How to Reduce Stress and Anxeity in 10 natural ways ಒತ್ತಡ ಮತ್ತು ಆತಂಕ ವನ್ನು ನೈಸರ್ಗಿಕವಾಗಿ ಕಡಿಮೆ ಮಾಡುವ 10 ವಿಧಾನಗಳು.

Spread the love
how to reduce Stress and Anxeity

ನಾವು ಪ್ರತೀದಿನ ಒಂದಲ್ಲ ಒಂದು ಕಾರಣಕ್ಕೆ ಒತ್ತಡ ಹಾಗೂ ಆತಂಕಕೆ ಗುರಿಯಾಗುತ್ತಿರುತ್ತೇವೆ. ಇಂದಿನ ವೇಗದ ಜೀವನಶೈಲಿಯಲ್ಲಿ ಒತ್ತಡ ಮತ್ತು ಆತಂಕ Stress and anxeity ನಮ್ಮ ಜೀವನದ ಒಂದು ಭಾಗವಾಗಿಬಿಟ್ಟಿವೆ.

ಯಾವ ರೀತಿಯಲ್ಲಿ ಈ ಒತ್ತಡ ಮತ್ತು ಆತಂಕ ಉಂಟಾಗುತ್ತದೆ.

ಕೆಲಸದಿಂದ ಆಗುವ ಒತ್ತಡ, ನಮ್ಮ ಕುಟುಂಬದ ಜವಾಬ್ದಾರಿಗಳಿಂದ ಬರುವ ಒತ್ತಡ, ಹಣಕಾಸಿನ ಸಮಸ್ಯೆಗಳಿಂದ ಬರುವ ಒತ್ತಡ, ಭವಿಷ್ಯದಲ್ಲಿ ಏನಾಗುವುದೋ ಎನ್ನುವ ಅನುಮಾನದಿಂದ ಬರುವ ಆತಂಕ, ಮತ್ತೆ ನಮ್ಮ ಜೀವನದಲ್ಲಿ ಅಕಸ್ಮಾತಾಗಿ ಎದುರಾಗುವ ಕೆಲವು ಘಟನೆಗಳಿಂದ ಉಂಟಾಗುವ ಒತ್ತಡ ಇವೆಲ್ಲವೂ ನಮ್ಮ ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತವೆ.

ಇವೆಲ್ಲವುಗಳ ಪರಿಣಾಮದಿಂದ ಹಲವರಲ್ಲಿ ನಿದ್ರಾಹೀನತೆ, ದೈಹಿಕವಾಗಿ ಸುಸ್ತು, ಆಯಾಸ, ತಲೆನೋವು, ಮನಸ್ಸಿಗೆ ಅಶಾಂತಿ,ನೆಮ್ಮದಿ ಇಲ್ಲದಿರುವುದು, ಇವೆಲ್ಲವೂ ಬರುತ್ತವೆ.

ತುಂಬಾ ಜನ ಈ ಒತ್ತಡ ಮತ್ತು ಆತಂಕ ಎಂದರೆ ಅದು ಕೇವಲ ನಮ್ಮ ಮನಸ್ಸಿನ ಮೇಲೆ ಮಾತ್ರ ಪರಿಣಾಮಬೀರುತ್ತೆ ಅಂದುಕೊಂಡಿದ್ದಾರೆ. ಆದರೆ ಅದು ತಪ್ಪು, ಇದು ನಮ್ಮ ದೇಹದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತೆ. ಯಾವ ರೀತಿ ಹೇಳಬೇಕೆಂದರೆ, ಒತ್ತಡ ಜಾಸ್ತಿ ಆದರೆ ನಮ್ಮ ದೇಹದ ರಕ್ತದೊತ್ತಡ, ಹೃದಯಕ್ಕೆ ಸಂಬಂದಿಸಿದ ಹಲವು ಸಮಸ್ಯೆಗಳು, ಮತ್ತು ಜೀರ್ಣಕ್ರಿಯೆಗೆ ಸಂಬಂದಿಸಿದ ಕೆಲವು ಸಮಸ್ಯೆಗಳೂ ಬರುತ್ತವೆ. ಆದ್ದರಿಂದ stress and anxeity ಅನ್ನು ನಾವು ಪ್ರಾರಂಭದಲ್ಲೀ ನಿಯಂತ್ರಿಸುವುದು ಮುಖ್ಯ.

ಮುಖ್ಯವಾದ ವಿಷಯ ಏನಂದ್ರೆ ಈ ಒತ್ತಡ ಮತ್ತೆ ಆತಂಕವನ್ನ ಕಡಿಮೆ ಮಾಡಿಕೊಳ್ಳುವುದಕ್ಕೆ, ನಾವು ಕೆಲವೊಂದು ನೈಸರ್ಗಿಕವಾದ ಮತ್ತೆ ಸರಳ ವಿಧಾನಗಳನ್ನ ಅನುಸರಿಸಿದರೆ ನಮ್ಮ ಜೀವನಶೈಲಿ ಮತ್ತೆ ಆರೋಗ್ಯ ಉತ್ತಮವಾಗಿರುತ್ತದೆ.
ಈ ಲೇಖನದಲ್ಲಿ ನಾವು stress and anxeity ಅನ್ನು ನೈಸರ್ಗಿಕವಾಗಿ ಕಡಿಮೆ ಮಾಡುವ ಸುಲಭ 10 ವಿಧಾನಗಳನ್ನ ನೋಡೋಣ ಬನ್ನಿ. 

how to contro stress and anxeity

ಈ ಒತ್ತಡ ಮತ್ತು ಆತಂಕ ನಮ್ಮ ಜೀವನದ ಮೇಲೆ ಯಾವ ರೀತಿ ಪರಿಣಾಮ ಉಂಟುಮಾಡುತ್ತದೆ ನೋಡೋಣ.

1. ಭಾವನಾತ್ಮಕ ಪರಿಣಾಮ (Emotional Impact)

ನಾವು ಈ ಆತಂಕಕ್ಕೆ ಒಳಗಾಗಿದ್ದಾರೆ ನಮ್ಮ ಮನಸ್ಸು ನೆಮ್ಮದಿಯಾಗಿರುವುದಿಲ್ಲ. ಇದರಿಂದಾಗಿ:

  • ಯಾವಾಗಲೂ ಏನೋ ಒಂದು ಚಿಂತೆ, ಭಯ ನಮ್ಮನ್ನ ಕಾಡುತ್ತಿರುತ್ತದೆ.
  • ಸ್ನೇಹಿತರಿಂದ ದೂರ ಒಬ್ಬರೇ ಇರಬೇಕು ಎನಿಸುವುದು.
  •  ಸುಮ್ ಸುಮ್ನೆ ವಿನಾಕಾರಣ ಕೋಪ ಬರತ್ತೆ.
  •  ರಾತ್ರಿ ಮಲಗಿದಾಗ ನಿದ್ದೆ ಬರುವುದಿಲ್ಲ.
  •  ಮನಸಲ್ಲಿ ಏನೋ ಗೊತ್ತಿಲ್ಲದ ಸಂಕಟ, ಒತ್ತಡ ಶುರುವಾಗಿರತ್ತೆ.
  •  ಯಾವಾಗಲೂ ನಿರಾಸೆ ಮತ್ತೆ ನಮ್ಮ ಆತ್ಮವಿಶ್ವಾಸ ಕಡಿಮೆ ಆಗಿರತ್ತೆ.ಈ ಕಾರಣದಿಂದ
  • ಗಾಡಿಯಲ್ಲಿ ಅಥವಾ ಕಾರಲ್ಲಿ ಹೋಗೋವಾಗ ಯಾರದರೂ ಜೋರಾಗಿ ಹಾರ್ನ್ ಮಾಡಿದರೆ ಪಿತ್ತ ನೆತ್ತಿಗೇರತ್ತೆ.

ಈ ಎಲ್ಲಾ ಕಾರಣಗಳಿಂದ ನಾವು ವೆಕ್ತಿತ್ವದ ಸಂಬಂಧಗಳನ್ನ ದೂರ ಮಾಡಿಕೊಳ್ಳುತ್ತೇವೆ.

2. ಆರ್ಥಿಕವಾದ ಪರಿಣಾಮಗಳು(Economic Impact).

ನಾವು ಜಾಸ್ತಿ ಒತ್ತಡ ಮತ್ತೆ ಆತಂಕಕ್ಕೆ stress and anxeity ಒಳಪಟ್ಟಾಗ ಮಾನಸಿಕವಾಗಿ ಅಲ್ಲದೆ ಆರ್ಥಿಕವಾಗಿಯೂ ಸಹ ದುರ್ಭಲರಾಗುತ್ತೇವೆ, ಇದು ವ್ಯೆಕ್ತಿಯ ಕೆಲಸದ ಸಾಮರ್ಥ್ಯವನ್ನ ಕಡಿಮೆ ಮಾಡುತ್ತದೆ. ಇದರ ಪರಿಣಾಮವಾಗಿ:

  • ಯಾವುದೇ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ, ಕೆಲಸ ಮಾಡಲು ಕಾರಣಗಳನ್ನ ಕೊಡುತ್ತಿರುತ್ತೇವೆ, ಇವತ್ತು ಮಾಡೋ ಕೆಲಸನ ನಾಳೆ ಮಾಡಿದರಾಯಿತು ಎಂದು.
  •  ಮುಂದೆ ಯಾವುದೇ ನಿರ್ಧಾರ ತಗೋಳ್ಳೋ ಸಾಮರ್ಥ್ಯ ಕಡಿಮೆ ಆಗಿರತ್ತೆ.
  •  ನಾವು ಮಾಡುವ ಕೆಲಸದ ಕಾರ್ಯಕ್ಷಮತೆ (performance) ಕಡಿಮೆಯಾಗುತ್ತದೆ(ಆಫೀಸಲ್ಲಿ ಬಾಸ್ ನ ನೋಡಿದರೆ ಮೈಯಲ್ಲ ಉರಿತಿರುತ್ತೆ).
  •  ಕೆಲವೊಮ್ಮೆ ಈಗೆ ಮುಂದುವರಿದರೆ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.
    ಈ ಎಲ್ಲಾ ಕಾರಣಗಳಿಂದ ನಾವು ಆರ್ಥಿಕವಾಗಿ ಕುಗ್ಗಿಬಿಡುತ್ತೇವೆ.

ಒತ್ತಡ ಮತ್ತು ಆತಂಕವನ್ನು Stress and Anxeity ಕಡಿಮೆ ಮಾಡುವ 10 ಸರಳ ವಿಧಾನಗಳು.

Reducing anxeity and stress

1. ವ್ಯಾಯಾಮ ಮಾಡುವುದು:
ನಾವು ದಿನನಿತ್ಯ ತಪ್ಪದೇ ಕನಿಷ್ಠ 1 ಗಂಟೆ ವ್ಯಾಯಾಮಕ್ಕೆ ಸಮಯ ಕೊಡಬೇಕು ಯಾಕೆಂದರೆ ನಮ್ಮ ದೇಹ ಗಟ್ಟಿ ಇದ್ದರೆ ನಮ್ಮ ಮನಸ್ಸು ಗಟ್ಟಿಯಾಗುತ್ತದೆ(A sound body make a sound mind). ಹಾಗೆಯೇ ವ್ಯಾಯಾಮ ಮಾಡುವುದರಿಂದ ನಮ್ಮ ದೇಹದಲ್ಲಿ ಸಂತೋಷದ ಹಾರ್ಮೋನ್ ಆದ ಡೋಪಮೈನ್ ಅನ್ನು ಜಾಸ್ತಿ ಮಾಡುತ್ತದೆ, ಆಗ ಆತಂಕ ಮತ್ತೆ ಒತ್ತಡ ನಿದಾನವಾಗಿ ಕಡಿಮೆಯಾಗುತ್ತದೆ.

2. ಯೋಗ ಮತ್ತು ಧ್ಯಾನ ಮಾಡುವುದು:
ನಾವು ಪುರಾತನ ಕಾಲದಿಂದಲೂ ಯೋಗ ಮತ್ತು ಧ್ಯಾನಕ್ಕೆ ವಿಶೇಷವಾದ ಮಹತ್ವವನ್ನು ನೀಡಿದ್ದೇವೆ. ಇವನ್ನು ಮಾಡುವುದರಿಂದ ನಮ್ಮ ದೇಹ ಮತ್ತು ಮನಸ್ಸು ಶಾಂತಚಿತ್ತ ವಾಗುತ್ತದೆ. ಆದ್ದರಿಂದ ದಿನಕ್ಕೆ ಕನಿಷ್ಠ 20-30 ನಿಮಿಷ ಯೋಗ ಮತ್ತು ಧ್ಯಾನ ಮಾಡುವುದನ್ನು ರೂಡಿಸಿಕೊಳ್ಳಬೇಕು(ವಿಪಾಸನ ಧ್ಯಾನ ಉತ್ತಮ ಅನುಭವ ಕೊಡುತ್ತದೆ ಜೀವನದಲ್ಲಿ ಒಮ್ಮೆಯಾದರೂ ಪ್ರಯತ್ನಿಸಿ).

3.ಸರಿಯಾದ ನಿದ್ದೆ ಮಾಡುವುದು:
ನಾವು ಮಲಗುವ ಮುಂಚೆ ತಪ್ಪದೆ ನಮ್ಮ ಮೊಬೈಲ್ ಅನ್ನು ನೋಡಿಯೇ ಮಲಗುವುದು. ಇದರಿಂದ ನಮ್ಮ ಕಣ್ಣಿನ ರೆಟಿನಾದ ಮೇಲೆ ಕೆಟ್ಟ ಪರಿಣಾಮ ಬೀರಿ ನಮ್ಮ ನಿದ್ದೆಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಬೆಡ್ ಗೆ ಹೋಗುವ 30 ನಿಮಿಷ ಮುಂಚೆ ಮೊಬೈಲ್ ನೋಡದೆ, ಯಾವುದಾದರೂ ಒಂದು ಬುಕ್ ನ ಒಂದು ಪೇಜ್ ಓದುವ ಅವ್ಯಾಸ ಮಾಡಿಕೊಳ್ಳುವುದು ಉತ್ತಮ.

4. ಪೌಷ್ಟಿಕಾಂಶ ಆಹಾರ:
ಜಂಕ್ ಫುಡ್ ಮತ್ತು ಎಣ್ಣೆಯಲ್ಲಿ ಕರಿದ ಆಹಾರವನ್ನುಸಾಧ್ಯವಾದಷ್ಟೂ ದೂರ ಇಟ್ಟು ಮನೆಯಲ್ಲಿಯೇ ಮಾಡಿದ ಸ್ವಚ್ಛ ಆಹಾರ ಸೇವಿಸುವುದು ಉತ್ತಮ. ಹೆಚ್ಚು ಕೆಫೀನ್ ಅಂಶ ಇರುವ ಕಾಫಿ, ಟೀ, ಇವುಗಳನ್ನು ದೂರಮಾಡಿ ಹಣ್ಣು ತರಕಾರಿ ಮತ್ತು ಸೊಪ್ಪಿನ ಆಹಾರಗಳ ಕಡೆ ಗಮನ ಕೊಡುವುದು ಉತ್ತಮ, ಸಾತ್ವಿಕ ಆಹಾರ ದೇಹಕ್ಕೆ ಹಾಗೂ ಮನಸ್ಸಿಗೆ ಒಳ್ಳೆಯ ಶಕ್ತಿ ಕೊಡುತ್ತದೆ.

5. ಪ್ರಕೃತಿಯೊಂದಿಗೆ ನಮ್ಮ ಸಮಯ ಕಳೆಯುವುದು:
ಪ್ರಕೃತಿಗಿಂತ ಮತ್ತೊಬ್ಬ ಗೆಳೆಯ ನಮಗೆ ಬೇರೆ ಯಾರು ಸಿಗುವುದಿಲ್ಲ, ನಾವು ಒಬ್ಬರೇ ಇದ್ದಾಗ ಹೊರಗಡೆ ಹೋಗಿ ಪ್ರಕೃತಿಯೊಂದಿಗೆ ಸ್ವಲ್ಪ ಸಮಯ ಕೊಟ್ಟು ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮ ಅಂತರಾಳಕ್ಕೆ ನೆಮ್ಮದಿ ಸಿಗುತ್ತದೆ, ಮನಸ್ಸು ಶಾಂತವಾಗುತ್ತದೆ.

6. ಸ್ನೇಹಿತರೊಂದಿಗೆ ಸಮಯ ಕಳೆಯುವುದು:
ನಾವು ಒತ್ತಡದ ಸಮಯದಲ್ಲಿ ನಮ್ಮ ಮನಸ್ಸಿನಲ್ಲಿರುವ ದುಗುಡವನ್ನು, ನಮಗೆ ಹತ್ತಿರವಾದ ಗೆಳೆಯರೊಂದಿಗೆ ಹಾಗೂ ಕುಟುಂಬದೊಂದಿಗೆ ಹಂಚಿಕೊಂಡಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

7. ಸಮಯ ನಿರ್ವಹಣೆ(Time Management):
ಕೆಲವೊಮ್ಮೆ ನಾವು ಮಾಡಬೇಕಾದ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡದಿದ್ದಾಗ ಒತ್ತಡವು ಹೆಚ್ಚಾಗುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಮಾಡಬೇಕಿರುವ ಕೆಲಸವನ್ನು ಮಾಡಿ ಮುಗಿಸಲು ಪ್ರಯತ್ನಿಸಬೇಕು.

8. ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು:
ಸಾಮಾನ್ಯವಾಗಿ ವೇಗದ ಜೀವನಶೈಲಿಯಲ್ಲಿ ನಮಗೆ ಸಮಯ ಸಿಗುವುದೇ ಕಡಿಮೆ, ಆದರೂ ನಾವು ಸಿಗುವ ಸಮಯದಲ್ಲಿ ಯಾವುದಾದರೂ ಕೆಲವು ವಿಶೇಷ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು.
ಉದಾ; ಚಿತ್ರ ಬಿಡಿಸುವುದು, ಬ್ಲಾಗ್ ಬರೆಯುವುದು, ಸಂಗೀತ ಕೇಳುವುದು, ನೃತ್ಯ, ಇತ್ಯಾದಿ.

9. ಡಿಜಿಟಲ್ ಪ್ರಪಂಚದಿಂದ ಕೆಲವೊಮ್ಮೆ ಬ್ರೇಕ್ ತೆಗೆದುಕೊಳ್ಳುವುದು:
ಈಗ ಯಾವ ರೀತಿ ಆಗಿದೆ ಎಂದರೆ, ನಮ್ಮ ಕೈಯಲ್ಲಿ 1hr ಮೊಬೈಲ್ ಫೋನ್ ಇಲ್ಲ ಎಂದರೆ ಏನೋ ಕಳೆದುಕೊಂಡ ಅನುಭವ ಆಗುತ್ತದೆ. ಅಷ್ಟರಮಟ್ಟಿಗೆ ಮೊಬೈಲ್ ಗೆ ಅಂಟಿಕೊಂಡಿದ್ದೇವೆ. ಆದ್ದರಿಂದ ಸಾಧ್ಯವಾದಷ್ಟೂ ಪುಸ್ತಕದ ಮೊರೆ ಹೋಗಿ ಮೊಬೈಲ್ ಅನ್ನು ಅವಶ್ಯಕತೆಗೆ ಮಾತ್ರ ಬಳಸಿ.

10. ಧನಾತ್ಮಕ ಚಿಂತನೆ:
ಯಾವಾಗಲೂ ಒಳ್ಳೆಯ ಸಕಾರಾತ್ಮಕ ಯೋಚನೆಗಳನ್ನೇ ಮಾಡಿ, ನನ್ನ ಕೈಯಲ್ಲಿ ಆಗುವುದಿಲ್ಲ, ನನಗೆ ಗೊತ್ತಿಲ್ಲ, ಎನ್ನುವ ನಕಾರಾತ್ಮಕ ಚಿಂತನೆ ಬೇಡ. ಸಾಧ್ಯವಾದಷ್ಟೂ ಹೊಸ ವಿಷಯಗಳ ಕಲಿಕೆಯನ್ನು ಮಾಡುತ್ತೀರಿ, ಧನಾತ್ಮಕ ಚಿಂತನೆಗಳಿಂದ ಮನಸ್ಸು ಶಾಂತವಾಗಿರುತ್ತದೆ.

ನಾವು ಪ್ರಮುಖವಾಗಿ ತಿಳಿಯಬೇಕಿರುವುದು ನಮ್ಮ ಮನಸ್ಸಿನ ಆರೋಗ್ಯ ದೇಹದ ಆರೋಗ್ಯದಷ್ಟೇ ಮುಖ್ಯ ಅನ್ನುವುದನ್ನು ಮರಿಯಬಾರದು. ಆದ್ದರಿಂದ ,
ಒತ್ತಡ ಮತ್ತು ಆತಂಕ ಇಂದಿನ ಜೀವನಶೈಲಿಯಲ್ಲಿ ಗಂಬೀರವಾದ ಸಮಸ್ಯೆಗಳಾಗಿದ್ದರೂ, ನಾವು ಅವನ್ನು ನಿರ್ಲಕ್ಷ್ಯ ಮಾಡದೆ ಸರಿಯಾದ ಜೀವನಶೈಲಿ, ಆರೋಗ್ಯಕರ ಆಹಾರ, ವ್ಯಾಯಾಮ, ಧ್ಯಾನದಂತಹ , ಸಹಜ ವಿಧಾನಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ರೂಢಿಸಿಕೊಂಡರೆ, stress and anxeity ಯನ್ನು ಸುಲಭವಾಗಿ ನಿಯಂತ್ರಿಸುತ್ತೇವೆ.

ನಾನು ಬರೆದಿರುವ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತೆ ಬೇರೆ ಯಾವ ವಿಷಯದ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕು ಎಂದು ಕಾಮೆಂಟ್ಸ್ ರೂಪದಲ್ಲಿ ತಿಳಿಸಿ ಧನ್ಯವಾದಗಳು .

ನಾವು Stress ಮತ್ತು Anxeity ಯನ್ನು ಯಾವ ರೀತಿ ನಿಯಂತ್ರಿಸಬೇಕು?

ಮುಖ್ಯವಾಗಿ ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಹಲವಾರು ಘಟನೆಗಳಿಂದ ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಿರುತ್ತೇವೆ. ಆದ್ದರಿಂದ ಮನಸ್ಸನ್ನು ಶಾಂತರೀತಿ ಇಟ್ಟುಕೊಳ್ಳಲು ಧ್ಯಾನ, ದೀರ್ಘ ಉಸಿರಾಟ, ಯೋಗ, ವ್ಯಾಯಾಮ, ಆರೋಗ್ಯ ಸುಧಾರಣೆ, ಸ್ನೇಹಿತರೊಂದಿಗಿನ ಚರ್ಚೆ, ಈ ರೀತಿಯ ಒಳ್ಳೆಯ ಅಭ್ಯಾಸಗಳನ್ನು ಮಾಡಿಕೊಂಡರೆ ಒತ್ತಡ ಮತ್ತು ಆತಂಕ ದೂರವಾಗುತ್ತದೆ.

ಒತ್ತಡ ಇದೆ ಎನ್ನುವ 5 ಸಂದೇಹಗಳೆಂದರೆ, ಸರಿಯಾದ ನಿದ್ದೆ ಇಲ್ಲದಿರುವುದು, ಯಾವಾಗಲೂ ತಲೆನೋವು ಬರುವುದು, ದೇಹದಲ್ಲಿ ಹೇಳಿಕೊಳ್ಳಲಾಗದ ನೋವು ಬರುವುದು, ಹೊಟ್ಟೆ ಉರಿ, ಮಲಬದ್ಧತೆ, ಇವು ಸಾಮಾನ್ಯವಾಗಿ ನಾವು ಒತ್ತಡದಲ್ಲಿ ಇದ್ದಿವಿ ಎನ್ನುವ ಸಂಕೇತಗಳಾಗಿರುತ್ತವೆ.

 ಈ ನಿಯಮ ಆತಂಕ ನಿವಾರಣೆಯಲ್ಲಿ ಉತ್ತಮ ಕೆಲಸ ಮಾಡುತ್ತದೆ ಅಂದರೆ, ನಾವು ಯಾವುದೂ ಒಂದು ಯೋಚನೆಯಲ್ಲಿ ಮುಳುಗಿ ಪ್ರಸ್ತುತ ನಮ್ಮ ಸುತ್ತ ಮುತ್ತ ಏನು ನಡೀತಿದೆ ಅನ್ನುವುದನ್ನು ಮರೆತಿರುತ್ತೇವೆ. ಆದ್ದರಿಂದ ಈ ನಿಯಮ ಬೇರೆ ಯೋಚನೆಯಿಂದ ಪ್ರಸ್ತುತದ ಸಮಯಕ್ಕೆ ನಮ್ಮ ಮನಸ್ಸನ್ನು ಕರೆತರುತ್ತದೆ .
ಯಾವ ರೀತಿ ಎಂದರೆ;

  •  ಯಾವುದಾದರೂ ೩ ವಸ್ತುಗಳನ್ನು ನೋಡಿ ಅದರ ಬಗ್ಗೆ ಸ್ವಲ್ಪ ಮಾತನಾಡುವುದು: ಇದರಿಂದ ಸ್ವಲ್ಪ ಸಮಯದ ಮಟ್ಟಿಗಾದರೂ ಆತಂಕ ನಿವಾರಣೆಯಾಗುತ್ತದೆ.
  •  ಕಣ್ಣು ಮುಚ್ಚಿ ಯಾವುದಾದರೂ ೩ ಶಬ್ದಗಳನ್ನು ಸೂಕ್ಷ್ಮವಾಗಿ ಕೇಳಿಸಿಕೊಳ್ಳುವುದು : ಇದರಿಂದ ನಮ್ಮ ಮನಸ್ಸು ಶಾಂತವಾಗುತ್ತದೆ.
  •  ನಮ್ಮ ದೇಹದ ಯಾವುದಾದರೂ ೩ ಅಂಗಗಳನ್ನು ಕದಲಿಸುವುದು:
    ಇದರಿಂದ ನಾವು ಪ್ರಸ್ತುತದ ಜೀವನದಲ್ಲಿ ಇರಬೇಕು ಎಂದು ತಿಳಿಯುತ್ತದೆ.

3 thoughts on “How to Reduce Stress and Anxeity in 10 natural ways ಒತ್ತಡ ಮತ್ತು ಆತಂಕ ವನ್ನು ನೈಸರ್ಗಿಕವಾಗಿ ಕಡಿಮೆ ಮಾಡುವ 10 ವಿಧಾನಗಳು.”

  1. Pingback: ಡಿಪ್ರೆಶನ್ Dangerous - 4 Government polices Must Solve

Leave a Comment

Your email address will not be published. Required fields are marked *

Scroll to Top