ಆರೋಗ್ಯವಾಗಿ ತೂಕ ಜಾಸ್ತಿ ಆಗಲು ಮತ್ತೆ ತೂಕ ಕಡಿಮೆ ಆಗಲು weight gain and weight loss ನಾನು ತಿಳಿಸುವ 60 ದಿನಗಳ ಈ ಚಾಲೆಂಜ್ ಅನ್ನು ಅನುಸರಿಸಿ. ದಿನನಿತ್ಯದ ಸಲಹೆಗಳು, ಮತ್ತು ಪೌಷ್ಟಿಕ ಆಹಾರದ ಡಯಟ್ ಪ್ಲಾನ್ ಅನ್ನು ತಪ್ಪದೆ ಪಾಲಿಸಿದರೆ ನಾವು ಅನುಕೊಂಡಂತೆ ಉತ್ತಮ ಫಲಿತಾಂಶ ಸಿಗುತ್ತದೆ.
ಇಂದಿನ ಈ ವೇಗದ ಜೀವನಶೈಲಿಯಲ್ಲಿ ನಾವು ಆರೋಗ್ಯಕರವಾಗಿರುವ ಅಂದರೆ ಫಿಟ್ ಆಗಿರುವ ತೂಕವನ್ನು ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ. ಯಾಕೆಂದರೆ, ನೀವೇ ನೋಡಿರಬಹುದು ಕೆಲವರು ಜಾಸ್ತಿ ತೂಕ ಇದೀನಿ ಅಂತ ಯೋಚನೆ ಮಾಡುತ್ತಿದ್ದರೆ, ಇನ್ನೂ ಕೆಲವರು ಎಷ್ಟು ತಿಂದರೂ ದಪ್ಪಾನೇ ಆಗ್ತಿಲ್ಲ ಅಂತ ಚಿಂತೆ ಮಾಡುತ್ತಿರುತ್ತಾರೆ.
ಆದರೆ ಇಲ್ಲಿ ಮುಖ್ಯವಾಗಿ ನಾನೇಳುವ ಆಹಾರ ಕ್ರಮ, ನಿಯಮಿತ ವ್ಯಾಯಾಮ, ಮತ್ತೆ ಒಂದು ದಿನ ಬಿಡದೇ ಪಾಲನೆ ಮಾಡೋ ಶಿಸ್ತು ಇದ್ದರೆ ಮೇಲೆ ತಿಳಿಸಿರುವ ಎರಡೂ ಗುರಿಗಳನ್ನ ಸಾಧಿಸಬಹುದು.
ಈ 60 ದಿನಗಳ ತೂಕ ಹೆಚ್ಚಿಸುವ ಮತ್ತೆ ತೂಕ ಕಡಿಮೆ ಮಾಡುವ weight gain and weight loss ಚಾಲೆಂಜ್ ನಿಮ್ಮ ದೇಹವನ್ನು ಸಹಜವಾಗಿ ಮಾರ್ಪಡಿಸಲು, ಚೇಂಜ್ ಮಾಡಲು ಸಹಾಯ ಮಾಡುತ್ತದೆ. ಯಾವುದೇ ಅವಸರ ಇಲ್ಲದೇ, ಯಾವುದೇ ದೇಹಕ್ಕೆ ತೊಂದರೆ ಆಗುವ ಹಾನಿಕಾರಕ ವಿಧಾನ ಅನುಸರಿಸದೇ ನಿಮ್ಮ ಆರೋಗ್ಯವನ್ನ ಕಾಪಾಡಿಕೊಂಡು ಒಳ್ಳೆಯ ಫಲಿತಾಂಶ ಪಡೆಯಲು ಈ ಲೇಖನದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: How to Loose Belly Fat in 10 Days
Table of Contents
ToggleWeight gain and weight loss ಡಯಟ್ ಅಂದರೆ ಏನು? ತಿಳಿಯೋಣ ಬನ್ನಿ.
ಮೊದಲು ತೂಕ ಕಡಿಮೆ ಮಾಡುವ weight loss ಡಯಟ್ :
ತೂಕ ಕಡಿಮೆ ಮಾಡಲು ನಾವು ದಿನನಿತ್ಯ ತಿನ್ನುತ್ತಿರುವ ಕ್ಯಾಲೊರಿಗಿಂತ ಜಾಸ್ತಿ ಕ್ಯಾಲೋರಿಗಳನ್ನ ನಮ್ಮ ದೇಹಕ್ಕೆ ಕೊಡಬೇಕು. ಅಂದರೆ ನಮ್ಮ ದೇಹದಲ್ಲಿ ಕ್ಯಾಲೋರಿ ಡೆಫಿಸಿಟ್ ಇರೋದರಿಂದ ಹೆಚ್ಚು ಕೆಯ್ಲೋರಿ ಇರುವ ಆಹಾರವನ್ನ ತಿನ್ನಬೇಕು. ಇದರಿಂದ ನಮ್ಮ ದೇಹದಲ್ಲಿ ಶೇಖರಣೆಯಾಗುವ ಕೊಬ್ಬು, ಫ್ಯಾಟ್ ನಿಧಾನವಾಗಿ ಕರಗುತ್ತದೆ.
ಇದರಲ್ಲಿ ನಾವು ಪ್ರಮುಖವಾಗಿ ನೋಡೋದಾದರೆ :
- ಕಡಿಮೆ ಕ್ಯಾಲೋರಿಯ ಆಹಾರ ಸೇವನೆ ಮಾಡಬೇಕು.
- ಜಾಸ್ತಿ ಫೈಬರ್ ಮತ್ತೆ ಪ್ರೊಟೀನ್ ಇರುವ ಆಹಾರ ತಿನ್ನಬೇಕು.
- ಸಕ್ಕರೆ ಮತ್ತೆ ಎಣ್ಣೆ ತುಂಬಾ ಕಡಿಮೆ ತಿನ್ನಬೇಕು, ನಾನೇಳೋದೇನೆಂದರೆ ನಿಮಗೆ ಸಾಧ್ಯವಾದರೆ ಇದನ್ನು ನಿಲ್ಲಿಸಿಬಿಡಬೇಕು.
ತೂಕ ಜಾಸ್ತಿ ಮಾಡುವ ಡಯಟ್ Weight Gain Diet :
ನಮ್ಮ ದೇಹದ ತೂಕ ಜಾಸ್ತಿ ಆಗಬೇಕು ಅಂದರೆ ಮೊದಲು ನಮ್ಮ ತಲೆಯಲ್ಲಿರುವ ಯೋಚನೆಗಳನ್ನ ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ನಂತರ ನಮ್ಮ ದೇಹಕ್ಕೆ ಬೇಕಾಗಿರುವುದಕ್ಕಿಂತ ಸ್ವಲ್ಪ ಜಾಸ್ತಿ ಕ್ಯಾಲೋರಿಗಳನ್ನ ತಿನ್ನಬೇಕು. ಇದನ್ನೇ ನಾವು ಕ್ಯಾಲೋರಿ ಸರ್ಪ್ಲಸ್ ಅಂತ ಕರಿಯುವುದು. ನಾವು ತಿನ್ನುವ ಕ್ಯಾಲೋರಿಯಿಂದ ನಮ್ಮ ದೇಹದ ಮಸಲ್ ಚನ್ನಾಗಿ ಡೆವಲಪ್ ಆಗುತ್ತದೆ. ಇದರಿಂದ ತೂಕ ತಾನಾಗೇ ಜಾಸ್ತಿಯಾಗುತ್ತದೆ.
ಇದರಲ್ಲಿ ನಾವು ನೋಡೋ ಮುಖ್ಯ ಅಂಶಗಳೆಂದರೆ :
- ತಿನ್ನುವ ಆಹಾರದಲ್ಲಿ ತುಂಬಾ ಪ್ರೊಟೀನ್ ಇರಬೇಕು.
- ಪ್ರೊಟೀನ್ ಅಂದರೆ, ಹಾಲು, ಮೊಸರು, ಚಿಕನ್, ಪನ್ನೀರ್, ಡ್ರೈ ಫ್ರೂಟ್ಸ್ ಇತ್ಯಾದಿ.
- ದಿನಕ್ಕೆ ಜಾಸ್ತಿ 3 ಸರಿ ತಿನ್ನುವುದಕ್ಕಿಂತ ಸ್ವಲ್ಪ ಸ್ವಲ್ಪ ಆದರೂ ಪರವಾಗಿಲ್ಲ ಕನಿಷ್ಠ 4-5 ಬಾರಿ ಊಟ ತಿನ್ನಬೇಕು.
- ಸ್ವಲ್ಪ ಮಿಲ್ಕ್ ಶೇಕ್, ನ್ಯೂಟ್ರಿಷನ್ ಶೇಕ್ಸ್ ರೀತಿ ಮಾಡಿ ಊಟಕ್ಕೆ ಮುಂಚೆ ಮತ್ತೆ ಊಟವಾದ ನಂತರ ಸ್ವಲ್ಪ ಸ್ವಲ್ಪ ಕುಡಿಯಬೇಕು..
- ದೊಡ್ಡ ಬಾಳೆಹಣ್ಣು ದಿನಕ್ಕೆ 2 ತಿನ್ನಬೇಕು.
ನಿಮ್ಮ ದೇಹದ ಕಂಡೀಷನ್ condition ಸ್ವಭಾವ, ತಿಳಿಯಬೇಕು.
ದೇಹದ ಸ್ವಭಾವ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಭಿನ್ನವಾಗಿರುತ್ತದೆ.
ಆದ್ದರಿಂದ ನಾನು ತಿಳಿಸುವ ಈ ಚಾಲೆಂಜ್ ಪ್ರಾರಂಭಿಸುವ ಮೊದಲು, ನಿಮ್ಮ ದೇಹದ ಪ್ರಕಾರವನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ.
ದೇಹದಲ್ಲಿ ಹಲವು ಪ್ರಕಾರಗಳಿವೆ ಅವುಗಳೆಂದರೆ :
- ಎಕ್ಟೊಮಾರ್ಫ್- ಅಂದರೆ ದೇಹ ತೆಳುವಾಗಿ ಸಪೂರವಾಗಿರುತ್ತದೆ, ಇಂತಹವರಿಗೆ ತೂಕ ಹೆಚ್ಚಿಸಲು ಸ್ವಲ್ಪ ಜಾಸ್ತಿ ಸಮಯ ಇಡಿಯುತ್ತದೆ.
- ಮೆಸೋಮಾರ್ಫ್ – ಅಂದರೆ ಇಂತಹವರಿಗೆ ದೇಹ ಫ್ಲೆಕ್ಸಿಬಲ್ ಇರುತ್ತದೆ ಸ್ವಲ್ಪ ಮಾಂಸಖಂಡಗಳು ಇದ್ದು ಸ್ವಲ್ಪ ಬೇಗ ತೂಕ ಹೆಚ್ಚಿಸಬಹುದು.
- ಎಂಡೋಮಾರ್ಫ್ – ಇವರ ದೇಹ ಸ್ವಲ್ಪ ದಪ್ಪ ಇದ್ದು ದೇಹ ಮೃದುವಾಗಿರುತ್ತದೆ ಅಥ್ಲೆಟಿಕ್ ರೀತಿ ಇದ್ದು ತೂಕ ಬೇಗ ಹೆಚ್ಚಿಸಬಹುದು.
ದೇಹ ಬದಲಾವಣೆಗೆ 60 ದಿನಗಳ ಡಯಟ್ ಯೋಜನೆಯ ಹಂತಗಳು
Step-1 (Day 1- 20) : ದೇಹ ಬದಲಾವಣೆಗೆ ತಯಾರಿ
ಈ ಮೊದಲ 20 ದಿನದ ಹಂತದಲ್ಲಿ ನಿಮ್ಮ ದೇಹ ಸ್ವಲ್ಪ ಬದಲಾವಣೆಗೆ ಹೊಂದಿಕೊಳ್ಳಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ,
- ಜಂಕ್ ಫುಡ್, ಎಣ್ಣೆ ಪಧಾರ್ಥಗಳು ಕಂಪ್ಲೀಟ್ ಬಿಡಬೇಕು.
- ದಿನಕ್ಕೆ ಕನಿಷ್ಠ ೩-೪ ಲೀಟರ್ ನೀರು ಕುಡಿಯಬೇಕು.
- ಸ್ವಲ್ಪ ಸ್ವಲ್ಪ ವ್ಯಾಯಾಮವನ್ನು ಆರಂಭಿಸಬೇಕು.
Step-2 (Day 21–40) : ದೇಹ ಪರಿವರ್ತನೆಗೆ ಹೊಂದಿಕೊಂಡು ಬದಲಾಗುವ ಹಂತ.
ಈ ಹಂತದಲ್ಲಿ ದೇಹವು ನಾವು ಹೇಳುವ ರೀತಿ ಕೇಳಲು ಶುರು ಆಗಿರುತ್ತದೆ. ಆದ್ದರಿಂದ ಈ ಹಂತದಲ್ಲಿ ಹೆಚ್ಚಿನ ಬದಲಾವಣೆಗಳೇನು ಬೇಡ.
- ದೇಹದ ತೂಕದಲ್ಲಿ ಬದಲಾವಣೆ ಕಾಣಲು ಪ್ರಾರಂಭವಾಗುತ್ತದೆ.
- ಯಾವ ಆಹಾರ ಪ್ರಾರಂಭಿಸಿರುತ್ತೀರೋ ಅದನ್ನೇ ಬಿಡದೆ ಮುಂದುವರಿಸಬೇಕು.
- ನಿಯಮಿತ ವ್ಯಾಯಾಮ ಮಾಡುವ ಸಮಯ ಸ್ವಲ್ಪ ಜಾಸ್ತಿ ಮಾಡಿ.
Step-3 (Day 41–60): ದೇಹ ಸ್ಥಿರವಾಗಿ ತೂಕ ಬದಲಾಗುವ ಹಂತ
ಈ ಹಂತದಲ್ಲಿ ನಿಮ್ಮ ದೇಹವು ತೂಕದಲ್ಲಿ ಬದಲಾವಣೆ ಕಂಡುಬರುತ್ತದೆ.
- ಸರಿಯಾದ ಪ್ರೊಟೀನ್ ಮತ್ತು ಕ್ಯಾಲೋರಿಗಳನ್ನ ನಿಯಮಿತವಾಗಿ ತಿಂದರೆ ತೂಕ ಜಾಸ್ತಿ ಬೇಕೆಂದರೆ ಜಾಸ್ತಿ ಆಗಿರುತ್ತದೆ, ಕಡಿಮೆ ಬೇಕೆಂದರೆ ಕಡಿಮೆ ಆಗಿರುತ್ತದೆ.
- ಈ ಹಂತದಲ್ಲಿ ಊಟ ಮತ್ತೆ ವ್ಯಾಯಾಮದಲ್ಲಿ ಅನುಸರಿಸುವ ಶಿಸ್ತನ್ನು ಬಿಡದೆ ಮುಂದುವರಿಸಬೇಕು.
- ಯಾವುದೇ ದುರಾಭ್ಯಾಸಗಳಿಲ್ಲದೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು.
60 ದಿನದಲ್ಲಿ ತೂಕ ಕಡಿಮೆ ಮಾಡುವ Weight Loss ಡಯಟ್ ಯೋಜನೆಗಳು
ತೂಕ ಕಡಿಮೆ ಮಾಡಲು Weight Loss ಬೆಳಗಿನ ರೊಟಿನ್ :
- ಬೆಳಿಗ್ಗೆ ಎದ್ದು ಬಿಸಿನೀರಿಗೆ ನಿಂಬೆರಸ ಸೇರಿಸಿ ಕುಡಿಯಬೇಕು.
- 10 ನಿಮಿಷ ಪ್ರಾಣಾಯಾಮ ಮತ್ತೆ ದೇಹವನ್ನ ಸ್ವಲ್ಪ ಸ್ಟ್ರೆಚಿಂಗ್ ಮಾಡಬೇಕು.
- ಬೆಳಗ್ಗಿನ ತಿಂಡಿಗೆ, ಓಟ್ಸ್ ಅಥವಾ ಉಪ್ಪಿಟ್ಟು ಉತ್ತಮ.
- ಬೇಯಿಸಿದ ಮೊಟ್ಟೆ ಅಥವಾ ಮೊಳಕೆ ಕಾಳು, ಮತ್ತೆ ಸ್ವಲ್ಪ ಹಣ್ಣುಗಳು.
ತೂಕ ಕಡಿಮೆ ಮಾಡಲು ಮಧ್ಯಾಹ್ನದ ಊಟ :
- 2 ಚಪಾತಿ ಅಥವಾ ಮುದ್ದೆ , ಮತ್ತೆ ತರಕಾರಿ ಪಲ್ಯ.
- ಏನಾದರು ಪ್ರೊಟೀನ್ ಸಿಗುವ ಆಹಾರ
- ಸೌತೆಕಾಯಿ ಸಲಾಡ್
ಸಂಜೆ ತಿಂಡಿ ಮತ್ತೆ ರಾತ್ರಿ ಊಟ :
- ಗ್ರೀನ್ ಟೀ, ಸ್ವಲ್ಪ ಬಾದಾಮಿ ಅಥವಾ ಕಡಲೇಕಾಯಿ .
- ರಾತ್ರಿ ಅರ್ಧ ಮುದ್ದೆ,ಸಾಂಬಾರ್ ಅಥವಾ ಒಂದು ಚಪಾತಿ, ಪಲ್ಯ
- ಕಾರ್ಬೋಹೈಡ್ರೇಟ್ಸ್ ತಪ್ಪಿಸಬೇಕು, ಅನ್ನ ತಿನ್ನಬಾರದು.
ತೂಕ ಕಡಿಮೆ ಆಗಲು ತಪ್ಪಿಸಬೇಕಾದ ಆಹಾರಗಳು :
- ಬೀದಿ ಬದಿ ಸಿಗುವ ಜಂಕ್ ಫುಡ್
- ಸ್ವೀಟ್ ತಿಂಡಿಗಳು ಮುಟ್ಟಲೇಬಾರದು.
- ಎಣ್ಣೆಯಲ್ಲಿ ಕರಿದ ಆಹಾರ ಪಧಾರ್ಥಗಳು
60 ದಿನದಲ್ಲಿ ತೂಕ ಜಾಸ್ತಿ ಮಾಡಲು ಡಯಟ್ ಪ್ಲಾನ್
ಬೆಳಿಗ್ಗೆ ಎದ್ದ ತಕ್ಷಣದ ಪ್ಲಾನ್
- ಒಂದು ಲೋಟ ಹಾಲು, ಮತ್ತೆ ರಾತ್ರಿ ನೆನೆಸಿದ ಬಾದಾಮಿ ಬೀಜ
- ಹಾಲು ಮತ್ತು ಬಾಳೆಹಣ್ಣಿನ ಶೇಕ್
- ನಂತರ ಬೆಳಗಿನ ತಿಂಡಿಗೆ ಪರೋಟ, ಅಥವಾ ಪುರಿ,
- ಬ್ರೆಡ್ ಇದ್ದರೆ ಅದಕ್ಕೆ ಪೀನಟ್ ಬಟರ್ ಮಿಕ್ಸ್ ಮಾಡಿ ತಿನ್ನಬೇಕು.
- ಮೊಟ್ಟೆ ಮತ್ತೆ ಬ್ರೆಡ್ ಉತ್ತಮ
Weight Gain ಆಗಲು ಮಧ್ಯಾಹ್ನದ ಊಟಕ್ಕೆ :
- ಅನ್ನ ಮತ್ತೆ ಧಾಲ್ ಅಥವಾ ಮೊಸರು.
- ರೋಟಿ ಬಟರ್ ಚಿಕನ್ ಅಥವಾ ಪನ್ನೀರ್
- ತರಕಾರಿ ಪಲ್ಯ ಮೊಟ್ಟೆ ಪಲ್ಯ.
ಸಂಜೆಯ ತಿಂಡಿ ಮತ್ತೆ ರಾತ್ರಿಯ ಊಟ
- ಡ್ರೈ ಫ್ರೂಟ್ಸ್ ಶೇಕ್
- ಪೀನಟ್ ಬಟರ್ , ಸ್ಯಾಂಡ್ವಿಚ್
- ರಾತ್ರಿ ಚಪಾತಿ ಕರಿ, ಮತ್ತೆ ಮೊಸರು ಒಂದು ಕಪ್
- ತುಂಬಾ ಪ್ರೊಟೀನ್ ಬರಿತ ಆಹಾರ.
- ಒಂದು ದೊಡ್ಡ ಬಾಳೆಹಣ್ಣು.
ಕೆಲವೊಂದು ಆಹಾರಗಳನ್ನು ತಿನ್ನಲೇಬೇಕು ;
- ಹಾಲಿನ ಉತ್ಪನ್ನಗಳು ಮೊಸರು, ಬೆಣ್ಣೆ, ತುಪ್ಪ, ಪನ್ನೀರ್, ಚೀಸ್ ಇತ್ಯಾದಿ.
- ಬಾದಾಮಿ ಬೀಜ, ಗೋಡಂಬಿ, ವಾಲ್ನಟ್, ಕಡಲೇಕಾಯಿ ಇತ್ಯಾದಿ.
ದೇಹ ಸರಿಯಾದ ರಿಸಲ್ಟ್ ಬರಲು ಊಟದ ಜೊತೆ ವ್ಯಾಯಾಮ
ತೂಕ ಕಡಿಮೆ ಆಗಲು 1 ಗಂಟೆ ಸರಳ ವ್ಯಾಯಾಮ :
- ದಿನ ತಪ್ಪದೆ 30 ನಿಮಿಷ ನಡಿಯಬೇಕು.
- 5 ನಿಮಿಷ ಜಂಪಿಂಗ್ 2 ಬಾರಿ ಮಾಡಬೇಕು.
- 5 ನಿಮಿಷ ಸ್ಕಿಪಿಂಗ್ 2 ಬಾರಿ..
- 15 ನಿಮಿಷ ಯೋಗ ಮತ್ತೆ ಕಾರ್ಡಿಯೋ..
ತೂಕ ಜಾಸ್ತಿ ಮಾಡಲು ವ್ಯಾಯಾಮ :
- ಮಾಂಸಖಂಡಗಳು ಬಲಿಷ್ಠ ಆಗುವುದಕ್ಕೆ 5 ನಿಮಿಷ ಪುಶ್-ಅಪ್ಸ್ ವ್ಯಾಯಾಮ..
- ಕಾಲಿನ ಮಾಂಸಖಂಡಗಳ ಬಲಿಷ್ಠತೆಗೆ ಸ್ಕ್ವಾಟ್ಸ್ ಮಾಡಬೇಕು.
- ಸ್ವಲ್ಪ ತೂಕ ಎತ್ತುವ ವ್ಯಾಯಾಮ ಮಾಡಬೇಕು.
60 ದಿನಗಳ ಈ ಡಯಟ್ ಚಾಲೆಂಜ್ ನಿಮ್ಮ ಜೀವನ ಶೈಲಿಯನ್ನ ಸಂಪೂರ್ಣವಾಗಿ ಬದಲಾಯಿಸುವ ಒಂದು ಉತ್ತಮ ಅವಕಾಶವಾಗಿದೆ. ಅದಕ್ಕೆ ನೀವು ಮಾಡಬೇಕಿರುವುದಿಷ್ಟೇ, ಉತ್ತಮವಾದ ಪೌಷ್ಟಿಕ ಆಹಾರ, ಒಂದು ದಿನ ತಪ್ಪಿಸದೇ ವ್ಯಾಯಾಮ, ಮಾನಸಿಕ ಸಮತೋಲನ, ಇವಿಷ್ಟನ್ನೂ ಸರಿಯಾಗಿ ನೋಡಿಕೊಂಡರೆ ನಿಮ್ಮ ಗುರಿಯನ್ನ ತಲುಪುತ್ತೀರಿ.
ಮತ್ತೆ ಬರಿ 60 ದಿನ ಮಾಡಿದೆ ಅಷ್ಟೇ ನನ್ನ ಪಾತ್ರ ಮುಗಿಯಿತು ಅಂತ ಸುಮ್ಮನಾದರೆ ನೀವು ಇಷ್ಟು ದಿನ ಮಾಡಿದ್ದು ವ್ಯರ್ಥವಾಗುತ್ತೆ. ಅದಕ್ಕೆ ಇಷ್ಟು ದಿನ ಯಾವ ರೀತಿ ಮಾಡಿಕೊಂಡು ಬಂದಿರುತ್ತೀರೋ ಅದನ್ನ ಮುಂದಿನ ದಿನಗಳಲ್ಲಿ ನಿಮ್ಮ ಒಂದು ಜವಾಬ್ದಾರಿಯ ರೀತಿ ತೆಗೆದುಕೊಂಡು ತಪ್ಪದೆ ಪಾಲಿಸಿ. ತೂಕ ಹೆಚ್ಚಿಸಬೇಕಾದವರು ಪೌಷ್ಟಿಕಾಂಶ ತುಂಬಿದ ಆಹಾರ, ಮತ್ತೆ ತೂಕ ಕಡಿಮೆ ಮಾಡಿಕೊಳ್ಳಬೇಕಾದವರು ಕ್ಯಾಲೋರಿ ನಿಯಂತ್ರಿತ ಆಹಾರ, ಇದನ್ನು ತಪ್ಪದೆ ಫಾಲೋ ಮಾಡಿ ನಿಮ್ಮ ದೇಹ ಗಟ್ಟಿಮುಟ್ಟಾಗಿ ಸದೃಢವಾಗಿರುತ್ತದೆ.

Pingback: Weight loss challenge : 10 Secret Juice for Weight loss