ನಾವು ತಿನ್ನುವ ಆಹಾರ ನಮ್ಮ ದೇಹದ ಆರೋಗ್ಯವನ್ನು ರೂಪಿಸುತ್ತದೆ. ಒಳ್ಳೆಯ ಪ್ರೊಟೀನ್ ರಿಚ್ ಸಸ್ಯಾಹಾರ ಆಹಾರ ನಮ್ಮ ದೇಹವನ್ನ ಸದೃಢವಾಗಿ ಮಾಡುತ್ತದೆ, ಆದ್ದರಿಂದ 5 ಉತ್ತಮ Protein ಬರಿತ ಆಹಾರದ ಲಾಭ, ಅದರಿಂದ ಸಿಗುವ ಪೋಷಕಾಂಶಗಳು, ಮತ್ತೆ ಆರೋಗ್ಯದ ಮಹತ್ವದ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಯೋಣ.
Table of Contents
Toggleನಮ್ಮ ಒಳ್ಳೆಯ ಆರೋಗ್ಯದ ಜೀವನಕ್ಕಾಗಿ Protein Rich Foods :
ನಮ್ಮ ಕೆಟ್ಟ ಜೀವನಶೈಲಿಯನ್ನ ಸರಿಪಡಿಸಿಕೊಳ್ಳಬೇಕಾದರೆ ಆರೋಗ್ಯವನ್ನ ಕಾಪಾಡಿಕೊಳ್ಳೋದು ತುಂಬಾ ಮುಖ್ಯ. ನಮ್ಮ ದೇಹದಲ್ಲಿ ಪ್ರೊಟೀನ್ ಎಷ್ಟು ಮುಖ್ಯ ಅಂದರೆ, ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಶಕ್ತಿ ಬೇಕು ಅದು ಸಿಗುವುದು ಒಳ್ಳೆಯ ಪ್ರೊಟೀನ್ ಇಂದ, ನಮ್ಮ ದೇಹದ ಪ್ರತಿಯೊಂದು ಮಾಂಸಖಂಡಕ್ಕೂ ಶಕ್ತಿ ಬೇಕು ಅದು ಪ್ರೊಟೀನ್ ಇಂದ ಮಾತ್ರ ಸಿಗುತ್ತೆ, ಆದ್ದರಿಂದ ದೇಹದ ಪ್ರೊಟೀನ್ ನಮ್ಮ ದೇಹ ಸದೃಢವಾಗಿರಲು, ದೇಹದ ಸೆಲ್ ಗಳು ಚನ್ನಾಗಿ ಕಾರ್ಯ ನಿರ್ವಹಿಸಲು, ಮತ್ತೆ ದೇಹದಲ್ಲಿ ಆಂಟಿ ಬಾಡೀಸ್ ಡೆವಲಪ್ ಆಗಲು ಪ್ರೊಟೀನ್ ತುಂಬಾ ಮುಖ್ಯ.
ಕೆಲವರಲ್ಲಿ ಒಂದು ಅನುಮಾನ ಇರುತ್ತೆ, ಅದೇನೆಂದರೆ, ಮಾಂಸದಲ್ಲಿ ಮಾತ್ರ ಪ್ರೊಟೀನ್ ಸಿಗುತ್ತೆ ಅಂತ, ಆದರೆ ಅದು ತಪ್ಪು, ನಮ್ಮಲ್ಲಿ ಅನೇಕ ಸಸ್ಯಾಹಾರ ಆಹಾರದಲ್ಲೂ ಅಷ್ಟೇ ಪ್ರಮಾಣದ ಪ್ರೊಟೀನ್ ಸಿಗುತ್ತೆ, ನಮ್ಮಲ್ಲಿ ಕೆಲವರು ಮಾಂಸ ತಿನ್ನುವುದಿಲ್ಲ ಅಂತಹವರು ಒಳ್ಳೆಯ ಪ್ರೊಟೀನ್ ಬರಿತ ಸಸ್ಯಾಹಾರ ತಿಂದು ದೇಹದ ಆರೋಗ್ಯ ಕಾಪಾಡಿಕೊಳ್ಳುತ್ತಾರೆ.
ಹಾಗಾದರೆ Protein ಎಂದರೇನು?
ಪ್ರೊಟೀನ್ ಅನ್ನುವುದು ನಮ್ಮ ದೇಹದ ಶಕ್ತಿ ಹೆಚ್ಚಾಗಲು ಮತ್ತು ದೇಹದ ಸೆಲ್ ಗಳು, ಮತ್ತೆ ಟಿಶ್ಯೂ ಗಳು ಒಳ್ಳೆಯ ರೀತಿ ಬೆಳವಣಿಗೆ ಆಗಲು ಬೇಕಿರುವ ಒಂದು ಪೋಷಕಾಂಶವಾಗಿದೆ. ಇದು ಅಮೈನೋ ಆಸಿಡ್ ನಿಂದ ಉತ್ಪತ್ತಿ ಆಗಿ ನಮ್ಮದ ದೇಹದ ತಲೆಯ ಕೂದಲಿನಿಂದ ಇಡಿದು ಚರ್ಮ, ಮಾಂಸಖಂಡಗಳ ಬೆಳವಣಿಗೆಯ ತನಕ ಪ್ರೊಟೀನ್ ಕೆಲಸ ಮಾಡುತ್ತದೆ.
ನಮ್ಮ ದೇಹಕ್ಕೆ Protein ಯಾಕೆ ಬೇಕು ?
ದೇಹಕ್ಕೆ ಪ್ರೊಟೀನ್ ನ ಮಹತ್ವ :
ದೇಹದಲ್ಲಿ ಪ್ರೊಟೀನ್ ಇರುವುದರಿಂದ ಅದು ತುಂಬಾ ಕೆಲಸಗಳನ್ನ ಮಾಡುತ್ತೆ ಅದೇನೆಂದು ನೋಡೋಣ;
- ದೇಹದ ಮಸಲ್ (ಸ್ನಾಯುಗಳ) ಬೆಳವಣಿಗೆ ಆಗುತ್ತೆ.
- ದೇಹದಲ್ಲಿ ತೊಂದರೆಗೆ ಒಳಗಾದ ಸೆಲ್ ಗಳ ಮರುನಿರ್ಮಾಣ ಮಾಡುತ್ತೆ.
- ರೋಗನಿರೋಧಕ ಶಕ್ತಿ immunity power ಜಾಸ್ತಿ ಮಾಡಲು ಸಹಾಯ ಮಾಡುತ್ತೆ.
- ದೇಹಕ್ಕೆ ಕೆಲಸ ಮಾಡಲು ಬೇಕಾದ ಶಕ್ತಿಯನ್ನು ನೀಡುತ್ತದೆ.
- ಕೂದಲು ಮತ್ತು ಚರ್ಮದ ಬೆಳವಣಿಗೆಗೆ ಮತ್ತೆ ಅದರ ಆರೋಗ್ಯ ಕಾಪಾಡುತ್ತದೆ.
- ದೇಹದ ತೂಕ ನಿಯಂತ್ರಣಕ್ಕೆ ಮತ್ತೆ ಜಾಸ್ತಿಮಾಡಲು ಸಹಾಯ ಮಾಡುತ್ತದೆ.
ಈ ಎಲ್ಲ ಒಳ್ಳೆಯ ಕಾರ್ಯಗಳು ಆಗಬೇಕಾದರೆ ದೇಹದ ಪ್ರೊಟೀನ್ ಚೆನ್ನಾಗಿದ್ದರೆ ಮಾತ್ರ ಸಾಧ್ಯ.
ನಮ್ಮ ದೇಹದಲ್ಲಿ ಪ್ರೊಟೀನ್ ಕೊರತೆ ಆದ್ರೆ ದೇಹ ಬೇಗ ಸುಸ್ತಾಗುತ್ತದೆ, ಕೂದಲು ಉದುರುತ್ತದೆ, ಇಲ್ಲದೆ ಇರೋ ರೋಗಗಳು ಬರುತ್ತವೆ.
ಇದನ್ನೂ ಓದಿ: ಹಾಲು ಕುಡಿಯುವುದರ ಮಹತ್ವ
5 Best Protein Rich Vegetarian Foods
1. ಬೇಳೆಕಾಳುಗಳು(pulses) – ಇವು ದೇಹಕ್ಕೆ ಅತ್ಯುತ್ತಮ Protein Rich Vegetarian Foods.
ನಮ್ಮ ದೇಶದಲ್ಲಿ ಬೇಳೆಕಾಳುಗಳು ನಾವು ತಿನ್ನುವ ಆಹಾರದಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಪ್ರೊಟೀನ್, ವಿಟಮಿನ್ಸ್, ಫೈಬರ್ ಅಂಶ ಇರುತ್ತದೆ.
ಬೇಳೆಕಾಳುಗಳಲ್ಲಿ ಇರುವ ಹೆಚ್ಚಿನ ಪ್ರೊಟೀನ್ ಪ್ರಮಾಣ :
ಒಂದು ಕಪ್ ಬೇಯಿಸಿದ ಬೇಳೆಯಲ್ಲಿ ಸುಮಾರು 15–18 ಗ್ರಾಂ ಪ್ರೊಟೀನ್ ದೇಹಕ್ಕೆ ಸಿಗುತ್ತದೆ.
ಬೇಳೆಕಾಳುಗಳಿಂದ ನಮ್ಮದೇಹದ ಆರೋಗ್ಯ ಯಾವ ರೀತಿ ಸುಧಾರಿಸುತ್ತದೆ ?
- ತಿಂದ ಆಹಾರ ಸರಿಯಾಗಿ ಜೀರ್ಣವಾಗಲು ಪ್ರೊಟೀನ್ ಸಹಾಯ ಮಾಡುತ್ತದೆ.
- ನಮ್ಮ ಹೃದಯ ಸರಿಯಾಗಿ ಕೆಲಸ ಮಾಡಲು ಪ್ರೊಟೀನ್ ಸಹಾಯ ಮಾಡುತ್ತದೆ.
- ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ ಮಾಡಿ ಶುಗರ್ ಪ್ರಮಾಣವನ್ನ ಕಂಟ್ರೋಲ್ ಮಾಡುತ್ತೆ.
- ದೇಹದ ತೂಕ ಇಳಿಕೆಗೆ ಸಹಾಯ ಮಾಡುತ್ತೆ.
- ದೇಹಕ್ಕೆ ಕೆಲಸ ಮಾಡಲು ಬೇಕಾಗಿರುವ ಶಕ್ತಿ ನೀಡುತ್ತದೆ.
ಯಾವ ಬೇಳೆಗಳು ಹೆಚ್ಚು ಪ್ರೊಟೀನ್ ಹೊಂದಿವೆ?
ತೊಗರಿಬೇಳೆ, ಅವರೆಬೇಳೆ, ಹೆಸರುಬೇಳೆ, ಕಡಲೆಬೇಳೆ, ಇತ್ಯಾದಿ.ಬೇಳೆಕಾಳುಗಳು ಕಡಿಮೆ ವೆಚ್ಚದಲ್ಲಿ ನಮ್ಮ ಹೊಲದಲ್ಲಿ ಬೆಳೆಯಬಹುದಾದ ಆಹಾರ ಪಧಾರ್ಥಗಳಾಗಿದ್ದು, ಹೆಚ್ಚಿನ ಪ್ರೊಟೀನ್ ನೀಡುವ ಉತ್ತಮ ಆಹಾರಗಳಾಗಿವೆ.
2. Paneer – Protein ಹೆಚ್ಚಿಗೆ ಸಿಗುವ ಸಸ್ಯಾಹಾರಿ ಉತ್ತಮ ಆಹಾರ
Paneer ಅಥವಾ ಹಾಲಿನ ಪನ್ನೀರ್ ನಮ್ಮ ದೇಶದಲ್ಲಿ ಬಹಳ ಜನಪ್ರಿಯವಾಗಿದೆ. ಇದು ದೇಹಕ್ಕೆ ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಸಿಗುವ ಒಳ್ಳೆಯ ಆಹಾರವಾಗಿದೆ.
ಪನ್ನೀರ್ ನಲ್ಲಿ ಇರುವ ಪ್ರೊಟೀನ್ ಪ್ರಮಾಣ
100 ಗ್ರಾಂ Paneer ತಿಂದರೆ ಅದರಲ್ಲಿ ಸುಮಾರು 18–20 ಗ್ರಾಂ ಪ್ರೊಟೀನ್ ಇರುತ್ತದೆ.
ಪನ್ನೀರ್ ತಿನ್ನುವುದರಿಂದ ನಮ್ಮ ಆರೋಗ್ಯ ಲಾಭಗಳು :
- ಇದು ನಮ್ಮ ಸ್ನಾಯುಗಳನ್ನು( ಮಾಂಸಖಂಡಗಳನ್ನು) ಬಲಪಡಿಸುತ್ತದೆ
- ದೇಹದ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ.
- ಸ್ವಲ್ಪ ತಿಂದರೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ, ಆದ್ದರಿಂದ ದಪ್ಪ ಆಗುವ ಸಾಧ್ಯತೆ ಕಡಿಮೆ.
- ದೇಹಕ್ಕೆ ಕೆಲಸ ಮಾಡಲು ಒಳ್ಳೆಯ ಶಕ್ತಿ ನೀಡುತ್ತದೆ
ಪನ್ನೀರ್ ಚಿಕ್ಕ ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತೆ.
ಕೆಲವರಿಗೆ ದೇಹಕ್ಕೆ ಪ್ರೊಟೀನ್ ತುಂಬಾ ಬೇಕಾಗಿರುತ್ತದೆ ಅಂತಹವರು Paneer ಅನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.
3. ಹಾಲು : ಇದು ನಮ್ಮ ದೇಹಕ್ಕೆ ಒಳ್ಳೆಯ ಪ್ರೊಟೀನ್ ಕೊಡುತ್ತದೆ,
ಪ್ರತಿ ದಿನ ಒಂದು ಗ್ಲಾಸ್ ಹಾಲು ಕುಡಿಯುವುದರಿಂದ ನಮ್ಮ ದೇಹಕ್ಕೆ ಅವಶ್ಯಕವಾದ ಪ್ರೊಟೀನ್ ಸಿಗುತ್ತದೆ.
ಹಾಲಿನಲ್ಲಿ ಎರಡು ರೀತಿಯ ಪ್ರೊಟೀನ್ ಇದೆ
1) Whey ಪ್ರೊಟೀನ್ : ಇದು ತಿಂದ ಆಹಾರವನ್ನ ನಿಧಾನವಾಗಿ ಜೀರ್ಣವಾಗಲು ಸಹಾಯ ಮಾಡುತ್ತೆ.
2) Casein ಪ್ರೊಟೀನ್ : ಇದು ಬೇಗ ಜೀರ್ಣಮಾಡಲು ಸಹಾಯ ಮಾಡುವುದರಿಂದ ಜಿಮ್ ವರ್ಕೌಟ್ ಮಾಡಿದ ನಂತರ ಮಾಂಸಖಂಡಗಳ ರೆಕವರಿಗೆ ತುಂಬಾ ಸಹಾಯ ಮಾಡುತ್ತೆ.
250 ml ಗ್ಲಾಸ್ ಹಾಲು ಕುಡಿದರೆ ಸುಮಾರು 8-10 ಗ್ರಾಂ ಪ್ರೊಟೀನ್ ಸಿಗುತ್ತದೆ.
ಹಾಲು ಕುಡಿಯುವುದರಿಂದ ;
- ದೇಹದ ಬೆಳವಣಿಗೆ ಚನ್ನಾಗಿ ಆಗುತ್ತದೆ.
- ಮೂಳೆಗಳು ಗಟ್ಟಿ ಮುಟ್ಟಾಗುತ್ತವೆ ಮತ್ತೆ ಒಳ್ಳೆಯ ಬೆಳವಣಿಗೆ ಆಗುತ್ತೆ.
- ದೇಹದ ಮಾಂಸಖಂಡಗಳು ಚನ್ನಾಗಿ ಬೆಳವಣಿಗೆ ಆಗುತ್ತವೆ.
- ದೇಹಕ್ಕೆ ಬೇಕಾಗುವ ವಿಟಮಿನ್ D , B12 ವಿಟಮಿನ್ಸ್ ಅಂಶವನ್ನು ಹಾಲು ಕೊಡುತ್ತದೆ.
4. ಕಡಲೆಕಾಳು – ಇದು ದೇಹಕ್ಕೆ ಶಕ್ತಿಯುತ Protein Rich Food
ಕಡಲೆಕಾಳುಗಳಲ್ಲಿ ಪ್ರೊಟೀನ್, ಫೈಬರ್, ಐರನ್ ಮತ್ತು ಅನೇಕ ಪೋಷಕಾಂಶಗಳು ಇರುತ್ತವೆ.
ಕಡಲೆಕಾಳಿನ ಪ್ರೊಟೀನ್ ಪ್ರಮಾಣ ಎಷ್ಟಿದೆ ಅಂದರೆ
ಒಂದು ಕಪ್ ಬೇಯಿಸಿದ ಕಡಲೆಕಾಳಿನಲ್ಲಿ ಸುಮಾರು 15 ಗ್ರಾಂ ಪ್ರೊಟೀನ್ ಸಿಗುತ್ತದೆ.
ಕಡಲೆಕಾಳಿನ ಆರೋಗ್ಯ ಲಾಭಗಳು ;
- ಜೀರ್ಣಕ್ರಿಯೆ ಸುಧಾರಿಸುತ್ತದೆ
- ರಕ್ತದೊತ್ತಡ ನಿಯಂತ್ರಿಸುತ್ತದೆ
- ಹೃದಯ ಆರೋಗ್ಯಕ್ಕೆ ಉತ್ತಮ
- ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
- ಜಾಸ್ತಿ ಹೊತ್ತು ಹಸಿವು ಬರದಂತೆ ಮಾಡುತ್ತದೆ
5. ಸೋಯಾಬೀನ್ – ಅತ್ಯಧಿಕ Protein ಇರುವ ತುಂಬಾ ಜನಕ್ಕೆ ಗೊತ್ತಿಲ್ಲದ ಸಸ್ಯಾಹಾರಿ ಆಹಾರ
ಸೋಯಾಬೀನ್ ಅನ್ನು Protein ನ ಪವರ್‌ಹೌಸ್ ಅಂತ ಕರೆಯುತ್ತಾರೆ. ಇದು ನಮ್ಮ ದೇಹಕ್ಕೆ ಬೇಕಿರುವ ಎಲ್ಲಾ ಅಗತ್ಯ ಅಮೈನೋ ಆಸಿಡ್ ಗಳನ್ನ ಹೊಂದಿದೆ.
Soybean ನಲ್ಲಿ ಇರುವ Protein ಪ್ರಮಾಣ ;
100 ಗ್ರಾಂ Soybean ನಲ್ಲಿ ಸುಮಾರು 35–36 ಗ್ರಾಂ Protein ಇರುತ್ತದೆ.
Soybean ಆರೋಗ್ಯ ಲಾಭಗಳು:
- ಮಾಂಸಖಂಡಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
- ಮೂಳೆಗಳನ್ನು ಬಲಪಡಿಸುತ್ತದೆ
- ಹೃದಯ ಆರೋಗ್ಯ ಕಾಪಾಡುತ್ತದೆ
- ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
- ತೂಕ ನಿಯಂತ್ರಣಕ್ಕೆ ಸಹಾಯ
ಒಬ್ಬ ಮನುಷ್ಯನಿಗೆ ದಿನಕ್ಕೆ ಎಷ್ಟು ಪ್ರೊಟೀನ್ ಬೇಕು?
ಪ್ರೊಟೀನ್ ಅಗತ್ಯ ಯಾವ ರೀತಿ ಅಂದರೆ ವ್ಯಕ್ತಿಯ ವಯಸ್ಸು ಮತ್ತು ದೈಹಿಕ ಚಟುವಟಿಕೆ ಮೇಲೆ ಅವಲಂಬಿತವಾಗಿದೆ.
ಸಾಮಾನ್ಯ ಮನುಷ್ಯನ ಪ್ರೊಟೀನ್ ಅಗತ್ಯತೆ;
ಪುರುಷರು – 50 ರಿಂದ 60 ಗ್ರಾಂ
ಮಹಿಳೆಯರು – 45 ರಿಂದ 50 ಗ್ರಾಂ
ಮಕ್ಕಳು – 20 ರಿಂದ 35 ಗ್ರಾಂ
ವ್ಯಾಯಾಮ ಮಾಡುವವರು – ಇವರಿಗೆ ಹೆಚ್ಚು ಪ್ರೊಟೀನ್ ಬೇಕು.

Good