10 Home Remedies To Glowing Skin : Natural, Safe, & Best Solution || ಹೊಳೆಯುವ ಚರ್ಮಕ್ಕೆ 10 ಮನೆಮದ್ದುಗಳು: ನೈಸರ್ಗಿಕ, ಸುರಕ್ಷಿತ ಮತ್ತು ಅತ್ಯುತ್ತಮ ಪರಿಹಾರ.

Spread the love
Glowing Skin

ನಮ್ಮ ಹೊಳೆಯುವ ಚರ್ಮ ಸಾಮಾನ್ಯವಾಗಿ ದೇಹದ ಆರೋಗ್ಯಕರ ಸಂಕೇತವನ್ನು ಸೂಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಆದುನಿಕ ಚರ್ಮದ ಕೃತಕ ಚಿಕಿತ್ಸೆಗಳು, ಮತ್ತೆ ಮೇಕಪ್ ಮಾಡಿಕೊಳ್ಳುವ ಸೌಂದರ್ಯವರ್ಧಕಗಳು ತಕ್ಷಣಕ್ಕೆ ಚರ್ಮ ಹೊಳೆಯುವಂತೆ Glowing Skin ಮಾಡುತ್ತವೆ. ಆದರೆ ದಿನ ಕಳೆದಂತೆ  ಚರ್ಮಕ್ಕೆ ತೊಂದರೆಯನ್ನು ಉಂಟುಮಾಡುತ್ತವೆ.

ಆದ್ದರಿಂದ ಜನರು ನೈಸರ್ಗಿಕವಾಗಿ ಚರ್ಮದ ತ್ವಚೆಗಾಗಿ ಮನೆ ಮದ್ದುಗಳನ್ನು ನಂಬುತ್ತಾರೆ. ಅವು ನಮ್ಮ ಕೈಗೆಟಕುವ ಮತ್ತೆ ಕಡಿಮೆ ಬೆಲೆಯ ಮನೆಯಲ್ಲಿ ಯಾರುಬೇಕಾದರು ಬಳಸಬಹುದಾಗಿರುತ್ತವೆ.
ಈ ನೈಸರ್ಗಿಕ ಪರಿಹಾರಗಳು ಚರ್ಮದ ಆರೋಗ್ಯವನ್ನು ಒಳಗಿನಿಂದ ಪೋಷಿಸುವ ಮೂಲಕ ಚರ್ಮದ ರಕ್ತ ಸಂಚಲನ ಸುಧಾರಿಸುತ್ತವೆ. ಮತ್ತೆ ಹೊರಗಿನಿಂದ ಹೊಳೆಯುವ ಚರ್ಮದ ಆರೋಗ್ಯ ಕಾಪಾಡುತ್ತವೆ.

ಇತ್ತೀಚಿನ ನಮ್ಮ ವೇಗದ ಜೀವನ ಶೈಲಿ ಯಾವ ರೀತಿ ಇದೆ ಎಂದರೆ, ನಮ್ಮ ದೇಹದ ಆರೋಗ್ಯವನ್ನೇ ನಾವು ಮರೆತಿದ್ದೇವೆ. ಅದರಲ್ಲೂ ಮುಖ್ಯವಾಗಿ ಚರ್ಮದ ಆರೋಗ್ಯ. ಪ್ರತೀ ವ್ಯೆಕ್ತಿಯೂ ಸಹ ತನ್ನ ಚರ್ಮ ಮೃದುವಾಗಿ, ನೋಡುವುದಕ್ಕೆ ಚನ್ನಾಗಿ ಕಾಣಬೇಕು ಎಂದು ಬಯಸುತ್ತಾರೆ. ಆದರೆ ಕಲುಷಿತ ವಾತಾವರಣ, ನಮ್ಮ ಒತ್ತಡದ ಜೀವನ, ಕಲುಷಿತ ಆಹಾರ, ಇವೆಲ್ಲವುಗಳಿಂದ ನಮ್ಮ ಚರ್ಮದ ನೈಸರ್ಗಿಕ ಕಾಂತಿ ತುಂಬಾ ಕಡಿಮೆಯಾಗಿದೆ.

ಆದ್ದರಿಂದ ನಾನು ಈ ಲೇಖನದಲ್ಲಿ ಸುಮ್ಮನೆ ಹೊರಗಡೆ ಸಿಗುವ ದುಬಾರಿ ಕಾಸ್ಮೆಟಿಕ್ ಉತ್ಪನ್ನಗಳನ್ನ ಬಳಸಿ ಚರ್ಮದ ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ನಮ್ಮ ಮನೆಯಲ್ಲಿ ಇರುವ ನೈಸರ್ಗಿಕ ಪಧಾರ್ಥಗಳನ್ನು ಬಳಸಿಕೊಂಡು, ಆರೋಗ್ಯಕರ ರೀತಿಯಲ್ಲಿ ಚರ್ಮದ ಹೊಳಪನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ತಿಳಿಸಿದ್ದೇನೆ.

ಡಲ್ ಚರ್ಮಕ್ಕೆ ಸಾಮಾನ್ಯ ಕಾರಣಗಳು.

 ನಮ್ಮ ಚರ್ಮ ಯಾವ ರೀತಿ ಅಂದರೆ ಅದು ಅನೇಕ ಒಳಗಿನ ಮತ್ತೆ ಹೊರಗಿನ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಈ ಎಲ್ಲಾ ಕಾರಣಗಳಿಂದ ನಿಧಾನವಾಗಿ ಚರ್ಮದ ಕಾಂತಿ ಕಡಿಮೆಯಾಯಾಗುತ್ತದೆ. ಈ ಕಾರಣಗಳನ್ನ ನೋಡೋಣ :

  •  ನಮ್ಮ ವಾತಾವರಣದಲ್ಲಿರುವ ಮಾಲಿನ್ಯದಿಂದ ಚರ್ಮ ಹಾಳಾಗುತ್ತದೆ.
  •  ವಾತಾವರಣದಲ್ಲಿರುವ ಧೂಳು ಚರ್ಮದ ಕಾಂತಿಯನ್ನ ಕಡಿಮೆಮಾಡುತ್ತದೆ.
  •  ಬೆಳಿಗ್ಗೆ 10ಗಂಟೆ ಮೇಲೆ ಸೂರ್ಯನ ಕಿರಣಗಳು ಚರ್ಮದ ಹೊಳೆಯುವಿಕೆಯನ್ನು ಡಲ್ ಮಾಡುತ್ತದೆ.
  •  ನಾವು ಸರಿಯಾಗಿ ನೀರನ್ನು ಕುಡಿಯದೆ ದೇಹ ಡೀಹೈಡ್ರೇಟ್ ಆದಾಗ ಚರ್ಮ ಒಣಗುತ್ತದೆ.
  •  ಪೌಷ್ಠಿಕ ಆಹಾರ  (ವಿಟಮಿನ್ಸ್, ಮತ್ತೆ ಪೋಷಕಾಂಶಗಳು) ತಿನ್ನದೇ ಜಂಕ್ ಫುಡ್ ಸೇವನೆಯಿಂದ ಚರ್ಮದ ಕಾಂತಿ ಕಡಿಮೆಯಾಗುತ್ತದೆ.
  •  ಮುಖ್ಯವಾಗಿ ಕನಿಷ್ಠ 6-7 ಗಂಟೆ ನಿದ್ದೆ ಮಾಡದಿದ್ದರೆ ಚರ್ಮ ಸುಕ್ಕುಗಟ್ಟುತ್ತದೆ.
  •  ನಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ಒತ್ತಡ ಇದ್ದಾಗ ಚರ್ಮದ ಆರೋಗ್ಯ ಹಾಳಾಗುತ್ತದೆ.
  • ಕೃತಕವಾಗಿ ಬಳಸುವ ಕೆಲವೊಂದು ಮೇಕಪ್ ಪ್ರಾಡಕ್ಟ್ ಗಳು ಚರ್ಮದ ಕಾಂತಿಯನ್ನು ಹಾಳುಮಾಡುತ್ತವೆ.
  •  ದೇಹದಲ್ಲಿ ಹಾರ್ಮೋನ್ ಗಳು ಬದಲಾವಣೆ ಹಾಗುವಾಗ ಮುಖದಲ್ಲಿ ಪಿಂಪಲ್ಸ್ ಬಂದು ಚರ್ಮದ ತ್ವಚೆ ಹಾಳಾಗುತ್ತದೆ.

ಈ ಎಲ್ಲಾ ಕಾರಣಗಳಿಂದ ನಮ್ಮ ಚರ್ಮದ ಆರೋಗ್ಯ ದಿನೇ ದಿನೇ ಹಾಳಾಗುತ್ತದೆ. ಮತ್ತೆ ತನ್ನಲ್ಲಿರುವ ಜೀವಂತಿಕೆ ಕಳೆದುಕೊಂಡು ಅಸ್ವಸ್ಥವಾಗುತ್ತದೆ.

For Glowing Skin ಮನೆಯಲ್ಲಿ ತಯಾರಿಸುವ ಮನೆ ಮದ್ದುಗಳು ನಿಜವಾಗಿಯೂ ಕೆಲಸ ಮಾಡುತ್ತವೆಯೇ?

ಹೌದು, ಮನೆಯಲ್ಲಿ ತಯಾರಿಸುವ ಪಧಾರ್ಥಗಳು ಸರಿಯಾದ ರೀತಿಯಲ್ಲಿ ಬಳಸಿದಾಗ ನಿಜವಾಗಿಯೂ ಚರ್ಮದ ಕಾಂತಿಗೆ ಉತ್ತಮ ಫಲಿತಾಂಶ ನೀಡುತ್ತವೆ. ಆದರೆ ಕೃತಕವಾಗಿ ಬಳಸುವ ರೀತಿಯಲ್ಲಿ ತಕ್ಷಣಕ್ಕೆ ಫಲಿತಾಂಶ ನೀಡದೆ ಹಂತ ಹಂತವಾಗಿ ಚರ್ಮದ ಕಾಂತಿಯನ್ನು ಗ್ಲೋ ಮಾಡುತ್ತದೆ.
ಇದರಲ್ಲಿ ಮುಖ್ಯವಾಗಿ ಕನ್ಸಿಸ್ಟನ್ಸಿ ಇರಬೇಕು. ಅಂದರೆ ಒಂದೆರಡು ದಿನ ಮಾಡಿ ಬಿಟ್ಟುಬಿಡಬಾರದು. ಬದಲಿಗೆ ನಮ್ಮ ಚರ್ಮಕ್ಕೆ ಯಾವ ರೀತಿ ಮನೆ ಮದ್ದುಗಳು ಬೇಕು ಅವನ್ನ ಸರಿಯಾದ ರೀತಿ ಚರ್ಮದ ತ್ವಚೆಗಾಗಿ ಪ್ರಯತ್ನಿಸುತ್ತಿದ್ದರೆ ಅಂದವಾದ ಚರ್ಮ ನಿಮ್ಮದಾಗುತ್ತದೆ.

ಕೃತಕ ಕಾಸ್ಮೆಟಿಕ್ಸ್ ಗಳಿಗಿಂತ ಮನೆ ಮದ್ದುಗಳು ಏಕೆ ಉತ್ತಮ?

  • ಇವು ಮನೆಯಲ್ಲಿ ಸಿಗುವ ನೈಸರ್ಗಿಕ ಪಧಾರ್ಥಗಳಿಂದ ಮಾಡಿರುವುದರಿಂದ ಚರ್ಮಕ್ಕೆ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ.
  •  ಕೃತಕ ವಸ್ತುಗಳಿಗೆ ಹೋಲಿಸಿದರೆ ಇವು ಕಡಿಮೆ ಬೆಲೆಯಲ್ಲಿ ಸಿಗುತ್ತವೆ.
  •  ಚರ್ಮಕ್ಕೆ ಒಳಗಿನಿಂದ ರಕ್ಷಣೆ ಮತ್ತು ಪೋಷಣೆ ಒದಗಿಸುತ್ತವೆ.
  •  ಸ್ವಲ್ಪ ದಿನಕ್ಕಲ್ಲದೆ ದೀರ್ಘಕಾಲಿಕ ಒಳ್ಳೆಯ ಫಲಿತಾಂಶ ನೀಡುತ್ತವೆ.

ಇವನ್ನು ಬಳಸುವಾಗ ನಾವು ತಕ್ಷಣಕ್ಕೆ ನಮ್ಮ ಚರ್ಮ ಕಾಂತಿಯನ್ನು ಪಡಿಯಬೇಕು ಎಂದು ನಿರೀಕ್ಷಿಸದೆ, ನಿಯಮಿತವಾಗಿ ಬಳಸಿದರೆ ದೀರ್ಘಕಾಲದಲ್ಲಿ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು.

ಹೊಳೆಯುವ ಚರ್ಮಕ್ಕಾಗಿ 10 ಸರಳ ನೈಸರ್ಗಿಕ ಮನೆ ಮದ್ದುಗಳು.

1. ಜೇನು ತುಪ್ಪ - ನೈಸರ್ಗಿಕ ಚರ್ಮದ ತ್ವಚೆಯ ಉತ್ತಮ ಮನೆ ಮದ್ದು:

ಜೇನು ತುಪ್ಪ – Glowing Skin ನೈಸರ್ಗಿಕ ಚರ್ಮದ ತ್ವಚೆಗೆ ಉತ್ತಮ ಮನೆ ಮದ್ದು:
ಜೇನು ತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದ್ದು ಚರ್ಮದ ಸೋಂಕುಗಳನ್ನು ತಡೆದು, ನಮ್ಮ ಚರ್ಮದ ತ್ವಚೆಗೆ ಅತ್ಯಂತ ನಂಬಿಕಾರ್ಹ ನೈಸರ್ಗಿಕ ಪಧಾರ್ಥಗಳಲ್ಲಿ ಒಂದು. ಇದನ್ನು ಹೊಳೆಯುವ ಚರ್ಮದ ತ್ವಚೆಗಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಇದು ಗಾಳಿಯಲ್ಲಿನ ತೇವಾಂಶವನ್ನು ತೆಗೆದುಕೊಂಡು ಚರ್ಮದಲ್ಲಿ ಇಟ್ಟು ಚರ್ಮ ಯಾವಾಗಲೂ ಡ್ರೈ ಆಗದಂತೆ ಮೃಧುವಾಗಿರುವಂತೆ ನೋಡಿಕೊಳ್ಳುತ್ತದೆ.
ಇದು ಕೆಲವೊಮ್ಮೆ ಹಾನಿಗೊಳಗಾದ ಚರ್ಮದ ಸೆಲ್ ಗಳನ್ನ ಗುಣಪಡಿಸಲು ಸಹಾಯ ಮಾಡುತ್ತದೆ. ಮತ್ತೆ ಮುಖದ ಮೀಲ ಇರುವ ಸಣ್ಣ ಪುಟ್ಟ ಚರ್ಮದ ಕಲೆಗಳನ್ನು ವೇಗವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ. ಇದನ್ನು ಎಲ್ಲಾ ತರಹದ ಚರ್ಮದವರೂ ಬಳಸಲು ಸುರಕ್ಷಿತವಾಗಿದೆ.

ಇದನ್ನು ಹೇಗೆ ಬಳಸುವುದು ?
ಮುಖವನ್ನು ನೀರಿನಿಂದ ತೊಳೆದು ಒಣಗಿಸಿ ನಂತರ ಜೇನಿನ ಹಾನಿಯನ್ನು ಮುಖಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ 15-20 ನಿಮಿಷ ಬಿಟ್ಟು ನಂತರ
ಸ್ವಲ್ಪ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು.
ಇದನ್ನ ಬೇಕಿದ್ದರೆ ನಿಮ್ಮ ಚರ್ಮ ಸ್ವಲ್ಪ ಡ್ರೈ ಜಾಸ್ತಿ ಇದ್ದರೆ ನಿಂಬೆರಸ ಮತ್ತೆ ಹಾಲಿನೊಂದಿಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಹಾಲು ಚರ್ಮವನ್ನ ಮೃಧುವಾಗಿಸುತ್ತದೆ, ಮತ್ತೆ ಜೇನುತುಪ್ಪ ಚರ್ಮಕ್ಕೆ ತೇವಾಂಶ ನೀಡಿ ಡ್ರೈ ಆಗದಂತೆ ನೋಡಿಕೊಳ್ಳುತ್ತದೆ.

 ವಾರಕ್ಕೆ ಕನಿಷ್ಠ 2-3 ಬಾರಿ ಈ ರೀತಿ ಮಾಡುವುದರಿಂದ ನಿಮ್ಮ ಚರ್ಮದ ನೈಸರ್ಗಿಕ ಕಾಂತಿ (Natural Glow) ಹೆಚ್ಚಾಗುತ್ತದೆ ನಂತರ ಸ್ಕಿನ್ ಡ್ರೈ ಆಗದೆ ಗ್ಲೋ ಆಗುತ್ತದೆ.

Note: ಇತ್ತೀಚಿಗೆ ಮಾರುಕಟ್ಟೆಯಲ್ಲಿ ಅನೇಕ ಕಲಬೆರೆಕೆ ಜೇನುತುಪ್ಪ ಬಂದಿದೆ. ಆದಷ್ಟು ಇದರ ಬಗ್ಗೆ ಎಚ್ಚರ ವಹಿಸಿ ನೈಸರ್ಗಿಕ ಜೇನುತುಪ್ಪಕ್ಕೆ ಹೆಚ್ಚಿನ ಗಮನ ಕೊಡಬೇಕು.

Honey for Glowing Skin

2. ಅಲೋವೆರಾ – For Glowing Skin ನೈಸರ್ಗಿಕ ಚರ್ಮ ಕಾಂತಿ :
ಇದು ಚರ್ಮವನ್ನು ತಂಪಾಗಿಸುವ, ಗುಣಪಡಿಸುವ, ಮತ್ತು ಚರ್ಮವನ್ನು ರಿಪೇರ್ ಮಾಡುವುದಕ್ಕೆ ಹೆಸರುವಾಸಿಯಾಗಿದೆ. ಇದರಲ್ಲಿ ವಿಟಮಿನ್ A, C and E, ಅಂಶ ಜಾಸ್ತಿ ಇದ್ದು, ಇದು ಆಂಟಿ ಆಕ್ಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಅಂದರೆ ಚರ್ಮ ಏನಾದರೂ ಹಾನಿಗೊಳಗಾದರೆ ಅದನ್ನು ಮತ್ತೆ ನೈಸರ್ಗಿಕವಾಗಿ ಸರಿಪಡಿಸಲು ಇದು ಸಹಾಯಮಾಡುತ್ತದೆ. ಇದು ಚರ್ಮದ ಆಳಕ್ಕೆ ಓಗಿ ಚರ್ಮವನ್ನು ಮೃಧುವಾಗಿಸಿ ಒಳಗಿನಿಂದ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಮತ್ತೆ ಇದು ಎಲ್ಲ ರೀತಿಯ ಚರ್ಮಕ್ಕೆ ಸೂಕ್ತವಾಗಿದ್ದು ಮುಖದ ಮೇಲಿನ ಮೊಡವೆ, ಚರ್ಮದ ಸೋಂಕು, ಚರ್ಮ ಜಿಡ್ಡಿನಂಶ ದಿಂದ ಇದ್ದರೆ ಎಲ್ಲದಕ್ಕೂ ಸೂಕ್ತವಾಗಿ ಪರಿಹಾರ ನೀಡುತ್ತದೆ.

ಇದನ್ನು ಸರಿಯಾಗಿ ಬಳಸುವುದರಿಂದ ನಮ್ಮ ಚರ್ಮ ಸೂರ್ಯನ ಶಾಖಕ್ಕೆ, ಹೊರಗಿನ ಮಾಲಿನ್ಯಕ್ಕೆ ಮತ್ತೆ ಡಿಹೈಡ್ರೇಷನ್ ಗೆ ಒಳಗಾದಾಗ ಅದರಿಂದ ಹೊರಬರಲು ಸಹಾಯಮಾಡುತ್ತದೆ. ಮತ್ತೆ ಮುಖ ಯಂಗ್ ಆಗಿ ಕಾಣುತ್ತದೆ. ಚರ್ಮದ ಆರೋಗ್ಯ ಮುಖ್ಯವಾಗಿ ಕೊಲೆಜಿನ್ ನಿಂದ ಅವಲಂಬಿಸಿದ್ದು, ಅದರ ಬೆಳವಣಿಗೆಗೆ ಆಲೋವೆರಾ ಸಹಾಯಕಾರಿ.
ಕೆಲವರಿಗೆ ಸ್ವಲ್ಪ ಬಿಸಿಲಿಗೆ ಹೋದರೂ ಮುಖ ಕೆಂಪಾಗುತ್ತದೆ ಅಂತಹ ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಇದು ಸೂಕ್ತವಾಗಿದೆ.

ಇದನ್ನು ಯಾವ ರೀತಿ ಬಳಸಬೇಕು ?
ಸಾಮಾನ್ಯವಾಗಿ ನಮ್ಮ ಹಳ್ಳಿಗಳ ಕೆಡೆ ಇದು ಹೆಚ್ಚಾಗಿ ಸಿಗುತ್ತದೆ. ರಾತ್ರಿ ಮಲಗುವಾಗ ಇದರ ಎಲೆಯಿಂದ ತಾಜಾ ಜೆಲ್ ಅನ್ನು ಹೊರತೆಗೆದು ನೇರವಾಗಿ ಮುಖಕ್ಕೆ ಹಚ್ಚಬೇಕು. ನಂತರ ಸ್ವಲ್ಪ ಮಸಾಜ್ ಮಾಡಿ ರಾತ್ರಿ ಇಡೀ ಬಿಡಿ, ನಂತರ ಬೆಳಿಗ್ಗೆ ಎದ್ದು ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಈ ರೀತಿ ಕನಿಷ್ಠ ವಾರಕ್ಕೆ 2-3 ಬಾರಿ ಮಾಡಬೇಕು.

  •  ಇದರಿಂದ ಹಲವು ಕಾರಣಗಳಿಂದ ಹಾನಿಯಾಗಿದ್ದ ಚರ್ಮ ಗುಣವಾಗುತ್ತದೆ.
  •  ಮುಖದ ಹೈಡ್ರೇಶನ್ ಸುಧಾರಿಸುತ್ತದೆ.
  •  ಮುಖದ ನೈಸರ್ಗಿಕ ಕಾಂತಿ ಜಾಸ್ತಿಯಾಗುತ್ತದೆ.
  •  ಸೂಕ್ಷ್ಮ ಚರ್ಮ ಇರುವವರಿಗೆ ಮುಖ ಕೆಂಪಾಗುವುದನ್ನು ತಡೆಯುತ್ತದೆ.

Note : ಅಲೋವೆರಾ ಜೆಲ್ ಈಗ ಅನೇಕ ಫೇಕ್ ಪ್ರಾಡಕ್ಟ್ ಆಗಿ ಸೇಲ್ ಆಗುತ್ತಿದೆ ಅದರ ಬಗ್ಗೆ ಸ್ವಲ್ಪ ಗಮನ ನೀಡಬೇಕು.

3. ಅರಿಶಿನ ಮತ್ತೆ ಹಾಲಿನ ಮಿಕ್ಸ್ – For Glowing Skin ಹೊಳೆಯುವ ಚರ್ಮಕ್ಕಾಗಿ ಪೇಸ್ ಪ್ಯಾಕ್ :

ಹರಿಶಿಣವನ್ನು ನಾವು ಸಾಂಪ್ರದಾಯಿಕವಾಗಿ ಸುಮಾರು ದಶಕಗಳಿಂದ ಬಳಸುತ್ತಿದ್ದು ಇದರಲ್ಲಿ ಆಂಟಿಆಕ್ಸಿಡೆಂಟ್, ಮತ್ತು ಆಂಟಿ ಇಂಪ್ಲಾಮೇಟರಿ ಅಂಶವಿದ್ದು ಇದು ಚರ್ಮದ ಉರಿ, ಊತ ನಿವಾರಣೆ ಮಾಡುವ ಗುಣವಿದೆ. ಇದನ್ನು ಹಾಲಿನೊಂದಿಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದಾಗ ಮನೆಮದ್ದಾಗಿ ಕೆಲಸಮಾಡುತ್ತದೆ. ಹರಿಶಿಣವು ಸ್ಕಿನ್ ಟೋನ್ ಅನ್ನು ಇಂಪ್ರೂವ್ ಮಾಡಿದರೆ, ಹಾಲು ಚರ್ಮವನ್ನು ಬ್ರೈಟ್ ಆಗಿಸುತ್ತದೆ.

ಈ ಮಿಶ್ರಣದಿಂದ ಚರ್ಮದಲ್ಲಿರುವ pigmentation ಅಂದರೆ ಕಪ್ಪು ಕಲೆಗಳು, ಮತ್ತೆ ಚರ್ಮ ಸುಕ್ಕು, ಮತ್ತೆ ಡೆಡ್ ಸ್ಕಿನ್ ವಾಸಿಯಾಗುತ್ತದೆ. ಯಾಕೆಂದರೆ ಹಾಲಿನಲ್ಲಿ ಲ್ಯಾಕ್ಟಿಕ್ ಅಂಶವಿದ್ದರೆ, ಹರಿಶಿಣದಲ್ಲಿ ಮೊಡವೆಗಳನ್ನು ಉಂಟು ಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಿ ಅದನ್ನು ಕಡಿಮೆ ಮಾಡುವ ಗುಣವಿದ್ದು ಎರಡು ಸೇರಿದಾಗ ಚರ್ಮ ಕಾಂತಿಯುತವಾಗುತ್ತದೆ.

ಇದನ್ನು ಹೇಗೆ ಬಳಸಬೇಕು?
2 ಚಮಚ ಹಾಲಿಗೆ ಒಂದು ಚಿಟಿಕೆ ಹರಿಶಿಣವನ್ನು ಮಿಕ್ಸ್ ಮಾಡಿ ಸಾಫ್ಟ್ ಆಗಿ ಪೇಸ್ಟ್ ತಯಾರಿಸಿಕೊಂಡು, ಮುಖ ಮತ್ತೆ ಕತ್ತಿನ ಭಾಗಕ್ಕೆ ಎಲ್ಲಾ ಕಡೆ ಹಚ್ಚಿ. ನಂತರ 15-20 ನಿಮಿಷ ಹಾಗೆಯೆ ಬಿಟ್ಟು ಒಣಗಿದ ನಂತರ ಅದನ್ನು ತೊಳೆಯಬೇಕು.

  •  ಇದರಿಂದ ನೈಸರ್ಗಿಕ ಕಾಂತಿಯನ್ನು ಜಾಸ್ತಿಮಾಡುತ್ತದೆ.
  •  ಚರ್ಮದ Pigmentation ಕಡಿಮೆಯಾಗುತ್ತದೆ
  •  ಸ್ಕಿನ್ ಟೋನ್ Skin Glowing  ಜಾಸ್ತಿಯಾಗುತ್ತದೆ.
  •  ಚರ್ಮವನ್ನು ಬೇಡವಾದ ಬ್ಯಾಕ್ಟಿರಿಯಾ ದಿಂದ ಕಾಪಾಡುತ್ತದೆ.

ಇದನ್ನು ವಾರಕ್ಕೆ ಕನಿಷ್ಠ 2 ಬಾರಿ ಮಾಡಬೇಕು. ಹರಿಶಿನ ಸ್ವಲ್ಪ ಕಡಿಮೆ ಬಳಸುವುದರಿಂದ ಮುಖದಲ್ಲಿ ಹರಿಶಿಣ ಕಲೆಯಾಗುವುದನ್ನು ತಪ್ಪಿಸಬಹುದು.

Turmeic and milk for Glowing Skin

4. ನಿಂಬೆಹಣ್ಣಿನ ರಸ – ವಿಟಮಿನ್ ಸಿ ಬೂಸ್ಟ್ :

ನಮ್ಮ ಚರ್ಮದ ಬೆಳವಣಿಗೆಗೆ ಕೊಲೆಜಿನ್ ಮುಖ್ಯ ಪಾತ್ರ ವಹಿಸುತ್ತದೆ. ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಜಾಸ್ತಿ ಇರುವುದರಿಂದ ಕೊಲೆಜಿನ್ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಎಕ್ಸ್ ಪೊಲಿಯೆಂಟ್ ಆಗಿ ಕೆಲಸ ನಿರ್ವಹಿಸಿ, ನಮ್ಮ ಚರ್ಮ ಟ್ಯಾನಿಂಗ್, ಕಪ್ಪು ಕಲೆಗಳು, ಮತ್ತು ಚರ್ಮ ಡಲ್ ಆಗಿರುವುದನ್ನು ದೂರಮಾಡಿ ಚರ್ಮಕ್ಕೆ ಹೊಳಪನ್ನುGlowing Skin ಕೊಡುತ್ತದೆ. ಮತ್ತೆ ಡೆಡ್ ಸ್ಕಿನ್ ಸೆಲ್ ಗಳನ್ನೂ ದೂರ ಮಾಡುತ್ತದೆ.
ನಿಂಬೆ ರಸವು ಆಸಿಡ್ ಆಗಿದ್ದು ಇದನ್ನು ಸೂಕ್ಷ್ಮ ಚರ್ಮ ಇರುವವರು ಬಳಸುವ ಮೊದಲು ಸ್ವಲ್ಪ ನೀರಿನೊಂದಿಗೆ ಡೈಲೂಟ್ ಮಿಕ್ಸ್ ಮಾಡಿ ಬಳಸಬೇಕು. ನಿಂಬೆ ರಸವು ಮುಖ ಜಿಡ್ಡಿನಾಂಶ ಆಯಿಲಿ ಮತ್ತೆ ಜಾಸ್ತಿ ಗುಳ್ಳೆಗಳಿರುವವರಿಗೆ ತುಂಬಾ ಚನ್ನಾಗಿ ಕೆಲಸ ಮಾಡುತ್ತದೆ.

ಇದನ್ನ ಹೇಗೆ ಬಳಸಬೇಕು?

  •  ಒಂದು ನಿಂಬೆ ಹಣ್ಣಿನ ರಸವನ್ನು ಅರ್ಧ ಗ್ಲಾಸ್ ನೀರಿನೊಂದಿಗೆ ಮಿಕ್ಸ್ ಮಾಡಿ ಹತ್ತಿಯಿಂದ ಮುಖದ ಎಲ್ಲಾ ಭಾಗಕ್ಕೆ ಹಚ್ಚಿ 15 ನಿಮಿಷ ಬಿಡಬೇಕು. ನಂತರ ನೀರಿನಿಂದ ತೊಳೆದು ಯಾವುದಾದರು ಒಂದು ಮಾಯಿಶ್ವರೈಸರ್ ಹಚ್ಚಬೇಕು.
  •  ಇದು ಸ್ಕಿನ್ ಟೋನ್ ಅನ್ನು ಜಾಸ್ತಿ ಮಾಡುತ್ತದೆ.
  •  ಮುಖದಲ್ಲಿ ಬರುವ ಎಣ್ಣೆ ಅಂಶ ವನ್ನು ಕಡಿಮೆ ಮಾಡುತ್ತದೆ.
  •  ಚರ್ಮ ಕಾಂತಿಯನ್ನು ಜಾಸ್ತಿ ಮಾಡುತ್ತದೆ.
lemon for Glowing Skin

5. ತೆಂಗಿನ ಎಣ್ಣೆ :
ಮುಖ ಕಾಂತಿಯುತವಾಗಿ ಕಾಣಲು ರಾತ್ರಿ ಮಲಗುವಾಗ ಸ್ವಲ್ಪ ತೆಂಗಿನ ಹೆಣ್ಣೆಯನ್ನು ಹಚ್ಚಿ 5 ನಿಮಿಷ ಮಸಾಜ ಮಾಡಿ ಮಲಗಿ ಬೆಳಿಗ್ಗೆ ಎದ್ದು ಸ್ವಲ್ಪ ಬಿಸಿನೀರಿನಿಂದ ಮುಖ ತೊಳೆದರೆ ಸ್ಕಿನ್ ಗ್ಲೋ ಆಗುತ್ತದೆ. ಸಾಧ್ಯವಾದರೆ ದಿನ ಬಿಟ್ಟು ದಿನ ಇದನ್ನ ಪ್ರಯತ್ನಿಸಿ Glowing skin ನೋಡುತ್ತೀರಿ.

6. ಟೊಮೆಟೊ ಹಣ್ಣು :
ಟೊಮೆಟೊ ಹಣ್ಣನ್ನು ಕಟ್ ಮಾಡಿ ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಮುಖಕ್ಕೆ 5 ನಿಮಿಷ ಮಸಾಜ್ ಮಾಡಿದರೆ, ಮುಖದ ಡೆಡ್ ಸೆಲ್ಸ್ ಕಡಿಮೆ ಆಗುತ್ತದೆ ಮತ್ತು ಮುಖದ ಕಾಂತಿ ಜಾಸ್ತಿಯಾಗುತ್ತದೆ.

7. ಸೌತೆಕಾಯಿ :
ಸೌತೆಕಾಯಿಯನ್ನು ಕಟ್ ಮಾಡಿ ಅದರಿಂದ ಮುಖದ ಮೇಲೆ ಮಸಾಜ್ ಮಾಡುವುದರಿಂದ ಅದು ಚರ್ಮಕ್ಕೆ ತಂಪನ್ನು ನೀಡಿ, ಮುಖದಲ್ಲಿ ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ ಅನ್ನು ಕಡಿಮೆ ಮಾಡುತ್ತದೆ.

8. ಬೇವಿನ ಸೊಪ್ಪು :
ಇದು ನೈಸರ್ಗಿಕವಾಗಿ ಚರ್ಮಕ್ಕೆ ಬ್ಯಾಕ್ಟೀರಿಯಾ ಮತ್ತೆ ಪಂಗಸ್ ಇಂದ ರಕ್ಷಣೆ ಕೊಡುತ್ತದೆ. ಇದು ಮುಖದಲ್ಲಿ ಮೊಡವೆ ತರುವ ಬ್ಯಾಕ್ಟೀರಿಯಾ ದ ವಿರುದ್ಧ ಹೋರಾಡುತ್ತದೆ. ಮತ್ತೆ ಸ್ಕಿನ್ ಗೆ ಹಾಗುವ ಇನ್ಫೆಕ್ಷನ್ ಕಡಿಮೆ ಮಾಡುತ್ತದೆ.
ಬೇವಿನ ಎಲೆಗಳನ್ನು ಚನ್ನಾಗಿ ನೀರಿನೊಂದಿಗೆ ಕಲಸಿಕೊಂಡು ಮುಖಕ್ಕೆ ಪ್ಯಾಕ್ ರೀತಿಯಲ್ಲಿ ಹಚ್ಚಿ ೧೫-೨೦ ನಿಮಿಷ ಬಿಟ್ಟು ನಂತರ ತೊಳೆಯುವುದರಿಂದ ಚರ್ಮದ ಕಾಂತಿ Glowing Skin ಜಾಸ್ತಿಯಾಗುತ್ತದೆ.

9. ಸಾಕಷ್ಟು ನೀರು ಕುಡಿಯಬೇಕು :
ದಿನಕ್ಕೆ ಕನಿಷ್ಠ ೩-೪ ಲೀಟರ್ ನೀರನ್ನು ಸ್ವಲ್ಪ ಸ್ವಲ್ಪವೇ ಕುಡಿಯಬೇಕು ದೇಹಕ್ಕೆ ಎಷ್ಟು ನೀರು ಕುಡಿಯುತ್ತಿರೋ ಚರ್ಮ ಅಷ್ಟು ಗ್ಲೋ ಆಗುತ್ತದೆ. ದೇಹ ಡಿಹೈಡ್ರೇಷನ್ ಆಗುವುದರಿಂದ ಚರ್ಮ ಸುಕ್ಕುಗಟ್ಟುತ್ತದೆ, ಜಾಸ್ತಿ ವಯಸ್ಸಾದಂತೆ ಕಾಣುತ್ತದೆ, ಆದ್ದರಿಂದ ನೀರು ಜಾಸ್ತಿ ಕುಡಿಯಬೇಕು.

10. ಸರಿಯಾದ ನಿದ್ದೆ ಮಾಡುವುದು :
ದಿನಕ್ಕೆ ಒಬ್ಬ ಮನುಷ್ಯ ಕನಿಷ್ಠ 7-8 ಗಂಟೆ ನಿದ್ದೆ ಮಾಡಲೇಬೇಕು. ಆಗ ಮಾತ್ರ ಅವನ ದೇಹ ಆರೋಗ್ಯವಾಗಿರುತ್ತದೆ. ಇಲ್ಲವಾದರೆ ಚರ್ಮ ವಯಸ್ಸಾದಂತೆ ಸುಕ್ಕುಗಟ್ಟುತ್ತದೆ, ಕಣ್ಣಿನ ಸುತ್ತ ಕಪ್ಪು ಕಲೆಗಳಾಗುತ್ತವೆ. ದೇಹವು ಕೊಲಾಜಿನ್ ಎಂಬ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಇದು ನಾವು ಬೆಳಿಗ್ಗೆಯಿಂದ ಸಂಜೆಯವರಿಗೆ ಚರ್ಮಕ್ಕೆ ಮಾಲಿನ್ಯ, ಮತ್ತೆ ಧೂಳು, ಸೂರ್ಯನ ಶಾಖದಿಂದ ಏನೆಲ್ಲಾ ಡ್ಯಾಮೇಜ್ ಆಗಿದೆ ಅದು ರಾತ್ರಿ ನಾವು ಮಲಗಿರುವಾಗ ರಿಪೇರ್ ಆಗಿ ಚರ್ಮದ ಕಾಂತಿ ಹೆಚ್ಚುತ್ತದೆ.

Leave a Comment

Your email address will not be published. Required fields are marked *

Scroll to Top