ನಾವು ಎಂತಹ ಜೀವನ ಶೈಲಿ ನಡೆಸುತ್ತಿದ್ದೇವೆ ಎಂದರೆ, ನಮ್ಮ ದೇಹದ ಆರೋಗ್ಯದ ಬಗ್ಗೆ ಅಷ್ಟೇ ಗಮನ ಕೊಡುತ್ತೇವೆಯೇ ಒರೆತು ಮಾನಸಿಕ ಆರೋಗ್ಯಕ್ಕೆ ಸ್ವಲ್ಪವೂ ಗಮನ ಕೊಡುತ್ತಿಲ್ಲ. ನಮ್ಮ ಜನಕ್ಕೆ ಗೊತ್ತಿಲ್ಲದ ವಿಷಯ ಏನೆಂದರೆ ನಾವು ಮಾನಸಿಕ ಆರೋಗ್ಯಕ್ಕೆ ಗಮನ ಕೊಡದೆ ಹೋದರೆ ಯಾವ ವಿಷಯದಲ್ಲೂ ನಮ್ಮ ಮನಸ್ಸು ಸ್ಥಿರವಾಗಿರುವುದಿಲ್ಲ. ನಾವು ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನ ಸಾಧಿಸಬೇಕಾದರೆ ಮೊದಲು ನಮ್ಮ ಮಾನಸಿಕ ಆರೋಗ್ಯ ಚನ್ನಾಗಿರಬೇಕು.
ಡಿಪ್ರೆಶನ್ ಎಂದರೆ ಕೇವಲ ದುಃಖ ಅಥವಾ ನೋವಲ್ಲ, ಬದಲಿಗೆ ಅದು ವ್ಯೆಕ್ತಿಯ ಚಿಂತನೆ, ಅವರ ಭಾವನೆ, ಮತ್ತು ತನ್ನ ಜೀವನದ ಮೇಲೆ ಪರಿಣಾಮ ಬೀರುವ ಗಂಭೀರ ಸ್ಥಿತಿ.
Table of Contents
Toggleಡಿಪ್ರೆಶನ್ ಅಂದರೆ ಏನು ?
ಇದೊಂದು ಮಾನಸಿಕ ಆರೋಗ್ಯ ಸಮಸ್ಯೆ. ಹಾಗೆಯೆ ಅತಿ ಹೆಚ್ಚು ಕಾಲ ಇರುವ ದುಃಖ, ಯಾವುದರಲ್ಲಿಯೂ ಆಸಕ್ತಿ ಇಲ್ಲದಿರುವುದು, ಪ್ರತಿದಿನ ಮಾಡುವ ಕೆಲಸವನ್ನು ಮಾಡದ ಸ್ಥಿತಿ. ಇದೇ ರೀತಿ ಕನಿಷ್ಠ 2 ವಾರಕ್ಕಿಂತ ಜಾಸ್ತಿ ದಿನ ಇದ್ದಾಗ ಅಂತಹ ಸ್ಥಿತಿಯನ್ನ ನಾವು ಡಿಪ್ರೆಶನ್ ಅಂತ ಕರೆಯುತ್ತೇವೆ.
ಇದು ಕೇವಲ ಮನಸ್ಸಿನ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ ಬದಲಿಗೆ ನಮ್ಮ ದೇಹದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ. ಕೆಲವೊಂದು ಸಾರಿ ಇದು ಅತ್ಯಂತ ಗಂಭೀರ ಸ್ಥಿತಿಗೆ ಹೋಗಿ ಜನರು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ನಮ್ಮ ದೇಶದಲ್ಲಿ ಡಿಪ್ರೆಶನ್ ಯಾವ ರೀತಿ ಇದೆ.
ನಮ್ಮ ದೇಶದಲ್ಲಿ ಡಿಪ್ರೆಶನ್ ಎನ್ನುವುದು ಮೇಲ್ನೋಟಕ್ಕೆ ಅಷ್ಟೊಂದು ಕಂಡು ಬರುವುದಿಲ್ಲವಾದರೂ, ಇದೊಂದು ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ.
- ಭಾರತದಲ್ಲಿ ಪ್ರತೀ 20 ಜನರಲ್ಲಿ ಒಬ್ಬರಿಗೆ ಈ ಡಿಪ್ರೆಶನ್ ಕಾಯಿಲೆ ಇದೆ.
- ಸುಮಾರು 15% ಜನ ಮಾಧ್ಯಮ ವಯಸ್ಕರಿಗೆ ಮಾನಸಿಕ ಆರೋಗ್ಯದ ಸಹಾಯ ಅಗತ್ಯವಿದೆ.
- ಸುಮಾರು 60% ಮಾನಸಿಕ ರೋಗಗಳು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಂಡುಬರುತ್ತವೆ.
- ನಮ್ಮ ದೇಶದಲ್ಲಿ ಸುಮಾರು 80% ಕಿಂತ ಜಾಸ್ತಿ ಜನರು ಈ ಡಿಪ್ರೆಶನ್ ಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆಯುವುದಿಲ್ಲ.
- ನಮ್ಮ ದೇಶದಲ್ಲಿ ಸಾಮಾನ್ಯ ಜನಕ್ಕಿಂತ ಡಿಪ್ರೆಶನ್ ಇರುವ ಜನ ಸಾಯುವುದು 1.5 ಪಟ್ಟು ಜಾಸ್ತಿ. ಏಕೆಂದರೆ ಅವರಿಗೆ ಕಾಯಿಲೆ ಇರುವುದು ತಿಳಿಯುವುದಿಲ್ಲ. ಮತ್ತೆ ಇದ್ದರು ಅದಕ್ಕೆ ಚಿಕಿತ್ಸೆ ಪಡೆಯುವುದಿಲ್ಲ.
ಈ ಅಂಕಿ ಅಂಶಗಳು ನಮ್ಮ ದೇಶದಲ್ಲಿ ಡಿಪ್ರೆಶನ್ ಎಷ್ಟರ ಮಟ್ಟಿಗೆ ಇದೆ ಮತ್ತೆ ಅದಕ್ಕೆ ಯಾವ ರೀತಿ ಚಿಕಿತ್ಸೆ ಅವಶ್ಯಕತೆ ಇದೆ ಎಂದು ತಿಳಿಸುತ್ತವೆ.
ಡಿಪ್ರೆಶನ್ ಇರುವ ವ್ಯೆಕ್ತಿಯ ಲಕ್ಷಣಗಳು (Symptoms of depression)
ಸಾಮಾನ್ಯವಾಗಿ ಡಿಪ್ರೆಶನ್ ಎಲ್ಲರಲ್ಲೂ ಒಂದೇ ರೀತಿ ಇರುವುದಿಲ್ಲ, ಆದರೆ ಕೆಲವೊಂದು ಲಕ್ಷಣಗಳು ಈ ರೀತಿ ಇರುತ್ತವೆ :
- ಯಾವಾಗಲೂ ದುಃಖ, ಏನೋ ಕಳೆದುಕೊಂಡ ಭಾವನೆ.
- ಈ ಹಿಂದೆ ಇಷ್ಟ ಪಟ್ಟು ಮಾಡುತ್ತಿದ್ದ ಯಾವುದೇ ವಿಷಯದಲ್ಲಿ ಆಸಕ್ತಿ ಇಲ್ಲದಿರುವುದು.
- ನಿದ್ದೆ ಸರಿಯಾಗಿ ಮಾಡದಿರುವುದೇ, ಅಥವಾ ಕೆಲವರಿಗೆ ಹೆಚ್ಚು ನಿದ್ದೆ ಬರುವುದು.
- ತುಂಬಾ ಆಯಾಸ, ದಣಿವು, ನಿಶ್ಯಕ್ತಿ.
- ಆಹಾರದ ಅಭ್ಯಾಸದಲ್ಲಿ ಬದಲಾವಣೆ, ಊಟದ ಮೇಲೆ ಯಾವುದೇ ಆಸಕ್ತಿ ಇಲ್ಲದಿರುವುದು.
- ಯಾವುದೇ ವಿಷಯದ ಮೇಲೆ ಫೋಕಸ್ ಇಲ್ಲದಿರುವುದು.
- ತಮ್ಮ ವ್ಯಕ್ತಿತ್ವವನ್ನು ತಾವೇ ಬಯ್ಯುವುದು,( ನಾನು ಸರಿ ಇಲ್ಲ ಎನ್ನುವ ರೀತಿ).
- ಭವಿಷ್ಯದ ಬಗ್ಗೆ ನಿರಾಸಕ್ತಿ, ಜೀವನ ಬೇಡ ಎನಿಸುವುದು.
- ಆತ್ಮಹತ್ಯೆಯ ಯೋಚನೆ ಪದೇ ಪದೇ ಬರುವುದು.
- ಫ್ರೆಂಡ್ಸ್, ಫ್ಯಾಮಿಲಿ ನೆರೆಹೊರೆಯವರ ಅತ್ತಿರ ಮಾತನಾಡಲು ಇಷ್ಟ ಆಗದೆ ಇರುವುದು.
- ಜೀವನದಲ್ಲಿ ಏನೋ ಕಳೆದುಕೊಂಡ ಅನುಭವ.
ಈ ಎಲ್ಲಾ ಅಂಶಗಳು ಕೆಲವರಿಗೆ ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ದೀರ್ಘಕಾಲ ಇವು ರಿಪೀಟ್ ಆಗ್ತಾ ಇದ್ದವೇ ಅಂದರೆ ನೀವು ಖಂಡಿತ ಡಿಪ್ರೆಶನ್ ಗೆ ಒಳಪಟ್ಟಿದ್ದೀರಾ ಅಂತ ಅರ್ಥ.
ಈ ಡಿಪ್ರೆಶನ್ ಗೆ ಏನೇನೆಲ್ಲಾ ಕಾರಣಗಳು ನೋಡೋಣ.
ಡಿಪ್ರೆಶನ್ ಗೆ ಹಲವಾರು ಕಾರಣಗಳಿವೆ, ಅದರಲ್ಲಿ ಕೆಲವೊಂದು ಕಾರಣಗಳನ್ನ ನಾವಿಲ್ಲಿ ನೋಡೋಣ.
1. ಬಯೋಲಾಜಿಕಲ್ ಕಾರಣಗಳು :
- ನಮ್ಮ ಮೆದುಳಿನಲ್ಲಿನ ಕೆಲವೊಂದು ಕೆಮಿಕಲ್ ಅಂಶಗಳ ಅಸಮತೋಲನದಿಂದ.
2. ಮಾನಸಿಕ ಕಾರಣಗಳು :
- ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಇಲ್ಲದಿರುವುದು.
- ಸಾಂಸಾರಿಕವಾಗಿ ಅಥವಾ ಕೆಲಸದಿಂದ ಯಾವಾಗಲೂ ಒತ್ತಡ ಅನುಭವಿಸುತ್ತಿರುವುದು
- ಯಾವಾಗಲೂ ನಕಾರಾತ್ಮಕ ಚಿಂತನೆಗಳು, ನನ್ನ ಕೈಲಿ ಆಗುವುದಿಲ್ಲ, ಅದು ಸರಿಯಿಲ್ಲ, ಪ್ರಪಂಚವೇ ಸರಿಯಿಲ್ಲ, ಎಲ್ಲ ನನಗೆ ಕೆಟ್ಟದಾಗುತ್ತಿದೆ ಎನ್ನುವ ಆಲೋಚನೆಗಳು.
3. ಸಾಮಾಜಿಕ ಕಾರಣಗಳು :
- ಕುಟುಂಬದ ಸಮಸ್ಯೆಗಳು.
- ಆರ್ಥಿಕ ನಷ್ಟ ಹೊಂದುವುದು.
- ಕೆಲವು ಸಂಬಂಧಗಳಲ್ಲಿ ಕೆಟ್ಟ ಸಮಸ್ಯೆಗಳು ಉಂಟಾಗುವುದು.
- ಮಧ್ಯಪಾನ ಮತ್ತೆ ಧೂಮಪಾನ ಮಾದಕ ವಸ್ತುಗಳಿಗೆ ದಾಸರಾಗಿರುವುದು ಕೆಲವೊಮ್ಮೆ ಇವು ಸಿಗದಿದ್ದಾಗ ಹುಚ್ಚರಂತಾಗುವುದು.
- ವಾಸಿಯಾಗದಂತಹ ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳು
- ಮನೆಯಲ್ಲಿ ಯಾವುದಕ್ಕೂ ಬೆಂಬಲ ಸಪೋರ್ಟ್ ಇಲ್ಲದಿರುವುದು
ಈ ಎಲ್ಲ ಕಾರಣಗಳು ಒಂದಲ್ಲಾ ಒಂದು ರೀತಿ ಮಾನಸಿಕ ಆರೋಗ್ಯಕ್ಕೆ ನೇರ ಹೊಣೆಯಾಗುತ್ತವೆ.
ಇದನ್ನೂ ಓದಿ : How to Reduce Stress and Anxeity
ಮನುಷ್ಯನ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ.
ಮಾನಸಿಕ ಆರೋಗ್ಯ ಎನ್ನುವುದು ಮನುಷ್ಯನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ.
- ಕೆಲಸದಲ್ಲಿ ಆಸಕ್ತಿ ಕಡಿಮೆ ಇರುವುದರಿಂದ ಆರ್ಥಿಕವಾಗಿ ಇಂದುಳಿಯುತ್ತಾರೆ.
- ಕುಟುಂಬದ ಕಡೆ ಸರಿಯಾಗಿ ಗಮನ ನೀಡದೆ ಇರುವುದರಿಂದ ಕುಟುಂಬದಲ್ಲಿ ಹಲವಾರು ಸಮಸ್ಯೆಗಳು ಸಂಬಂಧಿಕರಿಂದ ದೂರವಾಗುವ ಪರಿಸ್ಥಿತಿ.
- ಏನೇ ಮಾಡಲು ಆತ್ಮ ವಿಶ್ವಾಸ ಇಲ್ಲದಿರುವುದರಿಂದ ಅದು ನನ್ನ ಕೈಲಿ ಆಗುವುದಿಲ್ಲ ಎಂಬ ಭಾವನೆ.
- ಸಾಮಾಜಿಕ ಪರಿಸರ ಅಥವಾ ಸೊಸೈಟಿಯಿಂದ ದೂರವಾಗುತ್ತಾರೆ.
- ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಮಕ್ಕಳ ಮೇಲೆ ಈ ಡಿಪ್ರೆಶನ್ ಪ್ರಭಾವ.
ನಾವು ಚಿಕ್ಕ ವಯಸ್ಸನವರಿದ್ದಾಗ ಈ ಡಿಪ್ರೆಶನ್ ಅನ್ನೋ ಪದ ಕೇಳಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಪ್ರಭಾವದಿಂದ ಮಕ್ಕಳಲ್ಲಿ ಇದು ಜಾಸ್ತಿಯಾಗಿರುವುದು ಆತಂಕವಾಗಿದೆ.
- ಮಾರ್ಕ್ಸ್ ಗಾಗಿ ಮಕ್ಕಳಲ್ಲಿ ಪೋಷಕರು ಮತ್ತು ಸ್ಕೂಲಿನಲ್ಲಿ ಶಿಕ್ಷಕರ ಒತ್ತಡ.
- ನಾವು ಸಣ್ಣ ವಯಸ್ಸಿನವರಾಗಿದ್ದಾಗ ನಮಗೆ ಇಷ್ಟೇ ಅಂಕ ತೆಗೆಯಬೇಕು, ಇದೆ ಸ್ಪೋರ್ಟ್ಸ್ ಆಡಬೇಕು ಎಂದು ಪೋಷಕರಿಂದ ಒತ್ತಡ ಇರಲಿಲ್ಲ ಆದರೆ ಇತ್ತೀಚಿನ ದಿನದಲ್ಲಿ ಅದು ಜಾಸ್ತಿ ಆಗಿದೆ.
- ಸಾಮಾಜಿಕ ಮಾಧ್ಯಮದ ಪ್ರಭಾವ ಜಾಸ್ತಿ ಆಗಿರುವುದರಿಂದ ಮಕ್ಕಳ ಮೇಲೆ ನೇರ ಪರಿಣಾಮ ಬೀರುತ್ತಿದೆ.
- ಮೊಬೈಲ್ ಬಳಕೆ ಯಾವ ರೀತಿ ಆಗಿದೆ ಎಂದರೆ ಒಂದು ಗಂಟೆ ಮೊಬೈಲ್ ನೋಡದೆ ಇದ್ದರೆ ಏನೂ ಕಳೆದುಕೊಂಡ ಅನುಭವ.
ಇದೆಲ್ಲ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಮಕ್ಕಳು ತಮ್ಮ ಭಾವನೆಗಳನ್ನೂ ಸರಿಯಾಗಿ ಹೇಳಿಕೊಳ್ಳಲು ಆಗದಿರುವ ಕಾರಣ ಅವರು ಸುಮ್ಮನೆ ಮೌನಕ್ಕೆ ಶರಣಾಗುತ್ತಾರೆ, ಅದು ಅವರ ಮಾನಸಿಕ ಆರೋಗ್ಯಕ್ಕೆ ನೇರ ಕಾರಣವಾಗುತ್ತದೆ.
ಡಿಪ್ರೆಶನ್ ಹೋಗಲಾಡಿಸಲು ಭಾರತ ಸರ್ಕಾರ ತಂದಿರುವ ಯೋಜನೆಗಳು :
ನಮ್ಮ ದೇಶದಲ್ಲಿ ಮಾನಸಿಕ ಆರೋಗ್ಯದ ಮಹತ್ವ ಅರಿತು ಸರ್ಕಾರವು ಕೆಲವೊಂದು ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲಿ ಮುಖ್ಯವಾದವು :
1. National Mental Health Programme or Policy 2014 :
ಈ ಯೋಜನೆಯಿಂದ ಜನರಿಗೆ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುವುದು, ಮತ್ತು ಶಾಲೆ, ಕಾಲೇಜು, ಕೆಲಸದ ಸ್ಥಳಗಳಲ್ಲಿ ಮಾನಸಿಕ ಕೌನ್ಸಲಿಂಗ್ ನಡೆಸುವುದು.
24/7 ಟೆಲಿ ಮಾನಸ್ ಹೆಲ್ಪ್ ಲೈನ್ ಸ್ಥಾಪಿಸಿ ಯಾರಿಗಾದರೂ ಮಾನಸಿಕ ತೊಂದರೆ ಅಥವಾ ಕಾಯಿಲೆ ಇದ್ದರೆ ಕರೆ ಮಾಡಿ ಮಾತನಾಡಬಹುದು.
ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸಿ ಜನಕ್ಕೆ ಕೌನ್ಸಲಿಂಗ್ ಮತ್ತು ಮಾನಸಿಕ ಸಮಾಧಾನ ನೀಡುವ ಕಾರ್ಯ.
2. Mental Health Care Act 2017 :
ಇದು ಮಾನಸಿಕ ರೋಗಿಗಳ ಉಚಿತ ಚಿಕಿತ್ಸೆ ಪಡೆಯುವ ಹಕ್ಕುಗಳನ್ನು ರಕ್ಷಿಸುತ್ತದೆ.
ಒಬ್ಬೊಬ್ಬರೇ ಎಲ್ಲೋ ಬದುಕುವುದಕ್ಕಿಂತ ಕಮ್ಯುನಿಟಿಯ ಜೊತೆ ಬದುಕುವುದು, ಮತ್ತು ಸರಿಯಾದ ಚಿಕಿತ್ಸೆ ಕೊಡದಿದ್ದರೆ ಅಂತಹವರ ವಿರುದ್ಧ ಕ್ರಮ ಜರುಗಿಸುವುದನ್ನು ಈ ಆಕ್ಟ್ ನಲ್ಲಿ ತಿಳಿಸಲಾಗಿದೆ.
3. ಅಯುಷ್ಮಾನ್ ಭಾರತ್ ಯೋಜನೆ :
ಈ ಯೋಜನೆಯಲ್ಲಿ ಈಗ ಮಾನಸಿಕ ಅರೋಗ್ಯ ಸಮಸ್ಯೆಗಳನ್ನು ಸೇರಿಸಲಾಗಿದ್ದು ಯಾವುದೇ ಪ್ರಾಥಮಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ಇದರ ಚಿಕಿತ್ಸೆ ಪಡೆಯಬಹುದು.
4. Natioanal Sucide prevention Strategy 2022 :
ಇದರ ಮುಖ್ಯ ಉದ್ದೇಶ ಶಾಲಾ ಕಾಲೇಜುಗಳ ಭೇಟಿ ನೀಡಿ ಮಕ್ಕಳಿಗೆ ಒಳ್ಳೆಯ ಸ್ಕ್ರೀನಿಂಗ್ ಮತ್ತೆ ಕೌನ್ಸಲಿಂಗ್ ಮಾಡಿ, 2030 ರೊಳಗೆ ಸುಸೈಡ್ ನಿಂದ ಸಾಯುವವರ ಸಂಖ್ಯೆಯನ್ನು ಶೇ. 10%. ಕಡಿಮೆ ಮಾಡುವುದು.
ಡಿಪ್ರೆಶನ್, ಇದು ಒಂದು ಸಾಮಾನ್ಯ ಸಮಸ್ಯೆಯ ರೀತಿ ಕಂಡುಬಂದರೂ, ಅದನ್ನು ನಾವು ನಿರ್ಲಕ್ಷ್ಯ ಮಾಡುವುದು ತುಂಬಾ ಅಪಾಯಕಾರಿ. ನಮ್ಮ ದೇಹದ ಆರೋಗ್ಯ ಎಷ್ಟು ಮುಖ್ಯವೂ ಅದೇ ರೀತಿ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ. ನಮ್ಮ ದೇಶದಲ್ಲಿ ಇದರ ಪ್ರಕರಣಗಳು ದಿನೇ ದಿನೇ ಜಾಸ್ತಿಯಾಗುತ್ತಿದ್ದು, ನಾವು ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ.
ಅಂದರೆ ನಮ್ಮ ಭಾವನೆಗಳನ್ನು ಮನಸ್ಸಿನಲ್ಲೇ ಮುಚ್ಚಿಡದೆ, ನಮೆಗೆ ತುಂಬಾ ಬೇಕಿರುವವರ ಬಳಿ ಹಂಚಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಬೇಕು. ಮತ್ತು ಸಮಸ್ಯೆ ಜಾಸ್ತಿ ಇದೆ ಅಂದಾಗ ವೈದ್ಯಕೀಯ ನೆರವು ಪಡೆದು ಗುಣಪಡಿಸಿಕೊಳ್ಳಬೇಕು.
‘ಮನಸ್ಸು ಆರೋಗ್ಯವಾಗಿದ್ದರೆ ಜೀವನ ಸುಖವಾಗಿರುತ್ತದೆ’.
ನಾವು ಮನಸ್ಸಿಗೆ ಹೇಳಬೇಕಿರುವುದು ಇಷ್ಟೇ ” ನನ್ನ ಮನಸ್ಸನ್ನು ನಿಯಂತ್ರಿಸುವ ಶಕ್ತಿ ನನಗಿದೆ, ನೆಮ್ಮದಿಯಾಗಿರುವುದು, ಸಂತೋಷದಿಂದಿರುವುದು, ಮತ್ತು ನನ್ನ ಮನಸಿನ ಮಾತನ್ನು ಕೇಳುವುದು ನನ್ನ ಆದ್ಯತೆಯಾಗಿರುತ್ತದೆ”.
