How to loose Belly fat in 10 days- Naturally in kannada

Spread the love
loose belly Fat in 10 days

ಮನುಷ್ಯನ ಜೀವನಶೈಲಿ ತುಂಬಾ ವೇಗವಾಗಿ ಓಡುತ್ತಿರುವ ಈ ಸಮಯದಲ್ಲಿ ನಮ್ಮ ದೈಹಿಕ ಚಟುವಟಿಕೆಗಳಿಗೆ ಸಮಯ ಇದ್ದು ಇಲ್ಲದಂತಾಗಿದೆ, ಅದೇ ಕಾರಣದಿಂದ ಹೊಟ್ಟೆ ಕೊಬ್ಬು (Belly fat) ಎಂಬುದು ಸಾಮಾನ್ಯ ಸಮಸ್ಯೆಯಾಗಿದೆ .


ಕೆಲಸ ಕೆಲಸ ಎಂದು ನಮ್ಮನ್ನೇ ನಾವು ಮರೆಯುವಷ್ಟು ಆಲಸ್ಯರಾಗಿದ್ದೇವೆ ಅಲ್ಲವಾ?, ವ್ಯಾಯಾಮದ ಕೊರತೆ ,ಆಫೀಸ್ ಕೆಲಸ, ಜಂಕ್ ಫುಡ್ ಅಭ್ಯಾಸ ಇವೆಲ್ಲವುಗಳಿಂದ ಹೊಟ್ಟೆ ಸುತ್ತ ಕೊಬ್ಬಿನಂಶ ತುಂಬಿ ತುಳುಕುತ್ತಿದೆ .

ಬಹಳ ಜನರಿಗೆ ಆಶ್ಚರ್ಯ ಆಗತ್ತೆ ಇದೇನಪ್ಪ ಕೇವಲ 10 ದಿನಗಳಲ್ಲಿ ಕೊಬ್ಬು ಕರಗುತ್ತಾ? ಎಂದು, ಔದು ಸ್ನೇಹಿತರೆ ನಿಮ್ಮ ಅನುಮಾನ ನಿಜ, ಆದರೆ ಸಾಧ್ಯವಾಗದೆ ಇರುವುದು ಯಾವುದು ಇಲ್ಲ,ಮನಸಿದ್ದರೆ ಮಾರ್ಗಹಾಗೆ ನೋಡಿದರೆ 10 ದಿನಗಳಲ್ಲಿ ಕಷ್ಟನೇ ಆದರೂ ನನ್ನ ಮಾರ್ಗದರ್ಶನ ಅನುಸರಿಸಿದರೆ ಖಂಡಿತ ನಿಮ್ಮ ದೇಹದಲ್ಲಿನ ಬದಲಾವಣೆಯನ್ನ ನೀವೇ ಕಂಡು ಖುಷಿ ಪಡುತ್ತೀರೀ .

loose Belly Fat reduction

ನಾನು ಬರೆದಿರುವ ಈ ಲೇಖನದಲ್ಲಿ ಕೇವಲ 10 ದಿನಗಳಲ್ಲಿ ಯಾವತರ ಹೊಟ್ಟೆ ಕೊಬ್ಬು (Belly fat) ಕರಗಿಸುವುದು, ಅದಕ್ಕೆ ನಾವು ಸುಲಭವಾಗಿ ಮತ್ತೆ ಆರೋಗ್ಯಕರವಾಗಿರುವ ಕೆಲವು ವಿದಾನಗಳನ್ನ ನೋಡೋಣ

ಈ ಹೊಟ್ಟೆ ಕೊಬ್ಬು(Belly fat) ಯಾಕೆ ಬರುತ್ತೆ ಅನ್ನೋದು ನಮ್ಮ ಮೊದಲ ಪ್ರಶ್ನೆ ಮತ್ತೆ ಇದರ ಮೂಲ ನಮಗೆ ತುಂಬಾ ಮುಖ್ಯ ಅಲ್ವಾ?

ಮೊದಲ ಕಾರಣ ಹೆಚ್ಚಾಗಿ ಸಕ್ಕರೆ ಅಂಶ ಮತ್ತೆ ಎಣ್ಣೆ ಪದಾರ್ಥಗಳ ಸೇವನೆ ಮಾಡೋದರಿಂದ ಬರತ್ತೆ .

ಎರಡನೆಯದಾಗಿ ನಮ್ಮ ಶಾರೀರಿಕ ಚಟುವಟಿಕೆ ಇಲ್ಲದೆ ಇರೋದ್ದರಿಂದ ದೇಹದಲ್ಲಿನ ಕೊಬ್ಬು ಹೆಚ್ಚಾಗುತ್ತದೆ .

ನಂತರ ಹಾಗೆ ಬೇರೇ ಕಾರಣಗಳನ್ನ ನೋಡೋದಾದರೆ – ನಿದ್ರೆಯ ಕೊರತೆ, ಮಾನಸಿಕ ಒತ್ತಡ ,ಹೆಚ್ಚುಕಾಲ ಕುಳಿತುಕೊಂಡೆ ಕೆಲಸ ಮಾಡೋದಾದ್ದರಿಂದ , ದೇಹದಲ್ಲಿನ ಹಾರ್ಮೋನ್ ಅಸಮತೋಲನದಿಂದ (Hormonal imbalance) ಕೆಲವರಲ್ಲಿ ತನ್ನ ತಂದೆ ತಾಯಿಯ ಬಳುವಳಿಯಾಗಿ ಅನಗತ್ಯ ಕೊಬ್ಬು ದೇಹದಲ್ಲಿ ಮತ್ತೆ ವಿಶೇಷವಾಗಿ ಹೊಟ್ಟೆಯ ಭಾಗದಲ್ಲಿ ಸಂಗ್ರಹವಾಗಿರತ್ತೆ.

Belly fat reducing seeds

ಈಗ ಅನಗತ್ಯ ಕೊಬ್ಬು(Belly fat) ಕರಗಿಸಲು ಹತ್ತು ದಿನದ ಸರಳ ಆಹಾರ ಮಾರ್ಗವನ್ನ ನೋಡೋಣ . (What to eat and what not to eat).

🌅 ಬೆಳಿಗ್ಗೆ ನಮ್ಮ ಅಭ್ಯಾಸ

ನಮ್ಮ ದಿನವನ್ನು ಬೆಳಿಗ್ಗೆ ಎದ್ದ ತಕ್ಷಣ ಬಿಸಿನೀರಿನಿಂದ ಆರಂಭಿಸಬೇಕು . ಯಾವರೀತಿ ಅಂದ್ರೆ ಬಿಸಿನೀರು ಕಾಯಿಸಿ ಅದಕ್ಕೆ ಸ್ವಲ್ಪ ನಿಂಬೆ ರಸ ಸೇರಿಸಿ ಕನಿಷ್ಠ ಎರಡು ಗ್ಲಾಸ್ ಕುಡಿದರೆ ದೇಹಕ್ಕೆ ಉಲ್ಲಾಸ ಆಗತ್ತೆ ಜೊತೆಗೆ ಬೆಳಗಿನ ಕಾರ್ಯಕ್ರಮ ಸುಲಭವಾಗತ್ತೆ ದಿನಪೂರ್ತಿ ದೇಹಕ್ಕೆ ಚೈತನ್ಯ ಸಿಗತ್ತೆ .
ಬೆಳಗ್ಗಿನ ಆಹಾರ ನಾವು ಮುಖ್ಯವಾಗಿ ಪ್ರೊಟೀನ್ ಸಿಗುವ ಮೊಟ್ಟೆ , ಓಟ್ಸ್ , ಹಸಿರು ತರಕಾರಿಗಳಿರುವ ಪಲ್ಯ ,ಸೊಪ್ಪು , ಇದು ಬೆಳಗ್ಗಿನ ತಿಂಡಿ ಯಲ್ಲಿ ಇರಲೇಬೇಕಾದ ಅಂಶ .

🍛 ಮಧ್ಯಾಹ್ನನದ ಊಟಕ್ಕೆ

ಮಧ್ಯಾಹ್ನದ ಊಟಕ್ಕೆ ಮುದ್ದೆ ಅಥವಾ ಚಪಾತಿ, ಸೊಪ್ಪು ತರಕಾರಿಗಳು ವೈಟ್ ರೈಸ್(polished rice) ಬದಲು ಬ್ರೌನ್ ರೈಸ್ ಬಳಸುವುದು ಮುಖ್ಯ , ಕೂಚ್ಛ್ಲಕ್ಕಿ , ನಮ್ಮಕಡೆ ದೊಡ್ಡನೆಲ್ಲು ಅಕ್ಕಿ ಅನ್ನುತ್ತಾರೆ ಅದನ್ನ ಬಳಸುವುದು ತುಂಬಾ ಮುಖ್ಯ ನಮ್ಮ ಊಟದ ಪ್ರಮಾಣ ಸ್ವಲ್ಪ ನಿಯಂತ್ರಣದಲ್ಲಿರಬೇಕು .

ಸಂಜೆಯ ಸ್ನ್ಯಾಕ್

ಸಂಜೆ ಗ್ರೀನ್ ಟೀ , ಬಾದಾಮಿ ಹಾಲು ,ಲೆಮನ್ ಟೀ ಅಷ್ಟೇ ಸಾಕು ಸುಮ್ಮನೆ ಸ್ನ್ಯಾಕ್ಸ್ ಅಂತ ಚಿಪ್ಸ್,ಬಿಸ್ಕೆಟ್ಸ್, ಬೇರೆ ಏನು ಬೇಡ .

🌙 ರಾತ್ರಿಯ ಉಪಹಾರ

ರಾತ್ರಿಯ ಊಟ ನಮಗೆ ತುಂಬಾ ಸರಳವಾಗಿರಬೇಕು ತರಕಾರಿಗಳಿಂದ ತಯಾರಿಸಿದ ಸೂಪ್ , ಅಥವಾ ಎರಡು ಚಪಾತಿ ,ಜೊತೆಗೆ ಏನಾದರೂ ಪಲ್ಯ ಅಷ್ಟೇ ಸಾಕು ಮತ್ತೆ ರಾತ್ರಿ 8 ಗಂಟೆಯೊಳಗೆ ಊಟ ಮುಗಿಸುವುದು ತುಂಬಾ ಒಳ್ಳೆಯದು .

belly fat exercise

ಈಗ ನಮ್ಮ ದಿನನಿತ್ಯದ ವ್ಯಾಯಾಮದ ಸರದಿ(Our Daily Exercise Routine).

ನಮ್ಮ ದೇಹದ ಕೊಬ್ಬು ಕೇವಲ ಹತ್ತು ದಿನದಲ್ಲಿ (Belly fat) ಕರಗಬೇಕೆಂದರೆ ನಿತ್ಯ ಕನಿಷ್ಠ 1-2 hrs ಗಂಟೆಗಳ ವ್ಯಾಯಾಮ ಅಗತ್ಯ.
ಯಾವ ರೀತಿ ಅಂದರೆ ಒಂದೇ ಬಾರಿ ಕಸರತ್ತು ಮಾಡುವ ಅಗತ್ಯವಿಲ್ಲ, ದಿನಕ್ಕೆ ಎರಡು ಭಾಗ ಮಾಡಿಕೊಂಡು ಮೊದಲು ಬೆಳಿಗ್ಗೆ ಒಂದು ಗಂಟೆ ನಂತರ ಸಂಜೆ ಒಂದು ಗಂಟೆ .

ಬೆಳಗ್ಗಿನ ಅವಧಿ ವೇಗದ ನಡೆತ (Brisk walking)-20 min
ನಂತರ ಸ್ಕಿಪ್ಪಿಂಗ್ -15 min
ಕ್ರಂಚಸ್ ಮತ್ತೆ ಪ್ಲಾಂಕ್ -15 min

ನಂತರದ ಅವಧಿಯನ್ನು ಯೋಗಾಸನಗಳಿಗೆ ಕೊಟ್ಟರೆ ಬೆಳಗ್ಗಿನ ವ್ಯಾಯಾಮ ಮುಗಿಯುತ್ತದೆ . ನಂತರ ರಾತ್ರಿಯ ವ್ಯಾಯಾಮ ಕೆಲಸ ಮುಗಿಸಿ ಬಂದು ಸ್ವಲ್ಪ ರೆಸ್ಟ್ ಮಾಡಿ ಮನೆಯ ಬಳಿಯಲ್ಲೇ ಸೇಮ್ ಬೆಳಿಗ್ಗೆ ಯಾವ ರೀತಿ ಮಾಡಿರುತ್ತೀರೋ ಅದೇ ವ್ಯಾಯಾಮ 1hrs ಮಾಡಿದರೆ ಸಾಕು, ಇದರಿಂದ ನಮ್ಮ ದೇಹದ ಕೊಬ್ಬಿನಂಶ ಕರಗಲು 100% ಸಹಾಯ ಮಾಡತ್ತೆ, ಆದರೆ ನಿರಂತರತೆ ಮುಖ್ಯ ಒಂದು ದಿನ ಮಾಡಿದ್ದೇನೆ ನಾಳೆ ಮಾಡಿದರಾಯಿತು ಅಂತ ಆಲಸ್ಯ ಬೇಡ .

ನೀರು ಕುಡಿಯುವುದು ಮತ್ತು ನಿದ್ದೆ ಮಾಡುವುದು – ಎರಡು ಪ್ರಮುಖ ಅಂಶಗಳು,
ದೇಹ ಸುಸ್ತಾಗದಿರಲು ಕನಿಷ್ಠ 3-4 ltr ನೀರು ದಿನನಿತ್ಯ ಕುಡಿಯಬೇಕು, ಇದು ನಮ್ಮ ದೇಹದ ಬೇಡದ ಕಸವನ್ನ ಹೊರಹಾಕಲು ಸಹಾಯ ಮಾಡುತ್ತದೆ, ದೇಹ ಸದೃಢವಾಗಿರತ್ತೆ ಮತ್ತೆ ಕನಿಷ್ಠ 7-8 hrs ನಿದ್ದೆ ಮಾಡುವುದು ದೇಹಕ್ಕೆ ಒಳ್ಳೆಯ ನೆಮ್ಮದಿಯನ್ನು, ತೂಕ ಕಡಿಮೆ ಆಗಲು ಸಹಕರಿಸುತ್ತದೆ .

ಮಾನಸಿಕ ಒತ್ತಡ ನಿಯಂತ್ರಣ(Mental pressure and Controlling).

ನಮ್ಮ ದೇಹದಲ್ಲಿ ಕೊಬ್ಬು ಸಂಗ್ರಹಣೆ ಯಾವಾಗ ಹೆಚ್ಚಾಗುತ್ತದೆ ಅಂದರೆ ಮನಸ್ಸಿಗೆ ನೆಮ್ಮದಿ ಇಲ್ಲದ್ದಿದ್ದಾಗ ಆದ್ದರಿಂದ ಸಾಧ್ಯವಾದಷ್ಟು ಯೋಗ, ಧ್ಯಾನ , ಉಸಿರಾಟದ ಅಭ್ಯಾಸ (Breathing exercise) ಮತ್ತು ನಮಗೆ ಇಷ್ಟವಾಗಿರುವ ಅವ್ಯಾಸಗಳಾದ ಓದುವುದು, ಸ್ನೇಹಿತರೊಂದಿಗೆ ಮಾತನಾಡುವುದು, ಈ ರೀತಿ ನಮ್ಮನ್ನ ನಾವು ತೊಡಗಿಸಿಕೊಳ್ಳುವುದು ಮುಖ್ಯ .

ಸುಮ್ಮನೆ ತಪ್ಪು ಮಾಹಿತಿಯಿಂದ ದೂರವಿರಿ
10 ದಿನಗಳಲ್ಲಿ 10 ಕೆಜಿ ತೂಕ ಕಡಿಮೆ ಆಗಲು ಸಾಧ್ಯವಿಲ್ಲ ಆದರೆ ನಿರಂತರ ಪ್ರಯತ್ನ ನಿಮ್ಮ ದೇಹವನ್ನು ಸದೃಢವನ್ನಾಗಿ ಮಾಡುತ್ತೆ .

ಯಾರೋ ಹೇಳಿದ್ದಾರೆ ಎಂದು ಮಾತ್ರೆ,ಪೌಡರ್ ತೆಗೆದುಕೊಂಡು ಸಣ್ಣ ಆಗುತ್ತೇನೆಂದು ಭ್ರಮೆಯಲ್ಲಿದ್ದರೆ ಅದ್ರಿಂದ ಹೊರ ಬನ್ನಿ ಅದರಿಂದ ನಮ್ಮ ದೇಹದಮೇಲೆ ಕೆಟ್ಟ ಪರಿಣಾಮಗಳಾಗುತ್ತವೆ.

ಕೇವಲ ಹೊಟ್ಟೆಯ ಭಾಗಕ್ಕೆ ಮಾತ್ರ ವ್ಯಾಯಾಮ ಮಾಡಿದರೆ ದೇಹದ ಕೊಬ್ಬು ಕರಗುವುದಿಲ್ಲ ಸಂಪೂರ್ಣ ದೇಹದ ಭಾಗಗಳಿಗೆ ನಾನು ಮೇಲೆ ವಿವರಿಸಿದ ರೀತಿ ವ್ಯಾಯಾಮ ಮಾಡುವುದರಿಂದ ಕೊಬ್ಬು ತಾನಾಗೇ ಕರಗುತ್ತದೆ.

ಆರೋಗ್ಯವೇ ಭಾಗ್ಯ ಆರೋಗ್ಯಕರ ಜೀವನ ಶೈಲಿಯಿಂದ ಶಾಶ್ವತ ಪರಿಹಾರ
10 ದಿನ ಆಗಿದೆ ಈಗ ಮುಗಿಯಿತು ಎಂದು ತಿರಸ್ಕಾರ ಬೇಡ ನಂತರದ ದಿನಗಳಿಂದ ವ್ಯಾಯಾಮವನ್ನು ನಿಮ್ಮ ಜೀವನದ ಒಂದು ಭಾಗವೆಂದು ಭಾವಿಸಿ ಈ 10 ದಿನ ಒಂದು ಆರಂಭವೆಂದು ಪರಿಗಣಿಸಿ ವಾರಕ್ಕೆ ಒಮ್ಮೆ ತೂಕ ಪರೀಕ್ಷಿಸಿ ನಿಮ್ಮ ಪ್ರಗತಿಯನ್ನು ನೀವೇ ನೋಡಿ .

ಕೊನೆಯದಾಗಿ, ಹೊಟ್ಟೆ ಕೊಬ್ಬು(Belly fat) ಕಡಿಮೆ ಮಾಡಿಕೊಳ್ಳುವುದು ಒಂದು ದಿನದ ಅಥವಾ ಹತ್ತು ದಿನದ ಕೆಲಸವಲ್ಲ ನಾನು ನಿಮಗೆ ಒಂದು ಮಾರ್ಗದರ್ಶನ ನೀಡಿದ್ದೇನೆ ,ತಕ್ಷಣಕ್ಕೆ ಸಿಕ್ಕುವ ಫಲಿತಾಂಶಗಳ ಹಿಂದೆ ಓಡದೆ ದಿನನಿತ್ಯ ಪ್ರಯತ್ನ ಪಟ್ಟರೆ ನಿಮ್ಮ ದೇಹವನ್ನು ಬಲಿಷ್ಠ ಮಾಡಿಕೊಳ್ಳುವಿರಿ.

ನಾನು ಬರೆದಿರುವ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತೆ ಬೇರೆ ಯಾವ ವಿಷಯದ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕು ಎಂದು ಕಾಮೆಂಟ್ಸ್ ರೂಪದಲ್ಲಿ ತಿಳಿಸಿ ಧನ್ಯವಾದಗಳು .

7 thoughts on “How to loose Belly fat in 10 days- Naturally in kannada”

  1. Pingback: Metabolic ಆರೋಗ್ಯ ಸಮಸ್ಯೆ ನಮ್ಮ ದೇಶದ : Insuline ಪ್ರತಿರೋಧ

  2. Pingback: ಕಿಡ್ನಿ ಸ್ಟೋನ್: ಲಕ್ಷಣಗಳು, ಮತ್ತು 5 ನೈಸರ್ಗಿಕ ಚಿಕಿತ್ಸಾ ವಿಧಾನಗಳು

  3. Pingback: Weight gain and Weight Loss -60 Days Strong Diet Challenge.

Leave a Comment

Your email address will not be published. Required fields are marked *

Scroll to Top