ಹಾರ್ಟ್ ಅಟ್ಯಾಕ್ (Heart attack), ಹೃಧಯಾಘಾತ ಯಾಕೆ ಬರುತ್ತದೆ | ಏನಿದರ ಲಕ್ಷಣಗಳು| ಕಾರಣಗಳು | ಹಾಗೂ ನೈಸರ್ಗಿಕವಾಗಿ ತಡೆಗಟ್ಟುವ ವಿಧಾನಗಳು.

Spread the love

ಹೃದಯಕ್ಕೆ ರಕ್ತ ಸಂಚಲನ ನಿರಂತರವಾಗಿ ಇರಬೇಕು. ಒಂದು ವೇಳೆ ರಕ್ತ ಸಂಚಲನ ಅಥವಾ ರಕ್ತದ ಹರಿವು ಕಡಿಮೆಯಾದಾಗ ಅಥವಾ ತಡೆಯಲ್ಪಟ್ಟಾಗ ಹಾರ್ಟ್ ಅಟ್ಯಾಕ್ ಉಂಟಾಗುತ್ತದೆ. ಹೃದಯದ ಕೊರೋನರಿ ಆರ್ಟರಿಸ್ ನಲ್ಲಿ ಕೊಬ್ಬು, ಕೊಲೆಸ್ಟ್ರಾಲ್, ಪ್ಲೇಕ್ ಮತ್ತು ಬೇರೆ ಬೇರೆ ಕೆಟ್ಟ ಅಂಶಗಳು ಶೇಖರಣೆ ಆಗುವುದರಿಂದ ಹೃದಯದ ನಾಳಗಳಲ್ಲಿ ಅಡಚಣೆ ಉಂಟಾಗುತ್ತದೆ.

Heart attack ಹಾರ್ಟ್ ಅಟ್ಯಾಕ್

ಕೆಲವೊಂದು ಸಂಶೋಧನೆಗಳ ಪ್ರಕಾರ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಜಾಸ್ತಿ ಹೃದಯಾಘಾತ ಆಗುತ್ತಿದೆ. ಪ್ರಮುಖವಾಗಿ ರಕ್ತದೊತ್ತಡ (blood pressure) ಸಕ್ಕರೆ ಕಾಯಿಲೆ (diabetes) ಮತ್ತೆ ಹೃದಯ ಸಂಬಂದಿಸಿದ ಕಾಯಿಲೆಗಳು ಮನುಷ್ಯನನ್ನು ಜೀವನ ಪರ್ಯಂತ ಕಾಡುವ ಕಾಯಿಲೆಗಳಾಗಿವೆ. ಇವು ಒಮ್ಮೆ ಮನುಷ್ಯನ ದೇಹಕ್ಕೆ ಬಂದರೆ ಬಿಟ್ಟು ಹೋಗುವುದಿಲ್ಲ ಬದಲಿಗೆ ನವ್ವೆ ಅವನ್ನು ಕಂಟ್ರೋಲ್ ಮಾಡಬೇಕಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿ ತುಂಬಾ ಬದಲಾಗಿದೆ. ಅದಕ್ಕೆ ಮುಖ್ಯ ಕಾರಣ ನೋಡೋದಾದರೆ ನಾವು ತಿನ್ನುತ್ತಿರುವ ಆಹಾರ, ಕೆಲಸದ ಒತ್ತಡ, ವ್ಯಾಯಾಮದ ಕೊರತೆ, ನಿದ್ದೆಗಳಿಲ್ಲದ ರಾತ್ರಿಗಳು, ಇತ್ಯಾದಿ. ಇವೆಲ್ಲವೂ ನಮ್ಮ ದೇಹದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿವೆ. ಅದರಲ್ಲೂ ವಿಶೇಷವಾಗಿ ಹೃದಯ ಸಂಬಂದಿಸಿದ ಕಾಯಿಲೆಗಳು ಹೆಚ್ಚಾಗಲು ಇವು ಕಾರಣವಾಗುತ್ತಿವೆ.

 ನಮ್ಮ ಹೃದಯಕ್ಕೆ ರಕ್ತವನ್ನು ಸಾಗಿಸುವ ನರಗಳು ಕೊರೋನರಿ ಆರ್ಟಿರಿಸ್, ಇವುಗಳಲ್ಲಿ ಸ್ವಲ್ಪ ತಡೆ ಉಂಟಾದಾಗ, ಹೃದಯಕ್ಕೆ ರಕ್ತದ ಹರಿವು ಕಡಿಮೆ ಆಗುತ್ತದೆ, ಅಥವಾ ಸಂಪೂರ್ಣ ನಿಲ್ಲುತ್ತದೆ, ಇದನ್ನೇ ಹಾರ್ಟ್ ಅಟ್ಯಾಕ್ ಹೃದಯಾಘಾತ ಎನ್ನುತ್ತೇವೆ.
ಸಾಮಾನ್ಯವಾಗಿ ಕೊಬ್ಬಿನ ರೀತಿ ಇರುವ ಪದರಗಳು ಪ್ಲೇಕ್ ಇವು ನಮ್ಮ ರಕ್ತನಾಳದಲ್ಲಿ ಶೇಖರಣೆಯಾಗುವುದರಿಂದ ಈ ರೀತಿಯ ತಡೆ ಉಂಟಾಗುತ್ತದೆ. ಇದರಿಂದ ನಮ್ಮ ಹೃದಯದ ಒಂದು ಭಾಗ ಹಾನಿಯಾಗುತ್ತದೆ.

ನಮ್ಮ ದೇಶದಲ್ಲಿ ಹಾರ್ಟ್ ಅಟ್ಯಾಕ್ ಗೆ ತುತ್ತಾಗಿರುವ ಜನಸಂಖ್ಯೆ :

ನಮ್ಮ ದೇಶದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಹೃದಯ ಸಂಬಂದಿತ ಕಾಯಿಲೆಗಳು ದಿನೇ ದಿನೇ ಜಾಸ್ತಿ ಆಗುತ್ತಿವೆ.
National Crime Records Bureau ಇದರ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಸಾವಿಗೆ ಹೃದಯಾಘಾತವು ಮುಖ್ಯ ಕಾರಣವಾಗಿದೆ.
ನಮ್ಮ ದೇಶದಲ್ಲಿ ಬೇರೆ ದೇಶಕ್ಕೆ ಹೋಲಿಸಿದರೆ ಶೇ. 20% ಸಾವು ಹಾರ್ಟ್ ಅಟ್ಯಾಕ್ ಇಂದ ಆಗುತ್ತಿದೆ ಎಂದು ವರದಿ ತಿಳಿಸುತ್ತದೆ.
ಒಂದು ವರ್ಷಕೆ ಸುಮಾರು 28 ಲಕ್ಷ ಜನ ಹೃದಯ ಸಂಬಂದಿಸಿದ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. 2025 ರ ವರ್ಷದಲ್ಲೇ ಈ ಸಂಖ್ಯೆ 12% ಜಾಸ್ತಿಯಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಹಾರ್ಟ್ ಅಟ್ಯಾಕ್ ನ ಲಕ್ಷಣಗಳು ಯಾವ ರೀತಿ ಇರುತ್ತವೆ (symptoms of a heart attack)?

signs of ಹಾರ್ಟ್ ಅಟ್ಯಾಕ್

 ಈ ಲಕ್ಷಣಗಳು ಪ್ರತೀ ವ್ಯೆಕ್ತಿಗೆ ಬದಲಾಗುತ್ತಿರುತ್ತವೆ. ಆದರೆ ಕೆಲವೊಂದು ಸಾಮಾನ್ಯ ಲಕ್ಷಣಗಳನ್ನು ನೋಡೋಣ.

  •  ಎದೆಯಲ್ಲಿ ನೋವು ಕಂಡು ಬರುವುದು ಮತ್ತು ಎದೆ ಒತ್ತಡವಾಗುವ ಅನುಭವ.
  •  ಮೊದಲು ನೋವು ಎಡಗೈ ಗೆ ಬಂದು ನಿಧಾನವಾಗಿ ಕತ್ತಿನ ಭಾಗ, ಬೆನ್ನು, ಅಥವಾ ದವಡೆಗೆ ಹಬ್ಬುವುದು ನೋವು ಜಾಸ್ತಿಯಾಗುವುದು.
  •  ಉಸಿರಾಡಲು ಕಷ್ಟವಾಗುವುದು.
  •  ಅತಿಯಾಗಿ ಬೆವರು ಬರುವುದು.
  •  ಕೆಲವೊಮ್ಮೆ ವಾಂತಿ ಬರುವುದು ಅಥವಾ ಹೇಳಿಕೊಳ್ಳಲಾಗದ ಅಸ್ವಸ್ಥ ಆಗುವುದು.
  •  ಕಣ್ಣು ಮಂಜು ಆಗುವ ಭಾವನೆ.
  •  ತಲೆ ಸುತ್ತುವ ಅನುಭವ ತಲೆ ಭಾರ ಅನಿಸುವುದು.

ಹಾರ್ಟ್ ಅಟ್ಯಾಕ್ ಬರಲು ಪ್ರಮುಖ ಕಾರಣಗಳನ್ನ ನೋಡೋಣ.

ಹಾರ್ಟ್ ಅಟ್ಯಾಕ್ ಮುಖ್ಯವಾಗಿ ಹ್ರದಯಕ್ಕೆ ಶುದ್ಧ ಆಕ್ಸಿಜನ್ ಹೊತ್ತು ತರುವ ರಕ್ತದ ಹರಿವು ಹಲವು ಕಾರಣಗಳಿಂದ ನಿಲ್ಲುವುದಕ್ಕೆ ಬರುತ್ತದೆ. ಹಾಗಾದರೆ ಈ ರಕ್ತದ ಹರಿವು ನಿಲ್ಲಲ್ಲು ಮುಖ್ಯ ಕಾರಣಗಳನ್ನ ನೋಡೋಣ.

1. ಅನವಶ್ಯಕ ಆಹಾರ ಪದ್ಧತಿ :
ಊಟದಲ್ಲಿ ಅತಿಯಾದ ಎಣ್ಣೆ, ಬೀದಿ ಬದಿ ಸಿಗುವ ಆಹಾರ ಸೇವನೆ, ಜಂಕ್ ಫುಡ್, ಪ್ರೋಸೆಸ್ಸ್ಡ್ ಫುಡ್, ಪ್ಯಾಕೇಜ್ ಫುಡ್, ಇವುಗಳನ್ನು ಹೆಚ್ಚು ತಿನ್ನುವುದರಿಂದ ನಮ್ಮ ದೇಹಕ್ಕೆ ಇವನ್ನು ಸರಿಯಾದ ರೀತಿಯಲ್ಲಿ ಶುದ್ದೀಕರಿಸಲು ಆಗದೆ ಹೃದಯಾಘಾತಕ್ಕೆ ಕಾರಣವಾಗುತ್ತದೆ.

2. ಧೂಮಪಾನ ಮತ್ತು ಮಧ್ಯಪಾನ ಡ್ರಗ್ಸ್ ಸೇವನೆ :
ಧೂಮಪಾನ ಮತ್ತು ಮದ್ಯಪಾನದಿಂದ ನಮ್ಮ್ ರಕ್ತದ ಶುದ್ದೀಕರಣ ಹಾನಿಯಾಗುತ್ತದೆ, ಮತ್ತೆ ಕಿಡ್ನಿ, ಲಿವರ್ ಹಾಳಾಗುವುದರಿಂದ ಹೃದಯಕ್ಕೆ ಬೇಕಾದ ಆಕ್ಸಿಜನ್ ಅನ್ನು ಸರಬರಾಜು ಮಾಡಲು ಆಗದೆ ಹಾರ್ಟ್ ಅಟ್ಯಾಕ್ ಬರುತ್ತದೆ.

3. ಒತ್ತಡ (Stress) :
ಮಾನಸಿಕ ಒತ್ತಡ ಭಾವನಾತ್ಮಕ ಒತ್ತಡ ಮತ್ತೆ ಅತಿಯಾದ ಕೋಪ ಹೃದಯದ ಮೇಲೆ ನೇರ ಪರಿಣಾಮ ಬೀರುವುದರಿಂದ ಹಾರ್ಟ್ ಅಟ್ಯಾಕ್ ಬರುವ ಸಾಧ್ಯತೆ ಜಾಸ್ತಿ.

4. ದೈಹಿಕ ವ್ಯಾಯಾಮದ ಕೊರತೆ :
ನಮ್ಮ ದೇಹ ಎಷ್ಟು ಚಟುವಟಿಕೆಯಿಂದ ಇರುತ್ತದೆ ಅಷ್ಟು ಆರೋಗ್ಯವಾಗಿರುತ್ತದೆ. ನಾವು ಎಷ್ಟು ಊಟ ಮಾಡುತ್ತೇವೆ ಅಷ್ಟು ದೈಹಿಕ ವ್ಯಾಯಾಮ ಮಾಡಬೇಕು ಇಲ್ಲವಾದರೆ ತಿನ್ನುವ ಊಟ ಜೀರ್ಣವಾಗದೇ ಹೃದಯಕ್ಕೆ ಒತ್ತಡ ಜಾಸ್ತಿಯಾಗುತ್ತದೆ.

5. ಸಕ್ಕರೆ ಕಾಯಿಲೆ (Diabetes) ರಕ್ತದೊತ್ತಡ (Blood Pressure) :
ನಮ್ಮ ದೇಹವು ಇನ್ಸುಲಿನ್ ಎಂಬ ಹಾರ್ಮೋನ್ ಅನ್ನು ಸರಿಯಾಗಿ ಉತ್ಪಾದಿಸದಿದ್ದಾಗ ಅಥವಾ ಅದನ್ನು ಸರಿಯಾಗಿ ಬಳಸದಿದ್ದಾಗ ರಕ್ತದಲ್ಲಿನ ಸಕ್ಕರೆ ಪ್ರಮಾಣ ಜಾಸ್ತಿಯಾಗಿ ಇದು ಹೃದಯದ ಒತ್ತಡಕ್ಕೆ ನೇರ ಕಾರಣವಾಗುತ್ತದೆ ಅದೇ ರೀತಿ ರಕ್ತದೊತ್ತಡವನ್ನು ನಿಯಂತ್ರಿಸಲು ಆಗದಿದ್ದಾಗ ಹೃದಯ ನಿದಾನವಾಗಿ ಅಸ್ವಸ್ಥವಾಗುತ್ತದೆ.

6. ಕುಟುಂಬದ ಹಿಸ್ಟರಿ (Genetics) :
ನಮ್ಮ ಕುಟುಂಬದಲ್ಲಿ ಯಾರಿಗಾದರೂ ಈಗಾಗಲೇ ಹೃದಯ ಸಂಬಂದಿತ ಕಾಯಿಲೆಗಳಿದ್ದರೆ ಅವರಿಂದ ನಮಗೆ ನೇರವಾಗಿ ಬರುವ ಸಾಧ್ಯತೆ ಜಾಸ್ತಿ ಇರುತ್ತದೆ.

7. ವಯಸ್ಸು :
ಸಾಮಾನ್ಯವಾಗಿ 45ವರ್ಷ ದಾಟಿದ ನಂತರ ವಯೋಸಂಬಂಧಿತ ಕಾಯಿಲೆಗಳು ಬರಲು ಶುರುವಾಗುತ್ತವೆ. ಅದರಲ್ಲಿ ಹೃದಯ ಸಂಬಂದಿತ ಕಾಯಿಲೆಗಳೂ ಇರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಅದು ಕಡಿಮೆ ವಯಸ್ಸಿನವರಲ್ಲಿಯೂ ಕಾಣಿಸುತ್ತಿದೆ. ಮಹಿಳೆಯರಲ್ಲಿ ಮೆನೋಪಾಸ್ ಆದ ನಂತರ ಹೃದಯಕ್ಕೆ ಸಂಬಂದಿಸಿದ ಕಾಯಿಲೆಗಳು ಜಾಸ್ತಿಯಾಗುತ್ತವೆ.

ಆಂಜಿಯೋಪ್ಲ್ಯಾಸ್ಟಿ ಎಂದರೇನು( What is angioplasty)?

ಆಂಜಿಯೋಪ್ಲ್ಯಾಸ್ಟಿ ಹಾರ್ಟ್ ಅಟ್ಯಾಕ್

ಆಂಜಿಯೋಪ್ಲ್ಯಾಸ್ಟಿ ಇದು ಹೃದಯಕ್ಕೆ ರಕ್ತದ ಹರಿವು ನಿದಾನವಾಗಿ, ರಕ್ತದಲ್ಲಿ ಬರುವ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿ ಉಸಿರಾಟದ ತೊಂದರೆಯಾದಾಗ ಹೃದಯದ ನಾಳದಲ್ಲಿ ಪ್ಲೆಕ್ ನಿಂದ ಕೊರೋನರಿ ಆರ್ಟಿರಿಸ್ ಬ್ಲಾಕ್ ಆಗಿರುವುದನ್ನು ತೆರೆಯಲುಮತ್ತು ರಕ್ತದ ಹರಿವನ್ನು ತಕ್ಷಣವೇ ಸರಾಗವಾಗಿಸಲು ಸಣ್ಣ ಜರಡಿಯ ರೂಪದ ಸ್ಟೆಂಟ್ ಅನ್ನು ಹಾಕಲಾಗುತ್ತದೆ. ಇದನ್ನೇ ಆಂಜಿಯೋಪ್ಲ್ಯಾಸ್ಟಿ ಎನ್ನುವರು.

ನಮ್ಮ ಕರ್ನಾಟಕದಲ್ಲಿ ಹೃದಯ ಚಿಕಿತ್ಸೆಗಾಗಿ ಇರುವ ಬೆಸ್ಟ್ 5 ಆಸ್ಪತ್ರೆಗಳು :

1. Narayana Institute of Cardiac Sciences : Anekal Bengaluru
2. Sri Jayadeva Institute of Cardiovascular Sciences and Research : Bannerugatta Road Bengaluru
3. Manipal Hospital : HAL Road Bangaluru
4. Fortis Hospital : Bangaluru
5. Apollo Hospital : Sheshadripuram Bangaluru

ಈ ಆಸ್ಪತ್ರೆಗಳು ಬೆಂಗಳೂರಿನಲ್ಲಿದ್ದು ಆಧುನಿಕ ತಂತ್ರಜ್ಞಾನ ಮತ್ತೆ ನುರಿತ ವೈದ್ಯರನ್ನು ಒಳಗೊಂಡಿದ್ದು, ಹೃದಯಕ್ಕೆ ಸಂಬಂದಿಸಿದ ಯಾವುದೇ ಸಮಸ್ಯೆಗಳಿದ್ದಲ್ಲಿ ತಕ್ಷಣ ಸಂಪರ್ಕಿಸಬಹುದು.

ಹೃಧಯಾಘಾತವನ್ನು ತಡೆಗಟ್ಟಲು ಇರುವ ನೈಸರ್ಗಿಕ ವಿಧಾನಗಳು.

ತಡೆಗಟ್ಟುವ ಕ್ರಮಗಳು (Prevention Tips)

ಹೃಧಯಾಘಾತವನ್ನು ತಡೆಗಟ್ಟಲು ಇರುವ ನೈಸರ್ಗಿಕ ವಿಧಾನಗಳು.
1. ನಿಯಮಿತ ವ್ಯಾಯಾಮ :
ದಿನಕ್ಕೆ ಕನಿಷ್ಠ 1 ಗಂಟೆ ನಿಯಮಿತ ವ್ಯಾಯಾಮ ಮಾಡಬೇಕು. 20 ನಿಮಿಷ ನಡೆಯಬೇಕು, ಆಗ ಹೃದಯಕ್ಕೆ ರಕ್ತಸಂಚಲನ ಸರಿಯಾಗಿ ಆಗಿ ಹೃದಯ ಸರಿಯಾಗಿ ಕೆಲಸ ಮಾಡುತ್ತದೆ.

2. ಪೌಷ್ಠಿಕ ಆಹಾರ ಸೇವನೆ :
ಹಣ್ಣುಗಳು, ಹಸಿರು ತರಕಾರಿ, ಸೊಪ್ಪು, ಕಾಳು, ಧಾನ್ಯಗಳು, ಇವುಗಳನ್ನು ನಮ್ಮ ಆಹಾರದಲ್ಲಿ ದಿನನಿತ್ಯ ಬಳಸಿಕೊಂಡು ಜಂಕ್ ಫುಡ್ ದೂರಮಾಡಿದರೆ ದೇಹ ಆರೋಗ್ಯವಾಗಿರುತ್ತದೆ.

3. ಒತ್ತಡ ನಿರ್ವಹಣೆ :
ಪ್ರತೀ ದಿನ ಸರಿಯಾದ ರೀತಿಯಲ್ಲಿ ಯೋಗ, ಧ್ಯಾನ ಹಾಗೂ ಪ್ರಾಣಾಯಾಮದಂತಹ ವಿಧಾನಗಳನ್ನು ಅನುಸರಿಸಿದರೆ ನಮ್ಮ ಮನಸ್ಸು ಶಾಂತರೀತಿಯಲ್ಲಿರುತ್ತದೆ ಹಾಗು ಅನವಶ್ಯಕ ಒತ್ತಡ ನಿವಾರಣೆಯಾಗುತ್ತದೆ.

4. ಆರೋಗ್ಯ ತಪಾಸಣೆ :
ಕನಿಷ್ಠ 6 ತಿಂಗಳಿಗೊಮ್ಮೆ ರಕ್ತ ಪರೀಕ್ಷೆ, ಹೃದಯಕ್ಕೆ ಸಂಬಂದಿಸಿದ ಪರೀಕ್ಷೆಗಳನ್ನು ಮಾಡಿಸಬೇಕು. ಆಗ ನಮ್ಮ ದೇಹ ಯಾವ ರೀತಿ ವರ್ತಿಸುತ್ತಿದೆ ಎಂದು ನಮಗೆ ತಿಳಿಯುತ್ತದೆ.

5. ಧೂಮಪಾನ ಮತ್ತೆ ಮಧ್ಯಪಾನ ತ್ಯೆಜಿಸಬೇಕು :
ಯಾರೆಲ್ಲ ಇದನ್ನು ಅಭ್ಯಾಸ ಮಾಡಿಕೊಂಡಿರುತ್ತಿರೋ ಅವರು ತಿಳಿಯದ ಮುಖ್ಯ ವಿಷಯ ಏನೆಂದರೆ ಇದು ಸ್ಲೋ ಪಾಯಿಸನ್ ನಮಗೆ ಗೊತ್ತಿಲ್ಲದ ಹಾಗೆ ಕಿಡ್ನಿ, ಮತ್ತೆ ಲಿವರ್ ಅನ್ನು ನಾಶ ಮಾಡುವುದಲ್ಲದೆ, ಹೃದಯಕ್ಕೆ ಬೇಕಾದ ಆಕ್ಸಿಜನ್ ಗುಣಮಟ್ಟವನ್ನ ನಾಶಮಾಡುತ್ತದೆ. ಆದ್ದರಿಂದ ಇದನ್ನು ದೂರವಿಡಬೇಕು.

6. ದೇಹದ ತೂಕ ನಿಯಂತ್ರಿಸಬೇಕು :
ನಾವು ತಿನ್ನುವ ಆಹಾರ ಮತ್ತೆ ನಮ್ಮ ಜೀವನಶೈಲಿ ನಮ್ಮ ದೇಹದ ತೂಕದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೇಗೆಂದರೆ ನಾವು ಪೌಷ್ಟಿಕಾಂಶ ಬರಿತ ಆಹಾರ ತಿನ್ನುವುದರಿಂದ ದೇಹದ ಕೊಬ್ಬು ಫ್ಯಾಟ್ ನಿಯಂತ್ರಿಸುತ್ತದೆ ಮತ್ತೆ ದೇಹ ಹಗುರವಾಗಿದ್ದು ಗ್ಯಾಸ್ಟ್ರಿಕ್ ಬರುವುದಿಲ್ಲ.

7. ರಕ್ತದೊತ್ತಡ ಮತ್ತೆ ಶುಗರ್ ನಿಯಂತ್ರಣ :
ದೇಹದಲ್ಲಿ ರಕ್ತದೊತ್ತಡ ಹೈ ಬ್ಲಡ್ ಪ್ರೆಷರ್ ಮತ್ತೆ ಮಧುಮೇಹ ಅಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಹೃಧಯಾಘಾತಕ್ಕೆ ನೇರ ಕಾರಣವಾಗಿದ್ದು ಅದನ್ನು ನಾವು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.

‘ನಮ್ಮ ಹೃದಯ ಆರೋಗ್ಯಕರವಾಗಿದ್ದರೆ, ಜೀವನದಲ್ಲಿ ಬರುವ ಎಂತಹ ಕಷ್ಟಕರ ಸವಾಲುಗಳನ್ನು ಕೂಡ ನಾವು ಧೈರ್ಯವಾಗಿ ಎದುರಿಸಬಹುದು’.

ನಾನು ಮೇಲೆ ತಿಳಿಸಿರುವ ಈ 7 ಅಂಶಗಳನ್ನು ಸರಿಯಾದ ರೀತಿಯಲ್ಲಿ ಪುಳನೆ ಮಾಡುವುದರಿಂದ ನಿಮ್ಮ ಹೃದಯ ಆರೋಗ್ಯವಾಗಿರುತ್ತದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ.

1 thought on “ಹಾರ್ಟ್ ಅಟ್ಯಾಕ್ (Heart attack), ಹೃಧಯಾಘಾತ ಯಾಕೆ ಬರುತ್ತದೆ | ಏನಿದರ ಲಕ್ಷಣಗಳು| ಕಾರಣಗಳು | ಹಾಗೂ ನೈಸರ್ಗಿಕವಾಗಿ ತಡೆಗಟ್ಟುವ ವಿಧಾನಗಳು.”

  1. Pingback: Cholesterol Dangerous : 7 Ways To Control Naturally in Home

Leave a Comment

Your email address will not be published. Required fields are marked *

Scroll to Top