ಮುಟ್ಟಿನ(Periods) ಸಮಯದ ನೋವನ್ನು ಕಡಿಮೆ ಮಾಡಲು ತಿನ್ನಬೇಕಾದ ಆಹಾರಗಳು.

Spread the love

ಮಹಿಳೆಯರ ಆರೋಗ್ಯ ತುಂಬಾ ಸೂಕ್ಷ್ಮವಾಗಿರುವುದರಿಂದ, ದಿನ ನಿತ್ಯದ ಆಹಾರ ಪದ್ಧತಿ ಅವರ ವೈಯಕ್ತಿಕ ಜೀವನವನ್ನ ಸುಗಮಗೊಳಿಸುತ್ತದೆ.

ಮಯಿಳೆಯ ಮುಟ್ಟಿನ ಸಮಸ್ಯೆ Periods pain

ಮಹಿಳೆಯ ಮುಟ್ಟಿನ Periods pain(ಋತುಚಕ್ರದ) ಸಮಯ ತುಂಬಾ ಕಷ್ಟಕರದಿಂದ ಕೂಡಿದ್ದು ಎಲ್ಲಾ ವಯಸ್ಸಿನ ಮಹಿಳೆಗೆ ಈ ಸಮಯದಲ್ಲಿ ಒಂದಲ್ಲಾ ಒಂದು ಸಮಸ್ಯೆ ಕಂಡುಬರುತ್ತದೆ.
ಅದರಲ್ಲಿ ಮುಖ್ಯವಾಗಿ ಹಾರ್ಮೋನ್ ಬದಲಾವಣೆ, ತೂಕ ಜಾಸ್ತಿ ಕಡಿಮೆ ಆಗುವುದು, ಮಾನಸಿಕ ಬದಲಾವಣೆ, ಸರಿಯಾದ ನಿದ್ದೆ ಇಲ್ಲದಿರುವುದು, ಹೊಟ್ಟೆ ತುಂಬಾ ನೋವು ಬರುವುದು, ತಲೆ ನೋವು, ಇದೇ ರೀತಿ ಹಲವಾರು ಸಮಸ್ಯೆಗಳು ಕಂಡುಬರುತ್ತವೆ.

ಪ್ರತೀ ತಿಂಗಳುಕನಿಷ್ಠ 3-4 ದಿನ ಅಂದರೆ ವರ್ಷಕ್ಕೆ 12 ಬಾರಿ ಈ ಸಮಸ್ಯೆಯಿಂದ ಹೆಣ್ಣುಮಕ್ಕಳು Periods pain ನಿಂದ ಬಳಲುತ್ತಿದ್ದು, ಇದರಿಂದ ಹೊರಬರಲು ಏನು ಮಾಡಬೇಕು ಎಂದು ಎಲ್ಲರು ಚಿಂತೆಗೆ ಒಳಗಾಗುವುದು ಸಹಜ. ಆದರೆ ಸರಿಯಾದ ಆಹಾರ ಸೇವನೆ ಮಾಡುವುದರಿಂದ ಮುಟ್ಟಿನ ಸಮಯದಲ್ಲಿ ನೋವು ಕಡಿಮೆಯಾಗುತ್ತದೆ, ಎಂದು ತುಂಬಾ ಜನರಿಗೆ ತಿಳಿದಿಲ್ಲ. ಅದಕ್ಕೆ ನಾನು ಈ ಲೇಖನದಲ್ಲಿ ಅಂತಹ ಆಹಾರ ಪದಾರ್ಥಗಳನ್ನ ಯಾವ ಸಮಯದಲ್ಲಿ ತಿನ್ನಬೇಕು ಎಂದು ನಿಮಗೆ ತಿಳಿಸಿಕೊಡುತ್ತೇನೆ. ಅದನ್ನು ಋತುಚಕ್ರದ ವೇಳೆ ನಿಮ್ಮ ಆಹಾರದಲ್ಲಿ ಅಳವಡಿಸಿಕೊಂಡರೆ ಸಮಸ್ಯೆಗೆ ಖಂಡಿತ ಪರಿಹಾರ ಸಿಗುತ್ತದೆ.

ನಮ್ಮ ದೇಶದಲ್ಲಿ ಶೇ. 60-80 ರಷ್ಟು ಹುಡುಗಿಯರು ಮತ್ತು ಮಹಿಳೆಯರು ತೀವ್ರ ಪೀರಿಯಡ್ಸ್ ನೋವು Periods pain (ಡಿಸ್ಮೆನೋರಿಯಾ ) ಅನುಭವಿಸುತ್ತಿದ್ದಾರೆ. ಇಂತಹವರಲ್ಲಿ ಅನೇಕರು ಶಾಲೆ, ಕಾಲೇಜು, ಅಥವಾ ಕೆಲಸಕ್ಕೆ ರೆಜೆಯನ್ನು ಪಡೆಯಬೇಕಾಗಿರುತ್ತದೆ, ಮತ್ತೆ ತಮ್ಮ ದೈನಂದಿನ ಜೀವನದಲ್ಲಿ ತುಂಬಾ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ.

ಪ್ರೊಟೀನ್ ಬರಿತ ಆಹಾರ

protein food for periods pain

ನಮ್ಮ ಆಹಾರದಲ್ಲಿ ಪ್ರೊಟೀನ್ ಅಂಶ ಜಾಸ್ತಿ ಇದ್ದಷ್ಟು ದೇಹಕ್ಕೆ ಶಕ್ತಿ ನೀಡುತ್ತದೆ, ಆದ್ದರಿಂದ ನಾವು ಮಧ್ಯಾಹ್ನದ ವೇಳೆ ತಿನ್ನುವ ಆಹಾರದಲ್ಲಿ ಬೇಳೆ ಸಾರು, ಪನ್ನೀರ್, ಬೇಯಿಸಿದ ಮೊಟ್ಟೆ, ಬ್ರಾಕೋಲಿ, ಸ್ವಲ್ಪ ಪ್ರಮಾಣ ತರಕಾರಿಗಳು ತಿನ್ನಬೇಕು.
ಮುಟ್ಟಿನ ಸಮಯದಲ್ಲಿ ಕಡಲೆಬೇಳೆ, ಕಿಡ್ನಿ ಬೀನ್ಸ್ ನಂತ ಪದಾರ್ಥಗಳನ್ನ, ಮೀನಿನ ಮಾಂಸ(ಸಾಲೊಮನ್ ಮೀನು ತಿನ್ನಬಹುದು), ಸ್ವಲ್ಪ ದೂರವಿಡಬೇಕು, ಚಿಕನ್ ಸ್ವಲ್ಪ ಪ್ರಮಾಣದಲ್ಲಿ ತಿನ್ನಬೇಕು, ಯಾಕೆಂದರೆ ಚಿಕನ್ ನಲ್ಲಿ ಪ್ರೊಟೀನ್ ಅಂಶ ಜಾಸ್ತಿ ಸಿಗುತ್ತದೆ, ನಾವು ಈ ರೀತಿ ಪ್ರೊಟನ್ ನಮ್ಮ ಆಹಾರಕ್ಕೆ ಸೇರಿಸುವುದರಿಂದ ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಸಮತೋಲನದಲ್ಲಿ ಇರುತ್ತದೆ ಮತ್ತು ಮುಟ್ಟಿನ ನೋವು ಕಡಿಮೆಯಾಗುತ್ತದೆ.

Periods pain ಕಡಿಮೆಯಾಗಲು ಕ್ಯಾಲ್ಸಿಯಂ (Calcium) ಆಹಾರ

{eriods pain ಮುಟ್ಟಿನ ಸಮಯದಲ್ಲಿ ಕ್ಯಾಲ್ಸಿಯಂ (Calcium) ಆಹಾರ

ಕ್ಯಾಲ್ಸಿಯಂ ದೇಹಕ್ಕೆ ಒಳ್ಳೆಯ ಶಕ್ತಿ ನೀಡುತ್ತದೆ ಜೊತೆಗೆ ಋತುಚಕ್ರ ನೋವನ್ನುPeriods pain ಕಡಿಮೆ ಮಾಡುತ್ತದೆ.
ಅದರಲ್ಲಿ ಮುಖ್ಯವಾಗಿ ರಾತ್ರಿ ಮಲಗುವಾಗ ಒಂದು ಗ್ಲಾಸ್ ಹಾಲನ್ನು ಕುಡಿದರೆ ಅದರಿಂದ ಒಳ್ಳೆಯ ಕ್ಯಾಲ್ಸಿಯಂ ಸಿಗುತ್ತದೆ ಮತ್ತೆ ಹೊಟ್ಟೆನೋವು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಅದೇ ರೀತಿ ಬೆಳಗ್ಗಿನ ಸೂರ್ಯನ ಬಿಸಿಲಿನಿಂದ ವಿಟಮಿನ್ ಡಿ ಸಿಗುತ್ತದೆ, ಇದರಿಂದ ನರಗಳ ದೌರ್ಬಲ್ಯ, ಸ್ನಾಯು ಸೆಳೆತ ಕಡಿಮೆ ಆಗಿ ಋತುಚಕ್ರ ಸಮಸ್ಯೆ ಕಡಿಮೆ ಆಗುತ್ತದೆ.
ಕ್ಯಾಲ್ಸಿಯಂ ಹೆಚ್ಚಿಗೆ ಸಿಗುವಂತಹ ಡೈರಿ ಉತ್ಪನ್ನಗಳು, ಹಾಲು, ಮೊಸರು, ತುಪ್ಪ, ಪನ್ನೀರ್, ಮುಂತಾದವುಗಳನ್ನ ಸೇವಿಸಬೇಕು.
ಹಸಿರು ತರಕಾರಿಗಳು, ಸೋಯಾಬೀಜ, ಎಳ್ಳು, ಬಾದಾಮಿ, ಸಾಲಮಾನ್ ಮೀನು ಇತ್ಯಾದಿಗಳನ್ನ ಋತುಚಕ್ರದ ಸಮಯದಲ್ಲಿ ಮಹಿಳೆಯರು ತಿನ್ನಬೇಕು.

ವಿಟಮಿನ್ ಆಹಾರ (Vitamin food)
Periods pain ಮುಟ್ಟಿನ ಸಮಯದಲ್ಲಿ ವಿಟಮಿನ್ ಆಹಾರ (Vitamin food)

ಮುಟ್ಟಿನ ಸಮಯದಲ್ಲಿ ಮಹಿಳೆಗೆ ವಿಟಮಿನ್ ಗಳು ತುಂಬಾ ಅಗತ್ಯವಾಗಿರುತ್ತವೆ. ಅದರಲ್ಲಿ ಕೆಲವೆಂದರೆ ವಿಟಮಿನ್ B6 ಜಾಸ್ತಿ ಇರುವ ಕೆಲವೊಂದು ಆಹಾರ ಪದಾರ್ಥಗಳನ್ನ ತಿನ್ನುವುದರಿಂದ, ಆಕೆಯ ಮಾನಸಿಕ ಒತ್ತಡ ಮತ್ತೆ ಹೊಟ್ಟೆ ನೋವು Periods pain ಕಡಿಮೆ ಆಗುತ್ತದೆ.
ಮುಖ್ಯ ವಿಟಮಿನ್ B6 ಆಹಾರ ಪದಾರ್ಥಗಳೆಂದರೆ ಬ್ರಾಕೊಲಿ, ಪಿಸ್ತಾ, ಟೊಮೆಟೊ, ಜೋಳ, ಮತ್ತೆ ಧಾನ್ಯಗಳು. ಹಾಗೆಯೆ ವಿಟಮಿನ್ ಸಿ ಇರುವ ನಿಂಬೆಹಣ್ಣು, ಕಿತ್ತಳೆ, ಮೋಸಂಬಿ, ತಿನ್ನುವುದರಿಂದ ದಿನಪೂರ್ತಿ ಶಕ್ತಿ ನೀಡುವ ಜೊತೆಗೆ ಮುಟ್ಟಿನ ನೋವು ನಿವಾರಿಸಲು ಸಹಾಯ ಮಾಡುತ್ತದೆ.
ಕುಂಬಳಕಾಯಿ ಬೀಜ, ನೆಲಗಡಲೆ, ಮತ್ತೆ ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್ ಇ ಅಂಶ ಜಾಸ್ತಿ ಇದ್ದು ಮುಟ್ಟಿನ ಸಮಯದಲ್ಲಿ ತಿನ್ನುವುದರಿಂದ ಹಲವು ಸಮಸ್ಯೆಗಳು ಕಡಿಮೆ ಆಗುತ್ತವೆ.

ಮೆಗ್ನಿಶಿಯಂ ಮತ್ತು ಪೊಟ್ಯಾಶಿಯಂ ಆಹಾರ
periods pain control foods
omega 3 food for periods pain

ಮೆಗ್ನಿಶಿಯಂ ಮತ್ತು ಪೊಟ್ಯಾಶಿಯಂ ಅಂಶ ಇರುವ ಆಹಾರದಲ್ಲಿ ಕೆಲವು ಮೈಕ್ರೋನ್ಯೂಟ್ರಿಯಂಟ್ಸ್ಗಳು ಸ್ನಾಯು ಸೆಳೆತವನ್ನು ಕಡಿಮೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಅದರಲ್ಲಿ ಪ್ರಮುಖವಾಗಿ ಕುಂಬಳಕಾಯಿ ಬೀಜ, ಬೀನ್ಸ್, ಡಾರ್ಕ್ ಚಾಕೊಲೇಟ್, ಅವಕಾಡೊ, ಬಾಧಾಮಿ ಬೀಜ, ಹಸಿರು ತರಕಾರಿಗಳು, ಗೆಣಸು, ಬಾಳೆಹಣ್ಣು, ಆರೆಂಜ್, ಇವುಗಳಲ್ಲಿ ಉತ್ತಮ ಮೆಗ್ನಿಶಿಯಂ ಮತ್ತು ಪೊಟ್ಯಾಶಿಯಂ ಅಂಶ ಇದೆ, ಇವುಗಳನ್ನು ತಿನ್ನುವುದರಿಂದ ಮಹಿಳೆಗೆ ಉತ್ತಮ ನಿದ್ದೆ ಬರುತ್ತದೆ, ಜೊತೆಗೆ ಮಲಬದ್ಧತೆ ಸಮಸ್ಯೆ ಇದ್ದರೆ ಸರಾಗವಾಗುತ್ತದೆ. ಮತ್ತು ಮಾನಸಿಕ ಸ್ಥಿತಿ ಸುಧಾರಿಸುತ್ತದೆ.

ಮುಟ್ಟಿನ ನೋವು Periods pain ಕಡಿಮೆ ಆಗಲು ಕಾರ್ಬೋಹೈಡ್ರೇಟ್ಸ್ ಆಹಾರ

ಮುಟ್ಟಿನ ನೋವು Periods pain ಕಡಿಮೆ ಆಗಲು ಕಾರ್ಬೋಹೈಡ್ರೇಟ್ಸ್ ಆಹಾರ

ಕಾರ್ಬೋಹೈಡ್ರೇಟ್ಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡುತ್ತದೆ, ಹಾಗೂ ಋತುಸ್ರಾವದ ಸಮಯದಲ್ಲಿ ನೋವು ನಿವಾರಣೆಗೆ ಸಹಕರಿಸುತ್ತದೆ. ಅದರಲ್ಲಿ ಮುಖ್ಯವಾಗಿ ಧಾನ್ಯಗಳು, ಓಟ್ಸ್, ಹಲವಾರು ಒಣಗಿದ ಬೀಜಗಳು( ಬಾದಾಮಿ, ಖರ್ಜೂರ, ಗೋಡಂಬಿ,) ಇತ್ಯಾದಿ, ಮತ್ತೆ ಗೋದಿ ಚಪಾತಿ, ಇವುಗಳನ್ನು ಹೆಚ್ಚು ತಿನ್ನಬೇಕು. ಹೆಚ್ಚು ಕ್ಯಾಲರಿ ಇರುವ ಬೀಜಗಳನ್ನು ತಿನ್ನಬೇಕು .

ಪೀರಿಯಡ್ಸ್ ಸಮಯದಲ್ಲಿ ಯಾವ ಆಹಾರಗಳನ್ನು ತಿನ್ನಬಾರದು .

ಜಾಸ್ತಿ ಫ್ರೈ ಮಾಡಿರುವ, ಪ್ರೊಸಸ್ ಮಾಡಿರುವ ಆಹಾರವನ್ನು ತಿನ್ನಬಾರದು, ಕೆಲವರಿಗೆ ಸಕ್ಕರೆ ಅಂಶ ಹೆಚ್ಚಿರುವ ಸ್ನ್ಯಾಕ್ಸ್ ತಿನ್ನುವ ಅಭ್ಯಾಸ ವಿರುತ್ತದೆ ಅಂತಹವರು ಈ ಸಮಯದಲ್ಲಿ ಅದನ್ನು ತಿರಸ್ಕರಿಸಬೇಕು. ಮತ್ತು ರೆಡ್ ಮೀಟ್ ಅಂದರೆ ಮಾಂಸ ತಿನ್ನುವುದನ್ನು ಸ್ವಲ್ಪ ಕಡಿಮೆ ಮಾಡಬೇಕು. ರಸ್ತೆ ಬದಿ ಸಿಗುವ ಜಂಕ್ ಫುಡ್ ಅಂದರೆ ಹುಡುಗಿಯರಿಗೆ ತುಂಬಾ ಇಷ್ಟ ಆದರೆ ಅದು ಅವರ ದೇಹಕ್ಕೆ ಸ್ಲೋ ಪಾಯಿಸನ್ ಅಂತ ಗೊತ್ತಿರುವುದಿಲ್ಲ. ಕನಿಷ್ಠ ನಿಮ್ಮ ಪೀರಿಯಡ್ಸ್ ಸಮಯದಲ್ಲಿಯಾದರೂ ಅದನ್ನ ದೂರವಿಡಿ.
ಮಹಿಳೆಯರಲ್ಲಿ ಕೆಲವರಿಗೆ ಆಲ್ಕೋಹಾಲ್ ಕುಡಿಯುವ ಅಭ್ಯಾಸವಿದ್ದರೆ ಖಂಡಿತ ಅದನ್ನು ಬಿಡಬೇಕು. ಇಲ್ಲವೇ ಕನಿಷ್ಠ ಪೀರಿಯಡ್ಸ್ ಸಮಯದಲ್ಲಿಯಾದರೂ ದೂರವಿಡಬೇಕು. ಆಗ ಮಾತ್ರ ಹೊಟ್ಟೆ ನೋವು ಬರುವುದಿಲ್ಲ ಬಂದರೂ ಅದನ್ನು ತಡೆದುಕೊಳ್ಳುವ ಶಕ್ತಿ ನಿಮ್ಮಲ್ಲಿ ಇರುತ್ತದೆ.

ಕೆಫೀನ್ ಮತ್ತು ಉಪ್ಪಿನಂಶ ಕಡಿಮೆ ಮಾಡಬೇಕು.

ಮುಟ್ಟಿನ ನೋವು periods painಕಡಿಮೆ ಆಗಲು ಕೆಫೀನ್ ಮತ್ತು ಉಪ್ಪಿನಂಶ ಕಡಿಮೆ ಮಾಡಬೇಕು.
to control Periods pain control salt

ಕೆಫೀನ್ ಅಂಶ ಇರುವ ಕಾಫಿ ಸೇವನೆ ಮಾಡುವುದು ಋತುಚಕ್ರದ ಸಮಯದಲ್ಲಿ ತುಂಬಾ ಅಪಾಯಕಾರಿ, ಇದು ಹೊಟ್ಟೆಯ ಆಮ್ಲ ಗ್ಯಾಸ್ಟ್ರಿಕ್ ಅಂಶವನ್ನ ಜಾಸ್ತಿ ಮಾಡುತ್ತದೆ, ಮತ್ತು ಮೂಡ್ ಸ್ವಿನ್ಗ್ಸ್ ಆಗಲು ಕಾರಣವಾಗುತ್ತದೆ. ಕೆಲವೊಂದು ಸಂಸ್ಕರಿಸಿದ ಪ್ಯಾಕೆಟ್ ಆಹಾರದಲ್ಲಿ ಮತ್ತು ಚಿಪ್ಸ್ ಪ್ಯಾಕೆಟ್ ಗಳಲ್ಲಿ ಉಪ್ಪಿನಂಶ ಜಾಸ್ತಿ ಇರುತ್ತದೆ, ಹಾಗು ಇದು ಋತುಚಕ್ರ ಸಂದರ್ಭದಲ್ಲಿ ಹೆಚ್ಚು ನೋವು ಕೊಡುತ್ತದೆ. ಆದ್ದರಿಂದ ಕಾಫಿ ಕುಡಿಯುವುದು ಮತ್ತು ಉಪ್ಪನ್ನು ಜಾಸ್ತಿ ಸೇವನೆ ಮಾಡುವುದು ಕಡಿಮೆ ಮಾಡಬೇಕು.

ಕಡಿಮೆ ಊಟ ಮಾಡಬೇಕು ಜಾಸ್ತಿ ನೀರು ಕುಡಿಯಬೇಕು.

To reduce Periods pain drink more water

ನಾವು ದಿನನಿತ್ಯ ಕನಿಷ್ಠ 3-4 ಲೀಟರ್ ನಷ್ಟು ನೀರು ಕುಡಿಯಬೇಕು ಅದರಲ್ಲೂ ಮಹಿಳೆಯರು ಮುಟ್ಟಿನ ಸಮಯದಲ್ಲಿ ಬೇಡವಾದ ಹೆಚ್ಚು ದ್ರವಾಂಶ ಹೊರ ಹೋಗುವುದರಿಂದ ದೇಹವು ನೀರಿನಂಶದಿಂದ ಕೂಡಿರುವುದು ತುಂಬಾ ಮುಖ್ಯ.
ಮತ್ತೆ ನಾವು ದಿನಕ್ಕೆ 3 ಬಾರಿ ಆಹಾರ ತಿನ್ನುತ್ತೇವೆ. ರೂಟುಕ್ಕ್ರದ ಸಮಯದಲ್ಲಿ ಆದಷ್ಟು ಲಿಕ್ವಿಡ್ ರೂಪದ ಆಹಾರಕ್ಕೆ ಹೆಚ್ಚು ಒತ್ತು ನೀಡಬೇಕು. ಒತ್ತೆ ನೋವು ಕಡಿಮೆ ಆಗಲು ನೀರು ಜಾಸ್ತಿ ಕುಡಿದು ಕಡಿಮೆ ಆಹಾರ ಸೇವಿಸಬೇಕು.

ನಮ್ಮ ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಉತ್ತಮ ಹೆಜ್ಜೆ ಇಟ್ಟಿದ್ದು, ನವೆಂಬರ್ 2025 ರಲ್ಲಿ ಮುತ್ತಿನ ರಜೆ ನೀತಿಯನ್ನು ಪರಿಚಯಿಸಿದೆ.
ಇದು ಕೈಗಾರಿಕೆಗಳು, ಗಾರ್ಮೆಂಟ್ಸ್, ಐಟಿ , ಮತ್ತು ಎಲ್ಲ ತರಹದ ಸರ್ಕಾರಿ ಮತ್ತು ಕಾಸಗಿಯಲ್ಲಿ ಕೆಲಸ ಮಾಡುತ್ತಿರುವ 18-52 ವರ್ಷದ ವಯಸ್ಸಿನ ಮಹಿಳಾ ಉದ್ಯೋಗಿಗಳಿಗೆ ವರ್ಷಕ್ಕೆ 12 ದಿನ ಅಂದರೆ ತಿಂಗಳಿಗೆ 1 ದಿನ ವೇತನ ಸಹಿತ ರಜೆಯನ್ನು ನೀಡಿರುವದು ಒಳ್ಳೆಯ ಸಂಗತಿ.

ಮಹಿಳೆಯರ ಮಾಸಿಕ ಚಕ್ರ ಎನ್ನುವುದು ಅವರ ಆರೋಗ್ಯದ ಒಂದು ಮುಖ್ಯವಾದ ಭಾಗ. ಇರೆಗುಲರ್ ಪೀರಿಯಡ್ಸ್ ಮತ್ತೆ ಹೊಟ್ಟೆ ನೋವು ಸಾಮಾನ್ಯ ಆಗಿದ್ದರೂ ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬಾರದು. ನಾನು ಮೇಲೆ ತಿಳಿಸಿರುವ ಆಹಾರ ಯಾವಾಗಲೂ ತಿನ್ನುವುದಕ್ಕೆ ಆಗುವುದಿಲ್ಲ ಅನ್ನುವುದು ಗೊತ್ತು ಆದರೂ ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು ಕನಿಷ್ಠ ವಾರಕ್ಕೆ 3-4 ದಿನ ಒಳ್ಳೆಯ ಆಹಾರ ತಿನ್ನುವುದರಿಂದ ದೇಹ ಒಳ್ಳೆಯ ಸಂದೇಶವನ್ನು ರವಾನಿಸುತ್ತದೆ. ಮತ್ತು ಪೀರಿಯಡ್ಸ್ ನೋವು ಬರುತ್ತದೆ ಎನ್ನುವುದೇ ಗೊತ್ತಾಗದಂತೆ ಹೆಣ್ಣುಮಕ್ಕಳು ಆರಾಮವಾಗಿ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಬಹುದು.

1 thought on “ಮುಟ್ಟಿನ(Periods) ಸಮಯದ ನೋವನ್ನು ಕಡಿಮೆ ಮಾಡಲು ತಿನ್ನಬೇಕಾದ ಆಹಾರಗಳು.”

  1. Pingback: ಇರ್ರೆಗುಲರ್ ಪೀರಿಯೆಡ್ಸ್ (Irregular Periods): ಏನಿದರ ಕಾರಣಗಳು, ಲಕ್ಷಣಗಳು, ಯೋಗ ಮತ್ತು ನೈಸರ್ಗಿಕ ಪರಿಹಾರಗಳು (Natural Treatment). - learn

Leave a Comment

Your email address will not be published. Required fields are marked *

Scroll to Top