ಸಾಮಾನ್ಯವಾಗಿ ನಾವು ಈ Gastric ಪದವನ್ನ ಕೇಳುತ್ತಾನೆ ಇರ್ತೀವಿ. ಸರಿಯಾದ ಆಹಾರ ತಿನ್ನದೇ ಇರುವುದು, ಮಾನಸಿಕ ಮತ್ತೆ ಹೊರಗಿನ ಒತ್ತಡ, ಕೆಟ್ಟ ಜೀವನಶೈಲಿ, ವ್ಯಾಯಾಮ ಇಲ್ಲದೆ ಇರುವುದರಿಂದ, ನಮ್ಮ ದೇಶದಲ್ಲಿ 10 ಜನರಲ್ಲಿ ಸುಮಾರು 7 ಜನಕ್ಕೆ ಈ ಗ್ಯಾಸ್ಟ್ರಿಕ್ ಸಮಸ್ಯೆ ಇದೆ. ಅಂದರೆ ನೀವೇ ಯೋಚನೆ ಮಾಡಿ ಇದು ಎಷ್ಟು ಸಾಮಾನ್ಯವಾಗಿದೆ ಅಂತ. ಇದರಿಂದ ಜನಕ್ಕೆ ಹೊಟ್ಟೆ ಉಬ್ಬರ, ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುವುದು, ತಿಂದ ಊಟ ಸರಿಯಾಗಿ ಜೀರ್ಣ ಆಗದೇ ಇರುವುದು ಇತ್ಯಾದಿ ಸಮಸ್ಯೆಗಳು ಬರ್ತವೆ.
ನಾವು ಈ ಲೇಖನದಲ್ಲಿ ಈ ಸಮಸ್ಯೆಯ ಮುಖ್ಯ ಕಾರಣಗಳು, ಆಹಾರ ಪದ್ಧತಿ, ನಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳು, ಒತ್ತಡ ನಿವಾರಣೆ ಇತ್ಯಾದಿಗಳ ಬಗ್ಗೆ ನೋಡೋಣ.
Table of Contents
Toggleಹಾಗಾದರೆ ಈ ಗ್ಯಾಸ್ಟ್ರಿಕ್ ಸಮಸ್ಯೆ ಅಂದರೆ ಏನು?
ಸಿಂಪಲ್ ಆಗಿ ಏಳಬೇಕೆಂದರೆ ನಮ್ಮ ಹೊಟ್ಟೆಯಲ್ಲಿ ಗಾಳಿ (ಗ್ಯಾಸ್) ತುಂಬಿಕೊಳ್ಳುವುದು. ಇದನ್ನ ಗ್ಯಾಸ್ಟ್ರೀಟಿಸ್ ಅಂತಾನೂ ಕರೀತಾರೆ. ನಾವು ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ, ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುವುದು. ಈ ರೀತಿ ಆಗೋದರಿಂದ ಹೊಟ್ಟೆ ಉಬ್ಬರ, ನೋವು , ಉರಿ ಇತ್ಯಾದಿ ಸಮಸ್ಯೆಗಳು ಬರುತ್ತವೆ.
ಈ ಗ್ಯಾಸ್ಟ್ರಿಕ್ ಬರುವುದಕ್ಕೆ ಮುಖ್ಯ ಕಾರಣಗಳು
1. ವ್ಯಾಯಾಮದ ಕೊರತೆ :
ನಾವು ಊಟ ಮಾಡುತ್ತೇವೆ, ಆದರೆ ಅದು ಜೀರ್ಣ ಆಗುವುದಕ್ಕೆ ಸರಿಯಾದ ವ್ಯಾಯಾಮ ಮಾಡುವುದಿಲ್ಲ. ಆಗ ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ, ಹೊಟ್ಟೆಯಲ್ಲಿ ಅದು ಗ್ಯಾಸ್ ಆಗಿ ಕನ್ವರ್ಟ್ ಆಗುತ್ತೆ.
2. ಕಾಫಿ ಮತ್ತು ಟೀ ಕುಡಿಯುವುದು :
ನೀವು ಕೆಲವರನ್ನು ನೋಡಿರಬೇಕು ಅವುರು ಊಟ ಮಾಡುವುದಕ್ಕೆ ಬದಲು ಕಾಫಿ ಟೀ ಗೆ ದಾಸರಾಗಿರುತ್ತಾರೆ. ಅಂದರೆ ದಿನಕ್ಕೆ ಒಂದು ಬಾರಿ ಕುಡಿದರೆ ಅದು ಓಕೆ. ಆದರೆ ೫-೬ ಸರಿ ಕುಡಿಯುತ್ತಾರೆ, ಅದರಲ್ಲಿರುವ ಕೆಫೇನ್ ಅಂಶ ಹೊಟ್ಟೆಯಲ್ಲಿ ಗ್ಯಾಸ್ ಅನ್ನು ಬಿಡುಗಡೆ ಮಾಡುತ್ತೆ.
3. ಆಹಾರ ಪದ್ಧತಿ :
ಸಮಯಕ್ಕೆ ಸರಿಯಾಗಿ ಊಟ ಮಾಡದೆ ಇರುವುದು, ಮತ್ತೆ ಜಂಕ್ ಫುಡ್, ಸ್ಪೈಸಿ ಫುಡ್, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಇತ್ಯಾದಿ ಜಾಸ್ತಿ ತಿನ್ನುವುದು. ಮತ್ತೆ ರಾತ್ರಿ ಊಟ ಲೇಟ್ ಆಗಿ ತಿಂದು ಮಲಗುವುದು, ಇದೆಲ್ಲಾ gastric ಪ್ರಾಬ್ಲಮ್ ಅನ್ನು ಜಾಸ್ತಿ ಮಾಡುತ್ತೆ.
4. ಬ್ಯಾಕ್ಟೀರಿಯಾ :
ನಮ್ಮ ಹೊಟ್ಟೆಯಲ್ಲಿ ಹೈಡ್ರಾಕ್ಲೋರಿಕ್ ಆಸಿಡ್ ಇರುತ್ತೆ. ಇದರ ಕೆಲಸ ಅಂದ್ರೆ ನಾವು ತಿಂದ ಆಹಾರವನ್ನ ಜೀರ್ಣ ಮಾಡುವುದು. ಆದರೆ ಇದು ಸರಿಯಾಗಿ ಕೆಲಸ ಮಾಡಿಲ್ಲ ಅಂದ್ರೆ, Helicobacter pylori ಅನ್ನುವ ಬ್ಯಾಕ್ಟಿರಿಯಾ ಹೊಟ್ಟೆಯಲ್ಲಿ ಅಲ್ಸರ್ ರೀತಿ ಕಾಣಿಸಿಕೊಂಡು ಸಮಸ್ಯೆ ಜಾಸ್ತಿ ಮಾಡುತ್ತೆ.
5. ಮಧ್ಯಪಾನ :
ಪ್ರತಿ ದಿನ ಎಣ್ಣೆ ಕುಡಿಯುವುದು, ಮತ್ತೆ ಸಿಗರೇಟ್ ಸೇದುವುದರಿಂದ ಲಂಗ್ಸ್, ಕಿಡ್ನಿ ಗಳಿಗೆ ಹಾನಿಯಾಗಿ ಕಡೆಗೆ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಜಾಸ್ತಿಯಾಗುತ್ತೆ.
6. ಕಡಿಮೆ ನೀರು ಕುಡಿಯುವುದು :
ಒಬ್ಬ ಮನುಷ್ಯ ಒಂದು ದಿನಕ್ಕೆ ಕನಿಷ್ಠ ಅಂದರೂ ೩-೪ ಲೀಟರ್ ನೀರು ಕುಡಿಯಬೇಕು ಆಗಮಾತ್ರ ಅವರ ಆರೋಗ್ಯ ಚನ್ನಾಗಿರುತ್ತದೆ. ಸರಿಯಾಗಿ ನೀರು ಕುಡಿಯದಿದ್ದರೆ ಜೀರ್ಣಕ್ರಿಯೆ ಸರಿಯಾಗಿರುವುದಿಲ್ಲ.
ಈ ಎಲ್ಲಾ ಕಾರಣಗಳಿಂದ Gastric ಸಮಸ್ಯೆ ಕಂಡುಬರುತ್ತದೆ.
ಗ್ಯಾಸ್ಟ್ರಿಕ್ ಸಮಸ್ಯೆಯ ಲಕ್ಷಣಗಳು ಯಾವ ರೀತಿ ಇರುತ್ತವೆ.
ಹಲವಾರು ಕಾರಣಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತೆ. ಅದು ಬಂದಾಗ ಕೆಲವೊಂದು ಲಕ್ಷಣಗಳು ನಮ್ಮ ದೇಹದಲ್ಲಿ ಕಾಣಿಸುತ್ತೇವೆ. ಅವುಗಳಲ್ಲಿ ಕೆಲವೊಂದು ಲಕ್ಷಣಗಳನ್ನು ನೋಡೋಣ.
- ಸರಿಯಾಗಿ ಜೀರ್ಣ ಆಗದೆ ಇರುವುದು.
- ಎದೆಯಲ್ಲಿ ಉರಿ ಬರುವುದು.
- ಹೊಟ್ಟೆಯಲ್ಲಿ ನೋವು ಮತ್ತೆ ಉಬ್ಬರ ಬರುವುದು.
- ಉಳಿ ತೇಗು ಬರುವುದು.
- ಬಾಯಲ್ಲಿ ಕಹಿ ಇರುವ ಅನುಭವ ಆಗುವುದು.
- ಸ್ವಲ್ಪ ಊಟ ಮಾಡಿದರು ಒತ್ತೆ ತುಂಬಿದ ಅನುಭವ.
- ಅವಾಗವಾಗ ವಾಂತಿ ಬರುವ ಅನುಭವ.
ಈ ಲಕ್ಷಣಗಳು ಕೆಲವರಲ್ಲಿ ಬದಲಾಗುತ್ತವೆ.
Gastric ನಮ್ಮ ದೇಹಕ್ಕೆ ಯಾವ ರೀತಿಯ ಅರೋಗ್ಯ ಸಮಸ್ಯೆಯಾಗುತ್ತೆ?
ಗ್ಯಾಸ್ಟ್ರಿಕ್ ಇಂದ ನಮ್ಮ ದೇಹಕ್ಕೆ ಹಲವಾರು ರೀತಿಯ ಹಾನಿ ಉಂಟಾಗುತ್ತೆ, ಅದರಲ್ಲಿ ಮುಖ್ಯವಾಗಿ ;
- ಸಮಸ್ಯೆಯನ್ನು ಸರಿಯಾಗಿ ಗಮನಿಸದೇ ಇದ್ದಾರೆ ಹೊಟ್ಟೆಯ ಅಲ್ಸರ್ ಗೆ ಕಾರಣವಾಗುತ್ತೆ.
- ಆಸಿಡ್ ರಿಫ್ಲೆಕ್ಸ್ ಆಗುತ್ತೆ, ಅಂದರೆ ತಿಂದ ಆಹಾರ ಅನ್ನನಾಳದಿಂದ ಹೊಟ್ಟೆಗೆ ಹೋಗುವ ಸಮಯದಲ್ಲಿ ಗ್ಯಾಸ್ ಒಳಗಿಂದ ಮೇಲಕ್ಕೆ ಎದೆ ಬಾಗಕ್ಕೆ ವಾಪಾಸ್ ಬರುತ್ತದೆ.
- ಹಲವಾರು ಜೀರ್ಣಕ್ರಿಯೆ ಸಮಸ್ಯೆಗಳು ಬರುತ್ತೆ.
- ದೇಹದ ತೂಕದಲ್ಲಿ ವ್ಯತ್ಯಾಸ ಆಗುತ್ತೆ.
ಜೀರ್ಣಕ್ರಿಯೆ ಸಮಸ್ಯೆ ಕಂಡು ಬಂಡ ತಕ್ಷಣ ನಾನು ಹೇಳುವ ಕೆಲವೊಂದು ಮನೆ ಮದ್ದುಗಳನ್ನ ಸೇವಿಸಿದರೆ ನಿಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಬಹುದು.
ಇದನ್ನೂ ಓದಿ : How To Loose Belly Fat Naturally in 10 Days.
ನೈಸರ್ಗಿಕವಾಗಿ ನಿಮಗೆ ಸಿಗುವ ಮನೆಮದ್ದುಗಳು
ನಾನು ತಿಳಿಸುವ ಈ ನೈಸರ್ಗಿಕ ಮನೆ ಮದ್ದುಗಳಿಂದ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆ ಮಾಯವಾಗುತ್ತೆ.
1. ಜೀರಿಗೆ ನೀರು (Cumin water) :
ರಾತ್ರಿ ಊಟ ಮಾಡಿದ ನಂತರ ನೀರನ್ನು ಚನ್ನಾಗಿ ಕಾಯಿಸಿ ಅದಕ್ಕೆ ಜೀರಿಗೆ ಮಿಕ್ಸ್ ಮಾಡಿ ಒಂದು ಗ್ಲಾಸ್ ಕುಡಿಯಿರಿ. ಇದರಿಂದ ನಿಮ್ಮ ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಸಂಪೂರ್ಣ ಕಡಿಮೆ ಆಗುತ್ತೆ. ತಿಂದ ಆಹಾರ ಚನ್ನಾಗಿ ಜೀರ್ಣ ಆಗುತ್ತೆ. ಇದನ್ನು ತಪ್ಪದೇ ಕನಿಷ್ಠ 15 ದಿನ ಫಾಲೋ ಮಾಡಿ.
2. ಶುಂಠಿ ಟೀ :
ಶುಂಠಿಯನ್ನು ಟೀ ಗೆ ಹಾಕಿ ಕುಡಿಯುವುದರಿಂದ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ಮತ್ತೆ ಗ್ಯಾಸ್ ಸಂಪೂರ್ಣ ಕಡಿಮೆಯಾಗುತ್ತದೆ.
3. ಅಜ್ವೈನ್ (ಒಮಂ) :
ಇದು ನಾಳವು ಜಾಸ್ತಿ ನಾನ್ ವೆಜ್ ತಿಂದಾಗ ಮಾತ್ರ ತಿನ್ನುತ್ತೇವೆ. ಆದರೆ ಪ್ರತಿದಿನ ಊಟ ಆದ ಮೇಲೆ ಇದನ್ನು ಸ್ವಲ್ಪ ಉಪ್ಪು ಮಿಕ್ಸ್ ಮಾಡಿ ತಿನ್ನುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುತ್ತದೆ.
4. ಮಜ್ಜಿಗೆ :
ಮಜ್ಜಿಗೆ ನಮ್ಮ ದೇಹಕ್ಕೆ ಯಾವ ರೀತಿ ತಂಪನ್ನು ಕೊಡುತ್ತೆ ಅದೇ ರೀತಿ ನಮ್ಮ ಹೊಟ್ಟೆಯ ಸಮಸ್ಯೆಗೆ ಪರಿಹಾರ ಕೊಡುತ್ತೆ.
ಮಜ್ಜಿಗೆಗೆ ಸ್ವಲ್ಪ ಜೀರಿಗೆ ಮಿಕ್ಸ್ ಮಾಡಿ ಕುಡಿಯುವುದರಿಂದ ಹೊಟ್ಟೆಯ ಆಸಿಡ್ ಅನ್ನು ಕಡಿಮೆಮಾಡುತ್ತದೆ.
5. ಹಿಂಗ್ (Asafoetida):
ಇದನ್ನು ತುಂಬಾ ಜನ ನೋಡಿರುವುದಿಲ್ಲ. ಇದು ಸಾಂಬಾರಿಗೆ ಬಳಸುತ್ತಾರೆ. ಸ್ವಲ್ಪ ಕಹಿ ಇರುತ್ತೆ ನಮಗೆ ಗ್ಯಾಸ ಜಾಸ್ತಿ ಆಗಿದ್ದಾಗ ಹಿಂಗ್ ಅನ್ನು ವೆಲ್ಪ ಬಿಸಿನೀರಿಗೆ ಆಕಿ ಕುಡಿಯುವುದರಿಂದ ಗ್ಯಾಸ್ ಸಮಸ್ಯೆ ಬೇಗ ಕಡಿಮೆಯಾಗುತ್ತೆ.
6. ನಿಂಬೆಹಣ್ಣಿನ ರಸ :
ನಿಂಬೆಯಲ್ಲಿ ಸಿಟ್ರಿಕ್ ಆಸಿಡ್ ಇದ್ದು ಇದು ಹೊಟ್ಟೆಯಲ್ಲಿರುವ ಹೈಡ್ರಾಕ್ಲೋರಿಕ್ ಆಸಿಡ್ ಅನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತೆ ಆದ್ದರಿಂದ ದಿನಕ್ಕೆ ಒಮ್ಮೆ ನೀರಿಗೆ ನಿಂಬೆ ಹಣ್ಣು ಹಿಂದಿ ರಸ ಕುಡಿಯಿರಿ.
ಈ ಎಲ್ಲಾ ಮನೆಮದ್ದುಗಳು Gastric ಸಮಸ್ಯೆ ಇದ್ದವರಿಗೆ ತುಂಬಾ ಅನುಕೂಲ ಸಮಸ್ಯೆ ಜಾಸ್ತಿ ಆಗಲು ಬಿಡದೆ ಕಡಿಮೆ ಇದ್ದಾಗಲೇ ಎಚ್ಚರ ವಹಿಸುವುದು ಮುಖ್ಯ.
Gastric ಸಮಸ್ಯೆಗೆ ಪೌಷ್ಠಿಕ ಆಹಾರಗಳು
- ಫೈಬರ್ ಜಾಸ್ತಿ ಸಿಗುವ ಆಹಾರ :
ಹಣ್ಣುಗಳು, ತರಕಾರಿಗಳು, ಸೊಪ್ಪುಗಳು, ಓಟ್ಸ್, ರಾಗಿ, ಗೋದಿ, ಬೀನ್ಸ್, ಹೆಸರುಬೇಳೆ, ಇವುಗಳಲ್ಲಿ ಹೆಚ್ಚು ಫೈಬರ್ ಅಂಶವಿದ್ದು ಇವು ಜೀರ್ಣ ಕ್ರಿಯೆಗೆ ಎಚ್ಚು ಸಹಾಯಮಾಡುತ್ತವೆ. - ಪ್ರೊಟೀನ್ ಆಹಾರ :
ಮೊಟ್ಟೆ, ಚಿಕನ್, ಮೀನು, ಪನ್ನೀರ್, ಸೋಯಾಬೀನ್, ಬೇಳೆಕಾಳುಗಳು, ಕಡಲೇಕಾಯಿ, ಹಾಲು, ಈ ಪಧಾರ್ಥಗಲ್ಲಿ ಜಾಸ್ತಿ ಪ್ರೊಟೀನ್ ಅಂಶವಿದ್ದು ದೇಹಕ್ಕೆ ಒಳ್ಳೆಯ ಶಕ್ತಿ ನೀಡುತ್ತವೆ. ಮತ್ತೆ ಸರಿಯಾದ ರೀತಿಯಲ್ಲಿ ತಿಂದರೆ ಹೊಟ್ಟೆಯ ಆರೋಗ್ಯ ಸರಿಯಾಗುರುತ್ತದೆ. - ಹಸಿರು ತರಕಾರಿಗಳು :
ಬ್ರಾಕೊಲಿ, ಪಾಲಕ್, ದಂಟಿನ ಸೊಪ್ಪು, ಕಳಲೆ ಸೊಪ್ಪು, ಇವುಗಳಲ್ಲಿ ಹೆಚ್ಚು ವಿಟಮಿನ್ಸ್ , ಮತ್ತೆ ಕ್ಯಾಲ್ಶಿಯಂ ಸಿಗುತ್ತದೆ.
ಯಾವೆಲ್ಲಾ ಪಧಾರ್ಥಗಳನ್ನ ತಿನ್ನಬಾರದು
- ಬೀದಿ ಬದಿ ಸಿಗುವ ಮಸಾಲೆ ಪಧಾರ್ಥಗಳು.
- ಎಣ್ಣೆಯಲ್ಲಿ ಕರಿದ ಪಧಾರ್ಥಗಳು .
- ಜಂಕ್ ಫುಡ್ಸ್, ಗೋಬಿ, ಪಿಜ್ಜಾ, ಬರ್ಗರ್, ಬಿಸ್ಕೆಟ್ಸ್ ಇತ್ಯಾದಿ,
- ಕಾರ್ಬೊನೇಟೆಡ್ ಡ್ರಿಂಕ್ಸ್ ಗಳು, ಸ್ಪ್ರೈಟ್, ಪೆಪ್ಸಿ ಇತ್ಯಾದಿ.
- ಕೆಫೇನ್ ಅಂಶ ಇರುವ ಕಾಫಿ ಕುಡಿಯಬಾರದು, ಟೀ ಹೆಚ್ಚು ಕುಡಿಯಬಾರದು.
- ಮಧ್ಯಪಾನ ಮತ್ತೆ ಧೂಮಪಾನ ಮಾಡಬಾರದು.
ನಮ್ಮ ಜೀವನಶೈಲಿ ಬದಲಾವಣೆಯಿಂದ Gastric ಸಮಸ್ಯೆ ಪರಿಹಾರ
- ಸಮಯಕ್ಕೆ ಸರಿಯಾಗಿ ಊಟ ಮಾಡುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿ ಆಗುವುದಿಲ್ಲ.
- ದಿನಕ್ಕೆ ಕನಿಷ್ಠ ಅಂದರೂ 45 ನಿಮಿಷ ವ್ಯಾಯಾಮ ಮಾಡಬೇಕು. ಆಗ ತಿಂದ ಆಹಾರ ಸರಿಯಾಗಿ ಜೀರ್ಣ ಆಗುತ್ತೆ ಮತ್ತೆ ಯಾವುದೇ ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ಬರುವುದಿಲ್ಲ. ನೀವು ಕೇಳಿರಬೇಕು ಜಿಮ್ ಮಾಡುವ ವ್ಯೆಕ್ತಿಗೆ ಸಾಮಾನ್ಯವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಇರುವುದಿಲ್ಲ.
- ನಮಗೆ ಆಹಾರ ಎಷ್ಟು ಮುಖ್ಯವೋ ಅದೇ ರೀತಿ ಮನಸ್ಸಿಗೆ ನೆಮ್ಮದಿ ಅಷ್ಟು ಮುಖ್ಯ. ಮಾನಸಿಕ ನೆಮ್ಮದಿಯಿಂದ ಆರೋಗ್ಯ ಚನ್ನಾಗಿರುತ್ತದೆ. ಇದಕ್ಕೆ ಯೋಗ, ಧ್ಯಾನ, ಪ್ರಾಣಾಯಾಮ ಮಾಡುವುದು ಮುಖ್ಯ.
- ದಿನಕ್ಕೆ ಕನಿಷ್ಠ 6-7 ಘಂಟೆ ನಿದ್ದೆ ಮಾಡುವುದು ಮುಖ್ಯ. ಸರಿಯಾದ ನಿದ್ದೆ ಆದರೆ ದೇಹ ಚುರುಕಾಗಿರುತ್ತದೆ ಆಗ ಆರೋಗ್ಯ ಸಮಸ್ಯೆಗಳು ಬರುವುದು ಕಡಿಮೆ.
ಈ ಎಲ್ಲಾ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡು ಪ್ರತಿದಿನ ತಪ್ಪದೇ ಮಾಡಿ. ಇದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ ಮತ್ತೆ ನಿಮ್ಮ ಮನೆಯಲ್ಲಿ ಯಾರಿಗೆಲ್ಲಾ ಈ ರೀತಿಯ ಸಮಸ್ಯಗಳಿವೆ ಅವರಿಗೆ ಇದನ್ನು ತಿಳಿಸಿ ಮಾಡಲು ಹೇಳಿ.

Pingback: How to Control Piles : 6 Home Remedies for Quick Relief