How To Control Stress In 10 Simple Steps

Spread the love

ಇಂದಿನ ವೇಗದ ಜೀವನದಲ್ಲಿ Stress (ಒತ್ತಡ) ಎಂಬುದು almost ಪ್ರತಿಯೊಬ್ಬರ ಜೀವನದಲ್ಲಿ ಒಂದು ಭಾಗವಾಗಿಬಿಟ್ಟಿದೆ. ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಿಗಳವರೆಗೆ, ಮನೆಯ ಮಹಿಳೆಯರಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ಒಂದಲ್ಲೊಂದು ರೀತಿಯ ಒತ್ತಡವನ್ನು ಅನುಭವಿಸುತ್ತಾರೆ. ಕೆಲವೊಮ್ಮೆ ಈ ಒತ್ತಡ ನಮ್ಮನ್ನು ಹೆಚ್ಚು ಜವಾಬ್ದಾರಿಯುತವಾಗಿಸುತ್ತದೆ. ಆದರೆ ಅದು ಮಿತಿಮೀರಿದರೆ, ನಮ್ಮ ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ ಮತ್ತು ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ನನ್ನ ಜೀವನದಲ್ಲೂ ಮುಂಚೆ Stress ತುಂಬಾ ಹೆಚ್ಚಾಗಿತ್ತು. ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿಗಳು ಮತ್ತು ಭವಿಷ್ಯದ ಬಗ್ಗೆ ಚಿಂತೆ ನನ್ನನ್ನು ಸಾಕಷ್ಟು ಕಂಗೆಡಿಸಿದ್ದವು. ಆದರೆ ಕೆಲವು ಸರಳ ಅಭ್ಯಾಸಗಳನ್ನು ಅಳವಡಿಸಿಕೊಂಡ ನಂತರ, Stress ಅನ್ನು ನಿಯಂತ್ರಿಸುವುದು ಅಸಾಧ್ಯವಲ್ಲ ಎಂಬುದು ನನಗೆ ಅರಿವಾಯಿತು. ಇದೇ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಈ Blog ಬರೆಯುತ್ತಿದ್ದೇನೆ.

Stress

Stress ಎಂದರೆ ನಮ್ಮ ದೇಹ ಮತ್ತೆ ಮನಸ್ಸು ನಾವು ಒತ್ತಡದ ಪರಿಸ್ಥಿತಿಯಲ್ಲಿ ಇರುವಾಗ ಯಾವ ರೀತಿ ರಿಯಾಕ್ಟ್ ಮಾಡುತ್ತೆ ಅನ್ನೋದು. ಅಂದರೆ ಇದು ಯಾವುದೇ ವಿಚಾರದಲ್ಲಿ ಆಗಿರಬಹುದು. ಉದಾ : ಮಕ್ಕಳಿಗೆ ಪರೀಕ್ಷೆ, ಯುವಕರಿಗೆ ಉದ್ಯೋಗ, ಆಫೀಸ್ ಅಲ್ಲಿ ಮ್ಯಾನೇಜರ್ ಟಾರ್ಚರ್ , ಹಣಕಾಸಿನ ಸಮಸ್ಯೆ, ಕುಟುಂಬದ ಜವಾಬ್ದಾರಿ, ವಯಸ್ಸಾದವರಿಗೆ ಆರೋಗ್ಯ ಸಮಸ್ಯೆ ಇದೆಲ್ಲಾ Stress ಗೆ ಮುಖ್ಯ ಕಾರಣವಾಗುತ್ತೆ.

Stress ಸ್ವಲ್ಪ ಇದ್ರೆ ಅದು ನಮ್ಮನ್ನ ಸ್ವಲ್ಪ ಎಚ್ಚರವಾಗಿ ಕೆಲಸ ಮಾಡೊತರ ಮಾಡುತ್ತೆ. ಆದರೆ ಅದು ಯಾವಾಗ ಜಾಸ್ತಿ ಆಗತ್ತೋ, ಅವಾಗ ನಮ್ಮ ಮನಸ್ಸಿನ ನೆಮ್ಮದಿ ಆಳಾಗತ್ತೆ.

Stress ನ ಕೆಲವೊಂದು ಲಕ್ಷಣಗಳು

  • ಅತಿಯಾದ ಕೋಪ, ಮೂಗಿನ ಮೇಲೆ ಕೋಪ ಇರುವುದು.
  • ಸರಿಯಾಗಿ ನಿದ್ದೆ ಮಾಡೋಕೆ ಆಗದಿರುವುದು.
  • ಆವಾಗಾವಾಗ ತಲೆನೋವು ಬರುವುದು.
  • ಸಣ್ಣ ಸಣ್ಣ ವಿಷಯಕ್ಕೂ ಬೇಜಾರಾಗುವುದು.
  • ಕೆಲಸದ ಬಗ್ಗೆ ಸರಿಯಾಗಿ ಗಮನ ಕೊಡೋಕೆ ಆಗದೇ ಇರುವುದು.
  • ಊಟದ ಬಗ್ಗೆ ಬೇಸರ ಬರುವುದು.
  • ಒಂಟಿಯಾಗಿರಬೇಕು ಅನಿಸುವುದು.

ಇವೆಲ್ಲಾ Stress ನಿಂದ ಬರುವ ಮುಖ್ಯ ಲಕ್ಷಣಗಳಾಗಿವೆ. ಇವನ್ನ ಜಾಸ್ತಿ ನಿರ್ಲಕ್ಷ್ಯ ಮಾಡಬಾರದು, ಬೇಗ ಇದಕ್ಕೆ ಪರಿಹಾರ ಕಂಡುಕೊಂಡು ಇದರಿಂದ ಆಚೆ ಬರಬೇಕು.

Stress ಕಡಿಮೆ ಆಗಲು10 ಮುಖ್ಯ ಪರಿಹಾರಗಳು

ಈ ಪರಿಹಾರಗಳನ್ನು ಖಂಡಿತ ಪ್ರಯೋಗ ಮಾಡಿ ನೋಡಿ

1. ಬೆಳಿಗ್ಗೆ ಎದ್ದಮೇಲೆ ನಿಮ್ಮ ದಿನವನ್ನ ಪಾಸಿಟಿವ್ ಯೋಚನೆಯಿಂದ ಶುರು ಮಾಡಬೇಕು :
ಯಾವತರ ಅಂದರೆ ಮೊದಲು ಒಂದು ಗ್ಲಾಸ್ ನೀರು ಕುಡಿದು 10 ನಿಮಿಷ ಧ್ಯಾನ ಮಾಡಬೇಕು. ಮತ್ತೆ ಮೊಬೈಲ್ ನೋಡಬಾರದು ಮೊಬೈಲ್ ನೋಡಿದರೆ ಅದರಲ್ಲಿ ಬೇಡವಾದ ವಿಷಯಗಳಿಂದ ಮನಸ್ಸು ಚಂಚಲವಾಗುತ್ತೆ. ಅದರ ಬದಲು ನೀವು ಆವತ್ತಿನ ದಿನ ಏನು ಮಾಡಬೇಕು ಅಂದುಕೊಂಡಿರುತ್ತೀರಿ ಅದನ್ನ ಮನಸ್ಸಿನಲ್ಲಿ 10 ನಿಮಿಷ ನೆಂಸ್ಕೊಂಡು ದಿನ ಶುರು ಮಾಡಿ.

ನಾನು ಈ ಅಭ್ಯಾಸವನ್ನು ಪ್ರತೀ ದಿನ ಮಾಡುತ್ತಾ ಇರುವುದರಿಂದ ನನ್ನ ದಿನ ನೆಮ್ಮದಿಯಿಂದ ಇರುವುದು ನನಗೆ ಗೊತ್ತಾಗುತ್ತಿದೆ.

2. ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಬೇಕು :

ಸ್ಟ್ರೆಸ್ ಕಡಿಮೆ ಮಾಡುವ ಉತ್ತಮ ಔಷಧಿಗಳಲ್ಲಿ ವ್ಯಾಯಾಮವೂ ಒಂದು.

ವ್ಯಾಯಾಮ ಮಾಡಿದಾಗ ದೇಹದಲ್ಲಿ ಸಂತೋಷವನ್ನು ಹೆಚ್ಚಿಸುವ dopamine, serotonin, and oxytocin ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. ಇದರಿಂದ ಮನಸ್ಸು ಹಗುರವಾಗುತ್ತದೆ Stress ಕಡಿಮೆ ಆಗುತ್ತೆ .

ನೀವು ಮಾಡಬಹುದಾದ ವ್ಯಾಯಾಮಗಳು:

  • ವೇಗವಾಗಿ ನಡೆಯುವುದು
  • ಸೈಕಲ್ ಓಡಿಸುವುದು
  • ಜಾಗಿಂಗ್
  • ರನ್ನಿಂಗ್

ಜಿಮ್‌ಗೆ ಹೋಗಲೇಬೇಕು ಅಂತೇನಿಲ್ಲ. ಮನೆಯ ಅಕ್ಕ ಪಕ್ಕ 30 ನಿಮಿಷ ವ್ಯಾಯಾಮ ಮಾಡಿದರೆ ಸಾಕು. ಇದರಂದ ನಿಮ್ಮ ಮನಸ್ಸು ಹಗುರವಾಗಿ ಯಾವುದೇ ಸ್ಟ್ರೆಸ್ ಬರೋದಿಲ್ಲ.

3. ಒಳ್ಳೆಯ ನಿದ್ದೆ ಮಾಡುವುದು :

ನಿದ್ರೆ ಕಡಿಮೆಯಾದರೆ Stress ಹೆಚ್ಚಾಗುತ್ತದೆ. ಸ್ಟ್ರೆಸ್ ಹೆಚ್ಚಾದರೆ ನಿದ್ರೆ ಕಡಿಮೆಯಾಗುತ್ತದೆ. ಇದು ಒಂದು ಮ್ಯಾಜಿಕ್ ರೀತಿ.

ಆದ್ದರಿಂದ:

  • ಪ್ರತಿದಿನ ಒಂದೇ ಸಮಯಕ್ಕೆ ಮಲಗೋಕೆ ಪ್ರಯತ್ನ ಮಾಡಬೇಕು.
  • ಮಲಗುವ ಒಂದು ಗಂಟೆ ಮೊದಲು ಮೊಬೈಲ್ ಬಳಸಬಾರದು.
  • ರಾತ್ರಿ ಯಾವುದೇ ಕಾರಣಕ್ಕೂ ಕಾಫಿ ಅಥವಾ ಟೀ ಸೇವಿಸಬೇಡಿ.
  • ಶಾಂತ ವಾತಾವರಣದಲ್ಲಿ ನಿದ್ರೆ ಮಾಡಿ.

ಒಳ್ಳೆಯ ನಿದ್ರೆ ನಿಮ್ಮ ಮೆದುಳನ್ನು ಹೊಸದಾಗಿ ಚೈತನ್ಯಗೊಳಿಸುತ್ತದೆ.

4. ಆರೋಗ್ಯಕರ ಆಹಾರ healthy food ಸೇವಿಸಿ :

ನಮ್ಮ ಆಹಾರವೂ ನಮ್ಮ ಮನಸ್ಥಿತಿಯನ್ನು ಪ್ರಭಾವಿಸುತ್ತದೆ.

Stress ಹೆಚ್ಚಿರುವಾಗ ತುಂಬಾ ಜನ ಜಂಕ್ ಫುಡ್ ಅಥವಾ ಸಿಹಿ ಪದಾರ್ಥಗಳನ್ನು ಹೆಚ್ಚು ತಿನ್ನುತ್ತಾರೆ. ಆದರೆ ಇದರಿಂದ ಸಮಸ್ಯೆ ಇನ್ನಷ್ಟು ಜಾಸ್ತಿಯಾಗುತ್ತೆ.

ಇದರ ಬದಲಿಗೆ:

ಹಣ್ಣುಗಳು, ಸೊಪ್ಪುಗಳು
ಹಸಿರು ತರಕಾರಿಗಳು
ಬೇಳೆ ಕಾಳುಗಳು
ಒಣಹಣ್ಣುಗಳು
ಸಾಕಷ್ಟು ನೀರು

ಇವುಗಳನ್ನು ತಿನ್ನುವುದು ಬಹಳ ಉತ್ತಮ.

ನೀವು ಏನು ತಿನ್ನುತ್ತೀರೋ ಅದು ನಿಮ್ಮ ದೇಹದ ಜೊತೆಗೆ ನಿಮ್ಮ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಅನ್ನೋದನ್ನ ಮರೀಬಾರದು.

5. ನಿಮಗೆ ಈ ರೀತಿ ಸಮಸ್ಯೆ ಇದೆ ಅಂತ ಒಬ್ಬರೊಂದಿಗೆ ಹಂಚಿಕೊಳ್ಳಿ :

Stress ಅನ್ನು ಮನಸ್ಸಿನೊಳಗೆ ಇಟ್ಟುಕೊಳ್ಳುವುದು ಸಮಸ್ಯೆಯನ್ನು ಇನ್ನಷ್ಟು ದೊಡ್ಡದಾಗಿಸುತ್ತದೆ.

ನಿಮ್ಮ ಒಳ್ಳೆಯ ಸ್ನೇಹಿತರೊಂದಿಗೆ ಇದರ ಬಗ್ಗೆ ಮಾತನಾಡಿ.
ಆಗ ಅವರು ನಿಮಗೆ ಒಳ್ಳೆಯ ಮಾತುಗಳನ್ನಏಳೋ ಮೂಲಕ ಧೈರ್ಯ ಕೊಡುತ್ತಾರೆ, ಮತ್ತೆ ಯಾವುದಕ್ಕೆ ಆಗಲಿ ನಾವಿರುತ್ತೇವೆ ಅಂತ ಹೇಳುತ್ತಾರೆ. ಅವಾಗ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುವ ಅನುಭವ ಆಗುತ್ತೆ.

ಕೆಲವೊಮ್ಮೆ ಅವರು ಪರಿಹಾರ ನೀಡದೇ ಇರಬಹುದು. ಆದರೆ ನಿಮ್ಮ ಮಾತನ್ನು ಕೇಳುವುದೇ ನಿಮ್ಮ ಮನಸ್ಸಿನ ಭಾರವನ್ನು ಕಡಿಮೆ ಮಾಡುತ್ತದೆ.

ನನ್ನ ಜೀವನದಲ್ಲಿಯೂ ಒಂದು ಸಮಯದಲ್ಲಿ ಎಲ್ಲವನ್ನೂ ಒಬ್ಬನೇ ಎದುರಿಸಲು ಪ್ರಯತ್ನಿಸುತ್ತಿದ್ದೆ. ಆದರೆ ನನ್ನ ಆಪ್ತ ಸ್ನೇಹಿತನೊಂದಿಗೆ ನನ್ನ ಸಮಸ್ಯೆಗಳನ್ನು ಹಂಚಿಕೊಂಡ ನಂತರ ಮನಸ್ಸು ತುಂಬಾ ಹಗುರವಾಯಿತು. ಆಗ ನನಗೆ ತಿಳಿಯಿತು – ಸಮಸ್ಯೆಗಿಂತ ಅದನ್ನು ಒಬ್ಬರೇ ಹೊರುವ ಪ್ರಯತ್ನವೇ ಹೆಚ್ಚು ಕಷ್ಟಕರ.

6. ಸಮಯ ನಿರ್ವಹಣೆ (Time Management) :
ಯಾವುದೇ ವಿಷಯದಲ್ಲಿ ಮೊದಲು ಟೈಮ್ ಮ್ಯಾನೇಜ್ಮೆಂಟ್ ಮಾಡೋದನ್ನ ಕಲೀಬೇಕು ಆಗ ನಮಗೆ ಸ್ಟ್ರೆಸ್ ಆಗೋದಿಲ್ಲ. ಯಾವಾಗ ಮಾಡೋ ಕೆಲಸ ಸರಿಯಾದ ಸಮಯಕ್ಕೆ ಮಾಡೋದಿಲ್ಲಾ ಅವಾಗ ಸ್ಟ್ರೆಸ್ ಜಾಸ್ತಿ ಆಗತ್ತೆ.

7. ಧ್ಯಾನ ಮತ್ತು ಉಸಿರಾಟದ ಅಭ್ಯಾಸ :
ನಾನು ಮೊದಲೇ ಏಳಿದಂತೆ ಬೆಳಿಗ್ಗೆ ಎದ್ದ ನಂತರ ಧ್ಯಾನ ಮಾಡೋದನ್ನ ಅಭ್ಯಾಸ ಮಾಡಿಕೊಳ್ಳಿ ನಂತರ ಕೆಲಸದ ಮಧ್ಯ ಮಧ್ಯ 5 ನಿಮಿಷ ಡೀಪ್ ಬ್ರೆಥ್ ಅಂದರೆ ದೀರ್ಘ ಉಸಿರಾಟ ಮಾಡಿ ಇದರಿಂದ ಆತಂಕ ಸ್ಟ್ರೆಸ್ ಕಡಿಮೆ ಆಗುತ್ತೆ.

8. ಡಿಜಿಟಲ್ ಡಿಟಾಕ್ಸ್‌ನ ಮಹತ್ವ :
ಅಂದರೆ ಸಾಮಾಜಿಕ ಜಾಲತಾಣ ಇತ್ತೀಚಿಗೆ ತುಂಬಾ ಕೆಡುತ್ತಿದೆ, ನೀವು ಯಾವುದೇ ಅಪ್ ಓಪನ್ ಮಾಡಿದರು ನೆಗಿಟಿವ್ ಕಂಟೆಂಟ್ ಜಾಸ್ತಿ ಇರುತ್ತೆ. ಇದರಿಂದ ನಿಮ್ಮ ಮನಸ್ಸು ಬೇಗ ಚಂಚಲ ಆಗಿ ಆಳಾಗುತ್ತದೆ. ಆದ್ದರಿಂದ ಮೊಬೈಲ್ ಯಾವುದಕ್ಕೆ ಬೇಕು ಅದಕ್ಕೆ ಮಾತ್ರ ಬಳಸಿ.

9. ನಿಮಗೆ ಇಷ್ಟವಾದ ಹವ್ಯಾಸ ಬೆಳೆಸಿಕೊಳ್ಳಿ :
ಪ್ರತಿಯೊಬ್ಬ ಮನುಷ್ಯನಿಗೂ ಒಂದೊಂದು ಒಳ್ಳೆಯ ಅವ್ಯಾಸ ಇರಬೇಕು ಅದು ಯಾವುದೇ ಇರಲಿ ಉದಾ: ಸಂಗೀತ ಕೇಳುವುದು, ಡ್ಯಾನ್ಸ್ ಮಾಡುವುದು, ಕ್ರಿಕೇಟ್, ಸ್ಪೋರ್ಟ್ಸ್, ಇತ್ಯಾದಿ. ಈ ರೀತಿ ಅಳವಡಿಸಿಕೊಳ್ಳುವುದರಿಂದ ನಿಮ್ಮ ಕೆಲಸದ ಒತ್ತಡ ಕಡಿಮೆಯಾಗುತ್ತೆ.

10. ಅಗತ್ಯವಿದ್ದರೆ ತಜ್ಞರ ಸಹಾಯ ಪಡೆಯಿರಿ :
ನಾನು ಮೇಲೆ ತಿಳಿಸಿರುವ ಪ್ರತಿಯೊಂದು ಅಂಶವನ್ನು ಪಾಲಿಸಿದರೆ ನಿಮಗೆ ಯಾವುದೇ stress ಇರುವುದಿಲ್ಲ. ಆದರೆ ಇದನ್ನೂ ಮೀರಿ ನಿಮ್ಮ ಮನಸ್ಸು ಚಂಚಲವಾಗಿದ್ದರೆ ಒಂದು ಸಾರಿ ಮಾನಸಿಕ ವೈದ್ಯರನ್ನ ಸಂಪರ್ಕಿಸಿ ತೂರಿಸಿಕೊಳ್ಳಿ.

ಯಾವೆಲ್ಲ ಬುಕ್ಸ್ ಓದುವುದರಿಂದ ನಮ್ಮ Stress ಕಡಿಮೆಯಾಗುತ್ತೆ?

ಕೆಲವರಿಗೆ ಬುಕ್ಸ್ ಓದುವುದು ಅಂದ್ರೆ ಕಷ್ಟ. ಆದರೆ ಕೆಲವರಿಗೆ ಇಷ್ಟ ಯಾರಿಗೆಲ್ಲ ಇಷ್ಟ ಆಗುತ್ತೆ ಅಂತವರಿಗೆ ನಾನು ಓದಿರುವಂತ ಕೆಲವೊಂದು ಬುಕ್ಸ್ ಏಳುತ್ತೇನೆ. ಇದರಿಂದ ನಿಮ್ಮ ಸ್ಟ್ರೆಸ್ ನಿಧಾನವಾಗಿ ಕಡಿಮೆಯಾಗುತ್ತೆ.
1. ಡಿ.ವಿ. ಗುಂಡಪ್ಪನವರು ಬರೆದಿರುವ ಮಂಕುತಿಮ್ಮನ ಕಗ್ಗ:
ಈ ಬುಕ್ ಒಂತರ ನಮ್ಮ ಕನ್ನಡದ ಭಗವದ್ಗೀತೆ ಅಂತ ಏಳಬಹುದು ನಿಮ್ಮ ಮನಸಿನ ಆತಂಕ, ಸ್ಟ್ರೆಸ್, ದುಗುಡ, ಕೋಪ, ಎಲ್ಲಾ ಅಂಶಗಳನ್ನ ಕಡಿಮೆ ಮಾಡೋ ಶಕ್ತಿ ಈ ಕಗ್ಗ ಪುಸ್ತಕಕ್ಕೆ ಇದೆ.
ನಿಮಗೆ ಯಾವ ಟೈಮಲ್ಲಿ ಫ್ರೀ ಇರತ್ತೋ ಆ ಟೈಮಲ್ಲಿ ಜಸ್ಟ್ 5-10 ನಿಮಿಷ ಓದಿ ಸಾಕು.ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮ ಮೈಂಡ್ ಶಾಂತವಾಗುತ್ತೆ.

2. ಬದುಕಲು ಕಲಿಯಿರಿ : ಇದನ್ನ ಬರೆದಿರುವುದು ಸ್ವಾಮೀ ಜಗದಾತ್ಮಾನಂದ. ಈ ಪುಸ್ತಕ ಓದೋದ್ರಿಂದ ನಿಮಗೆ ಬದುಕಿನಲ್ಲಿ ಬರುವ ಚಾಲೆಂಜಸ್ ಅನ್ನ ಯಾವ ರೀತಿ ಧೈರ್ಯದಿಂದ ಫೇಸ್ ಮಾಡ್ಬೇಕು ಮತ್ತೆ ನಮ್ಮ ಬದುಕನ್ನ ಸುಂದರವಾಗಿ ಯಾವ ರೀತಿ ಕಟ್ಟಿಕೊಬೇಕು ಅಂತ ತಿಳಿಯುತ್ತೆ.

3. ಓ ಮನಸೇ ತುಸು ನಿಧಾನಿಸು : ಇದನ್ನು ಬರೆದಿರುವುದು ಡಾ।। ವಿರೂಪಾಕ್ಷ ದೇವರಮನೆ. ಇವರೊಬ್ಬ ಸೈಕಿಯಾಟ್ರಿಸ್ಟ್ ಆಗಿರುವುದರಿಂದ ಸುಮಾರು ಜನ ಇವಾಗಿನ ಬ್ಯುಸಿ ಲೈಫ್ಸ್ಟೈಲ್ ಸಮಾಜದಲ್ಲಿ ಯಾವ ರೀತಿ ಸ್ಟ್ರೆಸ್ ಅಲ್ಲಿ ಇದಾರೆ ಅಂತ ಅರ್ಥ ಮಾಡಿಕೊಂಡು ತುಂಬಾ ಸುಂದರವಾಗಿ ಬರೆದಿದ್ದಾರೆ, ನೀವು ಖಂಡಿತ ಓದಬೇಕು.

ಈ ಬುಕ್ಸ್ ತಗೊಂಡು ನಿಮಗೆ ಯಾವಾಗ ಫ್ರೀ ಇರತ್ತೋ ಅವಾಗ ಓದಿ ನಾವು ಬುಕ್ಸ್ ಓದೋದ್ರಿಂದ ನಮಗೆ ಗೊತ್ತಿಲ್ಲದೇ ನಮ್ಮ ಮನಸ್ಸು ಶಾಂತವಾಗುತ್ತೆ, ಮತ್ತೆ ನಮ್ಮ ಜನರಲ್ಲಿ ಓದುವ ಸಂಸ್ಕೃತಿ ಬೆಳೆಯುತ್ತದೆ.

Leave a Comment

Your email address will not be published. Required fields are marked *

Scroll to Top