ನಮ್ಮ ದೇಹದಲ್ಲಿ ಲಿಪಿಡ್ ಒಳ್ಳೆಯ Cholesterol ಇರುತ್ತೆ, ಇದು ನಾವು ತಿನ್ನುವ ಆಹಾರವನ್ನ ಜೀರ್ಣ ಮಾಡುವುದಕ್ಕೆ, ದೇಹದಲ್ಲಿ ಕೆಲವೊಂದು ಹಾರ್ಮೋನ್ ಗಳು ಬೆಳವಣಿಗೆ ಆಗುವುದಕ್ಕೆ, ದೇಹದಲ್ಲಿನ ಸೆಲ್ ಗಳು ಚನ್ನಾಗಿ ಕೆಲಸ ಮಾಡುವುದಕ್ಕೆ ತುಂಬಾ ಸಹಾಯಮಾಡುತ್ತೆ. ಆದರೆ ಸಮಸ್ಯೆ ಯಾವಾಗ ಬರುತ್ತೆ ಅಂದ್ರೆ ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಕಡಿಮೆ ಸಾಂದ್ರತೆ ಇರುವ ‘ಲಿಪೊಪ್ರೋಟೀನ್’ ಇದು ಅಗತ್ಯ ಇರೋದಕ್ಕಿಂತ ಜಾಸ್ತಿಯಾಗಿ, ಹೃದಯ ಸಂಬಂದಿಸಿದ ಕಾಯಿಲೆಗಳನ್ನ ಉಂಟುಮಾಡುತ್ತೆ.
ಆದರೆ ಈ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಾವು ಕೆಲವೊಂದು ಜೀವನಶೈಲಿಯಲ್ಲಿ ಬದಲಾವಣೆ, ಒಳ್ಳೆಯ ಆಹಾರ, ಮತ್ತೆ ದಿನನಿತ್ಯ ನಿಯಮಿತ ವ್ಯಾಯಾಮ ಮಾಡೋದರಿಂದ ಸರಿಪಡಿಸಿಕೊಳ್ಳಬಹುದು.
ನಮ್ಮ ಇಂದಿನ ಅತೀ ವೇಗದ ಜೀವನಶೈಲಿಯಲ್ಲಿ ನಾವು ನಮ್ಮ ದೇಹದ ತುಂಬಾ ವಿಷಯಗಳನ್ನ ಗಮನಿಸುವುದಿಲ್ಲ. ಆದ್ದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಜಾಸ್ತಿಯಾಗುತ್ತಿವೆ. ಅದರಲ್ಲಿ ಪ್ರಮುಖವಾಗಿ ‘Cholesterol’ ಇದು ನಮ್ಮ ದೇಹವನ್ನ ನಿದಾನವಾಗಿ ನಾಶಮಾಡುವ ಒಂದು ದೊಡ್ಡ ಆರೋಗ್ಯ ಸಮಸ್ಯೆ. ಇದು ಹೃದಯ ಸಂಬಂದಿತ ಕಾಯಿಲೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನಮ್ಮಲ್ಲಿ ತುಂಬಾ ಜನಕ್ಕೆ ಕೊಲೆಸ್ಟ್ರಾಲ್ ಬಗ್ಗೆ ಗೊತ್ತಿಲ್ಲ. ಅವರೆಲ್ಲಾ ತಿಳಿದಿರುವ ಪ್ರಕಾರ ನಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ಸಂಪೂರ್ಣ ಕೆಟ್ಟದ್ದಲ್ಲಾ.
ಒಳ್ಳೆಯ ಕೊಲೆಸ್ಟ್ರಾಲ್ ನಮ್ಮ ದೇಹಕ್ಕೆ ತುಂಬಾ ಅಗತ್ಯವಾಗಿ ಬೇಕು. ಆದರೆ ಅದು ಯಾವ ಲೆವೆಲ್ ನಲ್ಲಿ ಇರಬೇಕು ಅನ್ನುವುದೇ ಮುಖ್ಯ.
ಈ ಲೇಖನದಲ್ಲಿ ನಾವು ಕೊಲೆಸ್ಟ್ರಾಲ್ ಅಂದರೆ ಏನು, ಅದು ಯಾವ ರೀತಿ ಕೆಲಸ ಮಾಡುತ್ತೆ, ಅದು ಬರುವುದಕ್ಕೆ ಕಾರಣಗಳು, ನಮ್ಮ ದೇಹದ ಮೇಲೆ ಅದು ಯಾವೆಲ್ಲ ಪರಿಣಾಮ ಬೀರುತ್ತೆ, ಅದು ಯಾವ ಲೆವೆಲ್ ನಲ್ಲಿ ಇದ್ದರೆ ಒಳ್ಳೆಯದು, ಅತಿಯಾದರೆ ಅದನ್ನು ನೈಸರ್ಗಿಕವಾಗಿ ಯಾವ ರೀತಿ ಕಂಟ್ರೋಲ್ ಮಾಡಬೇಕು ಅನ್ನೋದನ್ನ ತಿಳಿಯೋಣ.
Table of Contents
Toggleಕೊಲೆಸ್ಟ್ರಾಲ್ ಅಂದರೆ ಏನು?
ಇದೊಂದು ನಮ್ಮ ಮನೆಯಲ್ಲಿ ಬಳಸುವ ಮೇಣದಂತೆ ಇದ್ದು, ನಮ್ಮ ರಕ್ತದಲ್ಲಿ ಮತ್ತೆ ದೇಹದ ಎಲ್ಲಾ ಸೆಲ್ ಗಳಲ್ಲಿ ಕಂಡುಬರುತ್ತದೆ. ಇದರ ಪ್ರಮುಖ ಕೆಲಸ ಅಂದರೆ ದೇಹದಲ್ಲಿ ಹಾರ್ಮೋನ್ ಗಳ ಉತ್ಪಾದನೆ ಮಾಡುವುದು, ದೇಹದಲ್ಲಿರುವ ಸೆಲ್ ಗಳ ಉತ್ಪಾದನೆಗೆ ಸಹಾಯ ಮಾಡುವುದು, ಮತ್ತೆ ವಿಟಮಿನ್ D ನಿರ್ಮಾಣ. ಈ ರೀತಿಯ ಕೆಲಸಗಳನ್ನು ಮಾಡುತ್ತದೆ.
2 Types of Cholesterol
ಕೊಲೆಸ್ಟ್ರಾಲ್ ನಲ್ಲಿ 2 ವಿಧಗಳಿವೆ :
1. ದೇಹಕ್ಕೆ ಬೇಕಿರುವ ಒಳ್ಳೆಯ ಕೊಲೆಸ್ಟ್ರಾಲ್ HDL (High-Density Lipoprotein) – ಇದು ಹೃದಯದ ಅಪಧಮನಿಗಳಲ್ಲಿ (arteries) ಶೇಖರಣೆಯಾದಾಗ, ರಕ್ತ ಸರಾಗವಾಗಿ ಹರಿಯುವುದನ್ನು ತಡೆಯುವ ಪ್ಲೇಕ್ ಗಳನ್ನ ನಿರ್ಮಾಣ ಮಾಡುತ್ತೆ.
2. ದೇಹಕ್ಕೆ ಬೇಡವಾದ ಕೆಟ್ಟ ಕೊಲೆಸ್ಟ್ರಾಲ್ LDL (Low-Density Lipoprotein)
ಇದು ಸೆಲ್ ಗಳಲ್ಲಿ ಜಾಸ್ತಿಯಾದ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಲಿವರ್ ಗೆ ಹಿಂದಿರುಗಿಸುತ್ತದೆ. ನಾವು ಒಳ್ಳೆಯ ಆಹಾರದಿಂದ HDL ಅನ್ನು ಜಾಸ್ತಿ ಮಾಡಿದರೆ ಕೆಟ್ಟ ಕೊಲೆಸ್ಟ್ರಾಲ್ ಆದ LDL ಅನ್ನು ಕಂಟ್ರೋಲ್ ಮಾಡುವುದಕ್ಕೆ ಸಹಾಯವಾಗುತ್ತದೆ.
ಕೊಲೆಸ್ಟ್ರಾಲ್ ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ.
- ಕೊಲೆಸ್ಟ್ರಾಲ್ ಜಾಸ್ತಿಯಾದಾಗ ರಕ್ತನಾಳಗಳಲ್ಲಿ ಫ್ಯಾಟ್ ಸಂಗ್ರಹ ಜಾಸ್ತಿಯಾಗುತ್ತೆ.
- ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಜಾಸ್ತಿ.
- ದೇಹದ ಎಲ್ಲಾ ಭಾಗಗಳಿಗೆ ರಕ್ತ ಸರಿಯಾಗಿ ಸರಬರಾಜು ಆಗದೆ ಇರುವುದು.
- ಮನುಷ್ಯನಿಗೆ ಸ್ಟ್ರೋಕ್ ಆಗುವ ಸಾಧ್ಯತೆ ಹೆಚ್ಚು.
ಒಳ್ಳೆಯ ಕೊಲೆಸ್ಟ್ರಾಲ್ HDL ಲೆವೆಲ್ ಕಡಿಮೆಯಾಗಿ, ಕೆಟ್ಟ ಕೊಲೆಸ್ಟ್ರಾಲ್ LDL ಮಟ್ಟ ಜಾಸ್ತಿಯಾದಾಗ ದೇಹದಲ್ಲಿ ಕೆಲವೊಂದು ಗಂಬೀರವಾದ ಆರೋಗ್ಯ ಸಮಸ್ಯೆಗಳು ಬರುತ್ತವೆ. ಆದ್ದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ Bad Cholesterol ಲೆವೆಲ್ ಜಾಸ್ತಿಯಾದಾಗ ಏನೆಲ್ಲಾ ಆಗುತ್ತದೆ.
ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಬರಲು ಮುಖ್ಯ ಕಾರಣ ನಮ್ಮ ಜೀವನಶೈಲಿ, ಅದೇ ರೀತಿ ಇನ್ನು ಹಲವು ಕಾರಣಗಳನ್ನು ನೋಡೋಣ.
1. ನಾವು ತಿನ್ನುವ ಆಹಾರ :
ನಾವು ಇತ್ತೀಚಿನ ದಿನಗಳಲ್ಲಿ ಯಾವ ರೀತಿಯ ಆಹಾರ ತಿನ್ನುತ್ತಿದ್ದೇವೆ ಅಂದರೆ ಮನೆಯಲ್ಲಿ ಮಾಡುವ ಆಹಾರ ಕಡಿಮೆ ಮಾಡಿ ಬೀದಿ ಬದಿ ಸಿಗುವ ಆಹಾರ, ಬೇಕರಿ ಪಧಾರ್ಥಗಳು, ಮಸಾಲೆ ಪಧಾರ್ಥಗಳು, ಜಂಕ್ ಫುಡ್ಸ್, ಸ್ವೀಟ್ ಪಧಾರ್ಥಗಳು, ಇವು ನಮ್ಮ ದಿನನಿತ್ಯದ ಆಹಾರವಾಗಿವೆ. ಇವುಗಳನ್ನು ತಿನ್ನುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ದಿನೇ ದಿನೇ ಹೆಚ್ಚಾಗುತ್ತದೆ.
2. ಧೂಮಪಾನ ಮತ್ತೆ ಮಧ್ಯಪಾನ :
ಸಿಗರೇಟ್ ಸೇದುವುದು ಮತ್ತೆ ಎಣ್ಣೆ ಕುಡಿಯುವುದರಿಂದ ಅದು ನೇರವಾಗಿ ನಮ್ಮ ಲಿವರ್ ಮತ್ತೆ ಕಿಡ್ನಿಗೆ ತೊಂದರೆ ಉಂಟುಮಾಡುತ್ತವೆ. ಇದು ರಕ್ತದಲ್ಲಿ ಒಳ್ಳೆ ಕೊಲೆಸ್ಟ್ರಾಲ್ ಆದ HDL ಅಂಶವನ್ನು ಕಡಿಮೆ ಮಾಡಿ, ಕೆಟ್ಟ ಕೊಲೆಸ್ಟ್ರಾಲ್ ಆದ LDL ಮಟ್ಟವನ್ನು ಜಾಸ್ತಿ ಮಾಡುತ್ತದೆ.
3. ವ್ಯಾಯಾಮದ ಕೊರತೆ :
ನಾವು ಎಷ್ಟು ಆಹಾರ ತಿನ್ನುತ್ತೇವೆ ಅಷ್ಟು ಪ್ರಮಾಣದಲ್ಲಿ ದೈಹಿಕ ವ್ಯಾಯಾಮ ಮಾಡಬೇಕು ಆಗ ಮಾತ್ರ ದೇಹ ಆರಾಮಾಗಿರುತ್ತದೆ. ಇಲ್ಲವಾದರೆ ದೇಹದಲ್ಲಿ ಬೇಡವಾದ ಕೊಬ್ಬು ಜಾಸ್ತಿ ಸಂಗ್ರಹವಾಗುತ್ತದೆ.
4. ವಂಶಪಾರಂಪರ್ಯ (Heredity)
ಕೆಲವು ಜನರಲ್ಲಿ ಕುಟುಂಬದ ಇತಿಹಾಸ, ಮತ್ತೆ ತನ್ನ ತಂದೆ ತಾಯಿಯಿಂದಲೇ ಈ ರೀತಿಯ ಕೊಲೆಸ್ಟ್ರಾಲ್ ಜಾಸ್ತಿ ಇರುವ ಸಮಸ್ಯೆ ಬಂದಿರುತ್ತದೆ. ಆದ್ದರಿಂದ ಅವರಿಗೆ ಹೈ ಕೊಲೆಸ್ಟ್ರಾಲ್ LDL ಆಗಿ ಬದಲಾಗುತ್ತದೆ.
5. ತೂಕ ಜಾಸ್ತಿಇರುವುದು (Obesity) :
ಸಾಮಾನ್ಯವಾಗಿ ತೂಕ ಜಾಸ್ತಿ ಇರುವವರು ಹೆಚ್ಚು ಕೊಲೆಸ್ಟ್ರಾಲ್ ಸಮಸ್ಯೆಗೆ ಗುರಿಯಾಗುತ್ತಾರೆ.
6. ಅತಿಹೆಚ್ಚು ಒತ್ತಡ (Stress):
ಇತ್ತೀಚಿನ ಜೀವನಶೈಲಿಯಲ್ಲಿ ಅನೇಕ ಜನ ಸ್ಟ್ರೆಸ್ ಇಂದ ಬಳಲುತ್ತಿದ್ದಾರೆ. ಇದು ನೇರವಾಗಿ ಹಾರ್ಮೋನ್ ಬೆಳವಣಿಕೆ ಕುಂಠಿತವಾಗಿ, ಕೊಲೆಸ್ಟ್ರಾಲ್ ಬರುತ್ತಿದೆ. ಅದೇ ರೀತಿ ಒತ್ತಡ ಇರುವ ವ್ಯಕ್ತಿ ಸರಿಯಾಗಿ ಊಟ ಮಾಡುವುದಿಲ್ಲ, ಸರಿಯಾಗಿ ನಿದ್ದೆ ಮಾಡುವುದಿಲ್ಲ, ವ್ಯಾಯಾಮ ಮಾಡುವುದಿಲ್ಲ ಈ ಎಲ್ಲಾ ಸಮಸ್ಯೆಗಳಿಂದ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೈಸರ್ಗಿಕ ವಿಧಾನಗಳು. (Natural Ways to Reduce Cholesterol Levels)
ಕೆಲವೊಂದು ವಿಧಾನಗಳನ್ನ ಬಳಸಿಕೊಂಡು ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ಯಾವ ರೀತಿ ಕಡಿಮೆಮಾಡಬಹುದು ತಿಳಿಯೋಣ.
1. ಪೌಷ್ಟಿಕ ಆಹಾರ ಪದ್ಧತಿ :
ನಾವು ತಿನ್ನುವ ಆಹಾರ ನಮ್ಮ ದೇಹಕ್ಕೆ ಒಳ್ಳೆಯ ಪೌಷ್ಟಿಕಾಂಶಗಳನ್ನ ಕೊಡುವ ರೀತಿ ಇರಬೇಕು. ಅಂದರೆ ಹಸಿರು ತರಕಾರಿಗಳು, ಸೊಪ್ಪು, ಹಣ್ಣುಗಳು, ಜೋಳ , ಸಿರಿಧಾನ್ಯಗಳು, ಹಾಲು, ಮೊಸರು, ತುಪ್ಪ,
ಒಳ್ಳೆಯ ಫ್ಯಾಟ್ ಅಂಶವಿರುವ ಆಲಿವ್ ಆಯಿಲ್, ನಟ್ಸ್, ಅವಕಾಡೊ ಜ್ಯೂಸು, ಡ್ರೈ ಫ್ರೂಟ್ಸ್ ಬಾದಾಮಿ, ವಾಲ್ನಟ್, ದ್ರಾಕ್ಷಿ, ಮೊಟ್ಟೆ, ಒಮೇಗಾ 3 ಇರುವ ಮೀನು, ಸೀಗಡಿ, ಇತ್ಯಾದಿ.
ಫೈಬರ್ ಅಂಶ ಇರುವ ಆಪಲ್, ಓಟ್ಸ್, ಬಾರ್ಲಿ, ಪಿಯರ್ಸ್ ಇವುಗಳನ್ನ ತಿನ್ನುವುದರಿಂದ Cholesterol ಮಟ್ಟ ಕಡಿಮೆ ಆಗಿ ರಕ್ತ ಶುದ್ಧಿಯಾಗುತ್ತದೆ.
ಅತಿಹೆಚ್ಚು ಫ್ಯಾಟ್ ಅಂಶ ಇರುವ ಡೈರಿ ಉತ್ಪನ್ನಗಳನ್ನ ಅವೈಡ್ ಮಾಡಿ.
ಇವು ದೇಹದಲ್ಲಿ HDL ಅಂಶವನ್ನು ಜಾಸ್ತಿ ಮಾಡಿ LDL ಅಂಶವನ್ನು ಕಡಿಮೆ ಮಾಡುತ್ತವೆ. ಆಗ ದೇಹ ಆರೋಗ್ಯವಾಗಿರುತ್ತದೆ.
2. ದಿನನಿತ್ಯ ವ್ಯಾಯಾಮ :
ನಾವು ಎಷ್ಟು ವ್ಯಾಯಾಮ ಮಾಡುತ್ತೇವೆ ಅಷ್ಟು ಆರೋಗ್ಯವಾಗಿರುತ್ತೇವೆ.
ದಿನಕ್ಕೆ ಏನಿಲ್ಲಾ ಅಂದರು 30 ನಿಮಿಷ ಜೋರಾಗಿ ನಡೆಯಬೇಕು(brisk walking). ಆಗ ದೇಹದ ಫ್ಯಾಟ್ ಅಂಶ ಕರಗಲು ಸಹಾಯವಾಗುತ್ತದೆ.
15 ನಿಮಿಷ ಯೋಗ 15 ನಿಮಿಷ ಧ್ಯಾನ ಮತ್ತೆ ಪ್ರಾಣಾಯಾಮ ಮಾಡಬೇಕು.
20 ನಿಮಿಷ ಸೈಕ್ಲಿಂಗ್ ಅಥವಾ ಜಾಗಿಂಗ್ ಮಾಡಬೇಕು. ಈ ರೀತಿ ದಿನನಿತ್ಯವೂ ಮಾಡುವುದರಿಂದ ನಮ್ಮ ದೇಹ ಫಿಟ್ ಆಗಿರುತ್ತದೆ.
3. ಜಂಕ್ ಫುಡ್ ತಪ್ಪಿಸಿ :
ಟ್ರಾನ್ಸ್ ಫ್ಯಾಟ್ ಮತ್ತು ಸ್ಯಾಚುರೇಟೆಡ್ ಫ್ಯಾಟ್ ಆದಂತಹ ಬೇಕರಿ ತಿಂಡಿಗಳು, ಬೀದಿ ಬದಿ ಸಿಗುವ ಮಸಾಲೆ ಪಧಾರ್ಥಗಳು, ಎಣ್ಣೆಯಲ್ಲಿ ಅತಿಯಾಗಿ ಕರೆದಂತ ಚಿಪ್ಸ್ ಇತ್ಯಾದಿ ಇವುಗಳನ್ನು ಮೊದಲು ತಪ್ಪಿಸಬೇಕು.
ಮನೆಯಲ್ಲಿ ಸಾಧ್ಯವಾದಷ್ಟು ಓಲಿವ್ ಆಯಿಲ್, ಕೊಬ್ಬರಿ ಎಣ್ಣೆ ಬಳಸಬೇಕು.
ಅತಿಯಾದ ಜಂಕ್ ಫುಡ್ ಸೇವನೆಯಿಂದ ಕೆಟ್ಟ Cholesterol ಜಾಸ್ತಿಯಾಗುತ್ತದೆ.
4. ಮನೆಮದ್ದುಗಳನ್ನು ಅನುಸರಿಸಿ :
ಬೆಳಿಗ್ಗೆ ಎಡ್ಡಾ ತಕ್ಷಣ ಉಗುರು ಬೆಚ್ಚಗಿನ ನೀರಿಗೆ ನಿಂಬೆ ಹಣ್ಣು ಸೇರಿಸಿ ಒಂದು ಗ್ಲಾಸ್ ಕುಡಿಯಿರಿ.
ಸಾಧ್ಯವಾದಷ್ಟು ಸಾಂಬಾರಿನಲ್ಲಿ ಬೆಳ್ಳಿಳ್ಳಿಯನ್ನು ಸೇರಿಸಿ ತಿನ್ನಿ,
ರಾತ್ರಿ ಮೆಂತ್ಯೆ ಕಾಲನ್ನು ನೆನೆಸಿ ಬೆಳಿಗ್ಗೆ ತಿನ್ನಿ.
ದಿನಕ್ಕೆ ಒಂದು ಗ್ಲಾಸ್ ದಾಳಿಂಬೆ ಜ್ಯೂಸು ಕುಡಿಯುವುದರಿಂದ ಅದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
ರಾತ್ರಿ ಎಲ್ಲಾ ತರಹದ ಕಾಳುಗಳನ್ನ ನೆನೆಸಿ ಬೆಳಿಗ್ಗೆ ಎದ್ದು ಅದನ್ನು ತಿನ್ನಿ. ಇವು ದೇಹದಲ್ಲಿ ಫ್ಯಾಟ್ ಅಂಶ ಕಡಿಮೆ ಮಾಡಲು ಸಹಾಯ ಮಾಡುತ್ತವೆ.
5. ಸ್ಟ್ರೆಸ್, ಒತ್ತಡವನ್ನು ಕಂಟ್ರೋಲ್ ಮಾಡುವುದು :
ಯಾವುದೊ ಸಮಸ್ಯೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಅದನ್ನೇ ಯೋಚನೆ ಮಾಡುತ್ತಾ ಆರೋಗ್ಯದ ಕಡೆ ಗಮನವನ್ನೇ ಕೊಡದೆ ಇರುವುದು. ಇದರಿಂದ ಮಾನಸಿಕ ಒತ್ತಡ ಜಾಸ್ತಿಯಾಗುತ್ತದೆ.
ಅದಕ್ಕೆ ಒತ್ತಡವನ್ನು ಕಂಟ್ರೋಲ್ ಮಾಡುವುದಕ್ಕೆ ದಿನನಿತ್ಯ ತಪ್ಪದೆ ಧ್ಯಾನ ಮಾಡಿ, ಯೋಗ ಅಭ್ಯಾಸ ಮಾಡಿ, ದಿನಕ್ಕೆ ಕನಿಷ್ಠ 7 ಗಂಟೆ ಸರಿಯಾದ ನಿದ್ದೆ ಮಾಡಿ. ಯಾಕೆಂದರೆ ಒತ್ತಡದಿಂದ ದೇಹದ ಹಾರ್ಮೋನ್ಗಳ ಬದಲಾವಣೆಯಾಗುತ್ತದೆ. ಅದರಿಂದ ಕೊಲೆಸ್ಟ್ರಾಲ್ ಜಾಸ್ತಿಯಾಗುತ್ತದೆ.
6. ದೇಹದ ತೂಕ ಕಂಟ್ರೋಲ್ ಮಾಡುವುದು :
ಸಾಧ್ಯವಾದಷ್ಟು ವಾರದ ಟೈಮ್ ಟೇಬಲ್ ರೆಡಿ ಮಾಡಿಕೊಳ್ಳಿ, ಅಂದರೆ ನಾನು ಒಂದು ವಾರಕ್ಕೆ ಇಷ್ಟು ತೂಕ ಕಡಿಮೆಯಾಗುತ್ತೇನೆ ಎಂದು. ಸರಿಯಾದ ವ್ಯಾಯಾಮ ಮಾಡಿ, ಒಳ್ಳೆಯ ಡಯಟ್ ಪಾಲಿಸಿ, ಜಾಸ್ತಿ ಬೇಕಿಲ್ಲ ವಾರಕ್ಕೆ 5-10% ತೂಕ ಕಡಿಮೆ ಆದರೆ ಅಷ್ಟೇ ಸಾಕು, ಅದು ನಿಮ್ಮ ಬ್ಯಾಡ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
7. ಧೂಮಪಾನ ಮತ್ತೆ ಮಧ್ಯಪಾನ ಬಿಡಿ :
ಯಾರೆಲ್ಲ ಇದರಿಂದ ದೂರವಿದ್ದೀರಿ ಒಳ್ಳೆಯದು. ಆದರೆ ಯಾರಿಗೆಲ್ಲ ಕೊಲೆಸ್ಟ್ರಾಲ್ ಪ್ರಮಾಣ ಜಾಸ್ತಿ ಇದ್ದರೂ ಇದನ್ನು ಲೆಕ್ಕಿಸದೇ ಸಿಗರೇಟ್ ಸೇದುವುದು, ಕುಡಿಯುವುದು ಮಾಡುತ್ತಿದ್ದರೆ ಬ್ಯಾಡ್ ಕೊಲೆಸ್ಟ್ರಾಲ್ ಜಾಸ್ತಿಯಾಗುತ್ತದೆ.
Cholesterol ಇದೊಂದು ಗಂಭೀರ ಹೃದಯಕ್ಕೆ ಸಂಬಂದಿಸಿದ ಆರೋಗ್ಯ ಸಮಸ್ಯೆ ಆಗಿದ್ದರೂ, ನಾನು ಮೇಲೆ ತಿಳಿಸಿರುವ ಕೆಲವೊಂದು ಜೀವನಶೈಲಿ ಬದಲಾವಣೆ, ನೈಸರ್ಗಿಕವಾದ ವಿಧಾನಗಳನ್ನು, ಸರಿಯಾದ ರೀತಿಯಲ್ಲಿ ಪಾಲಿಸಿದರೆ, ಯಾವುದೇ ರೀತಿ ಕೆಮಿಕಲ್ ಮಾತ್ರೆಗಳ ಮೇಲೆ ಅವಲಂಬಿತವಾಗಿರುವ ಅವಶ್ಯಕತೆ ಬರುವುದಿಲ್ಲ.
ನಮ್ಮ ದಿನನಿತ್ಯದ ಜೀವನದಲ್ಲಿ ಒಳ್ಳೆಯ ಆಹಾರ, ನಿಯಮಿತ ವ್ಯಾಯಾಮ, ಮತ್ತು ಒತ್ತಡವನ್ನು ನಿಯಂತ್ರಣ ಮಾಡಿದರೆ ಬ್ಯಾಡ್ ಕೊಲೆಸ್ಟ್ರಾಲ್ ಮಟ್ಟವನ್ನ ಸಾಮಾನ್ಯವಾಗಿ ಕಡಿಮೆಮಾಡುತ್ತವೆ.
ನಾವು ಈದಿನ ತೆಗೆದು ಕೊಳ್ಳುವ ಸಣ್ಣ ಸಣ್ಣ ನಿರ್ಧಾರಗಳಿಂದ ನಮ್ಮ ಮುಂದಿನ ಮಕ್ಕಳ ಭವಿಷ್ಯ ಚನ್ನಾಗಿರುತ್ತದೆ. ಆದ್ದರಿಂದ ನಾವು ಯಾವುದೇ ರೀತಿ ಎಕ್ಸ್ ಕ್ಯೂಸ್ ಕೊಡದೆ ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ.
