6 Health Benifits of Eating Raagi Mudde ||ರಾಗಿ ಮುದ್ದೆ ತಿನ್ನುವುದರಿಂದ ದೇಹಕ್ಕೆ ಸಿಗುವ 6 ಆರೋಗ್ಯ ಲಾಭಗಳು.

Spread the love

ಕೇವಲ ಹಳ್ಳಿ ಪ್ರದೇಶಗಳಲ್ಲಿ ಜನಪ್ರಿಯವಾಗಿದ್ದ ರಾಗಿ ಮುದ್ದೆ Raagi Mudde ಇಂದು ಆರೋಗ್ಯದ ದೃಷ್ಟಿಯಿಂದ ಪ್ರತೀ ಮನೆಯಲ್ಲೂ ತಿನ್ನುವ ಆಹಾರ ಪಧಾರ್ಥವಾಗಿದೆ.

Raagi mudde health benifits.

ನಮ್ಮ ಜನ ಇತ್ತೀಚಿಗೆ ಹೆಚ್ಚು ಆರೋಗ್ಯದ ಬಗ್ಗೆ ಕಾಳಜಿ ತೋರಿಸಲು ಶುರು ಮಾಡಿದ್ದಾರೆ. ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನ ಜಂಕ್ ಫುಡ್, ಪಾಸ್ಟ್ ಫುಡ್, ಪ್ರೊಸಸ್ಡ್ ಫುಡ್ ಇವುಗಳನ್ನು ತಿಂದು ಆರೋಗ್ಯ ಹಾಳು ಮಾಡಿಕೊಂಡು ಈಗ ರಾಗಿ ಮುದ್ದೆಯ ಅನುಕೂಲ ಪಡೆಯಲು ಇಷ್ಟಪಡುತ್ತಾರೆ.
ನಮ್ಮ ಕರ್ನಾಟಕದಲ್ಲಿ ರಾಗಿ ಮುದ್ದೆ ತುಂಬಾ ಫೇಮಸ್ ಆಗಿದೆ ಅದರಲ್ಲೂ ನಮ್ಮ ದಕ್ಷಿಣ ಕರ್ನಾಟಕದ ಜನ ಪ್ರತೀ ಮನೆಯಲ್ಲೂ ಇದನ್ನು ಮುದ್ದೆಯ ರೂಪದಲ್ಲಿ ತಿನ್ನುತ್ತಾರೆ. ಉತ್ತರ ಕರ್ನಾಟಕದ ಜನ ಜೋಳವನ್ನು ಹೆಚ್ಚು ಬಳಸುತ್ತಾರೆ.
ರಾಗಿ ಮುದ್ದೆ ತಿನ್ನುವುದರಿಂದ ಕೇವಲ ಹೊಟ್ಟೆ ತುಂಬುತ್ತದೆ ಎಂದಲ್ಲ, ಇದನ್ನು ತಿನ್ನುವುದರಿಂದ ದೇಹಕ್ಕೆ ಶಕ್ತಿಯನ್ನು ಕೊಡುವುದರ ಜೊತೆಗೆ, ದೇಹಕ್ಕೆ ಬರುವ ಅನೇಕ ಕಾಯಿಲೆಗಳನ್ನು ನಾಶಮಾಡುತ್ತದೆ. ಇದು ಪೌಷ್ಟಿಕ ಆಹಾರವಾಗಿಯೂ ಕೆಲಸಮಾಡುತ್ತದೆ,ಇದರಲ್ಲಿ ಕ್ಯಾಲ್ಶಿಯಂ, ಐರನ್, ಫೈಬರ್, ಪ್ರೋಟೀನ್ ಮತ್ತು ಅನೇಕ ಪೋಷಕಾಂಶಗಳು ಇರುತ್ತವೆ ಮತ್ತೆ ರೋಗ ನಿರೋಧಕ ಶಕ್ತಿಯನ್ನು ಕೊಡುತ್ತದೆ.

ಈ ಬ್ಲಾಗ್ ನಲ್ಲಿ ರಾಗಿ Raagi ಎಂದರೇನು, ಅದರ ಪೌಷ್ಟಿಕ ಅಂಶಗಳು, ರಾಗಿ ಮಾಲ್ಟ್‌ನ ಲಾಭಗಳು, ರಾಗಿ ಬೆಳೆಯುವ ರಾಜ್ಯಗಳು ಹಾಗೂ ರಾಗಿ ಮುದ್ದೆಯ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

ರಾಗಿ ಎನ್ನುವುದು ಒಂದು ಸಿರಿಧಾನ್ಯ (Millet). ಇದನ್ನ ಇಂಗ್ಲಿಷ್ನಲ್ಲಿ Finger Millet ಅಂತ ಕರೆಯುತ್ತಾರೆ. ನಮ್ಮ ಕರ್ನಾಟಕದಲ್ಲಿ ಇದನ್ನ ಜಾಸ್ತಿ ಬೆಳೆಯುವುದರಿಂದ ಭಾರತದಲ್ಲಿ ನಮ್ಮ ರಾಜ್ಯಕ್ಕೆ ವಿಶೇಷ ಸ್ಥಾನ ಇದೆ.

ರಾಗಿ ಬೆಳೆಯುವುದು ಬರಡು ಭೂಮಿಯಲ್ಲಿ ಅಂದರೆ ಮಳೆಯಾಧಾರಿತ ಪ್ರದೇಶದಲ್ಲಿ ಬೆಳೆಯಬಹುದು. ಆದ್ದರಿಂದ ನೀರಿಲ್ಲದ ರೈತರಿಗೆ ಅನುಕೂಲ. ಇದು ನಾಲ್ಕು ತಿಂಗಳ ಬೆಳೆ, ವರ್ಷಕ್ಕೆ ಒಂದು ಸಾರಿ ಬೆಳೆಯಬಹುದು. ಕೆಲವರು ನೀರಾವರಿ ಮಾಡಿ ರಾಗಿ ಬೆಳೆಯುತ್ತಾರೆ ಅಂತಹವರು ವರ್ಷಕ್ಕೆ ಎರಡು ಸರಿ ಬೆಳೆಯುತ್ತಾರೆ.

ರಾಗಿಯಲ್ಲಿ ತುಂಬಾ ಆರೋಗ್ಯಕ್ಕೆ ಪ್ರಯೋಜನ ಇರುವುದರಿಂದ, ರಾಗಿ ಹಿಟ್ಟನ್ನು ಬಳಸಿ ರಾಗಿ ಮುದ್ದೆ, ರಾಗಿ ರೊಟ್ಟಿ, ರಾಗಿ ದೋಸೆ, ರಾಗಿ ಮಾಲ್ಟ್, ರಾಗಿ ಉಪ್ಪಿಟ್ಟು, ಇನ್ನೂ ಅನೇಕ ಆಹಾರ ಮಾಡಿ ತಿನ್ನುತ್ತಾರೆ.

ಹಿಂದಿನ ನಮ್ಮ ಅಜ್ಜನವರ ಕಾಲದಲ್ಲಿ, ರಾಗಿ ಮುದ್ದೆ ತಿಂದು ಹೊಲಕ್ಕೆ ಹೋಗಿ ಕೆಲಸ ಮಾಡುತ್ತಿದ್ದರು. ಕಾರಣ ಅವರಿಗೆ ಒಳ್ಳೆಯ ಶಕ್ತಿ ರಾಗಿ ಮುದ್ದೆಯಿಂದ ಸಿಗುತ್ತಿತ್ತು. ವೈಜ್ಞಾನಿಕ ಜಗತ್ತು ಕೂಡ ಇಂದು ರಾಗಿಯ ಮಹತ್ವವನ್ನು ಒಪ್ಪಿಕೊಂಡಿದೆ.

ರಾಗಿ ಕಾರಿಫ್ ಸೀಸನ್ ಅಲ್ಲಿ ಮಾತ್ರ ಬೆಳೆಯುತ್ತಾರೆ. ಕೆಲವು ಕಡೆ ರಾಬಿ ಸೀಸನ್ ಅಲ್ಲೂ ಬೆಳೆಯುತ್ತಾರೆ.

ರಾಗಿಯಲ್ಲಿರುವ ಪೌಷ್ಟಿಕಾಂಶಗಳು

ರಾಗಿ ಒಳ್ಳೆಯ ಪೌಷ್ಟಿಕ ಆಹಾರವಾಗಿದೆ. ಇದರಲ್ಲಿ ನಮ್ಮ ದೇಹಕ್ಕೆ ಬೇಕಿರುವ ಅನೇಕ ಪೋಷಕಾಂಶಗಳು (nutrients) ಸಿಗುತ್ತವೆ.

ರಾಗಿಯಲ್ಲಿ ಇರುವ ಪ್ರಮುಖ ಪೋಷಕಾಂಶಗಳನ್ನು ತಿಳಿಯೋಣ

ರಾಗಿಯಲ್ಲಿ ಒಳ್ಳೆಯ ಕ್ಯಾಲೋರಿ : 328 kcal ಇರುತ್ತದೆ.
ಕಾರ್ಬೋಹೈಡ್ರೇಟ್ಸ್ : 70 grams
ಪ್ರೊಟೀನ್ : 7 grams
ಫೈಬರ್ : 3.6 grams
ಕ್ಯಾಲ್ಶಿಯಂ : 300 mg
ಒಳ್ಳೆಯ ಫ್ಯಾಟ್ : 1.3 grams
ವಿಟಮಿನ್ B1 (Thiamine), ವಿಟಮಿನ್ B2 (Riboflavin) : 1.5 mg
ಜಿಂಕ್ : 2.7 mg
ಎನರ್ಜಿ : 344 grams

ಈ ಎಲ್ಲ ಅಂಶಗಳು ರಾಗಿಯಲ್ಲಿ ಇರುವುದರಿಂದ ರಾಗಿ ಹಾಲಿಗಿಂತಲ್ಲೂ ಪೌಷ್ಟಿಕವಾಗಿದೆ. ಇದೇ ಕಾರಣದಿಂದ ಚಿಕ್ಕ ಮಕ್ಕಾಲಿಗೆ ರಾಗಿ ಸರಿ ಮಾಡಿ ತಿನ್ನಿಸುತ್ತಾರೆ.

ರಾಗಿ ಮಾಲ್ಟ್‌ನ Raagi Malt ಲಾಭಗಳು

ರಾಗಿ ಮುದ್ದೆಯನ್ನು ಜನ ಎಷ್ಟು ಇಷ್ಟ ಪಡುತ್ತಾರೋ ಅಷ್ಟೇ ರಾಗಿ ಮಾಲ್ಟನ್ನು ಇಷ್ಟ ಪಡುತ್ತಾರೆ. ಇದು ನಮ್ಮ ದೇಹವನ್ನು ತಂಪಾಗಿಸುವುದರ ಜೊತೆಗೆ ಆರೋಗ್ಯವಾಗಿಡುತ್ತದೆ.

1. ದೇಹಕ್ಕೆ ತಕ್ಷಣ ಶಕ್ತಿ ನೀಡುತ್ತದೆ :
ಬೆಳಿಗ್ಗೆ ಎದ್ದು ಹಾಲು ಕುಡಿಯುವ ಬದಲು ಒಂದು ಗ್ಲಾಸ್ ರಾಗಿ ಮಾಲ್ಟಾನ್ನು ಕುಡಿದರೆ ದೇಹ ತಂಪಾಗಿರುತ್ತದೆ, ಜೊತೆಗೆ ಒಳ್ಳಯ ಶಕ್ತಿ ಸಿಗುತ್ತದೆ, ಮತ್ತೆ ಊಟ ಮಾಡುವವರೆಗೂ ಸುಸ್ತಾಗುವುದಿಲ್ಲ. ದಿನಕ್ಕೆ ಒಂದು ಗ್ಲಾಸ್ ಕುಡಿದರೆ ಸಾಕು.

2. ತೂಕ ಇಳಿಸಲು ಸಹಕಾರಿ :
ರಾಗಿ ಮಾಲ್ಟ್‌ನಲ್ಲಿ ಫೈಬರ್ ಅಂಶ ಜಾಸ್ತಿಇರುವುದರಿಂದ ಹೊಟ್ಟೆ ಬೇಗ ತುಂಬಿದ ಅನುಭವವಾಗುತ್ತದೆ. ಇದರಿಂದ ಊಟ ಹೆಚ್ಚು ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ. ಇದರಿಂದ ಬೇಗ ತೂಕ ಕಡಿಮೆ ಮಾಡಬಹುದು.

3. ಜೀರ್ಣಕ್ರಿಯೆ ಸುಧಾರಿಸುತ್ತದೆ :
ಕೆಲವರಿಗೆ ಏನು ತಿಂದರೂ ಸರಿಯಾಗಿ ಜೀರ್ಣ ಆಗುವುದಿಲ್ಲ ಅಂತಹವರು ರಾಗಿ ಮುದ್ದೆಯ Raagi Mudde ಬದಲಿಗೆ ಬರೀ ರಾಗಿ ಗಂಜಿ ಮಾಡಿ ಕುಡಿದರೆ ಜೀರ್ಣ ಕ್ರಿಯೆ ಸುಧಾರಿಸುತ್ತದೆ. ಮತ್ತೆ ಮಲಬದ್ಧತೆ (Constipation) ಕಡಿಮೆಯಾಗುತ್ತದೆ.

4. ಮಕ್ಕಳ ಬೆಳವಣಿಗೆಗೆ ಉತ್ತಮ :
ಚಿಕ್ಕ ಮಕ್ಕಳಲ್ಲಿ ತಾಯಿಯ ಎದೆಹಾಲು ಕೊಡುವುದರ ಜೊತೆಗೆ, ಸ್ವಲ್ಪ ದೊಡ್ಡವರಾದಾಗ ರಾಗಿ ಮಾಲ್ಟ್ ಮಾಡಿ ಕುದಿಸಿದರೆ ದೇಹದ ಮೂಳೆಗಳು ಗಟ್ಟಿಯಾಗುತ್ತವೆ. ಇದರಲ್ಲಿರುವ ಪ್ರೊಟೀನ್, ಕ್ಯಾಲ್ಶಿಯಂ, ಐರನ್ ಅಂಶ ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

5. ಬೇಸಿಗೆಯಲ್ಲಿ ದೇಹ ತಂಪಾಗಿರಲು ಸಹಾಯ :
ರಾಗಿ ಮಾಲ್ಟ್ ಕುಡಿಯುವುದರಿಂದ ಬೇಸಿಗೆಯಲ್ಲಿ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಇದು ತಂಪು ಪಧಾರ್ಥವಾಗಿದೆ. ಆದ್ದರಿಂದ ಜನ ಇದನ್ನು ಜಾಸ್ತಿ ಕುಡಿಯುತ್ತಾರೆ.

Raagi malt Benifits

ನಮ್ಮ ದೇಶದಲ್ಲಿ ರಾಗಿ ಬೆಳೆಯುವ ರಾಜ್ಯಗಳು

ಭಾರತದಲ್ಲಿ ಅನೇಕ ರಾಜ್ಯಗಳಲ್ಲಿ ರಾಗಿ ಬೆಳೆಯುತ್ತಾರೆ. ಅದರಲ್ಲೂ ನಮ್ಮ ದಕ್ಷಿಣ ಭಾರತದಲ್ಲಿ ಜಾಸ್ತಿ ಬೆಳೆಯುತ್ತಾರೆ.

ಕರ್ನಾಟಕ :
ನಮ್ಮ ಕರ್ನಾಟಕದಲ್ಲಿ ಹೆಚ್ಚು ರಾಗಿ ಬೆಳೆಯುತ್ತಾರೆ. ದೇಶದ ಒಟ್ಟು ಬೆಳೆಯುವುದರಲ್ಲಿ ಕರ್ನಾಟಕದಲ್ಲೇ ಶೇ. 60-70% ಬೆಳೆಯುತ್ತಾರೆ. ಅದರಲ್ಲಿ ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ, ಈ ಬಾಗದಲ್ಲಿ ಜಾಸ್ತಿ ಬೆಳೆಯುತ್ತಾರೆ.
ಇದನ್ನ ಬಿಟ್ಟು ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಉತ್ತಾರಾಖಂಡ ರ್ರಾಜ್ಯಗಳಲ್ಲಿ ಸ್ವಲ್ಪ ಸ್ವಲ್ಪ ರಾಗಿ ಬೆಳೆಯುತ್ತಾರೆ.
ರಾಗಿ ಬೆಳೆಯಲು ಅಷ್ಟೇನು ನೀರು ಬೇಕಾಗುವುದಿಲ್ಲ ಆದ್ದರಿಂದ ಎಲ್ಲೇಲ್ಲಿ ನೀರಿನ ಅಭಾವ ಇರುತ್ತದೆ, ಅಂತ ಪ್ರದೇಶಗಳಲ್ಲಿ ಜನರು ರಾಗಿಯನ್ನು ಅವಲಂಬಿಸಿರುತ್ತಾರೆ.

ರಾಗಿ ಮುದ್ದೆ Raagi Mudde ತಿನ್ನುವುದರಿಂದ ದೇಹದ ಆರೋಗ್ಯ

1. ದೇಹದ ಮೂಳೆಗಳನ್ನು ಬಲಪಡಿಸುತ್ತದೆ :
ರಾಗಿಯಲ್ಲಿ ಹೆಚ್ಚು ಕ್ಯಾಲ್ಶಿಯಂ ಅಂಶ ಇರುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಚಿಕ್ಕ ಮಕ್ಕಳಿಂದ ರಾಗಿಯನ್ನು ಮಾಲ್ಟ್ ಅಥವಾ ಮುದ್ದೆ ಮಾಡಿ ತಿಂದರೆ ಒಳ್ಳೆಯ ಆರೋಗ್ಯ ಲಾಭಗಳು ಸಿಗುತ್ತವೆ.

2. ಸಕ್ಕರೆ ಕಾಯಿಲೆಗೆ ಅನುಕೂಲ :
ಅನ್ನ ತಿನ್ನುವುದರಿಂದ ದೇಹದಲ್ಲಿನ ಸಕ್ಕರೆ ಪ್ರಮಾಣ ಬೇಗ ಹೆಚ್ಚಾಗುತ್ತದೆ. ಆದರೆ ರಾಗಿ ಮುದ್ದೆ ತಿನ್ನುವುದರಿಂದ ಇದು ನಿಧಾನವಾಗಿ ಜೀರ್ಣವಾಗುತ್ತದೆ. ಮತ್ತೆ ರಕ್ತದಲ್ಲಿನ ಸಕ್ಕರೆ ಅಂಶ ಬೇಗ ಜಾಸ್ತಿಯಾಗುವುದಿಲ್ಲ. ಆದ್ದರಿಂದ ಮಧುಮೇಹ ಇರುವವರು ರಾಗಿ ಮುದ್ದೆ ತಿನ್ನಬೇಕು ಎಂದು ಡಾಕ್ಟರ್ ಹೇಳುತ್ತಾರೆ.

3. ತೂಕ ಇಳಿಸಲು ಸಹಾಯ :
ಇದರಲ್ಲಿ ಹೆಚ್ಚಿನ ಫೈಬರ್ ಅಂಶ ಇರುವುದರಿಂದ ಸ್ವಲ್ಪ ತಿಂದರೆ ಹೊಟ್ಟೆ ತುಂಬಿದ ಅನುಭವ ಆಗುತ್ತದೆ. ಮತ್ತೆ ಬೇರೆ ಸ್ನಾಕ್ಸ್ ಪಧಾರ್ಥಗಳನ್ನು ತಿನ್ನಬೇಕು ಅನಿಸುವುದಿಲ್ಲ, ಆದ್ದರಿಂದ ಬೇಗ ತೂಕ ಕಡಿಮೆ ಮಾಡಬಹುದು.

4. ರಕ್ತಹೀನತೆ (anemia) ತಡೆಯುತ್ತದೆ :
ರಾಗಿಯಲ್ಲಿ ಐರನ್ ಅಂಶ ಇರುವುದರಿಂದ ಅನೀಮಿಯಾ ಸಮಸ್ಯೆ ಬರುವುದಿಲ್ಲ. ಅನ್ನವನ್ನು ಜಾಸ್ತಿ ತಿನ್ನುವುದರಿಂದ ಈ ಸಮಸ್ಯೆ ಜಾಸ್ತಿಯಾಗುತ್ತದೆ. ಆದ್ದರಿಂದ ವಿಶೇಷವಾಗಿ ಮಹಿಳೆಯರಲ್ಲಿ ಹಾರ್ಮೋನ್ ಸಮಸ್ಯೆ ಜಾಸ್ತಿ ಇರುವುದರಿಂದ ಅವರು ರಾಗಿ ಮುದ್ದೆ ತಿನ್ನುವುದು ಮುಖ್ಯ.

5. ಹೃದಯದ ಆರೋಗ್ಯ ಕಾಪಾಡುತ್ತದೆ :
ಇತ್ತೀಚಿಗೆ ತುಂಬಾ ಹಾರ್ಟ್ ಅಟ್ಯಾಕ್ ಸುದ್ದಿಗಳು ಜಾಸ್ತಿಯಾಗುತ್ತಿವೆ. ಅದು ಜಂಕ್ ಫುಡ್ ತಿನ್ನುವುದರಿಂದ ಆಗುತ್ತಿರುವುದೆಂದು ಡಾಕ್ಟರ್ ಹೇಳುತ್ತಾರೆ. ಆದ್ದರಿಂದ ರಾಗಿಯಲ್ಲಿ ಇರುವ ಫೈಬರ್ ಮತ್ತು ಆಂಟಿಆಕ್ಸಿಡೆಂಟ್ಸ್ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಮತ್ತೆ ಯಾವುದೇ ಹೃದಯ ಸಂಬಂದಿತ ಕಾಯಿಲೆಗಳನ್ನು ದೂರ ಮಾಡುತ್ತದೆ.

6. ದೇಹಕ್ಕೆ ಹೆಚ್ಚುಕಾಲ ಶಕ್ತಿ ನೀಡುತ್ತದೆ :
ರಾಗಿ ಮುದ್ದೆ ತಿನ್ನುವುದರಿಂದ ದೇಹಕ್ಕೆ ಹೆಚ್ಚು ಶಕ್ತಿ ಬರುತ್ತದೆ, ಯಾಕೆಂದರೆ ಅದು ಸ್ವಲ್ಪ ನಿದಾನವಾಗಿ ಜೀರ್ಣವಾಗುವುದರಿಂದ ದೇಹದಲ್ಲಿ ಹೆಚ್ಚು ಸಮಯ ಶಕ್ತಿ ಇರುತ್ತದೆ. ಜಾಸ್ತಿ ಕಷ್ಟದ ಕೆಲಸ ಮಾಡುವವರು ಮುದ್ದೆ ತಿನ್ನುವುದರಿಂದ ಬೇಗ ಸುಸ್ತಾಗುವುದಿಲ್ಲ.

ರಾಗಿಯಲ್ಲಿ ಅಮೈನೋ ಆಸಿಡ್ ಇರುತ್ತದೆ, ಇದು ಕೂದಲಿನ ಬೆಳವಣಿಗೆ ಮತ್ತೆ ಚರ್ಮದ ಆರೋಗ್ಯಕ್ಕೂ ಒಳ್ಳೆಯದು.

ರಾಗಿ ಮುದ್ದೆ Raagi Mudde ಯಾರಿಗೆ ಹೆಚ್ಚು ಒಳ್ಳೆಯದು ?

ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿರುವವರು, ಚಿಕ್ಕಮಕ್ಕಳು, ಗರ್ಭಿಣಿ ಮಹಿಳೆಯರು, ಸಕ್ಕರೆ ಕಾಯಿಲೆ ಇರುವವರು, ವಯಸ್ಸಾದವರು, ದಪ್ಪ ಇರುವವರು, ಹೆಚ್ಚು ಕೆಲಸ ಮಾಡುವವರು, ಎಲ್ಲರೂ ರಾಗಿ ಮುದ್ದೆ ತಿನ್ನುವುದರಿಂದ ದೇಹಕ್ಕೆ ಒಳ್ಳೆಯ ಲಾಭ ಸಿಗುತ್ತದೆ.

ರಾಗಿ ಮುದ್ದೆ ಮಾಡುವ ಸುಲಭ ವಿಧಾನ

ಬೇಕಾಗುವ ಪದಾರ್ಥಗಳು :
ರಾಗಿ ಹಿಟ್ಟು – 1 ಜಾಮೂನ್ ಕಪ್
ನೀರು – 2 ಗ್ಲಾಸ್
ಉಪ್ಪು – ಸ್ವಲ್ಪ

ಮಾಡುವ ವಿಧಾನ :
ಒಂದು ಪಾತ್ರೆಯಲ್ಲಿ ನೀರು ಕುದಿಸಿ.
ಅದಕ್ಕೆ ಸ್ವಲ್ಪ ಉಪ್ಪು ಹಾಕಿ.
ಸ್ವಲ್ಪ ರಾಗಿ ಹಿಟ್ಟು ಸೇರಿಸಿ, ಕುದಿಸಿ.
ಆಮೇಲೆ ನಿಧಾನವಾಗಿ ಉಳಿದ ಹಿಟ್ಟು ಸೇರಿಸಿ.
ಗಟ್ಟಿಯಾಗುವವರೆಗೆ ಮತ್ತೆ ಬಿಳಿ ಹಿಟ್ಟು ಕಾಣಿಸದ ಹಾಗೆ ಚೆನ್ನಾಗಿ ಕಲಸಿ.
ಮುದ್ದೆ ತಯಾರಿಸಿ ಬಿಸಿ ಬಿಸಿಯಾದ ಸಾಂಬಾರಿನಲ್ಲಿ Raagi mudde ತಿನ್ನಿ.

ಕೊನೆಯದಾಗಿ ನನ್ನ ವೈಯಕ್ತಿಕ ಕಿವಿ ಮಾತು ಏನೆಂದರೆ ನಮ್ಮ ಹಿರಿಯರು ಹೇಳಿರುವ ಹಾಗೆ ‘ರಾಗಿ ಮುದ್ದೆ ತಿಂದರೆ ರೋಗವಿಲ್ಲ‘ ಎನ್ನುವ ಗಾದೆಯಂತೆ, ಅನೇಕ ಜನರು ರಾಗಿ ಮುದ್ದೆಯನ್ನು ಇಷ್ಟ ಪಟ್ಟು ತಿನ್ನುತ್ತಾರೆ.
ಜಿಮ್ ಮಾಡುವವರು, ಡಯಟ್ ಮಾಡುವವರು, ಆರೋಜಿದ ಬಗ್ಗೆ ಕಾಳಜಿ ಇರುವವರು ಬಯಸುವ ಏಕೈಕ ಆಹಾರ ರಾಗಿ ಮುದ್ದೆ, ಮತ್ತು ರಾಗಿ ಮಾಲ್ಟ್.
ಇಂದು ರಾಗಿ ಮುದ್ದೆ ಜಗತ್ ಪ್ರಸಿದ್ದಿಯಾಗಿದೆ. ಇದು ನಮ್ಮ ಕರ್ನಾಟಕದ ಹೆಮ್ಮೆಯ ವಿಷಯ. ರಾಗಿ ಕೇವಲ ಆಹಾರವಾಗಿ ಉಳಿದಿಲ್ಲ ಬದಲಿಗೆ ಆರೋಗ್ಯವನ್ನು ಕಾಪಾಡುವ ಸೀಕ್ರೆಟ್ ಪಧಾರ್ಥವಾಗಿದೆ. ದೇಹಕ್ಕೆ ಶಕ್ತಿ ಕೊಡುವುದರಿಂದ ಇಡಿದು, ಮೂಳೆಗಳ ಬಲವರ್ಧನೆ, ಮತ್ತು ತೂಕ ಕಡಿಮೆಯಾಗಲು, ಇಡೀ ರೀತಿ ಅನೇಕ ಆರೋಗ್ಯ್ ಲಾಭಗಳನ್ನು ಕೊಡುತ್ತದೆ.

FAQs :

ರಾಗಿ ಮುದ್ದೆ Raagi Mudde ತಿಂದರೆ ದೇಹದ ಹೀಟ್ ಕಡಿಮೆ ಆಗುತ್ತಾ?

ಹೌದು, ಆಯುರ್ವೇದದ ಪ್ರಕಾರ ರಾಗಿಯಲ್ಲಿ ನೈಸರ್ಗಿಕವಾಗಿ ದೇಹವನ್ನು ತಂಪಾಗಿಸುವ ಅಂಶಗಳಿರುತ್ತೆ, ರಾಗಿಯಲ್ಲಿ ಹೆಚ್ಚು ಫೈಬರ್ ಅಂಶವಿದ್ದು ತಿಂದರೆ ಜೀರ್ಣವಾಗುತ್ತದೆ.

ಹೌದು, ರಾಗಿಯಲ್ಲಿ ಸಕ್ಕರೆ ಕಾಯಿಲೆ ದೂರವಾಗುವ ಗುಣವಿದೆ, ನಾವು ರಾಗಿ ಮುದ್ದೆ ತಿಂದರೆ ಅದು ನಿಧಾನವಾಗಿ ಜೀರ್ಣವಾಗುತ್ತದೆ, ಆದ್ದರಿಂದ ರಕ್ತದಲ್ಲಿನ ಸಕ್ಕರೆ ಅಂಶ ದೇಹದ ಮೇಲೆ ಬೇಗ ರಿಯಾಕ್ಟ್ ಮಾಡುವುದಿಲ್ಲ.

ಹೌದು, ಗರ್ಭಿಣಿ ಮಹಿಳೆಯರು ಖಂಡಿತ ರಾಗಿ ಮುದ್ದೆ ತಿನ್ನಬಹುದು, ಆದರೆ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ತಿಂದರೆ ಒಳ್ಳೆಯದು, ಯಾಕೆಂದರೆ ಗರ್ಭಿಣಿಯರು ಸ್ವಲ್ಪ ಕಡಿಮೆ ವ್ಯಾಯಾಮ ಮಾಡುವುದರಿಂದ ಮಲಭದ್ದತೆ (constipation) ಆಗುವ ಲಕ್ಷಣಗಳು ಜಾಸ್ತಿ. ಆದ್ದರಿಂದ ರಾಗಿ ಮುದ್ದೆಯ ಬದಲು ರಾಗಿ ಮಾಲ್ಟ್ ಕುಡಿಯುವುದು ಸೂಕ್ತ.

1 thought on “6 Health Benifits of Eating Raagi Mudde ||ರಾಗಿ ಮುದ್ದೆ ತಿನ್ನುವುದರಿಂದ ದೇಹಕ್ಕೆ ಸಿಗುವ 6 ಆರೋಗ್ಯ ಲಾಭಗಳು.”

  1. Pingback: Organic Food Secret Health Benifits In 2026 You Never Know

Leave a Comment

Your email address will not be published. Required fields are marked *

Scroll to Top