“Does a Lunar Eclipse(ಚಂದ್ರಗ್ರಹಣ) Affect pregnant women? science v/s Beliefs”.

Spread the love
lunar eclipse and pregnancy

2026 ರ ಮೊದಲ ಸಂಪೂರ್ಣ ಚಂದ್ರಗ್ರಹಣ ಇಂದು, ಅಂದರೆ ಮಾರ್ಚ್ 3 ರಂದು ಸಂಭವಿಸಲಿದ್ದು, ಆಕಾಶ ವೀಕ್ಷಕರಿಗೆ ಇಂದು ಅದ್ಭುತವಾದ ದೃಶ್ಯಗಳು ನೋಡಲಿಕ್ಕೆ ಸಿಗುತ್ತದೆ.
ನಮ್ಮಲ್ಲಿ ಇದನ್ನು  ಗ್ರಹಣ ಎನ್ನುತ್ತಾರೆ, ಇದನ್ನು ಯಾವುದೇ ಉಪಕರಣ ಬಳಸದೇ ಬರಿಗಣ್ಣಿನಿಂದ ಸುರಕ್ಷಿತವಾಗಿ ನೋಡಬಹುದಾಗಿದೆ.

ಚಂದ್ರಗ್ರಹಣ ಎನ್ನುವುದು ನಮ್ಮ ಪ್ರಕೃತಿಯ ಅದ್ಭುತ ದೃಶ್ಯಗಳಲ್ಲಿ ಒಂದು. ನಮ್ಮ ಭೂಮಿಯು, ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದನ್ನೇ ಚಂದ್ರಗ್ರಹಣ ಎಂದು ಕರೆಯುತ್ತಾರೆ.
ಖಗೋಳ ವಿಜ್ಞಾನದಲ್ಲಿ ಇದೊಂದು ಸಾಮಾನ್ಯ ಘಟನೆಯಾದರೂ, ನಮ್ಮ ಸಮಾಜದಲ್ಲಿ ಈ ಗ್ರಹಣದ ಬಗ್ಗೆ ಹಲವಾರು ಮೂಡ ನಂಬಿಕೆಗಳು, ವಿಶೇಷವಾಗಿ ಗರ್ಭಿಣಿ ಮಹಿಳೆಯರ ಆರೋಗ್ಯದ ಬಗ್ಗೆ ಹಲವು ವುಹಾಪೋಹಗಳು ಹರಿದಾಡುತ್ತವೆ.
ಈ ಲೇಖನದಲ್ಲಿ ನಾವು ಗ್ರಹಣದ ವೈಜ್ಞಾನಿಕ ಅರ್ಥ, ಗರ್ಭಿಣಿ ಮಹಿಳೆಯರ ಮೇಲೆ ಆಗುವಂತಹ ಧನಾತ್ಮಕ, ಮತ್ತು ಋಣಾತ್ಮಕ ಪರಿಣಾಮಗಳು, ಅದರ ಸುತ್ತ ಹರಿದಾಡುತ್ತಿರುವ ಮಿಥ್ಯಗಳನ್ನು(myth) ನೋಡೋಣ ಬನ್ನಿ.

ಹಾಗಾದರೆ ಚಂದ್ರಗ್ರಹಣ(Lunar Eclipse) ಎಂದರೇನು?

lunar eclipse

ಚಂದ್ರ ಗ್ರಹಣ ಎನ್ನುವುದು ಪೂರ್ಣ ಚಂದ್ರ ದಿನ ಸಂಭವಿಸುತ್ತದೆ. ಸೂರ್ಯ, ಭೂಮಿ, ಚಂದ್ರ ಒಂದು ನೇರವಾಗಿ ಬರುವ ಸಂದರ್ಭದಲ್ಲಿ, ಭೂಮಿಯ ನೆರಳು ಚಂದ್ರನಮೇಲೆ ಬಿದ್ದು ಚಂದ್ರನು ಕತ್ತಲಾಗಿರುವಂತೆ ಕಾಣುತ್ತದೆ, ಕೆಲವೊಮ್ಮೆ ಭೂಮಿಯ ಮೇಲಿನ ಬಣ್ಣಗಳ ವ್ಯತಾಸದಿಂದ ಅದು ಕೆಂಪು ಬಣ್ಣದಂತೆ ಕಾಣಬಹುದು, ಇದನ್ನೇ ರಕ್ತಚಂದ್ರ(blood moon). ಎನ್ನುವರು. ಇದು ಭೌತಿಕ ಸಹಜ ಖಾಗೋಳಶಾಸ್ತ್ರೀಯ ಪ್ರಕ್ರಿಯೆಯಾಗಿದೆ .

ಚಂದ್ರಗ್ರಹಣದಿಂದ ಗರ್ಭಿಣಿಯರ ಆರೋಗ್ಯದ ಮೇಲೆ ಉಂಟಾಗುವ ಪರಿಮಾಣಗಳು.

1. ವೈಜ್ಞಾನಿಕ ಅಧ್ಯಯನ(Scientific Study):
ನಮಗೆ ಇಲ್ಲಿಯವರಿಗೆ ಲಭ್ಯವಿರುವ ವೈಜ್ಞಾನಿಕ ಅಧ್ಯಯನದ ಪ್ರಕಾರ, ಚಂದ್ರಗ್ರಹಣವು ಗರ್ಭಿಣಿ ಮಹಿಳೆಯರ ಅಥವಾ ಗರ್ಭದಲ್ಲಿರುವ ಶಿಶುವಿನ ಆರೋಗ್ಯದ ಮೇಲೆ ಯಾವುದೇ ನೇರ ಪರಿಣಾಮ ಬೀರಿದೆ ಎನ್ನುವುದಕ್ಕೆ ಸಾಕ್ಷ್ಯಗಳಿಲ್ಲ, ಅದೆಲ್ಲ ಮನುಷ್ಯನ ಕಟ್ಟು ಕಲ್ಪನೆ . ಚಂದ್ರಗ್ರಹಣದ ಸಮಯದಲ್ಲಿ ಯಾವುದೇ ಹಾನಿಕಾರಕ ಕಿರಣಗಳು ಭೂಮಿಗೆ ಬರುವುದಿಲ್ಲ.ಅಂದರೆ ನಾವು ವೈದ್ಯಕೀಯ ದೃಷ್ಟಿಯಿಂದ ನೋಡಿದರೆ ಗರ್ಭಿಣಿಯರು ಪ್ರತಿನಿತ್ಯದಂತೆ ತಮ್ಮ ದಿನಚರಿಯನ್ನು ಮುಂದುವರಿಸಬಹುದು.

ಋಣಾತ್ಮಕ ಪರಿಣಾಮಗಳು:
2.ಮಾನಸಿಕ ಬದಲಾವಣೆಗಳು (Negative):
ಚಂದ್ರಗ್ರಹಣದ ಬಗ್ಗೆ ಹಿರಿಯರು ಋಣಾತ್ಮಕವಾಗಿ ಹೇಳುವ ಮಾತುಗಳಿಂದ ಕೆಲವು ಮಹಿಳೆಯರಲ್ಲಿ ಭಯ ಮತ್ತು ಆತಂಕ ಹಾಗೂ ಒತ್ತಡವನ್ನು ಉಂಟುಮಾಡುತ್ತದೆ.
ಅನಗತ್ಯ ನಿಯಮಗಳು: ಚಂದ್ರಗ್ರಹಣದ ಸಮಯದಲ್ಲಿ ಊಟ ಸೇವನೆ ನಿಲ್ಲಿಸುವುದು, ನೀರು ಕುಡಿಯದೆ ಇರುವುದು, ಒರಗಡೆ ಓಡಾಡುವಹಾಗಿಲ್ಲ,ಮನೆಯನ್ನು ಸ್ವಚ್ಛ ಮಾಡುವ ಹಾಗಿಲ್ಲ ಇತ್ಯಾದಿ ಕ್ರಮಗಳಿಂದ ಆರೋಗ್ಯಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹಾನಿ ಉಂಟುಮಾಡುತ್ತವೆ.
ನಿದ್ದೆ ಮಾಡದಿರುವುದು: ಗರ್ಭಿಣಿ ಮಹಿಳೆಯರು ,ಅಥವಾ ಅನಾರೋಗ್ಯ ವ್ಯಕ್ತಿಗಳು ಚಂದ್ರಗ್ರಹಣದ ಸಮಯದಲ್ಲಿ ನಿದ್ದೆ ಮಾಡದೇ ಎಚ್ಚರದಿಂದ ಇರುವುದರಿಂದ ದೈಹಿಕವಾಗಿ ಸುಸ್ತು ಅಥವಾ ನಿದ್ರಾಹೀನತೆ ಆಗಬಹುದು.

ಇದೆಲ್ಲ ಋಣಾತ್ಮಕ ಕಾರ್ಯಗಳ ನಡುವೆ ಕೆಲವೊಂದು ಧನಾತ್ಮಕ (positive effects)ಪರಿಣಾಮಗಳು :
ಆದ್ಯಾತ್ಮಿಕ ಶಾಂತಿ : ಕೆಲವರು ಮನೆಯಲ್ಲಿಯೇ ಧ್ಯಾನ,ಪ್ರಾರ್ಥನೆ ಮಾಡುವುದರಿಂದ ಮನಃಶಾಂತಿ ಪಡೆಯುತ್ತಾರೆ.
ಕುಟುಂಬದ ಬೆಂಬಲ:ಗ್ರಹಣದ ಸಮಯದಲ್ಲಿ ಕುಟುಂಬದವರು ವಿಶೇಷ ಕಾಳಜಿ ವಹಿಸುವುದರಿಂದ ಮಹಿಳೆಗೆ ಭದ್ರತೆ ಅನಿಸುತ್ತದೆ.

ಚಂದ್ರಗ್ರಹಣದ ಸಮಯದಲ್ಲಿ ಗರ್ಭಿಣಿಯರು ಪಾಲಿಸಬೇಕಾದ ಅರೋಗ್ಯ ಸಲಹೆಗಳು :

  • ಯಾವುದೇ ಮೂಢನಂಬಿಕೆಗಳಿಗೆ ನಿಮ್ಮನ್ನು ಒಳಪಡಿಸಬೇಡಿ, ಮತ್ತು ಭಯ ಪಡಬೇಡಿ.
  • ವೈದ್ಯರ ಸಲಹೆ ಇಲ್ಲದೆ ಆಹಾರ ಮತ್ತು ನೀರು ತ್ಯಜಿಸಬೇಡಿ.
    ಔಷಧಿಗಳನ್ನು ಸಮಯಕ್ಕೆ ತೆಗೆದುಕೊಳ್ಳಿ .
  • ಮನಸ್ಸಿಗೆ ನೆಮ್ಮದಿ ಕೊಡುವ ಚಟುವಟಿಕೆಗಳಲ್ಲಿ ತೊಡಗಿರಿ.
  • ಮುಖ್ಯವಾಗಿ ನ್ಯೂಸ್ ಚಾನಲ್ಗಳನ್ನು ನೋಡಬೇಡಿ. ಅಲ್ಲಿ ಅನವಶ್ಯಕ ಮಾಹಿತಿ ಕೊಡುತ್ತಿರುತ್ತಾರೆ, ಅದು ನಿಮ್ಮ ಮನಸ್ಸಿನ ಮೇಲೆ ನೇರ ಕೆಟ್ಟ ಪರಿಣಾಮ ಬೀರುತ್ತದೆ.

ಚಂದ್ರ ಗ್ರಹಣದ ಬಗ್ಗೆ ಇರುವ ಪ್ರಮುಖ ತಪ್ಪು ಕಲ್ಪನೆಗಳು

ಚಂದ್ರ ಗ್ರಹಣದ ಸಮಯದಲ್ಲಿ ನಮ್ಮ ಸಮಾಜದಲ್ಲಿ ಗರ್ಭಿಣಿಯರು ಕೆಲವು ನಿಯಮಗಳನ್ನು ಪಾಲಿಸಲೇಬೇಕು ಎಂಬ ನಂಬಿಕೆ ಇದೆ.
1)ಗ್ರಹಣದ ಸಮಯದಲ್ಲಿ ಹೊರಗಡೆ ಓಡಾಡಿದರೆ ಹುಟ್ಟುವ ಮಗುವಿಗೆ ದೋಷ ಬರುತ್ತದೆ .
ಆದರೆ ವೈಜ್ಞಾನಿಕವಾಗಿ ಇದಕ್ಕೆ ಯಾವುದೇ ಆಧಾರವಿಲ್ಲ. ಗ್ರಹಣದ ಕಿರಣಗಳು ಗರ್ಭದಲ್ಲಿರುವ ಮಗುವಿಗೆ ಯಾವುದೇ ಹಾನಿಮಾಡುವುದಿಲ್ಲ.
2) ಚೂಪಾದ ವಸ್ತುಗಳಿಂದ ಕತ್ತರಿಸುವ ಕೆಲಸ ಮಾಡಬಾರದು, ಮಾಡಿದರೆ ಮಗುವಿಗೆ ಸೀಳು ತುಟಿ ಬರುತ್ತದೆ, ಎಂಬುದು ವಾಸ್ತವಿಕ ಸುಳ್ಳು .
3)ಗ್ರಹಣದ ಸಮಯದಲ್ಲಿ ಊಟ ಮಾಡಿದರೆ ವಿಷವಾಗುತ್ತದೆ, ಎಂಬುದು ಪುರಾತನ ಕಾಲದಿಂದ ಬರುತ್ತಿರುವ ನಂಬಿಕೆ ,ಆದರೆ ವೈಜ್ಞಾನಿಕ ವಾಗಿ ಇದಕ್ಕೆ ಯಾವುದೇ ಆಧಾರಗಳಿಲ್ಲ ಮತ್ತು ಊಟ ಮಾಡಿದರೆ ಯಾವುದೇ ಕೆಟ್ಟ ಪರಿಣಾಮ ಆಗುವುದಿಲ್ಲ.
4)ಗ್ರಹಣದ ನಂತರ ಮನೆ ಸ್ವಚ್ಛ ಮಾಡಿ, ಸ್ನಾನ ಮಾಡಬೇಕು ಎಂಬ ನಂಬಿಕೆ, ಇದು ಶುದ್ದತೆಗಾಗಿ ರೂಪುಗೊಂಡ ಸಂಪ್ರದಾಯವಾದರೂ ಆರೋಗ್ಯದ ದೃಷ್ಟಿಯಿಂದ ಇದು ಕಡ್ಡಾಯವೇನಿಲ್ಲ.

ನಾವು ತಿಳಿಯಬೇಕಿರುವ ಪ್ರಮುಖ ವಿಷಯಗಳು :
1)ಭವಿಷ್ಯವಾಣಿ : ಈಗ ಗಾಬರಿ ಉಂಟುಮಾಡುವ ವಿಷಯಗಳು ಇನ್ನೊಂದು ವಾರದೊಳಗೆ ತೀರಾ ಸಣ್ಣ ವಿಷಯಗಳಾಗಿ ಕಾಣುತ್ತವೆ ಆದ್ದರಿಂದ sudden reaction ಕೊಡುವುದು ಬೇಡ.
2)ಚಂದ್ರಗ್ರಹಣ lunar eclipse ದಲ್ಲಿ ಸೂರ್ಯನಿಂದ ಬರುವ ಕಿರಣಗಳು ನೇರವಾಗಿ ಭೂಮಿಗೆ ಬರದೇ ಚಂದ್ರನ ಮೇಲೆ ಬಿದ್ದು ನಂತರ ನಮಗೆ ಗೋಚರಿಸುವುದರಿಂದ ಅವುಗಳಲ್ಲಿ ಯಾವ ರೀತಿಯ ಅಪಾಯಕಾರಿ ಕಿರಣಗಳು ಇರುವುದಿಲ್ಲ .
3)ಗುರುತ್ವಾಕರ್ಷಣೆ (Gravity), ಚಂದ್ರನಿಂದ, ಸಮುದ್ರದ ಅಲೆಗಳ ಉಬ್ಬರ ವಿಳಿತವು(ocean tides) ಪ್ರತಿದಿನ ನಡೆಯುವ ಸಹಜ ಪ್ರಕ್ರಿಯೆ ಆಗಿದೆ, ಆದ್ದರಿಂದ ಅದು ಮನುಷ್ಯನ ದೇಹದ ಮೇಲೆ ಯಾವ ಕೆಟ್ಟ ರೀತಿಯ ಪರಿಣಾಮವನ್ನು ಉಂಟು ಮಾಡುವುದಿಲ್ಲ.

ನಮ್ಮ ಸಂಪ್ರದಾಯ ಮತ್ತು ವಿಜ್ಞಾನದ ಸಮತೋಲನ ನಿಲುವುಗಳು.
ನಮ್ಮ ಸಂಪ್ರದಾಯಗಳು ನಮ್ಮ ಸಂಸ್ಕೃತಿಯ ಒಂದು ಭಾಗ ಗರ್ಭಿಣಿಯರ ಆರೋಗ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು, ಕೆಲವು ನಿಯಮಗಳನ್ನು ಪಾಲಿಸಬೇಕು ಎನ್ನುವುದರಲ್ಲಿ ಯಾವುದೇ ತಪ್ಪು ಇರುವುದಿಲ್ಲ. ಆದರೆ ಮೂಢನಂಬಿಕೆಗಳನ್ನು ಯಾವುದೇ ವೈಜ್ಞಾನಿಕ ಆದಾರಗಳು ಇಲ್ಲದಿರುವುದನ್ನು, ಪಾಲಿಸಲೇಬೇಕು ಎಂದು ಒತ್ತಾಯ ಮಾಡುವುದು ತಪ್ಪಾಗುತ್ತದೆ.
ಗರ್ಭಿಣಿ ಮಹಿಳೆಯರ ಮೇಲೆ ಅನವಶ್ಯಕ ನಿಯಮಗಳನ್ನು ಹೇರದೆ, ಕುಟುಂಬಸ್ಥರು ಅವರಿಗೆ ಧೈರ್ಯ ನೀಡಿ, ಆರೈಕೆ, ಮಾಡಿದರೆ, ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ.

ಗ್ರಹಣದ lunar eclipse ಸಮಯದಲ್ಲಿ ತಜ್ಞರ ಸಲಹೆ ಏನು ?

 ವೈದ್ಯರು ಹೇಳುವಂತೆ, ಚಂದ್ರಗ್ರಹಣವು ಸಾಮಾನ್ಯ ಖಗೋಳ ಘಟನೆಯಾಗಿದ್ದು, ಇದು ಗರ್ಭಿಣಿಯರ ಆರೋಗ್ಯದ ಮೇಲೆ ಯಾವುದೇ ನೇರ ಪರಿಣಾಮ ಬೀರುವುದಿಲ್ಲ, ಮುಖ್ಯವಾಗಿ ಗರ್ಭಿಣಿಯರು ಗಮನಿಸಬೇಕಾಗಿರುವುದು:
ಪೋಷಕಾಂಶಯುಕ್ತ ಆಹಾರ(ಹಣ್ಣು, ತರಕಾರಿ, ಮೊಟ್ಟೆ, ಸೊಪ್ಪು)
ನಿಯಮಿತ ವೈದ್ಯಕೀಯ ತಪಾಸಣೆ(once in a month)
ಮಾನಸಿಕ ನೆಮ್ಮದಿ(Mental peace)
ವಿಶ್ರಾಂತಿ(Rest), ಸ್ವಚ್ಛತೆ(cleanliness)
ಇವುಗಳು ಗರ್ಭಿಣಿಯರಿಗೆ ಆರೋಗ್ಯವಾಗಿರಲು ಸಹಕರಿಸುತ್ತವೆ.

ನನ್ನ ಅಂತಿಮ ಮಾತು ಏನೆಂದರೆ,
ಸಂಪ್ರದಾಯಗಳನ್ನು ಗೌರವಿಸಬೇಕು, ಆದರೆ ಮೂಢನಂಬಿಕೆಯನ್ನು(superstition) ದೂರಸರಿಸಿ ವಿಜ್ಞಾನವನ್ನು ನಂಬುತ್ತಾ, ಆರೋಗ್ಯಕರ ಮನೋಭಾವದಿಂದ(healthy attitude), ಬದುಕುವುದು ಅತ್ಯುತ್ತಮ.

ನಾನು ಬರೆದಿರುವ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತೆ ಬೇರೆ ಯಾವ ವಿಷಯದ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕು ಎಂದು ಕಾಮೆಂಟ್ಸ್ ರೂಪದಲ್ಲಿ ತಿಳಿಸಿ ಧನ್ಯವಾದಗಳು .

4 thoughts on ““Does a Lunar Eclipse(ಚಂದ್ರಗ್ರಹಣ) Affect pregnant women? science v/s Beliefs”.”

Leave a Comment

Your email address will not be published. Required fields are marked *

Scroll to Top