Throat Infection – Best Home Remedies ||ಗಂಟಲಿನ ಸೋಂಕು ತಡೆಯಲು ಉತ್ತಮ ನೈಸರ್ಗಿಕ ಮನೆ ಮದ್ದುಗಳು

Spread the love

ಗಂಟಲಿನಲ್ಲಿ ಸೋಂಕು Throat infection, ನೋವು, ಮತ್ತೆ ಕಫ ಸಮಸ್ಯೆಗೆ ನೈಸರ್ಗಿಕವಾಗಿ ಯಾವ ರೀತಿ ಮನೆಯಲ್ಲಿ ಸಿಗುವ ಕೆಲವೊಂದು ವಿಶೇಷ ಪಧಾರ್ಥಗಳನ್ನು ತಿಂದು ಗುಣಪಡಿಸಬಹುದು ನೋಡೋಣ.

Throat infection

ನಾವು ಸಾಮಾನ್ಯವಾಗಿ ಕೆಲವೊಮ್ಮೆ ನಮ್ಮ ಗಂಟಲಿನಲ್ಲಿ ಅವಾಗವಾಗ ನೋವು ಬರುವುದು, ಉರಿಯಾಗುವುದು, ತಿಂದ ಆಹಾರ ಎದೆಮೇಲೆ ಇದೆ ಅನಿಸುವುದು, ಗಂಟಲು ಊತ ಬರುವುದು, ಇದನೆಲ್ಲಾ ನೋಡಿರುತ್ತೀವಿ ಅಲ್ಲವಾ? ಇದು ಯಾಕೆ ಆಗೇ ಆಗುತ್ತೆ ಅಂದರೆ, ನಮ್ಮ ಕೆಟ್ಟ ಜೀವನಶೈಲಿಯಿಂದ ಗಂಟಲಿನಲ್ಲಿ Streptococcus bacteria ಶೇಖರಣೆಯಾಗಿ ಮತ್ತೆ ದೇಹದಲ್ಲಿನ ಕಡಿಮೆ ರೋಗನಿರೋಧಕ ಶಕ್ತಿ, ದೂಳು, ಮಾಲಿನ್ಯ, ಇವೆಲ್ಲವುಗಳಿಂದ ನಮಗೆ ಆ ರೀತಿ ಅನಿಸುತ್ತದೆ.

ಆದರೆ ಕೆಲವು ಸರಿ ಇದು ಕೇವಲ ಶೀತದಿಂದ ಆಗಿದೆ ಎಂದು ನಾವು ಯಾಮಾರುತ್ತೇವೆ. ಆಗ ಸಮಸ್ಯೆ ಜಾಸ್ತಿಯಾಗುತ್ತದೆ. ಕೆಲವರಲ್ಲಿ ಈ ರೀತಿ ಆದಾಗ ಮಾತನಾಡಲು ತುಂಬಾ ನೋವಾಗತ್ತೆ, ಎಂಜಲು ನುಂಗಲೂ ಕಷ್ಟವಾಗುತ್ತೆ, ಮತ್ತೆ ಈ ನೋವಿನಿಂದ ಜ್ವರ ಬರುತ್ತೆ, ಇದು ಒಂದಕ್ಕೊಂದು ಲಿಂಕ್. ಅದಕ್ಕೆ ನಾನು ಕೆಲವೊಂದು ಮನೆಯಲ್ಲೇ ಸಿಗುವ ಆಹಾರ ಪಧಾರ್ಥಗಳನ್ನ ಸರಿಯಾದ ರೀತಿಯಲ್ಲಿ ಬಳಸಿಕೊಂಡು ಇದನ್ನು ಕೆಲವೇ ದಿನಗಳಲ್ಲಿ ಯಾವ ರೀತಿ ದೂರ ಮಾಡಬಹುದು ಅಂತ ತಿಳಿಸಿದ್ದೀನಿ, ನೋಡೋಣ ಬನ್ನಿ.

ಕೆಲವೊಂದು ಮುಖ್ಯ ಕಾರಣಗಳು

ನಮಗೆ ಗಂಟಲು ನೋವು ಸಾಮಾನ್ಯವಾಗಿ ಶೀತ ಅಥವಾ ಜ್ವರ ಬಂದಾಗ ವೈರಲ್ ಸೋಂಕಿನಿಂದ ಬರುತ್ತದೆ. ಆದರೆ, ಕೆಲವೊಮ್ಮೆ ಗಂಟಲು ನೋವು ಇದನ್ನು pharyngitis ಅಂತಲೂ ಕರೆಯುತ್ತಾರೆ, ಇದು ಈ ಕೆಳಗಿನ ಸಮಸ್ಯೆಗಳಿಂದ ಬರಬಹುದು.

1. ಬ್ಯಾಕ್ಟೀರಿಯಾ ಇನ್ಫೆಕ್ಷನ್ : ಸೊರ್ ಥ್ರೋಟ್ ಮತ್ತೆ ಬ್ಯಾಕ್ಟೀರಿಯಾ ಸೈನಸ್ ಸೋಂಕು ಬರುವುದರಿಂದ ಗಂಟಲುಸೋಂಕು ಜಾಸ್ತಿ ಆಗುತ್ತದೆ. ಇದು ಸ್ಟ್ರೆಪ್ಟೋಕೋಕಸ್ ಎಂಬ ಬ್ಯಾಕ್ಟಿರಿಯಾದಿಂದ ಬರುತ್ತದೆ.

2. ವೈರಲ್ ಸೋಂಕು : ಜ್ವರ, ಕೆಮ್ಮು, ನೆಗಡಿ, ಪ್ಲೂ ನಂತಹ ವೈರಲ್ ಸೋಂಕಿನಿಂದ ಗಂಟಲು ನೋವು ಬರುತ್ತದೆ.

3. ಅಲರ್ಜಿಗಳು : ಹೂವಿನ ಪಾಲೆನ್ ಅಂದರೆ ಪರಾಗ, ಮನೆಯಲ್ಲಿ ಸಾಕಿರುವಪ್ರಾಣಿಗಳ ಕೂದಲಿನಿಂದ ಮತ್ತೆ ದೂಳಿನ ಕಣಗಳು ಇವೆಲ್ಲವುಗಳಿಂದ ನಮ್ಮ ಮೂಗಿನ ಮೂಲಕ ಗಂಟಲಿಗೆ ಸೇರಿ ಇದು ಗಂಟಲು ನೋವಿಗೆ ಕಾರಣವಾಗುತ್ತವೆ.

4. ಆಸಿಡ್ ರಿಫ್ಲೆಕ್ಸ್ : ಇದನ್ನು ಗ್ಯಾಸ್ಟ್ರೋಸೊಫೇಜಿಯಲ್ ರಿಫ್ಲಕ್ಸ್ (GERD) ಅಂತ ಕರೀತೀವಿ. ಕೆಲವರಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದಾಗ ತಿಂದ ಆಹಾರದಿಂದ ಹೊಟ್ಟೆಯಿಂದ ಗ್ಯಾಸ್ ಮೇಲಕ್ಕೆ ಗಂಟಲಿಗೆ ವಾಪಸ್ ಬಂದಾಗ ಗಂಟಲಿನಲ್ಲಿ ಉರಿ, ನೋವು ಕಾಣಿಸುತ್ತದೆ.

5. ಬಾಯಿಯ ಮೂಲಕ ಉಸಿರಾಟ : ಇದು ತುಂಬಾ ಜನರಲ್ಲಿ ಇರುವ ಸಮಸ್ಯೆ. ಹಲವಾರು ಕಾರಣಗಳಿಂದ ಮೂಗಿನಲ್ಲಿ ಬ್ಲಾಕ್ ಆಗಿ ಬಾಯಿಯಲ್ಲಿ ಉಸಿರಾಡುತ್ತಾರೆ. ಆಗ ಹಲವಾರು ಬ್ಯಾಕ್ಟೀರಿಯಾ, ವೈರಸ್ ಹೋಗಿ ನೇರವಾಗಿ ಗಂಟಲಿನ ಮೇಲೆ ಅಂಟಿಕೊಂಡು ಗಂಟಲು ನೋವು ಬರುತ್ತದೆ.

6. ಫ್ರಿಡ್ಜ್ ಪಧಾರ್ಥಗಳ ಬಳಕೆ : ಇದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ, ಏನೆಂದರೆ ಮನೆಯಲ್ಲಿ ತರುವ ಪ್ರತಿಯೊಂದು ತರಕಾರಿ, ಸೊಪ್ಪು, ಹಣ್ಣುಗಳು, ಹಾಲು ಇತ್ಯಾದಿ, ಪ್ರತಿಯೊಂದನ್ನೂ ಫ್ರಿಡ್ಜ್ ನಲ್ಲಿಟ್ಟು ನಂತರ ಅದನ್ನ ಹಾಗೆ ಬಳಸುವುದರಿಂದ ಗಂಟಲಿನಲ್ಲಿ ತಣ್ಣನೆಯ ಶೀತ ವಾತಾವರಣ ಶುರು ಆಗಿ ಗಂಟಲು ನೋವು ಬರುತ್ತದೆ.

7. ಕಡಿಮೆ ಇಮ್ಯೂನಿಟಿ ಶಕ್ತಿ : ಅಂದರೆ ಇದು ತುಂಬಾ ಜನರಿಗೆ ಸಾಮಾನ್ಯ. ರೋಗ ನಿರೋಧಕ ಶಕ್ತಿ ಇಲ್ಲದೆ ಇರುವುದು. ಸರಳವಾಗಿ ಹೇಳಬೇಕೆಂದರೆ, ನಮ್ಮ ದೇಹಕ್ಕೆ ಯಾವುದೇ ಕಾಯಿಲೆ ಬಂದರೂ ಅದನ್ನ ನಮ್ಮ ದೇಹವೇ ಸರಿಮಾಡಿಕೊಳ್ಳುವ ಶಕ್ತಿ ಅದೇ ಇಮ್ಯುನಿಟಿ ಪವರ್. ಅದು ದೇಹದಲ್ಲಿ ಕಡಿಮೆಯಾದಾಗ ದೇಹದ ಯಾವುದೇ ಭಾಗಕ್ಕೆ ಏನೇ ತೊಂದರೆ ಆದರೆ ಅದು ತಕ್ಷಣ ಪ್ರತಿಕ್ರಿಯೆ ಮಾಡೋದಿಲ್ಲ.

ಈ ಎಲ್ಲಾ ಕಾರಣಗಳಿಂದ ಸಾಮಾನ್ಯವಾಗಿ ಗಂಟಲು ನೋವು sore throat ಬರುತ್ತದೆ.

ಗಂಟಲು ನೋವು ಅಥವಾ ಸೋಂಕಿನ ಲಕ್ಷಣಗಳು

Throat infection common Symptoms are like :

ಸಾಮಾನ್ಯವಾಗಿ ಯಾರಿಗೇ ಆಗಲಿ ಗಂಟಲಲ್ಲಿ ನೋವು ಬರುವುದಕ್ಕಿಂತ ಮುಂಚೆ ದೇಹದಲ್ಲಿ ಕೆಲವೊಂದು ಲಕ್ಷಣಗಳು ಕಾಣಿಸುತ್ತವೆ ಅವು ಯಾವೆಂದು ನೋಡೋಣ ;

  •  ಎಂಜಲು ನುಂಗಲು ಕಷ್ಟವಾಗುವುದು.
  •  ಗಂಟಲಲ್ಲಿ ಕೆರೆತ ಆಗುವ ಅನುಭವ.
  •  ಮಾತನಾಡುವಾಗ ದ್ವನಿ ಬದಲಾವಣೆ.
  •  ಒಣ ಕೆಮ್ಮಿನ ಅನುಭವ
  •  ಕೆಮ್ಮುವಾಗ ನೋಯುವುದು.
  •  ಜ್ವರ ಬರುವುದು.
  •  ಬಾಯಿಂದ ಸ್ವಲ್ಪ ದುರ್ವಾಸನೆ ಬರುವುದು.
  •  ಗಂಟಲು ಸ್ವಲ್ಪ ಊದಿಕೊಳ್ಳುವುದು.
  •  ದೇಹ ಸ್ವಲ್ಪ ನಿಶ್ಯಕ್ತಿ ಫೀಲ್ ಆಗುವುದು.
  •  ನೀರು ಕುಡಿಯುವಾಗ ಅಥವಾ ಊಟ ಮಾಡುವಾಗ ಗಂಟಲು ನೋಯುವುದು.

ಈ ಎಲ್ಲಾ ಲಕ್ಷಣಗಳು ಸೊರ್ ಥ್ರೋಟ್ ಇರುವವರಿಗೆ ಸಾಮಾನ್ಯವಾಗಿ ಕಂಡುಬರುತ್ತವೆ.

ಚಿಕ್ಕ ಮಕ್ಕಳಲ್ಲಿ ಗಂಟಲು ಸೋಂಕು

ಸಣ್ಣ ಮಕ್ಕಳಿಗೆ ಯಾವ ರೀತಿ ಸೋಂಕು ಹರಡುತ್ತದೆ?

ಚಿಕ್ಕ ಮಕ್ಕಳಿಗೆ ಯಾವುದೇ ಸೋಂಕು ಬೇಗ ಹರಡುತ್ತದೆ. ಕಾರಣ ಅವರು ಯಾವುದೇ ರೀತಿಯ ಪತ್ತೆ ಇರುವುದಿಲ್ಲ. ಹಾಗೆ ಅವರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಮತ್ತೆ ಸ್ಕೂಲ್ ಗೆ ಹೋದರೆ ಅಲ್ಲಿ ಬೇರೆ ಮಕ್ಕಳ ಜೊತೆ ಸೇರಿ ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಬೇಗ ಹರಡುತ್ತದೆ.

ಚಿಕ್ಕ ಮಕ್ಕಳಲ್ಲಿ ಗಂಟಲು ಸೋಂಕಿನ ಲಕ್ಷಣಗಳು.

  •  ನಿದ್ದೆ ಮಾಡಲು ತೊಂದರೆ.
  •  ಅತಿಯಾದ ಕೆಮ್ಮು.
  •  ಬಿಟ್ಟು ಬಿಟ್ಟು ಜ್ವರ ಬರುವುದು.
  •  ಗಂಟಲು ವಿಪರೀತ ನೋವು.
  •  ಯಾವಾಗಲೂ ಅಳುವುದು.
  •  ಊಟ ತಿನ್ನಲು ಕಷ್ಟ ಪಡುವುದು.   

ಈ ಲಕ್ಷಣಗಳು ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ.

ಮಕ್ಕಳ ಆರೈಕೆ ಯಾವ ರೀತಿ ಮಾಡಬೇಕು?

 ಚಿಕ್ಕ ಮಕ್ಕಳಿಗೆ ಯಾವುದೇ ಸೋಂಕು ಹರಡಿದಾಗ ಮುಖ್ಯವಾಗಿ ಮಾಡಬೇಕಿರುವ ಕೆಲಸ ಎಂದರೆ.

  •  ಅವ್ರಿಗೆ ಯಾವಾಗಲೂ ಕುಡಿಯಲು ಬಿಸಿ ನೀರನ್ನೇ ಕೊಡಬೇಕು.
  •  ಫ್ರಿಡ್ಜ್ ಅಲ್ಲಿರುವ ಪಧಾರ್ಥಗಳನ್ನು ಯಾವುದೇ ಕಾರಣಕ್ಕೂ ಕೊಡಬಾರದು.
  •  ಸೋಂಕು ವಾಸಿಯಾಗುವವರಿಗೆ ಸ್ಕೂಲ್ ಗೆ ಕಳಿಸಬಾರದು
  •  ಶುಂಠಿ ಕಷಾಯ ಮಾಡಿಕೊಡಬೇಕು.
  •  ಬಿಸಿನೀರಿನ ಆವಿ ದಿನಕ್ಕೆ 2 ಬಾರಿ ಕೊಡಬೇಕು.

ಗಂಟಲು ಸೋಂಕು ಇದ್ದಾಗ ಯಾವ ಆಹಾರ ತಿನ್ನಬೇಕು.

ನಾವು ಪ್ರತೀ ದಿನ ತಿನ್ನುವ ಆಹಾರದಲ್ಲಿ ಮತ್ತೆ ಸೇವಿಸುವ ನೀರಿನಲ್ಲಿ ನಮ್ಮ ಗಂಟಲು ಸೋಂಕನ್ನು ದೂರ ಮಾಡುವ ಅಂಶಗಳಿರುತ್ತವೆ. ಆದರೆ ಅದನ್ನು ನಾವು ಸರಿಯಾಗಿ ಉಪಯೋಗಿಸಿಕೊಳ್ಳಬೇಕು.

1. ಬಿಸಿ ನೀರು : ನಾವು ಕುಡಿಯುವ ನೀರಿನಲ್ಲಿ ಕೆಲವೊಂದು ನಮಗೆ ಕಾಣಿಸದ ಮೈಕ್ರೋ ಬ್ಯಾಕ್ಟಿರಿಯಾಗಳು ಇರುತ್ತವೆ. ಇವು ಕೆಲವೊಮ್ಮೆ ನಮ್ಮ ಗಂಟಲಿನಲ್ಲಿ ಸೇರಿಕೊಂಡು ಇನ್ಫೆಕ್ಷನ್ ತರುತ್ತವೆ. ಆದ್ದರಿಂದ ನಾವು ನೀರನ್ನು ಚನ್ನಾಗಿ ಬಿಸಿ ಮಾಡಿ ಆರಿಸಿ ಮತ್ತೆ ಕುಡಿಯಬೇಕು. ಆಗ ಗಂಟಲು ನೋವು ಕಡಿಮೆಯಾಗುತ್ತದೆ.
ದಿನಕ್ಕೆ ಕನಿಷ್ಠ ೩ ಲೀಟರ್ ನೀರು ಕುಡಿಯಲೇಬೇಕು.
ಮತ್ತೆ ಬಿಸಿ ನೀರಿಗೆ ಸ್ವಲ್ಪ ಉಪ್ಪನ್ನು ಸೇರಿಸಿ ಗಾರ್ಗ್ಲಿಂಗ್ ಮಾಡುವುದರಿಂದ ಗಂಟಲಿನ ಸೋಂಕು ಕಡಿಮೆಯಾಗುತ್ತದೆ.

2. ಅರಿಶಿನ ಹಾಲು : ಅರಿಶಿನದಲ್ಲಿ ಆಂಟಿ ಬಾಡೀಸ್ ಇರುವುದರಿಂದ
ಯಾವುದೇ ರೀತಿಯ ಗಂಟಲು ಸೋಂಕಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.
ರಾತ್ರಿ ಮಲಗುವಾಗ ಒಂದು ಗ್ಲಾಸ್ ಹಾಲಿಗೆ ಅರ್ಧ ಚಮಚ ಅರಿಶಿನವನ್ನು ಸೇರಿಸಿ ಕುಡಿಯಬೇಕು.

3. ಶುಂಠಿ ಕಷಾಯ : ಶುಂಠಿಯು ನೈಸರ್ಗಿಕವಾಗಿ ರೋಗಗಳನ್ನು ದೂರಮಾಡುವ ಗುಣವಿರುವ ಪಧಾರ್ಥ. ಶುಂಠಿಯನ್ನು ಆಹಾರದಲ್ಲಿ ಸೇರಿಸುತ್ತೇವೆ. ಅದೇ ರೀತಿ ಶುಂಠಿಯಿಂದ ಕಷಾಯವನ್ನು ಮಾಡಿ ಕುಡಿಯುವುದರಿಂದ ಇದರಲ್ಲಿರುವ anti-inflammatory, antimicrobial, and antioxidant properties ಗಂಟಲಿನಲ್ಲಿರುವ ಬ್ಯಾಕ್ಟಿರೀಯಾವನ್ನು ನಾಶಮಾಡುತ್ತದೆ. ಮತ್ತೆ ಗಂಟಲಿನ ಕಫವನ್ನು ದೂರಮಾಡುತ್ತೆ.

4. ಜೇನುತುಪ್ಪ : ಅತಿಯಾದ ಒಣ ಕೆಮ್ಮು ಬಂದಾಗ ಜೇನುತುಪ್ಪ ರಾಮಬಾಣದಂತೆ ಕೆಲಸ ಮಾಡುತ್ತದೆ. ಲವಂಗವನ್ನು ಪುಡಿ ಮಾಡಿ ಜೇನುತುಪ್ಪದೊಂದಿಗೆ ಮಿಕ್ಸ್ ಮಾಡಿ ನೆಕ್ಕುವುದರಿಂದ ಕೆಮ್ಮು ವಾಸಿಯಾಗುತ್ತದೆ, ಜೊತೆಗೆ ಗಂಟಲಿನಲ್ಲಿರುವ ಸೋಂಕು ಕಡಿಮೆಯಾಗುತ್ತದೆ.

5. ಬಿಸಿ ತರಕಾರಿ ಸೂಪ್ : ತರಕಾರಿಗಳನ್ನು ಚನ್ನಾಗಿ ಬೇಯಿಸಿ ಅದಕ್ಕೆ ಸ್ವಲ್ಪ ಶುಂಠಿ, ಬೆಳ್ಳುಳ್ಳಿಯನ್ನು ಸೇರಿಸಿ ಅದರಿಂದ ತಯಾರಾದ ಸೂಪನ್ನು ಕುಡಿಯುವುದರಿಂದ ಅದರಲ್ಲಿರುವ ಆಂಟಿ ಬ್ಯಾಕ್ಟಿರಿಯಲ್ ಗುಣಗಳು ಗಂಟಲು ನೋವನ್ನು ಬೇಗ ವಾಸಿಮಾಡುತ್ತವೆ.

6. ಹಣ್ಣುಗಳು : ವಿಟಮಿನ್ ಸಿ ಜಾಸ್ತಿ ಇರುವ ಮೋಸಂಬಿ, ಕಿತ್ತಳೆ, ಆರೆಂಜ್, ನಿಂಬೆ ಹಣ್ಣು ಇದರಿಂದ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿ ಇಮ್ಮ್ಯೂನಿಟಿ ಪವರ್ ಜಾಸ್ತಿಯಾಗಿ ಗಂಟಲಿನ ಸೂನ್ಕು ಬೇಗ ವಾಸಿಯಾಗುತ್ತದೆ.

ಓದುಗರ ಗಮನಕ್ಕೆ;
ನಾನು ಈ ಮೇಲಿನ ಆಹಾರ ಪಧಾರ್ಥಗಳನ್ನು ಗಂಟಲು ನೋವಿಗೆ ವೈಯಕ್ತಿಕವಾಗಿ ಪ್ರಯೋಗಿಸಿದ್ದೇನೆ. ಅದು ನನಗೆ ಸಹಾಯವಾಗಿದೆ. ಮತ್ತೆ ಕೆಲವೊಂದು ಹೆಲ್ತ್ ವೆಬ್ಸೈಟ್ ಗಳಿಂದ ನಿಖರವಾಗಿ ಮಾಹಿತಿ ಸಂಗ್ರಹಿಸಿದ್ದೇನೆ.
ಇದು ಯಾವುದೇ ರೀತಿ ಸುಕಾಸುಮ್ಮನೆ ನೀಡಿರುವ ಮಾಹಿತಿಯಲ್ಲ.

ಗಂಟಲು ಸೋಂಕಿದ್ದಾಗ ಯಾವ ಆಹಾರ ತಿನ್ನಬಾರದು

Avoid Junk food During Piles problem

1. ತಣ್ಣನೆಯ ಆಹಾರ : ಫ್ರಿಡ್ಜ್ ನಲ್ಲಿಟ್ಟ ಆಹಾರವನ್ನು ಯಾವುದೇ ಕಾರಣಕ್ಕೂ ತೆಗೆದ ತಕ್ಷಣ ತಿನ್ನ ಬಾರದು. ೨೦ ನಿಮಿಷ ಬಿಟ್ಟು ಬಿಸಿ ಮಾಡಿ ತಿನ್ನಬೇಕು.ಆದಷ್ಟೂ ತಣ್ಣನೆಯ ಆಯರವನ್ನು ದೂರವಿಡಿ.
ಕೂಲ್ಡ್ರಿಂಕ್ಸ್, ಐಸ್ಕ್ರೀಮ್, ಇತ್ಯಾದಿ.

2. ಮಸಾಲೆಯ ಆಹಾರ : ರೋಡ್ ಸೈಡ್ ಸಿಗುವ ಮಸಾಲೆ ಪಧಾರ್ಥಗಳನ್ನು ಯಾವುದೇ ಕಾರಣಕ್ಕೂ ತಿನ್ನಬಾರದು. ಇದರಿಂದಲೇ ದೇಹಕ್ಕೆ ಇನ್ಫೆಕ್ಷನ್ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ.

3. ಧೂಮಪಾನ ಮತ್ತು ಮದ್ಯಪಾನ : ಇದನ್ನು ನಿರಂತರವಾಗಿ ಮಾಡುವುದರಿಂದ ನಮ್ಮ ಗಂಟಲಿನ ಸೂಕ್ಷ್ಮ ಪದರವನ್ನು ನಾಶ ಮಾಡುತ್ತವೆ.
ಆದಷ್ಟೂ ಇದರಿಂದ ದೂರವಿರಿ.

4. ಜಂಕ್ ಫುಡ್ : ಜಾಸ್ತಿ ಎಣ್ಣೆಯಲ್ಲಿ ಕರಿದ ಪಧಾರ್ಥಗಳು, ಪ್ಯಾಕೆಟ್ ಅಲ್ಲಿರುವ ಪಧಾರ್ಥಗಳು, ಫಿಜಾ, ಬರ್ಗರ್, ಗೋಬಿ, ಇತ್ಯಾದಿ ಪಧಾರ್ಥಗಳನ್ನು ತಿನ್ನಬಾರದು. ಇವು ದೇಹದ ಇಮ್ಮ್ಯೂನಿಟಿ ಪವರ್ ಅನ್ನು ನಾಶಮಾಡುತ್ತವೆ.

5. ಹೆಚ್ಚು ಕಾರವಾದ ಪಧಾರ್ಥಗಳು : ಸ್ಪೈಸಿ ಫುಡ್ ಆದಷ್ಟೂ ಅವೈಡ್ ಮಾಡಬೇಕು. ಪೆಪ್ಪರ್, ಚಿಲ್ಲಿ, ಇತ್ಯಾದಿ

6. ತಂಪಾದ ಜಾಗ ಬೇಡ : ಅಂದರೆ ತುಂಬಾ ಹೊತ್ತು ಎಸಿ ಯಲ್ಲಿ ಇರುವುದು, ಮತ್ತೆ ದೂಳಿನ ಸ್ಥಳದಲ್ಲಿ ಹೆಚ್ಚು ಸಮಯ ಕಳೆಯುವುದು ಇನ್ಫೆಕ್ಷನ್ ಜಾಸ್ತಿ ಮಾಡುತ್ತದೆ.

ಕೊನೆಯದಾಗಿ, ಗಂಟಲು ನೋವು, ಅಥವಾ ಗಂಟಲಿನ ಸೋಂಕು ಎನ್ನುವುದು ಒಂದಲ್ಲಾ ಒಂದು ಸಾರಿ ಪ್ರತಿಯೊಬ್ಬರಿಗೂ ಹಲವಾರು ಕಾರಣಗಳಿಂದ ಬರುತ್ತದೆ. ಆದರೆ ನಾವು ಅದಕ್ಕೆ ಯಾವ ರೀತಿಯ ನೈಸರ್ಗಿಕವಾಗಿ ಚಿಕಿತ್ಸೆ ಪಡಿಯಬೇಕು ಅದನ್ನು ತಿಳಿದುಕೊಂಡಿರಬೇಕು. ಇಲ್ಲವಾದರೆ ಕೆಲವೊಮ್ಮೆ ಸೋಂಕು ಜಾಸ್ತಿಯಾಗಿ ದೊಡ್ಡ ಪ್ರಮಾಣದ ಆರೋಗ್ಯ ಸಮಸ್ಯೆಯಾಗುತ್ತದೆ.
ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಒಳ್ಳೆಯ ಆರೋಗ್ಯ ನಿಮ್ಮದಾದರೆ ಮುಂದಿನ ಪೀಳಿಗೆಗೆ ಒಳ್ಳೆಯ ಭವಿಷ್ಯ ಕೊಡಬಹುದು.

ಗಂಟಲು ಸೋಂಕು Throat infection ಎಷ್ಟು ದಿನ ಇರುತ್ತದೆ?

ಮೇಲೆ ತಿಳಿಸಿರುವ ನೈಸರ್ಗಿಕ ಚಿಕಿತ್ಸೆ ಪಡೆದರೆ 2-3 ದಿನದಲ್ಲಿ ವಾಸಿಯಾಗುತ್ತದೆ. ಇಲ್ಲವಾದರೆ ಕನಿಷ್ಠ 6-7 ದಿನದವರಿಗೆ ಗಂಟಲು ನೋವು ಇರುತ್ತದೆ.

ಶುಂಠಿ ಕಷಾಯ, ಮತ್ತೆ ಬಿಸಿನೀರಿಗೆ ಸ್ವಲ್ಪ ಹರಿಶಿಣ ಮತ್ತೆ ಉಪ್ಪು ಹಾಕಿ ಗಾರ್ಗ್ಲಿಂಗ್ ಮಾಡುವುದರಿಂದ ಗಂಟಲು ನೋವು ಬೇಗ ವಾಸಿಯಾಗುತ್ತದೆ.

ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ತಿನ್ನಿಸಬಹುದು. ಆದರೆ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜೇನು ತುಪ್ಪ ಬೇಡ.

Leave a Comment

Your email address will not be published. Required fields are marked *

Scroll to Top