Ayushman Bharath and Janani Suraksha Yojana- ಆರೋಗ್ಯ ಲಾಭಗಳು

Spread the love
Ayushman bharath and Janani suraksha yojana

ನಮ್ಮ ದೇಶದಲ್ಲಿ ಎಲ್ಲರಿಗೂ ಸಮಾನ ಆರೋಗ್ಯ ಸೇವೆಗಳು ಸಿಗುವುದು ಇನ್ನೂ ದೊಡ್ಡ ಸವಾಲಾಗಿಯೇ ಉಳಿದಿದೆ. ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ ಇಂದುಳಿದ ಜನ ಮತ್ತು ಗ್ರಾಮೀಣ ಭಾಗದಲ್ಲಿ ವಾಸ ಮಾಡುತ್ತಿರುವಂತ ಕುಟುಂಬಗಳು, ಇವರು ಉತ್ತಮ ಚಿಕಿತ್ಸೆ ಪಡೆಯುವುದು ಕೆಲವೊಮ್ಮೆ ಆರ್ಥಿಕವಾಗಿ ತುಂಬಾ ಕಷ್ಟವಾಗತ್ತೆ. ಈ ಸಮಸ್ಯೆಯನ್ನೇ ಸರ್ಕಾರ ಗಮನದಲ್ಲಿ ಇಟ್ಟುಕೊಂಡು ಹಲವಾರು ಆರೋಗ್ಯ ಯೋಜನೆಗಳನ್ನ ಜಾರಿಗೆ ತಂದಿದೆ ಅದರಲ್ಲಿ ಪ್ರಮುಖವಾದ ಎರಡು ಯೋಜನೆಗಳಂದರೆ ಆಯುಷ್ಮಾನ್ ಭಾರತ್ ಮತ್ತು ಜನನಿ ಸುರಕ್ಷಾ(Ayushman Bharat and Janani Suraksha) ಯೋಜನೆಗಳು.

Ayushman Bharat Yojana: ಇದು ದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತ ಅಥವಾ ಕಡಿಮೆ ವೆಚ್ಚದಲ್ಲಿ ಆಸ್ಪತ್ರೆ ಚಿಕಿತ್ಸೆಯನ್ನು ಬರಿಸಲು ರೂಪಿಸಲಾದ ಆರೋಗ್ಯ ವಿಮಾ (health insurance) ಯೋಜನೆಯಾಗಿದೆ. ದೇಶದೆಲ್ಲೆಡೆ ಲಕ್ಷಾಂತರ ಕುಟುಂಬಗಳು ಆಸ್ಪತ್ರೆ ಚಿಕಿತ್ಸೆಯನ್ನು ಆರ್ಥಿಕ ಭಾರವಿಲ್ಲದೆ ಪಡೆಯಲು ಸಹಕಾರಿಯಾಗಿದೆ.
Janani Suraksha Yojana: ಇದು ದೇಶದಲ್ಲಿನ ಗರ್ಭಿಣಿ ಮಹಿಳೆಯರ ಸುರಕ್ಷಿತ ಹೆರಿಗೆಯನ್ನು ಉತ್ತೇಜಿಸಲು ರೂಪಿಸಲಾದ ಪ್ರಮುಖ ಯೋಜನೆ.
ಈ ಯೋಜನೆಯ ಮುಖ್ಯ ಉದ್ದೇಶ ಗರ್ಭಿಣಿ ಮಹಿಳೆಯರು ಆಸ್ಪತ್ರೆಯಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸುವಂತೆ ಪ್ರೋತ್ಸಾಹಿಸುವುದು, ಹಾಗೂ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡುವುದಾಗಿದೆ

ಈ ಯೋಜನೆಯ ಮುಖ್ಯ ವೈಶಿಷ್ಟ್ಯಗಳೆಂದರೆ (Key Features of Ayushman Bharath and Janani Suraksha )

1. ಉಚಿತ ಅರೋಗ್ಯ ವಿಮೆ (Health Insurance):
Ayushman Bharath ಯೋಜನೆಯಡಿ ಅರ್ಹ ಕುಟುಂಬಗಳಿಗೆ ವರ್ಷಕ್ಕೆ ಸುಮಾರು ₹5 ಲಕ್ಷದವರಿಗೆ ಆರೋಗ್ಯ ವಿಮೆ ದೊರೆಯುತ್ತದೆ.
2. ಸರ್ಕಾರೀ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ(private hospitals)ಚಿಕಿತ್ಸೆ:
ಈ ಯೋಜನೆಯಡಿ ಸರ್ಕಾರೀ ಆಸ್ಪತ್ರೆಗಳಲ್ಲದೆ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗೀ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಲು ಅವಕಾಶವಿದೆ.
3. ಗರ್ಭಿಣಿ ಮಹಿಳೆಯರಿಗೆ ಆರ್ಥಿಕ ಸಹಾಯ :
Janani Suraksha Yojana ಇದರಲ್ಲಿ ಗರ್ಭಿಣಿ ಮಹಿಳೆಯರು ಆಸ್ಪತ್ರೆಯಲ್ಲಿ ಹೆರಿಗೆಯನ್ನು ಉತ್ತೇಜಿಸಲು ಹಾಗೂ ತಾಯಿ ಮಗು ಸುರಕ್ಷತೆಗೆ ಆರ್ಥಿಕ ಧನ ಸಹಾಯವನ್ನು(ಗ್ರಾಮೀಣ ಪ್ರದೇಶದ ತಾಯಿಗೆ 1400 ರ ತನಕ ಮತ್ತುASHA Incentive +600=2000 ದೊರೆಯುತ್ತದೆ, ಅದೇ ನಗರ ಪ್ರದೇಶದ ಮಹಿಳೆಗೆ 700 ರ ತನಕ ಮತ್ತು ASHA Incentive + 600=1300). ಸರ್ಕಾರ ಕೊಡುತ್ತದೆ.
4. ಆಶಾ ಕಾರ್ಯಕರ್ತರ ನೆರವು :
ASHA ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ, ಗರ್ಭಿಣಿಯರಿಗೆ ಮಾರ್ಗದರ್ಶನ ನೀಡುವುದಲ್ಲದೆ, ಹೆರಿಗೆ ಸಂದರ್ಭದಲ್ಲಿ ಸಹಾಯ ಮಾಡುತ್ತಾರೆ.
5. ತಾಯಿ ಹಾಗೂ ಮಗುವಿನ ಆರೋಗ್ಯ ರಕ್ಷಣೆ:
Ayushman Bharath and Janani Suraksha ಯೋಜನೆಗಳು ಬಡ ಜನರು ಹಾಗೂ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಈ ಯೋಜನೆಗಳ ಮುಖ್ಯ ಉದ್ದೇಶ (Aim of Ayushman Bharath and Janani Suraksha)

  • ದೇಶದ ಪ್ರತಿಯೊಬ್ಬ ನಾಗರಿಕನಿಗೂ ಉತ್ತಮ ಆರೋಗ್ಯ ನೀಡುವುದು ಹಾಗೂ ವೈದ್ಯಕೀಯ ಸೇವೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು.
    ಈ ಯೋಜನೆಯ ಪ್ರಮುಖ ಗುರಿಗಳೆಂದರೆ :
  • ಗ್ರಾಮೀಣ ಹಾಗೂ ನಗರ ಬಡ ಮತ್ತು ಹಿಂದುಳಿದ ಕುಟುಂಬಗಳಿಗೆ, ಉಚಿತ ಅಥವಾ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವುದು.
  • ಗರ್ಭಿಣಿ ಮಹಿಳೆಯರಿಗೆ ಸುರಕ್ಷಿತ ಹೆರಿಗೆ ಅವಕಾಶ ಕಲ್ಪಿಸುವುದು.
  • ತಾಯಿ ಮತ್ತು ಶಿಶು ಮರಣ ಪ್ರಮಾಣ (maternal and infant mortality) ಕಡಿಮೆ ಮಾಡುವುದು.
  •  ಗ್ರಾಮೀಣ ಪ್ರದೇಶಗಳಿಗೂ ಉತ್ತಮ ಆರೋಗ್ಯ ಸೇವೆ ತಲುಪಿಸುವುದು.
  •  ದೇಶದ ಅರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು.
  •  ಪ್ರಾಥಮಿಕ ದ್ವಿತೀಯ ಹಾಗೂ ತೃತೀಯ ಹಂತಗಳಲ್ಲಿ ಆರೋಗ್ಯವನ್ನು( ತಡೆಗಟ್ಟುವುದು, ಪ್ರಚಾರಮಾಡುವುದು,ಸಂಚಾರಿ ಆರೈಕೆಯನ್ನು ಒಳಗೊಂಡಂತೆ) ಸಮಗ್ರವಾಗಿ ನಿರ್ಣಯಗಳನ್ನು ಕೈಗೊಳ್ಳುವುದು.

ಈ ಯೋಜನೆಗೆ ಅರ್ಹತೆ (Eligibility Ayushman Bharath and Janani Suraksha)

Ayushman Bharath and Janani Suraksha ಯೋಜನೆಗಳ ಪ್ರಯೋಜನ ಪಡೆಯಲು ಕೆಲವೊಂದು ನಿರ್ದಿಷ್ಟ ಅರ್ಹತೆಗಳಿವೆ ಅವುಗಳೆಂದರೆ.
Ayushman Bharath:

  • ಸಾಮಾಜಿಕ-ಆರ್ಥಿಕ ಜಾತಿ ಜನಗಣತಿ(Socio-Economic Caste Census) ಪಟ್ಟಿಯಲ್ಲಿ ನೂಂದಾಯಿತ ಕುಟುಂಬಗಳು.
  •  ಆರ್ಥಿಕವಾಗಿ ಹಿಂದುಳಿದ ವರ್ಗದ ಕುಟುಂಬಗಳು.
  •  ಗ್ರಾಮೀಣ ಹಾಗೂ ನಗರ ಪ್ರದೇಶದ ಹಿಂದುಳಿದ ಬಡ ಕುಟುಂಬಗಳು.
  • ಆಯುಷ್ಮಾನ್ ಕಾರ್ಡ್ ಅನ್ನು ನಿಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಪಡೆಯಬಹುದು, ಅಥವಾ ನಿಮ್ಮ ಮೊಬೈಲ್ ನಲ್ಲಿ ಪಡೆಯಬಹುದಾಗಿದೆ.
  •  ಕುಟುಂಬದ ಗಾತ್ರ ವಯಸ್ಸು ಅಥವಾ ಲಿಂಗದ ಮೇಲೆ ಯಾವುದೇ ನಿರ್ಬಂಧಗಳಿಲ್ಲ.
    ಈ ಅರ್ಹತೆ ಹೊಂದಿರುವ ಕುಟುಂಬಗಳು Ayushman Bharath (PM-JAY) pradhan mantri jan Arogya ಯೋಜನೆಯಡಿಯಲ್ಲಿ ಆರೋಗ್ಯ ವಿಮೆ ಸೌಲಭ್ಯ ಪಡೆಯಬಹುದು.

    Janani Suraksha ಯೋಜನೆಗೆ ಅರ್ಹತೆ:

  •  ಗರ್ಭಿಣಿ ಮಹಿಳೆಯರು,
    .ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು.
  •  ಸರ್ಕಾರೀ ಅಥವಾ ಮಾನ್ಯತೆ ಪಡೆದ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ಮಹಿಳೆಯರು.
  •  ಮಹಿಳೆಗೆ ಕನಿಷ್ಠ 19 ವರ್ಷ ವಯಸ್ಸಾಗಿರಬೇಕು.
  •  ಮಹಿಳೆಯು ಕಡ್ಡಾಯವಾಗಿ ಆಶಾ ಕಾರ್ಯಕ್ರತೆಯರ ಬಳಿ ನೋಂದಣಿ ಮಾಡಿಸುವುದು .

ರಾಜ್ಯಗಳ ಪ್ರತಿಕ್ರಿಯೆ (States Response to Ayushman Bharath and Janani Suraksha)

Ayushman Bharath and Janani Suraksha ಯೋಜನೆಗಳು ಕೇಂದ್ರ ಸರ್ಕಾರದ ಅನುದಾನಿತ(centrally sponsored schemes) ಯೋಜನೆಯಾಗಿದ್ದು, ಇದನ್ನು ರಾಜ್ಯಗಳು ಯಾವ ರೀತಿ ಅನುಷ್ಠಾನ ಮಾಡುತ್ತವೆ ಎನ್ನುವುದು ಪ್ರಮುಖವಾಗಿದೆ.
ಆರೋಗ್ಯ(Health) ರಾಜ್ಯಗಳ ವಿಷಯವಾಗಿದ್ದು, ತಮ್ಮ ರಾಜ್ಯಕ್ಕೆ ಯಾವ ರೀತಿಯ ಅರೋಗ್ಯ ಯೋಜನೆ ಬೇಕು ಎಂದು ರಾಜ್ಯಗಳಿಗೆ ಮಾರ್ಗದರ್ಶನವಿದ್ದು, ಕೇಂದ್ರ ಸರ್ಕಾರದ ಜೊತೆ ಸೇರಿ ಈ ಯೋಜನೆಯನ್ನು ತಮ್ಮ ಜನರ ಹಿತ ದೃಷ್ಟಿಯಿಂದ ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡುವುದರಿಂದ ಲಕ್ಷಾಂತರ ಜನರು ಇದರಿಂದ ಚಿಕಿತ್ಸೆ ಪಡೆಯಲಿ ಸಹಕಾರಿಯಾಗಿದೆ.

ವಿಶೇಷವಾಗಿ Janani Suraksha ಯೋಜನೆ ಜಾರಿಗೆ ಬಂದ ಮೇಲೆ ಆಸ್ಪತ್ರೆಗಳಲ್ಲೇ ಹೆರಿಗೆ ಮಾಡುವವರ( institutional deliveries )ಸಂಖ್ಯೆ ಹೆಚ್ಚಾಗಿದ್ದು(2005-06 ರಲ್ಲಿ 40.8%ಇಂದ 2020-21 88.6% ಕ್ಕೆ ಏರಿಕೆಯಾಗಿದೆ) ಇದು ತಾಯಿ ಹಾಗೂ ಮಗುವಿನ ಮರಣ ಪ್ರಮಾಣ ಕಡಿಮೆಯಾಗಲು ಅನುಕೂಲವಾಗಿದೆ.

ಹಾಗೆಯೇ Ayushman Bharath ಯೋಜನೆಯಿಂದ ಶಸ್ತ್ರಚಿಕಿತ್ಸೆ ಮತ್ತು ಗಂಭೀರ ರೋಗಗಳಿಗೆ ಚಿಕಿತ್ಸೆ ಪಡೆಯಲು ಬಡ ಕುಟುಂಬಗಳಿಗೆ ನೆರವಾಗಿದೆ.

Indian medical association (IMA) ಪ್ರಕಾರ ಕೇಂದ್ರ ಸರ್ಕಾರ ನೇರವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಧನ ಸಹಾಯ ಮಾಡಬೇಕಾಗಿರುತ್ತದೆ.
ಸಾಮಾನ್ಯ ಜನರು ವಿಮಾ ಕಂಪನಿಗಳ ಬಳಿ ದಂಡ ತೆರುವ ಅವಶ್ಯಕೆತೆ ಬರುವುದಿಲ್ಲ.

ಒಟ್ಟಾರೆ ನೋಡಿದರೆ Ayushman Bharath and Janani Suraksha ಯೋಜನೆಗಳು, ನಮ್ಮ ದೇಶದ ಭವಿಷ್ಯತ್ತಿನ ಎರಡು ಪ್ರಮುಖ ಅಂಗಗಳಾಗಿ ಕಾರ್ಯನಿರ್ವಹಿಸುತ್ತಿದ್ದು ಆರೋಗ್ಯ ವ್ಯೆವಸ್ಥೆಯನ್ನು ಸುಧಾರಿಸಲು , ಹಿಂದುಳಿದ ಬಡ ಜನರಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತಿದ್ದು, ಭವಿಷ್ಯದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಜನರ ಆರೋಗ್ಯ ಮಟ್ಟವು ಇನ್ನಷ್ಟು ಸುಧಾರಿಸುತ್ತದೆ.
ಈ ನಿಟ್ಟಿನಲ್ಲಿ ನಾವು ಸಾಮಾನ್ಯ ಜನರಿಗೆ ಈ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ.

ನಾನು ಬರೆದಿರುವ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತೆ ಬೇರೆ ಯಾವ ವಿಷಯದ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕು ಎಂದು ಕಾಮೆಂಟ್ಸ್ ರೂಪದಲ್ಲಿ ತಿಳಿಸಿ ಧನ್ಯವಾದಗಳು .

2 thoughts on “Ayushman Bharath and Janani Suraksha Yojana- ಆರೋಗ್ಯ ಲಾಭಗಳು”

Leave a Comment

Your email address will not be published. Required fields are marked *

Scroll to Top