ಆರ್ಗ್ಯಾನಿಕ್ ಆಹಾರ Organic Food ನಮ್ಮ ಆರೋಗ್ಯದ ದೃಷ್ಠಿಯಿಂದ ಯಾಕೆ ಮುಖ್ಯ, ಅದರಲ್ಲಿರುವ ಪೌಷ್ಟಿಕಾಂಶಗಳು, ಅದು ನಮ್ಮ ದೇಹಕ್ಕೆ ಯಾಕೆ ಸುರಕ್ಷಿತ ಮತ್ತೆ ನಾವು ಅದನ್ನೇ ಯಾಕೆ ತಿನ್ನಬೇಕು. ಎಂಬಂತಹ ಅನೇಕ ವಿಷಯಗಳನ್ನ ನೋಡೋಣ.
Table of Contents
ToggleOrganic Food ನಮ್ಮ ಆರೋಗ್ಯದ ಮುಖ್ಯ ಅಂಶ
ನಮ್ಮ ಜೀವನಶೈಲಿ ಯಾವ ರೀತಿ ಆಗಿದೆ ಅಂದರೆ ನಾವು ಯಾವ ಆಹಾರ ತಿನ್ನುತ್ತಿದ್ದೇವೆ ಅಂತ ನಮಗೆ ಅರಿವೆಯೇ ಇಲ್ಲ. ನಮಗೆ ಯಾವುದಾದರೂ ಅರೋಗ್ಯ ಸಮಸ್ಯೆ ಬಂದರೆ ಆಗ ನಮಗೆ ತಿಳಿಯುತ್ತದೆ, ನಾವು ಒಳ್ಳೆಯ ಆಹಾರ ತಿನ್ನುತ್ತಿಲ್ಲ ಎಂದು, ಅದು ಬರೀ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಹಾಕಿ ಬೆಳಸಿದ ಆಹಾರ ಪಧಾರ್ಥಗಳೆಂದು. ಇದರಿಂದ ನಮಗಿರುವ ಒಂದೇ ದಾರಿ ಅದೇ ಆರ್ಗ್ಯಾನಿಕ್ ಫುಡ್. ಇದು ಕೇವಲ ಟ್ರೆಂಡ್ ಆಗಿ ಇಲ್ಲ ಇದು ನಮ್ಮ ಜೀವನದ ಒಂದು ಭಾಗವಾಗಿದೆ.
ಈ ಬ್ಲಾಗ್ ನಲ್ಲಿ ನಾವು ಆರ್ಗ್ಯಾನಿಕ್ ಆಹಾರ ಅಂದರೆ ಏನು? ಅದರಿಂದ ಯಾವ ಪೌಷ್ಟಿಕಾಂಶಗಳು ದೇಹಕ್ಕೆ ಸಿಗುತ್ತವೆ. ಅದು ನಮ್ಮ ಆರೋಗ್ಯ ಸುಧಾರಣೆ ಯಾವ ರೀತಿ ಮಾಡುತ್ತೆ, ಮತ್ತೆ ನಾವು ಆರ್ಗ್ಯಾನಿಕ್ ಆಹಾರವನ್ನೇ ಯಾಕೆ ತಿನ್ನಬೇಕು ಎಂದು ನೋಡೋಣ.
Organic food ಅಂದರೆ ಏನು? ತಿಳಿಯೋಣ
ಆರ್ಗ್ಯಾನಿಕ್ ಆಹಾರ ಅಂದರೆ ಯಾವುದೇ ಮಣ್ಣಿಗೆ ಕೆಮಿಕಲ್ ಮತ್ತು ಕೀಟನಾಶಕ, ರಾಸಾಯನಿಕಗಳು ಬಳಸದೇ ತಿಪ್ಪೆ ಗೊಬ್ಬರ ಮತ್ತು ಜೀವಾಮೃತ, ಬಳಸಿ ನೈಸರ್ಗಿಕವಾಗಿ ಬೆಳೆದಂತಹ ಆಹಾರ ಪಧಾರ್ಥಗಳು.
ಇವುಗಳನ್ನು ಬೆಳೆಯುವ ವಿಧಾನ :
- ತಿಪ್ಪೆ ಗೊಬ್ಬರ ಬಳಸಿಕೊಂಡು ಮಣ್ಣಿನ ಪಲವತ್ತತೆ ಹೆಚ್ಚಿಸುವುದು.
- ಗೋಮುತ್ರ, ಸಗಣಿ ಮಿಶ್ರಣ ಮಾಡಿ ನೈಸರ್ಗಿಕ ಗೊಬ್ಬರ ತಯಾರು ಮಾಡುವುದು.
- ಪರಿಸರ ಸ್ನೇಹಿ ಯಂತ್ರಗಳನ್ನು ಬಳಸಿಕೊಳ್ಳುವುದು. ಅಂದರೆ ಎತ್ತು ಮತ್ತೆ ನೇಗಿಲು ಬಳಸಿ ಉಳುಮೆ ಮಾಡುವುದು, ಯಾವುದೇ ಮೆಷಿನ್ ಬಳಸದೆ ಮನುಷ್ಯರೇ ಕಟಾವು ಮಾಡುವುದು, ಇತ್ಯಾದಿ.
- ಎರೆಹುಳುಗಳ ವರ್ಮಿ ಕಾಂಪೋಸ್ಟ್.
- ನೈಸರ್ಗಿಕ ಬೀಜಗಳನ್ನು ಬಳಸುವುದು. ಅಂದರೆ ಯಾವುದೇ ಕ್ರಾಸ್ ಬ್ರೀಡ್ ಬೀಜಗಳನ್ನು ಬಳಸದೇ ಇರುವುದು.
- ಜೀವಾಮೃತ (ಸಗಣಿ, ಬೆಲ್ಲ, ಸುಣ್ಣದ ನೀರು, ಬೇವಿನ ಎಲೆಗಳು ಮಿಶ್ರಣ) ಮಾಡಿಕೊಂಡು ಹುಳುಗಳನ್ನು ತಡೆಯುವ ಪ್ರಯತ್ನ ಮಾಡುವುದು.
ಆರ್ಗ್ಯಾನಿಕ್ ಆಹಾರ ಪಧಾರ್ಥಗಳು :
ಧಾನ್ಯಗಳು.
ತರಕಾರಿಗಳು,
ಸೊಪ್ಪುಗಳು.
ಹಣ್ಣುಗಳು.
ಕಾಳುಗಳು.
ಈ ಎಲ್ಲ ಪಧಾರ್ಥಗಳನ್ನು ನಾವು ಆರ್ಗ್ಯಾನಿಕ್ ಆಗಿ ಬೆಳೆಯಬಹುದು. ಮತ್ತು ಇವು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು.
Organic food ನಮ್ಮ ದೇಹದ ಆರೋಗ್ಯವನ್ನ ಯಾವ ರೀತಿ ಕಾಪಾಡುತ್ತದೆ?
ನಾವು ದಿನನಿತ್ಯ ತಿನ್ನುವ ಕೆಮಿಕಲ್ ಮಿಶ್ರಿತ ಆಹಾರಗಳಿಗಿಂತ ಆರ್ಗ್ಯಾನಿಕ್ ಆಹಾರ ತಿನ್ನುವುದರಿಂದ ಅನೇಕ ಹೆಲ್ತ್ ಬೆನಿಫಿಟ್ ಸಿಗುತ್ತದೆ ಅವೇನೆಂದು ನೋಡೋಣ;
1. ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ :
ಯಾವ ರೀತಿ ಅಂದರೆ ಆರ್ಗ್ಯಾನಿಕ್ ಆಹಾರದಲ್ಲಿ ಕೆಮಿಕಲ್ ಗಳ ಬಳಕೆ ಇಲ್ಲದಿರುವುದರಿಂದ ನಮ್ಮ ದೇಹದ ಇಮ್ಮ್ಯೂನ್ ಸಿಸ್ಟಮ್ ಬಲಗೊಳ್ಳುತ್ತದೆ. ಆದ್ದರಿಂದ ದೇಹಕ್ಕೆ ಯಾವುದೇ ರೀತಿಯ ಕಾಯಿಲೆಗಳು ಬರುವುದಿಲ್ಲ.
2. ಜೀರ್ಣಕ್ರಿಯೆ ಸುಧಾರಿಸುತ್ತದೆ :
ಆರ್ಗ್ಯಾನಿಕ್ ಆಹಾರದಲ್ಲಿ ಫೈಬರ್, ಕಾರ್ಬೋಹೈಡ್ರೆಟ್ಸ್ ಜಾಸ್ತಿ ಇರುವುದರಿಂದ ತಿಂದ ಆಹಾರ ಚನ್ನಾಗಿ ಜೀರ್ಣವಾಗುತ್ತದೆ. ಮಲಬದ್ಧತೆ (constipation) ಇದ್ದರೆ ವಾಸಿಯಾಗುತ್ತದೆ, ಹೊಟ್ಟೆಯಲ್ಲಿ ನೋವು ಸಂಕಟ ಇದ್ದರೆ ಬೇಗ ಗುಣವಾಗುತ್ತದೆ. ಕೆಲವರಿಗೆ ಊಟ ತಿಂದ ಮೇಲೆ ಹೊಟ್ಟೆಯಲ್ಲಿ ಏನೋ ಸಂಕಟ ಶುರುವಾಗುತ್ತದೆ. ಅದೆಲ್ಲ ಆರ್ಗ್ಯಾನಿಕ್ ಆಹಾರದಿಂದ ವಾಸಿಯಾಗುತ್ತದೆ.
3. ಹೃದಯದ ಆರೋಗ್ಯ ಕಾಪಾಡುತ್ತದೆ :
ಆರ್ಗ್ಯಾನಿಕ್ ಆಗಿ ಬೆಳೆದ ಆಹಾರದಲ್ಲಿ ಒಳ್ಳೆಯ ಕೊಬ್ಬಿನ ಅಂಶ ಮಾತ್ರ ಇರುತ್ತದೆ. ಹಾನಿಕಾರಕ ಕೊಬ್ಬು ಇರುವುದಿಲ್ಲ ಹಾಗಾಗಿ ಕಾರ್ಡಿಯೋ, ಹೃದಯಕ್ಕೆ ಸಂಬಂದಿಸಿದ ಕಾಯಿಲೆಗಳು ಬರುವುದಿಲ್ಲ. ಹಾಗೆಯೆ;
ರಕ್ತದೊತ್ತಡ (Blood pressure) ಸುಧಾರಿಸುತ್ತದೆ.
ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
ಹಾರ್ಟ್ ಅಟ್ಯಾಕ್ ಸಂಭವ ತೀರಾ ಕಡಿಮೆಯಾಗುತ್ತದೆ.
4. ಚರ್ಮದ ಆರೋಗ್ಯ ಉತ್ತಮಗೊಳ್ಳುತ್ತದೆ :
ನಾವು ತಿನ್ನವ ಕೆಮಿಕಲ್ ಆಹಾರದಿಂದ ಚರ್ಮದ ಸಮಸ್ಯೆಗಳಾದ ಮೊಡವೆ, ಅಲರ್ಜಿ, ತುರಿಕೆ, ಉರಿ, ಸೋಂಕುಗಳು ಎಲ್ಲವೂ ಆರ್ಗ್ಯಾನಿಕ್ ಆಹಾರ ತಿನ್ನುವುದರಿಂದ ಕಡಿಮೆಯಾಗುತ್ತವೆ.
5. ಮಕ್ಕಳ ಬೆಳವಣಿಗೆಗೆ ಸಹಕಾರಿ :
ಚಿಕ್ಕ ಮಕ್ಕಳ ದೇಹವು ತುಂಬಾ ಸೂಕ್ಷವಾಗಿರುತ್ತೆ. ಕೆಮಿಕಲ್ ಬಳಸಿರುವ ಆಹಾರವನ್ನು ಮಕ್ಕಳಿಗೆ ತಿನಿಸುವುದರಿಂದ ಅವರಿಗೆ ಅನೇಕ ಸಮಸ್ಯೆಗಳು ಬರುತ್ತವೆ. ಅದಕ್ಕೆ ಆರ್ಗ್ಯಾನಿಕ್ ಆಹಾರ ತಿನ್ನುವುದರಿಂದ ಅವರ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ, ಮತ್ತೆ ಬುದ್ದಿ ಚುರುಕಾಗಿ ದೈಹಿಕ ಬೆಳವಣಿಗೆ ಚನ್ನಾಗಿ ಆಗುತ್ತದೆ.
6. ದೇಹದಲ್ಲಿ ವಿಷಪದಾರ್ಥಗಳ ಸಂಗ್ರಹ ಕಡಿಮೆಯಾಗುತ್ತದೆ :
ನಮ್ಮ ದೇಹವು ಸೂಕ್ಷ ಅಂಗವಾಗಿದ್ದು ನಾವು ಕೀಟನಾಶಕ ಬಳಸಿದ ಆಹಾರ ತಿಂದು ಹೊಟ್ಟೆಯಲ್ಲಿ ವಿಷ ಪಧಾರ್ಥಗಳ ಸಂಗ್ರಹವಾಗಿರುತ್ತೆ. ಇದನ್ನು ಹೋಗಲಾಡಿಸಲು ನಾವು ಆರ್ಗ್ಯಾನಿಕ್ ಆಹಾರವನ್ನು ತಿನ್ನುವುದು ತುಂಬಾ ಮುಖ್ಯ.
ಇದನ್ನೂ ಓದಿ : ರಾಗಿ ಮುದ್ದೆ ತಿನ್ನುವುದರಿಂದ ಸಿಗುವ ಆರೋಗ್ಯ ಲಾಭಗಳು
ಆರ್ಗ್ಯಾನಿಕ್ ಆಹಾರದಲ್ಲಿ ಯಾವೆಲ್ಲ ಪೌಷ್ಟಿಕಾಂಶಗಳು ಇರುತ್ತವೆ?
ನಾವು ತಿನ್ನುವ ಆಹಾರಕ್ಕಿಂತ ಆರ್ಗ್ಯಾನಿಕ್ ಆಹಾರದಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳು (nutrients) ಸಿಗುತ್ತವೆ, ಹೆಚ್ಚಿನ antioxidant ಗಳು ಇದಾವೆ ಆದ್ದರಿಂದ ದೇಹಕ್ಕೆ ತುಂಬಾ ಒಳ್ಳೆಯದೆಂದು, National institute of health ತನ್ನ ವರದಿಯಲ್ಲಿ ತಿಳಿಸಿದೆ.
ಆರ್ಗ್ಯಾನಿಕ್ ಆಹಾರದಲ್ಲಿರುವ ಪೌಷ್ಟಿಕಾಂಶಗಳು ಯಾವುವೆಂದು ತಿಳಿಯೋಣ;
ಆರ್ಗ್ಯಾನ್ಕಿಕ್ ಆಗಿ ಬೆಳೆದಂತಹ ಧಾನ್ಯಗಳು, ಹಣ್ಣು ಮತ್ತೆ ತರಕಾರಿಗಳಲ್ಲಿ, ನಮ್ಮ ದೇಹಕ್ಕೆ ಬೇಕಿರುವ ವಿಟಮಿನ್ C, A, E ಅಂಶ ಹೆಚ್ಚಿರುತ್ತದೆ, ಜೊತೆಗೆ ದೇಹಕ್ಕೆ ಬೇಕಾದ ಮಿನರಲ್ಸ್ ಐರನ್, ಮೆಗ್ನಿಶಿಯಂ, ಜಿಂಕ್, ಕ್ಯಾಲ್ಶಿಯಂ, ಇವು ಹೆಚ್ಚುಇನ ಪ್ರಮಾಣದಲ್ಲಿ ಸಿಗುತ್ತವೆ.
ಜೊತೆಗೆ ದೇಹಕ್ಕೆ ಬೇಕಾದ ಆಂಟಿ ಆಕ್ಸಿಡೆಂಟ್ಸ್ ಆರ್ಗ್ಯಾನಿಕ್ ಆಹಾರದಲ್ಲಿ ಸಿಗುತ್ತವೆ.
ಇದರಿಂದ ದೇಹಕ್ಕೆ ವಯಸ್ಸಾಗುವ ಪ್ರಕ್ರಿಯೆ ಸ್ವಲ್ಪ ಕಡಿಮೆಯಾಗುತ್ತದೆ, ಅಂದರೆ ಚರ್ಮ ಸುಕ್ಕುಗೊಳ್ಳುವುದಿಲ್ಲ, ಕ್ಯಾನ್ಸರ್ ಬರುವ ಅಪಾಯ ಇರುವುದಿಲ್ಲ, ವಯಸ್ಸಿನ ಸಂಬಂದಿತ ಕಾಯಿಲೆಗಳು ಕಡಿಮೆಯಾಗುತ್ತವೆ.
ಆರ್ಗ್ಯಾನಿಕ್ ಆಹಾರದಲ್ಲಿ ಫೈಬರ್ ಅಂಶ ಮತ್ತೆ ಪ್ರೊಟೀನ್ ಜಾಸ್ತಿ ಇರುವುದರಿಂದ ತೂಕ ಕಡಿಮೆ ಮಾಡುವವರಿಗೆ ಅನುಕೂಲ, ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಹೊಟ್ಟೆಯ ಆರೋಗ್ಯ ಸುಧಾರಿಸುತ್ತದೆ, ಮತ್ತೆ ಮಧುಮೇಹ ಕಾಯಿಲೆ ಇರುವವರು ಈ ಆಹಾರ ತಿನ್ನುವುದರಿಂದ ಕಂಟ್ರೋಲ್ ಮಾಡಬಹುದು.
ಸಾಮಾನ್ಯ ಆಹಾರಕ್ಕಿಂತ ಆರ್ಗ್ಯಾನಿಕ್ ಆಹಾರ Organic Food ಯಾಕೆ ಸುರಕ್ಷಿತ?
ಕೆಲವು ರಾಷ್ಟ್ರ್ರೀಯ ಆಹಾರ ಕಾರ್ಯಕ್ರಮಗಳು, ಮತ್ತು ವರದಿಗಳ ಪ್ರಕಾರ ಆರ್ಗ್ಯಾನಿಕ್ ಆಹಾರವು ಸಾಮಾನ್ಯ ಆಹಾರಕ್ಕಿಂತ ಜಾಸ್ತಿ ಸುರಕ್ಷಿತ ಮತ್ತು ದೇಹಕ್ಕೆ ಒಳ್ಳೆಯದು ಎಂದು ದೃಢಪಟ್ಟಿದೆ.
ಯಾಕೆಂದರೆ;
1. ಕೀಟನಾಶಕಗಳ ಬಳಕೆ ಕಡಿಮೆ :
ಸಾಮಾನ್ಯವಾಗಿ ನಾವು ಭೂಮಿಯಲ್ಲಿ ಯಾವುದೇ ಬೆಳೆ ಬೆಳೆಯಬೇಕಾದರೆ ಕೆಮಿಕಲ್ ಯೂರಿಯಾ, ಮತ್ತೆ ಕಾಂಪ್ಲೆಕ್ಸ್ ಹಾಕದೆ ಬೆಲೆ ತೆಗೆಯಲು ಆಗುವುದಿಲ್ಲ. ಆದರೆ ಆರ್ಗ್ಯಾನಿಕ್ ಕೃಷಿಯಲ್ಲಿ ಯಾವುದೇ ರೀತಿಯ ಪೆಸ್ಟಿಸೈಡ್, ಕೆಮಿಕಲ್ ಗಳ ಬಳಕೆ ಇರುವುದಿಲ್ಲ. ಎಲ್ಲವೂ ನೈಸರ್ಗಿಕವಾಗಿ ಬೆಳೆಯುವ ಪಧಾರ್ಥಗಳಾಗಿರುತ್ತವೆ.
2. ಕೃತಕ ಹಾರ್ಮೋನ್‌ಗಳಿಲ್ಲ :
ಕೆಲವು ಮಾಂಸಹಾರದಲ್ಲಿ ಉದಾಹರಣೆಗೆ ಕೋಳಿ ಫಾರಂನಲ್ಲಿ ಕೋಳಿಗಳು ಮರಿಯಿಂದ ದೊಡ್ಡದಾಗಲು ಕೇವಲ 30 ದಿನ ಸಾಕು ಏಕೆಂದರೆ ಅದಕ್ಕೆ ಗ್ರೋಥ್ ಹಾರ್ಮೋನ್ ಕೊಡಲಾಗುತ್ತದೆ. ಆದರೆ ಆರ್ಗ್ಯಾನಿಕ್ ಆಹಾರ ಪಧಾರ್ಥಗಳಲ್ಲಿ ಅದು ಇರುವುದಿಲ್ಲ. ಅದು ನೈಸರ್ಗಿಕವಾಗಿಯೇ ಬೆಳೆಯಬೇಕು ಅದಕ್ಕೆ ಸ್ವಲ್ಪ ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆ.
3. ಜೆನಟಿಕಲ್ ಇತಿಹಾಸ ಇಲ್ಲ :
ಆರ್ಗ್ಯಾನಿಕ್ ಆಹಾರ ಪಧಾರ್ಥಗಳು ಯಾವುದೇ ರೀತಿಯಲ್ಲಿ ತಳಿ ಬದಲಾವಣೆಯನ್ನು ಮಾಡುವುದಿಲ್ಲ. (Genetically Modified Organism)
ಇದು ಯಾವ ರೀತಿ ಅಂದರೆ ಜೆನಟಿಕ್ ಇಂಜೀನೀರಿಂಗ್ ಟೆಕ್ನಿಕ್ ಬಳಸಿ ಸಸಿಗಳ ಬೆಳವಣಿಗೆ, ರೂಪ, ಗಾತ್ರದ ಬದಲಾವಣೆ ಮಾಡುವ ವಿಧಾನ. ಆದರೆ ಆರ್ಗ್ಯಾನಿಕ್ ಆಹಾರ ಪಧಾರ್ಥಗಳಲ್ಲಿ ಇದು ಇರುವುದಿಲ್ಲ.
4. ಪರಿಸರ ಸ್ನೇಹಿ :
ಸಾಮಾನ್ಯ ಆಹಾರ ಬೆಳೆಯಲು ರಾಸಾಯನಿಕ ಗೊಬ್ಬರ, ಕೀಟನಾಶಕಗಳು, ಹಣ್ಣುಗಳನ್ನು ಮಾಗಿಸಲು ಔಷಧಿಗಳು ಈಗೆ ಹಲವಾರು ಸಾರಿ ಭೂಮಿಯನ್ನು ಮತ್ತೆ ಆಹಾರವನ್ನು ನಾಶಮಾಡುತ್ತೇವೆ. ಆದರೆ, ಆರ್ಗ್ಯಾನಿಕ್ ಕೃಷಿ ಮಾಡುವುದರಿಂದ ಮಣ್ಣಿನ ಆರೋಗ್ಯ ಚನ್ನಾಗಿರುತ್ತದೆ, ನೀರಿನ ಮಾಲಿನ್ಯ ಕಡಿಮೆಯಾಗುತ್ತದೆ, ಪರಿಸರವನ್ನು ಹನಿ ಮಾಡದೆ ರಕ್ಷಣೆ ಮಾಡುವ ವೈಜ್ಞಾನಿಕ ಬದಲಾವಣೆಯಾಗಿದೆ.
5. ದೀರ್ಘಕಾಲಿಕ ಆರೋಗ್ಯ ಲಾಭ :
ಆರ್ಗ್ಯಾನಿಕ್ ಆಹಾರ ತಿನ್ನುವುದರಿಂದ ಮಹಿಳೆಯರಲ್ಲಿ ಹಾರ್ಮೋನ್ ಅಸಮತೋಲನ ಕಡಿಮೆಯಾಗುತ್ತದೆ, ವಂಶಪಾರಂಪರ್ಯ ಕಾಯಿಲೆಗಳು ಕಡಿಮೆಯಾಗುತ್ತವೆ, ಬಿಪಿ, ಶುಗರ್, ಅಸ್ತಮಾ, ವೀಜಿಂಗ್, ಇನ್ನೂ ಅನೇಕ ದೀರ್ಘಕಾಲದ ಕಾಯಿಲೆಗಳು ದೂರವಾಗುತ್ತವೆ.
ನಾವು ಯಾಕೆ ಆರ್ಗ್ಯಾನಿಕ್ ಆಹಾರವನ್ನೇ ತಿನ್ನಬೇಕು? Why should we eat Organic Food ?
ಈಗಿರುವ ನಮ್ಮ ಅಸ್ತವ್ಯಸ್ತ ಜೀವನಶೈಲಿಯಲ್ಲಿ ನಾವು ತಿನ್ನುವುದೆಲ್ಲ ವಿಷದ ರೀತಿ ಅನಿಸುತ್ತಿದೆ. ಆದ್ದರಿಂದ ನಾವು ತಿನ್ನುವ ಆಹಾರ ನಮ್ಮ ಆರೋಗ್ಯವನ್ನ ನಿರ್ಧರಿಸುತ್ತೆ ಅನ್ನೋದಾದರೆ ನಾವ್ಯಾಕೆ ಕೆಮಿಕಲ್ ಬಳಕೆಯ ಸಾಮಾನ್ಯ ಆಹಾರ ಪಧಾರ್ಥಗಳನ್ನ ತಿನ್ನಬೇಕು. ಅದಕ್ಕಂತಲೇ ನಾನು ತಿಳಿಸುತ್ತಿರುವುದು ಏನೆಂದರೆ ನೈಸರ್ಗಿಕವಾಗಿ ಯಾವುದೇ ಕೆಮಿಕಲ್ ಬಳಕೆ ಇಲ್ಲದೇ ಬೆಳೆಯುವ ಆಹಾರ ಪಧಾರ್ಥಗಳು ತಿನ್ನಬೇಕು ಏಕೆಂದರೆ ;
- ಆರೋಗ್ಯಕರ ಜೀವನಕ್ಕಾಗಿ :
ನಾವು ತಿನ್ನುವ ಆಹಾರ ನಮ್ಮ ಇಡೀ ಜೀವನವನ್ನ ನಿರ್ಧರಿಸುತ್ತೆ ಅನ್ನೋದಾದರೆ, ನಾವು ಎಚ್ಚರಿಕೆಯಿಂದ ಒಳ್ಳೆಯ ಗುಣಮಟ್ಟದ ಆರ್ಗ್ಯಾನಿಕ್ ಆಹಾರವನ್ನೇ ತಿನ್ನಬೇಕು. - ಮಕ್ಕಳ ಭವಿಷ್ಯಕ್ಕಾಗಿ :
ನಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಒಳ್ಳೆಯ ಪೌಷ್ಠಿಕ ಆಹಾರ ಕೊಡುವುದು ಪ್ರತೀ ತಂದೆ ತಾಯಿಯ ಜವಾಬ್ದಾರಿ, ಆದ್ದರಿಂದ ಅವರ ಮಾನಸಿಕ ಮತ್ತೆ ಶಾರೀರಿಕ ಬೆಳವಣಿಗೆ ಚನ್ನಾಗಿ ನಡೆಯಬೇಕೆಂದರೆ ಆರ್ಗ್ಯಾನಿಕ್ ಆಹಾರ ಒಳ್ಳೆಯ ಸಲಹೆ. - ಪರಿಸರ ರಕ್ಷಣೆಗಾಗಿ :
ಆರ್ಗ್ಯಾನಿಕ್ ಕೃಷಿ ಮಾಡುವುದರಿಂದ ಇದು ಪರಿಸರವನ್ನು ಹಾನಿಮಾಡುವುದಿಲ್ಲ. ಬದಲಿಗೆ ಇದು ಭೂಮಿ ಮತ್ತು ನೀರನ್ನುಕಾಪಾಡುತ್ತದೆ. - ರೈತರ ಬೆಂಬಲಕ್ಕಾಗಿ :
ಆರ್ಗ್ಯಾನಿಕ್ ಕೃಷಿ ಮಾಡುವ ರೈತರಿಗೆ ಬೆಂಬಲ ಕೊಡಬೇಕು, ಇದು ಮಾಡುವುದು ತುಂಬಾ ಕಷ್ಟ. ಕೆಮಿಕಲ್ ಬಳಸಿ ಬೆಳೆ ಬೆಳೆಯುವುದು ಸುಲಭ, ಆದ್ದರಿಂದ ಆರ್ಗ್ಯಾನಿಕ್ ಕೃಷಿಗೆ ಪ್ರೋತ್ಸಾಹಿಸುವುದು ಒಳ್ಳೆಯದು. ಆಗ ನಮ್ಮ ಆರೋಗ್ಯ ಸುಧಾರಿಸುತ್ತದೆ, ನೈಸರ್ಗಿಕ ಕೃಷಿಗೆ ಬೆಂಬಲ ಕೊಟ್ಟಂತೆ ಇರುತ್ತದೆ, ಮತ್ತೆ ಒಳ್ಳೆಯ ರುಚಿಯಾದ ಆಹಾರ ತಿನ್ನಬಹುದಾಗಿದೆ.
ನಾವು ಯಾವುದೇ ಕೆಮಿಕಲ್ ಬಳಕೆ ಮಾಡುವುದಿಲ್ಲ ಆದ್ದರಿಂದ ನಾವು ಆರ್ಗ್ಯಾನಿಕ್ ಆಗಿ ಬೆಳೆಯುವ ಯಾವುದೇ ಆಹಾರ ಪಧಾರ್ಥಗಳು ಸಿಹಿಯಾಗಿ, ರುಚಿಯಾಗಿ ಇರುತ್ತವೆ.
ಆರ್ಗ್ಯಾನಿಕ್ ಆಹಾರವನ್ನು ನಾವು ಹೇಗೆ ಬಳಸಿಕೊಳ್ಳಬೇಕು
ನಮಗೆ ದಿನನಿತ್ಯ ಕೆಮಿಕಲ್ ಬಳಸಿರುವ ಹಣ್ಣು, ಸೊಪ್ಪು, ತರಕಾರಿಗಳನ್ನು ತಿಂದು ಅಭ್ಯಾಸವಾಗಿದೆ. ಆದ್ದರಿಂದ ಆರ್ಗ್ಯಾನಿಕ್ ಆಹಾರ ಪಧಾರ್ಥಗಳನ್ನು ಯಾವ ರೀತಿ ಬಳಸಬೇಕು ಎನ್ನುವ ಗೊಂದಲ ಇರುತ್ತದೆ.
ನಾನು ಹೇಳುವ ರೀತಿ ಮಾಡಿ, ಹಳ್ಳಿಯವರಾದರೆ ಸಾಧ್ಯವಾದಷ್ಟೂ ಹೊಲಗಳಿಗೆ ರಾಸಾಯನಿಕ ಗೊಬ್ಬರ ಹಾಕುವುದನ್ನು ತಪ್ಪಿಸಿ, ತಿಪ್ಪೆ ಗೊಬ್ಬರ ಬಳಸಿ ಮತ್ತೆ ಬೆಳೆಗೆ ಯಾವುದೇ ರೀತಿಯ ಕೀಟನಾಶಕ( Festicide) ಬಳಸಬೇಡಿ, ನಂತರ ಇದರಿಂದ ಬರುವ ಆಹಾರ ಪಧಾರ್ಥಗಳು ಸ್ವಲ್ಪ ಕಡಿಮೆಯಿರಬಹುದು ಆದರೆ ಅವೇ ಶ್ರೇಷ್ಠವಾದವು.
ಇನ್ನು ನಗರ/ಸಿಟಿಗಳಲ್ಲಿ ವಾಸಿಸುತ್ತಿರುವವರು ಪಾಪ ನೀವೇನು ಬೆಳೆ ಬೆಳೆಯಲು ಆಗುವುದಿಲ್ಲ. ಆದರೆ ಪಕ್ಕದ ಅಂಗಡಿಯಲ್ಲಿ ಕೊಂಡುಕೊಳ್ಳುವಾಗ ಎಚ್ಚರದಿಂದ ಕೊಂಡುಕೊಳ್ಳಿ. ಸಾಧ್ಯವಾದರೆ ಅಂಗಡಿಯವನ ಬಳಿ ಕೇಳಿ ಆರ್ಗ್ಯಾನಿಕ್ Organic Food ಪಧಾರ್ಥಗಳನ್ನು ತರಿಸಲು, ರೇಟ್ ಸ್ವಲ್ಪ ಜಾಸ್ತಿಯಾದರೂ ಪರವಾಗಿಲ್ಲ. ಸಾಧ್ಯವಾದರೆ ಅಕ್ಕ ಪಕ್ಕ ಹಳ್ಳಿಗಳಿಗೆ ಭೇಟಿ ಕೊಟ್ಟು ಅಲ್ಲಿಂದ ನೇರವಾಗಿ ಹಣ್ಣು ತರಕಾರಿ ಸೊಪ್ಪುಗಳನ್ನು ಕೊಂಡುಕೊಂಡು ಬನ್ನಿ.
ಒಂದೇ ಬಾರಿ ಎಲ್ಲಾ ಆಹಾರ ಪಧಾರ್ಥಗಳನ್ನು ಆರ್ಗ್ಯಾನಿಕ್ ಆಗಿ ತಿನ್ನಬೇಕು ಅಂತೇನಿಲ್ಲ, ಆದರೆ ಒಂದೊಂದೇ ಪಧಾರ್ಥಗಳನ್ನು ಸೇರಿಸಿಕೊಳ್ಳಿ.
ಕೆಲವೊಂದು ಮನೆಗೆ ಬೇಕಾದ ಪಧಾರ್ಥಗಳನ್ನು ಮನೆಯ ಅತ್ತಿರ ಪಾಟ್ ಗಳಲ್ಲಿ ಬೆಳೆಯಬಹುದು. ಅವೆಂದರೆ, ಕೊತ್ತಂಬರಿ, ಕುದೀನಾ, ಟೊಮೆಟೊ, ಬದನೆ, ಶುಂಠಿ, ಇತ್ಯಾದಿ.
ಮತ್ತೆ ಕೆಲವೊಂದು ಬಾರಿ ಎಚ್ಚರಿಕೆಯಿಂದ ಇರುವುದು ಮುಖ್ಯ. ಕೆಲವರು ಅಂಗಡಿಗಳಲ್ಲಿ ಆರ್ಗ್ಯಾನಿಕ್ ಆಹಾರ ಪಧಾರ್ಥಗಳೆಂದು ಹೆಚ್ಚಿನ ಬೆಳೆಗೆ ಮಾರುತ್ತಿರುತ್ತಾರೆ, ನೀವು ಗಮನವಿಟ್ಟು “Organic Certified” ಎಂಬ ಲೇಬಲ್ ಅನ್ನು ಪರಿಶೀಲನೆ ಮಾಡಬೇಕು.
Organic Food ಬಳಸಲು ಕೆಲವು ಸವಾಲುಗಳು Challenges
ಆರ್ಗ್ಯಾನಿಕ್ ಆಹಾರ ಪಧಾರ್ಥಗಳು ನಾನು ಮೇಲೆ ತಿಳಿಸಿರುವ ಹಾಗೆ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ನಮಗೆ ಗೊತ್ತಾಗಿದೆ.
ಕೆಲವೊಂದು ಸಾರಿ ಒಳ್ಳೆಯದನ್ನು ಪಡೆಯಬೇಕೆಂದರೆ ಕೆಲವೊಂದು ತ್ಯಾಗ ಮಾಡಬೇಕು ಅದೇನೆಂದು ನೋಡೋಣ.
- ಹೆಚ್ಚು ಬೆಲೆ : ಸಾಮಾನ್ಯ ಆಹಾರ ಪಧಾರ್ಥಗಳಿಗಿಂತ ಹೆಚ್ಚಿನ ಬೆಲೆ ಕೊಟ್ಟು ಇವುಗಳನ್ನು ಕೊಂಡು ಕೊಳ್ಳಬೇಕು.
- ಎಲ್ಲಾಕಡೆ ಸಿಗುವುದಿಲ್ಲ : ಈ ಆರ್ಗ್ಯಾನಿಕ್ ಪಧಾರ್ಥಗಳು ಹೆಚ್ ಹಹಿನ ಬೆಲೆ ಕೊಟ್ಟರೂ ಪರವಾಗಿಲ್ಲ ತೆಗೆದುಕೊಳ್ಳೋಣ ಎಂದರೆ ನಮ್ಮ ಅಕ್ಕ ಪಕ್ಕದ ಅಂಗಡಿಗಳಲ್ಲಿ ಸಿಗುವುದಿಲ್ಲ.
- ಕಡಿಮೆ ದಿನ ಬಾಳಿಕೆ ಬರುವುದು : ಆರ್ಗ್ಯಾನಿಕ್ ಪಧಾರ್ಥಗಳಿಗೆ ಯಾವುದೇ ಕೆಮಿಕಲ್ ಬಳಕೆ ಮಾಡಿರುವುದಿಲ್ಲ ಮತ್ತೆ preservatives ಬಳಸಿರುವುದಿಲ್ಲ ಅದಕ್ಕೆ ಇವು ತುಂಬಾ ದಿನ ಪ್ರೆಶ್ ಆಗಿ ಇರುವುದಿಲ್ಲ. ಬೇಗ ಹಾಳಾಗುತ್ತವೆ.
ಇಷ್ಟೆಲ್ಲಾ ಸವಾಲುಗಳು ಆರ್ಗ್ಯಾನಿಕ್ ಆಹಾರ ಪಧಾಅರ್ಥಗಳಿಗೆ ಇವೆ. ಆದರೆ ನನ್ನನ್ನು ಕೇಳಿದರೆ ನಮ್ಮ ದೇಹ ನಮ್ಮ ಆರೋಗ್ಯಕ್ಕಿಂತ ಈ ಸವಾಲುಗಳೀನೂ ದೊಡ್ಡವಲ್ಲ. ನಾವು ಮನಸ್ಸು ಮಾಡಿದರೆ, ಇವನ್ನೆಲ್ಲಾ ಮೆಟ್ಟಿ ನಿಂತು ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರುವಹಾಗೆ ಮಾಡಿಕೊಳ್ಳಬಹುದು.
FAQs :
Organic Food ಅಂದರೆ ಏನು?
ಆರ್ಗಾನಿಕ್ ಫುಡ್ ಅಂದರೆ ಯಾವುದೆಲ್ಲಾ ಆಹಾರವನ್ನ ನೈಸರ್ಗಿಕವಾಗಿ ರಾಸಾಯನಿಕಗಳನ್ನು ಬಳಸದೇ ಬೆಳೆಯುತ್ತೇವೆಯೋ, ಅದನ್ನೇ ಆರ್ಗ್ಯಾನಿಕ್ ಫುಡ್ ಎನ್ನುತ್ತೇವೆ.
Organic Food ಬೆಲೆ ಜಾಸ್ತಿ ಇರುತ್ತಾ?
ಹೌದು, ಯಾಕೆಂದರೆ ಆರ್ಗ್ಯಾನಿಕ್ ಫುಡ್ ಅನ್ನು ತಯಾರು ಮಾಡಲು ಅಥವಾ ಬೆಳೆಯಲು ಸ್ವಲ್ಪ ಕಷ್ಟ. ಮತ್ತೆ ಇದು ನಿಧಾನವಾಗಿ ಪಸಲನ್ನು ಕೊಡುತ್ತದೆ, ಮತ್ತೆ ಕಡಿಮೆ ಪಸಲನ್ನು ಕೊಡುತ್ತದೆ, ಆದ್ದರಿಂದ ಇದರ ಬೆಲೆ ಬೇರೆ ಉತ್ಪನ್ನಗಳಿಗಿಂತ ಸ್ವಲ್ಪ ಜಾಸ್ತಿ ಇರುತ್ತೆ.
What is Zero Budget Natural Farming?
ಇದು ಆರ್ಗ್ಯಾನಿಕ್ ಕೃಷಿ ರೀತಿ ಕಾರ್ಯ ನಿರ್ವಹಿಸುತ್ತೆ, ಇದರಲ್ಲಿ ಸಹ ಯಾವುದೇ ಕೆಮಿಕಲ್ ಬಳಸದೇ ನೈಸರ್ಗಿಕವಾಗಿ ಕೃಷಿ ಮಾಡಲಾಗುತ್ತೆ. ಜೀವಾಮೃತ, ಬೀಜಾಮೃತ, Mulching, ಮಣ್ಣಿನ ಫಲವತ್ತತೆಯ ಮೇಲೆ ಈ ರೀತಿಯ ವಿಧಾನ ಅಳವಡಿಸಬಹುದು.
