Piles : Causes, Symptoms, and Natural Home Remedies || ಪೈಲ್ಸ್ ಇದರ ಕಾರಣಗಳು, ಲಕ್ಷಣಗಳು ತಡೆಯುವ ನೈಸರ್ಗಿಕ ಮನೆಮದ್ದುಗಳು.

Spread the love
piles

ಪೈಲ್ಸ್ Piles ಅಥವಾ ಹಿಮೊರಾಯ್ಡ್ಸ್ ಇದು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲಿ ಕಾಣಿಸುತ್ತಿರುವ ಗಂಭೀರ ಆರೋಗ್ಯ ಸಮಸ್ಯೆ. ನಮ್ಮ ಜೀವನಶೈಲಿ, ಆಹಾರಪದ್ಧತಿ, ಒತ್ತಡ ಈ ಕಾರಣಗಳಿಂದ ಬರುವ ಸಮಸ್ಯೆಯಾಗಿದೆ. ಪೈಲ್ಸ್ ಎಂದರೆ, ನಾವು ಮಲವಿಸರ್ಜನೆ ಮಾಡುವ ಜಾಗದಲ್ಲಿ ಒಳಗಡೆ ಅಥವಾ ಒರಗಡೆ ರಕ್ತನಾಳಗಳು ಸ್ವಲ್ಪ ಊದಿಕೊಳ್ಳುವುದರಿಂದ  ಸಮಸ್ಯೆ ಜಾಸ್ತಿಯಾಗುತ್ತದೆ. ಇದನ್ನು ತುಂಬಾ ಜನ ತಮಗೆ ಮುಜುಗರ ಆಗುತ್ತದೆ ಎಂದು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಕೊನೆಗೆ ಡಾಕ್ಟರ್ ಬಳಿಯೂ ಹೇಳಿಕೊಳ್ಳದೆ ಸಮಸ್ಯೆ ದೊಡ್ಡದಾಗುವವರೆಗೂ ಹಾಗೆಯೇ ಇರುತ್ತಾರೆ. ಆದ್ದರಿಂದ ಅವರಿಗೆ ಸಿಗಬೇಕಾದ ಚಿಕಿತ್ಸೆ ತಡವಾಗುತ್ತದೆ.

ನಮ್ಮ ದೇಶದಲ್ಲಿ ಇದು ತುಂಬಾ ವೇಗವಾಗಿ ಹೆಚ್ಚಾಗುತ್ತಿರುವ ಈ ಸಮಸ್ಯೆ. 20-30 ವರ್ಷಗಳ ಮೊದಲು ಇದು ತುಂಬಾ ಕಡಿಮೆ ಆದರೆ ಈಗ ಇದು ನಮ್ಮ ಜೀವನಶೈಲಿಯ ಬದಲಾವಣೆಯಿಂದ ಜಾಸ್ತಿಯಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ Piles ಇದೊಂದು ಸಾಮಾನ್ಯ ಸಮಸ್ಯೆಯಾಗಿದ್ದು ಅನೇಕ ಜನರು ಗೊತ್ತೋ ಗೊತ್ತಿಲ್ಲದೆಯೋ ಇದರಿಂದ ಬಳಲುತ್ತಿದ್ದಾರೆ.

ನಮ್ಮ ದೇಶದಲ್ಲಿ ಈಗಾಗಲೇ ಅನೇಕ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಪ್ರತೀವರ್ಷ ಲಕ್ಷಾಂತರ ಹೊಸ ಪ್ರಕರಣಗಳು ದಾಖಲಾಗುತ್ತಿವೆ.
ಸುಮಾರು 50 ವರ್ಷ ಮೇಲ್ಪಟ್ಟ ಜನರಲ್ಲಿ 50% ಕ್ಕೂ ಹೆಚ್ಚು ಜನರು ಜೀವನದಲ್ಲಿ ಯಾವಾಗಲಾದರೂ Piles ಸಮಸ್ಯೆ ಅನುಭವಿಸುತ್ತಾರೆ.
ನಮ್ಮ ದೇಶದಲ್ಲಿ ಸುಮಾರು 5% ಜನ ಯಾವಾಗಲೂ ಈ ಸಮಸ್ಯೆಯಿಂದ ನರಳುತ್ತಿರುತ್ತಾರೆ.(ನಮ್ಮ ದೇಶದ ಜನಸಂಖ್ಯೆ140 ಕೋಟಿ ಅಂದರೆ ಅದರಲ್ಲಿ 5% ಅಂದರೆ ಸುಮಾರು 7 ಕೋಟಿ ಜನ)
ನಮ್ಮ ದೇಶದಲ್ಲಿ ಈ ರೀತಿ ಇದ್ದರೆ, ಪ್ರಪಂಚದಾದ್ಯಂತ ಸುಮಾರು 4.4% ಜನ ಪೈಲ್ಸ್ ಸಮಸ್ಯೆಗೆ ಒಳಗಾಗಿದ್ದಾರೆ.(ಅಂದರೆ ಪ್ರಪಂಚದಲ್ಲಿರುವ ಜನಸಂಖ್ಯೆ ಸುಮಾರು 800 ಕೋಟಿ. ಅದರಲ್ಲಿ 4% ಅಂದರೆ ಸುಮಾರು 32 ಕೋಟಿ ಜನ ಈ ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ).

ಇದೊಂದು ಗುಣಪಡಿಸಬಹುದಾದ ಸಮಸ್ಯೆಯಾಗಿದ್ದು, ಈ ಸಮಸ್ಯೆಯನ್ನು ನಾವು ಕೇವಲವಾಗಿ ತೆಗೆದುಕೊಳ್ಳದೆ, ಗಂಭೀರವಾಗಿ ಪರಿಗಣಿಸಿ, ಸರಿಯಾದ ಚಿಕಿತ್ಸೆ ಪಡೆದರೆ ಬೇಗ ಗುಣವಾಗಬಹುದು.

ಮುಖ್ಯವಾಗಿ ನೀವು ಮಾಡಬೇಕಿರುವುದಿಷ್ಟೇ ನಿಮಗೆ ಪೈಲ್ಸ್ ಇದೆ ಅಂತ ಗೊತ್ತಾದ ತಕ್ಷಣ ಯಾವುದೇ ನಾಚಿಕೆ ಇಲ್ಲದೆ ಡಾಕ್ಟರ್(proctologist or a colorectal surgeon) ಅನ್ನು ಬೇಗ ಮೀಟ್ ಮಾಡಿ, ನಿಮ್ಮ ಸಮಸ್ಯೆಯನ್ನು ತೋರಿಸಿಕೊಳ್ಳಿ. ಅವರು ಯಾವ ಚಿಕಿತ್ಸೆ ಕೊಡಬೇಕೋ ಅದನ್ನ ಕೊಡುತ್ತಾರೆ.
ಸಮಸ್ಯೆ ಜಾಸ್ತಿ ಆದಾಗ ಹೋಗಿ ತೋರಿಸಿಕೊಂಡರೆ ಶಸ್ತ್ರಚಿಕಿತ್ಸೆ ಒಂದೇ ದಾರಿ.

ಪೈಲ್ಸ್ Piles ಆಗಲು ಮುಖ್ಯ ಕಾರಣಗಳು (Causes)

ಪೈಲ್ಸ್ ಕೇವಲ ಒಂದೇ ಕಾರಣದಿಂದ ಬರುತ್ತೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಇದು ಹಲವಾರು ಕಾರಣಗಳಿಂದ ಬರುತ್ತದೆ. ಅದರಲ್ಲಿ ಕೆಲವು ಕಾರಣಗಳನ್ನ ನಾವಿಲ್ಲಿ ನೋಡೋಣ.

1. ಕಡಿಮೆ ಫೈಬರ್ ಇರುವ ಆಹಾರ ತಿನ್ನುವುದರಿಂದ ಪೈಲ್ಸ್ ಬರುತ್ತದೆ.
2. ತುಂಬಾ ಒತ್ತು ಕುಳಿತುಕೊಂಡೆ ಇರುವುದರಿಂದ ಕೆಳಗೆ ಒತ್ತಡ ಜಾಸ್ತಿಯಾಗಿ ಇದು ಉಂಟಾಗುತ್ತದೆ.
3. ಗರ್ಭಿಣಿ ಮಹಿಳೆಯರಲ್ಲಿ ಸಾಮಾನ್ಯವಾಗಿ ಇದು ಕಾಣಿಸುತ್ತದೆ.
4. ಮಲವಿಸರ್ಜನೆ ಮಾಡೋ ಸಮಯದಲ್ಲಿ ಹೆಚ್ಚಿನ ಪ್ರೆಷರ್ ಕೊಡುವುದು.
5. ಸರಿಯಾದ ವ್ಯಾಯಾಮ ಮಾಡದೆ ಇರುವುದು.
6. ಜಂಕ್ ಫುಡ್ ತಿನ್ನುವುದರಿಂದ.
7. ಮಲವಿಸರ್ಜನೆ ಸಮಯದಲ್ಲಿ ಒತ್ತಡ ಜಾಸ್ತಿಯಾಗಿ ಮಲಬದ್ಧತೆ (constipation) ಉಂಟಾದಾಗ.
8. ದೇಹ ಹೆಚ್ಚು ತೂಕವಾದಾಗ ಪೈಲ್ಸ್ ಬರುವ ಸಾಧ್ಯತೆ ಜಾಸ್ತಿ.

ಈ ಎಲ್ಲಾ ಕಾರಣಗಳಿಂದ ಮಲವಿಸರ್ಜನೆ ಮಾಡುವ ರಕ್ತನಾಳದ ಮೇಲೆ ಒತ್ತಡ ಜಾಸ್ತಿಯಾಗಿ ಪೈಲ್ಸ್ ಬರುತ್ತದೆ.

ಪೈಲ್ಸ್ ಆದರೆ ದೇಹದಲ್ಲಿ ಕಂಡುಬರುವ ಲಕ್ಷಣಗಳು (Symptoms)

ಇದು ಆರಂಭದಲ್ಲಿ ಅಷ್ಟೇನು ತೀವ್ರವಾದ ಲಕ್ಷಣಗಳನ್ನು ತೋರಿಸುವುದಿಲ್ಲ. ಎಲ್ಲವೂ ನಾರ್ಮಲ್ ರೀತಿ ಇರುತ್ತದೆ. ಆದರೆ ದಿನಕಳೆದಂತೆ ಒಂದೊಂದೇ ಲಕ್ಷಣಗಳು ಕಂಡುಬರುತ್ತವೆ. ಅವುಗಳಲ್ಲಿ ಕೆಲವೊಂದು ಲಕ್ಷಣಗಳನ್ನು ನೋಡೋಣ.

  •  ಮಲವಿಸರ್ಜನೆ ಮಾಡುವ ಜಾಗದಲ್ಲಿ ನೋವು ಮತ್ತೆ ಉರಿ.
  •  ಆ ಜಾಗದಲ್ಲಿ ಗಡ್ಡೆಯ ರೀತಿ ಇರುವುದು.
  •  ಮಲವಿಸರ್ಜನೆ ಮಾಡಿದ ನಂತರವೂ ಇನ್ನು ಪೂರ್ಣವಾಗಿಲ್ಲ ಅನಿಸುವುದು.
  •  ಆ ಜಾಗದಲ್ಲಿ ಯಾವಾಗಲೂ ನವೆ Itching ಅನಿಸುವುದು.
  •  ಮಲವಿಸರ್ಜನೆ ಮಾಡುವಾಗ ರಕ್ತ ಬರುವುದು.
  •  ನಡೆಯುವಾಗ, ಕುಳಿತುಕೊಳ್ಳುವಾಗ ಕೆಳಗಡೆ ನೋವು ಕಾಣಿಸುವುದು.
Piles ಜಾಸ್ತಿ ಆದಾಗ ಏನೆಲ್ಲಾ ತೊಂದರೆ ಉಂಟಾಗುತ್ತದೆ.

ಪೈಲ್ಸ್ ಸಮಸ್ಯೆ ಜಾಸ್ತಿಯಾದಾಗ ಹಲವಾರು ಸಮಸ್ಯೆಗಳಾಗುತ್ತದೆ. ಆದರೆ ಈ ರೀತಿಯ ಸಮಸ್ಯೆಗಳು ಸ್ವಲ್ಪ ಅಪರೂಪ.

1. ಅನೇಮಿಯಾ : ಇದನ್ನು ರಕ್ತಹೀನತೆ ಅಂತ ಕೆರೀತೀವಿ. ಇದು ಯಾಕಾಗುತ್ತದೆ ಅಂದರೆ, ಪೈಲ್ಸ್ ಸಮಸ್ಯೆಯಿಂದ ದೇಹದಿಂದ ಜಾಸ್ತಿ ರಕ್ತ ಹೊರಹೋಗುತ್ತದೆ.
ಮುಖ್ಯವಾಗಿ ದೇಹದಲ್ಲಿ ನಾವು ಉಸಿರಾಡುವ ಆಮ್ಲಜನಕವನ್ನ ದೇಹದಾದ್ಯಂತ ಸಾಗಿಸಲು ಬೇಕಿರುವ ಆರೋಗ್ಯಕರ ಕೆಂಪು ರಕ್ತಕಣಗಳು ಇಲ್ಲದೇ ಇದ್ದಾಗ ಈ ರೀತಿಯ ಅನೀಮಿಯಾ ಬರುತ್ತದೆ.

2. ರಕ್ತ ಹೆಪ್ಪುಗಟ್ಟುವುದು : ಕೆಲವೊಮ್ಮೆ ಈ ಮೂಲವ್ಯಾಧಿಯಲ್ಲಿ hemorrhoids ರಕ್ತವು ಹೆಪ್ಪುಗಟ್ಟಿದ ಹಾಗೆ ಹಾಗುತ್ತದೆ. ಇದನ್ನೇ ಥ್ರಂಬೋಸ್ಡ್ piles ಎನ್ನುವುದು. ಇದು ಅಷ್ಟೇನು ಅಪಾಯಕವಲ್ಲದಿದ್ದರೂ ತುಂಬಾ ನೋವು ಕೊಡುತ್ತದೆ. ಇದನ್ನ ಆಗಾಗ ಕ್ಲೀನ್ ಮಾಡಬೇಕಿರುತ್ತದೆ.

ಪೈಲ್ಸ್‌ಗೆ ನಾವು ಬಳಸಬೇಕಾದ ಮನೆಮದ್ದುಗಳು (Natural Home Remedies)

ನೈಸರ್ಗಿಕ ಮನೆ ಮದ್ದುಗಳು :

 Piles ಗೆ ನಾವು ಆರಂಭದ ಹಂತದಲ್ಲಿ ಡಾಕ್ಟರ್ ಬಳಿ ಹೋಗುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಮನೆಯಲ್ಲಿ ಸಿಗುವ ನೈಸರ್ಗಿಕ ಪಧಾರ್ಥಗಳನ್ನ ಬಳಸಿ ಗುಣಪಡಿಸಿಕೊಳ್ಳಬಹುದು.
1. ಜೀರಿಗೆ ನೀರು : ರಾತ್ರಿ ಮಲಗುವಾಗ ಒಂದು ಗ್ಲಾಸ್ ನೀರನ್ನು ಕುಡಿಸಿ ಅದಕ್ಕೆ ಸ್ವಲ್ಪ ಜೀರಿಗೆ ಮಿಕ್ಸ್ ಮಾಡಿ ಕುಡಿಯುವುದರಿಂದ ನಮ್ಮ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಮತ್ತೆ ಮಲಬದ್ಧತೆ ಕಡಿಮೆಯಾಗುತ್ತದೆ.
2. ಬಿಸಿನೀರಿನ ಶಾಖ : ಅಂದರೆ ಕೆಳಗಡೆ ಸ್ವಲ್ಪ ನೋವು ಕಂಡುಬಂದರೆ ನೀರನ್ನು ಸ್ಪಲ್ಪ ಬಿಸಿ ಮಾಡಿ ಒಂದು ಅಗಲವಾದ ಡಬ್ಬದಲ್ಲಿ ಹಾಕಿ 20 ನಿಮಿಷ ಕುಳಿತುಕೊಳ್ಳುವುದು.
3. ಹಾಲು ಮತ್ತು ತುಪ್ಪ : ರಾತ್ರಿ ಮಲಗುವಾಗ ಒಂದು ಗ್ಲಾಸ್ ಹಾಲಿಗೆ ಜೇನು ತುಪ್ಪ ಮಿಕ್ಸ್ ಮಾಡಿ ಕುಡಿಯುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ.
4. ಅಲೋವೆರಾ ಜ್ಯೂಸ್ : ನೈಸರ್ಗಿಕವಾಗಿ ಸಿಗುವ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಮಲವಿಸರ್ಜನೆ ಮಾಡುವ ಸಮಯದಲ್ಲಿ ಉಂಟಾಗುವ ಉರಿಯನ್ನು ಕಡಿಮೆ ಮಾಡುತ್ತದೆ.
5. ತೆಂಗಿನ ಎಣ್ಣೆ : ಇದನ್ನು ರಾತ್ರಿ ಸಮಯದಲ್ಲಿ ಕೆಳಗಡೆ ಆ ಭಾಗಕ್ಕೆ ಹಚ್ಚುವುದರಿಂದ ಸುಡುವ ವೇದನೆ, ಉರಿ, ಮತ್ತೆ ನೋವು ಕಡಿಮೆಯಾಗುತ್ತದೆ.
6. ಬಾಳೆಹಣ್ಣು : ಮಲವಿಸರ್ಜನೆಯನ್ನು ಸುಲಭಮಾಡುತ್ತದೆ ಮತ್ತು ಮಲಬದ್ಧತೆ ಕಡಿಮೆಯಾಗುತ್ತದೆ.

ಪೈಲ್ಸ್‌ ಗುಣ ಆಗುವುದಕ್ಕೆ ಉತ್ತಮ ಆಹಾರಗಳು (Best Foods)

ನಾವು ಮನೆಯಲ್ಲಿ ಸರಿಯಾದ ರೀತಿಯ ಆಹಾರ ತಿನ್ನುವುದರಿಂದ ಪೈಲ್ಸ್ ಸಮಸ್ಯೆಯನ್ನು ಬೇಗ ಗುಣಪಡಿಸಬಹುದು.
ಕೆಲವೊಂದು ಪೌಷ್ಠಿಕ ಆಹಾರಗಳು :
1. ಅತಿಹೆಚ್ಚು ಫೈಬರ್ ಇರುವ ಆಹಾರ ಪಧಾರ್ಥಗಳು
ಓಟ್ಸ್, ಗೋದಿ, ರಾಗಿ, ಬ್ರೌನ್ ರೈಸ್, ಇವುಗಳಿಂದ ತಯಾರಿಸುವ ಪಧಾರ್ಥಗಳನ್ನು ದಿನನಿತ್ಯ ತಿನ್ನುವುದರಿಂದ ಜೀರ್ಣಕ್ರಿಯೆ ಚನ್ನಾಗಿ ಆಗುತ್ತದೆ. ಮತ್ತು ಮಲಬದ್ಧತೆ ಕಡಿಮೆಯಾಗುತ್ತದೆ.

2. ಹಣ್ಣುಗಳು – ಆಪಲ್, ಆರೆಂಜ್, ಪಪ್ಪಾಯಿ, ಕಿತ್ತಳೆ, ಮೋಸಂಬಿ ಈ ರೀತಿಯ ಹಣ್ಣುಗಳನ್ನು ದಿನನಿತ್ಯ ತಿನ್ನುವುದರಿಂದ ಜೀರ್ಣ ಕ್ರಿಯೆ ಚನ್ನಾಗಿ ಆಗುತ್ತದೆ. ಅದರಲ್ಲೂ ಮುಖ್ಯವಾಗಿ ದಪ್ಪ ಬಾಳೆಹಣ್ಣನ್ನು ದಿನಕ್ಕೆ ಒಂದು ತಿನ್ನುವುದರಿಂದ ಮಲಬದ್ಧತೆ ವಾಸಿಯಾಗುತ್ತದೆ. ಮತ್ತೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.

3. ಹಸಿರು ತರಕಾರಿಗಳು – ಪಾಲಕ್, ಬ್ರಾಕೊಲಿ, ಬೀನ್ಸ್, ನವಕೋಲು, ಎಲೆಕೋಸು, ಕ್ಯಾರೆಟ್, ಮೂಲಂಗಿ(ಸಾಂಬಾರಿನಲ್ಲಿ ಜಾಸ್ತಿ ತಿನ್ನುವುದರಿಂದ ಪೈಲ್ಸ್ ಬೇಗ ಕಡಿಮೆಯಾಗುತ್ತದೆ) ಈ ರೀತಿಯ ತರಕಾರಿಗಳನ್ನು ಚನ್ನಾಗಿ ತೊಳೆದು ಬೇಹಿಸದೆ ಆಗೇ ಹಸಿ ಹಸಿ ತಿನ್ನುವುದರಿಂದ ಪೈಲ್ಸ್ ಸಮಸ್ಯೆ ಕಡಿಮೆಯಾಗುತ್ತದೆ.

4. ನೀರು – ಹೆಚ್ಚಿಗೆ ನೀರು ಕುಡಿಯುವುದು, ಮಜ್ಜಿಗೆ, ಎಳೆನೀರು, ಈ ರೀತಿಯ ತೆಳುವಾದ ಪಧಾರ್ಥಗಳನ್ನು ಜಾಸ್ತಿ ಕುಡಿಯುವುದರಿಂದ ದೇಹ ಹೈಡ್ರೇಟ್ ಆಗಿ ಇದ್ದು ಮಲಬದ್ಧತೆಯಂತ ಸಮಸ್ಯೆಗಳು ಕಡಿಮೆಯಾಗುತ್ತವೆ.

5. ಕಾಳುಗಳು – ಕಡಲೆ, ಹೆಸರು, ಹಲಸಂದೆ, ಹುರುಳಿ, ಈ ರೀತಿಯ ಕಾಳುಗಳಲ್ಲಿ ಹೆಚ್ಚಿನ ಫೈಬರ್ ಅಂಶ ಇದ್ದು, ಇದು ಮಲಬದ್ಧತೆ ಆಗದ ರೀತಿ ತಡೆಯುತ್ತದೆ.

ಒಂದು ಮುಖ್ಯವಾದ ವಿಚಾರ ಊಟವನ್ನು ಒಂದೇಬಾರಿ ಹೆಚ್ಚು ತಿನ್ನುವುದಕ್ಕಿಂತ 4 ಬಾರಿ ಸ್ವಲ್ಪ ಸ್ವಲ್ಪ ತಿಂದರೆ ಜೀರ್ಣಕ್ರಿಯೆ ಚನ್ನಾಗಿ ಆಗುತ್ತದೆ ಆಗ ಮಲಬದ್ಧತೆ ಸಮಸ್ಯೆ ಬರುವುದಿಲ್ಲ.

Piles ಇದ್ದಾಗ ಯಾವ ಆಹಾರಗಳನ್ನು ತಪ್ಪಿಸಬೇಕು ?
Avoid Junk food During Piles problem
  • ಬೀದಿ ಬದಿ ಸಿಗುವ ಮಸಾಲೆ ಹೆಚ್ಚು ಇರುವ ಆಹಾರ
  • ಫಾಸ್ಟ್ ಫುಡ್ ಅಂದರೆ ತಕ್ಷಣಕ್ಕೆ ರೆಡಿಯಾಗುವ ಆಹಾರ.
  • ಜಂಕ್ ಫುಡ್ ಪಿಜ್ಜಾ , ಬರ್ಗರ್, ಗೋಬಿ, ಇತ್ಯಾದಿ.
  • ಮದ್ಯಪಾನ ಮತ್ತೆ ಧೂಮಪಾನ
  • ಹೆಚ್ಚು ಟೀ ಮತ್ತೆ ಕಾಫಿ ಕುಡಿಯುವುದು

ಈ ಪದಾರ್ಥಗಳನ್ನು ಕಡಿಮೆ ಮಾಡುವುದರಿಂದ ಪೈಲ್ಸ್, ಮತ್ತೆ ಮಲಬದ್ದತೆಯನ್ನು ಕಡಿಮೆ ಮಾಡಬಹುದು.

Piles ಕಂಟ್ರೋಲ್ ಮಾಡಲು ನಮ್ಮ Lifestyle ಯಾವ ರೀತಿ ಇರಬೇಕು

  •  ಪ್ರತಿನಿತ್ಯ ಕನಿಷ್ಠ ಅಂದರೂ 30-40  ನಿಮಿಷ ವ್ಯಾಯಾಮ ಮಾಡಬೇಕು.
    ಕೂತಿದ್ದ ಜಾಗದಲ್ಲಿಯೇ 20 ನಿಮಿಷಕ್ಕಿಂತ ಜಾಸ್ತಿ ಕೂರಬಾರದು. ಎದ್ದು 5 ನಿಮಿಷ ವಾಕ್ ಮಾಡಿ ಮತ್ತೆ ಕೂರಬೇಕು.
  •  ದಿನಕ್ಕೆ ಕನಿಷ್ಠ ಅಂದರೂ 3-4 ಲೀಟರ್ ನೀರು ಕುಡಿಯಬೇಕು.
  •  ಟಾಯ್ಲೆಟ್ ಗೆ ಹೋಗಬೇಕು ಎನಿಸಿದರೆ ಯಾವುದೇ ಕಾರಣಕ್ಕೂ ಜಾಸ್ತಿ ಹೊತ್ತು ತಡೆಯಬಾರದು.
  •  ಕೆಲವರು ಟಾಯ್ಲೆಟ್ ನಲ್ಲಿ ಮೊಬೈಲ್ ನೋಡಿಕೊಂಡು ಹೆಚ್ಚು ಹೊತ್ತು ಕುಳಿತುಕೊಳ್ಳುತ್ತಾರೆ ಅದು ತಪ್ಪು.
  •  ಯೋಗ ಮತ್ತೆ ಧ್ಯಾನ ಮಾಡಿ ಒತ್ತಡವನ್ನು ಕಂಟ್ರೋಲ್ ಮಾಡಿಕೊಳ್ಳಿ.

ಈ ಎಲ್ಲಾ ವಿಷಯಗಳನ್ನು ಗಮನವಿಟ್ಟು ಪ್ರತೀದಿನ ಅಭ್ಯಾಸ ಮಾಡಿದರೆ ನಿಮಗೆ ಪೈಲ್ಸ್ ಸಮಸ್ಯೆ ಇದ್ದರೆ ಬೇಗ ವಾಸಿಯಾಗುತ್ತದೆ.

ಪ್ರಮುಖವಾಗಿ ಗಮನಿಸಬೇಕಾದ ವಿಷಯ ಎಂದರೆ ಸಮಸ್ಯೆ ಕಡಿಮೆ ಇದ್ದರೆ ನಾನು ಮೇಲೆ ತಿಳಿಸಿರುವ ಮನೆ ಮದ್ದುಗಳು ತುಂಬಾ ಸಹಾಯ ಮಾಡುತ್ತವೆ.
ಒಂದು ವೇಳೆ ಸಮಸ್ಯೆ ಜಾಸ್ತಿಯಾಗಿದ್ದಾಗ ಖಂಡಿತ ಡಾಕ್ಟರ್ ಅನ್ನು ಸಂಪರ್ಕಿಸಬೇಕು. ಕೆಲವರಿಗೆ ಹೇಳಿಕೊಳ್ಳಲು ಮುಜುಗರ, ಹಿಂಸೆ ಆದರೆ ತಲೆಕೆಡಿಸಿಕೊಳ್ಳಬೇಡಿ ನಿಮ್ಮ ಆರೋಗ್ಯಕ್ಕಿಂತ ದೊಡ್ಡದು ಯಾವುದು ಇಲ್ಲ. ಸಮಸ್ಯೆ ಜಾಸ್ತಿಯಾದಾಗ ಲೇಸರ್ ಸರ್ಜರಿ ಶಸ್ತ್ರ ಚಿಕಿತ್ಸೆಯಿಂದ ದೊಡ್ಡದಾದ ಗಡ್ಡೆಗಳನ್ನು ತೆಗೆದು ವಾಸಿ ಮಾಡುತ್ತಾರೆ.

ಪೈಲ್ಸ್ ಇದೊಂದು ಎಲ್ಲರಲ್ಲೂ ಬರುವ ಸಾಮಾನ್ಯ ಸಮಸ್ಯೆ. ಆದರೆ ನಾವು ಸರಿಯಾದ ರೀತಿಯ ಆರೈಕೆ ಮಾಡದಿದ್ದರೆ ಜಾಸ್ತಿಯಾಗಿ ದೇಹದ ಆರೋಗ್ಯವನ್ನು ನಾಶಮಾಡುತ್ತದೆ.
ಅದಕ್ಕೆ ಸರಿಯಾದ ಆಹಾರ, ವ್ಯಾಯಾಮ, ಮತ್ತೆ ಜೀವನಶೈಲಿಯಲ್ಲಿ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡು ಈ ಸಮಸ್ಯೆಯನ್ನು ದೂರಮಾಡಬಹುದು.

FAQs

1. ಪೈಲ್ಸ್ ಸಂಪೂರ್ಣವಾಗಿ ಗುಣವಾಗುತ್ತದೆಯೇ?

ಹೌದು, ಪ್ರಾರಂಭದಲ್ಲಿಯೇ ಇದನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡಿದರೆ ಖಂಡಿತವಾಗಿ ಬೇಗ ಗುಣಪಡಿಸಬಹುದು.

ಪ್ರಾರಂಭಿಕ ಹಂತದಲ್ಲಿ ಅವಶ್ಯಕತೆ ಇರುವುದಿಲ್ಲ. ಆದರೆ ಅದು ತೀವ್ರ ಹಂತಕ್ಕೆ ಹೋದರೆ ಶಸ್ತ್ರಚಿಕಿತ್ಸೆ ತುಂಬಾ ಅಗತ್ಯ.

ಫೈಬರ್ ಅಂಶ ಹೆಚ್ಚಿರುವ ಆಹಾರಗಳು, ಕಾಳುಗಳು, ಸೊಪ್ಪು, ತರಕಾರಿಗಳು ಮತ್ತೆ ಹೆಚ್ಚಿನ ನೀರು ಕುಡಿಯುವುದರಿಂದ ಬೇಗ ವಾಸಿಯಾಗುತ್ತದೆ.

ಅಜೀರ್ಣ, ಮಲಬದ್ಧತೆ ಮತ್ತು ಅತಿ ಹೆಚ್ಚು ಕುಳಿತು ಕೆಲಸ ಮಾಡುವ ಜೀವನಶೈಲಿ.

1 thought on “Piles : Causes, Symptoms, and Natural Home Remedies || ಪೈಲ್ಸ್ ಇದರ ಕಾರಣಗಳು, ಲಕ್ಷಣಗಳು ತಡೆಯುವ ನೈಸರ್ಗಿಕ ಮನೆಮದ್ದುಗಳು.”

Leave a Comment

Your email address will not be published. Required fields are marked *

Scroll to Top