ನಮ್ಮ ತಲೆಯಲ್ಲಿ ಮೆದುಳು ಕೇವಲ 1300-1400 ಗ್ರಾಮ್ ಅಷ್ಟೇ ತೂಕವಿರುತ್ತೆ, ಆದರೆ ಅದರ ನೆನಪಿನಶಕ್ತಿ, ಆಲೋಚನೆಗಳು, ಭಾವನೆಗಳು, ಎಲ್ಲವೂ ಮನುಷ್ಯನನ್ನು ಜಗತ್ತನ್ನು ಆಳುವ ಶಕ್ತಿ ಕೊಡುತ್ತದೆ. ಮತ್ತು ಮನುಷ್ಯನ ವ್ಯಕ್ತಿತ್ವವನ್ನು ತೋರಿಸುತ್ತದೆ. ಆದ್ದರಿಂದ Brain health ಸರಿಯಾಗಿ ನೋಡಿಕೊಳ್ಳಬೇಕು.
ನಾವು ಪ್ರತೀದಿನ ಏನು ಕೆಲಸ ಮಾಡುತೀವಿ, ಪ್ರತಿಯೊಂದು ಕೆಲಸಕ್ಕೂ ನಮ್ಮ ಮೆದುಳು ಮತ್ತೆ ಮೆದುಳಿನಲ್ಲಿರುವ ಕೋಟ್ಯಂತರ ನರಗಳು ನೇರ ಕಾರಣ. ಇವೇನಾದರೂ ಸರಿಯಾಗಿ ಕೆಲಸ ಮಾಡದೆ ಇದ್ದರೆ, ನಮ್ಮ ದೇಹದ ಯಾವುದೇ ಭಾಗ ತನ್ನ ಕೆಲಸವನ್ನ ಮಾಡುವುದಕ್ಕೆ ಆಗುವುದಿಲ್ಲ. ಅಂದರೆ ನಮಗೆ ಆಲೋಚನೆಗಳೇ ಬರೋಲ್ಲ, ಯಾರಾದರೂ ಮುಟ್ಟಿದರೆ ನಮಗೆ ಅರಿವೇ ಆಗೋಲ್ಲ ಅಂತ ಪರಿಸ್ಥಿತಿ ಬರುತ್ತೆ ಅದಕ್ಕೆಲ್ಲಾ ನೇರ ಕಾರಣ ನಮ್ಮ ಮೆದುಳಿನ ಆರೋಗ್ಯ.
ನಮ್ಮ ದೇಹದ ಬೇರೆ ಯಾವುದೇ ಭಾಗಕ್ಕೆ ತೊಂದರೆ ಆದರೆ ಆ ಭಾಗ ಬೇಗ ವಾಸಿಯಾಗುತ್ತೆ. ಆದರೆ ಮೆದುಳಿಗೇನಾದರೂ ತೊಂದರೆ ಆದರೆ ಅದು ವಾಸಿಯಾಗೋಲ್ಲ. ವಾಸಿ ಆಗದಿರೋತರ ಕೆಲವೊಂದು ಕಾಯಿಲೆಗಳು ಮೆದುಳಿಗೆ ಬರುತ್ತೆ. ಅವೇ Alzheimer’s ಮತ್ತೆ ಪಾರ್ಕಿನ್ಸನ್ ಕಾಯಿಲೆ. ಇವನ್ನು ಬಿಟ್ಟು ಸ್ಟ್ರೋಕ್, ಬ್ರೈನ್ tumors, meningitis, ಇವು ಮೆದುಳಿಗೆ ಬರುವ ಕಾಯಿಲೆಗಳು. ಇವುಗಳನ್ನು ನಿದಾನವಾಗಿ ಗುಣಪಡಿಸಬೇಕು.
ನಮ್ಮ ಈಗಿನ ಜೀವನಶೈಲಿಯಲ್ಲಿ ದೇಹಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತೀವಿ, ಅಷ್ಟೇ ಪ್ರಾಮುಖ್ಯತೆ ಮೆದುಳಿನ ಆರೋಗ್ಯಕ್ಕೂ ಕೊಡಬೇಕು.
Brain Health ಎಷ್ಟು ಮುಖ್ಯ ಅಂದರೆ, ಇದು ನಾವು ತಗೋಳೋ ನಿರ್ದಾರಗಳು, ಭಾವನೆಗಳು, ಆಲೋಚನೆಗಳು ಎಲ್ಲವನ್ನು ಕಂಟ್ರೋಲ್ ಮಾಡುತ್ತೆ.
ಒಂದು ವೇಳೆ ನಾವು ಇದಕ್ಕೆ ಸರಿಯಾಗಿರೋ ಆಹಾರ ಕೊಡಲಿಲ್ಲ ಅಂದರೆ, ಅದು ನಿಧಾನವಾಗಿ ತನ್ನ ನೆನಪಿನ ಶಕ್ತಿಯನ್ನ ಕಳೆದುಕೊಳ್ಳುತ್ತೆ, concentration power ಕಡಿಮೆ ಆಗುತ್ತೆ, ದೇಹಕ್ಕೆ ಒತ್ತಡ ಜಾಸ್ತಿಯಾಗುತ್ತೆ.
ಈ ಬ್ಲಾಗ್ ನಲ್ಲಿ ನಾವು brain health, ಮೆಮೊರಿ ಪವರ್, ಅದಕ್ಕೆ ಬೇಕಿರೋ ಉತ್ತಮ ಆಹಾರ, ಕೆಲವೊಂದು ಮನೆಮದ್ದುಗಳು, ವೈದ್ಯರ ಸಲಹೆಗಳು, ಇವೆಲ್ಲವನ್ನೂ ವಿವರವಾಗಿ ತಿಳಿದುಕೊಳ್ಳೋಣ.
Table of Contents
Toggleನಮಗೆ brain health ಯಾಕೆ ಮುಖ್ಯ ಆಗುತ್ತೆ?
ನಮ್ಮ ದೇಹವನ್ನ Control ಮಾಡೋದು ನಮ್ಮ ಮೆದುಳು. ಆದ್ದರಿಂದ ಅದು ಯಾವ ರೀತಿ ವರ್ಕ್ ಮಾಡುತ್ತೆ ನೋಡೋಣ.
- ಬಹಳ ಮುಖ್ಯವಾಗಿ ನೆನಪಿನ ಶಕ್ತಿ : ನಾವು ಏನೇ ಕೆಲಸ ಮಾಡಬೇಕಾದರೆ ನೆನಪಿನ ಶಕ್ತಿ ಮುಖ್ಯ ಅದೇ ಇಲ್ಲ ಅಂದರೆ ನಾವು ಇದ್ದು ಇಲ್ಲದಂತೆ.
- ಆಲೋಚನೆಗಳು(Thoughts) : ನಾವು ಜೀವನದಲ್ಲಿ ಎತ್ತರಕ್ಕೆ ಬೆಳಿಬೇಕಾದರೆ, ಏನಾದರೂ ಸಾಧನೆ ಮಾಡಬೇಕಾದರೆ, ಆಲೋಚನೆಗಳು ತುಂಬಾ ಮುಖ್ಯ. ಇವು ಬರುವುದು ನಮ್ಮ brain health ಚನ್ನಾಗಿದ್ದಾಗ ಮಾತ್ರ.
- ಕಲಿಯುವ ಶಕ್ತಿ (Learning power) : ನಾವೇನಾದರೂ ಹೊಸ ವಿಷಯಗಳನ್ನ ಕಲಿಯುವುದಕ್ಕೆ ನಮಗೆ ಸಹಾಯ ಮಾಡುವುದು ನಮ್ಮ ಬ್ರೈನ್. ಅದು ಸರಿಯಾಗಿ ಕೆಲಸ ಮಾಡಿಲ್ಲ ಅಂದರೆ ನಾವು ಏನನ್ನೂ ಕಲಿಯುವುದಕ್ಕೆ ಆಗೋದಿಲ್ಲ.
- ಭಾವನೆಗಳು(Emotions) : ಇವು ಒಬ್ಬ ಮನುಷ್ಯನ ಜೀವನದಲ್ಲಿ ಎಷ್ಟು ಮುಖ್ಯ ಅಂದರೆ, ಕೆಲವರು ಇವನ್ನು ಕೆಟ್ಟ ರೀತಿ ಬಳಸಿಕೊಂಡರೆ, ಇನ್ನೂ ಕೆಲವರು ಜೀವನದಲ್ಲಿ ಮುಂದೆ ಬರುವುದಕ್ಕೆ ಬಳಸಿಕೊಳ್ಳುತ್ತಾರೆ.
ಈ ಎಲ್ಲಾ ಕೆಲಸವನ್ನು ಮೆದುಳು ಆಯಾಸ ಇಲ್ಲದೆ ಮಾಡುತ್ತೆ, ಯಾವಾಗ ಅಂದರೆ ನಾವು ಅದಕ್ಕೆ ಸರಿಯಾದ ಆಹಾರ ಕೊಟ್ಟಾಗ.
ಅದರಲ್ಲೂ ಕೆಲವೊಂದು ಸಂಶೋಧನೆಯ ಪ್ರಕಾರ ನಮ್ಮ ಬ್ರೈನ್ ಕೇವಲ 20% ಅಷ್ಟೇ ಕೆಲಸ ಮಾಡುತ್ತಿರುತ್ತೆ. ಇನ್ನು 80% ರಷ್ಟು ಮೆದುಳಿಗೆ ನಾವು ಕೆಲಸ ಕೊಡೋದೇ ಇಲ್ಲ. ಯೋಚನೆ ಮಾಡಿ ಮನುಷ್ಯ ಬರೀ 20% ಬ್ರೈನ್ ಉಪಯೋಗಿಸಿ ಇಷ್ಟೊಂದು ಕೆಲಸ ಮಾಡೋವಾಗ ಪೂರ್ತಿ ಬಳಸಿದರೆ ಏನೇನೆಲ್ಲಾ ಆಗುತ್ತೆ ಅಂತ.
ಆದ್ದರಿಂದ brain health ಚನ್ನಗಿದ್ದಾಗ ನಾವು;
- ಜಾಸ್ತಿ ತಿಳುದುಕೊಳ್ಳಬಹುದು.
- ಸರಿಯಾದ ನಿರ್ದಾರಗಳನ್ನ ತಗೋಬಹುದು.
- ಬೇಕಾಗಿದ್ದನೆಲ್ಲಾ ಕಲಿಯಬಹುದು.
ಇದನ್ನೂ ಓದಿ : ಡಿಪ್ರೆಶನ್ ಬಗ್ಗೆ ಸಂಪೂರ್ಣ ಮಾಹಿತಿ.
ನಮ್ಮ brain ಸರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ಅದಕ್ಕೆ ಯಾವ ರೀತಿ ಆಹಾರ ಬೇಕು?
ಕೆಲವೊಂದು ಪೋಷಕಾಂಶಗಳು ಮತ್ತೆ ವಿಟಮಿನ್ಸ್ ಆಹಾರ.
ನಾವು ಯಾವ ರೀತಿಯ ಆಹಾರ ತಿನ್ನುತ್ತೀವಿ ಅದು ನಮ್ಮ ಮೆದುಳಿನ ಕೆಲಸವನ್ನ ನಿರ್ಧಾರಮಾಡುತ್ತೆ.
ಮೆದುಳಿನ ಕಾರ್ಯ ಚನ್ನಾಗಿ ಆಗಬೇಕಾದರೆ ಮುಖ್ಯವಾಗಿ ಬೇಕಿರುವುದೇ ಪೋಷಕಾಂಶಗಳು (Nutrients)
- ಮೆಗ್ನಿಶಿಯಂ ಮತ್ತೆ ಐರನ್ : ಇವು ಮೆದುಳಿನ ಕಾನ್ಸಂಟ್ರೇಶನ್, ಫೋಕಸ್ ಅನ್ನು ಜಾಸ್ತಿ ಮಾಡುತ್ತೆ. ಇವು ಕುಂಬಳಕಾಯಿ ಬೀಜ, ಡ್ರೈ ಫ್ರೂಟ್ಸ್, ಕಾಳುಗಳು, ಮತ್ತೆ ಹಸಿರು ತರಕಾರಿಗಳಲ್ಲಿ ಸಿಗುತ್ತೆ.
- ಆಂಟಿ ಆಕ್ಸಿಡೆಂಟ್ : ಇದು ಮೆದುಳಿನ ವಯಸ್ಸು, ಅಂದರೆ age ಅನ್ನು ಯಂಗ್ ಆಗಿ ನೋಡಿಕೊಳ್ಳುತ್ತದೆ. ಇದು ಬ್ಲೂಬೆರಿ, ಸ್ಟ್ರಾಬೆರಿ, ಪೀನಟ್, ವಾಲ್ನಟ್, ಡಾರ್ಕ್ ಚಾಕೊಲೇಟ್, ಲವಂಗ, ಚಕ್ಕೆ, ಮತ್ತೆ ಹರಿಶಿನ ದಲ್ಲಿ ಹೆಚ್ಚಾಗಿ ಸಿಗುತ್ತದೆ.
- ವಿಟಮಿನ್ C & E : ಇವು ಆಂಟಿ ಆಕ್ಸಿಡೆಂಟ್ಸ್ ಆಗಿ ಕೆಲಸ ಮಾಡುತ್ತವೆ. ಇವು brain health ಗೆ ಮುಖ್ಯವಾಗಿ ಬ್ರೈನ್ ಸೆಲ್ ಗಳನ್ನಆಕ್ಟಿವ್ ಮಾಡುತ್ತೆ, ಮತ್ತೆ ಮರೆವು ಕಾಯಿಲೆಯನ್ನು ದೂರ ಮಾಡುತ್ತೆ. ಇವು ಆರೆಂಜ್, ಪೈನಾಪಲ್, ದಾಳಿಂಬೆ, ನಿಂಬೆ, ಮತ್ತೆ ಬ್ರಾಕೊಲಿ, ಸ್ಟ್ರಾಬೆರಿ, ಇತ್ಯಾದಿ ಗಳಲ್ಲಿ ಸಿಗುತ್ತದೆ.
- Omega-3 ಫ್ಯಾಟಿ ಆಸಿಡ್ : ಇದು ಮೆದುಳಿನ ಸೆಲ್ ಗಳನ್ನ ಗಟ್ಟಿ ಮಾಡುತ್ತೆ, ನೆನಪಿನಶಕ್ತಿ, ಕಾನ್ಸಂಟ್ರೇಶನ್ ಅನ್ನು ಜಾಸ್ತಿ ಮಾಡುತ್ತೆ.
ಇದು ಮುಖ್ಯವಾಗಿ ಮೀನಿನಲ್ಲಿ ಸಿಗುತ್ತೆ, ಮತ್ತೆ ಸೀ ಫುಡ್ಸ್ ಆದ ಕ್ರಾಬ್ಸ್, ಸೀಗಡಿ, ಏಡಿ, ಫ್ರಾನ್ಜ್ , ಫ್ರೂಟ್ಸ್, ಕಾಳುಗಳು ಇತ್ಯಾದಿಗಳಲ್ಲಿ ಸಿಗುತ್ತದೆ.
ನಾವು ಸರಿಯಾದ ಆಹಾರ ತಿನ್ನುವುದರಿಂದ brain health ಸುಧಾರಿಸುತ್ತದೆ. ಮತ್ತೆ ನೆನಪಿನ ಶಕ್ತಿ ಜಾಸ್ತಿ ಯಾಗಿ, ಫೋಕಸ್ ಜಾಸ್ತಿಯಾಗುತ್ತದೆ, ಮತ್ತೆ ಒತ್ತಡ ಕಡಿಮೆಯಾಗುತ್ತದೆ.
ಮೆದುಳಿನ ಆರೋಗ್ಯ ಮತ್ತೆ ನೆನಪಿನ ಶಕ್ತಿಗೆ 10 ಪ್ರಮುಖ ಆಹಾರಗಳು.
1. ಮೀನು : ನಮ್ಮ ಮಿದುಳು ಸರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ಮೀನು ತಿನ್ನುವುದರಿಂದ ಮೆದುಳು ಚುರುಕಾಗುತ್ತದೆ. ನೀವು ನೋಡಿರಬೇಕು ಸಮುದ್ರ ಅಂಚಿನಲ್ಲಿರುವ ಜನರು ನಮಗಿಂತ ಜಾಸ್ತಿ ಚುರುಕಾಗಿರುತ್ತಾರೆ. ಯಾಕಂದರೆ ಅವರು ವಾರಕ್ಕೆ ಕನಿಷ್ಠ ಅಂದರೂ 2-3 ಸರಿ ಮೀನು ತಿನ್ನುತ್ತಾರೆ.
ಉದಾ : ಮಂಗಳೂರು, ದಕ್ಷಿಣ ಕನ್ನಡ, ಉಡುಪಿ, ಈ ಭಾಗಗಳಲ್ಲಿ ಜನ ಶಾರ್ಪ್ ಇರುತ್ತಾರೆ. ಮತ್ತೆ ಆ ಭಾಗದ ಶಾಲೆಗಳಲ್ಲಿ ಒಳ್ಳೆಯ ರಿಸಲ್ಟ್ ಬರುತ್ತೆ.
ಸಾಲಾಮೋನ್, ಮ್ಯಾಕ್ರೆಲ್, ಬಾಂಗುಡೆ, ಈ ಮೀನುಗಳನ್ನ ತಿನ್ನುವುದರಿಂದ ಇದರಲ್ಲಿ omega 3 ಫ್ಯಾಟಿ ಆಸಿಡ್ ಸಿಗುತ್ತೆ ಇದು ನಮ್ಮ ಮಿದುಳಿನ ನೆನಪಿನ ಶಕ್ತಿ ಜಾಸ್ತಿ ಮಾಡುತ್ತೆ, ಮತ್ತೆ ಅಲ್ಜಾಮೈರ್ಸ್ ಕಾಯಿಲೆ (Alzheimer’s disease) ಕಡಿಮೆ ಮಾಡುತ್ತೆ.
2. ಬ್ಲೂಬೆರಿ(Blueberries) : ಇದರಲ್ಲಿ ಅಂಟಾಸಿಯಾನಿನ್ಸ್ ಆಣುವ ಆಂಟಿ ಆಕ್ಸಿಡೆಂಟ್ಸ್ ಜಾಸ್ತಿ ಇರುವುದರಿಂದ ಮೆದುಳಿಗೆ ಜಾಸ್ತಿ ಒತ್ತಡ ಆಗುವುದನ್ನ ತಡೆಯುತ್ತದೆ. ಮತ್ತೆ ಜ್ಞಾಪಕ ಶಕ್ತಿ ಜಾಸ್ತಿ ಮಾಡುತ್ತದೆ.
ಇದು ನಮ್ಮ ಕಡೆ ಸಿಗುವುದಿಲ್ಲ. ಆದ್ದರಿಂದ ಸ್ವಲ್ಪ ರೇಟ್ ಜಾಸ್ತಿನೇ ಇದೆ ಆದರೆ ವಾರಕ್ಕೆ ಒಂದು ಸಾರಿ ತಿಂದರೆ ಸಾಕು.
3. ಹಸಿರು ಸೊಪ್ಪುಗಳು : ಇದರಲ್ಲಿ ಬ್ರಾಕೊಲಿ, (ಇದರಲ್ಲಿ ವಿಟಮಿನ್ K ಜಾಸ್ತಿ ಇದೆ), ಸ್ಪಿನಾಚ್, ಕಾಳೆ ಸೊಪ್ಪು, ತುಳಸಿ, ಎಲೆಕೋಸು, ಹಸಿರು ತರಕಾರಿಗಳು , ಇತ್ಯಾದಿ ಇವುಗಳನ್ನ ತಿನ್ನುವುದರಿಂದ ಮೆದುಳಿನ ಶಕ್ತಿ ಜಾಸ್ತಿಯಾಗುತ್ತೆ, ಮತ್ತೆ ಮೆದುಳಿಗೆ ಬೇಗ ಏಜ್ ಆಗುವುದಿಲ್ಲ.
4. ಡ್ರೈ ಫ್ರೂಟ್ಸ್ :ಇದರಲ್ಲಿ, ಬಾದಾಮಿ, ಅಂಜೂರ, ವಾಲ್ನಟ್, ದ್ರಾಕ್ಷಿ, ಆರ್ಕೊಟ್, ಕುಂಬಳ ಬೀಜಗಳು, ಇತ್ಯಾದಿ ತಿನ್ನುವುದರಿಂದ ಇದರಲ್ಲಿ healthy fats ಇರುತ್ತೆ, ಮತ್ತೆ ವಿಟಮಿನ್ ಈ, ಜಿಂಕ್, ಮೆಗ್ನಿಶಿಯಂ ಈ ರೀತಿ ಮಿನರಲ್ಸ್ ಸಹ ಇದರಲ್ಲಿ ಇರುವುದರಿಂದ, ಮೆದುಳಿಗೆ ಆಗುವ ಅತಿಯಾದ ಒತ್ತಡವನ್ನ ಕಡಿಮೆ ಮಾಡುತ್ತವೆ.
5. ಡಾರ್ಕ್ ಚಾಕೊಲೇಟ್ : ನೀವು ಕೇಳಿರಬಹುದು ಮಕ್ಕಳು ಎಕ್ಸಾಮ್ ಬರೆಯೋದಕ್ಕೆ ಹೋಗೋವಾಗ ಈ ಡಾರ್ಕ್ ಚಾಕೊಲೇಟ್ ತಿಂದು ಹೋಗಿ ಅಂತ ಕೆಲವು ಪೇರೆಂಟ್ಸ್ ಏಳುತ್ತಾರೆ. ಅದೇನಕ್ಕೆ ಅಂದರೆ ಇದರಲ್ಲಿ ಕೆಲವೊಂದು ಮೆದುಳನ್ನು ಆಕ್ಟಿವ್ ಮಾಡುವ ಕೊಕೊ ಅಂಶಗಳು ಜಾಸ್ತಿ ಇರುತ್ತೆ. ತಿಂದಾಗ ಫೋಕಸ್ ಜಾಸ್ತಿಯಾಗುತ್ತೆ.
6. ಮಶ್ರೂಮ್ : ನಮ್ಮ ದೇಶದಲ್ಲಿ ಸುಮಾರು ಬಗೆಯ ಮಶ್ರೂಮ್, ಅಣಬೆ ಗಳು ಸಿಗುತ್ತೆ. ಆದರೆ ಕೇವಲ ಸ್ವಲ್ಪ ಮಾತ್ರ ದೇಹದ ಮತ್ತೆ ಮೆದುಳಿನ ಆರೋಗ್ಯಕ್ಕೆ ಯೋಗ್ಯ. ಇವನ್ನು ತಿಂಗಳಿಗೆ 2 ಬಾರಿ ತಿನ್ನುವುದರಿಂದ ಮೆಮೊರಿ ಲಾಸ್ ಆಗುವುದು ಕಡಿಮೆಯಾಗುತ್ತೆ. ಮತ್ತೆ ಬ್ರೈನ್ ಶಾರ್ಪ್ ಇರುತ್ತೆ.
7. ಮೊಟ್ಟೆ : ಇದರಲ್ಲಿ Choline ಅಂಶ ಇರುವುದರಿಂದ ನೆನಪಿನ ಶಕ್ತಿ ಜಾಸ್ತಿ ಮಾಡುತ್ತೆ, ಮತ್ತೆ ಕೆಲವೊಬ್ಬರಿಗೆ ಮೂಡ್ ಸ್ವಿನ್ಗ್ಸ್ ಜಾಸ್ತಿ ಇರುತ್ತೆ, ಇವಾಗಿರುವ ಜ್ಞಾನ ಮತ್ತೊಂದು ಸಾರಿ ಇರೋದಿಲ್ಲ, ಅಂತವರಿಗೆ ಹೆಚ್ಚು ಉಪಯುಕ್ತ.
8. ಹರಿಶಿಣ : ಇದರಲ್ಲಿ ಕರ್ಕ್ಯುಮಿನ್ ಎನ್ನುವ ಅಂಶ ಇದ್ದು ಇದು ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತೆ. ನಾವು ಆಹಾರದಲ್ಲಿ ಇದನ್ನು ತಿನ್ನುತ್ತಾ ಇರ್ತ್ತೀವಿ ಆದರೆ ಇದರ ಮಹತ್ವ ನಮಗೆ ಗೊತ್ತಾಗಬೇಕು.
9. ಅವಕಾಡೊ : ಇದರಲ್ಲಿ ಹೆಲ್ತಿ ಫ್ಯಾಟ್ ಇರುತ್ತೆ ಇದನ್ನ ವಾರಕ್ಕೊಮ್ಮೆ ಜ್ಯೂಸು ಮಾಡಿ ಕುಡಿಯಬೇಕು. ಇದು ಮೆದುಳಿಗೆ ಸರಿಯಾಗಿ ರಕ್ತ ಸಂಚಲನ ಮಾಡುತ್ತೆ, ಮತ್ತೆ ಮೆದುಳು ಆಕ್ಟಿವ್ ಆಗಿರಲು ಸಹಾಯ ಮಾಡುತ್ತೆ.
10. ಕಿತ್ತಳೆ ಹಣ್ಣು : ಇದರಲ್ಲಿ ವಿಟಮಿ ಸಿ ಅಂಶ ಜಾಸ್ತಿ ಇದ್ದು, ಇದು ಮೆದುಳಿನ ಸೆಲ್ ಗಳನ್ನು ರಕ್ಷಣೆ ಮಾಡುತ್ತೆ ನಾವು ಹಣ್ಣುಗಳನ್ನು ತಿನ್ನುವಾಗ ವಿಟಮಿನ್ ಸಿ ಇರುವ ಹಣ್ಣುಗಳನ್ನು ಜಾಸ್ತಿ ತಿನ್ನಬೇಕು.
ಮೆದುಳಿನ ಆರೋಗ್ಯ ಚನ್ನಾಗಿರಲು ತಪ್ಪಿಸಬೇಕಾದ ಕೆಲವು ಆಹಾರ ಪದಾರ್ಥಗಳು
- ಜಂಕ್ ಫುಡ್ಸ್ : ಇವು ಬೀದಿ ಬದಿ ಸಿಗುವ ಮಸಾಲೆ, ಗೋಬಿ, ಪಾನಿ ಪುರಿ, ಪಿಜ್ಜಾ ಬರ್ಗರ್, ಇತ್ಯಾದಿ. ಕೆಲವರೆಲ್ಲಾ ಇವಕ್ಕೆ ದಾಸರಾಗಿರುತ್ತಾರೆ, ಅಂದರೆ ದಿನಕ್ಕೆ ಒಮ್ಮೆಯಾದರೂ ತಿನ್ನಲೇ ಬೇಕು ಎಂದು. ಆದರೆ ನೆನಪಿಟ್ಟುಕೊಳ್ಳಿ ಇವುಗಳನ್ನು ಜಾಸ್ತಿ ತಿನ್ನುವುದರಿಂದ ನಿಮಗೆ ತಕ್ಷಣಕ್ಕೆ ಏನು ಗೊತ್ತಾಗುವುದಿಲ್ಲ ಆದರೆ, ನಿದಾನವಾಗಿ ಇದರಿಂದ ಆಗುವ ಅನಾಹುತಗಳು ಗೊತ್ತಾಗುತ್ತವೆ.
- ಅತಿಯಾದ ಸಕ್ಕರೆ : ಕೆಲವರಿಗೆ ಕಾಫಿ ಕುಡಿಯುವಾಗ ಸಕ್ಕರೆ ಜಾಸ್ತಿ ಬೇಕು, ಮತ್ತೆ ಯಾವುದಾದರು ಸಿಹಿ ಪದಾರ್ಥಗಳನ್ನು ದಿನಕ್ಕೆ ಒಮ್ಮೆಯಾದರೂ ತಿನ್ನಬೇಕು, ಎನ್ನುವ ಕ್ರೇವಿಂಗ್ಸ್ ಇರುತ್ತೆ ಇದು ತಪ್ಪು. ಎಚ್ಚು ಸಕ್ಕರೆ ಅಂಶ ತಿನ್ನುವುದರಿಂದ ನಿಮ್ಮ ಮೆದುಳಿನ ಮೇಲೆ ನೀರ ಪರಿಣಾಮ ಬೀರುತ್ತೆ.
- ಹಾಲ್ಕೋಹಾಲ್ : ಇದು ಜಾಸ್ತಿ ಕುಡಿಯುವುದರಿಂದ ಮೆಮೊರಿ ಲಾಸ್ ಆಗುವ ಚಾನ್ಸ್ ಜಾಸ್ತಿ, ಮತ್ತೆ ಮೆದುಳು ನಾವೇಳುವ ರೀತಿ ಕಾರ್ಯ ನಿರ್ವಹಿಸುವುದಿಲ್ಲ.
- ಟ್ರಾನ್ಸ್ ಫ್ಯಾಟ್ : ಅಂದರೆ ಎಣ್ಣೆಯಲ್ಲಿ ಅತಿಯಾಗಿ ಕರೆದಿರುವ ಈ ಚಿಪ್ಸ್, ಪಾಪ್ಕಾರ್ನ್ಬೇ, ಬೇಕರಿ ಪಧಾರ್ಥಗಳು ಕೇಕ್, ಬಿಸ್ಕೆಟ್ಸ್, ಕೆಲವೊಂದು ಕ್ರೀಮ್ ಪಧಾರ್ಥಗಳು ಇವೆಲ್ಲ ಮೆದುಳಿನ ಆರೋಗ್ಯಕ್ಕೆ ತುಂಬಾ ಡೇಂಜರ್ ಆದಷ್ಟೂ ಅವಾಯ್ಡ್ ಮಾಡಿ.
Brain Health ಗೆ ಕೆಲವೊಂದು ಮನೆ ಪಧಾರ್ಥಗಳು (Home Remedies)
ಕೆಲವೊಂದು ನನ್ನ ವಯಕ್ತಿಕ ಸಲಹೆಗಳು :
- ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಬಿಸಿ ನೀರಿಗೆ ಆರಿಶಿಣ ಸೇರಿಸಿ ಕುಡಿಯಿರಿ. ಇದು ಮೆದುಳಿನ ಕಾರ್ಯಕ್ಷಮತೆ ಜಾಸ್ತಿ ಮಾಡುತ್ತೆ.
- ರಾತ್ರಿ ನೆನೆಸಿಟ್ಟ ಬಾದಾಮಿ ಯನ್ನು ಬೆಳಿಗ್ಗೆ ತಿನ್ನಿ ಇದು ಮೆದುಳಿಗೆ ಶಕ್ತಿ ಕೊಡುತ್ತೆ.
- ರಾತ್ರಿ ಮಲಗುವಾಗ ಒಂದು ಗ್ಲಾಸ್ ಹಾಲಿಗೆ ಹರಿಶಿನ ಹಾಕಿ ಕುಡಿಯಿರಿ.
- ಸಾಧ್ಯವಾದರೆ ದಿನ ಒಂದು ಗ್ಲಾಸ್ ಸಂಜೆ ತುಳಸಿ ಮತ್ತೆ ಶುಂಠಿ ಟೀ ಕುಡಿಯಿರಿ.
ಇವೆಲ್ಲ ಮನೆಯಲ್ಲೇ ಸಿಗುವ ಮೆದುಳಿನ ಆರೋಗ್ಯಕ್ಕೆ ಒಳ್ಳೆಯ ಪಧಾರ್ಥಗಳಾಗಿವೆ.
ಕೆಲವೊಂದು ನನ್ನ ವಯಕ್ತಿಕ ಸಲಹೆಗಳು :
- ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯಿರಿ.
- 30 ನಿಮಿಷ ವ್ಯಾಯಾಮ ಮಾಡಿ.
- ಆದಷ್ಟು ಒತ್ತಡವನ್ನ ಕಡಿಮೆ ಮಾಡಿಕೊಳ್ಳಿ.
- 15-20 ನಿಮಿಷ ಪ್ರಾಣಾಯಾಮ ಮತ್ತೆ ಯೋಗ ಮಾಡಿ. ಇವು ಮೆದುಳಿನ ಮತ್ತೆ ಮನಸ್ಸಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ನನಗೆ ಗೊತ್ತು ಹೇಳುವುದು ಸುಲಭ ಆದರೆ ಮಾಡುವುದು ಕಷ್ಟ. ಆದರೆ ‘ಪ್ರಯತಮ್ ಸರ್ವ ಸಿದ್ದಿ ಸಾಧನಮ್’. ಪ್ರಯತ್ನಿಸಿ ಒಂದು ದೃಢ ನಿಶ್ಚಯ ಮಾಡಿ ಆಗುತ್ತೆ.
