ಯೂರಿನ್ ಇನ್ಫೆಕ್ಷನ್ (Urinary infection) ಯಾಕೆ ಬರುತ್ತದೆ? ಕಾರಣಗಳು, ಮತ್ತು ನೈಸರ್ಗಿಕ ಪರಿಹಾರಗಳು.

Spread the love

ಕೆಲವರಿಗೆ ಆಗಾಗ ಮಾತ್ರ ವಿಸರ್ಜಿಸಬೇಕು ಅಂತ ಅನಿಸುತ್ತಿರುತ್ತದೆ. ಆದರೆ ಅವರು ಪದೇ ಪದೇ ಯಾಕೆ ಎಂದು ತಡೆ ಇಡಿಯುತ್ತಾರೆ. ಕೆಲವರಲ್ಲಿ ಮೂತ್ರ ವಿಸರ್ಜಿಸುವಾಗ ನೋವು ಕಾಣಿಸಿಕೊಳ್ಳುತ್ತದೆ. ಇವೆಲ್ಲ ಯೂರಿನ್ ಇನ್ಫೆಕ್ಷನ್ ಸೋಂಕಿನ ಲಕ್ಷಣಗಳು.

ಯೂರಿನ್ ಇನ್ಫೆಕ್ಷನ್

ಯೂರಿನ್ ಇನ್ಫೆಕ್ಷನ್ ಇದನ್ನ ಯೂರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್ (UTI) ಅಂತಲೂ ಕರೆಯುತ್ತಾರೆ. ಇದು ಸಾಮಾನ್ಯವಾಗಿ ನಾವು ಮೂತ್ರವಿಸರ್ಜನೆ ಮಾಡುವ ಭಾಗದಲ್ಲಿ ಉಂಟಾಗುವ ಒಂದು ರೀತಿಯ ಸೋಂಕು.
ಇದು ಮುಖ್ಯವಾಗಿ, ಕಿಡ್ನಿ, ಯುರೇಟರ್, ಗಾಲ್ ಬ್ಲಾಡರ್, ಮತ್ತೆ ಯುರೇತ್ರಾ ಭಾಗಗಳಲ್ಲಿ ಕಾಣಿಸುತ್ತದೆ. ಈ ಸೋಂಕಿಗೆ ಮುಖ್ಯ ಕಾರಣ ಈ ಕೋಲಿ(E.coli) ಎನ್ನುವ ಬ್ಯಾಕ್ಟೇರಿಯಾ.
ಈ ಸಮಸ್ಯೆ ಪುರುಷರು, ಮಕ್ಕಳು, ಎಲ್ಲಾ ವಯಸ್ಸಿನವರಲ್ಲಿ ಇರುತ್ತದೆ, ಆದರೆ ಮಹಿಳೆಯರಲ್ಲಿ ಜಾಸ್ತಿ ಕಂಡುಬರುತ್ತದೆ.
ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯಲಿಲ್ಲ ಅಂದರೆ ಗಂಭೀರ ಸಮಸ್ಯೆಯಾಗಿ ದೇಹದ ಆರೋಗ್ಯವನ್ನು ಹಾಳುಮಾಡುತ್ತದೆ.

ಮೂತ್ರ ವಿಸರ್ಜನೆ ಅಂದರೆ ಸರಳವಾಗಿ ತಿಳಿಯಬೇಕೆಂದರೆ ಕಿಡ್ನಿ ನಮ್ಮ ರಕ್ತದಿಂದ ಮಲಿನವಾದ ಅಥವಾ ಬೇಡದ ವಸ್ತುಗಳನ್ನು ಮತ್ತೆ ನೀರನ್ನು ಹೊರಹಾಕುವ ಪ್ರಕ್ರಿಯೆ. ಮೂತ್ರವು ನಮ್ಮ ಯೂರಿನರಿ ನಾಳದ ಮೂಲಕ ಯಾವುದೇ ಕಂಟ್ಯಾಮಿನೇಷನ್ ಅಥವಾ ಮಾಲಿನ್ಯವಿಲ್ಲದೆ ಬರುತ್ತದೆ, ಆದರೂ ಕೆಲವೊಂದು ಸಂದರ್ಭದಲ್ಲಿ ಅದು ಬ್ಯಾಕ್ಟೀರಿಯಾದಿಂದ ಇನ್ಫೆಕ್ಷನ್ ಉಂಟಾಗಿ ತೊಂದರೆ ಕೊಡುತ್ತದೆ ಅದನ್ನೇ ಯೂರಿನರಿ ಟ್ರಾಕ್ಟ್ ಇನ್ಫೆಕ್ಷನ್ ಎನ್ನುತ್ತೇವೆ.

ಯೂರಿನ್ ಇನ್ಫೆಕ್ಷನ್ ಗೆ ಹಲವಾರು ಕಾರಣಗಳಿವೆ, ಅದರಲ್ಲಿ ಪ್ರಮುಖ ಕಾರಣಗಳನ್ನ ನೋಡೋಣ:
1. ಬ್ಯಾಕ್ಟಿರಿಯಾದಿಂದ ಬರುವ ಸೋಂಕುಗಳು.
ಮೂತ್ರವಿಸರ್ಜಿಸುವ ಭಾಗದಲ್ಲಿ ಪೈಪ್ ರೀತಿಯ ನಾಳ ಇದ್ದು ಇದಕ್ಕೆ ಬ್ಯಾಕ್ಟಿರಿಯಾ ಸೇರಿಕೊಂಡಾಗ ಸೋಂಕು ಉಂಟಾಗುತ್ತದೆ. ಇದು ಮೂತ್ರ ವಿಸರ್ಜಿಸುವ ಭಾಗದಲ್ಲಿ ನೋವು, ಮತ್ತು, ಉರಿಯ ಅನುಭವವನ್ನು ಉಂಟು ಮಾಡುತ್ತದೆ. ಇದಕ್ಕೆ ಕಾರಣವಾಗುವ ಬ್ಯಾಕ್ಟಿರಿಯಾ E.coli ಎನ್ನುವುದು.

2. ವೈಯಕ್ತಿಕ ಸ್ವಚ್ಛತೆ ಇಲ್ಲದಿರುವುದು.
ನಾವು ಯೂರಿನ್ ಮಡಿದ ನಂತರ ಸರಿಯಾಗಿ ನೀರಿನಿಂದ ತೊಳೆಯದೇ ಬಿಡುವುದರಿಂದ ಆ ಭಾಗದಲ್ಲಿ ಸೋಂಕು ವೇಗವಾಗಿ ಹರಡುತ್ತದೆ.

3. ಕಡಿಮೆ ನೀರು ಕುಡಿಯುವುದು.
ನಮ್ಮ ದೇಹದಲ್ಲಿ ಹಲವಾರು ಬ್ಯಾಕ್ಟಿರಿಯಾ ಗಳು ಇದ್ದು ಇದರಲ್ಲಿ ಕೆಟ್ಟ ಬ್ಯಾಕ್ಟಿರಿಯಾ ಮೂತ್ರದ ಮೂಲಕ ಹೊರ ಹೊಗೆಬೇಕು, ಈಗಾಗಲು ನೀರು ಹೆಚ್ಚಿಗೆ ಕುಡಿಯಬೇಕು ಸರಿಯಾಗಿ ನೀರು ಕುಡಿಯದಿದ್ದರೆ ಬ್ಯಾಕ್ಟಿರಿಯಾ ಶೇಖರಣೆ ಜಾಸ್ತಿಯಾಗುತ್ತದೆ.

4. ಮೂತ್ರ ತಡೆ ಇಡಿಯುವ ಅಭ್ಯಾಸ.
ಹಲವಾರು ಕಾರಣಗಳಿಂದ ಮೂತ್ರವನ್ನು ತಡೆ ಇಡುವುದರಿಂದ ಬ್ಯಾಕ್ಟಿರಿಯಾ ಜಾಸ್ತಿಯಾಗಿ ಸೋಂಕು ಹೆಚ್ಚಾಗುತ್ತದೆ.

5. ದೇಹದಲ್ಲಿ ಇಮ್ಮ್ಯೂನ್ ಶಕ್ತಿ ಕಡಿಮೆ ಇರುವುದು.
ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ, ಅಥವಾ ಸಕ್ಕರೆ ಕಾಯಿಲೆ, ಬಿಪಿ ಇನ್ನಿತರೇ ಕಾಯಿಲೆಗಳು ಜಾಸ್ತಿ ಇದ್ದರೆ ಸೋಂಕು ಬೇಗ ಬರುತ್ತದೆ.

6. ಲೈಂಗಿಕ ಕ್ರಿಯೆ.
ಕೆಲವರಲ್ಲಿ ಲೈಂಗಿಕ ಕ್ರಿಯೆಯ ನಂತರ ಬ್ಯಾಕ್ಟಿರಿಯಾ ಸಂಗ್ರಹ ಜಾಸ್ತಿ ಆಗಿ ಅದು ಯೂರಿನರಿ ಸೋಂಕಿಗೆ ನೇರ ಕಾರಣವಾಗುತ್ತದೆ.

7. ಸ್ತ್ರೀಯ ಅನಾಟಮಿ ಕಾರಣ.
ಮಹಿಳೆಯರಲ್ಲಿ ಯುರೆತ್ರಾ ರಚನೆ ಪುರುಷರಿಗಿಂತ ಚಿಕ್ಕದಾಗಿರುತ್ತದೆ, ಈ ಕಾರಣದಿಂದ ಬ್ಯಾಕ್ಟಿರಿಯಾ ಸುಲಭವಾಗಿ ಪ್ರವೇಶಿಸಿ ಸೋಂಕಿಗೆ ಕಾರಣವಾಗುತ್ತದೆ.

8. ಮೆನೋಪಾಸ್.
ಋತುಚಕ್ರ ನಿಂತಿರುವ ಮಹಿಳೆಯರಲ್ಲಿ, ಈಸ್ಟ್ರೋಜನ್ ಕಡಿಮೆ ಆಗುವುದರಿಂದ ಬ್ಯಾಕ್ಟಿರಿಯಾ ಇಂದ ರಕ್ಷಿಸುವ ಶಕ್ತಿ ಕಳೆದುಕೊಂಡು ಕೆಲವರಲ್ಲಿ ಸೋಂಕು ಬರುತ್ತದೆ.

ಈ ಎಲ್ಲಾ ಕಾರಣಗಳಿಂದ ಮಹಿಳೆಯರಲ್ಲಿ ಯೂರಿನರಿ ಸೋಂಕು ಬರುತ್ತದೆ.

ಯೂರಿನ್ ಇನ್ಫೆಕ್ಷನ್

ಭಾರತದಲ್ಲಿ ಯೂರಿನ್ ಇನ್ಫೆಕ್ಷನ್ ಕುರಿತು ಕೆಲವೊಂದು ಅಂಕಿ ಅಂಶ:

ನಮ್ಮ ದೇಶದಲ್ಲಿ ಯೂರಿನ್ ಇನ್ಫೆಕ್ಷನ್ ಅನ್ನುವುದ ಸಾಮಾನ್ಯ ಸಮಸ್ಯೆಯಾಗಿದ್ದು, ತುಂಬಾ ಜನ ಇದರಿಂದ ಬಳಲುತ್ತಿದ್ದಾರೆ.
ಸುಮಾರು 30% ಜನ ತಮ್ಮ ಜೀವನದಲ್ಲಿ ಒಂದು ಬಾರಿಯಾದರೂ ಯೂರಿನ್ ಇನ್ಫೆಕ್ಷನ್ UTI ಗೆ ಒಳಪಟ್ಟಿರುತ್ತಾರೆ.
ಪುರುಷರಿಗಿಂತ ಮಹಿಳೆಯರಲ್ಲಿ ಇದು ಜಾಸ್ತಿ ಕಂಡು ಬರುತ್ತದೆ.
ಸುಮಾರು ಶೇ.50% ಮಹಿಳೆಯರು ತಮ್ಮ ಜೀವನದಲ್ಲಿ ಒಂದು ಸರಿಯಾದರೂ ಯೂರಿನ್ ಇನ್ಫೆಕ್ಷನ್ UTI ಗೆ ಒಳಪಡುತ್ತಾರೆ. ವೈದ್ಯಕೀಯ ಜಗತ್ತಿನಲ್ಲಿ ಇದೊಂದು ಸಾಮಾನ್ಯ ಸಮಸ್ಯೆಯಾಗಿ ಕಂಡುಬರುತ್ತಿದೆ.

ಆಗಾದರೆ ಯೂರಿನ್ ಇನ್ಫೆಕ್ಷನ್ ನ ಲಕ್ಷಣಗಳನ್ನ ನೋಡೋಣ.

 ಈ ಸೋಂಕು ಇದ್ದಾಗ ಕೆಲವೊಂದು ಲಕ್ಷಣಗಳನ್ನ ನಮ್ಮ ದೇಹ ತೋರ್ಪಡಿಸುತ್ತದೆ, ಅವುಗಳೆಂದರೆ;

  •  ಮೂತ್ರ ವಿಸರ್ಜಿಸುವ ಸಮಯದಲ್ಲಿ ಉರಿ, ನೋವು,ಕಂಡುಬರುವುದು.
  •  ಪದೇ ಪದೇ ಮೂತ್ರ ವಿಸರ್ಜಿಸಬೇಕು ಅನಿಸುವುದು.
  •  ಮಾತ್ರ ತುಂಬಾ ವಾಸನೆ ಬರುತ್ತಿರುವುದು.
  •  ಮೂತ್ರ ಸ್ವಲ್ಪ ಕೆಂಪು ಬಣ್ಣಕ್ಕೆ ತಿರುಗುವುದು.
  •  ಕೆಳ ಹೊಟ್ಟೆಯಲ್ಲಿ ನೋವು.
  •  ಊಟ ಮಡಿದ ತಕ್ಷಣ ವಾಂತಿ ಬರುವ ಲಕ್ಷಣ.
  •  ಅತಿಯಾದ ದಣಿವು, ಜ್ವರ ಬರುವುದು.
  •  ಊಟ ನೋಡಿದರೆ ಬೇಡ ಎನ್ನುವ ಅನುಭವ.

ಈ ಎಲ್ಲ ಲಕ್ಷಣಗಳು ಸೋಂಕಿನ ತೀವ್ರತೆಯ ಮೇಲೆ ಬದಲಾಗುತ್ತವೆ.

ಆಯುರ್ವೇದದಿಂದ ಕೆಲವೊಂದು ಲಕ್ಷಣಗಳ ನಿಯಂತ್ರಣ.

ಯೂರಿನ್ ಇನ್ಫೆಕ್ಷನ್

ಆಯುರ್ವೇದದಲ್ಲಿ ಯೂರಿನ್ ಇನ್ಫೆಕ್ಷನ್ ಅನ್ನು ‘ಮೂತ್ರ ಕೃಚ್ಛ’ ಎಂದು ಕರೆಯುತ್ತಾರೆ. ಇದು ದೇಹದಲ್ಲಿ ಕೆಲವೊಂದು ದೋಷಗಳಾದ ವಾತ, ಪಿತ್ತ, ಕಫ, ದ ಅಸಮತೋಲನದಿಂದ ಕಂಡುಬರುತ್ತದೆ ಎಂದು ಹೇಳಲಾಗುತ್ತದೆ.
ಇದಕ್ಕೆ ಆಯುರ್ವೇದದಲ್ಲಿ ಕೆಲವೊಂದು ಚಿಕಿತ್ಸೆ ವಿಧಾನಗಳಿವೆ ;

  •  ಔಷಧಿಗಳು :
    ಚಂದ್ರಪ್ರಭವತೀ, ಪುನರ್ನವ, ಶ್ವೇತ ಪರ್ಪಾತಿ ,ಇವು ಗಿಡಮೂಲಿಕೆಗಳು ಗ್ರಂಧಿಗೆ ಅಂಗಡಿಯಲ್ಲಿ ಸಿಗುತ್ತವೆ. ಇವುಗಳಿಂದ ಕಿಡ್ನಿ ಸಮಸ್ಯೆ ಕಡಿಮೆಯಾಗುತ್ತದೆ ನಂತರ ಯೂರಿನ್ ಸೋಂಕು ಕಡಿಮೆಯಾಗುತ್ತದೆ.
    ಗೋಕ್ಷುರಾದಿ, ಮೂತ್ರ ವಿರೇಚನ ಕಷಾಯ. ಇದರಿಂದ ಮೂತ್ರನಾಳ ಶುದ್ಧಿಯಾಗುತ್ತದೆ, ಉರಿ ನೋವು ಮತ್ತು ಸೋಂಕು ಕಡಿಮೆಯಾಗುತ್ತದೆ.
  •  ಪಂಚ ಕರ್ಮ ಚಿಕಿತ್ಸೆ :
    ಎನಿಮಾ ಥೆರಪಿ ಇದನ್ನು ಬಸ್ತಿ ಚಿಕಿತ್ಸೆ ಎನ್ನುವರು, ಗುಧದ್ವಾರದಿಂದ ಕೆಲವು ಆಯುರ್ವೇದ ಔಷದಿಗಳನ್ನ ಸೇರಿಸಿ ಶುಚಿಗೊಳಿಸುವ ಪದ್ಧತಿ.
  •  ಪಿತ್ತ ಮತ್ತು ವಾತ ದೋಷ ನಿಯಂತ್ರಣ :
    ದೇಹದಲ್ಲಿ ವಾತ ಪಿತ್ತ ಅಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಜಾಸ್ತಿಯಾದಾಗ ಈ ಪದ್ದತಿಯನ್ನು ಅನುಸರಿಸಿದರೆ ಸೋಂಕು ನಿಯಂತ್ರಣದಲ್ಲಿರುತ್ತದೆ.

ಇದನ್ನೂ ಓದಿ : ಪದೇ ಪದೇ ಮೂತ್ರವಿಸರ್ಜನೆಗೆ ತಿಳಿಯಬೇಕಿರುವ ಕಾರಣಗಳು.

ಯೂರಿನ್ ಇನ್ಫೆಕ್ಷನ್ ತಡೆಯಲು ನೈಸರ್ಗಿಕ ಮನೆ ಮದ್ದುಗಳು.

ಯೂರಿನ್ ಇನ್ಫೆಕ್ಷನ್

ನಾವು ಮನೆಯಲ್ಲೇ ಕೆಲವೊಂದು ನೈಸರ್ಗಿಕ ವಿಧಾನಗಳನ್ನ ಅವಲಂಬಿಸಿದರೆ ಮೂತ್ರ ಸೋಂಕು ನಿವಾರಣೆ ಮಾಡಬಹುದಾಗಿದೆ. ಅದರಲ್ಲಿ ಕೆಲವೊಂದನ್ನು ನಾನು ಇಲ್ಲಿ ಕೊಟ್ಟಿದ್ದೇನೆ.

1. ನೀರು :
ನೀರು ಸಾಮಾನ್ಯವಾಗಿ ಮನುಷ್ಯನ ಅತ್ಯವಶ್ಯಕ ದ್ರವ. ಇದನ್ನು ಕೆಲವರು ನಿರ್ಲಕ್ಷ ಮಾಡುತ್ತಾರೆ, ಅಂದರೆ ದಿನಕ್ಕೆ ಕನಿಷ್ಠ ೩-೪ ಲೀಟರ್ ನೀರು ಕುಡಿಯಲೇಬೇಕು ಆಗ ಮಾತ್ರ ದೇಹವು ಹೈಡ್ರೇಟ್ ಆಗಿರುತ್ತದೆ. ಮತ್ತೆ ಯೂರಿನರಿ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ದೂರವಾಗುತ್ತವೆ.

2. ಎಳೆನೀರು :
ಇದು ನಮ್ಮ ದೇಹವನ್ನು ತಂಪಾಗಿರಿಸುತ್ತದೆ, ಯಾರಿಗೆಲ್ಲ ಯೂರಿನರಿ ಇನ್ಫೆಕ್ಷನ್ ಆಗಿದಿಯೋ ಅಂತಹವರು ದಿನಕ್ಕೆ ಒಂದು ಎಳೆನೀರು ಕುಡಿಯುವುದರಿಂದ ಸೋಂಕು ಬೇಗ ಕಡಿಮೆಯಾಗುತ್ತದೆ.

3. ಜೀರಿಗೆ ನೀರು :
ರಾತ್ರಿ ಮಲಗುವಾಗ ನೀರನ್ನು ಚನ್ನಾಗಿ ಕುದಿಸಿ ಅದಕ್ಕೆ ಜೀರಿಗೆ ಸೇರಿಸಿ ಕುಡಿಯುವುದರಿಂದ ಮಲಬದ್ಧತೆ, ಗ್ಯಾಸ್ಟ್ರಿಕ್, ಮತ್ತು ಮೂತ್ರನಾಳ ಶುದ್ದಿಗೊಂಡು ಯೂರಿನರಿ ಇನ್ಫೆಕ್ಷನ್ ಕಡಿಮೆಯಾಗುತ್ತದೆ.

4. ಕರಿಬೇವು ಸೊಪ್ಪು ಮತ್ತು ಧಾನ್ಯಗಳು :
ಊಟದಲ್ಲಿ ಕರಿಬೇವು ಸೊಪ್ಪು ನೋಡಿದಕೂಡಲೇ ಪಕ್ಕಕ್ಕೆ ಇಡುವ ಬದಲು ಅದನ್ನು ತಿನ್ನುವುದರಿಂದ, ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ, ದೇಹವನ್ನು ತಂಪಾಗಿಸುವುದರ ಜೊತೆಗೆ, ಯೂರಿನರಿ ಸೋಂಕನ್ನು ನಿವಾರಿಸಲು ಸಹಾಯ ಮಾಡುತ್ತದೆ.

5. ನಿಂಬೆಹಣ್ಣು :
ಯಾರಿಗೆ ಸೋಂಕು ಜಾಸ್ತಿ ಇದೆ ಅವರು ದಿನಕ್ಕೆ ಒಂದು ಬಾರಿ ನಿಂಬೆ ಹಣ್ಣಿನ ರಸ ಕುಡಿಯಬೇಕು. ಯೂರಿನರಿ ಸೋಂಕು ಜಾಸ್ತಿ ಬ್ಯಾಕ್ಟಿರಿಯಾದಿಂದ ಬರುವ ರೋಗವಾಗಿರುವುದರಿಂದ ನಿಂಬೆಹಣ್ಣು ಆಂಟಿ ಬ್ಯಾಕ್ಟಿರಿಯಾಲ್ ಅಂಶವನ್ನು ಹೊಂದಿದ್ದು, ನಮ್ಮ ದೇಹದಲ್ಲಿರುವ ಕೆಟ್ಟ ಬ್ಯಾಕ್ಟಿರೀಯಾವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

6. ಮಜ್ಜಿಗೆ :
ಮಜ್ಜಿಗೆ ಕುಡಿಯುವುದರಿಂದ ನಮ್ಮ ದೇಹ ತಂಪಾಗಿರುತ್ತದೆ ಅಂತ ಎಲ್ಲರಿಗೂ ಗೊತ್ತು ಆದರೆ, ಮಜ್ಜಿಗೆಯಲ್ಲಿ ಕೆಲವೊಂದು ಔಷದಿಯ ಗುಣಗಳಿದ್ದು, ಇದು ನಮ್ಮ ದೇಹದ್ಲಲಿರುವ ಬ್ಯಾಕ್ಟಿರೀಯಾವನ್ನು ನಾಶಮಾಡುವುದಲ್ಲದೆ, ಆಹಾರವನ್ನು ಸರಿಯಾಗಿ ಜೀರ್ಣ ಮಾಡುವುದಲ್ಲದೆ, ಸೋಂಕು ನಿವಾರಿಸಲು ಸಹಾಯ ಮಾಡುತ್ತದೆ.

7. ತುಳಸಿ ಎಲೆಗಳು :
ತುಳಸಿ ಒಳ್ಳೆಯ ಆಂಟಿ ಮೈಕ್ರೋಬಿಯಲ್, ಆಂಟಿ ಇಂಪ್ಲಾಮಟೋರಿ, ಮತ್ತೆ ಡಿಟಾಕ್ಸಿಫಾಯಿಂಗ್ ಅಂಶವನ್ನು ಹೊಂದಿದ್ದು ದೇಹದಲ್ಲಿ ಆಗುವ ಬರ್ನಿಂಗ್, ನೋವು, ಪದೇ ಪದೇ ಮೂತ್ರ ವಿಸರ್ಜನೆಯಂತಹ ಅನೇಕ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ.

Urine Ifection ಅನ್ನು ತಡೆಗಟ್ಟುವ ಪ್ರಮುಖ ಕ್ರಮಗಳು

Urine Ifection ಅನ್ನು ತಡೆಗಟ್ಟುವ ಪ್ರಮುಖ ಕ್ರಮಗಳು

  •  ನಮ್ಮ ವೈಯಕ್ತಿಕ ಸ್ವಚ್ಛತೆ ಮತ್ತು ನಮ್ಮ ಸುತ್ತಮುತ್ತಲಿನ ಸ್ವಚ್ಛತೆ ಕಾಪಾಡಿಕೊಳ್ಳಬೇಕು.
  •  ಯಾವುದೇ ಕಾರಣಕ್ಕೂ ಹೆಚ್ಚು ಒತ್ತು ಮೂತ್ರ ತಡೆದಿಡಬಾರದು. ಏನೇ ಕಾರಣಗಳಿರಲಿ ಮೊದಲು ಅದನ್ನ ಹೊರಹಾಕಬೇಕು.
  •  ನೀರು ಎಷ್ಟು ಸಾಧ್ಯವೋ ಅಷ್ಟು ಕುಡಿಯಬೇಕು, ಪದೇ ಪದೇ ಯಾರು ಮಾತ್ರಕ್ಕೆ ಹೋಗುತ್ತಾರೆ ಎಂದು ನಿರ್ಲಕ್ಷ್ಯ ಬೇಡ.
  •  ಸ್ನಾನ ಮಾಡಿದ ನಂತರ ಅಥವಾ ಟಾಯ್ಲೆಟ್ಗೆ ಹೋದ ನಂತರ ಸರಿಯಾಗಿ ಒಣ ಬಟ್ಟೆಯಿಂದ ಒರೆಸಿಕೊಳ್ಳಿ. ಯಾಕೆಂದರೆ ಆ ಜಾಗ ತೇವದಿಂದ ಕೂಡಿದ್ದರೆ ಬ್ಯಾಕ್ಟಿರಿಯಾ ಬೇಗ ಬರುತ್ತದೆ.
  • ಮಹಿಳೆಯರಲ್ಲಿ ಈ ಸಮಸ್ಯೆ ಜಾಸ್ತಿ ಕಂಡುಬರುವುದರಿಂದ,  ಮಹಿಳೆಯರು ಪುರುಷರಿಗಿಂತ ಹೆಚ್ಚು ಹೈಜಿನ್ ಕಾಪಾಡಿಕೊಳ್ಳಬೇಕು.

ಯೂರಿನ್ ಇನ್ಫೆಕ್ಷನ್ ಲಕ್ಷಣಗಳು ಕಂಡುಬಂದ ಮೊದ ಮೊದಲೇ ಅದನ್ನು ಗಮನಿಸಿಕೊಂಡರೆ, ಸಮಸ್ಯೆ ಜಾಸ್ತಿಯಾಗದಂತೆ ತಡೆಯಬಹುದಾಗಿದೆ.
ನಾನು ಮೇಲೆ ತಿಳಿಸಿರುವ ನೈಸರ್ಗಿಕ ವಿಧಾನಗಳನ್ನ ಸರಿಯಾಗಿ ಬಳಸುವುದರಿಂದ ಸಮಸ್ಯೆಯನ್ನು ದೂರಮಾಡಬಹುದಾಗಿದೆ.

Leave a Comment

Your email address will not be published. Required fields are marked *

Scroll to Top