ತಲೆ ಕೂದಲು ಉದರುವಿಕೆಗೆ(Hair fall) ಕಾರಣಗಳು ಮತ್ತು ನೈಸರ್ಗಿಕ ಪರಿಹಾರಗಳು.

Spread the love

ಇತ್ತೀಚಿನ ದಿನಗಳಲ್ಲಿ ಹಲವಾರು ಜನರಲ್ಲಿ ಕೂದಲು ಉದುರುವಿಕೆ Hairfall ಸಮಸ್ಯೆ ಜಾಸ್ತಿಯಾಗುತ್ತಿದ್ದು, ಇದಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಪ್ರಮುಖ ಕಾರಣ, ನಮ್ಮ ದೇಹದಲ್ಲಿ ಕೆಲವೊಂದು ವಿಟಮಿನ್ಸ್ ಮತ್ತು ಪೋಷಕಾಂಶಗಳ ಕೊರತೆಯಿಂದಾಗಿ. ಹಾಗಾದರೆ ಯಾವ ವಿಟಮಿನ್ಸ್ ಕೊರತೆಯಿಂದ ಹೆಚ್ಚು ಕೂದಲು ಉದರುತ್ತವೆ ಅಂತ ನೋಡೋಣ ಬನ್ನಿ.

ಕೂದಲು ಉದುರುವಿಕೆ Hairfall

ಇತ್ತೀಚಿನ ದಿನಗಳಲ್ಲಿ ಕೂದಲು ಉದರುವುದು Hairfall ದೊಡ್ಡಸಮಸ್ಯೆಯಾಗಿ ಕಾಣುತ್ತಿದೆ. ಕೆಲವರಿಗೆ ತುಂಬಾ ಸಣ್ಣ ವಯಸ್ಸಿನಲ್ಲೇ ಕೂದಲು ಉದರುತ್ತದೆ. ಇನ್ನೂ ಕೆಲವರಿಗೆ 30 ವರ್ಷ ದಾಟಿದ ನಂತರ ಕೂದಲು ಉದುರಲು ಶುರು ಆಗುತ್ತವೆ. ಮದುವೆಯ ವಯಸ್ಸಿನಲ್ಲಿ ತಲೆಯಲ್ಲಿ ಕೂದಲು ಉದುರಲು ಶುರು ಆಗಿ ಬೋಳ ತಲೆ ಆದರೆ ಸಮಾಜದಲ್ಲಿ ಜನ ಏನೆಂದು ಕೊಳ್ಳುತ್ತಾರೋ ಎಂದು ಭಯ ಶುರು ಆಗುತ್ತದೆ.
ಯಾಕೆ ಈಗೆ ಕೂದಲು ಉದರುತ್ತವೆ ಎಂದು ನೋಡಿದರೆ ಅನೇಕ ಕಾರಣಗಳಿವೆ. ಅದರಲ್ಲಿ ಪ್ರಮುಖವಾದವು, ಕೆಲಸದ ಒತ್ತಡ, ಸಾಂಸಾರಿಕ ಒತ್ತಡ, ಸಾಮಾನ್ಯವಾಗಿ ಒತ್ತಡದಿಂದ ನಮ್ಮ ಕೂದಲು ಬೇಗ ಉದರುತ್ತವೆ. ಕೆಲವರಿಗೆ ಸ್ನಾನ ಮಾಡುವಾಗ ಪ್ಲೋರೈಡ್ ಬರಿತ ನೀರಿನಿಂದ ಸ್ನಾನ ಮಾಡಿದರೆ ಬೇಗ ಕೂದಲು ಉದರುತ್ತವೆ. ಇನ್ನು ಕೆಲವರಿಗೆ ಸ್ವಲ್ಪ ಕೂದಲು ಉದರಲು ಶುರು ಆದಾಗ ವೈದ್ಯರ ಸಲಹೆ ಪಡೆಯದೇ ಅಥವಾ ತಿಳಿದವರಲ್ಲಿ ಕೇಳದೆ ಕೆಲವು ಜಾಯಿರಾತುಗಳನ್ನು ನೋಡಿ ಯಾವುದೊ ಕೂದಲು ಬೆಳೆಯುವ ಔಷದಿ ಹಚ್ಚುತ್ತಾರೆ. ಅದರಿಂದ ಕೂದಲು ಬೆಳೆಯುವುದಿಲ್ಲ ಬದಲಾಗಿ ಇನ್ನೂ ಜಾಸ್ತಿ ಉದುರಲು ಶುರು ಆಗುತ್ತವೆ. ಕೆಲವರಲ್ಲಿ ಅದರಲ್ಲೂ ಮಹಿಳೆಯರಲ್ಲಿ ಕೆಲವು ಹಾರ್ಮೋನ್ಗಳ ಬದಲಾವಣೆಯಿಂದ ಕೂದಲು ಉದರುತ್ತವೆ.
ಇವೆಲ್ಲಕ್ಕೂ ಮುಖ್ಯ ಕಾರಣ ದೇಹದಲ್ಲಿ ವಿಟಮಿನ್ಸ್ ಮತ್ತು ಪೋಷಕಾಂಶಗಳ ಕೊರತೆ.

ನಮ್ಮ ದೇಶದಲ್ಲಿ ಸುಮಾರು 50% ಜನ ತಮ್ಮ 25-30 ನೇ ವಯಸ್ಸಿಗೆ ಬರುವಷ್ಟರಲ್ಲಿ ಹೆಚ್ಚು ಕಡಿಮೆ ತಮ್ಮ ಅರ್ಧ ಕೂದಲನ್ನು ಕಳೆದುಕೊಂಡಿರುತ್ತಾರೆ. ಎಂದು ಕೆಲವು ವರದಿಗಳು ಹೇಳುತ್ತವೆ.

ದೇಹದಲ್ಲಿ ಪೋಷಕಾಂಶಗಳು ಮತ್ತು ವಿಟಮಿನ್ಸ್ ಕೊರತೆ.

ಪೋಷಕಾಂಶಗಳು ಮತ್ತು ವಿಟಮಿನ್ ಗಳು ನಮ್ಮ ದೇಹವನ್ನು ಸಮತೋಲನದಲ್ಲಿಡಲು ಸಹಕರಿಸುತ್ತವೆ. ಇದು ದೇಹದ ಪ್ರತಿಯೊಂದು ಅಂಗಕ್ಕೂ ಸಮಾನ ಶಕ್ತಿ ನೀಡುತ್ತವೆ. ಇವುಗಳ ಕೊರತೆ ದೇಹದಲ್ಲಿ ಕಾಣಿಸಿಕೊಂಡಾಗ ದೇಹ ಶಕ್ತಿಗುಂದುತ್ತದೆ, ಅದರ ನೇರ ಪರಿಣಾಮ ನಮ್ಮ ತಲೆಯ ಕೂದಲಿನ ಬೇರಿನ ಮೇಲೆ ಬೀರಿ, ಕೂದಲಿನ ಬುಡ ಹಾಳಾಗಿ ಕೂದಲು ಉದುರಲು ಕಾರಣವಾಗುತ್ತವೆ Hairfall.
ಈ ಲೇಖನದಲ್ಲಿ ಯಾವೆಲ್ಲ ವಿಟಮಿನ್ಸ್ ಮತ್ತು ಪೋಷಕಾಂಶಗಳು ಕೂದಲು ಉದರುವ ಸಮಸ್ಯೆಗೆ ಕಾರಣ ತಿಳಿಯೋಣ.

ವಿಟಮಿನ್ ಡಿ ಕೊರತೆಯಿಂದ ಕೂದಲು ಉದುರುವಿಕೆ Hairfall.

ವಿಟಮಿನ್ ಡಿ ನಮ್ಮ ಕೂದಲಿನ ಬೇರಿನ ಆಳದಲ್ಲಿ ಶಕ್ತಿಯನ್ನು ತುಂಬಿ ಕೂದಲು ಬೆಳೆಯಲು ಕಾರಣವಾಗುತ್ತದೆ. ಇದು ಆಟೋ ಇಮ್ಮ್ಯೂನ್ ಗುಣ ಹೊಂದಿದ್ದು ಕೂದಲು ಬೇಗ ಉದುರದಂತೆ ತಡೆಯುತ್ತವೆ.
ನಮಗೆ ವಿಟಮಿನ್ ಡಿ ಮುಖ್ಯವಾಗಿ ಬೆಳಗಿನ ಸೂರ್ಯನಿಂದ ಸಿಗುತ್ತದೆ. ಇಲ್ಲವೇ ನಾವು ತಿನ್ನುವ ಆಹಾರದಲ್ಲಿ ಮೊಟ್ಟೆಯ ಹಳದಿ , ಟ್ಯೂನ ಮೀನು, ಹಾಲು, ಮೊಸರು, ಇವುಗಳನ್ನು ಜಾಸ್ತಿ ಬಳಸಿದರೆ ವಿಟಮಿನ್ ಡಿ ಅಂಶ ಸಿಗುತ್ತದೆ. ಇದು ನಮ್ಮ ದೇಹದಲ್ಲಿ ಕಡಿಮೆಯಾಗದಂತೆ ನೋಡಿಕೊಳ್ಳಬೇಕು.
ಇದನ್ನು ಹೊರತುಪಡಿಸಿ , ದೇಹದಲ್ಲಿ ಕಬ್ಬಿಣಂಶ , ಸತುವಿನಂಶ ಕಡಿಮೆ ಯಾದಾಗಲೂ ಸಹ ಕೂದಲು ಉದುರಲು ಕಾರಣವಾಗುತ್ತವೆ.

ಕೂದಲು ಬೆಳೆಯಲು Hairfall ವಿಟಮಿನ್ ಡಿ ಜೀವಸತ್ವ hairfall control
ಕೂದಲು ಬೆಳೆಯಲು Hair Growth ವಿಟಮಿನ್ B12 ಜೀವಸತ್ವ.

ಕೂದಲು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮತ್ತೊಂದು ವಿಟಮಿನ್ ಎಂದರೆ ಅದು ವಿಟಮಿನ್ B12. ಇದು ಕೊದಲಿನ ಬೇರುಗಳಿಗೆ ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅವಶ್ಯಕವಾಗಿದೆ. ಆದ್ದರಿಂದ ಈ ವಿಟಮಿನ್ ದೇಹದಲ್ಲಿ ಕಡಿಮೆ ಆದರೆ ಕೂದಲು ಉದುರುವಿಕೆ ಶುರು ಆಗುತ್ತದೆ.
ಟ್ಯೂನ  ಮೀನಿನಲ್ಲಿ, ಚಿಕನ್, ಲ್ಯಾಮ್ ಮಾಂಸ, ಡೈರಿ ಉತ್ಪನ್ನಗಳು, ಮೊಟ್ಟೆ, ಸೋಯಾ ಬೀಜಗಳು, ವಿಟಮಿನ್ B12 ಹೆಚ್ಚಾಗಿ ಹಣ್ಣುಗಳಲ್ಲಿ ಸಿಗುವುದಿಲ್ಲ. ಬದಲಾಗಿ ಮಾಂಸ ದಲ್ಲಿ ಹೆಚ್ಚಾಗಿ ಸಿಗುತ್ತದೆ, ಯಾರೆಲ್ಲ ಮಾಂಸ ತಿನ್ನುವುದಿಲ್ಲ ಅಂತಹವರು ಸಪ್ಪ್ಲಿಮೆಂಟ್ಸ್ ತಿನ್ನಬೇಕು. ಇದು ನಮ್ಮ ಆಹಾರದಲ್ಲಿ ಅಗತ್ಯವಾಗಿ ಇರಲೇಬೇಕು. ಆಗಂತ ನಾವು ದಿನನಿತ್ಯ ತಿನ್ನಲು ಆಗುವುದಿಲ್ಲ ಬದಲಾಗಿ ವಾರಕ್ಕೆ ಕನಿಷ್ಠ ಎರಡು ಬಾರಿ ತಿನ್ನುವುದರಿಂದ ಕೂದಲು ಉದುರುವುದು ಕಡಿಮೆಯಾಡುತ್ತದೆ.

hairfall natural home remedies
Hairfall reasons
ದೇಹದಲ್ಲಿ ಸತು ಮತ್ತು ಕಬ್ಬಿಣದ ಕೊರತೆ.

ನಮ್ಮ ದೇಹದಲ್ಲಿ ಸತು ಮತ್ತೆ ಕಬ್ಬಿಣ ಅಂಶ ಮುಖ್ಯ ಪಾತ್ರ ವಹಿಸುತ್ತವೆ.
ಕಬ್ಬಿಣದ ಕೊರತೆ ಆದರೆ ಅದನ್ನು ರಕ್ತಹೀನತೆ ಅಂತ ಕರೆಯುತ್ತೇವೆ. ಇದು ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ನೇರ ಕಾರಣ. ಕಬ್ಬಿಣ ಅಂಶವು ಕೊದಲಿನ ಬೇರುಗಳಿಗೆ ಆಮ್ಲಜನಕ, ಮತ್ತೆ ಆಹಾರವನ್ನು ಸಾಗಿಸುವ ಕೆಲಸ ಮಾಡುತ್ತದೆ, ಇದು ದೇಹದಲ್ಲಿ ಕಡಿಮೆ ಆದರೆ ಅನೇಕ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಅದರಲ್ಲಿ ಕೂದಲು ಉದುರುವುದು ಸೇರಿದೆ.
ನಾವು ತಿನ್ನುವ ಆಹಾರದಲ್ಲಿ ಬೀನ್ಸ್, ಸೊಪ್ಪುಗಳು, ಮೀನು, ಮೊಟ್ಟೆ, ಕುಂಬಳಕಾಯಿ, ಬಾದಾಮಿ, ಇವುಗಳನ್ನೆಲ್ಲಾ ತಿನ್ನುವುದರಿಂದ ಕಬ್ಬಿಣದ ಕೊರತೆ ಕಡಿಮೆ ಆಗುತ್ತದೆ. ಡಾರ್ಕ್ ಚಾಕೊಲೇಟ್ ತಿನ್ನುವುದರಿಂದಲೂ ಕಬ್ಬಿಣ ಅಂಶ ಜಾಸ್ತಿ ಸಿಗುತ್ತದೆ. ನಾವು ಶಾಲೆಯಲ್ಲಿ ಓದುವಾಗ ಕಬಿಣಅಂಶ ಇರುವ ಮಾತ್ರೆಯನ್ನು ಕೊಡುತ್ತಿದ್ದರು. ಅದು ನೇರವಾಗಿ ನಮ್ಮ ಕೂದಲಿನ ಸಮಸ್ಯೆಯನ್ನ ಕಡಿಮೆ ಮಾಡುವುದಲ್ಲದೆ, ನಮ್ಮ ದೇಹದ ಸಮತೋಲನವನ್ನಕಾಪಾಡುತ್ತದೆ.

ವಿಟಮಿನ್ ಸಿ ಕೊರತೆಯಿಂದ ಕೂದಲು ಉದರುವಿಕೆ.

ವಿಟಮಿನ್ ಸಿ ಕೊರತೆಯಿಂದ ಕೂದಲು ಉದರುವಿಕೆ Hairfall.

ವಿಟಮಿನ್ ಸಿ ದೇಹದ ಅನೇಕ ಬಾಗಗಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.
ಅದರಲ್ಲೂ ಕೂದಲಿನ ಬೆಳವಣಿಗೆಗೆ ಪ್ರಮುಖ ಪಾತ್ರವಹಿಸುತ್ತದೆ. ಇದು ಕೊದಲಿನಲ್ಲಿ ಕೊಲಿಜನ್ ಅಂಶವನ್ನ ಉತ್ಪಾದಿಸಿ ಕೂದಲು ಗಟ್ಟಿಯಾಗಿ ಬೆಳೆಯಲು ಸಹಕರಿಸುತ್ತದೆ. ಮತ್ತು ಕೂದಲಿನಲ್ಲಿ ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ನಿರ್ವಹಿಸಿ ಕೂದಲು ಉದುರದಂತೆ ಮತ್ತೆ ಕೂದಲು ಒಡೆಯದಂತೆ ತಡೆಯುತ್ತದೆ.
ವಿಟಮಿನ್ ಸಿ ಇರುವ ಆಹಾರ ಪದಾರ್ಥಗಳೆಂದರೆ ; ದ್ರಾಕ್ಷಿ, ಅರೇಂಜ್, ನಿಂಬೆ ಹಣ್ಣು, ಮೋಸಂಬಿ, ಸೀಬೆ, ಸ್ಟ್ರಾಬೆರಿ, ಬ್ರಾಕೋಲಿ, ಈ ಎಲ್ಲಾ ಪದಾರ್ತಗಳನ್ನು ದಿನಕ್ಕೆ ಒಂದರಂತೆ ಪ್ರತಿದಿನ ತಿನ್ನುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಮತ್ತೆ ಕೂದಲಿನ ಸಮಸ್ಯೆ ದೂರವಾಗುತ್ತದೆ.

ವಿಟಮಿನ್ B ಮತ್ತು ವಿಟಮಿನ್ E ಕೂದಲು ಬೆಳವಣಿಗೆಗೆ ಸಹಕಾರಿ.

ವಿಟಮಿನ್ ಬಿ ಆಗಿರುವ ಬಯೋಟಿನ್ ಕೊದಲಿನ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುವ ಕೆರಾಟಿನ್ ಎಂಬ ಪ್ರೊಟೀನ್ ಉತ್ಪಾದನೆಗೆ ಕಾರಣವಾಗುತ್ತದೆ.
ಇದು ಕೂದಲು ಕಪ್ಪಗಿರುವುದಕ್ಕೆ ಮತ್ತೆ ಗಟ್ಟಿಯಾಗಿರುವುದಕ್ಕೆ ಸಹಕಾರಿಯಾಗುತ್ತದೆ. ಇನ್ನು ವಿಟಮಿನ್ ಇ ಇದು ತಲೆಯಲ್ಲಿ ಉತ್ತಮ ರಕ್ತ ಸಂಚಲನಕ್ಕೆ ದಾರಿ ಮಾಡಿ ಕೊಡುತ್ತದೆ. ಜೊತೆಗೆ, ಕೂದಲಿನ ತ್ವಚೆ ಸುಂದರವಾಗಿರಲು ಪ್ರಮುಖ ಪಾತ್ರ ವಹಿಸುತ್ತದೆ.
ನಮ್ಮ ಆಹಾರದಲ್ಲಿ ವಿಟಮಿನ್ ಬಿ ಮತ್ತೆ ವಿಟಮಿನ್ ಇ ಅಂಶ ಮುಖ್ಯವಾಗಿ, ಬಾದಾಮಿ, ಗೋಡಂಬಿ, ವಾಲ್ನಟ್, ಖರ್ಜೂರ, ಸೂರ್ಯಕಾಂತಿ ಬೀಜ, ಅವಕಾಡೊ, ಮೊಟ್ಟೆ, ಆಲೀವ್ ಎಣ್ಣೆ, ಡೈರಿ ಉತ್ಪನ್ನಗಳು, ಈ ಎಲ್ಲ ಅಂಶಗಳು ನಮ್ಮ ಆಹಾರದಲ್ಲಿ ಇದ್ದರೆ ನಮ್ಮ ಕೂದಲಿನ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.

ಈ ಮೇಲೆ ಎಲಿರುವ ಎಲ್ಲ ವಿಟಮಿನ್ ಗಳು ನಿಮ್ಮ ಕೊದಲಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಕೊನೆಯದಾಗಿ, ಕೂದಲು ಉದರುವ ಸಮಸ್ಯೆ ತಾತ್ಕಾಲಿಕವಾಗಿ ತಡೆಯಿಡಿದರಸ್ಟೇ ಸಾಕಾಗುವುದಿಲ್ಲ. ಬದಲಾಗಿ, ಅದರ ಮೂಲ ಕಾರಣಗಳನ್ನ ತಿಳಿದು ಅದನ್ನ ಸರಿಪಡಿಸಬೇಕು ಅದಕ್ಕೆ, ನಮ್ಮ ಆಹಾರದಲ್ಲಿ ಸರಿಯಾದ ವಿಟಮಿನ್ಸ್ ಗಳು, ಪೋಷಕಾಂಶಯುಕ್ತ ಆಹಾರ ಮತ್ತೆ ಆರೋಗ್ಯಕರ ಜೀವನಶೈಲಿ, ಕೂದಲಿನ ಬೆಳವಣಿಗೆಗೆ ಉತ್ತಮ ಬೆಂಬಲ ಕೊಡುತ್ತದೆ.
ನಮ್ಮ ದಿನನಿತ್ಯದ ಆಹಾರದಲ್ಲಿ ಸೊಪ್ಪುಗಳು, ಹಣ್ಣು, ತರಕಾರಿಗಳು, ಕೆಲವೊಂದು ಬೀಜಗಳು ಮತ್ತು ಸರಿಯಾದ ಪ್ರೂಟೀನ್ ತಿನ್ನುವುದರಿಂದ ಕೂದಲು ಬಲವಾಗುತ್ತವೆ ಮತ್ತು ಉದುರುವುದು ಕಡಿಮೆಯಾಗುತ್ತವೆ.

What are the Main Causes For Hairfall?

Genrally it can be the result of many Factors. Like heridity, Using chimically non recomended Shampoos, Harmonal imbalance, some intaking Medications, Aging also one of the main factor. 

Hair growth is mainly come from the protein called Keratin. which is directly come from the vitamin Biotin (vitamin B7). Biotin Deficiency lead to Hair thinning, and hairfall.

  1. To maintaing well balanced Diet. Proteins and nutritions plays a major role in it.
  2. Reduce stress from our life which is main factor for Hairfall.
  3. Use naturally home made oil (Sesame, mustard) for hairgrowth.

1 thought on “ತಲೆ ಕೂದಲು ಉದರುವಿಕೆಗೆ(Hair fall) ಕಾರಣಗಳು ಮತ್ತು ನೈಸರ್ಗಿಕ ಪರಿಹಾರಗಳು.”

  1. Pingback: Hair Cutting Hair Style: 10 Simple Tricks for Natural Growth

Leave a Comment

Your email address will not be published. Required fields are marked *

Scroll to Top