Cavity (Tooth Decay): 5 Major Reasons, Symptoms and Home Remedies || ಉಳುಕು ಹಲ್ಲು : ಇದು ಬರಲು 5 ಪ್ರಮುಖ ಕಾರಣಗಳು, ಮತ್ತೆ ನೈಸರ್ಗಿಕ ಮನೆ ಮದ್ದುಗಳು.

Spread the love

Cavity

ನಾವು ನಮ್ಮ ದೇಹದ ಆರೋಗ್ಯಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತೀವೋ ಅಷ್ಟೇ ಪ್ರಾಮುಖ್ಯತೆ ನಮ್ಮ ಹಲ್ಲಿನ ಆರೋಗ್ಯಕ್ಕೂ ಕೊಡಬೇಕು. ಇಂದಿನ ನಮ್ಮ ಜೀವನಶೈಲಿ ಯಾವ ರೀತಿ ಇದೆ ಅಂದ್ರೆ ನಾವು ಏನು ತಿನ್ನುತ್ತಿದ್ದೇವೆ ಅನ್ನೋದರ ಅರಿವೇ ಇರುವುದಿಲ್ಲ, ಯಾವುದು ನಾಲಿಗೆಗೆ ರುಚಿ ಅನಿಸುತ್ತೋ ಅದು ನಮಗೆ ಬೇಕು. ಈ ರೀತಿ ತಿನ್ನುವುದರಿಂದ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಹುಳುಕು ಹಲ್ಲು Cavity ಸಾಮಾನ್ಯವಾಗಿದೆ. ಪ್ರಾರಂಭದಲ್ಲಿ ಇದು ಅಷ್ಟೇನೂ ದೊಡ್ಡ ಸಮಸ್ಯೆ ಅನಿಸುವುದಿಲ್ಲ. ಆದರೆ ದಿನ ಕಳೆಯುತ್ತಾ ಇದು ಅತಿಯಾದ ನೋವು ಕೊಡಲು ಶುರು ಮಾಡುತ್ತೆ. ಆವಾಗ ನಮಗೆ ಇದರ ಬಗ್ಗೆ ಗೊತ್ತಾಗುವುದು.

ನಾವು ಈ ಬ್ಲಾಗ್ ನಲ್ಲಿ ಹುಳುಕು ಹಲ್ಲು Cavity ಅಂದರೆ ಏನು, ಅದು ಯಾವ ರೀತಿ ಬರುತ್ತೆ, ಅದರ ಕಾರಣಗಳು, ನೈಸರ್ಗಿಕ ಪರಿಹಾರಗಳು ಎಲ್ಲವನ್ನು ತಿಳಿದುಕೊಳ್ಳೋಣ.

ನಮ್ಮ ದೇಶದಲ್ಲಿ ಸುಮಾರು 84% ಜನಕ್ಕೆ ಹಲ್ಲಿನ ಸಮಸ್ಯೆಗಳಿವೆ. ಅದರಲ್ಲಿ ಶೇ 69% ಜನ ಕೇವಲ 35-44 ವಯಸ್ಸಿನವರು ಹುಳುಕು ಹಲ್ಲು ಸಮಸ್ಯೆ Cavity Problem ಎದುರಿಸುತ್ತಿದ್ದಾರೆ.

ಹುಳುಕುಹಲ್ಲು ಎಂದರೆ ಹಲ್ಲಿನ ಒಳಗಿನ ಬಾಗ ಕೊಳೆಯುವುದರಿಂದ ಉಂಟಾಗುವ ಹೋಲ್ ಆಗಿದೆ. ಇದು ನಮ್ಮ ಹಲ್ಲಿನ enamel ಮೇಲೆ ಬ್ಯಾಕ್ಟೀರಿಯಾ ಉತ್ಪಾದಿಸುವ ಆಸಿಡ್ ನಿಂದ ಉಂಟಾಗುತ್ತದೆ.

ಯಾಕೆ ಈ ರೀತಿ ಆಗುತ್ತೆ ಅಂದ್ರೆ, ನಾವು ಹೆಚ್ಚು ಸಕ್ಕರೆ ಪಧಾರ್ಥಗಳು, ಮತ್ತೆ ಕಾರ್ಬೊನೇಟೆಡ್ ಡ್ರಿಂಕ್ಸ್ (ಕೋಲಾ, ಪೆಪ್ಸಿ, ಇತ್ಯಾದಿ) ಕುಡಿದಾಗ ನಮ್ಮ ಬಾಯಲ್ಲಿರುವ ಬ್ಯಾಕ್ಟೀರಿಯಾ ಅವುಗಳನ್ನ ಕರಗಿಸಿ ಆಸಿಡ್ ಅನ್ನ ಉತ್ಪಾದನೆ ಮಾಡುತ್ತೆ. ಈ ಆಸಿಡ್ ನಮ್ಮ ಹಲ್ಲಿನ ಮೇಲ್ಬಾಗವಾದ enamel ಅನ್ನು ನಿದಾನವಾಗಿ ಕರಗಿಸಿ ಹುಳುಕುಹಲ್ಲು Cavity ಬರುವ ರೀತಿ ಮಾಡುತ್ತೆ.

ಈ ಕ್ಯಾವಿಟಿಯ ಪ್ರಕಾರಗಳನ್ನು ನೋಡೋಣ

1. Smooth Surface Cavity :
ಇದು ನಮ್ಮ ದವಡೆ ಹಲ್ಲಿನ ಮೇಲೆ ಬರುತ್ತದೆ. ಮತ್ತೆ ಸ್ವಲ್ಪ ನಿದಾನವಾಗಿ ಬೆಳೆಯುತ್ತದೆ. ಇದನ್ನು ದಿನಕ್ಕೆ 2 ಬಾರಿ ಬ್ರೆಷ್ ಮಾಡಿದರೆ ತಡೆಯಬಹುದು.

2. Pit and Fissure Cavity :
ಇದು ನಮ್ಮ ಹಲ್ಲಿನ ಹಿಂಭಾಗದಲ್ಲಿ ಬರುತ್ತದೆ. ಅಂದರೆ ಮೋಲಾರ್ ಹಲ್ಲು ಅಥವಾ ವಿಸ್ಡಮ್ ಟೀತ್ ಪಕ್ಕ ಉಂಟಾಗುತ್ತದೆ. ನಾವು ತಿಂದ ಆಹಾರದ ಕೆಲವು ಪದಾರ್ಥಗಳು, ಅಲ್ಲೇ ಉಳಿಯುವುದರಿಂದ ಇದು ಉಂಟಾಗುತ್ತದೆ.

3. Root Cavity :
ಇದು ವಯಸ್ಸಾದವರಲ್ಲಿ ಸಾಮಾನ್ಯವಾಗಿ ಕಂಡುಬರುವ ಹಲ್ಲಿನ ಸಮಸ್ಯೆ. ಯಾಕೆಂದರೆ ಅವರ ಹಲ್ಲುಗಳು ಅಷ್ಟೊಂದು ಗಟ್ಟಿಯಿರುವುದಿಲ್ಲ. ಆದ್ದರಿಂದ ಹಲ್ಲಿನ ರೂಟ್ಸ್ ಹೊರಗೆ ಬಂದಾಗ ಅಲ್ಲಿ ಕ್ಯಾವಿಟಿ ಉಂಟಾಗುತ್ತದೆ.

ಉಳುಕುಹಲ್ಲಿನ cavity ಲಕ್ಷಣಗಳು

  •  ಹಲ್ಲಿನಲ್ಲಿ ನೋವು ಕಂಡುಬರುವುದು.
  •  ದವಡೆಯ ಭಾಗ ಊತ ಬರುವುದು.
  •  ತುಂಬಾ ಬಿಸಿ ಅಥವಾ ತಣ್ಣಗಿನ ಪಧಾರ್ಥಗಳನ್ನು ತಿಂದಾಗ ಜುಮ್ ಎನ್ನುವುದು.
  •  ಹಲ್ಲಿನ ಮೇಲೆ ಕಪ್ಪಗಿರುವ ಮಚ್ಚೆ ಕಂಡುಬರುವುದು.
  •  ಬಾಯಲ್ಲಿ ಏನಾದರು ಅಗಿಯುವಾಗ/ಜಿಗಿಯುವಾಗ ನೋವು.
  •  ಬಾಯಲ್ಲಿ ಸ್ವಲ್ಪ ದುರ್ವಾಸನೆ ಬರುವುದು.
  •  ಹಲ್ಲಿನಲ್ಲಿ ಹೋಲ್ ಕಾಣುವುದು.

ಇವೆಲ್ಲ ಲಕ್ಷಣಗಳು ಉಳುಕು ಹಲ್ಲು ಇರುವವರಿಗೆ ಸಾಮಾನ್ಯವಾಗಿ ಕಂಡುಬರುತ್ತದೆ.

ಉಳುಕುಹಲ್ಲು ಬರಲು ಮುಖ್ಯ ಕಾರಣಗಳು

1. ಹೆಚ್ಚು ಸಕ್ಕರೆ ಆಹಾರ ಸೇವನೆ :
ನಾವು ಪ್ರತಿಯೊಂದು ಪಧಾರ್ಥ ತಿನ್ನುವಾಗ ಇದಕ್ಕೆ ಸಕ್ಕರೆ ಕಡಿಮೆ ಇದೆ, ಎಂದುಕೊಳ್ಳುತ್ತೇವೆ. ಉದಾ, ಕಾಫಿ, ಟೀ ಕುಡಿಯುವಾಗ ಸಕ್ಕರೆ ಕಡಿಮೆ ಇದ್ದರೆ, ಕುಡಿಯುವುದೇ ಬೇಡ ಎನಿಸುತ್ತದೆ. ಈ ರೀತಿ ಎಚ್ಚು ಸಕ್ಕರೆ ಅಂಶ ತುಂಬಿದ ಪಧಾರ್ಥಗಳನ್ನು( ಚಾಕೊಲೇಟ್, ಬಿಸ್ಕೆಟ್ಸ್, ಬೇಕರಿ ಪಧಾರ್ಥಗಳು) ಜಾಸ್ತಿ ತಿನ್ನುವುದರಿಂದ ಹುಳುಕುಹಲ್ಲು ಉಂಟಾಗುತ್ತದೆ.

2. ಸರಿಯಾಗಿ ಬ್ರೆಷ್ ಮಾಡದೇ ಇರುವುದು :
ನಾವು ದಿನಕ್ಕೆ ೩ ಬಾರಿ ಆಹಾರ ತಿನ್ನುತ್ತೇವೆ. ಆದರೆ ಬಾಯಿ ಮಾತ್ರ ಬೆಳಿಗ್ಗೆ ಒಂದು ಸಾರಿ ಮಾತ್ರ ಬ್ರೆಷ್ ಮಾಡುತ್ತೇವೆ. ಇದೇ ಕಾರಣದಿಂದ ಬಾಯಿಯಲ್ಲಿ plaque ಅಂಶ ಉತ್ಪತ್ತಿಯಾಗಿ ಸುಮಾರು ಜನಕ್ಕೆ ಹುಳುಕುಹಲ್ಲು ಜಾಸ್ತಿಯಾಗುತ್ತಿದೆ.

3. ಜಂಕ್ ಫುಡ್ ಮತ್ತು ಸ್ಟಿಕ್ಕಿ ಆಹಾರ :

ಚಿಪ್ಸ್, ಬಿಸ್ಕೆಟ್, ಮಿಠಾಯಿ, ಚಾಕೊಲೇಟ್ಸ್ ಇವು ತಿಂದ್ದಾಗ ಸುಮಾರು ಹೊತ್ತು ಹಲ್ಲಿಗೆ ಅಂಟಿಕೊಂಡು ಬ್ಯಾಕ್ಟೀರಿಯಾ ಹೆಚ್ಚಿಸುತ್ತವೆ. ಆಗ ಹುಳುಕುಹಲ್ಲು ಹೆಚ್ಚಾಗುತ್ತದೆ.

4. ಬಾಯಿಯಲ್ಲಿ ಲಾಲಾರಸದ ಕೊರತೆ (Dry Mouth) :

ಲಾಲಾರಸವು (ಬಾಯಿ ಜೊಲ್ಲು) ಇದು ಬಾಯಲ್ಲಿ ಕೆಟ್ಟ ಬ್ಯಾಕ್ಟೀರಿಯಾವನ್ನು ಕಂಟ್ರೋಲ್ ಮಾಡುತ್ತದೆ. ಅದು ಕಡಿಮೆಯಾದರೆ cavity ಹೆಚ್ಚಾಗುತ್ತದೆ.

5. ಕೆಟ್ಟ ಬ್ಯಾಕ್ಟೀರಿಯಾ :

Streptococcus mutans ಎಂಬ ಬ್ಯಾಕ್ಟೀರಿಯಾ ನಮ್ಮ ಬಾಯಲ್ಲಿ ಸೇರಿಕೊಂಡು ನಾವು ತಿಂದ ಆಹಾರವನ್ನು ಹಲ್ಲಿನಲ್ಲಿ ಶೇಖರಿಸಿ ಹುಳುಕುಹಲ್ಲನ್ನು ಉಂಟುಮಾಡುತ್ತದೆ.

Cavity problem

ಕ್ಯಾವಿಟಿ ಗೆ ಕೆಲವೊಂದು ಅಲೋಪತಿ ಚಿಕಿತ್ಸೆ ವಿಧಾನಗಳು

1. Fluoride Treatment : ಪ್ರಾರಂಭಿಕ ಹಂತದಲ್ಲೇ ಈ ಫ್ಲೋರೈಡ್ ಚಿಕಿತ್ಸೆ ಕೊಡುವುದರಿಂದ ಹಲ್ಲಿನಲ್ಲಿ ನಾಶವಾಗುತ್ತಿರುವ ಎನಾಮಲ್ ಅನ್ನು ಮತ್ತೆ ಉತ್ಪಾದಿಸಬಹುದು.

2. Filling (ಹಲ್ಲಿನ ತುಂಬುವಿಕೆ ) : ಹಲ್ಲಿನ ಯಾವ ಭಾಗ ಹಾನಿಯಾಗಿದೆ ಅದನ್ನು ಕಟ್ ಮಾಡಿ ಕೆಲವು ಸಾಲಿಡ್ ಪಧಾರ್ಥಗಳಿಂದ(Silver amalgam
Ceramic) ಫಿಲ್ ಮಾಡುತ್ತಾರೆ.

3. Crown : ಹಲ್ಲು ತುಂಬಾ ನಾಶವಾಗಿದ್ದರೆ ಈ ಮೆಥೆಡ್ ಬಳಸು ಹಲ್ಲನ್ನು ಕೃತಕವಾಗಿ ಮರು ಸ್ಥಾಪಿಸುತ್ತಾರೆ. ಇದು ಹಲ್ಲಿನ ಮೇಲೆ ಕ್ಯಾಪ್ ರೀತಿ ಇರುತ್ತದೆ.

4. Root Canal ಚಿಕಿತ್ಸೆ : ಇದು ಹುಳುಕುಹಳ್ಳಿಗೆ ಹೆಚ್ಚು ಪ್ರಮುಖವಾದ ವಿಧಾನ. ಕ್ಯಾವಿಟಿ ಹಲ್ಲಿನ ಒಳಗಿನ pulp ವರೆಗೆ ಹಲ್ಲನ್ನು ಕೊರೆದು ಕೊಳೆತ ಅಂಶವನ್ನು ತೆಗೆದು, ಹಲ್ಲನ್ನು ಕ್ಲೀನ್ ಮಾಡಿ ಅದನ್ನು ಸೀಸದಿಂದ ಮುಚ್ಚಿ ಕ್ಯಾಪ್ ಹಾಕುವುದು.
ಈ ರೀತಿ ಮಾಡುವುದರಿಂದ ಹಲ್ಲು ಉಳಿಯುತ್ತದೆ. ನೋವು ಕಡಿಮೆಯಾಗುತ್ತದೆ, ಸೋಂಕು ಬೇರೆ ಹಲ್ಲುಗಳಿಗೆ ಹರಡುವುದು ತಪ್ಪುತ್ತದೆ.

ಈ ವಿಧಾನಗಳಿಂದ ಆಲೋಪತಿ ಡೆಂಟಲ್ ಡಾಕ್ಟರ್ ಹಲ್ಲಿನ ರಕ್ಷಣೆ ಮಾಡುತ್ತಾರೆ.

ಹುಳುಕುಹಲ್ಲು ತಡೆಯಲು ನೈಸರ್ಗಿಕ ಮನೆಮದ್ದುಗಳು

Cavity Home Remedies

1. ತೆಂಗಿನ Oil Pulling :
ದಿನಕ್ಕೆ ಒಂದು ಬಾರಿ ತೆಂಗಿನ ಎಣ್ಣೆಯಿಂದ ಬಾಯಿಯನ್ನು ತೊಳೆಯುವುದು. ಈ ರೀತಿ ಮಾಡುವುದರಿಂದ ಬಾಯಲ್ಲಿರುವ ಬ್ಯಾಕ್ಟೀರಿಯಾ ಕಡಿಮೆ ಆಗುತ್ತದೆ. ಮತ್ತೆ ಹುಳುಕುಹಲ್ಲು ಕಡಿಮೆಯಾಗುತ್ತದೆ.

2. ಲವಂಗ (Clove) :
ನೋವನ್ನು ಕಡಿಮೆ ಮಾಡುವ ನೈಸರ್ಗಿಕ ಔಷಧಿ. ಇದನ್ನು ರಾತ್ರಿ ಮಲಗುವಾಗ ಯಾವ ಹಲ್ಲು ನೋವುತ್ತಿರುತ್ತದೆ, ಅದರಪಕ್ಕ 2 ಲವಂಗ ಇಟ್ಟು ಅದರ ರಸ ಈರುವುದರಿಂದ ನೋವು ಕಡಿಮೆಯಾಗುತ್ತದೆ.

3. ಉಪ್ಪು ನೀರು :
ದಿನಕ್ಕೆ ಎರಡು ಬಾರಿ ಬಾಯಿಯನ್ನು ಉಗರು ಬೆಚ್ಚಗಿನ ನೀರಿಗೆ ಉಪ್ಪನ್ನು ಸೇರಿಸಿ ಸ್ವಚ್ಛಗೊಳಿಸಿ ಸೋಂಕು ಕಡಿಮೆ ಮಾಡುತ್ತದೆ.

4. ಬೆಳ್ಳುಳ್ಳಿ :
ಇದರಲ್ಲಿರುವ ಆಂಟಿ ಇಂಪ್ಲಾಮಟೋರಿ ಅಂಶ ಮತ್ತೆ allicin ಅಂಶ ಬ್ಯಾಕ್ಟೀರಿಯಾ ವಿರುದ್ಧ ಕಾರ್ಯನಿರ್ವಹಿಸುತ್ತದೆ.

5. ಅರಿಶಿಣ :
ಹಾಲಿನಲ್ಲಿ ಹರಿಶಿನ ಹಾಕಿ ಕುಡಿಯುವುದರಿಂದ ಸೂಕ್ಷ್ಮಜೀವಿಗಳನ್ನು ನಾಶಮಾಡುತ್ತದೆ ಮತ್ತು ಉರಿಯೂತ ಕಡಿಮೆ ಮಾಡುತ್ತದೆ.

ಈ ಎಲ್ಲಾ ಅಂಶಗಳು ಹುಳುಕುಹಲ್ಲನ್ನು ಮತ್ತೆ ಅದರಿಂದ ಉಂಟಾಗುವ ನೋವನ್ನು ಕಡಿಮೆ ಮಾಡುತ್ತವೆ, ಮತ್ತೆ ತಕ್ಷಣಕ್ಕೆ ಪರಿಹಾರ ನೀಡುತ್ತವೆ. ಆದರೆ ಸಂಪೂರ್ಣ ವಾಸಿಯಾಗುವುದಕ್ಕೆ ದಂತ ವೈದ್ಯರ ಬಳಿಯೇ ತೋರಿಸಬೇಕು.

ಕ್ಯಾವಿಟಿ ತಡೆಗಟ್ಟುವ 6 ಸುಲಭ ವಿಧಾನಗಳು

1. ದಿನಕ್ಕೆ ಎರಡು ಬಾರಿ ಬ್ರಷ್ ಮಾಡುವುದು (ಬೆಳಿಗ್ಗೆ ತಿಂಡಿ ತಿನ್ನುವ ಮೊದಲು ರಾತ್ರಿ ಊಟ ಆದ ನಂತರ)

2. ಫ್ಲಾಸ್ ಬಳಕೆ ಇದು ಹಲ್ಲಿನಲ್ಲಿ ಸೇರಿಕೊಂಡಿರುವ ಸಣ್ಣ ಸಣ್ಣ ಆಹಾರ ಪಧಾರ್ಥಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

3. ಕನಿಷ್ಠ 6 ತಿಂಗಳಿಗೊಮ್ಮೆ ಡೆಂಟಿಸ್ಟ್ ಭೇಟಿಮಾಡಿ ಹಲ್ಲಿನ ಚೆಕಪ್ ಮಾಡಿಸುಕೊಳ್ಳುವುದು.

4. ಹೆಚ್ಚು ನೀರು ಕುಡಿಯುವುದು ದಿನಕ್ಕೆ ಕನಿಷ್ಠ ೩-೪ ಲೀಟರ್ ನೀರು ಕುಡಿಯುವುದು. ಮತ್ತೆ ಊಟ ಆದನಂತರ ಬಾಯಿಯನ್ನು ನೀರಿನಿಂದ ಮುಕ್ಕಳಿಸುವುದು.

5. ಸಕ್ಕರೆ ಸೇವನೆ ಕಡಿಮೆ ಮಾಡುವುದು, ಆದಷ್ಟೂ ಸಕ್ಕರೆ ಇಲ್ಲದ ಪಧಾರ್ಥಗಳನ್ನು ತಿನ್ನುವುದು.

6. ಮೌತ್‌ವಾಶ್ ಬಳಕೆ, ರಾತ್ರಿ ಮಲಗುವಾಗ ಬ್ರೆಷ್ ಮಾಡಲು ಸಾಧ್ಯವಾಗಲಿಲ್ಲ ಅಂದರೆ ಕನಿಷ್ಠ ಮೌತ್ ವಾಷ್ ಆದರೂ ಮಾಡಬೇಕು.

ಈ 6 ಅಂಶಗಳನ್ನು ತಲೆಯಲ್ಲಿಟ್ಟುಕೊಂಡರೆ, ಮತ್ತೆ ಪ್ರತೀ ದಿನ ಅಭ್ಯಾಸ ಮಾಡಿದರೆ ಹುಳುಕು ಹಲ್ಲು Cavity ಬರುವುದಿಲ್ಲ ಮತ್ತೆ ಹಲ್ಲಿನ ಆರೋಗ್ಯ ಚನ್ನಾಗಿರುತ್ತದೆ.

ಹುಳುಕು ಹಲ್ಲು ಯಾವ ರೀತಿ ತಡೆಗಟ್ಟಬಹುದು?

ಸರಿಯಾಗಿ ಬ್ರೆಷ್ ಮಾಡುವುದರಿಂದ( ದಿನಕ್ಕೆ ಎರಡು ಸಾರಿ ಬ್ರೆಷ್ ಮಾಡಿ) ಜಂಕ್ ಫುಡ್ ತಪ್ಪಿಸುವುದರಿಂದ, ಸ್ವೀಟ್ ಪಧಾರ್ಥಗಳನ್ನು ತಿನ್ನದೇ ಇರುವುದರಿಂದ ಉಳುಕು ಹಲ್ಲನ್ನು ತಪ್ಪಿಸಬಹುದು.

ಹೌದು, ಚಿಕ್ಕವಯಸ್ಸಿನ ಮಕ್ಕಳಲ್ಲಿ ಹುಳುಕು ಹಲ್ಲು ಬರುವುದು ಸಾಮಾನ್ಯ. ಯಾಕೆಂದರೆ ಅವರು ಹೆಚ್ಚಿನ ಸ್ವೀಟ್ ಪಧಾರ್ಥಗಳನ್ನು ತಿನ್ನುತ್ತಾರೆ, ಮತ್ತೆ ಸರಿಯಾಗಿ ಬ್ರೆಷ್ ಮಾಡುವುದಿಲ್ಲ. ಈ ಕಾರಣಗಳಿಂದ ಬೇಗೆ ಹುಳುಕುಹಲ್ಲು ಬರುತ್ತದೆ.

ಸ್ವಲ್ಪ ಇದೆ ಅಂದರೆ ಸಾಮಾನ್ಯವಾಗಿ ನೈಸರ್ಗಿಕ ಮನೆ ಮದ್ದುಗಳಾದ, ಲವಂಗ ಉಪ್ಪು ನೀರಿನ ಗಾರ್ಗ್ಲಿಂಗ್, ಈ ರೀತಿಯ ಅಂಶಗಳು ಸಾಕು. ಇಲ್ಲ ಹಲ್ಲಿನಲ್ಲಿ ಹೋಲ್ ಬಿದ್ದು ನೋವುತ್ತಿದೆ ಅಂದರೆ ರೂಟ್ ಕೆನಾಲ್ ಮಾಡಿದರೆ ಹುಳುಕು ಹಲ್ಲು ಗುಣವಾಗುತ್ತದೆ.

1 thought on “Cavity (Tooth Decay): 5 Major Reasons, Symptoms and Home Remedies || ಉಳುಕು ಹಲ್ಲು : ಇದು ಬರಲು 5 ಪ್ರಮುಖ ಕಾರಣಗಳು, ಮತ್ತೆ ನೈಸರ್ಗಿಕ ಮನೆ ಮದ್ದುಗಳು.”

Leave a Comment

Your email address will not be published. Required fields are marked *

Scroll to Top