ನೆಗಡಿ ಮತ್ತೆ ಕೆಮ್ಮು (cold and cough) ಇದು ಪ್ರತಿಯೊಬ್ಬರಲ್ಲೂ ಸಾಮಾನ್ಯವಾಗಿ ಕಾಣುವ ಆರೋಗ್ಯ ಸಮಸ್ಯೆ. ಯಾಕೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಬಾರಿ ಇದು ಬರುತ್ತದೆ. ಅಂದರೆ, ಹವಾಮಾನ ಬದಲಾವಣೆ, ನಮ್ಮ ದೇಹದಲ್ಲಿ ರೋಗನಿರೋಧಕಶಕ್ತಿ (ಆಂಟಿ ಬಾಡೀಸ್ ) ಕಡಿಮೆಯಾಗುವುದು, ಅಥವಾ ಕೆಲವು ವೈರಸ್ ಮತ್ತೆ ಬ್ಯಾಕ್ಟೀರಿಯಾ ಸೋಂಕುಗಳಿಂದ ಇವು ಬರುತ್ತವೆ.
ತುಂಬಾ ಸರಿ ಇದು ಸಾಮಾನ್ಯವಾಗಿ ಒಂದೆರಡು ದಿನ ಇದ್ದು ಒರಟುಹೋಗುತ್ತದೆ. ಆದರೆ ಕೆಲವೊಮ್ಮೆ ಒಂದು ವಾರ ಆದರೂ ಹೋಗುವುದಿಲ್ಲ, ತುಂಬಾ ಜನ ಇದನ್ನ ಸಣ್ಣ ಸಮಸ್ಯೆ ಅಂತ ತಿರಸ್ಕಾರ ಮಾಡುತ್ತಾರೆ, ಆದರೆ ನಾವು ಸರಿಯಾಗಿ ಚಿಕಿತ್ಸೆ ತಗೊಂಡಿಲ್ಲ ಅಂದರೆ ಇದು ಜಾಸ್ತಿ ಆಗಿ ದೇಹಕ್ಕೆ ತುಂಬಾ ತೊಂದರೆ ಕೊಡುತ್ತದೆ.
ಇವುಗಳ ಜೊತೆಗೆ ಕೆಲವರಲ್ಲಿ ಈ ನೆಗಡಿ ಜಾಸ್ತಿಯಾದಾಗ ದೇಹ ಏನೋ ಒಂತರ ಬಳಲುವ ರೀತಿ ನೋವು, ಅಥವಾ ಹೇಳಿಕೊಳ್ಳಲಾಗದ ತಲೆನೋವು, ತುಂಬಾ ಸುಸ್ತಿನ ರೀತಿ ಅನುಭವ, ಮತ್ತೆ ದೌರ್ಬಲ್ಯ ಈ ರೀತಿ ಸಮಸ್ಯೆಯನ್ನು ಎದುರಿಸಬಹುದು. ಇದು ಯಾಕಾಗುತ್ತದೆ ಅಂದರೆ ನಮಗೆ ಯಾವುದೇ ಒಂದು ಕಾಯಿಲೆ ಬಂದಿದೆ ಅಂದರೆ ನಮ್ಮ ದೇಹದಲ್ಲಿರುವ ಇಮ್ಮ್ಯೂನ್ ಸಿಸ್ಟಮ್ ಅಂದರೆ ರೋಗನಿರೋಧಕ ವ್ಯೆವಸ್ತೆ ಆ ರೋಗದ ವಿರುದ್ಧ ಫೈಟ್ ಮಾಡಲು ಶುರು ಮಾಡಿರುತ್ತದೆ. ಕಾಯಿಲೆಯ ಜೊತೆ ತುಂಬಾ ಹೋರಾಡಿ ಧಣಿವಾದಾಗ ನಮ್ಮ ದೇಹಕ್ಕೆ ಸುಸ್ತು ಆಗುತ್ತದೆ.
ನಾವು ಈ ಲೇಖನದಲ್ಲಿ ನೆಗಡಿ ಮತ್ತೆ ಕೆಮ್ಮಿನ ಬಗ್ಗೆ ಕಂಪ್ಲೀಟ್ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
Table of Contents
Toggleನೆಗಡಿ ಮತ್ತೆ ಕೆಮ್ಮು ಅಂದರೆ ಏನು? ನೋಡೋಣ.
ನೆಗಡಿ (cold) ಇದು ಸಾಮಾನ್ಯವಾಗಿ ಮೂಗಿನಲ್ಲಿ ಲಿಕ್ವಿಡ್ ರೀತಿ ಸಿಂಬಳ ಹರಿಯುವುದು, ಗಂಟಲಿನಲ್ಲಿ ನಸ ನಸ ಎಂದು ನೋಯುವುದು, ತಲೆಯಲ್ಲ ಬಾರವಾದ ರೀತಿ ಅನಿಸುವುದು, ಇನ್ನೂ ಹಲವಾರು ಲಕ್ಷಣಗಳು ಇರುವ ವೈರಲ್ ಸೋಂಕು. ಇನ್ನು ಕೆಮ್ಮು (Cough) ಇದು ನಮ್ಮ ದೇಹದ ಶ್ವಾಸಕೋಶಗಳಲ್ಲಿ ಇರುವ ಸೂಕ್ಷ್ಮಜೀವಿಗಳಿಂದ ಉದ್ರೇಕವಾಗುವ ಕೆಟ್ಟ ವಸ್ತುಗಳನ್ನು ಬಾಯಿಯ ಮೂಲಕ ಹೊರಹಾಕುವ ಪ್ರಕ್ರಿಯೆಯಾಗಿದ್ದು, ಮುಖ್ಯವಾಗಿ ವೈರಲ್ ಸೋಂಕು, ಅಲರ್ಜಿಯಿಂದ ಬರುತ್ತದೆ ಮತ್ತೆ ಇದು ಜಾಸ್ತಿ ಆದಾಗ ಅಸ್ತಮಾದಂತ ಕಾಯಿಲೆಗೆ ದಾರಿ ಮಾಡಿಕೊಡುತ್ತದೆ.
ಕೆಮ್ಮು ಮತ್ತು ನೆಗಡಿಯ ಲಕ್ಷಣಗಳು ಯಾವ ರೀತಿ ಇರುತ್ತವೆ?
ನೆಗಡಿ ಮತ್ತೆ ಕೆಮ್ಮು ಬಂದಾಗ ಕೆಲವೊಂದು ಲಕ್ಷಣಗಳು ನಮ್ಮ ದೇಹದಲ್ಲಿ ಕಂಡುಬರುತ್ತವೆ ಅವೆಂದರೆ :
- ಮೂಗು ಸಿಕ್ಕಾಪಟ್ಟೆ ಉರಿಯುವುದು.
- ಮೂಗು ಉಸಿರಾಡಲು ಆಗದೆ ಮೊಚ್ಚಿಕೊಳ್ಳುವುದು.
- ಗಂಟಲು ನೋವು ಬರುವುದು
- ಕೆಲವೊಮ್ಮೆ ಒಣಕೆಮ್ಮು ಮತ್ತೆ ಕೆಲವೊಮ್ಮೆ ಕಫದೊಂದಿಗೆ ಕೆಮ್ಮು
- ತಲೆ ಬಾರ ನೋಯುವುದು.
- ದೇಹ ತುಂಬಾ ಸುಸ್ತು ಅನಿಸುವುದು.
- ಕೆಲವೊಮ್ಮೆ ಮೈಯಲ್ಲ ತುಂಬಾ ಬಿಸಿಯಾಗಿ ಜ್ವರ ಬರುವುದು.
- ಕಣ್ಣಿನಲ್ಲಿ ಕೆಲವೊಮ್ಮೆ ನೀರು ಬರುವುದು.
- ಅಕ್ಷಿ ಅಕ್ಷಿ ಅಂತ ಸೀನುವುದು.
ಇವೆಲ್ಲಾ ಸಾಮಾನ್ಯವಾಗಿ ನೆಗಡಿ ಮತ್ತೆ ಕೆಮ್ಮು ಬಂದಾಗ ಬರುವ ಲಕ್ಷಣಗಳಾಗಿವೆ. ಇವು ಹೆಚ್ಚು ದಿನಗಳವರಿಗೆ ಅದೇ ರೀತಿ ಇದ್ದರೆ ಹತ್ತಿರದ ಆಸ್ಪತ್ರೆಗೆ (ಪ್ರಾಥಮಿಕ ಆರೋಗ್ಯ ಕೇಂದ್ರ) ಹೋಗಿ ಡಾಕ್ಟರ್ ಬಳಿ ತೋರಿಸಬೇಕು, ಒಂದು ವೇಳೆ ಒಂದೆರಡು ದಿನ ಇದ್ದರೆ ನಾನು ಕೆಳಗೆ ತಿಳಿಸುವ ಮನೆ ಮದ್ದುಗಳನ್ನು ಬಳಸಿ ಗುಣಪಡಿಸಿಕೊಳ್ಳಬಹುದು.
ಇದನ್ನೂ ಓದಿ : ಕೆಮ್ಮು ಮತ್ತು ಗಂಟಲು ನೋವು ನಿವಾರಣೆಗೆ 10 ಮನೆ ಮದ್ದುಗಳು.
ನೆಗಡಿ ಮತ್ತೆ ಕೆಮ್ಮು ಬರಲು ಕಾರಣಗಳನ್ನ ತಿಳಿಯೋಣ.
- ಹಲವಾರು ಕಾರಣದಿಂದ ದೇಹಕ್ಕೆ ವೈರಸ್ ಸೋಂಕು ತಗುಲಿದಾಗ ನೆಗಡಿ ಮತ್ತು ಕೆಮ್ಮು ಬರುತ್ತದೆ
- ಹವಾಮಾನ ಬದಲಾವಣೆಯಾದಾಗ ವಾತಾವರಣದಲ್ಲಿನ ಮಾಲಿನ್ಯ ಮತ್ತು ಧೂಳನ್ನು ಸೇವಿಸಿದಾಗ ನೆಗಡಿ ಮತ್ತು ಕೆಮ್ಮು ಬರುತ್ತದೆ.
- ದೇಹದಲ್ಲಿ ಹ್ಯೂಮಿನಿಟಿ ಶಕ್ತಿ ಕಡಿಮೆ ಆದಾಗ ನೆಗಡಿ ಮತ್ತು ಕೆಮ್ಮು ಹೆಚ್ಚಾಗುತ್ತದೆ.
- ಫ್ರಿಡ್ಜ್ ನಲ್ಲಿ ಇಟ್ಟಂತಹ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ನೆಗಡಿ ಮತ್ತು ಕೆಮ್ಮು ಹೆಚ್ಚಾಗುತ್ತದೆ.
- ಕೆಲವರಿಗೆ ತೇವ ವಾತಾವರಣದಲ್ಲಿ ಹೆಚ್ಚಾಗಿ ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಅಂತಹವರಿಗೆ ಬೇಗ ಶೀತ ಮತ್ತು ಕೆಮ್ಮು ಬರುತ್ತದೆ.
ಶೀತ ಮತ್ತೆ ಕೆಮ್ಮು ಮುಖ್ಯವಾಗಿ ಇದೊಂದು ವೈರಸ್ ಸೋಂಕಾಗಿದ್ದು, ಇದು ರೈನೋವೈರಸ್(Rhinovirus) ಎಂಬಂತಹ ವೈರಸ್ ನಿಂದ ಹರಡುತ್ತದೆ. ಈ ವೈರಸ್ ಸೋಂಕಿತ ವ್ಯೆಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಅಲ್ಲಿ ಪಕ್ಕದಲ್ಲಿರುವ ಹಲವರಿಗೆ ಹರಡುತ್ತದೆ.
ರೈನೊವೈರಸ್ ಇದು ಸಾಮಾನ್ಯವಾಗಿ ವೈರಲ್ ಕಾಯಿಲೆಯನ್ನು ತರುವಂತ ಅಂಶವಾಗಿದ್ದು, ನೆಗಡಿಗೆ ಮುಖ್ಯ ಕಾರಣವಾಗಿದೆ. ನಮ್ಮ ದೇಹದಲ್ಲಿ ಶೀತದಿಂದ ಬರುವ ಸೋಂಕಿಗೆ ಕನಿಷ್ಠ ಅಂದರೂ 50% ಕಾರಣ ಇದೆ ವೈರಸ್ ಆಗಿರುತ್ತದೆ.
ಇನ್ನೂ ಕೆಲವೊಂದು ಕಾರಣಗಳನ್ನ ನೋಡೋದಾದರೆ ;
- ಅಲರ್ಜಿಗಳಿಂದ : ಅಂದರೆ ಈ ಹೂವಿನ ರೇಣುವಿನ ವಾಸನೆ, ಕೆಲವೊಂದು ಸಾಕು ಪ್ರಾಣಿಗಳ ಕೂದಲಿನಿಂದ, ಗಾಳಿಯಲ್ಲಿನ ಕಣ್ಣಿಗೆ ಕಾಣದ ಕ್ರಿಮಿ ಕೀಟಗಳಿಂದ ಅಲರ್ಜಿ ಉಂಟಾಗಿ ಕೆಮ್ಮು ಮತ್ತೆ ನೆಗಡಿ ತುಂಬಾ ದಿನ ಉಳಿಯುತ್ತದೆ.
- ಸ್ಮೋಕಿಂಗ್ : ಕೆಲವರಿಗೆ ಸ್ಮೋಕಿಂಗ್ ಮಾಡುವ ಅಭ್ಯಾಸವಿರುತ್ತದೆ ಅಂತಹವರಲ್ಲಿ ಶ್ವಾಸಕೋಶಗಳು ಸರಿಯಾಗಿ ಕೆಲಸಮಾಡದೆ, ಉಸಿರಾಟದ ತೊಂದರೆ ಬರುತ್ತದೆ. ಆಗ ಕೆಮ್ಮು ಜಾಸ್ತಿಯಾಗಿ ಲಂಗ್ಸ್ ಗೆ ತೊಂದರೆಯಾಗುತ್ತದೆ.
- ಹೈಜೀನ್ ಇಲ್ಲದಿರುವುದು : ತುಂಬಾಜನರು ತಮ್ಮನ್ನು ತಾವು ಸ್ವಚ್ಛವಾಗಿರಿಸಿಕೊಳ್ಳಲು ಕಷ್ಟ ಪಡುತ್ತಾರೆ. ಅಂತಹವರಲ್ಲಿ ಬ್ಯಾಕ್ಟೇರಿಯ ಮತ್ತೆ ವೈರಸ್ ಜಾಸ್ತಿಯಾಗಿ ಕೆಮ್ಮು ನೆಗಡಿ ಬರುತ್ತದೆ.
- ಸೈನಸ್ ಮತ್ತೆ ಬ್ರಾಂಕೈಟೀಸ್ : ಇದು ದೀರ್ಘಕಾಲ ಇದ್ದರೆ ಇದರಿಂದ ಕೆಮ್ಮು ಜಾಸ್ತಿಯಾಗುವ ಸಾಧ್ಯತೆ ಇರುತ್ತದೆ.
ಭಾರತದಲ್ಲಿ ಕೆಮ್ಮು ಮತ್ತೆ ನೆಗಡಿ ಕುರಿತು ಕೆಲವೊಂದು ಅಂಕಿ ಅಂಶ
ನಮ್ಮ ದೇಶದಲ್ಲಿ ನೆಗಡಿ, ಕೆಮ್ಮು ಎನ್ನುವುದು ಅತ್ಯಂತ ಸಾಮಾನ್ಯ ಅರೋಗ್ಯ ಸಮಸ್ಯೆಯಾಗಿದೆ. ಪ್ರತೀ ವರ್ಷ ಲಕ್ಷಾಂತರ ಜನರು ಈ ಸಮಸ್ಯೆಯಿಂದ ನರಳುತ್ತಾರೆ. ಅದರಲ್ಲೂ ವಿಶೇಷವಾಗಿ ಈ ಮಳೆಗಾಲ ಮತ್ತೆ ಚಳಿಗಾಲದಲ್ಲಿ ಇದು ಜಾಸ್ತಿಯಾಗುತ್ತದೆ.
- ಕೆಲವೊಂದು ವರದಿಗಳ ಪ್ರಕಾರ ನಮ್ಮ ದೇಶದಲ್ಲಿ ಒಬ್ಬ ವ್ಯೆಕ್ತಿಗೆ ಕನಿಷ್ಠ ವರ್ಷದಲ್ಲಿ 2-4 ಬಾರಿ ಈ ಶೀತ, ಮತ್ತೆ ಕೆಮ್ಮು ಬರುತ್ತದೆ.
- ಚಿಕ್ಕ ಮಕ್ಕಳಲ್ಲಿ ಇದರ ಸಂಖ್ಯೆ ಇನ್ನು ಜಾಸ್ತಿ ಅವರಿಗೆ ವರ್ಷಕ್ಕೆ ಕನಿಷ್ಠ ಅಂದರೂ 5-8 ಬಾರಿ ಇದು ಬರಬಹುದು.
- ಹಳ್ಳಿಗಳಲ್ಲಿ ಹೈಜೀನ್ ಸರಿಯಾಗಿ ಇಲ್ಲದೆ ಬಂದರೆ, ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯ, ಧೂಳು ಇತರೆ ಕಾರಣಗಳಿಂದ ಕೆಮ್ಮು ಜಾಸ್ತಿಯಾಗುತ್ತದೆ.
ಈ ಸಮಸ್ಯೆ ಮೇಲ್ನೋಟಕ್ಕೆ ಸಾಮಾನ್ಯವಾಗಿ ಕಂಡರೂ, ಸರಿಯಾಗಿ ಜಾಗ್ರತೆ ಮಾಡದಿದ್ದರೆ ಸೈನಸ್, ಬ್ರಾಂಕೈಟೀಸ್, ಎನ್ನುವ ಗಂಭೀರ ಉಸಿರಾಟದ ಕಾಯಿಲೆಗಳಿಗೆ ತುತ್ತಾಗುತ್ತಾರೆ.
ನೆಗಡಿ ಮತ್ತೆ ಕೆಮ್ಮು ಇದಕ್ಕೆ ಮನೆಯಲ್ಲಿ ತಯಾರಿಸಿದ 10 ನೈಸರ್ಗಿಕ ಮದ್ದುಗಳು.
1. ಬಿಸಿನೀರಿನ ಆವಿ :
ನೀರನ್ನು ಚನ್ನಾಗಿ ಬಿಸಿ ಮಾಡಿ ಅದರಿಂದ ಬರುವ ಆವಿಯನ್ನು ದಿನಕ್ಕೆ 2-3 ಬಾರಿ ತೆಗೆದುಕೊಳ್ಳುವುದರಿಂದ, ಮೂಗಿನ ದ್ವಾರ ಬಂದ್ ಆಗಿರುವುದು ತೆರೆದುಕೊಂಡು ಸರಿಯಾಗಿ ಉಸಿರಾಡುವುದಕ್ಕೆ ಆಗುತ್ತದೆ. ಮತ್ತು ಶ್ವಾಸಕೋಶಗಳು ಶುದ್ದೀಕರಣವಾಗಿ ನೆಗಡಿ ಬೇಗ ವಾಸಿಯಾಗುತ್ತದೆ.
2. ಬಿಸಿನೀರಿಗೆ ಜೇನುತುಪ್ಪ ಮಿಶ್ರಣ :
ನೀರನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಜೇನುತುಪ್ಪ ಬೆರಸಿ ಬೆಳಗ್ಗಿನ ಸಮಯ ಕುಡಿಯುವುದರಿಂದ ಗಂಟಲಿನ ನೋವು ಕಡಿಮೆಯಾಗುತ್ತದೆ, ಮತ್ತು ಕಫ ಕಡಿಮೆಯಾಗುತ್ತದೆ ಯಾಕೆಂದರೆ ಜೇನಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು, ಇದು ದೇಹದಲ್ಲಿರುವ ಬ್ಯಾಕ್ಟೀರಿಯಾವನ್ನು ದೂರಮಾಡುತ್ತದೆ.
3. ಶುಂಠಿ ಟೀ ಕುಡಿಯುವುದು :
ತುಂಬಾ ಜಾಸ್ತಿ ಕಫ, ನೆಗಡಿ ಇರುವ ಸಮಯದಲ್ಲಿ ಶುಂಠಿ ಟೀ ಕುಡಿಯುವುದರಿಂದ ಗಂಟಲು ಉರಿಯುವುದು ಕಡಿಮೆಯಾಗುತ್ತದೆ. ಮತ್ತು ಕಫ ಕಡಿಮೆಯಾಗುತ್ತದೆ.
4. ಹಾಲಿಗೆ ಅರಿಶಿಣ ಮಿಶ್ರಣ :
ನಾವು ರಾತ್ರಿ ಮಲಗುವ ಮುಂಚೆ ಹಾಲಿಗೆ ಅರಿಶಿನ ಮಿಕ್ಸ್ ಮಾಡಿ ಕುಡಿಯುವುದರಿಂದ ಅರಿಶಿಣದಲ್ಲಿರುವ ರೋಗನಿರೋಧಕ ಶಕ್ತಿಯಿಂದ ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾ ಮತ್ತೆ ವೈರಸ್ ವಿರುದ್ಧ ಹೋರಾಡಿ ದೇಹಕ್ಕೆ ಶಕ್ತಿ ತರುತ್ತದೆ.
5. ಉಪ್ಪು ನೀರಿನ ಗಾರ್ಗ್ಲಿಂಗ್ :
ಬೆಳಿಗ್ಗೆ ಎದ್ದ ತಕ್ಷಣ ಉಪ್ಪು ನೀರಿನ ಮಿಶ್ರಣವನ್ನು ಬಾಯಿಗೆ ಹಾಕಿ ಗಾರ್ಗ್ಲಿಂಗ್ ಅಥವಾ ಮುಕ್ಕಳಿಸುವುದರಿಂದ ಗಂಟಲಿನಲ್ಲಿರುವ ಸೋಂಕು ಕಡಿಮೆಯಾಗಿ ಕೆಮ್ಮು ಕಡಿಮೆಯಾಗುತ್ತದೆ.
6. ಬಿಸಿ ನೀರು ಕುಡಿಯುವುದು :
ನೀರನ್ನು ಕುದಿಸಿ ಆರಿಸಿ ಕುಡಿಯಬೇಕು, ಅಂದರೆ ಒಂದು ಬಾರಿ ಕಾಯಿಸಿದ ನೀರನ್ನು ಮತ್ತೆ ಮತ್ತೆ ಕಾಯಿಸಬಾರದು. ನೀರನ್ನು ಕಾಯಿಸಿ ಆರಿಸಿ ಕುಡಿಯುವುದರಿಂದ ಅದರಲ್ಲಿರುವ ಬೇಡವಾದ ಬ್ಯಾಕ್ಟೀರಿಯಾ ನಾಶವಾಗಿ ದೇಹಕ್ಕೆ ರೋಗನಿರೋಧಕ ಶಕ್ತಿ ಬರಲು ಸಹಾಯ ಮಾಡುತ್ತದೆ.
7. ತುಳಸಿ ಕಷಾಯ ಕುಡಿಯುವುದು :
ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಅದರಲ್ಲಿರುವ ರೋಗನಿರೋಧಕ ಶಕ್ತಿ ದೇಹಕ್ಕೆ ಬಂದು ಕೆಮ್ಮು ಮತ್ತೆ ನೆಗಡಿಯನ್ನು ದೂರಮಾಡುತ್ತದೆ.
8. ನೀರಿನ ಪಧಾರ್ಥಗಳ ಸೇವನೆ :
ಬಿಸಿನೀರು, ತರಕಾರಿ ಸೂಪ್, ಗಿಡಮೂಲಿಕೆಗಳ ಟೀ, ಈ ರೀತಿ ಲಿಕ್ವಿಡ್ ಅಂಶ ಸೇವಿಸುತ್ತಿರುವುದರಿಂದ ದೇಹ ಹೈಡ್ರೇಟ್ ಆಗಿದ್ದು ಒಣಕೆಮ್ಮು, ನೆಗಡಿ ದೂರವಾಗುತ್ತದೆ.
9. ಲವಂಗ ರಸ :
ಕೆಲವೊಮ್ಮೆ ಕೆಮ್ಮು ಬೆಳಗ್ಗಿನ ಜಾವಾ ಇಲ್ಲದೆ ರಾತ್ರಿ ಜಾಸ್ತಿಯಾಗುತ್ತದೆ, ಆದ್ದರಿಂದ ರಾತ್ರಿ ಮಲಗುವಾಗ ಎರಡು ಲವಂಗ ಬಾಯಲ್ಲಿ ಇಟ್ಟುಕೊಂಡು ಮಲಗುವುದರಿಂದ ಅದರ ರಸ ಗಂಟಲಿಗೆ ನೇರವಾಗಿ ಹೋಗಿ ಅಲ್ಲಿರುವ ಬ್ಯಾಕ್ಟೀರಿಯಾವನ್ನು ನಾಶಮಾಡುತ್ತದೆ.
10. ಕಪ್ಪು ಮೆಣಸು ಬೆಳ್ಳುಳ್ಳಿ :
ಕಪ್ಪು ಮೆಣಸು ಮತ್ತು ಬೆಳ್ಳುಳ್ಳಿಯನ್ನು ಚನ್ನಾಗಿ ಜಜ್ಜಿ, ಅದನ್ನು ನೀರಿನಲ್ಲಿ ಕಾಯಿಸಿ ವೆಲ್ಪ ಕಷಾಯದ ರೀತಿ ಮಾಡಿ ಕುಡಿಯುವುದರಿಂದ ಬೇಗ ನೆಗಡಿ ಮತ್ತು ಕೆಮ್ಮು ವಾಸಿಯಾಗುತ್ತದೆ.
ನಾನು ಮೇಲೆ ತಿಳಿಸಿರುವ ಈ 10 ಮನೆ ಮದ್ದುಗಳನ್ನು ನೆಗಡಿ ಮತ್ತೆ ಕೆಮ್ಮು ಬಂದಾಗ ನೀವು ಯೋಚನೆ ಇಲ್ಲದೆ ಬಾಲಸಬಹುದು ಇದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
