ಗರ್ಭಾವಸ್ಥೆಯಲ್ಲಿ ಸ್ತ್ರೀ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

Spread the love
Pregnant women ಗರ್ಭವಾಸ್ಥೆಯಲ್ಲಿ ಸ್ತ್ರೀ ಆರೋಗ್ಯ

ಗರ್ಭಧಾರಣೆ ಎನ್ನುವುದು ಮಹಿಳೆಯ ಜೀವನದ ಅತ್ಯಂತ ವಿಶೇಷ ಅವಧಿಯಾಗಿದೆ . ಈ ಸಮಯದಲ್ಲಿ ತಾಯಿ ಆರೋಗ್ಯವಾಗಿದ್ದರೆ ಮಾತ್ರ ಮಗುವಿನ ಬೆಳವಣಿಗೆ ಸರಿಯಾಗಿ ನಡೆಯುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಸರಿಯಾದ ಆಹಾರ, ಪೋಷಕಾಂಶಗಳು, ವ್ಯಾಯಾಮ, ಮಾನಸಿಕ ಆರೋಗ್ಯ ಮತ್ತು ಕೆಲಸ-ಜೀವನ ಸಮತೋಲನ woek life Balance ಅತ್ಯಂತ ಮುಖ್ಯವಾಗುತ್ತದೆ.

Pregnant women ತಿನ್ನಲೇ ಬೇಕಾದ ಪ್ರಮುಖ ಆಹಾರಗಳು :

Healthy Foods During Pregnancy Pregnant women

ಗರ್ಭಾವಸ್ಥೆಯಲ್ಲಿ ದೇಹಕ್ಕೆ ಹೆಚ್ಚುವರಿ ಪೋಷಕಾಂಶಗಳ ಅಗತ್ಯವಿರುತ್ತದೆ. ದಿನನಿತ್ಯದ ಆಹಾರದಲ್ಲಿ ಈ ಕೆಳಗಿನ ಅಂಶಗಳನ್ನು ಸೇರಿಸಿಕೊಳ್ಳುವುದು ಉತ್ತಮ:

  1. ಪ್ರೋಟೀನ್: ಬೇಳೆ, ಕಡಲೆ ಕಾಳು , ಹಾಲು, ಮೊಟ್ಟೆ, ಪನೀರ್ ಇವು ಮಗುವಿನ ಬೆಳವಣಿಗೆಗೆ ಸಹಕಾರಿ. ಇವನ್ನು ತಮ್ಮ ದಿನನಿತ್ಯದ ಊಟದಲ್ಲಿ ತಿನ್ನಬೇಕು. 
  2. ಐರನ್ (ಲೋಹಾಂಶ): ಸೊಪ್ಪು, ಬೆಲ್ಲ, ಹುರಳಿ, ಸೇಬು ಇವು ರಕ್ತಹೀನತೆ ಕಡಿಮೆಗೆ ಸಹಾಯ ಮಾಡುತ್ತವೆ. ದೇಹಕ್ಕೆ ಒಳ್ಳೆಯ energy ಕೊಡುತ್ತವೆ.
  3. Calcium : ಹಾಲು, ಮೊಸರು, ಬಾದಾಮಿ ಇವು ಮೂಳೆಗಳ ಬಲಕ್ಕೆ ಅಗತ್ಯ.
  4. ಫೋಲಿಕ್ ಆಸಿಡ್ : ಹಸಿರು ತರಕಾರಿಗಳು ಮತ್ತು ವೈದ್ಯರ ಸಲಹೆಯ ಮೇರೆಗೆ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುವುದು ಮುಖ್ಯ. ಪಾಲಕ್ ಸೊಪ್ಪಿನಲ್ಲಿ ಒಳ್ಳೆಯ ಪೋಲಿಕ್ ಆಸಿಡ್ ಸಿಗುತ್ತದೆ. ಆದಷ್ಟೂ pregnant women ಇದನ್ನು ವಾರಕ್ಕೆ ಎರಡರಿಂದ ಮೂರು ಬಾರಿ ತಿನ್ನುವುದು ಒಳ್ಳೆಯದು. 
  5. ಜಂಕ್ ಫುಡ್(ಹೊರಗೆಡೆ ತಿಂಡಿ ) : ಮತ್ತು ಅತಿಯಾಗಿ ಎಣ್ಣೆಯ ಪದಾರ್ಥಗಳನ್ನು ತಪ್ಪಿಸಿ, ತಾಜಾ ಮತ್ತು ಸ್ವಚ್ಛ ಆಹಾರ ಸೇವಿಸುವುದು ಉತ್ತಮ.
  6.  ಪೋಷಕಾಂಶಗಳು (ಸಪ್ಲಿಮೆಂಟ್‌ಗಳು) : ವೈದ್ಯರ ಸಲಹೆಯಂತೆ ಐರನ್, ಕ್ಯಾಲ್ಸಿಯಂ ಮತ್ತು ಫೋಲಿಕ್ ಆಮ್ಲ ಮಾತ್ರೆಗಳು ತೆಗೆದುಕೊಳ್ಳುವುದು ಬಹಳ ಮುಖ್ಯ. ಸ್ವಯಂವಾಗಿ ಔಷಧಿ ಸೇವಿಸುವುದನ್ನು ತಪ್ಪಿಸಿ. ನಿಯಮಿತವಾಗಿ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳಬೇಕು. ಇದು ತಾಯಿ ಮತ್ತು ಮಗುವಿನ ಸುರಕ್ಷತೆಗೆ ಅಗತ್ಯ.
  7. ದೈಹಿಕ ವ್ಯಾಯಾಮ :

ಸಾಮಾನ್ಯವಾಗಿ ಲಘು ವ್ಯಾಯಾಮ ಗರ್ಭಿಣಿಯರಿಗೆ Pregnant Women ಗೆ ಉಪಯುಕ್ತವಾಗಿದೆ. ಆದರೆ ಯಾವುದೇ ವ್ಯಾಯಾಮ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು.

ದಿನಕ್ಕೆ 20–30 ನಿಮಿಷ ನಿಧಾನವಾದ ನಡೆಯುವುದು (Walking)

Pregnant Women ಗರ್ಭಿಣಿಯರಿಗೆ ಹೊಂದುವ ಯೋಗಾಸನಗಳು

Yoga for Pregnant women
  • ಉಸಿರಾಟ ವ್ಯಾಯಾಮಗಳು (Breathing exercises)

ಇವು ದೇಹದ ಬಲ ಹೆಚ್ಚಿಸಲು ಮತ್ತು ಹೆರಿಗೆ ಸಮಯದಲ್ಲಿ ಸಹಾಯ ಮಾಡಲು ನೆರವಾಗುತ್ತವೆ.

ಅದರಲ್ಲಿ ಮುಖ್ಯವಾಗಿ ಪ್ರಾಣಾಯಾಮ, ಸೂರ್ಯನಮಸ್ಕಾರ ,

  • ಮಾನಸಿಕ ಆರೋಗ್ಯ,

ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾವಣೆಗಳಿಂದ ಮನೋಭಾವದಲ್ಲಿ ಏರುಪೇರು ಆಗಬಹುದು. ಆದ್ದರಿಂದ:

  • ಸದಾ ಸಕಾರಾತ್ಮಕ ಚಿಂತನೆ ಇಟ್ಟುಕೊಳ್ಳಿ Positive Thinking.
  • ಮನಸ್ಸಿಗೆ ಹಿತವಾದ ಸಂಗೀತ ಕೇಳಿ.
  • ಕುಟುಂಬದವರೊಂದಿಗೆ ಸಮಯ ಕಳೆಯಿರಿ.
  • ದಿನಕ್ಕೆ 20-30 ನಿಮಿಷ ಧ್ಯಾನ ಮತ್ತು ಪ್ರಾರ್ಥನೆ ಮಾಡುವುದು ಸಹ ಉಪಯುಕ್ತ.
  • ಒತ್ತಡ ಕಡಿಮೆ ಇದ್ದರೆ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿರುತ್ತಾರೆ.
  • ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನ Work life Balance.

ಇಂದಿನ ಕಾಲದಲ್ಲಿ ಅನೇಕ ಮಹಿಳೆಯರು ಗರ್ಭಾವಸ್ಥೆಯಲ್ಲಿಯೂ ಕೆಲಸ ಮಾಡುತ್ತಾರೆ. ಆದ್ದರಿಂದ ಕೆಲಸ ಮತ್ತು ವಿಶ್ರಾಂತಿ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ.

  • ಹೆಚ್ಚು ಒತ್ತಡದ ಕೆಲಸಗಳನ್ನು ತಪ್ಪಿಸಿ.
  • ಸಮಯಕ್ಕೆ ಸರಿಯಾಗಿ ಊಟ ಮತ್ತು ವಿಶ್ರಾಂತಿ ತೆಗೆದುಕೊಳ್ಳಿ.
  • ರಾತ್ರಿ ಸಮರ್ಪಕ ನಿದ್ರೆ (7–8 ಗಂಟೆ) ಮಾಡಿ .
  • ಕೆಲಸ ಮಾಡುವ Pregnant women 7 ತಿಂಗಳು ಪೂರ್ತಿಯಾದ ನಂತರ ಅಗತ್ಯವಿದ್ದರೆ ಮ್ಯಾಟರ್ನಿಟಿ ಲೀವ್ ಉಪಯೋಗಿಸಿ.

ತಮ್ಮ ದೇಹದ ಸೂಚನೆಗಳನ್ನು ಗಮನಿಸಿ, ಅಸ್ವಸ್ಥತೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಮುಖ್ಯವಾಗಿ ತಿಳಿಯಬೇಕಿರುವುದೇನೆಂದರೆ ,

ಗರ್ಭಾವಸ್ಥೆ ಒಂದು ಪವಿತ್ರ ಮತ್ತು ಸಂತೋಷಕರ ಹಂತವಾಗಿದೆ. ಈ ಅವಧಿಯಲ್ಲಿ ತಾಯಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಪ್ರಮುಖ. ಸರಿಯಾದ ಆಹಾರ, ವೈದ್ಯರ ಸಲಹೆಯ ಸಪ್ಲಿಮೆಂಟ್‌ಗಳು, ನಿಯಮಿತ ವ್ಯಾಯಾಮ, ಮಾನಸಿಕ ಶಾಂತಿ ಮತ್ತು ಕೆಲಸ-ಜೀವನ ಸಮತೋಲನ — ಇವುಗಳ ಸಮನ್ವಯದಿಂದ ಆರೋಗ್ಯಕರ ಗರ್ಭಧಾರಣೆ ಸಾಧ್ಯ. ಆರೋಗ್ಯಕರ ತಾಯಿ ಎಂದರೆ ಆರೋಗ್ಯಕರ ಮಗು.

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಇದೆ — ಅದನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಿ.

 


ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ಸ್ ಮಾಡಿ ನಿಮಗೆ ಯಾವ ವಿಷಯದ ಬಗ್ಗೆ ಮಾಹಿತಿ ಬೇಕು ಎಂದು ತಿಳಿಸಿ ಧನ್ಯವಾದಗಳು .

2 thoughts on “ಗರ್ಭಾವಸ್ಥೆಯಲ್ಲಿ ಸ್ತ್ರೀ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?”

  1. Pingback: Major Health schemes by the Government-we must Know

  2. Pingback: Does a Lunar eclipse affect pregnant women- secret science

Leave a Comment

Your email address will not be published. Required fields are marked *

Scroll to Top