ಮಹಿಳೆಯರ ಜೀವನದಲ್ಲಿ ಪೀರಿಯೆಡ್ಸ್, ಮಾಸಿಕ ಚಕ್ರ (Periods) ಎನ್ನುವುದು ಮುಖ್ಯವಾದ ನೈಸರ್ಗಿಕ ಪ್ರಕ್ರಿಯೆ. ಸಾಮಾನ್ಯವಾಗಿ ಪ್ರತೀ ತಿಂಗಳು ಇದು 21 ರಿಂದ 35 ದಿನಗಳ ಮಧ್ಯ ಬರುತ್ತದೆ. ಆದರೆ ಕೆಲವರಲ್ಲಿ ಈ ಚಕ್ರದಲ್ಲಿ ತುಂಬಾ ವ್ಯತ್ಯಾಸ ಕಂಡುಬರುತ್ತದೆ. ಅದೆಂದರೆ ತುಂಬಾ ಬೇಗ ಅಥವಾ, ತಡವಾಗಿ ಆಗುವುದು, ಇನ್ನೂ ಕೆಲವರಲ್ಲಿ ಕೆಲವು ತಿಂಗಳು ಆಗದೇ ಇರುವುದು, ಇದನ್ನೇ ಇರ್ರೆಗುಲರ್ ಪೀರಿಯೆಡ್ಸ್ ಎಂದು ಕರೆಯುತ್ತೇವೆ.
ಈ ಸಮಸ್ಯೆ ನಮಗೆ ಸಾಮಾನ್ಯ ಸಮಸ್ಯೆಯಂತೆ ಕಂಡರೂ, ದೇಹದಲ್ಲಿ ಹಾರ್ಮೋನ್ ಅಸಮತೋಲನ, ಅಥವಾ ಅನೇಕ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಆದ್ದರಿಂದ ನಾವು ಇದನ್ನು ನಿರ್ಲಕ್ಷಿಸದೇ, ಇದಕ್ಕೆ ಕಾರಣಗಳು, ಮತ್ತು ನೈಸರ್ಗಿಕ ಪರಿಹಾರಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ.
Table of Contents
Toggleನಮ್ಮ ದೇಶದ ಮಹಿಳೆಯರಲ್ಲಿ ಇರ್ರೆಗುಲರ್ ಪೀರಿಯೆಡ್ಸ್ ಯಾವ ರೀತಿ ಇದೆ(Statistics in India).
ಸುಮಾರು 30%-40% ಮಹಿಳೆಯರು ಮತ್ತು ಹೆಣ್ಣು ಮಕ್ಕಳು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಈ ಇರ್ರೆಗುಲರ್ ಪೀರಿಯೆಡ್ಸ್ ಸಮಸ್ಯೆಯನ್ನು ಅನುಭವಿಸುತ್ತಾರೆ ಎಂದು ವರದಿಗಳು ಹೇಳುತ್ತವೆ.
ಯುವತಿಯರಲ್ಲಿ (Teenagers) ಈ ಸಮಸ್ಯೆ ಹಾರ್ಮೋನಲ್ ಬದಲಾವಣೆಯಿಂದ(hormonal changes) ಕಂಡುಬರುತ್ತದೆ.
ಮತ್ತು ನಮ್ಮ ದೇಶದ ಸುಮಾರು 20%-30% ಮಹಿಳೆಯರಲ್ಲಿ PCOS (Polycystic Overy Syndrome) ಸಮಸ್ಯೆ ಕಂಡುಬರುತ್ತದೆ. ಈ ಸಮಸ್ಯೆ ಇರ್ರೆಗುಲರ್ ಪೀರಿಯೆಡ್ಸ್ ಗೆ ನೇರ ಕಾರಣವಾಗುತ್ತದೆ.
ಮುಂಚೆ ನಗರ ಪ್ರದೇಶದ ಮಹಿಳೆಯರ ಜೀವನ ಶೈಲಿಯಿಂದ ಅವರಲ್ಲಿ ಹೆಚ್ಚು ಕಂಡುಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲೂ ನಗರ ವಾತಾವರಣ, ಊಟ, ಜೀವನಶೈಲಿ ಬದಲಾವಣೆಗಳಿಂದ ಹಳ್ಳಿಯ ಮಹಿಳೆಯರಲ್ಲೂ ಈ ಸಮಸ್ಯೆ ಹೆಚ್ಚಾಗತೊಡಗಿದೆ.
ಇರ್ರೆಗುಲರ್ ಪೀರಿಯೆಡ್ಸ್ ಗೆ ಕಾರಣಗಳನ್ನು ತಿಳಿಯೋಣ (causes of irregular periods).
ಇದಕ್ಕೆ ಹಲವಾರು ಕಾರಣಗಳಿವೆ ಅದರಲ್ಲಿ ಕೆಲವೊಂದು ಪ್ರಮುಖವಾಡವನ್ನು ನೋಡೋಣ.
1. ಹಾರ್ಮೋನ್ ಅಸಮತೋಲನದಿಂದ (Hormonal Imbalance) :
ಮಹಿಳೆಯರಲ್ಲಿ ಈಸ್ಟ್ರೊಜೆನ್, ಪ್ರೊಜೆಸ್ಟ್ರಾನ್, ಮತ್ತು ಆಂಡ್ರೋಜೆನ್ ಹಾರ್ಮೋನ್ ಗಳ ಅಸಮತೋಲನವು ಉಂಟಾಗಿ ದೀರ್ಘಕಾಲದ ಒತ್ತಡ, ಥೈರಾಯ್ಡ್ ಸಮಸ್ಯೆಗಳು ಬಂದು ಪೀರಿಯೆಡ್ಸ್ ಸರಿಯಾಗಿ ಆಗುವುದಿಲ್ಲ.
2. PCOS ಕಾರಣದಿಂದ :
ಮಹಿಳೆಯರ ಓವರಿಯಲ್ಲಿ ಸಣ್ಣ ಸಣ್ಣ ಸಿಸ್ಟ್ ಗಳು(Cysts) ಉಂಟಾಗಿ ಮಾಸಿಕ ಚಕ್ರದಲ್ಲಿ ಏರುಪೇರಾಗುತ್ತದೆ.
3. ಮಾನಸಿಕ ಒತ್ತಡ (Psychological stress) :
ಹಲವಾರು ಕಾರಣಗಳಿಂದ ಮಹಿಳೆಗೆ ಮಾನಸಿಕ ಒತ್ತಡ ಇರುತ್ತದೆ, ಅದು ಸಂಸಾರದಿಂದ ಅಥವಾ ಕೆಲಸದಿಂದ, ಇದು ನೇರವಾಗಿ ದೇಹದ ಹಾರ್ಮೋನ್ ಬದಲಾವಣೆ ಆಗಲು ಸೂಚಿಸುತ್ತದೆ. ಇದರಿಂದ ಮಾಸಿಕ ಚಕ್ರದ ಮೇಲೆ ಪರಿಣಾಮ ಬೀರಿ ಇರ್ರೆಗುಲರ್ ಪೀರಿಯೆಡ್ಸ್ ಆಗುತ್ತದೆ.
4. ಥೈರಾಯ್ಡ್ ಸಮಸ್ಯೆ :
ಇತ್ತೀಚಿನ ದಿನಗಳಲ್ಲಿ ತುಂಬಾ ಮಹಿಳೆಯರಲ್ಲಿ ಈ ಥೈರಾಯ್ಡ್ ಸಮಸ್ಯೆ ಜಾಸ್ತಿ ಆಗುತ್ತಿದ್ದು( ಹೈಪರ್ ಥೈರಾಯ್ಡ್ ಮತ್ತೆ ಹೈಪೋ ಥೈರಾಯ್ಡ್ ) ಇದರಿಂದ ದೇಹದ ಬೆಳವಣಿಗೆ ಕುಂಠಿತ ಆಗುತ್ತಿದ್ದು ಇದು ಸಹ ಇರ್ರೆಗುಲರ್ ಪೀರಿಯೆಡ್ಸ್ ಗೆ ಕಾರಣವಾಗುತ್ತಿದೆ.
5. ಪುಬರ್ಟಿ (Puberty) :
ಇದು ಸಾಮಾನ್ಯವಾಗಿ ೧೫-೨೦ ವರ್ಷ ವಯಸ್ಸಿನ ಹೆಣ್ಣು ಮಕ್ಕಳಲ್ಲಿ ಕಂಡು ಬರುತ್ತದೆ. ಆಗ ತಾನೇ ತಮ್ಮ ದೇಹದಲ್ಲಿ ಋತುಚಕ್ರ ಪ್ರಾರಂಭವಾಗಲು ಶುರುವಾಗಿರುತ್ತದೆ. ಮತ್ತು ಹಲವಾರು ಬದಲಾವಣೆಗಳಾಗುತ್ತಿರುತ್ತವೆ, ಆಗ ಮಾಸಿಕ ಚಕ್ರದಲ್ಲಿ ಕೆಲವು ಏರು ಪೇರುಗಳಾಗಿ ಇರ್ರೆಗುಲರ್ ಪೀರಿಯೆಡ್ಸ್ ಆಗುತ್ತದೆ.
6. ಪೆರಿಮೆನೋಪಸ್ (Perimenopause) :
ಇದು ಸಾಮಾನ್ಯವಾಗಿ 45-55 ವರ್ಷದ ಮಹಿಳೆಯರಲ್ಲಿ ಕಂಡುಬರುತ್ತದೆ. ಇದು ಋತುಚಕ್ರ ನಿಲ್ಲುವ ಮುಂಚೆ ಬರುವ ಅವಧಿ. ಈ ಸಮಯದಲ್ಲಿ ತುಂಬಾ ಮಹಿಳೆಯರ ದೇಹದಲ್ಲಿ ಹಲವಾರು ರೀತಿಯ ಹಾರ್ಮೋನ್ ಗಳು ಬದಲಾವಣೆ ಹೊಂದಿ ಮಾಸಿಕ ಚಕ್ರದಲ್ಲಿ ವ್ಯತ್ಯಾಸವಾಗುತ್ತದೆ.
7. ಆಹಾರ ಪದ್ದತಿಯಲ್ಲಿ ಬದಲಾವಣೆ :
ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ ತುಂಬಾ ಬದಲಾವಣೆಯಾಗಿದ್ದು ಅನೇಕರು ಜಂಕ್ ಫುಡ್ ಗೆ ದಾಸರಾಗಿದ್ದಾರೆ, ಅವರಿಗೆ ದಿನಕ್ಕೆ ಒಮ್ಮೆಯಾದರೂ ಬೀದಿ ಬದಿ ಇರುವ ಪಾನಿ ಪೂರಿ, ಮಸಾಲೆ ಪಧಾರ್ಥ, ಗೋಬಿ ಮಂಚೂರಿ ಇತ್ಯಾದಿ ಇವುಗಳನ್ನೆಲ್ಲ ತಿನ್ನದಿದ್ದರೆ ಏನನ್ನೋ ಕಳೆದುಕೊಂಡ ಅನುಭವ ಸರಿಯಾದ ಪೋಷಕಾಂಶಯುಕ್ತ ಆಹಾರ ಇಲ್ಲದೆ ದೇಹದ ಸಮತೋಲನ ಆಳಾಗಿ ಋತುಚಕ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
8. ಎಂಡೋಮೆಟ್ರಿಯೋಸಿಸ್ (Endometriosis) :
ಇದು ಮಹಿಳೆಯರ ಗರ್ಭಾಶಯದ ಹೊರಗಡೆ ಗಡ್ಡೆಯ ರೀತಿ ಬೆಳೆದಿರುತ್ತದೆ. ಇದು ಜಾಸ್ತಿ ಮಹಿಳೆಯ ಓವರಿ ಮತ್ತು ಫ್ಯಾಲೋಪಿಯನ್ ಟ್ಯೂಬ್ ಗಳಿಗೆ ಅಂಟಿಕೊಂಡಿರುತ್ತದೆ. ಇದು ಈ ರೀತಿ ಬೆಳೆಯುವುದರಿಂದ ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವ, ಮತ್ತೆ ನೋವು ಉಂಟಾಗುತ್ತದೆ.
ಇದನ್ನೂ ಓದಿ :ಮುಟ್ಟಿನ ಸಮಯದಲ್ಲಿ ತಿನ್ನಲೇಬೇಕಾದ ಆಹಾರಗಳು.
ಇರ್ರೆಗುಲರ್ ಪೀರಿಡ್ಸ್ ನ ಲಕ್ಷಣಗಳು ಯಾವ ರೀತಿ ಇರುತ್ತವೆ ಅಂತ ನಿಮಗೆ ತಿಳಿದಿದಿಯೇ ?
ಈ ಸಮಸ್ಯೆಯನ್ನು ತಿಳಿಯಲು ಕೆಲವೊಂದು ಸೂಕ್ಷ್ಮ ಲಕ್ಷಣಗಳು ಬರುತ್ತವೆ ಅವನ್ನು ನೋಡೋಣ.
- ಪೀರಿಯೆಡ್ಸ್ ತುಂಬಾ ನಿದಾನವಾಗಿ ಅಥವಾ ಬೇಗ ಆಗುವುದು. ಅಂದರೆ ತಿಂಗಳಿಗಿಂತ ಮುಂಚೆಯೇ ಆಗುವುದು ಇಲ್ಲವೇ ತಿಂಗಳು ಆದ ನಂತರ ಎಷ್ಟೋ ದಿನಕ್ಕೆ ಆಗುವುದು.
- 2-3 ತಿಂಗಳು ಪೀರಿಯೆಡ್ಸ್ ಬರದೇ ಇರುವುದು.
- ಕೆಲವೊಮ್ಮೆ ಹೆಚ್ಚು ರಕ್ತಸ್ರಾವ, ಅಥವಾ ಕೆಲವೊಮ್ಮೆ ತುಂಬಾ ಕಡಿಮೆ ರಕ್ತಸ್ರಾವ.
- ಕಿಬ್ಬೊಟ್ಟೆ ಅಂದರೆ ಹೊಟ್ಟೆಯ ಕೆಳಗಿನ ಬಾಗದಲ್ಲಿ ಅತಿಯಾದ ನೋವು ಕಂಡುಬರುವುದು.
- ಮುಖದಲ್ಲಿ ಪಿಂಪಲ್ಸ್ ಜಾಸ್ತಿಯಾಗುವುದು, ಕೂದಲು ಉದುರುವುದು.
- ಮೂಡ್ ಸ್ವಿಂಗ್ ಆಗುವುದು ಅಂದರೆ ಒಂದು ಸಮಯ ಇದ್ದ ಮನಸ್ಸು ಮತ್ತೆ ಇರೋದಿಲ್ಲ ಅನ್ನೋತರ ಭಾವನೆ.
- ದೇಹದ ತೂಕ ಹೆಚ್ಚಾಗುವುದು ಇಲ್ಲ ಕಡಿಮೆ ಆಗುವುದು.
- ದೇಹ ತುಂಬಾ ದಣಿವಾಗುವುದು.
ಯೋಗಾಸನಗಳಿಂದ ಇರ್ರೆಗುಲರ್ ಪೀರಿಯೆಡ್ಸ್ ಸಮಸ್ಯೆಗೆ ಪರಿಹಾರ:
ಯೋಗ ನಮ್ಮ ಪುರಾತನ ಕಾಲದಿಂದ ನಮಗೆ ಸಿಕ್ಕ ಉಡುಗೊರೆ. ಇದು ನಮ್ಮ ದೇಹ ಮತ್ತು ಮನಸ್ಸನ್ನು ಗಟ್ಟಿಯಾಗಿಸುವುದಲ್ಲದೆ, ದೇಹದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ.
ಯೋಗದಲ್ಲಿ ಕೆಲವೊಂದು ಆಸನಗಳನ್ನು ಮಾಡುವುದರಿಂದ ಮಹಿಳೆಯರಿಗೆ ತಮ್ಮ ಮಾಸಿಕ ಚಕ್ರದ ಸಮತೋಲನ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ.
1. ಭುಜಂಗಾಸನ (Bhujangasana)
ಈ ಆಸನ ಮಾಡುವುದರಿಂದ ದೇಹಕ್ಕೆ ಸರಿಯಾದ ರೀತಿಯಲ್ಲಿ ರಕ್ತ ಸಂಚಲನ ಆಗುತ್ತದೆ. ಇದು ಹಾರ್ಮೋನ್ ಸಮತೋಲನವನ್ನು ಸುಧಾರಿಸುವುದಲ್ಲೆದೆ, ಹೊಟ್ಟೆ ಭಾಗಕ್ಕೆ ರಕ್ತ ಪ್ರವಾಹವನ್ನು ಹೆಚ್ಚಿಸಿ ಮಹಿಳೆಯರ ಮಾಸಿಕ ಚಕ್ರಕ್ಕೆ ಅನುಕೂಲ ಮಾಡಿ ಕೊಡುತ್ತದೆ. ಇದನ್ನು ದಿನಕ್ಕೆ ಕನಿಷ್ಠ 2 ಬಾರಿ 10 ನಿಮಿಷ ಮಾಡಬೇಕು.
2. ಭಾಲಾಸನ (child pose)
ಈ ಆಸನವನ್ನ ಮಾಡುವುದರಿಂದ ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ, ಮತ್ತು ಮನಸ್ಸಿಗೆ ಶಾಂತಿ ಸಿಗುತ್ತದೆ, ಹಾಗು ಲೋಯರ್ ಬ್ಯಾಕ್ ಮತ್ತು ಪೆಲ್ವಿಸ್ ಭಾಗಕ್ಕೆ ರಿಲ್ಯಾಕ್ಸ್ ಭಾವನೆಯನ್ನ ಕೊಡುತ್ತದೆ.
3. ಮಲಾಸನ (Garland pose)
ಈ ಯೋಗ ಮಾಡುವುದರಿಂದ ಮಹಿಳೆಯರ ಪೆಲ್ವಿಸ್ ಭಾಗದ ಒತ್ತಡ ನಿವಾರಿಸುವುದರ ಜೊತೆಗೆ, ಲೋಯರ್ ಬ್ಯಾಕ್ ನೋವಿಗೆ ರಾಮ ಬಾಣದ ರೀತಿ ಕೆಲಸ ಮಾಡುತ್ತದೆ, ಮತ್ತೆ ರಕ್ತದ ಒತ್ತಡ ನಿವಾರಿಸುತ್ತದೆ.
4. ಸೇತುಬಂಧಾಸನ (Bridge pose)
ಇದು ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆಗೆ ಪರಿಹಾರ ನೀಡುತ್ತದೆ, ಜೊತೆಗೆ ಪೆಲ್ವಿಸ್ ಭಾಗಕ್ಕೆ ಸರಿಯಾದ ರೀತಿಯ ರಕ್ತ ಸಂಚಲನ ಮಾಡಿ ಮಾಸಿಕ ಚಕ್ರ ಸರಿಯಾಗಿ ಆಗುವ ರೀತಿ ಸಹಕರಿಸುತ್ತದೆ. ಮತ್ತು ಪೀರಿಯೆಡ್ಸ್ ಸಮಯದ ನೋವನ್ನು ಕಡಿಮೆ ಮಾಡುತ್ತದೆ, ದೇಹದ ಹಾರ್ಮೋನಲ್ ಬ್ಯಾಲೆನ್ಸ್ ಮಾಡುತ್ತದೆ.
5. ಪಶ್ಚಿಮೋತ್ತಾನಾಸನ (Seated forward Bend)
ಈ ಆಸನ ಮಾಡುವುದರಿಂದ ಮಹಿಳೆಯರ ಜೀರ್ಣಕ್ರಿಯೆ ಸರಿಯಾಗುತ್ತದೆ, ಮತ್ತೆ ದೇಹದ ಹಾರ್ಮೋನ್ಸ್ ನಿಯಂತ್ರಿಸುತ್ತವೆ. ಮುಖ್ಯವಾಗಿ ಪೀರಿಯೆಡ್ಸ್ ಸಮಯದಲ್ಲಿ ಬರುವ ಅತಿಯಾದ ನೋವು ಕಡಿಮೆಯಾಗುತ್ತದೆ ಮತ್ತೆ ಇರ್ರೆಗುಲರ್ ಪೀರಿಯೆಡ್ಸ್ ಕಡಿಮೆಯಾಗುತ್ತದೆ.
ಇರ್ರೆಗುಲರ್ ಪೀರಿಯೆಡ್ಸ್ ತಡೆಯಲು ನೈಸರ್ಗಿಕ ಮನೆ ಮದ್ದುಗಳು(Natural Home Remedies).
ನಮ್ಮ ಮನೆಯಲ್ಲಿಯೇ ನೈಸರ್ಗಿಕ ವಿಧಾನಗಳಿಂದ ಅನೇಕ ಸಮಸ್ಯೆಗಳಿಗೆ ಪರಿಹಾರವಿದ್ದು, ಅದರಲ್ಲಿ ಈ ಮಾಸಿಕ ಋತುಚಕ್ರ ಬದಲಾವಣೆಗೆ ಪರಿಹಾರ ಕಂಡುಕೊಳ್ಳೋಣ:
1. ಜೀರಿಗೆ ನೀರು (Cumin Water)
ರಾತ್ರಿ ಮಲಗುವಾಗ ಬಿಸಿನೀರಿಗೆ ಜೀರಿಗೆ ಮಿಕ್ಸ್ ಮಾಡಿ ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ, ಜೊತೆಗೆ ಮಹಿಳೆಯರಲ್ಲಿ ದೇಹದ ಹಾರ್ಮೋನ್ ಸಮತೋಲನವಾಗುತ್ತದೆ.
2. ಧಾಲ್ಚಿನ್ನಿ (Cinnamon ) ಮೆಂತ್ಯೆ ಕಾಳು (Fenugreek Seeds )
ರಾತ್ರಿ ಇದನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ತಿನ್ನುವುದರಿಂದ ಇರ್ರೆಗುಲರ್ ಪೀರಿಯೆಡ್ಸ್ ಕಡಿಮೆಯಾಗುತ್ತದೆ.
3. ಪಪ್ಪಾಯ ಮತ್ತು ಪೈನಾಪಲ್
ಸ್ವಲ್ಪ ಮಾಗಿದ ಪಪ್ಪಾಯ ಮತ್ತು ಪೈನಾಪಲ್ ತಿನ್ನುವುದರಿಂದ ಋತುಚಕ್ರ ನಿಯಮಿತವಾಗಿ ಆಗಲು ಸಹಾಯ ಮಾಡುತ್ತದೆ.
4. ಶುಂಠಿ ಮತ್ತು ಜೇನುತುಪ್ಪ.
ಇರ್ರೆಗುಲರ್ ಪೀರಿಯೆಡ್ಸ್ ಇರುವವರು ದಿನಕ್ಕೆ ಒಮ್ಮೆ ಶುಂಠಿ ಟೀ ಕುಡಿಯಬೇಕು. ಮತ್ತೆ ದಿನಕ್ಕೆ ಒಮ್ಮೆ ಜೇನು ತುಪ್ಪ ಹಾಲಿನಲ್ಲಿ ಮಿಕ್ಸ್ ಮಾಡಿ ಕುಡಿಯಬೇಕು, ಇದು ಮಹಿಳೆಯರ ದೇಹದ ರಕ್ತ ಸಂಚಲನಕ್ಕೆ ಸಹಕಾರಿ ಮತ್ತೆ ಹಾರ್ಮೋನಲ್ ಬ್ಯಾಲನ್ಸ್ ಮಾಡಲು ಸಹಾಯವಾಗುತ್ತದೆ.
ಇರ್ರೆಗುಲರ್ ಪೀರಿಯೆಡ್ಸ್ ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿದೆ. ಆದರೂ ಅದನ್ನು ನಿರ್ಲಕ್ಷ್ಯ ಮಾಡುವುದು ಮುಂದೆ ದೊಡ್ಡ ಆರೋಗ್ಯ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ಇದಕ್ಕೆ ಮುಖ್ಯವಾಗಿ ಹಾರ್ಮೋನಲ್ ಅಸಮತೋಲನ, ಒತ್ತಡದ ಜೀವನಶೈಲಿ, ಮತ್ತೆ ಈಗಿನ ಆಹಾರ ಪದ್ದತಿಯೇ ಮೂಲ ಕಾರಣವಾಗಿರುವುದರಿಂದ, ಮಹಿಳೆಯರು ತಪ್ಪದೆ ದಿನನಿತ್ಯ ಯೋಗಾಭ್ಯಾಸ, ವಾಕಿಂಗ್, ಸ್ವಲ್ಪ ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದು ಮುಖ್ಯವಾಗಿರುತ್ತದೆ.
‘ಪೀರಿಯೆಡ್ಸ್ ಎನ್ನುವುದು ಮಹಿಳೆಗೆ ಸಂಕೋಚವನ್ನು ಉಂಟುಮಾಡಬಾರದು ಬದಲಿಗೆ ಆಕೆಗೆ ಅದೇ ಹೆಮ್ಮೆಯ ವಿಚಾರವಾಗಬೇಕು’.
ಪ್ರತೀ ತಿಂಗಳು ಈ ನೋವಿನಲ್ಲಿ ನಗುತ್ತ ಖುಷಿ ಪಡುವ ಖುಷಿ ಪಡಿಸುತ್ತಿರುವ ಹೆಣ್ಣು ನಮ್ಮ ಸುಂದರ ಪ್ರಕೃತಿಯ ಸಂಕೇತವಾಗಿರುತ್ತಾಳೆ.

Very informative.. 👍
Thank you
Pingback: PCOS & PCOD : Major Problems in Womens How To Solve