ಮಹಿಳೆಯರಲ್ಲಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಕಾಡುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಅದು PCOS, PCOD. ಇದು ಮುಖ್ಯವಾಗಿ ಇಂದಿನ ಸಮಾಜದ ಅತೀ ವೇಗವಾದ ಜೀವನಶೈಲಿ, ಅಸಮತೋಲನ ಆಹಾರ ಪದ್ಧತಿ, ಮತ್ತೆ ಮಾನಸಿಕ, ಬಾಹ್ಯ ಒತ್ತಡಗಳಿಂದ ಹೆಣ್ಣುಮಕ್ಕಳಲ್ಲಿ ಹಾರ್ಮೋನಲ್ ಸಮಸ್ಯೆ ಜಾಸ್ತಿಯಾಗುತ್ತಿರುವುದರಿಂದ ಇದು ಕಂಡು ಬರುತ್ತದೆ.
ಕೆಲವರು ಇವೆರಡು ಒಂದೇ ಎಂದು ತಪ್ಪಾಗಿ ಭಾವಿಸಿರುತ್ತಾರೆ.ಆದರೆ ಇದು ತಪ್ಪು ಇವೆರಡು ಬೇರೆ ಬೇರೆ. ಮತ್ತೆ ಇದೊಂದು ಸಣ್ಣ ಸಮಸ್ಯೆ ಎಂದು ಕಡೆಗಣಿಸುತ್ತಾರೆ. ಆದರೆ ಇದನ್ನು ನಿರ್ಲಕ್ಷ್ಯ ಮಾಡಿದರೆ ಮಹಿಳೆಯರ ದೇಹದ ಮೇಲೆ ಮುಂದೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.
ಈ ಲೇಖನದಲ್ಲಿ ನಾವು PCOS, PCOD ಬಗ್ಗೆ ಕಂಪ್ಲೀಟ್ ಆಗಿ ತಿಳಿಯೋಣ – ಇದರ ಅರ್ಥ, ಇದರ ಲಕ್ಷಣಗಳು ಯಾವ ರೀತಿ ಇರುತ್ತವೆ, ಇದು ಮಹಿಳೆಯರ ದೇಹದ ಮೇಲೆ ಯಾವ ಪರಿಣಾಮ ಬೀರುತ್ತದೆ, ಮತ್ತೆ ಪೀರಿಯಡ್ಸ್ ಹಾಗೂ ಪ್ರೆಗ್ನನ್ಸಿ ಸಮಯದಲ್ಲಿ ಯಾವ ಪರಿಣಾಮ ಬೀರುತ್ತೆ, ಇದನ್ನ ಸರಿಪಡಿಸಿಕೊಳ್ಳುವುದಕ್ಕೆ ಯಾವ ರೀತಿಯ ಆಹಾರ ತಿನ್ನಬೇಕು, ಯಾವ ರೀತಿಯ ವ್ಯಾಯಾಮ ಮಾಡಬೇಕು ಎಲ್ಲವನ್ನು ನೋಡೋಣ.
Table of Contents
Toggleಹಾಗಾದರೆ PCOS ಮತ್ತು PCOD ಎಂದರೇನು? ಎಂದು ತಿಳಿಯೋಣ.
PCOD(Polycystic Ovarian Disease) ಅಂದರೆ ಮಹಿಳೆಯರ ದೇಹದಲ್ಲಿ ಅಂಡಾಶಯಗಳು(ovaries) ಇರುತ್ತವೆ. ಇವುಗಳಲ್ಲಿ ಸಣ್ಣ ಪ್ರಮಾಣದ ಸಿಸ್ಟ್ ಗಡ್ಡೆ (cysts)ಗಳು ರೂಪುಗೊಂಡು, ಓವರಿಗಳು ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡದಾಗುತ್ತವೆ. ಆ ಸಮಯದಲ್ಲಿ ದೇಹದ ಹಾರ್ಮೋನ್ ಇಂಬ್ಯಾಲೆನ್ಸ ಆಗುತ್ತದೆ. ಇದರಿಂದ ಮಹಿಳೆಯರಲ್ಲಿ ಅಂಡಾಣುಗಳು ಅಂದರೆ ಎಗ್ (egg) ಸರಿಯಾಗಿ ಬೆಳೆಯುವುದಿಲ್ಲ, ಮತ್ತೆ ಸರಿಯಾಗಿ ಬಿಡುಗಡೆ ಆಗುವುದಿಲ್ಲ. ಈ ಸ್ಥಿತಿಯು ಅವರ ಪೀರಿಯಡ್ಸ್ ಮತ್ತೆ ಪ್ರೆಗ್ನನ್ಸಿ ಗೆ ತುಂಬಾ ಕಷ್ಟವಾಗುತ್ತದೆ.
ಇನ್ನು ಈ PCOS (Polycystic Ovary Syndrome) ಎಂದರೆ ಇದೊಂದು ಹಾರ್ಮೋನಲ್ ಸಿಂಡ್ರೋಮ್ ಆಗಿದ್ದು PCOD ಗಿಂತ ಹೆಚ್ಚು ಡೇಂಜರ್ ಆಗಿರುತ್ತದೆ. ಈ ರೀತಿ ಇರುವ ಮಹಿಳೆಯರಲ್ಲಿ ಗಂಡಸರಲ್ಲಿರುವ ಆಂಡ್ರೋಜೆನ್(androgens) ಸಂಖ್ಯೆ ಜಾಸ್ತಿಯಾಗುತ್ತದೆ. ಇದರಿಂದ ಮಹಿಳೆಯಲ್ಲಿ ಅಂಡಾಣು ಎಗ್(eggs) ಬೆಳವಣಿಗೆ ಕುಸಿತ ಆಗಿ ಅದು ಬಿಡುಗಡೆಗೆ ಕಷ್ಟವಾಗುತ್ತದೆ. ಈ ಸಮಸ್ಯೆ ತುಂಬಾ ಜನ ಮಹಿಳೆಯರು ಪ್ರಪಂಚದಾದ್ಯಂತ ಅನುಭವಿಸುತ್ತಿದ್ದಾರೆ.
PCOD ಇದೊಂದು ಸಾಮಾನ್ಯ ಸ್ಥಿತಿ ಸುಮಾರು ೮೦% ಮಹಿಳೆಯರಲ್ಲಿ ಸಾಮಾನ್ಯ.
PCOS ಇದೊಂದು ಸಿಂಡ್ರೋಮ್ ಇದು ಸ್ವಲ್ಪ ಹೆಚ್ಚು ತೊಂದರೆಮಾಡುತ್ತದೆ.
Read This Also: Irregular periods, Causes, yoga, and Natural Treatment.
PCOS ಮತ್ತು PCOD ಇವೆರಡರ ನಡುವೆ ಇರುವ ವ್ಯತ್ಯಾಸ ನೋಡೋಣ
ತುಂಬಾ ಜನಕ್ಕೆ PCOS, PCOD ಇವೆರಡರ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಅನೇಕರು ಇವೆರಡು ಒಂದೇ ಎಂದು ತಿಳಿದಿರುತ್ತಾರೆ. ಇವೆರಡರ ನಡುವೆ ಅನೇಕ ವ್ಯತ್ಯಾಸಗಳಿವೆ, ಅವೇನೆಂದು ತಿಳಿಯೋಣ.
ಮೊದಲನೆಯದಾಗಿ PCOS ಇದು ಸಾಮಾನ್ಯವಾಗಿ ಹೆಚ್ಚು ಗಂಬೀರವಾದ ಆರೋಗ್ಯ ಸಮಸ್ಯೆ ಎಂದು ತಿಳಿಯಬೇಕು. ಇನ್ನು PCOD ಇದು ಅಷ್ಟೊಂದು ಗಂಭೀರ ಸಮಸ್ಯೆ ಇರುವುದಿಲ್ಲ.ಇದನ್ನು ದಿನನಿತ್ಯದ ಜೀವನಶೈಲಿಯಿಂದ ನಿಯಂತ್ರಿಸಬಹುದಾಗಿರುತ್ತದೆ.
PCOS ಇದು ಎಂಡೊಕ್ರೇನ್ ಡಿಸ್ಆರ್ಡರ್ ಆಗಿದ್ದು, ಮಹಿಳೆಯ ದೇಹದ ಮೇಲೆ ಹೆಚ್ಚು ಅಪಾಯಕಾರಿ ಪರಿಣಾಮ ಬೀರುತ್ತದೆ. ಇದಕ್ಕೆ ಪರಿಣಾಮಕಾರಿ ಚಿಕಿತ್ಸೆಯೆಂದರೆ ಹಾರ್ಮೋನ್ ರಿಪ್ಲೇಸೆಮೆಂಟ್ ಆಗಿರುತ್ತದೆ.
PCOD ಇದು ಪೀರಿಯಡ್ಸ್ ಆಗುವ ಶೇಕಡಾ ಮೂರನೇ ಒಂದು ಭಾಗದಷ್ಟು ಮಹಿಳೆಯರಲ್ಲಿ ಕಂಡು ಬರುತ್ತದೆ.
ನಮ್ಮ ದಕ್ಷಿಣ ಭಾರತದಲ್ಲಿ ನಡೆಸಿದ ಸರ್ವೇ ಪ್ರಕಾರ ಶೇ.22.5% ಮಟ್ಟಾಗುವ ಮಹಿಳೆಯರಲ್ಲಿ PCOD ಸಮಸ್ಯೆ ಇದ್ದರೆ, ಅದರಲ್ಲಿ ಶೇ.9-10% ಮಹಿಳೆಯರಲ್ಲಿ PCOS ಸಮಸ್ಯೆ ಕಂಡು ಬಂದಿದೆ.
PCOS ನಲ್ಲಿ ಆಂಡ್ರೋಜೆನ್ ಪ್ರಮಾಣ ಜಾಸ್ತಿ ಇರುತ್ತದೆ. ಇದರಿಂದ ಫರ್ಟಿಲಿಟಿ ಗೆ ತೊಂದರೆ.
ಓವ್ಯೂಲೇಶನ್ PCOS ನಲ್ಲಿ ನಿಯಮಿತವಾಗಿರುವುದಿಲ್ಲ.
ಮೆಟಬಾಲಿಕ್ ಸಮಸ್ಯೆಗಳು, PCOS ನಲ್ಲಿ ಇನ್ಸುಲಿನ್ ರೆಸಿಸ್ಟೆನ್ಸ್ ಜಾಸ್ತಿ ಇದ್ದು, ಮಹಿಳೆಯ ತೂಕ ಜಾಸ್ತಿಯಾಗುತ್ತದೆ.
ಕೊನೆಯದಾಗಿ ಇವೆರಡು ಹಾರ್ಮೋನ್ ಸಮಸ್ಯೆಗಳು ಎಲ್ಲರಲ್ಲೂ ಅಲ್ಲದಿದ್ದರೂ ಅನೇಕರಲ್ಲಿ ಮಹಿಳೆಯ ಫರ್ಟಿಲಿಟಿ ಅಂದರೆ ಮಗುವನ್ನು ಹೆರುವ ಸಾಮರ್ಥ್ಯಕ್ಕೆ ತೊಂದರೆ ಉಂಟು ಮಾಡುತ್ತವೆ.
PCOS , PCOD ಇವೆರಡರ ಲಕ್ಷಣಗಳನ್ನು ನೋಡೋಣ.
- ಈ ಎರಡು ಹಾರ್ಮೋನ್ ಸಮಸ್ಯೆಗಳಲ್ಲಿ ಕಂಡು ಮೊದಲ ಲಕ್ಷಣ ಅದು, ಇರ್ರೆಗ್ಯುಲರ್ ಪೀರಿಯಡ್ಸ್. ಸಾಮಾನ್ಯವಾಗಿ ತಿಂಗಳಿಗೊಮ್ಮೆ ಆಗಬೇಕು. ಆದರೆ ಎರಡು ಅಥವಾ ಮೂರು ತಿಂಗಳಾದರೂ ಆಗುವುದಿಲ್ಲ. ಅಥವಾ ಕೆಲವರಲ್ಲಿ ಈ ತಿಂಗಳು ಒಂದು ಡೇಟ್ ಗೆ ಆದರೆ ಮುಂದಿನ ತಿಂಗಳು ಬೇರೆ ಡೇಟ್ ಗೆ ಆಗುವುದು.
- ತೂಕದಲ್ಲಿ ವ್ಯತ್ಯಾಸ, ಅಂದರೆ ತುಂಬಾ ಜನ ಮಹಿಳೆಯರು ಈ ಸಮಸ್ಯೆ ಇದ್ದರೆ ದೇಹದಲ್ಲಿ ಫ್ಯಾಟ್ ಅಂಶ ಜಾಸ್ತಿಯಾಗಿ ತೂಕ ಜಾಸ್ತಿಯಾಗುತ್ತಾರೆ, ಇನ್ನೂ ಕೆಲವರಲ್ಲಿ ತೂಕ ಕಡಿಮೆಯಾಗಬಹುದು.
- ಸಾಮಾನ್ಯವಾಗಿ ಗಂಡಸರಲ್ಲಿ ಗಡ್ಡ ಮೀಸೆ ಬರುವುದು ಸಾಮಾನ್ಯ . ಆದರೆ ಇಲ್ಲಿ ಕೆಲ ಮಹಿಳೆಯರಲ್ಲಿ ಮುಖದಲ್ಲಿ ಕೂದಲು ಬೆಳೆಯುತ್ತವೆ.
- ಕೆಲ ಮಹಿಳೆಯರಲ್ಲಿ ತಲೆ ಕೂದಲು ಹೆಚ್ಚು ಉದುರುತ್ತವೆ.
- ಮುಖದಲ್ಲಿ ಮೊಡವೆಗಳು ಬರುವುದು, ಅಲರ್ಜಿಯಂತೆ ಆಗುವುದು.
- ಕತ್ತಿನ ಭಾಗದಲ್ಲಿ ಕೆಲವರಲ್ಲಿ ಕಪ್ಪು ಮಚ್ಚೆಗಳ ರೀತಿ ಕಂಡುಬರುವುದು.
- ತುಂಬಾ ಜನರಲ್ಲಿ ಸುಸ್ತು, ಒತ್ತಡ, ಮೂಡ್ ಸ್ವಿಂಗ್ ಆಗುವುದು ಇತ್ಯಾದಿ.
ಇದು ಎಲ್ಲಾ ಮಹಿಳೆಯರಲ್ಲಿ ಒಂದೇ ರೀತಿ ಕಂಡುಬರುತ್ತದೆ ಎಂದೇನಿಲ್ಲ, ಕೆಲವರಲ್ಲಿ ಒಂದೆರಡು ಸಮಸ್ಯೆಗಳು ಮಾತ್ರ ಕಂಡುಬರುತ್ತವೆ.
ಇದು ಮಹಿಳೆಯರ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ?
ಇದು ಮಹಿಳೆಯರ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ?
1. ಹಾರ್ಮೋನಲ್ ಇಂಬ್ಯಾಲೆನ್ಸ್ :
PCOS , PCOD ಇವು ದೇಹದ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಮೂಡ್ ಸ್ವಿಂಗ್, ತೂಕ ಜಾಸ್ತಿ ಮತ್ತೆ ಕಡಿಮೆ ಆಗುವುದು, ರಾತ್ರಿ ಸರಿಯಾಗಿ ನಿದ್ದೆ ಬಾರದೆ ಇರುವುದು, ದೇಹ ನೋಡಲು ಸ್ವಲ್ಪ ವ್ಯತ್ಯಾಸ ಕಂಡುಬರುವುದು, ಅಂದರೆ ಮುಖ ಸ್ವಲ್ಪ ದಪ್ಪ ಕಾಣುವುದು. ಇವು ಮಹಿಳೆಯರ ದೇಹದ ಹಾರ್ಮೋನ್ ಗಳನ್ನ ಅಸ್ತ ವ್ಯೆಸ್ತ ಮಾಡಿ ದೇಹದ ಸಮತೋಲನವನ್ನ ಹಾಳುಮಾಡುತ್ತವೆ.
2. ದೇಹದ ತೂಕ ಹೆಚ್ಚಳ ಮತ್ತೆ ಮೆಟಬಾಲಿಕ್ ಸಮಸ್ಯೆ :
ದೇಹದ ತೂಕ ಹೆಚ್ಚಾಗುತ್ತದೆ. ಇನ್ಸುಲಿನ್ ರೆಸಿಸ್ಟೆನ್ಸ್ ಕಾರಣದಿಂದ ದೇಹದಲ್ಲಿ ಸಂಗ್ರಹವಾದ ಫ್ಯಾಟ್ ಅನ್ನು ಕಡಿಮೆ ಮಾಡಲು ಕಷ್ಟವಾಗುತ್ತದೆ.
3. ಕೂದಲು ಮತ್ತು ಚರ್ಮದ ಸಮಸ್ಯೆ :
ಕೆಲವರಿಗೆ ಮುಖದಲ್ಲಿ ಮೊಡವೆಗಳು ಬರುತ್ತವೆ, ಮುಖದ ಚರ್ಮ ಪಿಗಮೆಂಟೇಷನ್ ಮತ್ತು ತಲೆಯ ಕೂದಲು ಉದುರಲು ಶುರುವಾಗುತ್ತದೆ.
4. ಮಾನಸಿಕ ಆರೋಗ್ಯ ಸಮಸ್ಯೆ :
ಮಹಿಳೆಯರಲ್ಲಿ ನಿರಂತರ ಹಾರ್ಮೋನ್ ಬದಲಾಗುತ್ತಿರುವುದರಿಂದ ಮಾನಸಿಕವಾಗಿ ಅನೇಕ ಒತ್ತಡ, ಆತಂಕ ಉಂಟಾಗುತ್ತದೆ. ಅದರಿಂದ ಕೆಲವೊಮ್ಮೆ ಡಿಪ್ರೆಶನ್ ಸಹ ಉಂಟಾಗುತ್ತದೆ.
ಮಹಿಳೆಯ ಪೀರಿಯಡ್ಸ್ ಮತ್ತೆ ಫರ್ಟಿಲಿಟಿ ಮೇಲೆ ಯಾವ ಪರಿಣಾಮ ಬೀರುತ್ತೆ?
PCOS ಮತ್ತು PCOD ಇದ್ದರೆ ಮಹಿಳೆಗೆ ಪೀರಿಯಡ್ಸ್ ಮತ್ತೆ ಮಕ್ಕಳಾಗುವ ಸಮಸ್ಯೆ ತುಂಬಾ ಕಂಡುಬರುತ್ತದೆ.
- ಮಹಿಳೆಗೆ ಸಮಯಕ್ಕೆ ಸರಿಯಾಗಿ ಮುಟ್ಟಾಗುವುದಿಲ್ಲ(Irregular Periods).
- ಕೆಲವು ಮಹಿಳೆಯರಿಗೆ ಪೀರಿಯಡ್ಸ್ ಸಮಯದಲ್ಲಿ ತುಂಬಾ ಹೊಟ್ಟೆ ನೋವು ಕಂಡುಬರುವುದು.
- ಕೆಲವೊಮ್ಮೆ ತಿಂಗಳುಗಳ ಕಾಲ ಪೀರಿಯಡ್ಸ್ ಬಾರದೆ ಇರುವುದು.
- ಕೆಲವರಿಗೆ ಹೆಚ್ಚು ರಕ್ತಸ್ರಾವ ಆಗುವುದು ಇನ್ನೂ ಕೆಲವರಿಗೆ ಕಡಿಮೆ ಬ್ಲೀಡಿಂಗ್ ಆಗುವುದು.
- ಕೆಲ ಮಹಿಳೆಯರಲ್ಲಿ ಓವ್ಯೂಲೇಶನ್ ಸರಿಯಾಗಿ ನಡೆಯದೆ ತುಂಬಾ ವರ್ಷ ಮಕ್ಕಳಾಗದೇ ಇರುವುದು.
- ಕೆಲವು ಮಹಿಳೆಯರಲ್ಲಿ ಸರಿಯಾಗಿ ಅಂಡಾಣು (egg) ರಿಲೀಸ್ ಆಗದೆ ಮಕ್ಕಳಾಗದಿರುವುದು.
PCOS,PCOD ಗೆ ಡಯಟ್ ಮತ್ತು ನಿಯಮಿತ ವ್ಯಾಯಾಮ.
ಇತ್ತೀಚಿನ ಜೀವನಶೈಲಿ ಮಹಿಳೆಯ ದೇಹದಲ್ಲಿ ಅನೇಕ ಬದಲಾವಣೆಗಳನ್ನು ತಂದಿದೆ. ಅದರಲ್ಲಿ ಪ್ರಮುಖವಾದವು ;
ಸರಿಯಾದ ಪೌಷ್ಟಿಕ ಆಹಾರ ತಿನ್ನದೇ ಎಣ್ಣೆಯಲ್ಲಿ ಕರಿದ ಆಹಾರ, ಬೀದಿ ಬದಿ ಸಿಗುವ ಮಸಾಲೆ ಪದಾರ್ಥಗಳು, ಜಂಕ್ ಫುಡ್ ಇವನ್ನು ಜಾಸ್ತಿ ತಿಂದು ದೇಹದ ಹಾರ್ಮೋನ್ಸ್ ಇಂಬ್ಯಾಲೆನ್ಸ್ ಆಗಿವೆ. ಆದ್ದರಿಂದ ಸಾಧ್ಯವಾದಷ್ಟು ಹಣ್ಣುಗಳು, ತರಕಾರಿಗಳು, ಸೊಪ್ಪುಗಳು, ಕಾಳುಗಳು, ಮೊಟ್ಟೆ, ಹಾಲು, ಮೊಸರು, ಇವು ನಮ್ಮ ಆಹಾರದ ಭಾಗವಾಗಿರಬೇಕು.
ಮತ್ತೆ ದೇಹವು ಹಾರ್ಮೋನ್ಸ್ ಇಂಬ್ಯಾಲೆನ್ಸ್ ಆಗಿ ತೂಕ ಜಾಸ್ತಿಯಾಗುತ್ತದೆ. ಆದ್ದರಿಂದ ತೂಕ ಕಡಿಮೆ ಮಾಡಲು ದಿನನಿತ್ಯ ಕನಿಷ್ಠ 30 ನಿಮಿಷ ವಾಕಿಂಗ್, 30 ನಿಮಿಷ ದೈಹಿಕ ವ್ಯಾಯಾಮ ಮಾಡಬೇಕು. 15 ನಿಮಿಷ ಯೋಗ, 10 ನಿಮಿಷ ಧ್ಯಾನ ಈ ರೆಟಿ ಪ್ರತೀ ದಿನ ಮಾಡುವುದರಿಂದ ಮಹಿಳೆಯರಲ್ಲಿ ದೇಹ ಹಗುರವಾಗುತ್ತದೆ ಮತ್ತೆ ಹಾರ್ಮೋನ್ ಗಳು ಸಮತೋಲನಕ್ಕೆ ಬರುತ್ತವೆ. PCOS ,PCOD ಸಮಸ್ಯೆ ನಿದಾನವಾಗಿ ಕಡಿಮೆ ಆಗುತ್ತದೆ.
Which is More Serious to Women PCOD or PCOS?
PCOS is usually more concerned then PCOD. Because later one is managable by Proper lifestyle changes, and Diet.
What are the 3 Signs of PCOS?
- Irregular periods, or No periods for long months.
- Difficulty of getting Pregnant due to less Irregular Ovulation.
- Weight gain.
Does a PCOS Women Can Get Pregnant?
Yes, You have PCOS doesn’t mean you Can’t get Pregnant. PCOS is common in most of the Womens, but it can be treatable.
