ತಲೆಹೊಟ್ಟು ಸಮಸ್ಯೆಗೆ ನಮ್ಮಲ್ಲೇ ಸಿಗುವ 10 ನೈಸರ್ಗಿಕ ಮನೆಮದ್ದುಗಳು, ಇದು ಬರಲು ಕಾರಣಗಳು, ಲಕ್ಷಣಗಳು, ನಾವು ತಿನ್ನಬೇಕಾದ ಆಹಾರಗಳು ಮತ್ತು ಇದನ್ನು ತಡೆಯುವ ವಿಧಾನಗಳ ಬಗ್ಗೆ ಸಂಪೂರ್ಣ ಕನ್ನಡ ಮಾರ್ಗದರ್ಶಿ.
ತಲೆಹೊಟ್ಟು Dandruff ಸಮಸ್ಯೆ ಇದು ನಮ್ಮ ದೇಶದಲ್ಲಿ ಪ್ರತೀ ಇಬ್ಬರಲ್ಲಿ ಒಬ್ಬರಿಗೆ ಕಂಡುಬರುತ್ತದೆ. ಅಂದರೆ ನೀವೇ ಯೋಚಿಸಿ ಇದು ಎಷ್ಟು ಸಾಮಾನ್ಯವಾಗಿಬಿಟ್ಟಿದೆ ಅಂತ. ಇದು ನಮ್ಮ ತಲೆಯ ಚರ್ಮದಲ್ಲಿ ಸಣ್ಣ ಸಣ್ಣದಾಗಿ ಬಿಳಿಯ ಬಣ್ಣದಲ್ಲಿ ಕಾಣುತ್ತದೆ. ಇದು ಚಿಕ್ಕ ಮಕ್ಕಳಿಂದ ಇಡಿದು ವಯಸ್ಸಾದವರವರೆಗೂ ಬರುವ ಸಮಸ್ಯೆಯಾಗಿದೆ.
ಕೆಲವರಿಗೆ ಇದು ಕೇವಲ ನಾವು ಪಬ್ಲಿಕ್ನಲ್ಲಿ ತಲೆಯನ್ನು ಕೆರೆಯಬೇಕಲ್ಲಾ ಎನ್ನುವುದರಿಂದ ಇಡಿದು ಕೂದಲು ಉದುರುವ ವರೆಗೂ ಸಮಸ್ಯೆ ಗಂಭೀರವಾಗುತ್ತದೆ.
ನಮ್ಮ ದೇಶದಲ್ಲಿ ಮುಖ್ಯವಾಗಿ ಇದು ಯಾಕೆ ಬರುತ್ತೆ ಅಂದರೆ, ಹವಾಮಾನ ಬದಲಾವಣೆಯಿಂದ, ಜೀವನಶೈಲಿಯಲ್ಲಿ ಸಣ್ಣ ಸಣ್ಣ ಬದಲಾವಣೆಯಿಂದ, ದೂಳು, ಮಾಲಿನ್ಯ, ಮತ್ತೆ ನಮ್ಮ ಆಹಾರ ಪದ್ಧತಿ ಇವೇ ಮುಖ್ಯ ಕಾರಣಗಳಿಂದ ಈ ಸಮಸ್ಯೆ ಜಾಸ್ತಿಯಾಗುತ್ತದೆ.
ಇದನ್ನ ದೂರ ಮಾಡಬೇಕಂತಲೇ ನಾನು ಈ ಬ್ಲಾಗ್ ನಲ್ಲಿ ಮನೆಯಲ್ಲೇ ತಯಾರಿಸಿಕೊಂಡು ತಲೆಗೆ ಹಚ್ಚಬೇಕಿರುವ 8 ನೈಸರ್ಗಿಕ ಪಧಾರ್ಥಗಳನ್ನ ತಿಳಿಸಿದ್ದೀನಿ.
Table of Contents
ToggleDandruff ನ ಲಕ್ಷಣಗಳು Symptoms ಯಾವ ರೀತಿ ಇರುತ್ತವೆ ನೋಡೋಣ.
Major Symptoms of Dandruff are :
ತಲೆ ಹೂಟ್ಟು Dandruff ಇರುವವರಲ್ಲಿ ಕೆಲವೊಂದು ಸಾಮಾನ್ಯ ಲಕ್ಷಣಗಳು ಕಾಣಿಸ್ತಾವೆ, ಅವೇನಂತ ನೋಡೋಣ.
1. ತಲೆಯ ಚರ್ಮದಲ್ಲಿ ಬಿಳಿ ಬಣ್ಣದ ಚೂರುಗಳು :
ಕೂದಲನ್ನು ಒರೆಸಿದಾಗ ಅಥವಾ ತಲೆ ಕೆರದಾಗ ಬಿಳಿ ಬಣ್ಣದ ಪುಡಿ ಉದುರುವುದು. ಇದು ಅಂಟು ಅಂಟಾಗಿದ್ದು ಕೂದಲಿನ ಆರೋಗ್ಯ ಹಾಳಾಗುತ್ತದೆ.
2. ಅತಿಯಾದ ಕೆರೆತ :
ತಲೆಯ ಚರ್ಮದಲ್ಲಿ ಯಾವಾಗಲೂ ನಾವೇ, ಕೆರತ ಕಾಣಿಸುವುದು.
3. ಒಣ ತಲೆಚರ್ಮ :
ತಲೆಚರ್ಮ ಸ್ನಾನ ಮಾಡಿದ ನಂತರವೂ ಯಾವಾಗಲೂ ಡ್ರೈ ಒಣಗಿದಂತೆ ಕಾಣುವುದು.
4. ಕೂದಲು ಉದುರುವುದು :
ತಲೆಯಲ್ಲಿ ಡ್ಯಾಂಡ್ರಫ್ ಜಾಸ್ತಿಯಾದರೆ ಕೂದಲಿನ ಬೇರು ವೀಕ್ ಆಗಿ ಕೂದಲು ಉದುರುತ್ತವೆ.
5. ಕೆಂಪು ಚರ್ಮ :
ಕೆಲವರಿಗೆ ತಲೆಯಳ್ಳಿ ನಾವೇ ಜಾಸ್ತಿಯಾಗಿ ಕೆರೆದು ಕೆರೆದು ಚರ್ಮ ಕೆಂಪಾಗಿ ಕಾಣಬಹುದು.
Dandruff ಬರುವುದಕ್ಕೆ 6 ಮುಖ್ಯ ಕಾರಣಗಳು
Main Reasons are :
1. ಒಣ ತಲೆಚರ್ಮ : ತಲೆಗೆ ಅರಳೆಣ್ಣೆ ಅಥವಾ ಕೊಬ್ಬರಿಎಣ್ಣೆ ಇಡದೆ ಬಿಡುವುದರಿಂದ ಚಳಿಗಾಲದಲ್ಲಿ ತಲೆಯು ಡ್ರೈ ಆಗಿ ಚರ್ಮ ಒಣಗಿ ಡ್ಯಾಂಡ್ರಫ್ ಬರುತ್ತದೆ.
2. ಹೆಚ್ಚಿದ ಎಣ್ಣೆ ಉತ್ಪಾದನೆ : ಕೆಲವೊಂದು ಕಾರಣಗಳಿಂದ ತಲೆಯಲ್ಲಿ ಎಣ್ಣೆ ಅಂಶ ಜಾಸ್ತಿ ಆಗಿ ಪಂಗಸ್ ಬೆಳೆಯುತ್ತದೆ, ಇದರಿಂದ dandruff ಜಾಸ್ತಿಯಾಗುತ್ತದೆ.
3. ಫಂಗಲ್ ಇನ್ಫೆಕ್ಷನ್ : Malassezia yeast ಇಂಬ ಪಂಗಸ್ ಬರುವುದರಿಂದ ತಲೆಯಲ್ಲಿ ಹೊಟ್ಟು ಬರುತ್ತದೆ. ಇದರಿಂದ ತಲೆಯಲ್ಲಿ ತುಂಬಾ ನವೆ ಮತ್ತೆ ಇರಿಟೇಷನ್ ಆಗುತ್ತದೆ.
4. ಕೆಲವೊಂದು ಹೇರ್ ಪ್ರಾಡಕ್ಟ್ಸ್ : ಜಾಸ್ತಿ ಕೆಮಿಕಲ್ ಬಳಸಿರುವ ಶಾಂಪೂ ಗಳನ್ನ ತಲೆಗೆ ಹಾಕುವುದರಿಂದ ತಲೆಯಲ್ಲಿ ಡ್ಯಾಂಡ್ರಫ್ ಕಡಿಮೆಯಾಗುವುದಕ್ಕಿಂತ ಜಾಸ್ತಿಯಾಗುತ್ತದೆ.
5. ಮಾನಸಿಕ ಒತ್ತಡ : ನಾವು ಅಂದುಕೊಳ್ಳುತ್ತೀವಿ ಕೇವಲ ಶಂಪೋ, ಅಥವಾ, ಎಣ್ಣೆ ಇದರಿಂದ ಮಾತ್ರ ತಲೆಯ ಹೊಟ್ಟು ಸಮಸ್ಯೆ ಬರುತ್ತೆ ಅಂತ ಆದರೆ ಸಂತ್ಯ ಏನಂದರೆ ನಾವು ಮನಸ್ಸಿಗೆ ಎಷ್ಟು ಸ್ಟ್ರೆಸ್ ಅಥವಾ ಒತ್ತಡ ಮಾಡಿಕೊಳ್ಳುತ್ತೇವೆ ಅಷ್ಟು ನಿದ್ದೆಯ ಸಮಸ್ಯೆ ಬರುತ್ತೆ ಅದರಿಂದ ತಲೆ ಚರ್ಮದ ಆರೋಗ್ಯ ಹಾಳಾಗತ್ತೆ.
6. ಪೌಷ್ಟಿಕಾಂಶ ಕೊರತೆ : ನಮಗೆ ಆಹಾರದಲ್ಲಿ ಸಿಗಬೇಕಿರುವ Vitamin B, Zinc ಮತ್ತು Omega-3, ವಿಟಮಿನ್ C ಈ ರೀತಿಯ ಅಂಶಗಳು ಸರಿಯಾಗಿ ದೇಹಕ್ಕೆ ಸಿಕ್ಕಿಲ್ಲಾ ಅಂದರೆ ತಲೆಯ ಡ್ಯಾಂಡ್ರಫ್ ಸಮಸ್ಯೆ ಜಾಸ್ತಿಯಾಗುತ್ತೆ.
ಇವು ಅಷ್ಟೇ ಅಲ್ಲದೇ ಸರಿಯಾಗಿ ಕೂದಲನ್ನು ತೊಳೆಯದೇ ಇರುವುದು, ಕೂದಲಿಗೆ ಕೆಮಿಕಲ್ ಜಾಸ್ತಿ ಇರುವ ಬಣ್ಣಗಳನ್ನು ಹಾಕಿಸುವುದು, ಮತ್ತೆ ನೀರನ್ನು ಸರಿಯಾಗಿ ಕುಡಿಯದಿರುವುದು ಸಹ ತಲೆಯ ಡ್ಯಾಂಡ್ರಫ್ ಗೆ ನೇರ ಕಾರಣವಾಗುತ್ತೆ.
ತಲೆಹೊಟ್ಟು Dandruff ನಿವಾರಣೆಗೆ 8 ನೈಸರ್ಗಿಕ ಪರಿಣಾಮಕಾರಿ ಮನೆಮದ್ದುಗಳು
Home Remedies for Dandruff are :
1. ತೆಂಗಿನೆಣ್ಣೆ ಮತ್ತು ನಿಂಬೆ ರಸ :
ತೆಂಗಿನೆಣ್ಣೆ ಹಚ್ಚುವುದರಿಂದ ನಮ್ಮ ತಲೆಯ ಚರ್ಮ ಹೈಡ್ರೇಟ್ ಆಗಿ ಇರುತ್ತೆ. ಮತ್ತೆ ಅದಕ್ಕೆ ನಿಂಬೆ ರಸ ಮಿಕ್ಸ್ ಮಾಡುವುದರಿಂದ ನಿಂಬೆಯಲ್ಲಿರುವ ಆಂಟಿ ಫಂಗಲ್ ಗುಣಗಳಿಂದ ಚರ್ಮಕ್ಕೆ ಡ್ಯಾಂಡ್ರಫ್ ಕಡಿಮೆ ಮಾಡುವ ಶಕ್ತಿ ಬರುತ್ತದೆ.
ಇದನ್ನ ಯಾವ ರೀತಿ ಬಳಸಬೇಕು ಅಂದರೆ, 4 ಚಮಚ ತೆಂಗಿನ ಏನೀಗೆ 1 ಚಮಚ ನಿಂಬೆ ರಸ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿ 1 ಗಂಟೆಯ ನಂತರ ಸೀಗೆಕಾಯಿ ಹಾಕಿ ತಲೆ ತೊಳೆಯಿರಿ. ಈ ರೀತಿ ವಾರಕ್ಕೆ 2 ಬಾರಿ ಮಾಡಿ ನಿಮ್ಮ ತಲೆಯ ಹೊಟ್ಟು ಮಾಯವಾಗುತ್ತೆ.
2. ಟೀ ಟ್ರೀ ಎಣ್ಣೆTea tree oil :
ಇದರಲ್ಲಿ ಆಂಟಿ ಮೈಕ್ರೋಬಿಯಲ್, ಮತ್ತೆ ಆಂಟಿ ಫಂಗಲ್ ಗುಣಗಳಿರುವುದರಿಂದ ಸೋರಿಯೋಸಿಸ್ ಚರ್ಮದ ಕಾಯಿಲೆಗೆ ರಾಮಬಾಣದ ರೀತಿ ಕೆಲಸ ಮಾಡುತ್ತೆ ಮತ್ತೆ ಸ್ಕಿನ್ ಪಿಗ್ಮೆಂಟೇಷನ್ ಸಮಸ್ಯೆ ಇರುವವರಿಗೆ ಇದು ಒಳ್ಳೆಯ ರೀತಿ ಕೆಲಸ ಮಾಡುತ್ತೆ. ಅದೇ ರೀತಿ ತಲೆಯ ಡ್ಯಾಂಡ್ರಫ್ ಸಮಸ್ಯೆಯನ್ನು ನಿವಾರಿಸುತ್ತದೆ.
ಕೆಲವರಿಗೆ ಇದು ನೇರವಾಗಿ ತಲೆಗೆ ಹಚ್ಚುವುದರಿಂದ ಕೆರೆತ ಮತ್ತೆ ನವೆ ಬರಬಹುದು. ಆದ್ದರಿಂದ ಇದನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಹಚ್ಚಬಹುದು.
3. ಮೊಸರು ಮತ್ತೆ ನಿಂಬೆ (Curd Hair Pack) :
ಮೊಸರಿನಲ್ಲಿ ಇರುವ ಪ್ರೊಬಯೋಟಿಕ್ಸ್ ಮತ್ತೆ anti-inflammatory ತಲೆಚರ್ಮದ ಬ್ಯಾಕ್ಟೀರಿಯಾವನ್ನು ನಾಶಮಾಡಲು ಸಹಾಯ ಮಾಡುತ್ತದೆ. ಮತ್ತೆ ಇದಕ್ಕೆ ನಿಂಬೆಹಣ್ಣಿನ ರಸ ಮಿಕ್ಸ್ ಮಾಡುವುದರಿಂದ ಇದರಲ್ಲಿರುವ ಸಿಟ್ರಿಕ್ ಆಸಿಡ್ ಚರ್ಮದ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ.
ಇದನ್ನು ತಲೆಯ ಪ್ಯಾಕ್ ರೀತಿ ಬಳಸಬಹುದು 30 ನಿಮಿಷ ಹಚ್ಚಿ ನಂತರ ತಲೆ ತೊಳೆಯಬಹುದು.
ವಾರಕ್ಕೆ 2 ಸಾರಿ ಈ ರೀತಿ ಮಾಡುವುದರಿಂದ ಕೂದಲು ಸಾಫ್ಟ್ ಆಗುತ್ತವೆ ಮತ್ತೆ ತಲೆಯ ಹೊಟ್ಟು ಕಡಿಮೆಯಾಗುತ್ತದೆ.
4. ಅಲೋವೆರಾ ಜೆಲ್ :
ನಮ್ಮ ಹಳ್ಳಿಗಳಲ್ಲಿ ನೈಸರ್ಗಿಕವಾಗಿ ಸಿಗುವ ಅಲೋವೆರಾ ತಲೆಚರ್ಮದ ಉರಿಯೂತ ಕಡಿಮೆ ಮಾಡಿ ಸ್ಕಾಲ್ಪ್ ಗೆ ತಂಪು ನೀಡುತ್ತದೆ.
ಇದನ್ನ ನೇರವಾಗಿ ಹಚ್ಚಬಹುದು ಇಲ್ಲವಾದರೆ ಕೊಬ್ಬರಿ ಎಣ್ಣೆಗೆ ಮಿಕ್ಸ್ ಮಾಡಿ ತಲೆಗೆ ಹಚ್ಚಬಹುದು.
ಈ ರೀತಿ ಹಚ್ಚಿ ತಲೆಯನ್ನು 30 ನಿಮಿಷ ಬಿಟ್ಟು ತೊಳೆಯಿರಿ.
ಇದು ತಲೆಯ ಡ್ರೈ ನೆಸ್ ಕಡಿಮೆ ಮಾಡಿ ತಲೆಯ ಚರ್ಮಕ್ಕೆ ಯಾವುದೇ ಬ್ಯಾಕ್ಟಿರಿಯಾ ಬಾರದಂತೆ ಕಾಪಾಡುತ್ತದೆ.
5. ಮೆಂತ್ಯ ಕಾಳು Fenugreek seed ಪೇಸ್ಟ್ :
ಮೆಂತ್ಯದಲ್ಲಿ ಇರುವ ಪ್ರೋಟೀನ್ ಮತ್ತು ನಿಕೋಟಿನಿಕ್ ಆಸಿಡ್ ಕೂದಲಿಗೆ ಶಕ್ತಿ ಕೊಡುತ್ತದೆ. ಮತ್ತೆ ಇದರಲ್ಲಿ ಆಂಟಿ ಫಂಗಲ್ ಅಂಶವಿದ್ದು ತಲೆಯ ಚರ್ಮಕ್ಕೆ Malassezia yeast ಬರುವ ಅಂಶವನ್ನು ನಾಶಮಾಡುತ್ತದೆ.
ಇದನ್ನು ರಾತ್ರಿ ಒಂದು ಕಪ್ ನಲ್ಲಿ ನೆನೆಸಿಟ್ಟು ಬೆಳಿಗ್ಗೆ ಪೇಸ್ಟ್ ಮಾಡಿ ತಲೆಗೆ ಪ್ಯಾಕ್ ರೀತಿ ಹಚ್ಚಬೇಕು. ನಂತರ 1 ಗಂಟೆ ಬಿಟ್ಟು ತಲೆಯನ್ನ ತೊಳೆದರೆ ತಲೆಯ ನವೆ, ಮತ್ತೆ ಕೆರೆತ ಕಡಿಮೆಯಾಗುತ್ತದೆ.
6. ಬೇವೀನ ಎಲೆಗಳು :
ನಮಗೆಲ್ಲರಿಗೂ ತಿಳಿದಿರೋ ತರ ಬೇವುನ ಎಲೆಗಳಲ್ಲಿ ಉತ್ತಮ ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತೆ ಆಂಟಿ ಸೆಪ್ಟಿಕ್ ಗುಣಗಳನ್ನು ಹೊಂದಿದೆ. ಇದು ತಲೆಯ ನವೆ, ಕೆರೆತ ಮತ್ತೆ dryness ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.
ಇದನ್ನು ಮುಖ್ಯವಾಗಿ ಎಲೆಗಳನ್ನು ನೀರಿನಲ್ಲಿ ಚನ್ನಾಗಿ ಕುದಿಸಿ ಆ ನೀರಿನಿಂದ ತಲೆಯನ್ನು ತೊಳೆಯಬಹುದು. ಇದೊಂದು ವಿಧಾನ ಆದರೆ ಇನ್ನೊಂದು ಎಲೆಗಳನ್ನು ಚನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿ ಅದನ್ನು ತಲೆಗೆ ಪ್ಯಾಕ್ ರೀತಿ ಬಳಸಬಹುದು. ಈಗೆ ಮಾಡಿ 1 ಗಂಟೆ ಬಿಟ್ಟು ನಂತರ ತಲೆಗೆ ಸ್ನಾನ ಮಾಡಿದರೆ ಚರ್ಮದ ಫಂಗಲ್ ಸಮಸ್ಯೆಗಳು ದೂರ ಆಗುತ್ತವೆ.
7. ಆಪಲ್ ಸೈಡರ್ ವಿನಿಗರ್ ACV :
ಡ್ಯಾಂಡ್ರಫ್ ಬರುವ ಫಂಗಸ್ ಅನ್ನ ನಿಯಂತ್ರಣ ಮಾಡಿ ಇದು ತಲೆಚರ್ಮದ pH ಮಟ್ಟವನ್ನು ಬ್ಯಾಲೆನ್ಸ್ ಮಾಡುತ್ತೆ. ಮತ್ತೆ ತಲೆಯ ಚರ್ಮದಲ್ಲಿರುವ ಡೆಡ್ ಸ್ಕಿನ್ ಅನ್ನು ನಾಶಮಾಡುತ್ತೆ.
ಇದನ್ನು ಒಂದು ಗ್ಲಾಸ್ ನೀರಿಗೆ 2 ಚಮಚ ವಿನಿಗರ್ ಮಿಕ್ಸ್ ಮಾಡಿ ತಲೆಗೆ ಹಚ್ಚಬೇಕು. 15-20 ನಿಮಿಷ ಬಿಟ್ಟು ತಲೆಯನ್ನು ತೊಳೆಯಬೇಕು.
8. ಈರುಳ್ಳಿ ರಸ Onion Oil :
ಈರುಳ್ಳಿಯಲ್ಲಿ ಇರುವ ನೈಸರ್ಗಿಕ ಸಲ್ಫರ್ ಅಂಶ ಕೂದಲು ಬೆಳವಣಿಗೆಗೆ ಸಹಕಾರಿ. ಮತ್ತೆ ಇದರಲ್ಲಿರುವ antimicrobial properties ತಲೆಯ ಚರ್ಮದ ಫಂಗಲ್ ನಿವಾರಣೆಗೆ ಸಹಾಯ ಮಾಡುತ್ತದೆ. ಕೂದಲು ಒಡೆಯುವುದನ್ನು ತಡೆಯುತ್ತದೆ, ಮತ್ತೆ ತಲೆಗೆ ಯಾವುದೇ ಇನ್ಫೆಕ್ಷನ್ ಆಗದೆ ನೋಡಿಕೊಳ್ಳುತ್ತದೆ.
ಈರುಳ್ಳಿಯನ್ನಿ ಮಿಕ್ಸಿಗೆ ಹಾಕಿ ಚನ್ನಾಗಿ ರಸ ತೆಗೆದು ತಲೆಗೆ ಹಚ್ಚಿ 20-30 ನಿಮಿಷ ಬಿಟ್ಟು ನಂತರ ತಲೆಯನ್ನು ತೊಳೆಯಿರಿ.
ತಲೆಹೊಟ್ಟುDandruff ಸಮಸ್ಯೆಗೆ ತಿನ್ನಬೇಕಾದ ಉತ್ತಮ ಆಹಾರಗಳು
ನಾವು ತಿನ್ನುವ ಆಹಾರ ನಮ್ಮ ದೇಹದ ಪ್ರತಿಯೊಂದು ಭಾಗದ ಮೇಲೆ ನೇರ ಪರಿಣಾಮ ಬೀರುವುದರಿಂದ ನಾವು ಒಳ್ಳೆಯ ಪೌಷ್ಠಿಕ ಆಹಾರ ತಿನ್ನಬೇಕು .
- ಹಸಿರು ತರಕಾರಿಗಳು : ಸೊಪ್ಪು, ಕ್ಯಾರೆಟ್, ಬೀನ್ಸ್, ಮೂಲಂಗಿ, ಬ್ರಾಕೊಲಿ, ಇವುಗಳಲ್ಲಿ ಉತ್ತಮ ವಿಟಮಿನ್ಸ್, ಮತ್ತೆ ಐರನ್ ಅಂಶ ಜಾಸ್ತಿ ಇದ್ದು ನಮ್ಮ ತಲೆಯ ಡ್ಯಾಂಡ್ರಫ್ ಸಮಸ್ಯೆಯನ್ನು ದೂರ ಮಾಡಲು ಸಹಾಯ ಮಾಡುತ್ತವೆ.
- ಹಣ್ಣುಗಳು : ವಿಟಮಿನ್ ಸಿ ಇರುವ ಕಿತ್ತಳೆ, ನಿಂಬೆ, ಪಪ್ಪಾಯಿ, ದಾಳಿಂಬೆ ಈ ರೀತಿಯ ಹಣ್ಣುಗಳನ್ನು ತಿನ್ನುವುದರಿಂದ ಯಾವುದೇ ಇನ್ಫೆಕ್ಷನ್ ಅನ್ನು ನಾಶಮಾಡುವ ಶಕ್ತಿ ಹಣ್ಣುಗಳಿಗಿರುತ್ತದೆ.
- ಡ್ರೈ ಫ್ರೂಟ್ಸ್ : ಬಾದಾಮಿ, ವಾಲ್ನುಟ್, ಕಡಲೇಕಾಯಿ ಬೀಜ, ಇವುಗಳನ್ನು ರಾತ್ರಿ ನೆನೆಸಿ ಬೆಳಿಗ್ಗೆ ತಿನ್ನುವುದರಿಂದ ಕೂದಲಿಗೆ ಬೇಕಿರುವ ಜಿಂಕ್ ಅಂಶ ಸಿಗುತ್ತದೆ.
- ಮೊಟ್ಟೆ ಮತ್ತೆ ಮೀನು : ಇದರಲ್ಲಿ ಬಯೋಟಿನ್ ಅಂಶ ಇರುವುದರಿಂದ ಕೂದಲು ಬೆಳೆಯಲು ಮತ್ತೆ ಗಟ್ಟಿಯಾಗಲು ಸಹಾಯ ಮಾಡುತ್ತೆ ದಿನಕ್ಕೊಂದು ಮೊಟ್ಟೆ ತಿನ್ನಿ. ಮೀನಿನಲ್ಲಿ ಒಮೇಗಾ-3 ಪ್ಯಾಟಿ ಆಸಿಡ್ ಇದ್ದು ಇದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು ಅದೇ ರೀತಿ ತಲೆಯ ಚರ್ಮದ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
- ಮೊಸರು : ಇದರಲ್ಲಿ ಲ್ಯಾಕ್ಟಿಕ್ ಆಸಿಡ್ ಜಾಸ್ತಿ ಇದ್ದು, ಪ್ರತೀ ದಿನ ತಿನ್ನುವುದರಿಂದ ನಮ್ಮ ತಲೆಯ ಸ್ಕಾಲ್ಪ್ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
- ನೀರು : ನಾನು ಪ್ರತೀ ಬ್ಲಾಗ್ ನಲ್ಲಿ ಹೇಳುತ್ತಿರುತ್ತೇನೆ, ದಿನಕ್ಕೆ 3-4 ಲೀಟರ್ ನೀರು ಕುಡಿಯುವುದರಿಂದ ದೇಹದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. ನೀರು ಎಷ್ಟು ಕುಡಿಯುತ್ತೇವೆ ಅಷ್ಟು ಆರೋಗ್ಯವಾಗಿರುತ್ತೇವೆ.
ಯಾವೆಲ್ಲಾ ಆಹಾರ ಪಧಾರ್ಥಗಳನ್ನ ತಿನ್ನಬಾರದು
1. ಹೆಚ್ಚು ಎಣ್ಣೆಯ ಬಳಸಿರುವ ಪಧಾರ್ಥಗಳು :
ಎಣ್ಣೆಯಲ್ಲಿ ಹೆಚ್ಚು ಕರೆದ ಪಧಾರ್ಥಗಳನ್ನು ತಿನ್ನುವುದರಿಂದ ತಲೆ ಚರ್ಮದ ಎಣ್ಣೆ ಮತ್ತೆ ಹೊಟ್ಟು ಜಾಸ್ತಿಯಾಗುತ್ತದೆ.
2. ಜಂಕ್ ಫುಡ್ :
ಗೋಬಿ, ಪಾನಿಪುರಿ, ಮಸಾಲೆ ಪಧಾರ್ಥಗಳು, ಫಿಜಾ, ಬರ್ಗರ್, ಇತ್ಯಾದಿ ಈ ರೀತಿ ಪಧಾರ್ಥಗಳನ್ನು ತಿನ್ನುವುದರಿಂದ ತಲೆಯ ಆರೋಗ್ಯ ಸಮಸ್ಯೆ ಜಾಸ್ತಿಯಾಗುತ್ತದೆ.
3. ಹೆಚ್ಚು ಸಕ್ಕರೆ :
ಸಕ್ಕರೆ ಅಂಶ ಜಾಸ್ತಿ ತಿನ್ನುವುದರಿಂದ
Sugar inflammation ಬರುತ್ತದೆ. ಅಂದರೆ ತಲೆ ನೋವು ಬರುವುದು, ತಲೆಯ ಚರ್ಮದ ಸಮಸ್ಯೆ, ಅಲರ್ಜಿ ಸಮಸ್ಯೆ ಜಾಸ್ತಿ ಆಗುತ್ತದೆ.
4. ಕೋಲ್ಡ್ ಡ್ರಿಂಕ್ಸ್ :
ಕಾರ್ಬೊನೇಟೆಡ್ ಪಾನೀಯಗಳಾದ ಕೊಕೊ ಕೋಲಾ, ಪೆಪ್ಸಿ, ಈ ರೀತಿಯ ಪಾನೀಯಗಳನ್ನು ಕುಡಿಯುವುದರಿಂದ ಅದರಲ್ಲಿರುವ ಕೆಮಿಕಲ್ ಗಳು ನಮ್ಮ ದೇಹದ ಪೋಷಕಾಂಶಗಳನ್ನು ನಾಶ ಮಾಡುತ್ತವೆ.
ನಾನು ಮೇಲೆ ತಿಳಿಸಿರುವ ಪೋಷಕಾಂಶ ಬರಿತ ಆಹಾರವನ್ನು ತಪ್ಪದೆ ತಿನ್ನಿ ಈ ರೀತಿಯ ಜಂಕ್ ಫುಡ್ ತಿಂದು ಆರೋಗ್ಯ ಆಳು ಮಾಡಿಕೊಳ್ಳಬೇಡಿ.
ಕೊನೆಯದಾಗಿ ಕೆಲವೊಂದು ನನ್ನ ವಯಕ್ತಿಕ ಸಲಹೆಗಳು
- ಪ್ರತಿದಿನ ಸ್ನಾನ ಮಾಡಿ ಆದರೆ ತಲೆಗೆ ದಿನಬಿಟ್ಟು ದಿನ ಸ್ನಾನ ಮಾಡಿ. ಆಗ ನಿಮ್ಮ ಕೂದಲಿನ ಆರೋಗ್ಯ ಮತ್ತೆ ನಿಮ್ಮ ತಲೆಯ ಚರ್ಮದ ಆರೋಗ್ಯ ಚನ್ನಾಗಿರುತ್ತದೆ.
- ತಲೆಗೆ ಶಾಂಪೂ ಬಳಸುವ ಬದಲು ನೈಸರ್ಗಿಕವಾಗಿ ಸಿಗುವ ಸೀಗೆಕಾಯಿ ಪುಡಿ ಮಾಡಿ ಅದನ್ನು ಬಳಸಿ.
- ನಿಮ್ಮ ಬಾಚಣಿಕೆ comb ಸರಿಯಾಗಿ ಸ್ವಚ್ಛ ಮಾಡಿಕೊಳ್ಳಿ. ಆದಷ್ಟೂ ಬೇರೆಯವರು ಬಳಸಿದ್ದನ್ನು ಬಳಸಬೇಡಿ, ಅವರಿಗಿರುವ ಸಮಸ್ಯೆ ನಿಮಗೂ ಬರುತ್ತದೆ.
- ಆದಷ್ಟೂ ಯೋಗ, ಧ್ಯಾನ ಮಾಡಿ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಆಗ ಮಾತ್ರ ನೀವು ಆರೋಗ್ಯವಾಗಿರಲು ಸಾಧ್ಯ.
FAQs
ತಲೆಯ Dandruff ವಾಸಿಮಾಡಬಹುದೇ?
ಹೌದು, ಸರಿಯಾದ ರೀತಿ ನೈಸರ್ಗಿಕ ಮನೆಮದ್ದುಗಳನ್ನು ಬಳಸಿಕೊಂಡರೆ ತಲೆಯ ಡ್ಯಾಂಡ್ರಫ್ ಅನ್ನು ಬೇಗ ವಾಸಿಮಾಡಬಹುದು.
ಡ್ಯಾಂಡ್ರಫ್ ಸಮಸ್ಯೆಯನ್ನು ಹೇಗೆ ಪರಿಹರಿಸಬೇಕು?
ವಾರಕ್ಕೆ ಮೂರು ಸರಿ ನೈಸರ್ಗಿಕವಾಗಿ ಸಿಗುವ ಸೀಗೆಕಾಯಿ ಹಾಕಿ ಸ್ನಾನ ಮಾಡಿ, Tea Tree Oil ಅನ್ನು ವಾರಕ್ಕೆ ಒಮ್ಮೆ ತೆಂಗಿನ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ತಲೆಗೆ ಹಚ್ಚಿ, ಬೇವಿನ ಎಲೆಯ ರಸವನ್ನು ವಾರಕ್ಕೊಮ್ಮೆ ತಲೆಗೆ ಪ್ಯಾಕ್ ರೀತಿ ಬಳಸಿ, ಈ ರೀತಿ ಮಾಡುವುದರಿಂದ ತಲೆಯ ಡ್ಯಾಂಡ್ರಫ್ ಸಮಸ್ಯೆ ದೂರವಾಗುತ್ತದೆ.
ತೆಂಗಿನ ಎಣ್ಣೆ ಡ್ಯಾಂಡ್ರಫ್ ಅನ್ನು ನಾಶಮಾಡುತ್ತದೆಯೇ?
ಹೌದು, ತೆಂಗಿನ ಎಣ್ಣೆ ಡ್ಯಾಂಡ್ರಫ್ ಅನ್ನು ನಾಶಮಾಡುತ್ತದೆ. ಆದರೆ ತೆಂಗಿನ ಎಣ್ಣೆಯ ಜೊತೆಗೆ, ಟೀ ಟ್ರೀ ಎಣ್ಣೆ ಮಿಕ್ಸ್ ಮಾಡಿ ಹಚ್ಚಬೇಕು, ಆಗ ಡ್ಯಾಂಡ್ರಫ್ ಪಂಗಸ್ ನಾಶವಾಗುತ್ತದೆ.
