Table of Contents
Toggleನೈಸರ್ಗಿಕವಾಗಿ ಕೂದಲು ಉದುರುವುದನ್ನು (Hair fall) ತಡೆಗಟ್ಟುವುದು ಹೇಗೆ ?
ನಿಮ್ಮ ತಲೆ ಕೂದಲಿನ ಬೇರು (The root of your hair) ಬಲಪಡಿಸುವುದು ಹೇಗೆ ?
ನಿಮ್ಮ ತಲೆ ಬಾಚುವಾಗ ಬಾಚಣಿಗೆ ನೋಡಲು ಭೇಜಾರಾಗ್ತಿದೀಯಾ ?
ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಇಷ್ಟು ದಿನ ನಿಮ್ಮ ಕೂದಲು ಉದುರಿರುವುದು ಸಾಕು ಇನ್ನು ಮುಂದೆ ನೀವೇ ಆಶರ್ಯ ಪಡುವ ರೀತಿ ನಿಮ್ಮ ಕೂದಲು ಗಟ್ಟಿ ಯಾಗಿರುತ್ತೆ, ಅದಕ್ಕೆ ಅಂತ ನಿಮಗೋಸ್ಕರ ನೈಸರ್ಗಿಕವಾಗಿ ಈ ಮನೆ ಮದ್ದು ತಯಾರಿಸುವ ರೀತಿಯನ್ನ ನಾನು ತಿಳಿಸುತ್ತೇನೆ.
ನಮ್ಮ ಕೂದಲು ಉದುರುವುದನ್ನು ಯಾವ ರೀತಿ ನಿಯಂತ್ರಣ ಮಾಡಬೇಕು? ,ಮತ್ತು ಕೂದಲನ್ನು ಬಲಪಡಿಸುವ ವಿಧಾನ ತಿಳಿಸುತ್ತೇನೆ.
ದಿನಕ್ಕೆ ಸಾಮಾನ್ಯವಾಗಿ ಸ್ವಲ್ಪ ಪ್ರಮಾಣದಲ್ಲಿ ಕೂದಲು ಎಲ್ಲರ ತಲೆಯಲ್ಲಿ ಉದುರುತ್ತವೆ, ಆದರೆ ಅದಕ್ಕಿಂತ ಹೆಚ್ಚಿನ ಕೂದಲು ಉದುರಿ ಖಾಲಿ ಕಾಣುವುದಕ್ಕೆ ಆರಂಭ ಆದಾಗ ಆತಂಕ ಶುರು ಆಗತ್ತೆ.
ನಿಮಗೆ ಖುಷಿಯ ವಿಚಾರ ಅಂದ್ರೆ ಒಳ್ಳೆಯ ಪೌಷ್ಟಿಕ ಊಟ, ಮತ್ತೆ ಮಾನವ ಸಹಜ ಜೀವನಶೈಲಿಯ ಬದಲಾವಣೆಯಿಂದ ಕೂದಲು ಉದುರುವುದನ್ನ ತಡೆಗಟ್ಟಬಹುದು.
ಕೂದಲು ಉದುರುವಿಕೆಯ ಮುಖ್ಯ ಕಾರಣಗಳನ್ನ ನೋಡೋಣ
1. ನಮ್ಮ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ,
ನಮ್ಮ ಕೂದಲಿನ ಪ್ರಮುಖ ಶಕ್ತಿಯೇ ಪ್ರೋಟೀನ್, ನಮ್ಮ ದೇಹಕ್ಕೆ ಸಿಗಬೇಕಾದಷ್ಟು ಪ್ರೋಟೀನ್ ,ಕ್ಯಾಲ್ಶಿಯಂ ,ಜಿಂಕ್, ವಿಟಮಿನ್ ಡಿ ,ಮತ್ತೆ ವಿಟಮಿನ್ ಬಿ12 ಸಿಗದಿದ್ದಾಗ ಕೂದಲು ವೀಕ್ ಆಗುತ್ತವೆ , ಅದ್ರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಲ್ಲಿ ಐರನ್ ಕೊರತೆ ಜಾಸ್ತಿ ಇದ್ದಾಗ ತುಂಬಾ ಕೂದಲು ಉದುರುತ್ತವೆ.
2.ಮಾನಸಿಕ ಒತ್ತಡ ಮತ್ತೆ ನಿದ್ರಾಹೀನತೆ
ನಮ್ಮ ತಲೆಯಲ್ಲಿ ಯಾವುದೊ ಯೋಚನೆಗಳು ತುಂಬಿಕೊಂಡು ಮಲಗಿದ್ರೆ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ, ಅದೇ ರೀತಿ ಚಿಂತನೆ, ಯೋಚನೆಗಳಿಂದ ಮನಸ್ಸಿನ ನೆಮ್ಮದಿ ಇಲ್ಲದಿರುವಾಗ ಒತ್ತಡ ಜಾಸ್ತಿ ಇರುತ್ತೆ, ಇದರಿಂದ ದೇಹದ ಹಾರ್ಮೋನ್ ಏರುಪೇರಾಗುತ್ತದೆ, ಕೂದಲು ಉದುರುವುದಕ್ಕೆ ಕಾರಣ ಆಗುತ್ತದೆ .
3.ದೇಹದ ಹಾರ್ಮೋನ್ ಅಸಮತೋಲನ
ಹೆಣ್ಣುಮಕ್ಕಳಲ್ಲಿ ಸಾಮಾನ್ಯವಾಗಿ ಥೈರಾಯ್ಡ್ ಸಮಸ್ಯೆ ,PCOD, PCOS , ಮತ್ತೆ ಮಕ್ಕಳಾದ ನಂತರದ ಹಾರ್ಮೋನ್ ಬದಲಾವಣೆಗಳಿಂದ ಕೂದಲು ಉದುರುತ್ತವೆ .
4.ಹೆಚ್ಚು ಕೆಮಿಕಲ್ ಗಳನ್ನು ಬಳಸುವುದರಿಂದ
ಅಂಗಡಿಗೆ ಹೋದರೆ ನಮ್ಮ ಕಣ್ಣಿಗೆ ಮೊದಲು ಕಾಣಿಸುವುದೇ ಕಲರ್ಪುಲ್ ಶಾಂಪೂಗಳ ಆವಳಿ, ಇವುಗಳನ್ನು ಬಳಸುವುದರಿಂದ ಮತ್ತೆ ಕೂದಲಿನ ಕಲರ್ ಬಳಸುವುದರಿಂದ ಕೂದಲಿನ ಬೇರುಗಳು ವೀಕ್ ಆಗುತ್ತವೆ.
5.ತಲೆ ಚರ್ಮದ ಸಮಸ್ಯೆಗಳು
ಕೆಲವರಲ್ಲಿ ತಲೆಯಲ್ಲಿ ಹೊಟ್ಟು (dandruff) ,ಪಂಗಸ್ ಕಾಯಿಲೆ,ಚರ್ಮದಲ್ಲಿ ಉರಿ ಈ ರೀತಿ ಸಮಸ್ಯೆ ಇರುವುವರಲ್ಲಿ ಕೂದಲು ಬೇಗ ಉದುರುತ್ತವೆ.
6)ಕೂದಲು ಉದುರಲು ಮತ್ತೊಂದು ಪ್ರಮುಖ ಕಾರಣ ನಾವು ಬಳಸುವ ನೀರಿನಲ್ಲಿರುವ ಉಪ್ಪಿನಾಂಶ(Floride content) ,
ಇದಕ್ಕೆ ಉದಾಹರಣೆಗೆ ಹೇಳಬೇಕಾದರೆ ನನ್ನ ಮಡದಿ, ಅವರಿಗೆ ಮುಂಚೆ ಕೂದಲು ತುಂಬಾ ಉದ್ದ ಇದ್ದು, ಫ್ಲೋರೈಡ್ ನೀರಿನ ಬಳಕೆಯಿಂದ ಕೂದಲು ಉದುರಲು ಶುರುವಾಯಿತು, ನಂತರ ನೈಸರ್ಗಿಕ ಮನೆ ಮದ್ದುಗಳನ್ನು ಪ್ರಾರಂಭಿಸಿದಾಗಿನಿಂದ ಕೂದಲು ಉದುರುವುದು ಕಡಿಮೆಯಾಗಿದೆ, ಹಾಗು ಕೂದಲಿನ ಬೆಳವಣಿಗೆಯು ಕಾಣುತ್ತಿದೆ.
ನಮ್ಮ ಕೂದಲು ಉದುರುವುದನ್ನ ತಡೆಯುವುದಕ್ಕೆ ಅನುಸರಿಸುವ ಪರಿಣಾಮಕಾರಿ ವಿದಾನಗಳನ್ನ ನೋಡೋಣ .
1. ದೇಹಕ್ಕೆ ಪೌಷ್ಟಿಕ ಆಹಾರವನ್ನ ಹೆಚ್ಚಿಸಬೇಕು
ಯಾವ ರೀತಿ ಅಂದರೆ, ನಾವು ಈಗ ತಿನ್ನುತ್ತಿರುವ ಆಹಾರ ದಲ್ಲಿ ಕೆಮಿಕಲ್ ಗಳ ಬಳಕೆ ಜಾಸ್ತಿ ಇರುವುದರಿಂದ, ಅದಕ್ಕೆ ಬದಲಾಗಿ ನಮ್ಮ ಆಹಾರದಲ್ಲಿ, ಮೊಟ್ಟೆ, ಹುರುಳಿ ಕಾಳು,ತೊಗರಿ ಕಾಳು, ಬೇಳೆ ಕಾಳುಗಳು, ತುಂಬಾ ಕಾಳುಗಳನ್ನ ಸಾಂಬಾರ್ ಗೆ ಸೇರಿಸಬೇಕು.
ಕಡಲೆಕಾಳು ,ಬಾದಾಮಿ ಬೀಜ (ರಾತ್ರಿ ನೆನೆಸಿ ಬೆಳಗಿನ ಜಾವಾ ತಿನ್ನುವುದು ಉತ್ತಮ )
ಸೊಪ್ಪುಗಳು ,ವಿಟಮಿನ್ ಸಿ ಇರುವ ಹಣ್ಣುಗಳು ,ಅರೇಂಜ್ ,ಕಿವಿ ಹಣ್ಣು ,ಚೇಪೆಕಾಯಿ, ಈ ರೀತಿ ನಮ್ಮ ಆಹಾರದಲ್ಲಿ ಪ್ರೊಟೀನ್ ಮತ್ತೆ ಐರನ್ ಸೇರಿಸುವುದರಿಂದ ಕೊದಲಿನ ಬೇರು ಗಟ್ಟಿಯಾಗುತ್ತದೆ .
2.ತಲೆಗೆ ಎಣ್ಣೆಯ ಮಸಾಜ್
ನಮ್ಮ ತಲೆಗೆ ಒಂದು ದಿನ ಬಿಟ್ಟು ಮತ್ತೊಂದು ರಾತ್ರಿ ಏನೀಯನ್ನು ಹಚ್ಚುವುದರಿಂದ ಕೂದಲು ಬಲಿಷ್ಠಗೊಳ್ಳುತ್ತವೆ ಮತ್ತೆ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತವೆ .
ತಲೆಗೆ ಕೊಬ್ಬರಿ ಎಣ್ಣೆ ,ಅರಳೆ ಎಣ್ಣೆ , ಬಾದಾಮಿ ಬೀಜದಿಂದ ಮಾಡಿದ ಎಣ್ಣೆ,
ತೆಂಗಿನ ಎಣ್ಣೆ ಈ ರೀತಿ ಎಣ್ಣೆಗಳು ಉತ್ತಮ .
3.ತಲೆ ಸ್ನಾನ
ಶಂಪೂ ಬಳಸಿ ತಲೆಗೆ ಸ್ನಾನ ಮಾಡುವ ಬದಲು ಆದಷ್ಟು ಸೀಗೆಕಾಯಿ ಬಳಸುವುದು ಉತ್ತಮ , ಪ್ರತೀದಿನ ತಲೆಗೆ ಸ್ನಾನ ಬೇಡ ವಾರಕ್ಕೆ ಮೂರು ಬಾರಿ ಆದರೆ ಸಾಕು .
4.ಕೊದಲು ಸ್ಟೈಕ್ಲಿಂಗ್ ಮಾಡುವುದನ್ನು ನಿಲ್ಲಿಸಿ
ಪ್ರತಿದಿನ ಸ್ಟೈಟ್ನರ್ ಮತ್ತು ಡ್ರೈಯರ್ ಬಳಸುವುದರಿಂದ ಕೊದಲಿನ ಬೇರು ದುರ್ಬಲಗೊಳ್ಳುತ್ತದೆ ,ಕೂದಲು ಸಹಜವಾಗಿ ಒಣಗಿಸುವುದು ಉತ್ತಮ .
5.ಮಾನಸಿಕ ಒತ್ತಡವನ್ನ ನಿಯಂತ್ರಿಸಬೇಕು
ಆದಷ್ಟು ಯೋಗ ,ಪ್ರಾಣಾಯಾಮ ,ಧ್ಯಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಆಗ ಕೊಡಲು ಉದುರುವಿಕೆ ಸಮಸ್ಯೆ ಕಡಿಮೆ ಆಗುತ್ತದೆ
ಕೂದಲನ್ನ ನೈಸರ್ಗಿಕವಾಗಿ ಬಲಪಡಿಸುವುದಕ್ಕೆ ಬೇಕಿರುವ ಮನೆಮದ್ದುಗಳು
ಈರುಳ್ಳಿ ರಸವನ್ನ ಹಚ್ಚುವುದು :
ಈರುಳ್ಳಿಯಿಂದ ರಸವನ್ನು ತಯಾರಿಸಿ ತಲೆ ಚರ್ಮಕ್ಕೆ ಸಂಪೂರ್ಣ ಹಚ್ಚಿ 30 ನಿಮಿಷಗಳ ನಂತರ ತೊಳೆಯಿರಿ ಇದು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ .
ಅಲೋವೆರಾ ಜೆಲ್ : ಇದು ತಲೆ ಚರ್ಮದಲ್ಲಿರುವ ಕಸವನ್ನು ನಿವಾರಣೆ ಮಾಡಿ ಕೂದಲು ಆರೋಗ್ಯಕರವಾಗಿರಲು ಸಹಕರಿಸುತ್ತದೆ.(ಇದನ್ನು ನಾವು ಮನೆಯಲ್ಲಿಯೇ ನೈಸರ್ಗಿಕವಾಗಿ ತಯಾರಿಸಬಹುದು)
ಮೆಂತ್ಯ ಪೇಸ್ಟ್ : ರಾತ್ರಿ ಮೆಂತ್ಯವನ್ನು ನೆನೆಸಿ ಬೆಳಿಗ್ಗೆ ಅದನ್ನು ರುಬ್ಬಿ ತಲೆಗೆ ಹಚ್ಚಿಕೊಂಡರೆ ಕೊದಲು ಉದುರುವುದು ಮತ್ತು ಕೂದಲು ಒಡೆಯುವುದು ಕಡಿಮೆ ಆಗುತ್ತದೆ .
ಕರಿಬೇವು ಎಣ್ಣೆ :ಕರಿಬೇವನ್ನು ರಾತ್ರಿ ವೇಳೆ ತೆಂಗಿನ ಎಣ್ಣೆಯಲ್ಲಿ ಕುದಿಸಿ ಅದರಿಂದ ತಯಾರಾದ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಗಟ್ಟಿಯಾಗುತ್ತವೆ ಮತ್ತು ಕಪ್ಪಾಗುತ್ತವೆ.
ಹಾಗೆ ಕೆಲವೊಂದು ಗಿಡಮೂಲಿಕೆಗಳು ನೋಡಬೇಕಾದರೆ ,
ನೆಲ್ಲಿಕಾಯಿ (Amla): ಆಂಟಿ ಆಕ್ಸಿಡೆಂಟ್ ಅಂಶ ಒಳಗೊಂಡಿರುವ ಇದು ಕೂದಲು ಗಟ್ಟಿಯಾಗುತ್ತವೆ.
ಬೃಂಗರಾಜ: ಇದು ಗ್ರಂಧಿಗೆ ಅಂಗಡಿಯಲ್ಲಿ ಸಿಗುತ್ತದೆ ,ಕೂದಲಿನ ಬೆಳವಣಿಗೆಗೆ ಸಹಕರಿಸುತ್ತದೆ.
ದಾಸವಾಳ (Hibiscus): ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.
ಮೊಸರು,(Curd), ಜೇನುತುಪ್ಪ(honey,) ಅಕ್ಕಿ ನೀರು( rice water)ಇವುಗಳಿಂದ ಸಹ ಕೂದಲಿನ ಬೆಳವಣಿಗೆಯನ್ನು ನೋಡಬಹುದು.
ಕೂದಲು ಉದುರುವಿಕೆ ಎನ್ನುವುದು ಒಂದು ದಿನದಲ್ಲಿ ನಿಲ್ಲುವ ಪ್ರಕ್ರಿಯೆ ಅಲ್ಲ ಆದ್ದರಿಂದ ನಾನು ಮೇಲೆ ತಿಳಿಸಿರುವ ಎಲ್ಲ ವಿಷಯಗಳನ್ನ ಸರಿಯಾದ ರೀತಿಯಲ್ಲಿ ಅನುಸರಿಸಿ, ಇಲ್ಲಿ ತಾಳ್ಮೆ ಮುಖ್ಯ, ದೇಹ ಅರೋಗ್ಯವಾಗಿದ್ದರೆ ಕೂದಲು ಸಹ ನೈಸರ್ಗಿಕವಾಗಿ ಅರೋಗ್ಯವಾಗಿರುತ್ತವೆ .
ಕೃತಕ ಔಷದಿಗಳಿಗಿಂತ ಮೊದಲು ನಿಮ್ಮ ಆಹಾರ, ನಿದ್ದೆ, ಮತ್ತು ಜೀವನಶೈಲಿ ಸರಿಪಡಿಸಿಕೊಂಡರೆ ಉತ್ತಮ ಫಲಿತಾಂಶ ಸಿಗುತ್ತದೆ ಹಾಗೂ ಸುಂದರವಾಗಿ ಕಾಣಬಹುದು .
ಉತ್ತಮ ಅರೋಗ್ಯ =ಉತ್ತಮ ಬಲವಾದ ಕೂದಲು.
ನಾನು ಬರೆದಿರುವ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತೆ ಬೇರೆ ಯಾವ ವಿಷಯದ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕು ಎಂದು ಕಾಮೆಂಟ್ಸ್ ರೂಪದಲ್ಲಿ ತಿಳಿಸಿ ಧನ್ಯವಾದಗಳು .

Pingback: ಕೂದಲು ಉದರುವಿಕೆಗೆ(Hair fall) ಕಾರಣಗಳು 7 ವಿಟಮಿನ್ ಪರಿಹಾರ .