ದ ಹಾಗೆ ಹೃದಯಾಘಾತಕ್ಕೆ ಒಳಪಟ್ಟು ಆಸ್ಪತ್ರೆಗೆ ಸೇರುತ್ತಾರೆ ಈ Metabolic dysfunction ಅವರನ್ನು ಈ ಸ್ಥಿತಿಗೆ ತರುತ್ತದೆ ಎಂದು ಅವರು ಕನಸಿನಲ್ಲಿಯೂ ಯೋಚನೆ ಮಾಡಿರಲಾರರು.
ಮೊದಲು, ನಾವು ಸ್ಥೂಲಕಾಯತೆ (obesity)ಯ ಆಚೆ ನೋಡಬೇಕು. ಸಂಶೋಧನೆ ನಡೆಸುವ ವೇಳೆ “ಏಷ್ಯನ್ ಇಂಡಿಯನ್ ಪ್ಯಾರಾಡಾಕ್ಸ್” ಎಂಬ ವಿಚಾರವನ್ನು ತಿಳಿಯಲಾಗಿದೆ — ಅಂದರೆ ಭಾರತೀಯರು ಇತರ ಜನಾಂಗಗಳಿಗಿಂತ ಕಡಿಮೆ ದೇಹಭಾರದಲ್ಲಿಯೇ ಮಧುಮೇಹ(sugar) ಮತ್ತು ಹೃದಯರೋಗಗಳಂತಹ(Heart attack) ಮೆಟಾಬಾಲಿಕ್ ಕಾಯಿಲೆಗಳನ್ನು ಎದುರಿಸುತ್ತಿರುತ್ತಾರೆ ಎಂಬುದು ಆತಂಕದ ವಿಷಯ
ನಾವು ಸಾಮಾನ್ಯವಾಗಿ ಕೊಬ್ಬನ್ನು(Fat) ಚರ್ಮದ ಕೆಳಭಾಗದಲ್ಲಿ ಸಂಗ್ರಹಿಸುವುದಕ್ಕಿಂತ, ನಮ್ಮ ಅಂಗಾಂಗಗಳ ಸುತ್ತಮುತ್ತ ಮಧ್ಯಭಾಗದಲ್ಲಿ ಸಂಗ್ರಹಿಸುವ ಪ್ರವೃತ್ತಿ ಹೊಂದಿದ್ದೇವೆ ಈ ಅಂಶದಿಂದ ದೇಹದಲ್ಲಿ ಜೀರ್ಣಕ್ರಿಯೆ ಕಡಿಮೆ ಆಗಿ ಇನ್ಸುಲಿನ್ ಮಟ್ಟ ಏರುಪೇರಾಗುತ್ತದೆ .
ಆದ್ದರಿಂದ ಭಾರತೀಯರಿಗಾಗಿ ಬಾಡಿ ಮಾಸ್ ಇಂಡೆಕ್ಸ್ (BMI) ಮಿತಿಗಳನ್ನು ವಿಶೇಷವಾಗಿ ಕಡಿಮೆ ಮಾಡಬೇಕಾಯಿತು; ಯುರೋಪಿನ ವ್ಯಕ್ತಿಗೆ “ಆರೋಗ್ಯಕರ” ಎಂದು ಪರಿಗಣಿಸಲ್ಪಡುವ 25 BMI, ಭಾರತೀಯನಿಗೆ ಮಹತ್ವದ ಮೆಟಾಬಾಲಿಕ್ ಅಪಾಯವನ್ನು ಸೂಚಿಸಬಹುದು.
ಈ ಕಾರಣದಿಂದ ಬೊಜ್ಜು ಹಾಗು ಕೊಬ್ಬಿನಂಶ ಅಧಿಕ ಸಕ್ಕರೆ ಅಂಶ ದೇಹದಲ್ಲಿ ಹೆಚ್ಚಾಗುತ್ತದೆ .
ದುರದೃಷ್ಟವಶಾತ್, ಈ ಹೆಚ್ಚುವರಿ ಇನ್ಸುಲಿನ್ ಉರಿಯೂತವನ್ನು ಜಾಸ್ತಿ ಮಾಡಿ, ನಮ್ಮ ಅಂಗಾಂಗಗಳ ಸುತ್ತ ಅಪಾಯಕಾರಿ ಕೊಬ್ಬಿನ ಸಂಗ್ರಹಣೆಯನ್ನು ಉತ್ತೇಜಿಸುತ್ತದೆ. ಇದರಿಂದ ಕೊನೆಗೆ ಕೊರೋನರಿ ಹೃದಯ ರೋಗ ಮತ್ತು ಟೈಪ್ 2 ಮಧುಮೇಹಕ್ಕೆ ದಾರಿ ಮಾಡಿಕೊಡುತ್ತದೆ.
ಈ ಎಲ್ಲಾ ಕಾರಣಕ್ಕೆ ಭಾರತವನ್ನು ಮದುಮೇಹ ರಾಜಧಾನಿ ಎಂದು ಕರೆಯುತ್ತಾರೆ, ಆಶ್ಚರ್ಯ ಎಂದರೆ ಶಾಕಾಹಾರ ಮತ್ತು ಯೋಗದಂತಹ ಪ್ರಾಚೀನ ಪರಂಪರೆಗಳನ್ನು ಹೊಂದಿರುವ ನಮ್ಮ ದೇಶವು ಜೀವನಶೈಲಿ ಸಂಬಂಧಿತ ರೋಗಗಳಲ್ಲಿ ವಿಶ್ವದ ಮೊದಲ ಸ್ಥಾನದಲ್ಲಿದೆ.
ಪ್ರತೀ ನಾಲ್ಕು ಜನಕ್ಕೆ ಒಬ್ಬನಿನಿಗೆ ಮೆಟಾಬಾಲಿಕ್ ಕಾಯಿಲೆ ಇದೆ ಎಂದು ವರದಿಗಳು ಹೇಳುತ್ತವೆ ಪತ್ತೆ ಯಾಗದೆ ಇರುವುದು ಇನ್ನು 50% ಕಿಂತ ಜಾಸ್ತಿ ಇದೆ.
ಪ್ರಮುಖ ಕಾರಣಗಳೆಂದರೆ:
1) ಕಳೆದ ಒಂದು ದಶಕದಲ್ಲಿ ನಗರ ಪ್ರದೇಶಗಳಲ್ಲಿ ಬೀದಿಬದಿ ಇರುವ ಆಹಾರ ಮತ್ತು junk food ಸೇವನೆಯು ಶೇ40% ಹೆಚ್ಚಾಗಿದೆ.

2) ದೇಹಕ್ಕೆ ಹೆಚ್ಚು ವ್ಯಾಯಾಮ ಹಾಗು ಕಷ್ಟದ ಕೆಲಸ ಇಲ್ಲದೆ ಸೋಂಬೇರಿಗಳಾಗಿರುವುದು.

3) ಕಳೆದ ಒಂದು ದಶಕಗಳಲ್ಲಿ ಸರಾಸರಿ ನಿದ್ರೆಯ ಅವಧಿ ಸುಮಾರು ಒಂದು ಗಂಟೆಯಷ್ಟು ಕಡಿಮೆಯಾಗಿದೆ.
4) ಅತಿಯಾದ ನಗರೀಕರಣದಿಂದ ಹೆಚ್ಚುತ್ತಿರುವ ಮಾಲಿನ್ಯ ಹಾಗು ರಾಸಾಯನಿಕಗಳ ಬಳಕೆ
5) ಒತ್ತಡ (Stress)ಒತ್ತಡವು ದೈಹಿಕ ಹಾಗೂ ಮಾನಸಿಕ ಪ್ರತಿಕ್ರಿಯೆಯಾಗಿದ್ದು, ಜೀವನದಲ್ಲಿ ಎದುರಾಗುವ ಸವಾಲುಗಳು, ಒತ್ತಾಯಗಳು ಅಥವಾ ಆತಂಕಕಾರಿ ಪರಿಸ್ಥಿತಿಗಳಿಂದ ಉಂಟಾಗುತ್ತದೆ.
ಈ ಎಲ್ಲಾ ಕಾರಣಗಳಿಂದ ಮೆಟಾಬಾಲಿಕ್ ಕಾಯಿಲೆಯು ಹೆಚ್ಚಾಗುವುದರ ಜೊತೆಗೆ ಸಾಮಾನ್ಯ ಜನರ ಪರಿಸ್ಥಿತಿಯು ಅಂದಗೆಡುವಂತಾಗಿದೆ ,
ನಮ್ಮ ದೇಶವು ಅದೇ ನಿಟ್ಟಿನಲ್ಲಿದೆ ಕಾಯಿಲೆಗೆ ಬೇಗ ಔಷದಿ ತಂದು ಗುಣಮುಖರನ್ನಾಗಿ ಮಾಡುವ ಬದಲು ನಿಧಾನಗತಿಯಲ್ಲಿ ಪರಿಹರಿಸಲು ತೊಡಗುತ್ತಿದೆ .
ನಾವು ಪ್ರತಿಕ್ರಿಯಾತ್ಮಕ ಮನೋಭಾವದಿಂದ ಮುನ್ನೆಚ್ಚರಿಕೆಯ ಮನೋಭಾವದತ್ತ ಗಮನಹರಿಸಬೇಕು . ಕೇವಲ ಗ್ಲೂಕೋಸ್ ಮಟ್ಟವನ್ನು ಮಾತ್ರ ನೋಡುವುದನ್ನು ಬಿಟ್ಟು, ಇನ್ಸುಲಿನ್‌ನ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಆಧುನಿಕ ತಂತ್ರಜ್ಞಾನವು ಆಹಾರ, ಒತ್ತಡ ಮತ್ತು ನಿದ್ರೆಗೆ ನಮ್ಮ ಮೆಟಾಬಾಲಿಸಮ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ. ಇದರಿಂದ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವ ಹಲವು ವರ್ಷಗಳ ಮುಂಚೆಯೇ ದೋಷವನ್ನು ಪತ್ತೆಹಚ್ಚಿ ಪರಿಹಾರವನ್ನು ಹುಡುಕಬೇಕಾಗಿದೆ .

ನಾನು ಬರೆದಿರುವ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತೆ ಬೇರೆ ಯಾವ ವಿಷಯದ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕು ಎಂದು ಕಾಮೆಂಟ್ಸ್ ರೂಪದಲ್ಲಿ ತಿಳಿಸಿ ಧನ್ಯವಾದಗಳು .

Leave a Comment

Your email address will not be published. Required fields are marked *

Scroll to Top