ನಮ್ಮ ಜನರಲ್ಲಿ ಇತ್ತೀಚಿಗೆ ಕಾಡುತ್ತಿರುವ ಅನೇಕ ಸಮಸ್ಯೆಗಳಲ್ಲಿ ಮೆಮೊರಿ ಲಾಸ್ Memory Loss ಒಂದು ದೊಡ್ಡ ಸಮಸ್ಯೆ. ಇತ್ತೀಚಿನ ವೇಗದ ಜೀವನಶೈಲಿ, ಮಾನಸಿಕ ಒತ್ತಡ, ಡಿಜಿಟಲ್ ಡಿಸ್ಟ್ರಾಕ್ಷನ್, ಕೆಟ್ಟ ಆಹಾರ ಪದ್ಧತಿ, ಇವೆಲ್ಲ ನಮ್ಮ ಮೆದುಳಿನ ಆರೋಗ್ಯಕ್ಕೆ ತುಂಬಾ ತೊಂದರೆ ಮಾಡಿವೆ. ಅದರ ಪರಿಣಾಮದಿಂದ ಅನೇಕ ಜನರಿಗೆ ಮೆಮೊರಿ ಲಾಸ್ ಸಮಸ್ಯೆ ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ.
ಒಬ್ಬ ವ್ಯೆಕ್ತಿ ತಾನು ದಿನಾ ಮಾಡುವ ವಿಚಾರಗಳನ್ನ ಮರೆತು ಹೋಗುತ್ತಾ ಇದ್ದರೆ, ಅದು ಕೇವಲ ಅವನ ವಯಸ್ಸಿನಿಂದ ಆಗುತ್ತಿರುವ ಪರಿಣಾಮವಲ್ಲ. ಬದಲಿಗೆ ಅದು ಆತನ ಮಾನಸಿಕ ಆರೋಗ್ಯದ ಸಮಸ್ಯೆ.
ಈ ಬ್ಲಾಗ್ ನಲ್ಲಿ ನಾವು ಮೆಮೊರಿ ಲಾಸ್ ಅಂದರೇನು, ಅದರ ಲಕ್ಷಣಗಳು, ಕಾರಣಗಳು, ಉತ್ತಮ ಆಹಾರ ಪದ್ಧತಿ, ಮತ್ತೆ ಅದಕ್ಕೆ ನಸರ್ಗಿಕ ಪರಿಹಾರಗಳನ್ನ ತಿಳಿಯೋಣ.
Table of Contents
Toggleಹಾಗಾದರೆ ಮೆಮೊರಿ ಲಾಸ್ ಅಂದರೆ ಏನು?
ನಾವು ಈ ಹಿಂದೆ ಕಲಿತ, ಅನುಭವಿಸಿದ, ನೋಡಿದ, ಕೇಳಿದ ಮಾಹಿತಿಯನ್ನ ನೆನಪಿನಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುವುದನ್ನು Memory loss ಅನ್ನುತ್ತೇವೆ.
ನಮ್ಮ ಮೆದುಳಿಗೆ ಕಂಪ್ಯೂಟರ್ ತರ ಅನೇಕ ವಿಷಯಗಳನ್ನ ಒಟ್ಟಿಗೆ ಶೇಖರಣೆ ಮಾಡುವ ಶಕ್ತಿ ಇದೆ. ಆದರೂ ಅನೇಕ ವಿಷಯಗಳನ್ನ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಏಕೆಂದರೆ ಬಹು ಮುಖ್ಯವಾಗಿ, ನಮಗೆ ಯಾವ ವಿಷಯ ಹೆಚ್ಚು ಅವಶ್ಯಕವಿದೆಯೋ ಅದು ನೆನಪಿರುತ್ತದೆ, ಯಾವುದು ಕಡಿಮೆ ಅವಶ್ಯಕವೋ ಅದು ನೆನಪಿನಲ್ಲಿ ತುಂಬಾ ದಿನ ಉಳಿಯುವುದಿಲ್ಲ. ಇದು ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲೂ ಇರುತ್ತದೆ ಆದರೆ ಕೆಲವರಲ್ಲಿ ಮಾತ್ರ ಹೆಚ್ಚು ನೆನಪಿನಶಕ್ತಿ ಇರುತ್ತದೆ.
Memory loss ಅಥವಾ ಅಮ್ನೇಶಿಯಾ ಇದು ನರಗಳ ದೌರ್ಬಲ್ಯ ದಿಂದ ಬರುವ ಆಲಝಮೈರ್( Alzheimer’s) ಕಾಯಿಲೆಯ ಲಕ್ಷಣವಾಗಿದೆ. ನಮ್ಮ ದೇಶದಲ್ಲಿ ಸುಮಾರು 60-70% ಕೇಸುಗಳು ಈ ಕಾಯಿಲೆಯೇ ಆಗಿರುತ್ತೆ.
ಕೆಲವರಿಗೆ ಈ ಮೆಮೊರಿ ಲಾಸ್ ಸ್ವಲ್ಪ ಕಾಲ ಮಾತ್ರ ಇರುತ್ತದೆ, ಆದರೆ ಕೆಲವರಿಗೆ ಇದು ದೀರ್ಘಕಾಲೀನ ಸಮಸ್ಯೆಯಾಗಿದೆ.
ನಮ್ಮ ದೇಶದಲ್ಲಿ ಈ ಮೆಮೊರಿ ಲಾಸ್ ಯಾಕೆ ಹೆಚ್ಚು ಸಮಸ್ಯೆಯಾಗುತ್ತಿದೆ?
ಭಾರತದಲ್ಲಿ ಮೆಮೊರಿ ಲಾಸ್ ಜಾಸ್ತಿಯಾಗಲು ಪ್ರಮುಖ ಕಾರಣಗಳು:
- ಅತಿ ಹೆಚ್ಚು ಮೊಬೈಲ್ ಬಳಸುವುದು : ಚಿಕ್ಕ ಮಕ್ಕಳಿಂದ ದೊಡ್ಡವರ ತನಕ ಪ್ರತಿಯೊಬ್ಬರೂ ಮೊಬೈಲ್ ಸ್ಕ್ರೀನ್ ಬಳಸುತ್ತಾರೆ. ಅದು ಏನಾಗುತ್ತೆ ಅಂದರೆ ಈಗಿನ ರೀಲ್ಸ್ ಕಾಲದಲ್ಲಿ ಸ್ಕ್ರೀನ್ ಸ್ಕ್ರೋಲ್ ಮಾಡಿದರೆ ಜಸ್ಟ್ 20 ಸೆಕೆಂಡ್ ಗೆ ಒಂದು ವಿಡಿಯೋ ಬರತ್ತೆ ಆದ್ದರಿಂದ ವೆಕ್ತಿಯ ಮನಸ್ಸು ಚಂಚಲವಾಗಿ, ಆತನಿಗೆ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತ ಬರುತ್ತದೆ.
- Nutrient Deficiency : ಅಂದರೆ ಕೆಲವರಲ್ಲಿ vitamin B12, B1 ಆದ ತಯಾಮಿನ್ ಪೋಷಕಾಂಶಗಳ ಕೊರತೆಯಿಂದ Memory loss ಬರುತ್ತದೆ.
- Hormonal imbalance : ಮಹಿಳೆಯರಲ್ಲಿ ಋತುಚಕ್ರ ಸ್ಟಾರ್ಟ್ ಆದ ನಂತರ ದೇಹದಲ್ಲಿ ಹಾರ್ಮೋನ್ ಗಳ ಬದಲಾವಣೆಗಳು ನಡೆಯುತ್ತವೆ. ಮತ್ತೆ ಥೈರಾಯ್ಡ್ ಸಮಸ್ಯೆ ಇರುವವರಲ್ಲಿ Memory loss ಸಮಸ್ಯೆ ಜಾಸ್ತಿ ಇರುತ್ತದೆ.
- ಮಾನಸಿಕ ಒತ್ತಡ ಮತ್ತೆ ಆತಂಕ : ನಮ್ಮ ಜೀವನಶೈಲಿಯಲ್ಲಿ ಪ್ರತೀ ದಿನ ಒಂದಲ್ಲ ಒಂದು ಕಾರಣಕ್ಕೆ ಮಾನಸಿಕ ಒತ್ತಡ ಮತ್ತೆ ಆತಂಕಕ್ಕೆ ಗುರಿಯಾಗುತ್ತೇವೆ. ಇದರಿಂದ Memory loss ಆಗುತ್ತದೆ.
- ಅತಿಯಾದ ಜಂಕ್ ಫುಡ್ ಸೇವನೆ : ನಮ್ಮ ದೇಹಕ್ಕೆ ನಾವು ಯಾವ ರೀತಿಯ ಆಹಾರ ಕೊಡುತ್ತೇವೆ, ಆ ರೀತಿ ನಮ್ಮ ಮೆದುಳು ಕೆಲಸ ಮಾಡುತ್ತದೆ. ಜಂಕ್ ಫುಡ್, ಮಸಾಲೆ ಪಧಾರ್ಥಗಳು, ಆಯಿಲ್ ಫುಡ್ ಹೆಚ್ಚು ತಿನ್ನುವುದರಿಂದ Memory loss ಬರುತ್ತೆ.
- ನಿದ್ದೆ ಇಲ್ಲದಿರುವುದು : ಕೆಲವರು ಸರಿಯಾಗಿ ನಿದ್ದೆ ಮಾಡುವುದಿಲ್ಲ, ಅಂತಹವರಲ್ಲಿ ಮೆಮೊರಿ ಲಾಸ್ ಬರುತ್ತೆ. sleep apnea ಈ ಕಂಡೀಷನ್ ಬ್ರೈನ್ ಸರಿಯಾಗಿ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಹಕರಿಸುವುದಿಲ್ಲ.
- ಕೆಲವು ಬೇರೆ ಕಾಯಿಲೆಗಳು : ಕೆಲವರಲ್ಲಿ BP, sugar , ಡಯಾಬಿಟಿಸ್, ಈ ರೀತಿಯ ಕಾಯಿಲೆಗಳಿರುತ್ತದೆ ಅವರು ಅತೀ ಹೆಚ್ಚು ಮಾತ್ರೆಗಳನ್ನು ತಿನ್ನುವುದರಿಂದ ಮೆಮೊರಿ ಲಾಸ್ ಆಗುತ್ತದೆ.
- ವಯಸ್ಸಿನ ಸಮಸ್ಯೆ : ಇದು ತುಂಬಾ ಜನರಿಗೆ ಕಾಡುವ ಸಮಸ್ಯೆ 50 ವರ್ಷ ದಾಟಿದ ನಂತರ ನೆನಪಿನ ಶಕ್ತಿ ನಿಧಾನವಾಗಿ ಕಡಿಮೆಯಾಗುತ್ತದೆ.
ಮೆಮೊರಿ ಲಾಸ್ ನ ಪ್ರಮುಖ ಲಕ್ಷಣಗಳು.
ನಮ್ಮ ದೇಶದಲ್ಲಿ ಅನೇಕರಲ್ಲಿ ನೆನಪಿನ ಶಕ್ತಿ ಸಮಸ್ಯೆ ಇದ್ದು ಅದು ಯಾವ ರೀತಿಯ ಲಕ್ಷಣಗಳನ್ನು ಹೊಂದಿದೆ ಎಂದು ನೋಡೋಣ.
- ದಿನನಿತ್ಯ ನಮ್ಮ ಜೀವನದಲ್ಲಿ ನಡೆಯುವ ವಿಷಯಗಳನ್ನ ಮರೆಯುವುದು.
- ಕೆಲವರ ಹೆಸರುಗಳು, ಊರು, ದಿನಾಂಕ,ಕೆಲವೊಂದು ಅಪಾಯಿಂಟ್ಮೆಂಟ್, ಮರೆತುಹೋಗುವುದು..
- ಏನೋ ಮಾತನಾಡುವಾಗ ಮದ್ಯದಲ್ಲಿ ಕೆಲವು ಪದಗಳನ್ನು ಮರೆತುಬಿಡುವುದು.
- ಕೇಳಿದ ಪ್ರಶ್ನೆಯನ್ನೇ ಪದೇ ಪದೇ ಕೇಳುವುದು .
- ಒಂದು ಸರಿ ಹೇಳಿದ ವಿಷಯವನ್ನು ಮತ್ತೆ ಇನೂಂದು ಸರಿ ಹೇಳುವುದು.
- ಯಾವುದೇ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುವುದು.
- ಯಾವುದೇ ವಿಷಯದಲ್ಲಿ ಏಕಾಗ್ರತೆ (Concentration) ಇಲ್ಲದಿರುವುದು.
ಮೆಮೊರಿ ಲಾಸ್ ಗೆ ಅಲೋಪಥಿ ಚಿಕಿತ್ಸೆ
ಮೆಮೊರಿ ಲಾಸ್ ಅನ್ನು ಪತ್ತೆ ಹಚ್ಚಲು ಡಾಕ್ಟರ್ ಕೆಲವೊಂದು ವಿಧಾನಗಳನ್ನ ಬಳಸುತ್ತಾರೆ.
- ಬ್ರೈನ್ ಇಮೇಜಿಂಗ್ ಮಾಡುತ್ತಾರೆ. ಇದರಲ್ಲಿ MRI, CT ಸ್ಕ್ಯಾನ್ ಮಾಡಿ ಮೆದುಳಿನ ಸಮಸ್ಯೆಯನ್ನ ಪತ್ತೆ ಮಾಡುತ್ತಾರೆ.
- ರಕ್ತ ಪರೀಕ್ಷೆಯಲ್ಲಿ ನೆನಪಿನಶಕ್ತಿ ಕಡಿಮೆಯಾಗುವ ವಿಧಾನವನ್ನು ಕಂಡು ಹಿಡಿಯುತ್ತಾರೆ.
- ಕೆಲವೊಂದು ಮೆಂಟಲ್ ಟೆಸ್ಟ್ ಮಾಡಿ ಸೂಕ್ತ ಚಿಕಿತ್ಸೆ ಕೊಡುತ್ತಾರೆ.
- ತಲೆಯ ನರಗಳನ್ನು ಟೆಸ್ಟ್ ಮಾಡಿ ಅವು ಯಾವ ರೀತಿ ಕೆಲಸ ಮಾಡುತ್ತಿವೆ ಎಂದು ಅಧ್ಯಯನ ಮಾಡುತ್ತಾರೆ.
ನೈಸರ್ಗಿಕ ಮನೆಮದ್ದುಗಳಿಂದ ನೆನಪಿನ ಶಕ್ತಿಗೆ ಬಲ
1. ಬಾದಾಮಿ ಹಾಲು : ಇದರಲ್ಲಿ ಮೆದುಳಿಗೆ ಬೇಕಾದ ಪೋಷಕಾಂಶಗಳು ಸಿಗುತ್ತವೆ. ಆದ್ದರಿಂದ ರಾತ್ರಿ 4-5 ಬಾದಾಮಿ ಬೀಜ ನೆನಸಿ ಬೆಳಿಗ್ಗೆ ಹಾಲಿನಲ್ಲಿ ಮಿಕ್ಸ್ ಮಾಡಿ ಕುಡಿಯುವುದರಿಂದ ಜ್ಞಾಪಕ ಶಕ್ತಿ ಜಾಸ್ತಿಯಾಗುತ್ತದೆ.
2. ಬ್ರಹ್ಮಿ (Brahmi) : ಇದೊಂದು ಆಯುರ್ವೇದ ಗಿಡ, ಇದರಲ್ಲಿ ಮೆಮೊರಿ ಪವರ್ ಮತ್ತೆ ತಿಂಕಿಂಗ್ ಪವರ್ ಅನ್ನು ಜಾಸ್ತಿ ಮಾಡುವ ಗುಣ ಇರುವುದರಿಂದ ಇದನ್ನು ವಾರಕ್ಕೆ ಒಂದು ಬಾರಿ ತಿನ್ನುವುದು ಅಗತ್ಯ.
3. ಜೇನು + ಹಾಲು : ಹಾಲಿನಲ್ಲಿ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ.
4. ಯೋಗ ಮತ್ತು ಧ್ಯಾನ : ದಿನಕ್ಕೆ ಕನಿಷ್ಠ 30 ನಿಮಿಷ ಯೋಗ ಮತ್ತೆ ಧ್ಯಾನ ಮಾಡುವುದರಿಂದ ಕಾನ್ಸಂಟ್ರೇಶನ್ ಪವರ್ ಜಾಸ್ತಿಯಾಗಿ, ನೆನಪಿನ ಶಕ್ತಿ ಉತ್ತಮವಾಗುತ್ತದೆ.
5. ತೆಂಗಿನ ಎಣ್ಣೆ : ತಲೆಗೆ ತೆಂಗಿನ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ತಲೆಯ ಕೂದಲಿನ ಬೇರಿನ ಆಳಕ್ಕೆ ಇಳಿದು ತಲೆಗೆ ತಂಪನ್ನು ನೀಡುತ್ತದೆ, ಜೊತೆಗೆ, ಮೆದುಳಿಗೆ ಬೇಕಾದ ಕೆಲವು ಅಂಶಗಳನ್ನು ತೆಂಗಿನ ಎಣ್ಣೆ ಕೊಡುತ್ತದೆ.
ಇದನ್ನೂ ಓದಿ : 10 Best Foods for Brain Health
ಮೆಮೊರಿ ಶಕ್ತಿಯನ್ನು ಹೆಚ್ಚಿಸುವ ಪೌಷ್ಠಿಕ ಆಹಾರಗಳು
ಮೆಮೊರಿ ಶಕ್ತಿಯನ್ನು ಹೆಚ್ಚಿಸುವ 6 ಪೌಷ್ಠಿಕ ಆಹಾರಗಳು :
1. ಮೀನು (Fish) : ಮೀನು ತಿನ್ನುವುದರಿಂದ ಮೆದುಳಿನ ನರಗಳ ಶಕ್ತಿ ಜಾಸ್ತಿಯಾಗುತ್ತದೆ. ಇದರಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಇದ್ದು ನೆನಪಿನಶಕ್ತಿ ಹೆಚ್ಚಾಗಲು ಸಹಾಯ ಮಾಡುತ್ತದೆ.
2. ಕಡಲೆಕಾಯಿ ಮತ್ತು ಬಾದಾಮಿ : ಕಡಲೆಕಾಯಿಯಲ್ಲೂ ಸಹ ಬಾದಾಮಿ ಬೀಜದಲ್ಲಿರುವ ವಿಟಮಿನ್ E ಅಂಶ ಜಾಸ್ತಿ ಇದ್ದು ಬ್ರೈನ್ ಸೆಲ್ ಗಳನ್ನೂ ಆಕ್ಟಿವ್ ಮಾಡಲು ಸಹಾಯ ಮಾಡುತ್ತವೆ.
3. ಬೆರ್ರಿಗಳು : ಸ್ಟ್ರಾಬೆರಿ, ಬ್ಲೂಬೆರಿ, ಈ ರೀತಿ ಬೆರ್ರಿ ಗಳನ್ನೂ ತಿನ್ನುವುದರಿಂದ ಇದರಲ್ಲಿನ ಆಂಟಿಆಕ್ಸಿಡೆಂಟ್ಗಳು ಮೆದುಳಿನ ಶಕ್ತಿಯನ್ನು ಜಾಸ್ತಿಮಾಡಲು ಸಹಾಯ ಮಾಡುತ್ತವೆ.
4. ಹಸಿರು ತರಕಾರಿಗಳು : ತರಕಾರಿಗಳು ನಮ್ಮ ದೇಹದ ಆರೋಗ್ಯವನ್ನು ಯಾವ ರೀತಿ ಕಾಪಾಡುತ್ತವೆ ಅದೇ ರೀತಿ ನಮ್ಮ ಮೆದುಳಿನ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ಫೋಲಿಕ್ ಆಸಿಡ್ ಮತ್ತೆ ಐರನ್ ಅಂಶ ಜಾಸ್ತಿ ಇದ್ದು ಇದು ನೆನಪಿನ ಶಕ್ತಿಯನ್ನು ಬಲಗೊಳಿಸುತ್ತವೆ.
5. ಮೊಟ್ಟೆ : ಮೊಟ್ಟೆಯಲ್ಲಿ ಚೋಲಿನ್ ಅಂಶವಿದ್ದು, ಇದು ಮೆದುಳಿನ ಕಾರ್ಯಕ್ಕೆ ಸಹಾಯಕಾರಿ.
6. ಡಾರ್ಕ್ ಚಾಕೊಲೇಟ್ : ಇದು ಬ್ರೈನ್ ಸೆಲ್ ಗಳನ್ನೂ ತಕ್ಷಣಕ್ಕೆ ಆಕ್ಟಿವ್ ಮಾಡುವ ಶಕ್ತಿ ಇದೆ, ಆದ್ದರಿಂದ ವಾರಕ್ಕೊಮ್ಮೆ ಡಾರ್ಕ್ ಚಾಕೊಲೇಟ್ ಅನ್ನು ತಿನ್ನಬೇಕು. ಇದು ಬ್ರೈನ್ ಪಂಕ್ಷನ್ ಸುಧಾರಿಸುತ್ತದೆ.
ಮೆಮೊರಿ ಪವರ್ ಹೆಚ್ಚಿಸಲು ಕೆಲವೊಂದು ಟಿಪ್ಸ್
- ಯಾವುದಾದರೂ ವಿಷಯದ ಬಗ್ಗೆ ದಿನಕ್ಕೆ 2 ಪೇಜ್ ಬರೆಯಿರಿ.
- ನಿಮ್ಮ ದಿನಚರಿಯನ್ನು ಬರೆಯಿರಿ(ಬೆಳಿಗ್ಗೆ ಎದ್ದಾಗಿಂದ ರಾತ್ರಿ ಮಲಗುವ ವರೆಗೂ ಏನೆಲ್ಲಾ ಕೆಲಸಗಳನ್ನ ಮಾಡುತ್ತೀರಿ, ಯಾರನ್ನೆಲ್ಲಾ ಮೀಟ್ ಮಾಡುತ್ತೀರಿ, ನಿನ್ನೆಗಿಂದ್ತಾ ಇವತ್ತು ನಿಮ್ಮ ಸಾಧನೆ ಏನು ಅನ್ನುವುದನ್ನು ಬರೆಯಿರಿ).
- ಹೊಸ ಬುಕ್ಸ್ ಅನ್ನು ಓದಿ.
- ತಿಂಗಳಿಗೊಂದು ಹೊಸ ಭಾಷೆ ಕಲಿಯಲು ಪ್ರಯತ್ನ ಮಾಡಿ.
- ಟಾರ್ಗೆಟ್ ಫಿಕ್ಸ್ ಮಾಡಿ ಒಂದು ಕೆಲಸ ಮುಗಿಯುವ ತನಕ ಬೇರೆ ಕೆಲಸದ ಯೋಚನೆ ಬೇಡ.
- ರೂಬಿಕ್ಸ್ ಕ್ಯೂಬ್, ಪಜಲ್ ಆಡಿ(ಇದು ನಿಮ್ಮ ಮೈಂಡ್ ಅನ್ನು ಶಾರ್ಫ್ ಮಾಡುತ್ತೆ ಮತ್ತೆ ವಿಷಯಗಳನ್ನ ಚನ್ನಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತೆ ಇದು ನನ್ನ ವೈಯಕ್ತಿಕ ಅನುಭವ).
ಈ ರೀತಿಯ ಸಣ್ಣ ಸಣ್ಣ ಕೆಲಸಗಳನ್ನು ಮಾಡುವುದರಿಂದ ನಿಮ್ಮ ನೆನಪಿನ ಶಕ್ತಿ ದಿನೇ ದಿನೇ ಜಾಸ್ತಿಯಾಗುತ್ತದೆ.
ಯಾವಾಗ Neurologist ಡಾಕ್ಟರ್‌ನ್ನು ಸಂಪರ್ಕಿಸಬೇಕು?
Memory loss ಲಕ್ಷಣಗಳು ತುಂಬಾ ಅತಿಯಾದಾಗ ಡಾಕ್ಟರ್ ಅನ್ನು ಸಂಪರ್ಕಿಸಬೇಕು;
- ದಿನನಿತ್ಯದ ಕೆಲಸಗಳಿಗೆ ತೊಂದರೆ ಆಗುತ್ತಿದ್ದಾಗ.
- ಮನುಷ್ಯರನ್ನು, ಮತ್ತೆ ಹೆಸರುಗಳನ್ನೂ ಸಂಪೂರ್ಣವಾಗಿ ಮರೆತು ಹೋದಾಗ.
- ವ್ಯಕ್ತಿತ್ವದಲ್ಲಿ ತುಂಬಾ ಬದಲಾವಣೆಗಳಾದಾಗ,
- ಎಲ್ಲಿಯೋ ಹೋಗುವುದಕ್ಕೆ ಹೋಗಿ ಬೇರೆಲ್ಲೋ ಹೋಗಲು ಪ್ರಯತ್ನಿಸಿದಾಗ.
Memory Loss ಇದು ನರಗಳ ಸಮಸ್ಯೆಯಾಗಿರುವುದರಿಂದ ತುಂಬಾ ಅನುಭವ ಇರುವ ನ್ಯೂರೊಲೊಜಿಸ್ಟ್ ಡಾಕ್ಟರ್ ಅನ್ನು ಸಂಪರ್ಕಿಸಬೇಕು.
FAQs :
ಮೆಮೊರಿಲಾಸ್ ನ ಲಕ್ಷಣಗಳೇನು?
ಪ್ರತೀದಿನ ಮಾಡುವ ಕೆಲಸಗಳನ್ನು ಸರಿಯಾಗಿ ಮಾಡಲು ಆಗದೇ ಇರುವುದು.
ಹೇಳಿದ್ದನ್ನೇ ಪದೇ ಪದೇ ಹೇಳುತ್ತಿರುವುದು.
ಒಂದು ವಿಷಯದಲ್ಲಿ ಫೋಕಸ್ ಮಾಡಲು ಆಗದೆ ಇರುವುದು.
ಮಾತನಾಡುವಾಗ ಮಧ್ಯ ಮಧ್ಯ ಕೆಲವು ಪದಗಳನ್ನು ಮರೆಯುವುದು.
ಮೆಮೊರಿ ಲಾಸ್ ಗೆ ಇರುವ ಬೆಸ್ಟ್ ವಿಟಮಿನ್ಸ್ ಯಾವು?
ಮೆಮೊರಿ ಲಾಸ್ ಗೆ ಕೆಲವೊಂದು ಪ್ರಮುಖ ವಿಟಮಿನ್ಸ್ ಇದಾವೆ ಅವುಗಳೆಂದರೆ, ಬಿ ಕಾಂಪ್ಲೆಸ್, ವಿಟಮಿನ್ B12, ವಿಟಮಿನ್ D, E, ಮತ್ತು ಫೋಲಿಕ್ ಆಸಿಡ್, ಇವು ಮೆದುಳಿನ ಶಕ್ತಿಯನ್ನು ಸ್ಟ್ರಾಂಗ್ ಮಾಡುತ್ತವೆ ಮತ್ತೆ ಮೀನು ತಿನ್ನುವುದು ಮೆದುಳಿಗೆ ತುಂಬಾ ಒಳ್ಳೆಯದು.
ಮೆಮೊರಿಲಾಸ್ ಗೆ ಯಾವ ಡ್ರಿಂಕ್ಸ್ ಒಳ್ಳೆಯದು?
ಕೆಲವು ವರದಿಗಳ ಪ್ರಕಾರ ಗ್ರೀನ್ ಟೀ ಕುಡಿಯುವುದರಿಂದ ಮೆಮೊರಿ ಪವರ್ ಜಾಸ್ತಿಯಾಗುತ್ತೆ. ಮತ್ತೆ ಇದರ ಜೊತೆಗೆ ಆರೆಂಜ್ ಜ್ಯೂಸ್ ಮತ್ತೆ ದಾಳಿಂಬೆ ಜ್ಯೂಸ್ ಕುಡಿದರೆ ಬ್ರೈನ್ ಪವರ್ ಜಾಸ್ತಿಯಾಗುತ್ತದೆ.

It is a good Blog👍
It is a Good comment👍